For Quick Alerts
ALLOW NOTIFICATIONS  
For Daily Alerts

ನರಗಳಿಗೆ ಹಾನಿಯಾಗಿದೆ ಎನ್ನುವುದರ ಅಸಾಮಾನ್ಯ ಲಕ್ಷಣಗಳು

By Hemanth
|

ದೇಹದ ಪ್ರತಿಯೊಂದು ಅಂಗಾಂಗಗಳ ಕಾರ್ಯವೇನು ಮತ್ತು ಅದು ಯಾವ ರೀತಿ ಕೆಲಸ ಮಾಡುತ್ತೇವೆ ಎಂದು ಬಾಲ್ಯದಿಂದಲೇ ವಿಜ್ಞಾನ ಪುಸ್ತಕಗಳಲ್ಲಿ ಓದಿಕೊಂಡು ಬರುತ್ತಿದ್ದೇವೆ. ದೇಹದ ಪ್ರತಿಯೊಂದು ಭಾಗವು ನಮ್ಮ ದೈನಂದಿನ ಕ್ರಿಯೆಗಳಿಗೆ ಅತೀ ಅಗತ್ಯ. ಇದರಲ್ಲಿ ಯಾವುದೇ ಒಂದು ಅಂಗವು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಆಗ ಸಮಸ್ಯೆ ಆಗುವುದು. ಇದರಲ್ಲಿ ಪ್ರಮುಖವಾಗಿ ನರಗಳ ವ್ಯವಸ್ಥೆ. ನರಗಳು ಕೆಲವೊಂದು ಸನ್ನೆಗಳು ಹಾಗೂ ಮಾಹಿತಿ ದೇಹದ ಒಂದು ಭಾಗದಿಂದ ಇತರ ಭಾಗಗಳಿಗೆ ಕಳುಹಿಸುವಂತಹ ಕೆಲಸ ಮಾಡುತ್ತದೆ.

ಇದು ಮಾನಸಿಕ ಹಾಗೂ ದೈಹಿಕವಾಗಿ ಅತೀ ಅಗತ್ಯ. ನರಗಳ ಮೂಲಕ ಹೋದಂತಹ ಸಂಕೇತಗಳೇ ಅತೀ ಸಣ್ಣ ಕೆಲಸ ಮಾಡಿಸುವುದು. ಉದಾಹರಣೆಗೆ ಮೆದುಳು ಜೀರ್ಣಕ್ರಿಯೆಯ ವ್ಯವಸ್ಥೆಗೆ ಜೀರ್ಣಕ್ರಿಯೆ ಆಮ್ಲ ಬಿಡುಗಡೆ ಮಾಡಲು ಸಂಕೇತ ಕಳುಹಿಸುವುದು. ಇದರಿಂದ ನಮಗೆ ಹಸಿವಾಗುವುದು ತಿಳಿಯುವುದು. ಕಾಲುಗಳಿಗೆ ಚಲಿಸಬೇಕೆಂದು ಮೆದುಳು ಸಂಕೇತ ಕಳುಹಿಸಿದಾಗ ಅದು ಎದ್ದು ನಿಂತು ಚಲಿಸಲು ಆರಂಭಿಸುವುದು. ಇದರಿಂದಾಗಿ ನರಗಳ ವ್ಯವಸ್ಥೆಯು ತುಂಬಾ ಸಂಕೀರ್ಣವಾಗಿರುವುದು ಮತ್ತು ಇದರ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಏರುಪೇರಾದರೂ ಅದರಿಂದ ದೊಡ್ಡ ಮಟ್ಟದ ಸಮಸ್ಯೆ ಕಾಡುವುದು.

ನರಗಳಿಗೆ ಹಾನಿಯಾದ ಸಂದರ್ಭದಲ್ಲಿ ಮೆದುಳಿನಿಂದ ದೇಹದ ಇತರ ಭಾಗಗಳಿಗೆ ಸಂಕೇತ ಮತ್ತು ಮಾಹಿತಿ ಹೋಗುವುದಿಲ್ಲ. ಆರೋಗ್ಯ ಸಮಸ್ಯೆ, ಗಾಯಾಳು, ಮೆದುಳಿಗೆ ಹಾನಿ ಇತ್ಯಾದಿಯಿಂದ ನರಗಳಿಗೆ ಹಾನಿ ಸಂಭವಿಸಬಹುದು. ನರಗಳಿಗೆ ಹಾನಿಯಾದ ಬಗ್ಗೆ ಕಾಣಿಸಿಕೊಳ್ಳುವ ಅಸಾಮಾನ್ಯ ಸಂಕೇತಗಳು ಯಾವುದು ಮತ್ತು ಅದನ್ನು ನಾವು ಯಾಕೆ ಕಡೆಗಣಿಸಬಾರದು ಎಂದು ತಿಳಿದುಕೊಳ್ಳುವ...

ಪಿನ್ ಮತ್ತು ಸೂಜಿ ನೋವು

ಪಿನ್ ಮತ್ತು ಸೂಜಿ ನೋವು

ಏನಾದರೂ ಗಾಯವಾದರೆ ಅಥವಾ ದೇಹದ ಯಾವುದೇ ಭಾಗಕ್ಕೆ ಹೆಚ್ಚಿನ ಶ್ರಮ ಬಿದ್ದರೆ ಆಗ ಕೈಗಳು ಮತ್ತು ಪಾದದಲ್ಲಿ ನೋವು ಕಾಣಿಸಿಕೊಳ್ಳುವುದು. ಯಾವುದೇ ಸರಿಯಾದ ಕಾರಣವಿಲ್ಲದೆ ಮತ್ತು ನಿಯಮಿತವಾಗಿ ನಿಮ್ಮ ಕೈಗಗಳು ಮತ್ತು ಪಾದದಲ್ಲಿ ತೀವ್ರ, ಸೆಳೆಯುವ, ಉರಿಯುವಂತಹ ನೋವು ಕಾಣಿಸಿಕೊಂಡರೆ ಇದು ನರಗಳಿಗೆ ಹಾನಿ ಉಂಟಾಗಿರುವ ಸಂಕೇತವಾಗಿದೆ. ಮೆದುಳು ಮತ್ತು ಚರ್ಮಕ್ಕೆ ಯಾವುದೇ ರೀತಿಯ ಸಂಕೇತಗಳು ಹೋಗದೆ ಇರುವಾಗ ಇಂತಹ ಸಮಸ್ಯೆ ಕಾಣಿಸುವುದು. ಇದನ್ನು ಒಂದು ಬಾಹ್ಯ ನರರೋಗವೆಂದು ಕರೆಯಲಾಗುತ್ತದೆ.

ಮರಗಟ್ಟುವಿಕೆ

ಮರಗಟ್ಟುವಿಕೆ

ಪಾದಗಳೂ ಮತ್ತು ಕಾಲಿನಲ್ಲಿ ಮರಗಟ್ಟುವಿಕೆಯ ಅನುಭವವಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣಗಳಾಗಿವೆ. ನರಗಳಿಗೆ ಹಾನಿಯಾದರೆ ಅದರಿಂದ ಮರಗಟ್ಟುವಿಕೆ ಉಂಟಾಗುವುದು. ಇದರಿಂದ ದೇಹದ ಒಂದು ಭಾಗದಲ್ಲಿ ಸ್ಪರ್ಶಜ್ಞಾನ ಇಲ್ಲವಾಗುವುದು. ಇದು ಮೊದಲಿಗೆ ಪಾದ ಮತ್ತು ಕೈಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ದೇಹದ ಇತರ ಭಾಗಗಳಿಗೆ ಕೂಡ ಹರಡುವುದು.

ಸಮತೋಲ ಕಳೆದುಕೊಳ್ಳುವುದು

ಸಮತೋಲ ಕಳೆದುಕೊಳ್ಳುವುದು

ಜ್ವರ, ತುಂಬಾ ಬಳಲಿರುವಾಗ, ನಿಶ್ಯಕ್ತಿ ಕಾಡಿದಾಗ ನಮ್ಮ ದೇಹದ ಸಮತೋಲನ ಕಳೆದುಕೊಳ್ಳುವುದು. ಆದರೆ ಈ ಕಾರಣಗಳು ಯಾವುದೂ ಇಲ್ಲದೆ ಕೂಡ ನೀವು ಸಮತೋಲನ ಕಳೆದುಕೊಂಡರೆ, ಬಿದ್ದು ಗಾಯಗಳು ಆಗುತ್ತಲಿದ್ದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣಗಳಾಗಿವೆ. ಇಂತಹ ಘಟನೆಗಳನ್ನು ತಪ್ಪಿಸಲು ತಕ್ಷಣ ವೈದ್ಯರನ್ನು ಭೇಟಿಯಾಗಿ.

ಸ್ನಾಯುಗಳು ದುರ್ಬಲ

ಸ್ನಾಯುಗಳು ದುರ್ಬಲ

ಸ್ವಲ್ಪ ಚಟುವಟಿಕೆ ಮಾಡಿದರೂ ಸ್ನಾಯುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಂಡರೆ ಇದು ಸ್ನಾಯುಗಳು ದುರ್ಬಲವಾಗುವುದರ ಲಕ್ಷಣವಾಗಿದೆ. ಮೆದುಳು ಮತ್ತು ಸ್ನಾಯುಗಳ ಗುಂಪಿನ ನಡುವಿನ ಸಂಕೇತದ ಮೇಲೆ ಪರಿಣಾಮ ಬಿದ್ದಾಗ ಸ್ನಾಯುಗಳ ಗುಂಪು ದುರ್ಬಲವಾಗುವುದು. ಇದರಿಂದಾಗಿ ದೈನಂದಿನ ಚಟುವಟಿಕೆಗಳಾದ ನಡೆಯುವುದು ಮತ್ತು ಚಲಿಸುವುದು ಕೂಡ ಕಷ್ಟವಾಗುವುದು. ಸ್ನಾಯುಗಳ ದುರ್ಬಲತೆಯಿಂದ ಕೆಲವೊಂದು ಸಂದರ್ಭಗಳಲ್ಲಿ ಸ್ನಾಯುಗಳ ನಿಯಂತ್ರಣ ತಪ್ಪುವುದು.

ಸೆಳೆತ

ಸೆಳೆತ

ತುಂಬಾ ಕಠಿಣ ಕೆಲಸ ಮತ್ತು ವ್ಯಾಯಾಮದಿಂದ ಸ್ನಾಯುಗಳಲ್ಲಿ ಊತ ಕಂಡುಬಂದರೆ ಅಥವಾ ನಿರ್ಜಲೀಕರಣವಾದರೆ ಆಗ ಒಂದೆರಡು ದಿನ ಸ್ನಾಯು ಸೆಳೆತವಾಗುವ ಸಾಮಾನ್ಯ ಅನುಭವವಾಗುವುದು. ಆದರೆ ನಿಯಮಿತವಾಗಿ ಸ್ನಾಯುಗಳಲ್ಲಿ ಜುಮ್ಮೆನ್ನುವ ಸಂವೇದನೆಯೊಂದಿಗೆ ಸೆಳೆತ ಕಾಣಿಸಿಕೊಂಡರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವಾಗಿರುವುದು.

ಅಸಾಮಾನ್ಯ ಎದೆಬಡಿತ

ಅಸಾಮಾನ್ಯ ಎದೆಬಡಿತ

ಓಡಿದಾಗ, ವ್ಯಾಯಾಮ ಮಾಡಿದಾಗ, ಭಯಭೀತರಾದಾಗ ಅಥವಾ ತುಂಬಾ ಅಚ್ಚರಿಗೊಳಗಾದಾಗ ನಮ್ಮ ಎದೆಬಡಿತ ಹೆಚ್ಚಾಗುವುದು ಸಾಮಾನ್ಯ. ಅದಾಗ್ಯೂ ನೀವು ತುಂಬಾ ತೀವ್ರ ಎದೆಬಡಿತ ಅಥವಾ ಅತೀ ನಿಧಾನ ಎದೆಬಡಿತದ ಅನುಭವವಾಗಿ ಅಯಾಸವಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವಾಗಿದೆ. ಮೆದುಳು ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಸರಿಯಾದ ಸಂಕೇತ ಕಳುಹಿಸದೇ ಇರುವುದು ಇದರ ಲಕ್ಷಣವಾಗಿದೆ.

ತಲೆತಿರುಗುವಿಕೆ

ತಲೆತಿರುಗುವಿಕೆ

ನಿಯಮಿತವಾಗಿ ನಿಮಗೆ ತಲೆಭಾರವಾಗುವುದು ಅಥವಾ ತಲೆತಿರುಗುವಿಕೆ ಕಂಡುಬಂದರೆ ಇದು ನಿರ್ಜಲೀಕರಣ, ದೀರ್ಘಕಾಲದ ಆಯಾಸ, ಮೆದುಳಿನ ಗಡ್ಡೆ, ರಕ್ತಹೀನತೆ ಇತ್ಯಾದಿಗಳಲ್ಲಿ ಯಾವುದಾದರೂ ಒಂದರ ಸಮಸ್ಯೆಯಾಗಿರಬಹುದು. ಎಲ್ಲಾ ರೀತಿಯ ಪರೀಕ್ಷೆ ಮಾಡಿಸಿಕೊಂಡಿದ್ದರೂ ಇನ್ನು ಕೂಡ ಆಯಾಸ ಪರಿಹಾರವಾಗುತ್ತಿಲ್ಲವೆಂದಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವೆಂದು ಹೇಳಬಹುದು.

English summary

Unusual Signs That Say You Could Have Nerve Damage!

we will be able to stand up and walk. So, the nervous system is very complex and even a minor malfunction can lead to major ailments in people. When the nerves are damaged, the transmission of signals and information from the brain to the other parts of the body is compromised, causing health issues. Injuries, autoimmune diseases, infection and inflammation of the nerve, brain damage, etc. can cause nerve damage. So, here are a few unusual signs of nerve damage that you must never ignore:
X
Desktop Bottom Promotion