Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ತಡೆಗಟ್ಟುವ 9 ವಿಧಾನಗಳು
ಅಧ್ಯಯನಕಾರರು ತಿಳಿಸಿರುವಂತೆ ಪ್ರಪಂಚದಾದ್ಯಂತ 2 ಬಿಲಿಯನ್ ಮಂದಿ ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲಿ ಎರಡೂ ಸಮಸ್ಯೆಗಳು ಅಯೋಡಿನ್ ಕೊರತೆ ಮತ್ತು ಥೈರಾಯ್ಡ್ ಸಮಸ್ಯೆ ಅಧಿಕವಾಗಿ ಕಾಣಿಸುತ್ತಿದೆ. ಮೂರರಲ್ಲಿ ಒಬ್ಬ ಮಹಿಳೆ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಈ ಲೇಖನದಲ್ಲಿ ಮಹಿಳೆಯರು ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಲು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಸಲಿದ್ದೇವೆ.
ಭಾರತದಲ್ಲಿ ಅತೀ ಹೆಚ್ಚು ಮಂದಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ಮೂರು ವ್ಯಕ್ತಿಗಳಲ್ಲಿ ಒಬ್ಬರು ಭಾರತೀಯ ಪ್ರಜೆ ಒಂದಿಲ್ಲೊಂದು ರೀತಿಯ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಸಮಸ್ಯೆ ಮೊದಲು ವಂಶಪಾರ್ಯವಾಗಿತ್ತು. ಆದರೆ ಮುಂದೆ ಅದು ವಾತಾವರಣದ ಏರುಪೇರು,ಆಹಾರ ಕ್ರಮ, ಜೀವನಶೈಲಿಯ ಪರಿಣಾಮದಿಂದಲೂ ಕೂಡ ಕಾಡಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ಹಾಗಾದರೆ ಥೈರಾಯ್ಡ್ ಗ್ರಂಥಿ ಸರಿಯಾಗಿಲ್ಲ ಎಂದು ತಿಳಿಸುವ ಚಿಹ್ನೆಗಳು ಯಾವುದು? ಭಯಗೊಳ್ಳುವುದು, ಮಾನಸಿಕ ತಳಮಳ, ಏಕಾಗ್ರತೆ ಇಲ್ಲದೆ ಇರುವುದು, ಮುಟ್ಟಿನ ಸಮಸ್ಯೆಗಳು, ತೂಕ ಹೆಚ್ಚಾಗುವಿಕೆ, ನೋವುಗಳು ಕಾಣಿಸಿಕೊಳ್ಳುವುದು, ಅತಿಯಾಗಿ ಕೊಲೆಸ್ಟ್ರಾಲ್, ಹೃದಯಬಡಿತ ಹೆಚ್ಚಾಗುವಿಕೆ, ಯಾವಾಗಲೂ ಶೀತದ ಅನುಭವವಾಗುತ್ತಿರುವುದು ಇತ್ಯಾದಿಗಳು ಥೈರಾಯ್ಡ್ ಸಮಸ್ಯೆಯ ಚಿಹ್ನೆಗಳಾಗಿವೆ. ಪುರುಷರಲ್ಲಿ ಇದರ ಚಿಹ್ನೆಗಳು ಬೇರೆಯ ರೀತಿಯಲ್ಲಿ ಇರಬಹುದು. ಒತ್ತಡ, ಕೂದಲು ಉದುರುವಿಕೆ, ತೂಕ ಹೆಚ್ಚಾಗುವುದು,ಮಲಬದ್ಧತೆ, ಲೈಂಗಿಕ ಆಸಕ್ತಿ ಇಲ್ಲದಿರುವುದು,ಇನ್ಸೋಮ್ನಿಯಾ, ಮೆದುಳಿನ ಸಮಸ್ಯೆಗಳು ಇತ್ಯಾದಿಗಳಾಗಿರಬಹುದು. ಇಲ್ಲಿ ಮಹಿಳೆಯರು ಹೇಗೆ ತಮ್ಮ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬ ಬಗ್ಗೆ ಕೆಲವು ಸಲಹೆಗಳಿವೆ.

ಒತ್ತಡ ಕಡಿಮೆ ಮಾಡಿಕೊಳ್ಳುವುದು
ಮಹಿಳೆಯರು ತಮಗೆ ತಾವು ಒತ್ತಡ ಹೇರಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಯಾಕೆಂದರೆ ಒತ್ತಡವು ಅವರ ದೇಹದಲ್ಲಿ ಹಲವು ರೀತಿಯ ಹಾರ್ಮೋನುಗಳ ವ್ಯತ್ಯಯಕ್ಕೆ ಕಾರಣವಾಗುತ್ತೆ. ಯಾವಾಗ ಮಹಿಳೆಯರು ಒತ್ತಡಕ್ಕೆ ಸಿಲುಕುತ್ತಾರೋ ಆಗ ಅವರು ಥೈರಾಯ್ಡ್ ಸಮಸ್ಯೆಗೆ ಬಲಿಯಾಗುತ್ತಾರೆ. ಹಾಗಾದ್ರೆ ಹೇಗೆ ಒತ್ತಡವು ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತೆ ಎಂಬುದು ನಿಮ್ಮ ಪ್ರಶ್ನೆಯೇ? ಹಾಗಿದ್ದರೆ ಇಲ್ಲಿ ಕೇಳಿ,. ಯಾವಾಗಲೂ ಒತ್ತಡದಲ್ಲಿರುವುದು ನಿಮ್ಮ ಥೈರಾಯ್ಡ್ ಗ್ರಂಥಿಯನ್ನು ಬಲಹೀನಗೊಳಿಸುತ್ತೆ. ಆಗ ಥೈರಾಯ್ಡ್ ಗ್ರಂಥಿಯು ತಾನು ಮಾಡಬೇಕಾಗಿರುವ ಕೆಲಸವನ್ನು ಮಾಡಲು ಅಶಕ್ತವಾಗುತ್ತೆ. ಆಗ ಕಾಯಿಲೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಿ.

ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ
ತುಂಬಾ ಒಳ್ಳೆಯ ವಿಧಾನವೆಂದರೆ ಗ್ಲೂಟೀನ್ ಅಂಶವಿರುವ ಆಹಾರ ಸೇವನೆಯನ್ನು ಕಡಿತಗೊಳಿಸುವುದು. ಉದಾಹರಣೆಗೆ ಸಕ್ಕರೆ, ಡೈರಿ ಪದಾರ್ಥಗಳು, ಸ್ವೀಟ್ಸ್, ಆಲ್ಕೋಹಾಲ್ ಇತ್ಯಾದಿಗಳು. ಈ ಆಹಾರ ಪದಾರ್ಥಗಳು ದೇಹದಲ್ಲಿ ಉರಿಯೂತವನ್ನು ಉಂಟು ಮಾಡುತ್ತವೆ.ಆದರೆ ಫೈಬರ್ ಅಂಶವಿರುವ ಆಹಾರ ಸೇವನೆ ಒಳಿತು. ಹಣ್ಣುಗಳು, ಹಸಿರು ತರಕಾರಿಗಳು, ಬೀನ್ಸ್ ಇವುಗಳು ಪ್ರೊಬಯೋಟಿಕ್ಸ್ ಗಳಾಗಿದ್ದು,ಕರುಳಿನ ಆರೋಗ್ಯವನ್ನು ವೃದ್ಧಿಸುವ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ. ಬಿಳಿ ಬೀನ್ಸ್ ಗಳನ್ನೂ ನಿಮ್ಮ ಆಹಾರದಲ್ಲಿ ಸೇರಿಸಿ ಯಾಕೆಂದರೆ ಇದರಲ್ಲಿ ಕಬ್ಬಿಣದ ಅಂಶವಿರುತ್ತೆ. ಮತ್ತು ಕಬ್ಬಿಣದ ಅಂಶವು ಥೈರಾಯ್ಡ್ ನ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ.

ಉರಿಯೂತ ನಿಯಂತ್ರಣ
ಎಣ್ಣೆಯಂಶದಿಂದ ಕೂಡಿರುವ ಮೀನುಗಳು ಉದಾಹರಣೆಗೆ ಸಲಮಾನ್ ಗಳು ಪಾಕೃತಿಕವಾಗಿ ದೊರೆಯುವ ಆಂಟಿ ಇನ್ ಫ್ಲಮೇಟರಿ ಆಹಾರ ಪದಾರ್ಥಗಳಾಗಿವೆ.ಹಸಿ ಅರಿಶಿನವನ್ನೂ ಕೂಡ ನೀವು ಹಾಲಿನೊಂದಿಗೆ ಬೆರೆಸಿ ಇಲ್ಲವೇ ನಿಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವುದು ಒಳ್ಳೆಯದು. ಸೆಲೆರಿ, ಸೌತೆಕಾಯಿ, ಸ್ಪಿನಾಚ್ , ಹಸಿರು ಸೊಪ್ಪುಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ

ವಿಟಮಿನ್ ಡಿ ಅಂಶವನ್ನು ಹೆಚ್ಚಾಗಿ ಸೇವಿಸಿ
ವಿಟಮಿನ್ ಡಿ ಅಂಶವಿರುವ ಆಹಾರ ಪದಾರ್ಥಗಳ ಸೇವನೆ ಬಹಳ ಮುಖ್ಯ. ಯಾಕೆಂದರೆ ವಿಟಮಿನ್ ಡಿ ಅಂಶವು ಥೈರಾಯ್ಡ್ ಗಳ ಕಾರ್ಯನಿರ್ವಹಣೆಗೆ ಬಹಳ ಮುಖ್ಯ. ಆಂಟಿ ಇನ್ಫಮೇಟರಿ ಗುಣಗಳನ್ನು ವಿಟಮಿನ್ ಡಿ ಅಂಶವು ಹೊಂದಿದೆ. ಅಟೋಇಮ್ಯೂನ್ ಸಮಸ್ಯೆಗಳಿಂದ ಬಳಲುವವರಿಗೆ ವಿಟಮಿನ್ ಡಿ ಅಂಶವು ಬಹಳವಾಗಿ ನೆರವಾಗಲಿದೆ. 1000 ದಿಂದ 5000 ಐಯು ನಷ್ಟು ವಿಟಮಿನ್ ಡಿ ಸೇವನೆಯನ್ನು ತಜ್ಞರು ಬೆಂಬಲಿಸುತ್ತಾರೆ.

ನೀವು ತೆಗೆದುಕೊಳ್ಳುವ ಅಯೋಡಿನ್ ಪ್ರಮಾಣದ ಬಗ್ಗೆ ನಿಗಾ ವಹಿಸಿ
ನೀವೇನಾದರೂ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತ ನೀವು ಎಷ್ಟು ಪ್ರಮಾಣದ ಅಯೋಡಿನ್ ಅಂಶವನ್ನು ಸೇವಿಸುತ್ತಿದ್ದೀರಿ ಎಂಬ ಬಗ್ಗೆ ನಿಗಾ ಇಡುವುದು ಬಹಳ ಮುಖ್ಯ ಯಾಕೆಂದರೆ ಥೈರಾಯ್ಡ್ ಹಾರ್ಮೋನು ಥೈರಾಕ್ಸಿನ್ ಅಂಶವನ್ನು ತಯಾರು ಮಾಡುವ ನಿಟ್ಟಿನಲ್ಲಿ ಅಯೋಡಿನ್ ಪ್ರಮಾಣವು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಆದರೆ ಅತಿಯಾಗಿ ಅಯೋಡಿನ್ ಸೇವಿಸಬೇಡಿ. ಅತಿಯಾದರೆ ಹೈಪರ್ ಥೈರಾಯಿಡಿಸಂ ಕಾಣಿಸಿಕೊಳ್ಳಬಹುದು. ಮೊಟ್ಟೆ, ಚೀಝ್ ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯ ಅಯೋಡಿನ್ ಅಂಶ ಲಭ್ಯವಾಗುತ್ತೆ.

ನೀವು ತೆಗೆದುಕೊಳ್ಳುವ ಪ್ರೋಟೀನ್ ಎಷ್ಟು ಪ್ರಮಾಣದ್ದಾಗಿದೆ?
ಥೈರಾಯ್ಡ್ ಹಾರ್ಮೋನು ಬೇರೆಬೇರೆ ಟಿಶ್ಯೂಗಳಿಗೆ ಸರಬರಾಜಾಗಲು ಪ್ರಮುಖವಾಗಿ ಬೇಕಾಗಿರುವುದು ಪ್ರೋಟೀನ್ ಅಂಶ. ನಂತರ ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಪ್ರೋಟೀನ್ ಬಹಳ ಪ್ರಮುಖ ಪಾತ್ರ ವಹಿಸುವುದರಿಂದಾಗಿ ನೀವು ತೆಗೆದುಕೊಳ್ಳುವ ಪ್ರೊಟೀನ್ ಅಂಶಗಳ ಬಗ್ಗೆ ಜಾಗೃತರಾಗಿರಬೇಕು. ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದಾದ ಪ್ರಮುಖ ಪ್ರೋಟೀನ್ ಯುಕ್ತ ಆಹಾರಗಳೆಂದರೆ ಮೊಟ್ಟೆಗಳು, ಬೀಜಗಳು, ಕಾಳುಗಳು, ಮೀನು, ಮತ್ತು ಲೆಗ್ಯೂಮಿನ್ಸ್. ಸೋಯಾ ಪದಾರ್ಥಗಳಾದ ಸೋಯಾ ಮಿಲ್ಕ್, ಟೋಫು, ಇತ್ಯಾದಿಗಳಲ್ಲೂ ಕೂಡ ಉತ್ತಮ ಪ್ರೋಟೀನ್ ಅಂಶಗಳಿವೆ,
ಉತ್ತಮ ಕೊಬ್ಬಿನಾಂಶವನ್ನು ದೇಹಕ್ಕೆ ಪಡೆಯಿರಿ
ಕೊಬ್ಬಿನಾಂಶವು ನ್ಯೂಟ್ರಿಯಂಟ್ಸ್ ಗಳ ಪವರ್ ಹೌಸ್ ಇದ್ದಂತೆ.. ಕೆಲವೊಂದು ಹಾರ್ಮೋನುಗಳ ಕಾರ್ಯಚಟುವಟಿಕೆಗೆ ಇದು ಅತ್ಯಂತ ಅವಶ್ಯಕ. ಆರೋಗ್ಯಕರ ಕೊಬ್ಬಿನಾಂಶವು ನಿಮ್ಮ ಡಯಟ್ ನಿಂದ ಲಭ್ಯವಾಗದೇ ಇದ್ದರೆ, ಹಾರ್ಮೋನುಗಳ ಬ್ಯಾಲೆನ್ಸ್ ನಲ್ಲಿ ವ್ಯತ್ಯಯವಾಗಲಿದೆ. ಹಾಗಾಗಿ ಸರಿಯಾದ ಹೆಲ್ತಿ ಫ್ಯಾಟ್ ಗಳಿರುವ ಆಹಾರವನ್ನು ಸೇವಿಸಿ. ತುಪ್ಪ, ಬೀಜಗಳು, ಬೆಣ್ಣೆ, ತೆಂಗಿನ ಹಾಲು, ಫ್ಲಾಕ್ಸ್ ಬೀಜಗಳು ಇತ್ಯಾದಿ ನಿಮ್ಮ ಆಹಾರದಲ್ಲಿರಲಿ
ಗೈಟ್ರೋಜನ್ ಪ್ರಮಾಣದ ಬಗ್ಗೆ ಜಾಗೃತೆ ಮಾಡಿ
ನಿಮ್ಮ ದೇಹದ ಅಯೋಡಿನ್ ಪ್ರಮಾಣವನ್ನು ಹೀರಿಕೊಳ್ಳುವ ಯಾವುದೇ ಆಹಾರವನ್ನೇ ಆಗಲಿ ಅದನ್ನು ನೀವು ತ್ಯಜಿಸಿ ಬಿಡುವುದು ಉತ್ತಮವಾದದ್ದು. ಥೈರಾಯ್ಡ್ ಸಮಸ್ಯೆ ಇರುವವರು ಹೂಕೋಸು, ಕೋಸು, ಬ್ರುಕೋಲಿ, ಕಡಲೆಬೀಜ, ಸೋಯಾಬೀನ್ಸ್,ಸ್ಪಿನಾಚ್ ಇವುಗಳನ್ನುಸೇವಿಸದೇ ಇರುವುದು ಒಳ್ಳೆಯದು

ಧೂಮಪಾನ ಬಿಟ್ಟುಬಿಡಿ
ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಸಿಗರೇಟ್ ಸ್ಮೋಕ್ ನಲ್ಲಿ ಹಲವು ರೀತಿಯ ಟಾಕ್ಸಿನ್ ಗಳಿದ್ದು ಅವುಗಳು ನಿಮ್ಮ ಥೈರಾಯ್ಡ್ ಗೆ ಬಹಳ ಅಪಾಯಕಾರಿಯಾಗಿವೆ. ಥೈರಾಯ್ಡ್ ಗ್ರಂಥಿಯನ್ನು ಹಾಳು ಮಾಡಿ, ಅದರ ಕಾರ್ಯ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕಾಯಿಲೆಗಳಿಗೆ ಇದು ಕಾರಣವಾಗಬಲ್ಲದು. ಹೆಚ್ಚಿನ ಧೂಮಪಾನ ಮಾಡುವವರಲ್ಲಿ ಥೈರಾಯ್ಡ್ ನಿಂದ ಉಂಟಾಗುವ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ ಮತ್ತು ಅದಕ್ಕೆ ಯಾವುದೇ ಚಿಕಿತ್ಸೆಯೂ ಅಷ್ಟು ಪರಿಣಾಮಕಾರಿಯಾಗಿ ವರ್ತಿಸುವುದಿಲ್ಲ.ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರಿ ಮತ್ತು ಧೂಮಪಾನ ನಿಲ್ಲಿಸುವುದೇ ಸೂಕ್ತ.]



Click it and Unblock the Notifications











