For Quick Alerts
ALLOW NOTIFICATIONS  
For Daily Alerts

  ಐಸ್ ತುಂಡುಗಳಿಂದ ದೇಹದ ತೂಕ ಇಳಿಸಬಹುದಂತೆ! ಹೇಗೆ ಗೊತ್ತೇ?

  By Hemanth
  |
  ನಿಮ್ಮ ತೂಕವನ್ನ ಕಡಿಮೆ ಮಾಡಬೇಕು ಎನ್ನುವವರು ಇದನ್ನ ಟ್ರೈ ಮಾಡಿ | Oneindia Kannada

  ಇದೇ ವಿಭಾಗದಲ್ಲಿ ಬೊಜ್ಜು ಕರಗಿಸಿ ದೇಹವನ್ನು ಫಿಟ್ ಇಡುವಂತಹ ಹಲವಾರು ವಿಧಾನಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇದನ್ನು ಸರಿಯಾದ ಕ್ರಮದಲ್ಲಿ ಪಾಲಿಸಿದವರು ಅದರ ಲಾಭ ಪಡೆದುಕೊಂಡಿದ್ದರೆ, ಅರ್ಧಂಬರ್ಧ ಪ್ರಯತ್ನಿಸಿದವರ ಬೊಜ್ಜು ಮತ್ತಷ್ಟು ಹೆಚ್ಚಾಗಿದೆ. ಆದರೆ ಕೇವಲ ಐಸ್ ನಿಂದ ನಿಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ತಿಳಿದಿದೆಯಾ? ಹೌದು, ಕಠಿಣ ವ್ಯಾಯಾಮಗಳು ಇಲ್ಲದೆಯೂ ನೀವು ಕೇವಲ ಎರಡು ಐಸ್ ತುಂಡುಗಳನ್ನು ಬಳಸಿಕೊಂಡು ತೂಕ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುವಿರಾದರೆ ಐಸ್ ಪಥ್ಯವನ್ನು ಮಾಡಿಕೊಳ್ಳಿ.

  ಐಸ್ ಪಥ್ಯವು ಹೇಗೆ ಕೆಲಸ ಮಾಡುತ್ತದೆ. ನೀವು ಐಸ್ ತಿಂದಾಗ ಅದನ್ನು ದೇಹದ ಉಷ್ಣತೆಗೆ ಸರಿಯಾಗಿಸುವಂತೆ ಕರಗಿಸಲು ಚಯಾಪಚಯಾ ಕ್ರಿಯೆಯು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ನಿಮಗೆ ಇದರ ಬಗ್ಗೆ ತಿಳಿಯದೆ ಇದ್ದರೆ ಇದನ್ನು ನೀವು ಸಂಪೂರ್ಣವಾಗಿ ಓದಿಕೊಂಡ ಬಳಿಕ ಪಾಲಿಸಿಕೊಂಡು ಹೋಗಿ. ಐಸ್ ಪಥ್ಯದೊಂದಿಗೆ ಪೋಷಕಾಂಶಗಳು ಮತ್ತು ಕಡಿಮೆ ಕೊಬ್ಬು ಇರುವಂತಹ ಆಹಾರ ಕ್ರಮ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ.

  ತೂಕ ಇಳಿಸಲು ಮಾಡುವಂತಹ ಕೆಲವೊಂದು ಔಷಧಿಯ ಬದಲಿಗೆ ಐಸ್ ಪಥ್ಯವನ್ನು ಮಾಡಲು ಕೆಲವೊಂದು ಅಧ್ಯಯನಗಳು ಮುಂದೆ ಬಂದಿದೆ ಎಂದು ಜನಪ್ರಿಯ ಪತ್ರಿಕೆಗಳು ಕೂಡ ಹೇಳಿವೆ. ಐಸ್ ತುಂಡುಗಳನ್ನು ತಿನ್ನುವುದರಿಂದ ತೂಕ ಕಳೆದುಕೊಳ್ಳಬಹುದು ಎನ್ನುವುದು ನಿಜ. ಆದರೆ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಹಾನಿಯಾಗಬಹುದು. ಇದು ಹಲ್ಲುಗಳ ಮೇಲೆ ಪರಿಣಾಮ ಬೀರಬಹುದು. ಕಫ ಮತ್ತು ಗಂಟಲು ನೋವಿಗೂ ಇದು ಕಾರಣವಾಗಬಹುದು. ಐಸ್ ತುಂಡುಗಳಿಂದ ತೂಕ ಕಳೆದುಕೊಳ್ಳುವ ಬಗೆ.....

  ಐಸ್ ಕ್ಯೂಬ್

  1. ಊಟದ ಬಳಿಕ ಐಸ್ ತುಂಡು ಸೇವಿಸಿ

  ಐಸ್ ಪಥ್ಯದಲ್ಲಿ ನೀವು ಆಹಾರ ಕಡಿಮೆ ಸೇವಿಸಬೇಕೆಂದಿಲ್ಲ. ನೀವು ಬೇಕೆಂದಿರುವುದನ್ನು ತಿನ್ನಿ. ಆದರೆ ಊಟದ ಬಳಿಕ ಐಸ್ ತುಂಡುಗಳನ್ನು ತಿನ್ನಿ. ಇದು ತೂಕ ಕಳೆದುಕೊಳ್ಳಲು ಸಹಕಾರಿ.

  2. ಚಹಾದೊಂದಿಗೆ ಐಸ್ ತುಂಡುಗಳು

  ಐಸ್ ತುಂಡುಗಳೊಂದಿಗೆ ನೈಸರ್ಗಿಕ ಹಸಿವು ಪ್ರತಿರೋಧಕಗಳನ್ನು ಸೇರಿಸಿಕೊಂಡರೆ ಇವುಗಳು ತೂಕ ಕಳೆದುಕೊಳ್ಳಲು ಸಹಕಾರಿ. ನೈಸರ್ಗಿಕ ಹಸಿವು ಪ್ರತಿರೋಧಕಗಳಾದ ಗ್ರೀನ್ ಟೀ ಮತ್ತು ಕೆಫಿನ್ ಐಸ್ ಪಥ್ಯದಲ್ಲಿ ತೂಕ ಇಳಿಸಲು ಸಹಕಾರಿ.

  3. ಪ್ರತೀ ಊಟದೊಂದಿಗೆ ಐಸ್ ತುಂಡುಗಳ ನೀರು

  ಐಸ್ ತುಂಡುಗಳನ್ನು ಸೇವಿಸುವುದರಿಂದ ಹಸಿವು ನಿಯಂತ್ರಣಧಲ್ಲಿ ಇರುವುದು. ಇದು ತೂಕ ಕಳೆದುಕೊಳ್ಳಲು ತುಂಬಾ ಸುಲಭ ವಿಧಾನ. ಪ್ರತೀ ಸಲ ಊಟದೊಂದಿಗೆ ಐಸ್ ತುಂಡುಗಳ ನೀರನ್ನು ಕುಡಿಯಿರಿ.

  4. ಹಸಿವಾದಾಗ ಐಸ್ ಹೊಂದಿರುವ ನೀರು ಸೇವಿಸಿ

  ಹಸಿವಾದಾಗ ನೀವು ಐಸ್ ತುಂ ಡುಗಳನ್ನು ಹೊಂದಿರುವ ನೀರು ಸೇವಿಸಿ. ಇದು ಬಯಕೆ ಕಡಿಮೆ ಮಾಡುವುದು ಮತ್ತು ಇದರಲ್ಲಿ ಕ್ಯಾಲರಿ ಇಲ್ಲ.ಇತರ ವಿಧಾನಗಳ ಮೂಲಕ ಬಳಕೆ

  ice cub

  5. ಐಸ್ ಪ್ಯಾಕ್ ನ್ನು ಹೊಟ್ಟೆಯ ಭಾಗದಲ್ಲಿಡಿ

  ಐಸ್ ತುಂಡುಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಹೊಟ್ಟೆಗೆ ಕಟ್ಟಿಕೊಳ್ಳಿ. 10-15 ನಿಮಿಷ ಕಾಲ ಇದು ಹಾಗೆ ಇರಲಿ. ಐಸ್ ತುಂಡುಗಳು ಕರಗಲು ತುಂಬಾ ದೀರ್ಘ ಕ್ರಿಯೆ ನಡೆಯುವುದು. ಇದು ಕೊಬ್ಬು ಕರಗುವಂತೆ ಮಾಡಿ ತೂಕ ಕಳೆದುಕೊಳ್ಳಲು ಸಹಕರಿಸುವುದು.

  6. ಐಸ್ ನೀರಿನ ಸ್ನಾನ

  ಐಸ್ ನಿಂದ ತುಂಬಾ ತಂಪಾಗಿರುವ ಸ್ನಾನ ಮಾಡುವುದು ಮತ್ತೊಂದು ಪರಿಣಾಮಕಾರಿ ವಿಧಾನ. ಇದು ಚಯಾಪಚಯ ಕ್ರಿಯೆ ಹೆಚ್ಚು ಮಾಡಿ ತೂಕ ಇಳಿಸಲು ಸಹಕಾರಿ. ಐಸ್‌ ಕ್ಯೂಬ್‌‌ನ ಇತರ ಪ್ರಯೋಜನಗಳು

  7. ಹೊಟ್ಟೆಯ ನೋವಿದ್ದರೆ...

  ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣಗಳೆಂದರೆ ಅಜೀರ್ಣತೆ, ಆಮ್ಲೀಯತೆ, ಮಲಬದ್ಧತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು ಒಟ್ಟಾರೆ ಹೇಳಬೇಕೆಂದರೆ ಹೊಟ್ಟೆನೋವಿಗೆ ಹೊಟ್ಟೆಯ ಯಾವುದೇ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಹೊಟ್ಟೆನೋವನ್ನು ಶೀಘ್ರವಾಗಿ ಕಡಿಮೆಗೊಳಿಸಲು ಕುತ್ತಿಗೆಯ ಹಿಂಭಾಗದಲ್ಲಿ ಸಣ್ಣ ತುಂಡು ಐಸ್ ತುಂಡನ್ನಿರಿಸುವ, ಮೂಲಕ ಹೊಟ್ಟೆನೋವು, ಹೊಟ್ಟೆ ಉಬ್ಬರಿಕೆ, ಅಜೀರ್ಣತೆ ಮೊದಲಾದವು ಕಡಿಮೆಯಾಗುತ್ತವೆ. ಈ ವಿಧಾನ ಎಲ್ಲ ವಯೋಮಾನದ ಜನರಿಗೂ ಸೂಕ್ತವಾಗಿದೆ.

  icecub

  8. ಚರ್ಮದ ಊತವನ್ನು ಕಡಿಮೆ ಮಾಡುತ್ತದೆ

  ಸಾಮಾನ್ಯವಾಗಿ ಮಹಿಳೆಯರಿಗೆ ಸೂಕ್ತ ನಿದ್ರೆ ಇಲ್ಲದೆ ಮುಖದಲ್ಲಿ ಊತಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಈ ಐಸ್ ಆರೈಕೆಯನ್ನು ಮಾಡಬೇಕು. ಅದರಲ್ಲೂ ಕಣ್ಣಿನ ಕೆಳಭಾಗದಲ್ಲಿ ಊದಿಕೊಳ್ಳುವುದನ್ನು ತಡೆಯಲು ಹಾಗೂ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿ ಸ್ನೇಹಿತರೊಂದಿಗೆ ಹೆಚ್ಚು ಸಮಯ ಪಾರ್ಟಿ, ಸಂಭಾಷಣೆಯಲ್ಲಿ ಕಳೆದಾಗ ನಿದ್ರೆ ಇಲ್ಲದೆ ಉಂಟಾಗುವ ಉರಿಯೂತಗಳನ್ನು ನಿವಾರಿಸಲು ಸಹಾಯ ಮಾಡುವುದು.

  9. ಮೊಡವೆಗಳ ಸಮಸ್ಯೆ ಇದ್ದರೆ..

  ಐಸ್ ಫೇಶಿಯಲ್ ಅಥವಾ ಮಸಾಜ್ ಮಾಡುವುದರಿಂದ ಚರ್ಮದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತವೆ ಅಥವಾ ತಗ್ಗುತ್ತವೆ. ಕೊಳೆ ಹಾಗೂ ತೈಲಾಂಶವು ರಂಧ್ರದಲ್ಲಿ ಶೇಖರಗೊಳ್ಳುವುದನ್ನು ತಡೆಯುವುದು. ಇದರಿಂದ ಮೊಡವೆಯು ನಿವಾರಣೆಯಾಗುವುದು. ಮೊಡವೆಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಇದು ಕಡಿಮೆಗೊಳಿಸುತ್ತದೆ.

  10. ದೇಹದಲ್ಲಿರುವ ಬೊಜ್ಜಿನಂಶವನ್ನು ಕರಗಿಸಕೊಳ್ಳಬಹುದು!

  *ಐಸ್ ತಿಂದಾಗ ದೇಹವು ಐಸ್ ಅನ್ನು ದೇಹದ ಉಷ್ಣತೆಗೆ ಪರಿವರ್ತಿಸಿಕೊಳ್ಳುತ್ತದೆ. ದೇಹದ ಈ ಕ್ರಿಯೆಯಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶ ಕರಗುವುದು.

  *ಈ ಐಸ್ ಡಯಟ್ ನಲ್ಲಿ ಆಹಾರವನ್ನು ಮಿತವಾಗಿ ಸೇವಿಸಬೇಕು. ಇಷ್ಟ ಬಂದ ಆಹಾರವನ್ನು ಸೇವಿಸಬಹುದು ಆದರೆ ಆಹಾರ ಸೇವಿಸಿದ ನಂತರ ಐಸ್ ಸೇವಿಸಿದರೆ ಕೊಬ್ಬು ದೇಹದಲ್ಲಿ ಶೇಖರವಾಗುವುದಿಲ್ಲ.

  *ಐಸ್ ಹಾಗೇ ತಿನ್ನಲು ಇಷ್ಟ ಪಡದಿದ್ದರೆ ಕಾಫಿ, ಐಸ್ ಕ್ರೀಮ್ ನಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿ ಸೇವಿಸಬಹುದು.

  *ಐಸ್ ಕ್ಯೂಬ್ ಹಾಕಿದ ನೀರನ್ನು ಕುಡಿಯುವುದರಿಂದ ಬೇಗನೆ ಹೊಟ್ಟೆ ಹಸಿಯುವುದಿಲ್ಲ.

  *ಐಸ್ ಕಚ್ಚುವುದರಿಂದ ಹಲ್ಲು ನೋವು ಕಾಣಿಸಿಕೊಂಡರೆ ಐಸ್ ಕರಗಿಸಿ ಕುಡಿಯಬಹುದು.

  *ನಿಮ್ಮ ಎತ್ತರಕ್ಕೆ ಸರಿಹೊಂದುವ ತೂಕವನ್ನು ಹೊಂದಿದ ಮೇಲೆ ಐಸ್ ಡಯಟ್ ನಿಲ್ಲಿಸಬೇಕು.

  English summary

  Want To Lose Weight? then Follow The Ice Cube Diet!

  Add one-two ice cubes in a glass of water and then drink this ice water. This not just helps in quenching your thirst but surprisingly it aids in losing weight as well. When a person is determined to lose weight, he tries out several methods. A few even go to the extent of starving and following rigorous workout routines. So if you are looking at losing weight, then you could take up this ice diet. So how does this happen? When you eat ice cubes, it helps in boosting the body metabolism as you need to melt the ice in order to bring them to body temperature.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more