For Quick Alerts
ALLOW NOTIFICATIONS  
For Daily Alerts

  ಪುರುಷರು ಸಾಧ್ಯವಾದಷ್ಟು ಹಸ್ತಮೈಥುನ ಕಂಟ್ರೋಲ್ ಮಾಡಿದರೆ ಒಳ್ಳೆಯದು!

  By Arshad
  |

  ಮಾನಸಿಕ ಒತ್ತಡದಿ೦ದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ ಎ೦ಬ ಕಾರಣದಿ೦ದ ಅನೇಕರು ಹಸ್ತಮೈಥುನವು ಆರೋಗ್ಯಕ್ಕೆ ಒಳ್ಳೆಯದು ಎ೦ದೇ ನಿಮಗೆ ಹೇಳುತ್ತಾರೆ. ಆದರೆ, ಸತ್ಯ ಸ೦ಗತಿ ಏನೆ೦ದರೆ, ಒ೦ದು ವೇಳೆ ಹಸ್ತಮೈಥುನವು ಚಟವಾದರೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಅತಿಯಾದ ನೋವನ್ನು ಅನುಭವಿಸಬೇಕಾಗುತ್ತದೆ. ಅಧ್ಯಯನಗಳ ಪ್ರಕಾರ, ನೀವು ವಾರಕ್ಕೆ ಮೂರರಿ೦ದ ಏಳು ಬಾರಿ ಹಸ್ತಮೈಥುನದಲ್ಲಿ ತೊಡಗಬಹುದು. ಆದರೆ, ನೀವು ಈ ಹಸ್ತಮೈಥುನ ಕ್ರಿಯೆಯನ್ನು ಅತಿಯಾಗಿ ಕೈಗೊ೦ಡರೆ, ಇದೊ೦ದು ಚಟವಾಗಿಬಿಡುತ್ತದೆ.

  ಅತಿಯಾದ ಹಸ್ತಮೈಥುನದಿ೦ದ ಪುರುಷರ ಹಾಗೂ ಸ್ತ್ರೀಯರ ಜನನಾ೦ಗಗಳಲ್ಲಿ ಬಾವುಗಳು೦ಟಾಗುತ್ತವೆ ಎ೦ದು ಸ೦ಶೋಧಕರು ಹೇಳುತ್ತಾರೆ. ಅನೇಕ ಸ೦ದರ್ಭಗಳಲ್ಲಿ ಈ ಚಟವು ಮಿತಿಮೀರಿದಾಗ, ಪುರುಷರ ಶರೀರಕ್ಕೆ ವೀರ್ಯಾಣುಗಳನ್ನು ಉತ್ಪಾದಿಸುವುದೂ ಕೂಡ ಕಷ್ಟವಾಗುತ್ತದೆ. ಯಾಕೆ೦ದರೆ, ಅನಿಯಮಿತವಾದ ಹಸ್ತಮೈಥುನವು ವೀರ್ಯಾಣುಗಳ ಸ೦ಖ್ಯೆಯನ್ನು ಕಡಿಮೆ ಮಾಡಬಲ್ಲದು. 

  ಇನ್ನೊ೦ದು ಗಮನಾರ್ಹ ಸ೦ಗತಿಯೇನೆ೦ದರೆ, ಅತಿಯಾದ ಹಸ್ತಮೈಥುನವು ಅವಧಿಪೂರ್ವ ವೀರ್ಯಸ್ಖಲನಕ್ಕೆ ದಾರಿಮಾಡಿಕೊಡುತ್ತದೆ ಹಾಗೂ ಇದು ನಿಮ್ಮ ಲೈ೦ಗಿಕ ಜೀವನದ ಮೇಲೆ ಗ೦ಭೀರವಾದ ಪರಿಣಾಮವನ್ನು೦ಟು ಮಾಡುತ್ತದೆ. ವಾಸ್ತವದಲ್ಲಿ ಹಸ್ತಮೈಥುನ ಒಂದು ನೈಸರ್ಗಿಕ ಹಾಗೂ ಸ್ವಾಭಾವಿಕ ಕ್ರಿಯೆಯಾಗಿದ್ದು ಇದರ ಮೂಲಕ ಶೀಘ್ರ ನಿದ್ದೆಗೆ ಜಾರಲು, ಮಾನಸಿಕ ಒತ್ತಡ ನಿವಾರಿಸಲು, ಉದ್ವೇಗ ಅಥವಾ ಇತರ ಖಿನ್ನತೆಗಳಿಂದ ಹೊರಬರಲೂ ಸಾಧ್ಯವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಲು, ಪ್ರಾಸ್ಟೇಟ್ ಗ್ರಂಥಿಗಳ ಕ್ಷಮತೆ ಹೆಚ್ಚಿಸಲು ಹಾಗೂ ಮನಸ್ಸಿಗೆ ಮುದನೀಡುವ ಎಂಡಾರ್ಫಿನ್ ಗಳ ಉತ್ಪತ್ತಿಗೂ ನೆರವಾಗುತ್ತದೆ. ಒಂದು ವೇಳೆ ಈ ಕ್ರಿಯೆ ವಿಪರೀತವಾದರೆ ಯಾವ ತೊಂದರೆಗಳು ಎದುರಾಗುತ್ತವೆ ಎಂದು ನೋಡೋಣ.... 

  ಸೂಚನೆ: ಈ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿಗಳು ಹಸ್ತಮೈಥುನ ಕೆಟ್ಟದ್ದು ಎಂದಾಗಲೀ ಯಾವುದೇ ಧಾರ್ಮಿಕ ವಿಧಿಯನ್ನು ವಿರೋಧಿಸುವುದಾಗಲೀ ಯಾವುದನ್ನೂ ಬಿಂಬಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಹಸ್ತಮೈಥುನದ ಬಗ್ಗೆ ಇರುವ ವೈಜ್ಞಾನಿಕ ಮಾಹಿತಿಯನ್ನು ಹಾಗೂ ಇದರ ವೈಪರೀತ್ಯಗಳ ಪರಿಣಾಮವನ್ನು ಮಾತ್ರವೇ ವಿವರಿಸಲಾಗಿದೆ...

  ಜನರು ಹಸ್ತಮೈಥುನ ಮಾಡಿಕೊಳ್ಳಲು ಇರುವ ಕಾರಣಗಳು ಯಾವುದು?

  ಜನರು ಹಸ್ತಮೈಥುನ ಮಾಡಿಕೊಳ್ಳಲು ಇರುವ ಕಾರಣಗಳು ಯಾವುದು?

  ಲೈಂಗಿಕ ಆಸಕ್ತಿ ತಣಿಸಲು ಹಸ್ತುಮೈಥುನವು ಪ್ರಮುಖ ಮಾರ್ಗವಾಗಿದೆ. ಲೈಂಗಿಕ ಸಂಬಂಧದಲ್ಲಿ ಇಲ್ಲದೆ ಇರುವವರು ಮತ್ತು ಸಂಬಂಧವನ್ನು ಕಡೆಗಣಿಸುವವರಿಗೆ ಇದು ತುಂಬಾ ಒಳ್ಳೆಯದು. ಲೈಂಗಿಕ ಕ್ರಿಯೆಯಿಂದ ಕೆಲವೊಂದು ರೀತಿಯ ಲೈಂಗಿಕ ರೋಗಗಳು ಹರಡುವ ಕಾರಣದಿಂದ ಇದು ತುಂಬಾ ಸುರಕ್ಷಿತ ಲೈಂಗಿಕ ಕ್ರಿಯೆಯಾಗಿದೆ. ಕೆರಳಿದ ಹಾರ್ಮೋನುಗಳ ಕಾರಣ ಯಾವುದೇ ರೀತಿಯ ಗರ್ಭಧಾರಣೆಯ ಅಪಾಯವಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುವುದು ಸುರಕ್ಷಿತ. ಲೈಂಗಿಕ ಸಂಗಾತಿಯಿದ್ದರೂ ಸಹಿತ ಹಸ್ತಮೈಥುನವು ಕೆಲವೊಂದು ಸಲ ನಿಮ್ಮ ಸಮಯ ನೀಡುವುದು. ನಿಮಗೆ ಏನು ಬೇಕೆಂದು ನಿಮಗಿಂತ ಚೆನ್ನಾಗಿ ತಿಳಿಯಲು ಬೇರೆ ಯಾರಿಂದಲೂ ಸಾಧ್ಯವಿಲ್ಲ.

  ಹಸ್ತಮೈಥುನ ಹೆಚ್ಚಾದರೆ ನಪುಂಸಕತ್ವ ಬರಬಹುದು!

  ಹಸ್ತಮೈಥುನ ಹೆಚ್ಚಾದರೆ ನಪುಂಸಕತ್ವ ಬರಬಹುದು!

  ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೂ ಒಂದು ಸಮಯ ಹಾಗೂ ಸಂದರ್ಭ ಇದ್ದೇ ಇರುತ್ತದೆ. ಇದನ್ನು ಮೀರಿ ನಡೆಸುವ ಯಾವುದೇ ಕಾರ್ಯ ಅಪಾಯಕಾರಿಯಾಗಿದೆ. ಉದಾಹರಣೆಗೆ ಬಿಟ್ಟೂ ಬಿಡದೇ ಸತತವಾಗಿ ನೀರು ಕುಡಿಯುತ್ತಲೇ ಇದ್ದರೆ ಏನಾಗುತ್ತದೆ? ಹೊಟ್ಟೆಯ ಸಾಮರ್ಥ್ಯಕ್ಕೂ ಮೀರಿ ನೀರು ಸಂಗ್ರಹಗೊಂಡರೆ ಇದು ಇತರ ಅಂಗಗಳಿಗೆ ಒತ್ತಿ ತೊಂದರೆ ಎದುರಾಬಹುದಲ್ಲವೇ? ಹಾಗೇ ಈ ಕ್ರಿಯೆ ಸಹಾ. ಈ ಕ್ರಿಯೆ ಅತಿಯಾದರೆ ಇದಕ್ಕನುಗುಣವಾಗಿ ಲೈಂಗಿಕ ರಸದೂತಗಳನ್ನೂ ಅನಿವಾರ್ಯವಾಗಿ ದೇಹ ಉತ್ಪಾದಿಸಬೇಕಾಗುತ್ತದೆ ಅಥವಾ ನರಗಳ ಸಂವಹಕಗಳನ್ನೂ (neurotransmitters) ಹೆಚ್ಚಿಸಬೇಕಾಗುತ್ತದೆ. ಇದರ ಪರಿಣಾಮ ಪ್ರತಿ ಪುರುಷನಲ್ಲಿಯೂ ಬೇರೆ ಬೇರೆ ರೀತಿಯಲ್ಲಾಗುತ್ತದೆ. ಕೆಲವರಿಗೆ ಸುಸ್ತು, ಕಣ್ಣು ಕತ್ತಲಾಗುವುದು, ಕೂದಲು ಉದುರುವುದು, ವೃಷಣಗಳಲ್ಲಿ ಅಪಾರ ನೋವು, ಸೊಂಟ ಬಗ್ಗಿಸಲೂ ಆಗದಂತಹ ನೋವು ಮೊದಲಾದವು ಎದುರಾಗುತ್ತವೆ. ಮಾನಸಿಕವಾಗಿಯೂ ವ್ಯಕ್ತಿ ಕುಗ್ಗಬಹುದು. ಹಾಗಾಗಿ ಇವುಗಳಲ್ಲಿ ಯಾವುದೊಂದು ಲಕ್ಷಣವೂ ಕಂಡುಬಂದರೆ ತಕ್ಷಣ ಹಸ್ತಮೈಥುನದ ಆವರ್ತನವನ್ನು ಹೆಚ್ಚಿಸಬೇಕು. ಅಗತ್ಯಬಿದ್ದರೆ ವೈದ್ಯರನ್ನು ಕಾಣುವುದೇ ಮೇಲು.

  ಹಸ್ತಮೈಥುನ ಎರಡು ಬದಿ ಹರಿತವಿರುವ ಖಡ್ಗದಂತೆ!

  ಹಸ್ತಮೈಥುನ ಎರಡು ಬದಿ ಹರಿತವಿರುವ ಖಡ್ಗದಂತೆ!

  ಸಂಗಾತಿಗಳು ತಮ್ಮ ಕಾಮಸಕ್ತಿಯನ್ನು ಸುಧಾರಿಸಿಕೊಳ್ಳಲು ಮತ್ತು ಗುಣಮಟ್ಟದ ಲೈಂಗಿಕ ಜೀವನಕ್ಕೆ ತಜ್ಞರು ಹಸ್ತಮೈಥುನದ ಸಲಹೆ ನೀಡುವರು ಪರಸ್ಪರರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಂಟಿ ಹಸ್ತಮೈಥುನವನ್ನು ಕೂಡ ಕೆಲವೊಂದು ಸಂದರ್ಭದಲ್ಲಿ ಸಲಹೆ ಮಾಡಲಾಗುತ್ತದೆ. ಸ್ವಜಾಗೃತಿಯೊಂದಿಗೆ ಇದರಿಂದ ನೀವು ಹೆಚ್ಚಿನ ಜ್ಞಾನ ಪಡೆದುಕೊಂಡು ಯಾವಾಗ ನೀವು ಹೆಚ್ಚು ಉತ್ತೇಜನಗೊಳ್ಳುವಿರಿ ಎಂದು ಸಂಗಾತಿಗೆ ಹೇಳಬಹುದು ಮತ್ತು ಸುಖದ ಪರಾಕಾಷ್ಠೆ ಪಡೆಯಬಹುದು. ಇನ್ನೊಂದು ಕಡೆಯಲ್ಲಿ ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಒಬ್ಬನಿಗೆ ಹಸ್ತಮೈಥುನ ಚಟವಾಗಿದ್ದರೆ ಆಗ ಸಂಬಂಧದಲ್ಲಿ ಬಿರುಕು ಮೂಡಬಹುದು.

  ಮೂತ್ರನಾಳದ ಸೋಂಕು ಕಾಡಬಹುದು!

  ಮೂತ್ರನಾಳದ ಸೋಂಕು ಕಾಡಬಹುದು!

  ಈ ವ್ಯಸನಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥವನ್ನು ಕಳೆದುಕೊಂಡಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ತನ್ಮೂಲಕ ನಾಲ್ಕು ಜನರ ನಡುವೆ ಇದ್ದ ಸಮಯದಲ್ಲಿ ಮೂತ್ರ ಪ್ರಕಟಗೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ಇತ ಅಡ್ಡಪರಿಣಾಮಗಳಲ್ಲಿ ಅತೀವವಾದ ದೈಹಿಕ ಸುಸ್ತು, ನಪುಂಸಕತೆ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ, ಅನಿಯಂತ್ರಿತ ವೀರ್ಯಸ್ಖಲನ , ಮಹಿಳೆಯರಲ್ಲಿ ಅನಿಯಂತ್ರಿತ ಯೋನಿಸ್ರಾವ, ಆರ್ದ್ರತೆಯ ಕೊರತೆಯಿಂದಾಗಿ ಒಣಗುವಿಕೆ, ಮೂತ್ರನಾಳದಲ್ಲಿ ಸೋಂಕು ಮೊದಲಾದವು ಎದುರಾಗುತ್ತವೆ.

  ನಿಮಿರುವಿಕೆ ಸಮಸ್ಯೆ ಕಾಡಬಹುದು

  ನಿಮಿರುವಿಕೆ ಸಮಸ್ಯೆ ಕಾಡಬಹುದು

  ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ಎದುರಾಗುವ ಅಡ್ಡಪರಿಣಾಮಗಳಲ್ಲಿ ಇದು ಅತ್ಯಂತ ಘೋರವಾಗಿದೆ. ಮೊದಲ ನಿಮಿರುವಿಕೆಯಲ್ಲಿ ಪುರುಷರಿಗೆ ಅತಿ ಹೆಚ್ಚಿನ ದೃಢತೆ ಸಿಗುತ್ತದೆ. ತದನಂತದರ ನಿಮಿರುವಿಕೆಯಲ್ಲಿ ಹಿಂದಿನಷ್ಟು ದೃಢತೆ ಇರುವುದಿಲ್ಲ ಹಾಗೂ ಕ್ರಮೇಣ ಇದು ಇನ್ನಷ್ಟು ಕಡಿಮೆಯಾಗುತ್ತಾ ಸೌಮ್ಯವಾದ ಸ್ಪಂಜಿನಂತಾಗುತ್ತದೆ. ಆದರೆ ಎಷ್ಟು ಸ್ಖಲನಗಳ ಬಳಿಕ ಹೀಗಾಗುತ್ತದೆ ಎಂಬುದಕ್ಕೆ ಯಾವುದೇ ಖಚಿತ ವಿವರಣೆಯಿಲ್ಲ. ಪ್ರತಿ ಪುರುಷರಿಗೂ ಇದು ಭಿನ್ನವಾಗಿರುತ್ತದೆ. ಅಲ್ಲದೇ ಸತತ ಘರ್ಷಣೆಯಿಂದ ಸೂಕ್ಷ್ಮಗೀರುಗಳು, ಚರ್ಮ ಸುಲಿಯುವುದು ಹಾಗೂ ಬಾವು ಕಾಣಿಸಿಕೊಳ್ಳಬಹುದು.

  ಹಸ್ತಮೈಥುನದಿಂದಾಗುವ ಅಡ್ಡಪರಿಣಾಮಗಳು

  ಹಸ್ತಮೈಥುನದಿಂದಾಗುವ ಅಡ್ಡಪರಿಣಾಮಗಳು

  ಅತಿಹೆಚ್ಚು ಹಸ್ತಮೈಥುನದಿಂದ ದೇಹದಲ್ಲಿ ಅಪಾರವಾದ ರಸದೂತ ಆಧಾರಿತ ಬದಲಾವಣೆಗಳು ಎದುರಾಗುತ್ತವೆ. ಈ ಬದಲಾವಣೆಗಳು ಹಸ್ತಮೈಥುನಗಳ ಸಂಖ್ಯೆಯನ್ನು ಹಾಗೂ ಇತರ ಅಂಶಗಳನ್ನು ಆಧರಿಸಿರುತ್ತವೆ. ಈ ಮೂಲಕ ಎದುರಾಗುವ ಅಪಾಯಗಳಲ್ಲಿ ಪ್ರಮುಖವಾದವು ಎಂದರೆ:

  ವ್ಯಸನ: ಅತಿ ಹೆಚ್ಚೇ ಎನಿಸುವಷ್ಟು ಈ ಕ್ರಿಯೆಯಲ್ಲಿ ಒಳಗಾಗುವ ಮೂಲಕ ಇದೊಂದು ವ್ಯಸನವಾಗಿ ಪರಿಣಮಿಸಬಹುದು. ಯಾವುದೇ ಮಾದಕ ವ್ಯಸನದಂತೆ ಈ ವ್ಯಸನವೂ ಆರೋಗ್ಯಕ್ಕೇ ಮಾರಕವಾಗಬಹುದು.

  ನಿಮಿರು ದೌರ್ಬಲ್ಯ: ಈ ಕ್ರಿಯೆ ಹೆಚ್ಚಾದಷ್ಟೂ ಜನನಾಂಗಗಳಿಗೆ ಒದಗುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತಾ ಹೋಗಿ ನಿಮಿರುದೌರ್ಬಲ್ಯ ಎದುರಾಗಬಹುದು.

  ನರವ್ಯವಸ್ಥೆಯ ತೊಂದರೆಗಳು

  ಕೆಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಅತಿಯಾದ ಹಸ್ತಮೈಥುನ ಪುರುಷರ ನರವ್ಯವಸ್ಥೆಯನ್ನೇ ಅಲ್ಲಾಡಿಸಿ ಮನೋವಿಕಲ್ಪಕ್ಕೂ ಕಾರಣವಾಗಬಹುದು.

  ಶೀಘ್ರಸ್ಖಲನ

  ಅತಿಹೆಚ್ಚೇ ಹಸ್ತಮೈಥುನ ಮಾಡಿಕೊಳ್ಳುವ ಪುರುಷರು ತಮ್ಮ ಸ್ಖಲನವನ್ನು ತಡೆಹಿಡಿದುಕೊಳ್ಳಲು ತೀರಾ ಅಸಮರ್ಥರಾಗಿರುತ್ತಾರೆ. ಅತಿಹೆಚ್ಚೇ ಜನನಾಂಗದ ನರವನ್ನು ತೀಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

  ನೋವು

  ಈ ತೊಂದರೆ ಅಪರೂಪವಾಗಿದ್ದು ಹೆಚ್ಚಿನ ಘರ್ಷಣೆಯಿಂದ ಸೂಕ್ಷ್ಮಗೀರುಗಳು ಹಾಗೂ ತ್ವಚೆ ಒರಟಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಕೆಲವೊಮ್ಮೆ ಬಾತುಕೊಳ್ಳಲೂಬಹುದು. ಆದ್ದರಿಂದ ಈ ಲಕ್ಷಣಗಳು ಎದುರಾದರೆ ತಕ್ಷಣ ಈ ಕ್ರಿಯೆಗೆ ಕೆಲದಿನಗಳ ರಜೆ ನೀಡಬೇಕು ಹಾಗೂ ಈ ಕ್ರಿಯೆಯನ್ನು ಅತಿ ನಾಜೂಕಿನಿಂದ ನಡೆಸಬೇಕು.

  ಸಾಧ್ಯವಾದಷ್ಟು ಯಾವುದಾದರೊ೦ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿರಿ

  ಸಾಧ್ಯವಾದಷ್ಟು ಯಾವುದಾದರೊ೦ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿರಿ

  ಹಸ್ತಮೈಥುನದಷ್ಟೇ ಅಥವಾ ಅದಕ್ಕಿ೦ತಲೂ ಹೆಚ್ಚು ರೋಮಾ೦ಚನಗೊಳಿಸುವ ಕ್ರೀಡೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ಕಾಲ್ಚೆ೦ಡು, ತ್ರೋಬಾಲ್, ಮತ್ತು ಬಾಸ್ಕೆಟ್ ಬಾಲ್ ನ೦ತಹ ಕ್ರೀಡೆಗಳನ್ನು ನೀವು ಆರಿಸಿಕೊಳ್ಳಬಹುದು. ಈ ಕ್ರೀಡೆಗಳು ನಿಮ್ಮನ್ನು ಸ್ವಸ್ಥವಾಗಿ ಹಾಗೂ ದೃಢವಾಗಿಯೂ ಸಹ ಇರಿಸಬಲ್ಲವು.

  ಅಶ್ಲೀಲ ದೃಶ್ಯಾವಳಿಗಳು/ವೀಡಿಯೊಗಳನ್ನು ವೀಕ್ಷಿಸಬೇಡಿರಿ

  ಅಶ್ಲೀಲ ದೃಶ್ಯಾವಳಿಗಳು/ವೀಡಿಯೊಗಳನ್ನು ವೀಕ್ಷಿಸಬೇಡಿರಿ

  ನಿಮ್ಮಲ್ಲಿರುವ ಆ ಅಶ್ಲೀಲ ದೃಶ್ಯಾವಳಿಗಳನ್ನೊಳಗೊ೦ಡ ಡಿವಿಡಿ ಗಳನ್ನು ಒಗೆಯುವುದರಿ೦ದ ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಸಹಾಯವಾಗುತ್ತದೆ. ಅಶ್ಲೀಲ ದೃಶ್ಯಗಳ ಮೂಲಗಳನ್ನು ತೊಲಗಿಸಿದ ನ೦ತರ, ಕಟ್ಟಕಡೆಗೆ, ನೀವು ಹಸ್ತಮೈಥುನದ ಕುರಿತು ಅನಾಸಕ್ತರಾಗುವಿರಿ. ಹಸ್ತಮೈಥುನದ ಚಟವನ್ನು ಹತ್ತಿಕ್ಕಲು ಇದೂ ಕೂಡ ಒ೦ದು ಉತ್ತಮ ಉಪಾಯವಾಗಿದೆ.

  ನಿಮ್ಮನ್ನುದ್ರೇಕಿಸುವ ಆ ಆಟಿಕೆಗಳನ್ನು ಎಸೆದು ಬಿಡಿರಿ

  ನಿಮ್ಮನ್ನುದ್ರೇಕಿಸುವ ಆ ಆಟಿಕೆಗಳನ್ನು ಎಸೆದು ಬಿಡಿರಿ

  ನೀವು ನಿಜಕ್ಕೂ ಹಸ್ತಮೈಥುನದ ಚಟದಿ೦ದ ಹೊರಬರಬೇಕೆ೦ದೇ ಬಯಸುವಿರಾದರೆ, ನಿಮ್ಮನ್ನು ಪ್ರಚೋದಿಸುವ ಆ ಆಟಿಕೆಗಳನ್ನು ನೀವು ಹೊರಗೊಗೆಯಲೇ ಬೇಕು. ದುಬಾರಿ ಬೆಲೆಯ ಆ ಆಟಿಕೆಗಳನ್ನು ಹಾಗೆಯೇ ಎತ್ತಿ ಎಸೆಯಲು ನಿಮಗೆ ತುಸು ಕಷ್ಟವಾಗಬಹುದು, ಆದರೆ ಹೀಗೆ ಮಾಡುವುದರಿ೦ದ ನಿಮ್ಮ ಆರೋಗ್ಯವು ಉತ್ತಮಗೊಳ್ಳುವುದು.

  English summary

  Unexpected Side Effects Of Masturbation in Men

  Here are harmful effects of masturbation in men. Read on to understand...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more