For Quick Alerts
ALLOW NOTIFICATIONS  
For Daily Alerts

ಹೆಣ್ಣುಮಕ್ಕಳು ತಿಳಿಯಬೇಕಾದ ಹೊಟ್ಟೆಯ ಕ್ಯಾನ್ಸರ್‌ನ ಮುನ್ಸೂಚನೆಗಳು

|

ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತೆ, ಪ್ರತಿ ವರ್ಷ ಹತ್ತು ಲಕ್ಷ ಹೊಸ ಕ್ಯಾನ್ಸರ್ ಕೇಸ್ ಗಳು ಭಾರತದಲ್ಲಿ ಬೆಳಕಿಗೆ ಬರುತ್ತದೆ. ಅದರಲ್ಲಿ ಅರ್ಧದಷ್ಟು ಕೇಸ್ ಗಳು ಉದಾಸೀನದಿಂದನೇ ಉಲ್ಬಣಗಳೊಳ್ಳುತ್ತವೆ. ಹೊಟ್ಟೆಯ (ಜಠರದ) ಕ್ಯಾನ್ಸರ್ ಗೆ ನೀವು ತುತ್ತಾಗೋ ಸಾಧ್ಯತೆ ಬಹಳ ಕಡಿಮೇನೆ ಆದ್ರೂ ಬರೋದೆ ಇರೋದಕ್ಕೆ ಯಾವುದೆ ಕಾರಣಗಳಿಲ್ಲ. ಕ್ಯಾನ್ಸರ್ ನಲ್ಲಿ ನೂರಾರು ಪ್ರಾಕಾರಗಳು.

Warning Signs Of Stomach Cancer Every Woman Should Know

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಪ್ರಕಾರ ಪ್ರಪಂಚದಲ್ಲಿ ಹೊಟ್ಟೆಯ ಕ್ಯಾನ್ಸರ್ ನಿಂದಾಗುವ ಸಾವಿನ ಸಂಖ್ಯೆ ಎಂಟು ಲಕ್ಷ. ಕ್ಯಾನ್ಸರ್ ನಿಂದಾಗುವ ಎಲ್ಲಾ ಸಾವುಗಳಲ್ಲಿ ಹೊಟ್ಟೆಯ ಕ್ಯಾನ್ಸರ್ ಗೆ ಮೂರನೇ ಸ್ಥಾನ. ಹಾಗಾದರೆ ನಿಮಗೆ ಕ್ಯಾನ್ಸರ್ ಇರುವುದರ ಸುಳಿವು ತಿಳಿಯೋದಾದ್ರು ಹೇಗೆ? ಹೊಟ್ಟೆಯ ಕ್ಯಾನ್ಸರ್ ಯಾವುದೆ ಗುಣ ಲಕ್ಷಣಗಳನ್ನ ಕೊಡದೆ ನಿಮ್ಮೊಳಗೆ ಅವಿತು ಕೂತಿರಬಹುದು !!! ಇಷ್ಟಾಗಿಯು ಈ ಕೆಲವುಗಳಲ್ಲಿ ಯಾವುದಾದರು ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ತಕ್ಷಣವೆ ಡಾಕ್ಟರ್ ನ ಭೇಟಿ ಮಾಡುವುದು ಒಳಿತು.

ನೀವು ಹೊಟ್ಟೆ ನೋವಿನಿಂದ ಬಳಲುತಿದ್ದೀರಾ ?

ನೀವು ಹೊಟ್ಟೆ ನೋವಿನಿಂದ ಬಳಲುತಿದ್ದೀರಾ ?

ಹೊಟ್ಟೆಯ ನೋವುಗಳಲ್ಲಿ ಹಲವು ಪ್ರಾಕಾರಗಳು. ಕಿಡ್ನಿ ಸ್ಟೋನ್ಸ್ ನಿಂದ ಮೊದಲುಗೊಂಡಂತೆ ಅಜೀರ್ಣ, ಗ್ಯಾಸ್ಟ್ರಿಕ್, ಮಸಲ್ ಪೇನ್ ಮುಂತಾದವುಗಳು. ಆದರೆ ಹೊಟ್ಟೆಯ ಮಧ್ಯಭಾಗ ಅಂದರೆ ಕಿಬ್ಬೊಟ್ಟೆಯ ಕೆಳಗಿನ ಭಾಗದಲ್ಲಿನ ತೀವ್ರತರವಾದ ನೋವು ಕ್ಯಾನ್ಸರ್ ಟ್ಯೂಮರ್ ಆಗಿರಬಹುದು. ಬಹಳ ಕಾಲದ ಬಿಡುವಿಲ್ಲದ ಹೊಟ್ಟೆ ನೋವಿನಿಂದ ನೀವು ಬಳಲುತ್ತಿದ್ದರೆ ತಕ್ಷಣ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಮಲದಲ್ಲಿ ರಕ್ತ ಕಂಡುಬಂದರೆ

ಮಲದಲ್ಲಿ ರಕ್ತ ಕಂಡುಬಂದರೆ

ತಜ್ಞರು ಹೇಳುವಂತೆ ಮಲದಲ್ಲಿ ಕಂಡುಬರುವ ರಕ್ತಕ್ಕೆ ಕಾರಣಗಳು ಹಲವು. ಪೈಲ್ಸ್ ಅಥವಾ ಫಿಶರ್ ಇದ್ದವರಿಗೂ ಹೀಗಾಗುವುದುಂಟು. ಆದಾಗ್ಯೂ ಹೊಟ್ಟೆಯ ಕ್ಯಾನ್ಸರ್ ನ ಬಹುದೊಡ್ಡ ಗುಣಲಕ್ಷಣ ಗಳಲ್ಲಿ ಇದು ಒಂದು. ಎಷ್ಟೋ ರೋಗಿ ಗಳಲ್ಲಿ ತುಂಬಾ ನಂತರದ ಅವಧಿಯಲ್ಲಿ ಕಂಡುಬರುವ ಈ ಲಕ್ಷಣ ಕೆಲವರಲ್ಲಿ ಮೊದಲ ಹಂತದಲ್ಲೂ ಕಂಡು ಬರಬಹುದು. ಮಲ ವಿಸರ್ಜನೆಯ ಸಮಯದಲ್ಲಿ ನಿಮಗೆ ರಕ್ತ ಕಂಡುಬಂದಲ್ಲಿ ತಕ್ಷಣವೆ ನಿಮ್ಮ ಹತ್ತಿರದ ದವಾಖಾನೆ ಗೆ ಭೇಟಿ ಕೊಡಿ.

ತಡೆದುಕೊಳಲಾಗದ ಎದೆ ಉರಿ ಕ್ಯಾನ್ಸರ್ ನ ಮುನ್ಸೂಚನೆಯಾರಿಗಬಹುದು

ತಡೆದುಕೊಳಲಾಗದ ಎದೆ ಉರಿ ಕ್ಯಾನ್ಸರ್ ನ ಮುನ್ಸೂಚನೆಯಾರಿಗಬಹುದು

ಗ್ಯಾಸ್ಟ್ರಿಕ್ ನಿಂದ ಬಳಲದೆ ಇರುವವರು ಈ ಕಾಲದಲ್ಲಿ ವಿರಳವೇ ಸರಿ. ಚಿಕ್ಕ ಮಕ್ಕಳಿಂದ ಹಿಡಿದು ತರುಣ ತುರುಣಿಯರು ಗೃಹಿಣಿಯರು ವಯೋವೃದ್ಧರು ಎಲ್ಲರನ್ನು ಕಾಡುವ ಈ ಮಾರಿ ಕ್ಯಾನ್ಸರ್ ಕಾರಕವೂ ಆಗಬಲ್ಲದು. ಹೇಗೆಂದು ಕೇಳುವಿರ? ಮುಂದೆ ಓದಿ. ಎದೆ ಉರಿಗೆ ಮುಖ್ಯ ಕಾರಣ ಗ್ಯಾಸ್ಟ್ರಿಕ್. ಹೊಟ್ಟೆಯಲ್ಲಿ ಆಸಿಡ್ ನ ಪ್ರಮಾಣ ಹೆಚ್ಚಾಗಿರುವುದೇ ಮತ್ತು ಈ ಆಸಿಡ್ ಈಸೊಫೆಗಸ್ ನ ಮುಖಾಂತರ ಮೇಲೆ ಕೆಳಗೆ ಹರಿಯುವುದೆ ಈ ಎದೆ ಉರಿಗೆ ಕಾರಣ. ಉದಾಸೀನದಿಂದ ಇದು ಅಲ್ಸರ್ ಗು ತಿರುಗಬಹುದು. ಇದೆ ಕಾರಣದಿಂದ ಎದೆಯುರಿ ಯಿಂದ ಬಳಲುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಗ್ಯಾಸ್ಟ್ರಿಕ್ ನಿಂದ ಬಳಲುವವರು ಹೆಚ್ಚಾಗಿ ಕರಿದ ತಿಂಡಿ, ಎಣ್ಣೆಯ ಪದಾರ್ಥ, ಬೇಕರಿ ತಿನುಸುಗಳನ್ನು ಬಿಟ್ಟುಬಿಡಿ. ಎದೆಯುರಿಗೆ ಕಾರಣವಾಗುವಂತ ತಿನಿಸುಗಳು ಅಥವ ಆಹಾರ ಕ್ರಮ ನಿಮ್ಮದಲ್ಲದೆ ಇದ್ದರೂ, ಎಡಬಿಡದ ಎದೆ ಉರಿ ಕ್ಯಾನ್ಸರ್ ನಿಂದಾಗಿರಬಹುದು.

Most Read: ಸತತವಾಗಿ ಕಾಡುವ ವಾಂತಿ ಸಮಸ್ಯೆ-ಯಾಕೆ ಹೀಗೆ? ಇದಕ್ಕೆ ಪರಿಹಾರವೇನು

ಹಸಿವಾಗುವುದು ಕಡಿಮೆ ಆದಾಗ, ಎಚ್ಚರ !!!

ಹಸಿವಾಗುವುದು ಕಡಿಮೆ ಆದಾಗ, ಎಚ್ಚರ !!!

ಗ್ಯಾಸ್ಟ್ರೋಎಂಟೆರೊಲೊಜಿಸ್ಟ್ ಗಳು ಹೇಳುವ ಪ್ರಕಾರ ಹಸಿವಿನಲ್ಲಾಗುವ ಬದಲಾವಣೆ, ಹೊಟ್ಟೆ ಹಸಿವಾಗದೆ ಇರುವುದು ಯಾವುದೊ ಒಳಗಿನ ಖಾಯಿಲೆಯ ಸಂಕೇತ. ಹಸಿವಾಗದೆ ಇರುವುದಕ್ಕೆ ಕಾರಣಗಳು ಹಲವು. ಕ್ಯಾನ್ಸರ್ ಒಂದೇ ಕಾರಣದಿಂದ ಹೀಗಾಗಿರಬಹುದೆಂದು ಹೇಳಲಾಗುವುದಿಲ್ಲ, ಆದರೆ ಡಾಕ್ಟರ್ಸ್ ಗಳು ಅಭಿಪ್ರಾಯ ಪಡುವಂತೆ, ಹಸಿವಾಗದಿದ್ದರೆ, ಇತ್ತೀಚಿಗೆ ಮುಂಚೆಗಿಂತ ಕಮ್ಮಿ ಊಟ ಮಾಡುತ್ತಿದೀರಿ ಎಂದೆನಿಸಿದರೆ ದಯವಿಟ್ಟು ಉದಾಸೀನ ಮಾಡದಿರಿ. ನಿಮಗೆ ಕ್ಯಾನ್ಸರ್ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ನುಂಗಲಿಕ್ಕೆ ಕಷ್ಟವಾಗುತ್ತಿದೆ ಎಂದರೆ ಇದು ಎಚ್ಚರಿಕೆಯ ಗಂಟೆ

ನುಂಗಲಿಕ್ಕೆ ಕಷ್ಟವಾಗುತ್ತಿದೆ ಎಂದರೆ ಇದು ಎಚ್ಚರಿಕೆಯ ಗಂಟೆ

ಶೀತ ದಿಂದ ಬಳಲುತ್ತಿರುವಾಗ ಗಂಟಲು ಕೆರೆತ, ನುಂಗಲು ಕಷ್ಟವಾಗುವುದು ಇತ್ಯಾದಿ ಸರ್ವೇಸಾಮಾನ್ಯ. ಕೆಲವು ಬಾರಿ ಗ್ಯಾಸ್ಟ್ರಿಕ್ ಆಸಿಡ್ ನಿಂದಾಗುವ ರಿಯಾಕ್ಷನ್ ನಿಂದ ಗಂಟಲು ನೋವುಂಟಾಗಿ, ನುಂಗಲಿಕ್ಕೆ ಕಷ್ಟ ಆಗಬಹುದು. ಇದೆ ಗುಣ ಲಕ್ಷಣ ಗಳನ್ನ ನಾವು ಹೊಟ್ಟೆಯ ಕ್ಯಾನ್ಸರ್ ನಲ್ಲಿ ಕೂಡ ಕಾಣಬಹುದು. ಊಟ ಗಂಟಲಿನಲ್ಲೇ ಸಿಕ್ಕಿಕೊಂಡಂತಾಗಿ, ವಾಂತಿ ಬರುವಂತಹ ಭಾವನೆ, ನುಂಗಲಿಕೆ ಆಗುವ ಕಷ್ಟ, ಇದೆಲ್ಲ ಕ್ಯಾನ್ಸರ್ ಗೆ ಸಂಬಂಧ ಪಟ್ಟಿರಬಹುದು. ಕ್ಯಾನ್ಸರ್ ನಿಂದಾಗುವ ನುಂಗುವ ಸಮಸ್ಯೆ ಯಲ್ಲಿ ಇನ್ನೊಂದು ಅಂಶ ಏನೆಂದರೆ, ಕೆಮ್ಮು ಮತ್ತು ಉಸಿರುಗಟ್ಟುವುದು. ಈ ಎಲ್ಲ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ, ನಿಮ್ಮ ಡಾಕ್ಟರ್ ನೊಂದಿಗೆ ಮುಕ್ತವಾಗಿ ಮಾತಾಡಿ.

ದೇಹದ ತೂಕ ಕಡಿಮೆಯಾಗುತ್ತಿದ್ದರೆ (ನಿಮ್ಮ ಶ್ರಮವಿಲ್ಲದೆ), ನಿಮಗೆ ಕ್ಯಾನ್ಸರ್ ಇರಬಹುದು

ದೇಹದ ತೂಕ ಕಡಿಮೆಯಾಗುತ್ತಿದ್ದರೆ (ನಿಮ್ಮ ಶ್ರಮವಿಲ್ಲದೆ), ನಿಮಗೆ ಕ್ಯಾನ್ಸರ್ ಇರಬಹುದು

ದೇಹದ ತೂಕ ಕಡಿಮೆ ಯಾಗಲು ಕಾರಣಗಳು ಹಲವು. ಟಿ.ಬಿ.(ಕ್ಷಯ), ಅಸ್ತಮಾ, ಎಚ್.ಐ.ವಿ/ಏಡ್ಸ್, ಡಯಾಬಿಟಿಸ್, ಹೃದಯ ಸಂಬಂದಿ ಖಾಯಿಲೆಗಳು, ಖಿನ್ನತೆ ಇತ್ಯಾದಿ. ಇದೆ ರೀತಿ ಕ್ಯಾನ್ಸರ್ ಕೂಡ ನಿಮ್ಮ ತೂಕ ಇಳಿಸಬಲ್ಲದು. ನಾಲಿಗೆ ರುಚಿ ಹತ್ತದೆ ಇರೋದು, ಹಸಿವು ಕಡಿಮೆ ಯಾಗೋದು, ಶ್ರಮ ಪಡದೇ ಆಗುವ ತೂಕ ಇಳಿಯುವಿಕೆ ಇದೆಲ್ಲ ಕ್ಯಾನ್ಸರ್ ನ ಲಕ್ಷಣಗಳು. ತಿಂಗಳಿಗೊಮ್ಮೆಯಾದರು ತೂಕ ನೋಡಿಕೊಳ್ಳುವ ಅಭ್ಯಾಸ ಇಟ್ಟುಕೊಳ್ಳಿ.

ನಾಲ್ಕೇ ತುತ್ತಿಗೆ ಹೊಟ್ಟೆ ತುಂಬಿದಂತ ಭಾವವೇ?

ನಾಲ್ಕೇ ತುತ್ತಿಗೆ ಹೊಟ್ಟೆ ತುಂಬಿದಂತ ಭಾವವೇ?

ಹೊಟ್ಟೆ ಉಬ್ಬರ ದಿಂದ, ಗ್ಯಾಸ್ ನಿಂದ ಸ್ವಲ್ಪ ತಿನ್ನುತ್ತಲೇ ಹೊಟ್ಟೆ ತುಂಬಿದಂತಾಗುವ ಭಾವನೆ ಬರಬಹುದು. ಆದರೆ ಇದು ಕ್ಯಾನ್ಸರ್ ನ ಲಕ್ಷಣವೂ ಹೌದು. ಹೊಟ್ಟೆಯಲ್ಲಾಗಿರಬಹುದಾದ ಟ್ಯೂಮರ್ ನಿಂದಾಗಿ ತಿಂದ ಆಹಾರ ಕರುಳಿಗೆ ರವಾನೆ ಯಾಗದೆ ಹೊಟ್ಟೆಯಲ್ಲೇ ಉಳಿದು, ಹೊಟ್ಟೆ ತುಂಬಿದಂತೆ ಭಾಸವಾಗಬಹುದು. ಕ್ಯಾನ್ಸರ್ ನಿಂದಾಗಿ ಶಕ್ತಿ ಕಳೆದುಕೊಳ್ಳುವ ಹೊಟ್ಟೆಯ ಸ್ನಾಯುಗಳು, ಆಹಾರವನ್ನು ಕರುಳಿಗೆ ರವಾನಿಸಲಾಗದೆ, ಹೊಟ್ಟೆಯಲ್ಲೇ ಉಳಿದ ಆಹಾರದಿಂದಾಗಿ ಬೇಗನೆ ಹೊಟ್ಟೆ ತುಂಬಿದಂತ ಅನುಭವವಾಗುವುದು. ಉದಾಸೀನ ಮಾಡದೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

English summary

Warning Signs Of Stomach Cancer Every Woman Should Know

Let’s get one thing out of the way: Stomach cancer isn’t crazy-common. As a woman, your lifetime odds of getting it are only one in 154, according to the American Cancer Society. That said, it can be dangerous because many of its symptoms feel like totally normal, run-of-the-mill stomach issues—or in some cases, there are no symptoms at all. If you’re experiencing any (or a combination) of these early signs and symptoms of stomach cancer, it’s best to check in with your doctor or a gastroenterologist to be on the safe side.
X
Desktop Bottom Promotion