For Quick Alerts
ALLOW NOTIFICATIONS  
For Daily Alerts

ಸ್ತನಗಳ ಗಾತ್ರಗಳನ್ನು ಕುಗ್ಗಿಸಲು ಯೋಗಾಭ್ಯಾಸಗಳು

|

ಮಹಿಳೆಯ ಸೌಂದರ್ಯವನ್ನು ಗ್ರಹಿಸುವಾಗ ಸ್ತನಗಳ ಗಾತ್ರವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಹೆಣ್ಣಿನ ದೇಹದ ಪ್ರಮುಖ ಅಂಗವಾಗಿರುವ ಸ್ತನಗಳು ಆಕೆಯ ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪುರುಷರು ಮಹಿಳೆಯ ಸ್ತನಗಳಿಗೆ ಬೇರಾವುದೇ ಅಂಗಕ್ಕಿಂತ ಹೆಚ್ಚು ಆಕರ್ಷಿತರಾಗುತ್ತಾರೆ ಎಂಬುದು ಅತಿಶಯೋಕ್ತಿಯಲ್ಲ ಹಾಗೂ ಇದನ್ನು ಅರಿತ ಮಹಿಳೆಯರು ತಮ್ಮ ಪುರುಷನನ್ನು ಆಕರ್ಷಿಸಲು ಇದನ್ನೇ ಬಂಡವಾಳವಾಗಿಸುತ್ತಾರೆ. ಸಾಮಾನ್ಯವಾಗಿ ಸ್ತನಗಳ ಗಾತ್ರ ತೀರಾ ಚಿಕ್ಕವೂ ಆಗಿರಬಾರದು ಹಾಗೂ ತೀರಾ ದೊಡ್ಡವೂ ಆಗಿರಬಾರದು, ಆಗಲೇ ಸೌಂದರ್ಯ ಮುಮ್ಮಡಿಸುತ್ತದೆ.

ಹೆಚ್ಚಿನ ಮಹಿಳೆಯರು ತಮ್ಮ ಕಿರುಗಾತ್ರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದರೆ ಕೆಲವು ಮಹಿಳೆಯರು ತಮ್ಮ ಅಗಾಧ ಗಾತ್ರವನ್ನು ಕುಗ್ಗಿಸಲು ಯತ್ನಿಸುತ್ತಿರುತ್ತಾರೆ. ಏಕೆಂದರೆ ಸ್ತನಗಳ ಗಾತ್ರ ವಿಪರೀತವಿದ್ದಷ್ಟೂ ಸಮಾಜದಲ್ಲಿ ಹೆಚ್ಚಿನ ಮುಜುಗರವನ್ನೂ, ಜೋಲು ಬೀಳುವ ಸಾಧ್ಯತೆಯನ್ನು ತಡೆಯಲು ಹಿಂದೆ ಜಗ್ಗಿ ನಡೆಯುವುದನ್ನೂ ಅಭ್ಯಸಿಸಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಕಾರಣಕ್ಕೂ ಮಿಗಿಲಾಗಿ ಆರೋಗ್ಯದ ದೃಷ್ಟಿಯಿಂದಲೂ ಇವರು ಸ್ತನಗಳ ಗಾತ್ರಗಳನ್ನು ಕುಗ್ಗಿಸಿಕೊಳ್ಳಲು ಹಂಬಲಿಸುತ್ತಾರೆ.

ಒಂದು ವೇಳೆ ನೀವು ಈ ತೊಂದರೆಯನ್ನು ಅನುಭವಿಸುತ್ತಿರುವ ಮಹಿಳೆಯಾಗಿದ್ದರೆ ಯೋಗಾಭ್ಯಾಸದಲ್ಲಿ ನಿಮಗಾಗಿಯೇ ಕೆಲವು ವ್ಯಾಯಾಮಗಳನ್ನು ವಿವರಿಸಲಾಗಿದೆ. ಶಾರೀರಿಕ ಸೌಂದರ್ಯವನ್ನು ವೃದ್ದಿಸಲು ಯೋಗಾಭ್ಯಾಸ ಅತ್ಯುತ್ತಮ ವಿಧಾನವಾಗಿದ್ದು ದೇಹದ ಭಾಗಗಳ ಸೆಳೆತ ಹಾಗೂ ಉಸಿರಾಟವನ್ನು ಕ್ರಮಬದ್ಧಗೊಳಿಸುವ ಮೂಲಕ ಅದ್ಭುತವಾದ ಪರಿಣಾಮಗಳನ್ನು ಪಡೆಯಬಹುದು. ಇದರ ಅಂತಿಮ ಫಲಿತಾಂಶಗಳು ಕೇವಲ ಶಾರೀರ ಉತ್ತಮಗೊಳ್ಳುವುದು ಮಾತ್ರವಲ್ಲ, ಮಾನಸಿಕವಾಗಿಯೂ ಉತ್ತಮ ಸ್ಥೈರ್ಯ ಹಾಗೂ ಮನೋಬಲ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಸ್ತನಗಳನ್ನು ಆರೋಗ್ಯಕರ ಹಾಗೂ ಸುಂದರ ಗಾತ್ರಕ್ಕೆ ಇಳಿಸಿಕೊಳ್ಳುವುದು ನಿಮ್ಮ ಪ್ರಥಮ ಆದ್ಯತೆಯಾಗಿದ್ದರೆ ಇಂದಿನ ಲೇಖನದಲ್ಲಿ ವಿವರಿಸಿರುವ ಯೋಗಾಸನಗಳು ನಿಮಗೆ ಖಂಡಿತವಾಗಿಯೂ ನೆರವಾಗಬಲ್ಲವು....

ಗೋಡೆಯನ್ನು ಒತ್ತುವ ವಿಧಾನ

ಗೋಡೆಯನ್ನು ಒತ್ತುವ ವಿಧಾನ

ಸ್ತನಗಳ ಗಾತ್ರಗಳನ್ನು ಕುಗ್ಗಿಸುವ ನಿಟ್ಟಿನಲ್ಲಿ ಯೋಗಾಭ್ಯಾಸ ವಿವರಿಸುವ ಪ್ರಥಮ ವಿಧಾನ ಇದಾಗಿದೆ. ಗೋಡೆಯೊಂದರ ಮುಂದೆ ಸುಮಾರು ಮೂರು ಪಾದಗಳಷ್ಟು ದೂರದಲ್ಲಿ ನೇರವಾಗಿ ನಿಂತುಕೊಳ್ಳಿ ಹಾಗೂ ಎರಡೂ ಹಸ್ತಗಳನ್ನು ಹೊರಚಾಚಿ ಹೆಬ್ಬೆರಳು ಕೆಳಮುಖವಾಗಿ, ಮಧ್ಯದ ಎರಡೂ ಬೆರಳುಗಳು ಒಂದಕ್ಕೊಂದು ತಾಕುವಂತಿರಿಸಿ ಗೋಡೆಯ ಮೇಲೆ ಎದೆಯ ಮಟ್ಟದಲ್ಲಿ ಗೋಡೆಯ ಮೇಲಿರಿಸಿ. ಈಗ ಪೂರ್ಣ ಉಸಿರೆಳೆದುಕೊಂಡು ಗೋಡೆಯನ್ನು ದೂಡಲು ಯತ್ನಿಸಿ, ತಲೆಯನ್ನು ಎತ್ತಿ ಹಿಡಿಯಿರಿ, ಕೈಗಳನ್ನು ಬಗ್ಗಿಸದಿರಿ. ಈಗ ಪಕ್ಕೆಲೆಬುಗಳ ಹಾಗೂ ಕೆಳಬೆನ್ನಿನ ಭಾಗದಲ್ಲಿ ಕೊಂಚ ಚಳಕು ಮೂಡಿದಂತಾಗಬೇಕು. ಇದು ಸ್ತನಗಳನ್ನು ಹಿಡಿದಿರಿಸುವ ಸ್ನಾಯುಗಳಿಗೆ (pectoral muscles) ಹೆಚ್ಚಿನ ಸೆಳೆತ ನೀಡುತ್ತದೆ ಹಾಗೂ ನಿತ್ಯವೂ ಕೆಲವಾರು ನಿಮಿಷ ಈ ವಿಧಾನ ಅನುಸರಿಸುವ ಮೂಲಕ ಸ್ತನಗಳ ಗಾತ್ರ ಕುಸಿಯುತ್ತದೆ.

ಪ್ರಾರ್ಥನಾ ಭಂಗಿ

ಪ್ರಾರ್ಥನಾ ಭಂಗಿ

ನೈಸರ್ಗಿಕವಾಗಿ ಸ್ತನಗಳ ಗಾತ್ರ ಕುಗ್ಗಲು ಈ ವಿಧಾನವನ್ನು ಯೋಗಾಭ್ಯಾಸದಲ್ಲಿ ಸಲಹೆ ಮಾಡಲಾಗುತ್ತದೆ. ಎರಡೂ ಕೈಗಳನ್ನು ಜೋಡಿಸಿ ಎದೆಮಟ್ಟದಲ್ಲಿ ಎತ್ತಿ ಹಾಗೂ ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಈಗ ಪೂರ್ಣ ಉಸಿರೆಳೆದುಕೊಂಡು ಕೈಗಳನ್ನು ಒಂದಕ್ಕೊಂದು ಬಿಗಿಯಾಗಿ ಒತ್ತಿ. ಉಸಿರು ಎಷ್ಟು ಹೊತ್ತು ಹಿಡಿದಿರಲು ಸಾಧ್ಯವೋ ಅಷ್ಟೂ ಹೊತ್ತೂ ಬಿಗಿಯಾಗಿರಲಿ. ಬಳಿಕ ಉಸಿರು ಬಿಟ್ಟು ಕೈಗಳನ್ನು ಕೆಳಕ್ಕಿಳಿಸಿ. ಸಮಯ ಸಿಕ್ಕಿದಾಗೆಲ್ಲಾ ಈ ವಿಧಾನ ಅನುಸರಿಸುತ್ತಾ ಬರುವ ಮೂಲಕ ಸ್ತನಗಳ ಸ್ನಾಯುಗಳಿ ಉತ್ತಮ ವ್ಯಾಯಾಮ ಲಭಿಸುತ್ತದೆ ಹಾಗೂ ಶೀಘ್ರವೇ ಗಾತ್ರ ಕುಗ್ಗುತ್ತವೆ.

ಅರ್ಧಚಂದ್ರಾಕೃತಿಯ ಭಂಗಿ: (ಅರ್ಧ ಚಕ್ರಾಸನ)

ಅರ್ಧಚಂದ್ರಾಕೃತಿಯ ಭಂಗಿ: (ಅರ್ಧ ಚಕ್ರಾಸನ)

ಇದೊಂದು ಜನಪ್ರಿಯ ಆಸನವಾಗಿದ್ದು ಸ್ತನಗಳ ಗಾತ್ರ ಕುಗ್ಗಲೂ ನೆರವಾಗುತ್ತದೆ. ಆದರೆ ನಿಧಾನವಾಗಿ ಹಾಗೂ ಸತತವಾಗಿ ನಿರ್ವಹಿಸಬೇಕಾಗಿರುವುದು ಹಾಗೂ ಈ ಆಸನವನ್ನು ಅನುಸರಿಸುವುದು ಅಷ್ಟು ಸುಲಭವಲ್ಲದ ಕಾರಣ ಈ ಆಸನವನ್ನು ಕೇವಲ ಯೋಗಪಟುಗಳ ಅಥವಾ ಯೋಗ ಶಿಕ್ಷಕರ ನಿಗಾ ಮೂಲಕವೇ ನಿರ್ವಹಿಸಬೇಕಾಗುತ್ತದೆ. ಆದರೆ ಇದರ ಪರಿಣಾಮಗಳು ಮಾತ್ರ ಅದ್ಭುತವಾಗಿರುತ್ತವೆ ಹಾಗೂ ಸ್ತನಗಳು ಸುಂದರ ರೂಪ ಪಡೆಯುವ ಜೊತೆಗೇ ಹಳೆಯ ನೋವುಗಳೂ ಮಾಯವಾಗುತ್ತವೆ.

ಅಸ್ತಂಗ ಯೋಗಾಭ್ಯಾಸ

ಅಸ್ತಂಗ ಯೋಗಾಭ್ಯಾಸ

ಬಿಕ್ರಮ್ ಯೋಗಾಭ್ಯಾಸವೆಂದೂ ಕರೆಯಲ್ಪಡುವ ಈ ಆಸನ ಕಳೆದ ಒಂದೆರಡು ದಶಕಗಳಿಂದ ಹೆಚ್ಚು ಜನಪ್ರಿಯತೆ ಪಡೆದಿದೆ. ಸ್ತನಗಳ ಗಾತ್ರ ಕುಗ್ಗಿಸಲೂ ಈ ಆಸನ ಉತ್ತಮವಾಗಿದೆ. ಆದರೆ ಈ ಆಸನ ಸಹಾ ಕಷ್ಟಕರವಾಗಿದ್ದು ಕೇವಲ ಯೋಗಪಟು ಅಥವಾ ಯೋಗಶಿಕ್ಷಕರ ಸಲಹೆಯ ಮೂಲಕವೇ ನಿರ್ವಹಿಸಬೇಕಾಗುತ್ತದೆ.

ಕಪ್ಪೆ ಆಸನ

ಕಪ್ಪೆ ಆಸನ

ಎರಡೂ ಹಿಮ್ಮಡಿಗಳನ್ನು ಪರಸ್ಪರ ತಾಕಿಸಿ ಕಾಲುಬೆರಳುಗಳು ಕೊಂಚವೇ ಅಗಲಿರಿಸುವಂತೆ ನಿಂತುಕೊಳ್ಳಿ. ಈಗ ನಿಧಾನವಾಗಿ ಮೊಣಕಾಲುಗಳು ತಾಕುವಂತೆ ಕುಳಿತುಕೊಳ್ಳಿ ಹಾಗೂ ತುದಿಗಾಲ ಮೇಲೆ ನಿಲ್ಲುತ್ತಾ ಹಸ್ತಗಳನ್ನು ನೆಲದ ಮೇಲಿರಿಸಿ. ಈಗ ಪೂರ್ಣ ಉಸಿರೆಳೆದುಕೊಂಡು ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿ ಬೆನ್ನುಮೂಳೆ ನೆಟ್ಟಗಾಗಿಸಲು ಯತ್ನಿಸಿ, ಹಸ್ತಗಳು ನೆಲದ ಮೇಲಿರುವಂತೆ ಇರಿಸಿ ಸಾಧ್ಯವಾದಷ್ಟೂ ಹೊತ್ತು ತಲೆ ಮೊಣಕಾಲುಗಳ ಬಳಿ ಇರಿಸಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಸ್ಥಿತಿಯಲ್ಲಿ ನಿಂತುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ಅಭ್ಯಾಸವನ್ನು ದಿನದಲ್ಲಿ ಕೆಲವು ಬಾರಿಯಾದರೂ ಪುನರಾವರ್ತಿಸಿ.

ಪುಶ್ ಅಪ್‌ಗಳು

ಪುಶ್ ಅಪ್‌ಗಳು

ಸ್ತನ ಗಾತ್ರ ಕಿರಿದಾಗಿಸಲು ಪುಶ್ - ಅಪ್‌ಗಳು ಉತ್ತಮ ವಿಧಾನವಾಗಿದೆ. ನಿರ್ದಿಷ್ಟ ತೂಕ ಆಕಾರದ ಸ್ತನಗಳು ನಿಮ್ಮದಾಗಬೇಕಿದ್ದರೆ ನಿಯಮತವಾಗಿ ಪುಶ್ - ಅಪ್‌ಗಳನ್ನು ನೀವು ಮಾಡಬೇಕು. ಕನಿಷ್ಠ ಪಕ್ಷ 20 -25 ನಿಮಿಷ ಈ ವ್ಯಾಯಾಮ ಮಾಡಲು ನೀವು ವ್ಯಯ ಮಾಡಲೇಬೇಕು.

ಆಹಾರ ಪಥ್ಯ

ಆಹಾರ ಪಥ್ಯ

ಆರೋಗ್ಯಕರ ರೀತಿಯಲ್ಲಿ ಸ್ತನ ಗಾತ್ರವನ್ನು ಕಿರಿದಾಗಿಸಿಕೊಳ್ಳಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಸರಿಯಾದ ಆಹಾರ ಕ್ರಮವನ್ನು ನೀವು ರೂಢಿಸಿಕೊಳ್ಳಬೇಕು. ಸಾಕಷ್ಟು ತರಕಾರಿಗಳಿರುವ ಆಹಾರ ಕ್ರಮವನ್ನು ಅನುಸರಿಸಿ. ಕೊಬ್ಬಿರುವ ಮಾಂಸ ಮತ್ತು ಜಂಕ್ ಆಹಾರ ನಿಮ್ಮ ಹವ್ಯಾಸವಾಗಿದ್ದರೆ ಅದನ್ನು ಮೊದಲು ತ್ಯಜಿಸಿ. ಹಾಗೆಂದು 15 ದಿನದಲ್ಲಿ ಸಣ್ಣಗಾಗಬೇಕೆಂದು ಅತಿಯಾದ ಪಥ್ಯವನ್ನು ಮಾಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಸ್ತನ ಆಕಾರ ಕಳೆದುಕೊಳ್ಳುತ್ತದೆ.

ನಿಮ್ಮ ಕ್ಯಾಲೋರಿಗಳನ್ನು ಎಣಿಸಿ

ನಿಮ್ಮ ಕ್ಯಾಲೋರಿಗಳನ್ನು ಎಣಿಸಿ

ನಿಮ್ಮ ಸ್ತನ ಗಾತ್ರವನ್ನು ಕಡಿಮೆ ಮಾಡಬೇಕೆಂಬ ದೃಢ ಸಂಕಲ್ಪ ನಿಮ್ಮದಾಗಿದ್ದರೆ ನಿಮ್ಮ ಕ್ಯಾಲೋರಿಗಳನ್ನು ಎಣಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನೀವು ತೆಗೆದುಕೊಳ್ಳುತ್ತಿರುವ ಕ್ಯಾಲೋರಿ ಕಡೆ ಸ್ವಲ್ಪ ಗಮನ ಕೊಡಿ. ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿಯನ್ನು ಸೇವಿಸಬೇಡಿ. ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ವಿಟಮಿನ್ ಬಿ ಅಂಶವುಳ್ಳ ಆಹಾರವನ್ನು ಹೆಚ್ಚು ತೆಗೆದುಕೊಳ್ಳಿ. ಬಾದಾಮಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ತೆಗೆದುಕೊಳ್ಳುವುದು ನಿಮ್ಮ ತ್ವಚೆಯನ್ನು ಉತ್ತಮಗೊಳಿಸುತ್ತದೆ.

English summary

Ways To Reduce Breast Size By Yoga

The yoga exercises for breast reduction have shown their benefits and that is why thousands of women flock to learn these yoga exercises. If you are serious about reducing the size of your breasts, then the following ways of how to reduce breast size by yoga can help you a lot:
X
Desktop Bottom Promotion