For Quick Alerts
ALLOW NOTIFICATIONS  
For Daily Alerts

ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಪವರ್‌ಫುಲ್ ಮನೆಮದ್ದುಗಳು

|

ನಮ್ಮಲ್ಲಿ ಹೆಚ್ಚಿನವರಿಗೆ ಸಂಧಿವಾತದ ಕುರಿತು ಒಂದು ಸಾಮಾನ್ಯ ತಪ್ಪುಕಲ್ಪನೆ ಇದೆ. ಅದೆಂದರೆ ಈ ತೊಂದರೆ ವೃದ್ದರಿಗೆ ಮಾತ್ರವೇ ಬರುತ್ತದೆ ಎಂಬುದಾಗಿದೆ. ಹಾಗಾಗಿ ತಾರುಣ್ಯದ ಹುಮ್ಮಸ್ಸಿನಲ್ಲಿ ಯುವಜನತೆ ತಮ್ಮ ದೇಹವನ್ನು ಅಗತ್ಯಕ್ಕೂ ಹೆಚ್ಚೇ ದಂಡಿತ್ತಿರುವುದನ್ನು ಕಾಣಬಹುದು. ವಾಸ್ತವದಲ್ಲಿ ಸಂಧಿವಾತ ಯಾವುದೇ ವಯಸ್ಸಿನಲ್ಲಿ ಆವರಿಸಬಹುದಾದ ಕಾಯಿಲೆಯಾಗಿದ್ದು ಪ್ರಾರಂಭಿಕ ಹಂತದಲ್ಲಿ ಹೆಚ್ಚು ಪ್ರಬಲವಾಗಿರದೇ ಸೂಕ್ಷ್ಮವಾದ ಸೂಚನೆಗಳ ಮೂಲಕ ತನ್ನ ಇರುವಿಕೆಯನ್ನು ಪ್ರಕಟಿಸುತ್ತದೆ. ಇವುಗಳನ್ನು ಅಲಕ್ಷಿಸಿ ದೇಹ ದಂಡನೆಯನ್ನು ಮುಂದುವರೆಸಿದರೆ ಕಾಲ ಕ್ರಮೇಣ ಇದು ಹೆಚ್ಚುತ್ತಾ ಉಲ್ಬಣಾವಸ್ಥೆ ತಲುಪಿದಾಗ ಬಹಳವೇ ತಡವಾಗಿರುತ್ತದೆ ಹಾಗೂ ನಿತ್ಯದ ಚಲನವಲಗಳೂ ಬಾಧೆಗೊಳಗಾಗುತ್ತವೆ.

Ways to Get Relief from Arthritis Pain Naturally

ಸಂಧಿವಾತಕ್ಕೆ ಕೆಲವಾರು ಚಿಕಿತ್ಸೆಗಳಿವೆ. ಇವುಗಳಲ್ಲಿ ನೈಸರ್ಗಿಕ ಚಿಕಿತ್ಸೆ ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಇಂದಿನ ಲೇಖನದಲ್ಲಿ ಸಂಧಿವಾತವನ್ನು ನೈಸರ್ಗಿಕವಾಗಿ ಗುಣಪಡಿಸುವ ಕ್ಷಮತೆ ಹೊಂದಿರುವ ಕೆಲವು ವಿಧಾನಗಳನ್ನು ವಿವರಿಸಲಾಗಿದೆ:

ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಮನೆಮದ್ದುಗಳು

ಅರಿಶಿನ ಮತ್ತು ಶುಂಠಿ

ಅರಿಶಿನ ಮತ್ತು ಶುಂಠಿ

ಇವೆರಡರಲ್ಲಿಯೂ ಕುರ್ಕುಮಿನ್ ಎಂಬ ಪೋಷಕಾಂಶವಿದ್ದು ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ದೇಹದಲ್ಲಿ ಎದುರಾಗುವ ಉರಿಯೂತವನ್ನು ಕಡಿಮೆಗೊಳಿಸಲು ಈ ಆಂಟಿ ಆಕ್ಸಿಡೆಂಟ್ ಉತ್ತಮವಾಗಿವೆ. ಈ ಪೋಷಕಾಂಶದ ಗರಿಷ್ಟ ಪ್ರಯೋಜನ ಪಡೆಯಲು ಇದನ್ನು ದ್ರವರೂಪದಲ್ಲಿ ಸೇವಿಸುವುದು ಉತ್ತಮ. ಇದಕ್ಕಾಗಿ ದಿನವಿಡೀ ಕೊಂಚಕೊಂಚವಾಗಿ ಅರಿಶಿನ ಮತ್ತು ಶುಂಠಿ ಕುದಿಸಿ ಸೋಸಿದ ಟೀ ಸೇವಿಸುತ್ತಾ ಬರಬೇಕು. ಜೊತೆಗೇ ಈಗತಾನೇ ಅರೆದ ಹಸಿಶುಂಠಿ ಮತ್ತು ಹಸಿ ಅರಿಶಿನದ ಕೊಂಬಿನ ಲೇಪನವನ್ನು ಕೊಂಚ ಬಿಸಿನೀರಿನೊಂದಿಗೆ ಬೆರೆಸಿ ಇದಕ್ಕೆ ಕೊಂಚ ಜೇನ್ಜು ಬೆರೆಸಿ ಸೇವಿಸುವ ಮೂಲಕ ಸಂಧಿವಾತ ಕಡಿಮೆಯಾಗುವ ಜೊತೆಗೇ ದಿನದ ದಣಿವು ಸಹಾ ಮಾಯವಾಗುತ್ತದೆ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಸಾಮಾನ್ಯವಾಗಿ ಎದುರಾಗುವ ಹಲವಾರು ತೊಂದರೆಗಳಿಗೆ ಇದೊಂದು ಅದ್ಭುತವಾದ ಔಷಧಿಯಾಗಿದೆ. ಇದೇ ಕಾರಣಕ್ಕೆ ಪ್ರತಿ ಮನೆಯಲ್ಲಿಯೂ ಕನಿಷ್ಟ ಒಂದು ಚಿಕ್ಕ ಬಾಟಲಿಯಷ್ಟಾದರೂ ಸೇಬಿನ ಶಿರ್ಕಾ ಇರಲೇಬೇಕು. ಹೆಚ್ಚಿನ ಕಾಯಿಲೆಗಳಂತೆಯೇ ಸಂಧಿವಾತಕ್ಕೂ ಸೇಬಿನ ಶಿರ್ಕಾ ಉತ್ತಮ ಪರಿಹಾರ ಒದಗಿಸುತ್ತದೆ. ಈ ದ್ರವ ಕ್ಷಾರೀಯವಾಗಿರುವ ಕಾರಣ ದೇಹದಲ್ಲಿ ಎದುರಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ನೋವನ್ನೂ ಕಡಿಮೆಯಾಗಿಸುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ಸಂಧಿವಾತದ ತೊಂದರೆ ಇದ್ದು ಇದುವರೆಗೆ ಸೇಬಿನ ಶಿರ್ಕಾ ಪ್ರಯತ್ನಿಸದೇ ಇದ್ದರೆ ಈ ಬಾರಿ ಇದನ್ನು ಏಕೆ ಪ್ರಯತ್ನಿಸಬಾರದು?

Most Read: ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಚರ್ಮದ ಆಳಕ್ಕಿಳಿದು ಮೂಳೆಗಳ ಸಂಧುಗಳಿಗೆ ಅಗತ್ಯವಾದ ಜಾರುಕತೆಯನ್ನು ಒದಗಿಸುತ್ತದೆ. ಈ ಅದ್ಭುತ ಎಣ್ಣೆ ಯನ್ನು ಅಡುಗೆಯಲ್ಲಿ ಬಳಸುವ ಮೂಲಕ ಕೇವಲ ಹೃದಯಕ್ಕೆ ಮಾತ್ರವಲ್ಲ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ನೋವಿರುವ ಭಾಗಕ್ಕೆ ಕೊಂಚ ಮಸಾಜ್ ನೊಂದಿಗೆ ಹಚ್ಚಿಕೊಳ್ಳುವ ಮೂಲಕವೂ ಉತ್ತಮ ಆರೈಕೆ ದೊರಕುತ್ತದೆ. ನೋವಿರುವ ಭಾಗದಲ್ಲಿ ಎರಡು ಮೂರು ತೊಟ್ಟು ಮಾತ್ರದಷ್ಟು ಆಲಿವ್ ಎಣ್ಣೆ ಸಾಕಾಗುತ್ತದೆ. ಇದರ ಕ್ಷಮತೆಯನ್ನು ಹೆಚ್ಚಿಸಲು ನಿಮ್ಮ ಆಯ್ಕೆಯ ಅವಶ್ಯಕ ತೈಲದ ಒಂದೆರಡು ತೊಟ್ಟುಗಳನ್ನು ಬೆರೆಸಿದರೆ ನೋವು ಶಮನವಾಗುವ ಗತಿ ಇನ್ನೂ ಹೆಚ್ಚುತ್ತದೆ.

ಶುದ್ಧೀಕರಿಸಿದ ನೀರು

ಶುದ್ಧೀಕರಿಸಿದ ನೀರು

ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಎದುರಾಗುವ ಕೆಲವಾರು ನೋವುಗಳಿಗೆ ನಮ್ಮ ದೇಹದಲ್ಲಿ ನೀರಿನ ಕೊರತೆಯೇ ಕಾರಣವಾಗುತ್ತದೆ. ಒಂದು ವೇಳೆ ನಿರ್ಜಲೀಕರಣದಿಂದ ಸಂಧಿವಾತದ ಸಹಿತ ಬೇರೆ ಯಾವುದೇ ನೋವು ಉಂಟಾಗಿದ್ದರೆ ಇದನ್ನು ಕೇವಲ ನೀರಿನ ಕೊರತೆಯನ್ನು ನೀಗಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ಸಂಧಿವಾತಕ್ಕೆ ನೀರಿನ ಕೊರತೆ ಕಾರಣವಲ್ಲದೇ ಹೋದರೂ ಒಂದು ವೇಳೆ ಇದೇ ಕಾರಣವಾಗಿದ್ದರೂ ಇರಬಹುದು. ಹಾಗಾಗಿ ನೋವು ಕಡಿಮೆಯಾಗುತ್ತದೆಯೋ ಎಂದು ನೋಡಲು ಸ್ವಚ್ಛವಾದ ಒಂದು ಲೋಟ ಶುದ್ದೀಕರಿಸಿದ ನೀರನ್ನು ಸೇವಿಸಿ ಏಕ ಪ್ರಯತ್ನಿಸಬಾರದು?

Most Read: ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!

ಎಪ್ಸಂ ಉಪ್ಪು

ಎಪ್ಸಂ ಉಪ್ಪು

ನೂರಾರು ವರ್ಷಗಳಿಂದ ಮೆಗ್ನೇಶಿಯಂ ಸಲ್ಫೇಟ್ ಎಂಬ ಲವಣವನ್ನು ನೋವು ನಿವಾರಕವಾಗಿ ಬಳಸಲಾಗುತ್ತಾ ಬರಲಾಗಿದೆ. ಇದರ ರಾಸಾಯನಿಕ ಹೆಸರನ್ನು ಕೇಳಿದಾಗ ಇದೊಂದು ಕೃತಕ ರಾಸಾಯನಿಕ ಇರಬಹುದೆಂದು ಅನ್ನಿಸುತ್ತದೆ. ಆದರೆ ಇದು ನೈಸರ್ಗಿಕವಾಗಿ ಸಿಗುವ ಉಪ್ಪಾಗಿದ್ದು ಎಪ್ಸಂ ಸಾಲ್ಟ್ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತದೆ. ನೋವಿರುವ ಭಾಗ ಪೂರ್ಣವಾಗಿ ನೀರಿನಲ್ಲಿ ಮುಳುಗಲು ಸಾಧ್ಯವಾಗುವಷ್ಟು ದೊಡ್ಡದಾದ ಪಾತ್ರೆಯೊಂದರಲ್ಲಿ ಸುಮಾರು ಮುಕ್ಕಾಲು ಭಾಗ ಉಗುರುಬೆಚ್ಚನೆಯ ನೀರು ಬೆರೆಸಿ ಒಂದು ದೊಡ್ಡ ಚಮಚದಷ್ಟು ಎಪ್ಸಂ ಉಪ್ಪನ್ನು ಬೆರೆಸಿ. ಉಪ್ಪನ್ನು ಹೀರಿಕೊಳ್ಳುವ ಗತಿಯನ್ನು ಹೆಚ್ಚಿಸಲು ನಿಮ್ಮ ನೆಚ್ಚಿನ ಅವಶ್ಯಕ ತೈಲದ ಕೆಲವು ತೊಟ್ಟುಗಳನ್ನೂ ಬೆರೆಸಬಹುದು. ಈ ನೀರಿನಲ್ಲಿ ಸಾಧ್ಯವಾದಷ್ಟು ಹೊತ್ತು ನೋವಿರುವ ಭಾಗ ಮುಳುಗಿರುವಂತೆ ಇರಿಸಿ. ಇನ್ನು ಎಪ್ಸಮ್ ಉಪ್ಪು ಬಿಸಿಬಿಸಿ ನೀರಲ್ಲಿ ಬೆರಸಿ ಸ್ನಾನ ಮಾಡಿದರೆ ನೋವು ಮತ್ತು ಸಂಧಿವಾತದಿಂದಾಗುವ ಅನಾನುಕೂಲಗಳನ್ನು ಕಡಿಮೆಮಾಡಿಕೊಳ್ಳಬಹುದು. ಸುಮಾರು ಎರಡು ಕಪ್ ಎಪ್ಸಮ್ ಉಪ್ಪನ್ನು ಬಿಸಿಬಿಸಿ ನೀರಲ್ಲಿ ಬೆರಸಿ ಸ್ನಾನಮಾಡಿದರೆ ನೀವು ಬಯಸಿದ ಪರಿಣಾಮವನ್ನು ಹೊಂದಬಹುದು. ಹೀಗೆ ಮಾಡುವುದನ್ನು ವಾರದಲ್ಲಿ 2 ರಿಂದ 3 ಬಾರಿ ಪುನರಾವರ್ತಿಸಿ. ಸಂಧಿವಾತ ಸಹಿತ ಮೂಳೆಗಳಿಗೆ ಎದುರಾಗುವ ಯಾವುದೇ ನೋವು ನಿತ್ಯದ ಚಟುವಟಿಕೆಗಳನ್ನು ಅತಿಯಾಗಿ ಬಾಧಿಸುತ್ತದೆ. ಮೇಲೆ ವಿವರಿಸಿದ ವಿಧಾನಗಳ ಮೂಲಕ ಈ ನೋವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಬಹುದು. ಆದರೆ, ಯಾವುದೇ ಪರ್ಯಾಯ ವಿಧಾನವನ್ನು ಪ್ರಯತ್ನಿಸುವ ಮುನ್ನ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಯನ್ನು ಪಡೆದೇ ಮುಂದುವರೆಯುವುದು ಅವಶ್ಯವಾಗಿದೆ.

Most Read: ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ 5 ವಸ್ತುಗಳು ನಿಮ್ಮ ಬಳಿ ಇರಲಿ

ವ್ಯಾಯಾಮ

ವ್ಯಾಯಾಮ

ಸಾಮಾನ್ಯವಾಗಿ ನೋವಿದ್ದರೆ ನಾವು ಆ ಭಾಗಕ್ಕೆ ಯಾವುದೇ ಒತ್ತಡ ನೀಡದೇ ನೋವಿನಿಂದ ರಕ್ಷಿಸಿಕೊಳ್ಳುತ್ತೇವೆ. ಇದನ್ನೇ ಕುಂಟುತನ ಎಂದು ಕರೆಯುತ್ತೇವೆ. ವಾಸ್ತವವಾಗಿ ತೂಕವನ್ನು ಉತ್ತಮ ಮಿತಿಯಲ್ಲಿರಿಸಲು ವ್ಯಾಯಾಮ ಅವಶ್ಯಕವಾಗಿದೆ. ಒಂದು ವೇಳೆ ಸಂಧಿವಾತ ಅಥವಾ ಇದಕ್ಕೆ ಸಮಯಾದ ಇತರ ಯಾವುದೇ ತೊಂದರೆಯಿಂದ ನೀವು ನರಳುತ್ತಿದ್ದರೆ ಹಾಗೂ ನಿಮ್ಮ ತೂಕ ಆರೋಗ್ಯಕರ ಮಿತಿಗಳಲ್ಲಿದ್ದರೆ ನೋವು ಸಹಜವಾಗಿಯೇ ಕಡಿಮೆಯಾಗಲು ಸುಲಭ ವ್ಯಾಯಾಮದಿಂದ ಸಾಧ್ಯವಾಗುತ್ತದೆ. ನೋವಿರುವ ಭಾಗಕ್ಕೆ ಕೊಂಚವೇ ನೋವು ಹೆಚ್ಚುವಷ್ಟು ಮಟ್ಟಿಗಾದರೂ ವ್ಯಾಯಾಮವನ್ನು ನೀಡಿ ನೋವನ್ನು ಸಹಿಸಿಕೊಳ್ಳುತ್ತಾ ಬಂದರೆ ನಿಧಾನವಾಗಿ ನೋವು ತಾನಾಗಿಯೇ ಕಡಿಮೆಯಾಗುತ್ತದೆ.

ನಿಂಬೆ ಜ್ಯೂಸ್

ನಿಂಬೆ ಜ್ಯೂಸ್

ನಿಂಬೆ ಹಣ್ಣಿನ ಪಾನೀಯವು ಸಂಧಿವಾತದ ಲಕ್ಷಣಗಳಿಗೆ ಒಂದು ಪರಿಣಾಮಕಾರಿ ಮತ್ತು ಸರಳ ಚಿಕಿತ್ಸೆ. ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಗ್ಲಾಸ್ ನೀರಿಗೆ ಬೆರಸಿ ದಿನಕ್ಕೆ ಮೂರುಬಾರಿ ಸವೆದು ನಿಮ್ಮ ನೋವಿನಲ್ಲಾಗುವ ವ್ಯತ್ಯಾಸವನ್ನು ಗಮನಿಸಿರಿ. ಇದರ ಬದಲು, ನಿಂಬೆಹಣ್ಣಿನ ಪಾನೀಯಕ್ಕೆ ಅರ್ಧ ಚಮಚ ಅಡಿಗೆಸೋಡಾ ಬೆರಸಿ ಕುಡಿಯಿರಿ.

ಬಾಳೆಹಣ್ಣು

ಬಾಳೆಹಣ್ಣು

ವಿಟಮಿನ್ ಸಿ ಬಾಳೆಹಣ್ಣಿನಲ್ಲಿ ಅಧಿಕವಾಗಿ ದೊರೆಯುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಕೀಲುನೋವುಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಬಾಳೆಹಾಣ್ಣಿನಲ್ಲಿರುವ ಸಮೃದ್ಧ ಅಂಶಗಳು ದೇಹದಲ್ಲಿರುವ ಯೂರಿಕ್ ಆಮ್ಲದ ಸ್ಫಟಿಕಗಳನ್ನು ದುರ್ಬಲಗೊಳಿಸಿ ದ್ರವರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರಿಂದ ಸಂಧಿವಾತದ ನೋವು ನಿವಾರಣೆಯಾಗಲು ಸಹಾಯಮಾಡುತ್ತದೆ.

English summary

Ways to Get Relief from Arthritis Pain Naturally

There is a lot of misconceptions surrounding joint pain. Many people believe that this type of discomfort only affects older people. So many younger people tend to over exhaust themselves without regard for their bodies. They blow off the warning signs, and keep pushing forward. By the time they finally realize how much pain they're in, they might already be having difficulty moving around due to unbearable joint pain. While many natural remedies for joint pain won't work as quickly as popping an Advil, but they don't have the unwanted side effects either.
X
Desktop Bottom Promotion