For Quick Alerts
ALLOW NOTIFICATIONS  
For Daily Alerts

ಗಡ್ಡ ದಪ್ಪವಾಗಿ ಬೆಳೆಯಬೇಕೇ? ಹಾಗಾದರೆ ಆಹಾರಕ್ರಮ ಹೀಗಿರಲಿ

By Arshad
|

ಕೆಲವು ಪುರುಷರು ಗಡ್ಡವಿಲ್ಲದ ಗದ್ದವನ್ನು ಇಷ್ಟಪಟ್ಟರೆ, ಕೆಲವರು ಕುರುಚಲು ಗಡ್ಡವನ್ನೂ, ಕೆಲವರಿಗೆ ನೀಳ ಮತ್ತು ಸೊಂಪಾದ ಗಡ್ಡವನ್ನು ಹೊಂದುವುದು ಇಷ್ಟವಾಗುತ್ತದೆ. ಕೆಲವು ಧರ್ಮಗಳಲ್ಲಿ ಗಡ್ಡ ಕಡ್ಡಾಯವಾಗಿದ್ದು ಈ ವ್ಯಕ್ತಿಗಳು ತಮ್ಮ ಗಡ್ಡದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಗಡ್ಡದ ಆರೈಕೆಗಾಗಿ ಮಾರುಕಟ್ಟೆಯಲ್ಲಿ ಕೆಲವಾರು ಪ್ರಸಾದನಗಳಿವೆ, ಆದರೆ ಇವುಗಳ ಪರಿಣಾಮ ತಾತ್ಕಾಲಿಕವಾಗಿದ್ದು ದೀರ್ಘಕಾಲದ ಪರಿಣಾಮ ವಿಪರೀತವೂ ಆಗಬಹುದು. ಹಾಗಾಗಿ ತಮ್ಮ ಗಡ್ಡವನ್ನು ಸುಂದರ, ಸೊಂಪಾಗಿಸಬಯಸುವ ಪುರುಷರೇ, ಇದಕ್ಕಾಗಿ ನಿಮ್ಮ ಆಹಾರದಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡರೆ ಸಾಕು. American Dietetic Association ಎಂಬ ಸಂಸ್ಥೆಯ ಪ್ರಕಾರ ಕೆಲವು ಪೋಷಕಾಂಶಗಳು ಹೃದಯ ಮತ್ತು ಇತರ ಪ್ರಮುಖ ಅಂಗಗಳ ಮೇಲೆ ಬೀರುವ ಪರಿಣಾಮವನ್ನೇ ತ್ವಚೆ ಮತ್ತು ಕೂದಲ ಮೇಲೂ ನೀಡುತ್ತವೆ.

ಗಡ್ಡ ಅಥವಾ ಪುರುಷರ ಕೆನ್ನೆ, ಗದ್ದ ಮತ್ತು ಕುತ್ತಿಗೆಯ ಮೇಲ್ಭಾಗದ ಚರ್ಮದಲ್ಲಿ ಒತ್ತೊತ್ತಾಗಿ ಬೆಳೆಯುವ ಕೂದಲಿಗೆ ಪುರುಷರ ದೇಹದಲ್ಲಿ ಸ್ರವಿಸುವ DHTಮತ್ತು ಟೆಸ್ಟೋಸ್ಟೆರಾನ್ ಎಂಬ ರಸದೂತಗಳು ಪ್ರಮುಖವಾಗಿ ಕಾರಣವಾಗಿವೆ. ಕೆಲವು ವಿಶಿಷ್ಟ ಆಹಾರಗಳನ್ನು ಸೇವಿಸುವ ಮೂಲಕ ಆಂಡ್ರೋಜೆನ್ ಎಂದೂ ಕರೆಯಲ್ಪಡುವ ಈ ಎರಡು ರಸದೂತಗಳ ಪ್ರಮಾಣವನ್ನು ಹೆಚ್ಚಿಸಿ ಮುಖದ ಕೂದಲ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೆರವಾಗುತ್ತದೆ. ಬನ್ನಿ, ಈ ಪೋಷಕಾಂಶಗಳು ಯಾವುವು ಎಂಬುದನ್ನು ನೋಡೋಣ...

foods for beard growth

ಈ ಸರಳ ಟಿಪ್ಸ್ ಅನುಸರಿಸಿದರೆ ಸಾಕು, ಮೀಸೆ-ಗಡ್ಡ ಚೆನ್ನಾಗಿ ಬೆಳೆಯುತ್ತದೆ!

*ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟೀನ್
*ವಿಟಮಿನ್ ಸಿ
*ಪ್ರೋಟೀನ್
*ಬಯೋಟಿನ್
*ವಿಟಮಿನ್ ಇ
*ವಿಟಮಿನ್ ಬಿ6, ಬಿ3 ಮತ್ತು ಬಿ12
*ಒಮೆಗಾ 3 ಕೊಬ್ಬಿನ ಆಮ್ಲಗಳು
*ಸತು

1. ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟೀನ್

1. ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟೀನ್

ಹಾಲು, ಮೊಟ್ಟೆಯ ಹಳದಿ ಭಾಗ ಮತ್ತು ಚೀಸ್ ಗಳಲ್ಲಿ ವಿಟಮಿನ್ ಎ ಸಮೃದ್ದವಾಗಿದೆ ಹಾಗೂ ಹಳದಿ ಅಥವ ಕೇಸರಿ ಬಣ್ಣದ ತರಕಾರಿಗಳಾದ ಕ್ಯಾರೆಟ್, ಸಿಹಿಗೆಣಸು, ಸಿಹಿಗುಂಬಳ, ದಪ್ಪನೆಯ ಎಲೆಗಳಾದ ಪಾಲಕ್, ಬಸಲೆ, ಕೇಲ್ ಮೊದಲಾದವುಗಳಲ್ಲಿ ಬೀಟಾ ಕ್ಯಾರೋಟಿನ್ ಹೇರಳವಾಗಿರುತ್ತದೆ. ಈ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳು ದುರಸ್ತಿಗೊಳ್ಳಲು ನೆರವಾಗುತ್ತದೆ ಹಾಗೂ ತನ್ಮೂಲಕ ಆರೋಗ್ಯಕರ ಕೂದಲ ಬೆಳವಣಿಗೆ ಸಾಧ್ಯವಾಗುತ್ತದೆ.

2. ವಿಟಮಿನ್ ಸಿ

2. ವಿಟಮಿನ್ ಸಿ

ಲಿಂಬೆಯ ಜಾತಿಯ ಹಣ್ಣುಗಳಲ್ಲಿ ಪ್ರಮುಖವಾಗಿರುವ ಈ ಅಂಶ ಹಸಿರು ದೊಣ್ಣೆಮೆಣಸು ಹಾಗೂ ಗಾಢ ಮತ್ತು ದಪ್ಪನೆಯ ಎಲೆಗಳು ಮತ್ತು ತರಕಾರಿಗಳಿಂದಲೂ ಲಭಿಸುತ್ತದೆ. ಚರ್ಮದ ಅಡಿಯಲ್ಲಿ ಸೀಬಂ ಎಂಬ ದ್ರವವನ್ನು ಹೆಚ್ಚುಹೆಚ್ಚಾಗಿ ಉತ್ಪಾದಿಸುವ ಮೂಲಕ ಚರ್ಮದಡಿಯ ತೈಲವೂ ಹೆಚ್ಚುತ್ತದೆ ಹಾಗೂ ಇದು ತ್ವಚೆಗೆ ಅಗತ್ಯವಾದ ಆದ್ರತೆ ಮತ್ತು ತೇವಕಾರಕ ಗುಣವನ್ನು ನೀಡುತ್ತದೆ. ಪರಿಣಾಮವಾಗಿ ಗಡ್ಡ ಸೊಂಪಾಗುತ್ತದೆ.

3. ಪ್ರೋಟೀನ್

3. ಪ್ರೋಟೀನ್

ಮೊಟ್ಟೆ, ಬಿಳಿಯ ಮಾಂಸ, ಮೀನು, ಬೀನ್ಸ್ ಮತ್ತು ಹಾಲಿನಲ್ಲಿ ಪ್ರೋಟೀನುಗಳು ಸಮೃದ್ದವಾಗಿದ್ದು ಸ್ನಾಯುಗಳ ಬೆಳವಣಿಗೆಯ ಜೊತೆಗೇ ಕೂದಲ ಬೆಳವಣಿಗೆಗೂ ನೆರವಾಗುತ್ತದೆ. ಚರ್ಮ ಮತ್ತು ಕೂದಲು ಪ್ರಮುಖವಾಗಿ ಕೆರಾಟಿನ್ ಎಂಬ ಅಂಶದಿಂದ ತಯಾರಿಸಲ್ಪಟ್ಟಿವೆ. ಈ ಕೆರಾಟಿನ್ ಒಂದು ಬಗೆಯ ಪ್ರೋಟೀನ್ ಆಗಿದ್ದು ಇದರ ರಚನೆಯಲ್ಲಿ ಗ್ಲೈಸಿನ್ ಮತ್ತು ಪ್ರೋಲೀನ್ ಎಂಬ ಅಮೈನೋ ಆಮ್ಲಗಳು ಒಳಗೊಂಡಿರುತ್ತವೆ. ಈ ಪೋಟೀನುಗಳು ಸಮೃದ್ದವಾಗಿದ್ದಷ್ಟೂ ದೇಹದ ವಿವಿಧ ಭಾಗಗಳಲ್ಲಿರುವ ಕೂದಲು, ಉಗುರು ಮತ್ತು ಮುಖ್ಯವಾಗಿ ದೇಹದ ಅತಿದೊಡ್ಡ ಭಾಗವಾದ ಚರ್ಮ ಅತ್ಯುತ್ತಮ ಪೋಷಣೆ ಪಡೆಯುತ್ತವೆ.

4. ಬಯೋಟಿನ್

4. ಬಯೋಟಿನ್

ಮೊಟ್ಟೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಬಯೋಟಿನ್ ಇವೆ ಹಾಗೂ ಗಡ್ಡದ ಬೆಳವಣಿಗೆಗೆ ಈ ಪೋಷಕಾಂಶ ಅತ್ಯುತ್ತಮವಾಗಿದೆ. ಕಾಲಕ್ರಮೇಣ ಗಡ್ಡ ಇನ್ನಷ್ಟು ಗಾಢವಾಗಲು ಮತ್ತು ನೀಳವಾಗಲು ಸಾಧ್ಯವಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳ ಪ್ರಕಾರ ಬಯೋಟಿನ್ ಕೊರತೆ ಇದ್ದವರ ಮುಖದಲ್ಲಿ ಕೂದಲೂ ವಿರಳವಾಗಿರುತ್ತದೆ.

5. ವಿಟಮಿನ್ ಇ

5. ವಿಟಮಿನ್ ಇ

ಗಡ್ಡವನ್ನು ಸೊಂಪಾಗಿಸುವ ಜೊತೆಗೇ ಕೂದಲನ್ನು ಮೃದುವಾಗಿಸಲು ಹಾಗೂ ಕೂದಲ ಬುಡದಲ್ಲಿ ಹೆಚ್ಚಿನ ರಕ್ತಪರಿಚಲನೆ ಒದಗಿಸಲು ವಿಟಮಿನ್ ಇ ಅಗತ್ಯವಾಗಿದೆ. ತನ್ಮೂಲಕ ಗಡ್ಡವನ್ನು ಸುಲಭವಾಗಿ ಕತ್ತರಿಸಿಕೊಂಡು ಅಥವಾ ಶೇವ್ ಮಾಡಿಕೊಂಡು ಸುಂದರವಾಗಿಸಲು ಸಾಧ್ಯವಾಗುತ್ತದೆ. ಒಣಫಲಗಳು, ಬೀನ್ಸ್, ಹಸಿರು ಮತ್ತು ಗಾಢ ಹಸಿರು ಬಣ್ಣದ ದಪ್ಪನೆಯ ಎಲೆಗಳನ್ನು ಸೇವಿಸುವ ಮೂಲಕ ಹೆಚ್ಚಿನ ಪ್ರಮಾಣದ ವಿಟಮಿನ್ ಇ ಪೋಷಕಾಂಶವನ್ನು ಪಡೆಯಬಹುದು.

6. ವಿಟಮಿನ್ ಬಿ6, ಬಿ3 ಮತ್ತು ಬಿ12

6. ವಿಟಮಿನ್ ಬಿ6, ಬಿ3 ಮತ್ತು ಬಿ12

ಈ ಬಿ ವಿಟಮಿನ್ ಗಳು ದೇಹ ಪ್ರೋಟೀನನ್ನು ಸಂಸ್ಕರಿಸಿ ಉಪಯೋಗಿಸಿಕೊಳ್ಳಲು ನೆರವಾಗುತ್ತವೆ ಹಾಗೂ ಈ ಮೂಲಕ ಚರ್ಮದ ಜೀವಕೋಶಗಳ ಬೆಳವಣಿಗೆ ಹೆಚ್ಚಲು ಸಾಧ್ಯವಾಗುತ್ತದೆ. ಅಲ್ಲದೇ ಚರ್ಮದಡಿಯಲ್ಲಿರುವ ಕೂದಲ ಬುಡಗಳಿಗೆ ಹೆಚ್ಚಿನ ರಕ್ತಪರಿಚಲನೆ ಒದಗಿಸಲು ನೆರವಾಗುತ್ತವೆ ಹಾಗು ಪುರುಷ ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುತ್ತವೆ. ಈ ಮೂಲಕ ಗಡ್ಡ ಇನ್ನಷ್ಟು ಸೊಂಪಾಗಲು ಸಾಧ್ಯವಾಗುತ್ತದೆ. ಕೋಳಿಯ ಯಕೃತ್ ಭಾಗ, ಶೇಂಗಾಬೀಜ, ಒಣಫಲಗಳು, ಇಡಿಯ ಧಾನ್ಯಗಳು ಮೊಟ್ಟೆ ಮೊದಲಾದವುಗಳಲ್ಲಿ ಈ ವಿಟಮಿನ್ನುಗಳು ಹೇರಳವಾಗಿರುತ್ತವೆ.

7. ಒಮೆಗಾ-3 ಕೊಬ್ಬಿನ ಆಮ್ಲಗಳು

7. ಒಮೆಗಾ-3 ಕೊಬ್ಬಿನ ಆಮ್ಲಗಳು

ಈ ಆಮ್ಲಗಳು ಮೀನಿನೆಣ್ಣೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಇದರಲ್ಲಿರುವ ಕೊಬ್ಬು ದೇಹದಲ್ಲಿ ಪ್ರೋಟೀನ್ ಉತ್ಪಾದನೆಗೊಳ್ಳಲು ಹಾಗೂ ತನ್ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಲು ನೆರವಾಗುತ್ತವೆ. ಪರಿಣಾಮವಾಗಿ ಗಡ್ಡದ ಕೂದಲು ದಟ್ಟವಾಗುತ್ತದೆ. ಎಣ್ಣೆಯಂಶ ಹೆಚ್ಚಿರುವ ಮೀನುಗಳಾದ ಬಂಗಡೆ, ಟ್ಯೂನಾ, ಸಾಲ್ಮನ್, ಬೂತಾಯಿ ಮೊದಲಾದವುಗಳನ್ನು ಸೇವಿಸುವ ಮೂಲಕ ಗಡ್ಡದ ಬೆಳವಣಿಗೆ ಹೆಚ್ಚಿಸಿಕೊಳ್ಳಬಹುದು.

8. ಸತು

8. ಸತು

ಮೊಟ್ಟೆ, ಹಸಿರು ಎಲೆಗಳು ಮತ್ತು ತರಕಾರಿಗಳು, ಸಾಗರ ಉತ್ಪನ್ನಗಳು ಮೊದಲಾದವುಗಳಲ್ಲಿ ಸತು ಉತ್ತಮ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ಸೇವಿಸುವ ಮೂಲಕ ಕೂದಲ ಬುಡ ಆರೋಗ್ಯಕರವಾಗುತ್ತದೆ ಹಾಗೂ ವಿಶೇಷವಾಗಿ ಗಡ್ಡದ ಕೂದಲ ಬೆಳವಣಿಗೆ ಹೆಚ್ಚಿಸಲು ನೆರವಾಗುತ್ತವೆ. ಸತುವಿನ ಕೊರತೆಯಿಂದ ಕೂದಲ ಬುಡಕ್ಕೆ ಪೂರ್ಣಪ್ರಮಾಣದ ಪೋಷಣೆ ದೊರಕದೇ ನಡುನಡುವೆ ಕೂದಲು ಬೆಳೆಯದೇ ಉದುರಿ ಬೋಳು ಬೋಳಾಗತೊಡಗುತ್ತದೆ.

ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!

English summary

Want A Thick Beard? Include These Nutrients In Your Diet

The nutrients that have a positive effect on your heart and other major organs have the same effect on your skin and hair. The facial hair growth is completely regulated by the male hormones DHT and testosterone. Increasing the intake of certain foods escalates the levels of these two hormones also called androgens which the body utilizes to stimulate facial hair growth naturally.
Story first published: Friday, September 14, 2018, 15:53 [IST]
X
Desktop Bottom Promotion