For Quick Alerts
ALLOW NOTIFICATIONS  
For Daily Alerts

ಒಳ ಉಡುಪು ಸೀಕ್ರೆಟ್ಸ್!- ನಿಮಗೆ ಗೊತ್ತಿಲ್ಲದೇ ನಿಮ್ಮಿಂದ ಈ ತಪ್ಪುಗಳು ಆಗುತ್ತಿರಬಹುದು!

|

ಸಾಮಾನ್ಯವಾಗಿ ಒಳ ಉಡುಪುಗಳ ಬಗ್ಗೆ ನಾವು ಹೆಚ್ಚಿನ ಗಮನ ನೀಡುವುದಿಲ್ಲ, ಗಮನವೇನಿದ್ದರೂ ಇದರ ಮೇಲೆ ತೊಡುವ ಪ್ರಮುಖ ಉಡುಗೆಗಳ ಬಗ್ಗೆಯೇ ಇರುತ್ತದೆ. ವಿಕ್ಟೋರಿಯಾ ಉತ್ಪನ್ನದ ಗುಟ್ಟಿನ ರೂಪದರ್ಶಿ ನಾವಾಗಿಲ್ಲದಿದ್ದರೂ ಏನಾಯಿತು, ಹೊರ ಉಡುಪುಗಳಿಗೆ ನಾವು ಹೆಚ್ಚೇ ಮಹತ್ವ ನೀಡುತ್ತೇವೆ. ವಿಶೇಷವಾಗಿ ಮಹಿಳೆಯರಿಗೆ, ತಾವು ತೊಟ್ಟಿರುವ ಉಡುಗೆಗಳು ಎಲ್ಲಾ ಬಗೆಯಿಂದಲೂ ಒಪ್ಪುವಂತಿರಬೇಕು ಹಾಗೂ ಜೊತೆಗೆ ಬಳಸುವ ಉಡುಗೆಗಳೂ ಒಪ್ಪುವಂತಹ ಬಣ್ಣ, ವಿನ್ಯಾಸವನ್ನೇ ಹೊಂದಿರಬೇಕು.

ಎಚ್ಚರ! ಟೈಟಾದ ಒಳ ಚಡ್ಡಿ ಹಾಕಿದರೆ, ಇಂತಹ ಸಮಸ್ಯೆ ಕಾಡಬಹುದು!

ಆಪ್ಪಿ ತಪ್ಪಿ ಹೊಂದಿಕೆಯಾಗದ ಬಣ್ಣದ ದಾವಣಿಯನ್ನೋ ಅಥವಾ ಬೇರಾವುದೋ ಉಡುಗೆ ತೊಟ್ಟರೆ ಮುಗಿಯಿತು ಕಥೆ, ಹೇಳುವವರ ಬಾಯಿಗೆ ಉಪ್ಪಿನಕಾಯಿ ಕೊಟ್ಟಂತಾಗುತ್ತದೆ. ಹಾಗಾಗಿ ಹೊರ ಉಡುಪಿಗೆ ನೀಡುವಷ್ಟು ಗಮನವನ್ನು ನಾವು ಒಳ ಉಡುಪುಗಳಿಗೆ ನೀಡುವುದಿಲ್ಲ. ಹಾಗಾಗಿ ನಮಗೆ ಗೊತ್ತಿಲ್ಲದೇ ಕೆಲವು ತಪ್ಪುಗಳನ್ನು ನಾವು ಮಾಡುತ್ತಿದ್ದೇವೆ. ವಾಸ್ತವವಾಗಿ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಹೊರ ಉಡುಪುಗಳಷ್ಟೇ ಗಮನವನ್ನು ಒಳ ಉಡುಪಿಗೂ ನೀಡಬೇಕಾಗುತ್ತದೆ. ಮುಂದಿನ ಬಾರಿ ಉಡುಪುಗಳನ್ನು ತೊಡುವಾಗ ಒಳವಸ್ತ್ರಗಳ ಬಗ್ಗೆ ಈ ಅಮೂಲ್ಯ ವಿಷಯಗಳ ಬಗ್ಗೆ ಗಮನವಿರಲಿ:

ಹತ್ತಿಯ ಕಡೆಗಣನೆ

ಹತ್ತಿಯ ಕಡೆಗಣನೆ

ಮಹಿಳೆಯರೇ, ವಾಸ್ತವದತ್ತ ನೋಡೋಣ. ಇಂದು ಲಭ್ಯವಿರುವ ಹತ್ತಿಯ ಒಳ ಉಡುಪುಗಳು ಇತರ ಬಟ್ಟೆಯಿಂದ ಮಾಡಿದ ಉಡುಪುಗಳು ನೀಡುವ ವೈಯಾರ ನೀಡದೇ ಹೋಗಬಹುದು, ಆದರೆ ಈ ಜಗತ್ತಿನಲ್ಲಿ ಹತ್ತಿಯ ಒಳ ಉಡುಪುಗಳೇ ಅತ್ಯಂತ ಸುರಕ್ಷಿತ! "ರೇಶ್ಮೆ ಮತ್ತು ನೈಲಾನ್ ನಂತಹ ಇತರ ನೂಲುಗಳಿಂದ ತಯಾರಿಸಿದ ಒಳ ಉಡುಪುಗಳ ಮೂಲಕ ಗಾಳಿ ಹಾಯದ ಕಾರಣ ಇವುಗಳು ಒಳ ಉಡುಪುಗಳ ಒಳಭಾಗದ ತ್ವಚೆಯಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ ಹಾಗೂ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದ ಸೋಂಕು ಹರಡುವ ಸಾಧ್ಯತೆ ಹೆಚ್ಚಿಸುತ್ತವೆ" ಎಂದು ಡಾ. ಡಾನಿಕಾ ಮೂರ್, ಎಂ.ಡಿ. ಯವರು ಹಪ್ಫಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. "ಒಂದು ವೇಳೆ ಈ ಬಟ್ಟೆಗಳಿಂದ ತಯಾರಾದ ಒಳ ಉಡುಪುಗಳು ಕೆಲವು ಸಂದರ್ಭಗಳಿಗೆ ಅನಿವಾರ್ಯವಾಗಿದ್ದರೆ ಅಂಚುಗಳಾದರೂ ಹತ್ತಿಯ ಬಟ್ಟೆಯ ಪಟ್ಟಿಯನ್ನು ಹೊಂದಿರುವುದಂತಹದ್ದನ್ನೇ ಕೊಳ್ಳಿ" ಎಂದು ಅವರು ಸಲಹೆ ಮಾಡುತ್ತಾರೆ. ಅಲ್ಲದೇ ರೇಶ್ಮೆಯ ಪ್ಯಾಂಟಿಯನ್ನೇ ಧರಿಸಬೇಕಾದ ಅನಿವಾರ್ಯತೆ ಉಂಟಾಗಿದ್ದರೆ ಇವುಗಳನ್ನು ಕನಿಷ್ಟ ಸಮಯದವರೆಗೆ ಮಾತ್ರವೇ ಧರಿಸಿ ಎಂದು ತಿಳಿಸುತ್ತಾರೆ.

ತಪ್ಪಾದ ಅತಿ ಕಿರಿಯ ಪ್ಯಾಂಟಿ (thong) ತೊಡುವಿಕೆ:

ತಪ್ಪಾದ ಅತಿ ಕಿರಿಯ ಪ್ಯಾಂಟಿ (thong) ತೊಡುವಿಕೆ:

ಯೋಗಾಭ್ಯಾಸ ಹಾಗೂ ಇತರ ದೈಹಿಕ ಚಟುವಟಿಕೆಗಳಿಗೆ ಧರಿಸುವ ಯೋಗ ಪ್ಯಾಂಟ್ ನೊಂದಿಗೆ ಈ ಕಿರಿಯ ಗಾತ್ರದ ಪ್ಯಾಂಟಿ ಅನುಕೂಲಕರವಾಗಿದ್ದರೂ ಇವುಗಳ ಮೂಲಕ ಎದುರಾಗುವ ಸೋಂಕಿನ ಸಾಧ್ಯತೆ ಮಾತ್ರ ಹಿರಿದೇ ಆಗಿರುತ್ತದೆ. "ಕರುಳಿನಲ್ಲಿರುವ ಅತಿ ಸಾಮಾನ್ಯ ಬ್ಯಾಕ್ಟೀರಿಯಾವಾದ ಈ ಕೊಲೈ ಎಂಬ ಬ್ಯಾಕ್ಟೀರಿಯಾ ದೈಹಿಕ ವ್ಯಾಯಾಮದ ಅವಧಿಯಲ್ಲಿ ಇದು ಪ್ಯಾಂಟಿಯ ಭಾಗದಲ್ಲಿ ಅಂಟಿಕೊಳ್ಳುವ ಸಂಭವ ಅತಿ ಹೆಚ್ಚು" ಎಂದು ಡಾ. ಜಿಲ್ ಎಮ್ ರಾಬಿನ್ ರವರು ಹಪ್ಫಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. "ಹೀಗೆ ಹೊರಬಂದ ಬ್ಯಾಕ್ಟೀರಿಯಾಕ್ಕೆ ಕೇವಲ ಒಂದಿಂಚು ಮಾತ್ರವೇ ಮುಂದೆ ಸರಿದರೆ ಸಾಕು, ಮೂತ್ರನಾಳ ಅಥವಾ ಜನನಾಂಗದ ತೇವಾಂಶಕ್ಕೆ ಸುಲಭವಾಗಿ ಸರಿದುಬಿಡುತ್ತದೆ. ಹೀಗೆ ಮಾಡುವಲ್ಲಿ ಇತರ ಒಳ ಉಡುಪುಗಳಿಗಿಂತಲೂ ಅತಿ ಬಿಗಿಯಾಗಿ ಪಟ್ಟಿಯ ರೂಪದಲ್ಲಿ ಈ ಭಾಗವನ್ನು ಅಪ್ಪಿ ಹಿಡಿಯುವ ಈ ಥಾಂಗ್ ಗಳೇ ಅತಿ ಅಪಾಯಕಾರಿಯಾಗಿವೆ, ಪರಿಣಾಮವಾಗಿ ಸೂಕ್ಷ್ಮಭಾಗದಲ್ಲಿ ಭಾರೀ ಸೋಂಕು ಎದುರಾಗುತ್ತದೆ. ಅಷ್ಟೇ ಅಲ್ಲ, ಈ ಥಾಂಗ್ ಅಥವಾ ಇದೇ ತರಹದ ಇತರ ಪ್ಯಾಂಟಿಗಳನ್ನು ತಯಾರಿಸಲು ಹತ್ತಿಗಿಂತಲೂ ಗಡುಸಾಗಿರುವ ಬಟ್ಟೆಯನ್ನೇ ಬಳಸುವುದರಿಂದ ಇವು ಚಲನೆಯ ಸಮಯದಲ್ಲಿ ಚರ್ಮಕ್ಕೆ ಹೆಚ್ಚಾಗಿ ಉಜ್ಜಿ ಘಾಸಿಯುಂಟುಮಾಡುತ್ತವೆ. ಸಾಮಾನ್ಯವಾಗಿ ಕಣ್ಣಿಗೆ ಕಾಣದ ಈ ಭಾಗದ ಈ ಘಾಸಿ ಎಲ್ಲಿಯವರೆಗೆ ಉರಿಯಾಗುವಷ್ಟು ಮುಂದುವರೆಯುವುದಿಲ್ಲವೋ ಅಲ್ಲಿಯವರೆಗೆ ಗಮನಕ್ಕೆ ಬರುವುದಿಲ್ಲ.

ರಾತ್ರಿ ಮಲಗುವಾಗಲೂ ಒಳ ಉಡುಪು ಧರಿಸಿರುವುದು:

ರಾತ್ರಿ ಮಲಗುವಾಗಲೂ ಒಳ ಉಡುಪು ಧರಿಸಿರುವುದು:

ಈ ಬಾರಿ ನಮ್ಮ ಮಾತುಗಳನ್ನು ಮೀರದಿರಿ! ನಾವು ನಿಮಗೆ ಬೆತ್ತಲೆಯಾಗಿ ಮಲಗಲು ತಿಳಿಸುತ್ತಿಲ್ಲ, ಬದಲಿಗೆ ನಿಮಗೆ ಹಿತವೆನಿಸುವ ರಾತ್ರಿಯ ಉಡುಪುಗಳಾದ ಪೈಜಾಮಾ ಅಥವಾ ನೈಟಿ ಧರಿಸಬಹುದು. ವಿಶೇಷವಾಗಿ ನೀವು ಹೆಚ್ಚಾಗಿ ಪ್ರಯಾಣಿಸುವ ಮಹಿಳೆಯಾಗಿದ್ದರೆ ಈ ಉಡುಪನ್ನು ಖಂಡಿತವಾಗಿ ಜೊತೆಗೊಯ್ಯಲೇಬೇಕು. ಏಕೆಂದರೆ ರಾತ್ರಿಯ ಹೊತ್ತು ಒಳ ಉಡುಪುಗಳನ್ನು ಧರಿಸುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕು ಹರಡುವ ಸಾಧ್ಯತೆ ಅಪಾರವಾಗಿರುತ್ತದೆ. ಒಳ ಉಡುಪುಗಳನ್ನು ನಿವಾರಿಸದೇ ಇದ್ದರೆ ಗುಪ್ತಾಂಗದ ಭಾಗದಲ್ಲಿ ತೇವಾಂಶ ಹಿಡಿದಿಟ್ಟುಕೊಂಡು ಬ್ಯಾಕ್ಟೀರಿಯಾ-ಶಿಲೀಂಧ್ರದ ಸೋಂಕು ಹರಡಲು ಅನುಕೂಲಕರ ವಾತಾವರಣವುಂಟಾಗುತ್ತದೆ. 24/7 ಸಮಯ ಒಳ ಉಡುಪು ಧರಿಸುವ ಮಹಿಳೆಯರಿಗೆ ಈ ಸೋಂಕು ಆವರಿಸುವ ಸಾಧ್ಯತೆ ಅತಿ ಹೆಚ್ಚು.

ದಿನದ ಅವಧಿಯಲ್ಲಿ ಧರಿಸದೇ ಇರುವುದು

ದಿನದ ಅವಧಿಯಲ್ಲಿ ಧರಿಸದೇ ಇರುವುದು

ರಾತ್ರಿ ಮಲಗುವ ಸಮಯದಲ್ಲಿ ಗುಪ್ತಾಂಗಗಳ ಭಾಗದಲ್ಲಿ ಹೆಚ್ಚಿನ ಗಾಳಿಯಾಡುವಿಕೆಯ ಅವಶ್ಯಕತೆ ಇದ್ದರೂ ಈ ಅವಶ್ಯಕತೆಯನ್ನು ಇಡಿಯ ದಿನಕ್ಕೆ ವಿಸ್ತರಿಸುವ ಅಗತ್ಯವಿಲ್ಲ ಎಂದು ಡಾ. ಮೆಲಿಸ್ಸಾ, ಎಂ.ಡಿ. ಯವರು ತಿಳಿಸುತ್ತಾರೆ. ಮನೆಯಲ್ಲಿ ಸಡಿಲ ಉಡುಗೆಯಲ್ಲಿದ್ದು ಹೊರ ಹೋಗದ ಸಂದರ್ಭವಿದ್ದಾಗ ಆಗಾಗ ಹೀಗೆ ಮಾಡಬಹುದಾದರೂ ಇತರ ಉಡುಪು ತೊಟ್ಟಾಗ ಅಥವಾ ಹೊರಹೋಗಬೇಕಾದ ಸಂದರ್ಭ ಎದುರಾದಾಗ ಮಾತ್ರ ಒಳ ಉಡುಪು ತೊಡದೇ ಇರಬಾರದು. ವಿಶೇಷವಾಗಿ ಜೀನ್ಸ್ ಮೊದಲಾದ ದೇಹವನ್ನು ಅಪ್ಪಿ ಹಿಡಿಯುವ ಉಡುಗೆಗಳನ್ನು ತೊಡುವಾಗ ನಡೆದಾಡುವುದರಿಂದಲೇ ಗುಪ್ತಾಂಗದ ಭಾಗದ ಚರ್ಮ ಘಾಸಿಗೊಳ್ಳಬಹುದು. ಪರಿಣಾಮವಾಗಿ ಚರ್ಮ ಕೆಂಪಗಾಗುವುದು, ಚಿಕ್ಕ ದದ್ದುಗಳು ಏಳುವುದು, ಉರಿ ಮೊದಲಾದವು ಎದುರಾಗುತ್ತವೆ. ಕೊಂಚ ಹೊತ್ತಿಗೇ ಈ ಭಾಗದಲ್ಲಿ ಸೋಂಕು ಹರಡಲು ಎದುರಾಗುತ್ತದೆ. ಆದ್ದರಿಂದ ಉಡುಪು ತೊಡುವಾಗ, ಒಳ ಉಡುಪು ತೊಡುವುದೂ ಅಗತ್ಯ.

ತಪ್ಪಾದ ಗಾತ್ರದ ಒಳ ಉಡುಪು ಧರಿಸುವುದು

ತಪ್ಪಾದ ಗಾತ್ರದ ಒಳ ಉಡುಪು ಧರಿಸುವುದು

ತಮ್ಮ ದೇಹಕ್ಕೆ ಒಪ್ಪದ ಗಾತ್ರದ ಒಳ ಉಡುಪನ್ನು ಧರಿಸುವುದು ಯಾರಿಗೂ ಇಷ್ಟವಿಲ್ಲ. ಇದು ಅಹಿತಕರವೂ, ಸೌಂದರ್ಯವನ್ನು ಕುಂದಿಸುವಂತಹದ್ದೂ ಆಗಿರುತ್ತದೆ. ಅದರಲ್ಲೂ ತಮ್ಮ ದೇಹದ ಗಾತ್ರಕ್ಕೆ ತೀರಾ ಬಿಗಿಯಾದ ಉಳ ಉಡುಪುಗಳನ್ನು ಧರಿಸುವುದು ದೊಡ್ಡ ತಪ್ಪಾಗಿದೆ ಹಾಗೂ ಇದರ ಪರಿಣಾಮ ಘೋರವಾಗಬಹುದು. ದೇಹದ ಯಾವುದೇ ಭಾಗದಲ್ಲಿ ಚರ್ಮವನ್ನು ಬಿಗಿ ಹಿಡಿಯುವ ಉಡುಪು ಸೂಕ್ತವಲ್ಲ. ಇದು ರಕ್ತಪರಿಚಲನೆಗೆ ಅಡ್ಡಿಯಾಗುವುದು, ಚರ್ಮವನ್ನು ಘಾಸಿಗೊಳಿಸುವುದು, ಈ ಭಾಗದಲ್ಲಿ ಸತತ ಘರ್ಷಣೆಯಿಂದ ದದ್ದುಗಳು ಏಳುವುದು ಮೊದಲಾದವು ಎದುರಾಗುತ್ತವೆ. ಕೆಲವು ಸಮಯದಲ್ಲಿ ಒಳ ಉಡುಪನ್ನು ಮುಂದಿನ ದಿನಗಳಿಗಾಗಿ ಎಂದು ತೆಗೆದಿರಿಸಿದ್ದು ಆ ಸಮಯ ಬಂದಾಗ ಯಾವುದೋ ಕಾರಣಕ್ಕೆ ಮೈ ತೂಕ ಹೆಚ್ಚಿ ಒಳ ಉಡುಪುಗಳು ಬಿಗಿಯಾಗಬಹುದು. ಆದರೆ ಈಗಾಗಲೇ ಹಣ ಕೊಟ್ಟಿದ್ದು ಈಗ ಬಳಸದೇ ಇದ್ದರೆ ನಷ್ಟವಾಗುವ ಮನೋಭಾವದಿಂದ ಎಷ್ಟೋ ಮಹಿಳೆಯರು ಯಾರಿಗೂ ಹೇಳದೇ ಇವೇ ಉಡುಪುಗಳನ್ನು ತೊಟ್ಟುಕೊಂಡಿರುತ್ತಾರೆ. ಆದರೆ ಪರಿಣಾಮವಾಗಿ ಈ ಭಾಗದಲ್ಲಿ ಅಗತ್ಯವಾಗಿ ಆಡಬೇಕಾಗಿದ್ದ ಗಾಳಿಯಾಡದೇ ತೇವಾಂಶ ಒಳಗೇ ಹಿಡಿಯಲ್ಪಡುತ್ತದೆ. ಪರಿಣಾಮವಾಗಿ ಶಿಲೀಂಧ್ರದ ಸೋಂಕು ಸುಲಭವಾಗಿ ಅಂಟಿಕೊಳ್ಳುತ್ತದೆ. ಆದ್ದರಿಂದ, ಯಾವುದೇ ಕಾರಣವಿರಲಿ, ನಷ್ಟವಾದರೂ ಸರಿ, ನಿಮ್ಮ ದೇಹದ ಗಾತ್ರಕ್ಕೆ ಒಪ್ಪುವ ಸೈಜ್ ಅಥವಾ ಅಳತೆಗೂ ಕೆಳಗಿನ ಅಳತೆಯ ಒಳ ಉಡುಪುಗಳನ್ನು ಸರ್ವಥಾ ತೊಡದಿರಿ.

ಬಣ್ಣದ ಒಳ ಉಡುಪುಗಳನ್ನು ತೊಡುವುದು

ಬಣ್ಣದ ಒಳ ಉಡುಪುಗಳನ್ನು ತೊಡುವುದು

ಮಹಿಳೆಯರು ಸ್ವಾಭಾವಿಕವಾಗಿಯೇ ತಮ್ಮೆಲ್ಲಾ ಉಡುಪುಗಳು ಪರಸ್ಪರ ಬಣ್ಣಗಳಲ್ಲಿ ಒಪ್ಪುವಂತಿರಬೇಕೆಂದು ಬಯಸುತ್ತಾರೆ. ಈ ಬಯಕೆ, ಸಾಮಾನ್ಯವಾಗಿ ಒಳ ಉಡುಪುಗಳಿಗೂ ವಿಸ್ತರಿಸುತ್ತದೆ. ಆದರೆ ಡಾ. ಓವೆನ್ ಮಾಂಟೆಗೋಮೆರಿ, ಎಂ.ಡಿ. ಯವರು ಕಾಸ್ಮೋಪಾಲಿಟನ್ ಮಾಧ್ಯಮದಲ್ಲಿ ವಿವರಿಸಿರುವ ಪ್ರಕಾರ, ಈ ಬಣ್ಣದ ಒಳ ಉಡುಪುಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲ. "ಬಿಳಿಯ ಬಣ್ಣಕ್ಕೆ ಸೇರಿಸುವ ಡೈ ಅಥವಾ ಬಣ್ಣ ನೀಡುವ ರಾಸಾಯನಿಕಗಳು ಕೆಲವೊಮ್ಮೆ ಚರ್ಮಕ್ಕೆ ಅಲರ್ಜಿಕಾರಕವಾಗಿದ್ದು ವಿಶೇಷವಾಗಿ ಗುಪ್ತಾಂಗಗಳ ಸೂಕ್ಷ್ಮ ಚರ್ಮಕ್ಕೆ ತುರಿಕೆಯುಂಟುಮಾಡಬಹುದು. ಅದರಲ್ಲೂ ವಿಶೇಷವಾಗಿ ಗುಪ್ತಾಂಗದಲ್ಲಿ ಈಗಾಗಲೇ ಸೂಕ್ಷ್ಮ ಸಂವೇದಿ ತ್ವಚೆಯನ್ನು ಹೊಂದಿರುವ ಮಹಿಳೆಯರು ಈ ಬಣ್ಣದ ಒಳ ಉಡುಪುಗಳ ಮೂಲಕ ಮತ್ತಷ್ಟು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ" ಎಂದು ಅವರು ತಿಳಿಸುತ್ತಾರೆ. ಹಾಗಾಗಿ ಬಣ್ಣದ ಒಳ ಉಡುಪುಗಳು ಎಷ್ಟೇ ಆಕರ್ಷಕವಾಗಿದ್ದರೂ ಸರಿ, ಸರಳ, ಹತ್ತಿಯ ಬಿಳಿ ಒಳ ಉಡುಪುಗಳೇ ಮಹಿಳೆಯರಿಗೆ ಅತ್ಯುತ್ತಮ!

ವ್ಯಾಯಾಮದ ಬಳಿಕ ಒಳ ಉಡುಪನ್ನು ಬದಲಿಸದೇ ಇರುವುದು:

ವ್ಯಾಯಾಮದ ಬಳಿಕ ಒಳ ಉಡುಪನ್ನು ಬದಲಿಸದೇ ಇರುವುದು:

ವ್ಯಾಯಾಮದ ಬಳಿಕ ಸುರಿಯುತ್ತಿರುವ ಬೆವರನ್ನು ಹೀರಿಕೊಂಡಿರುವ ಬಟ್ಟೆಗಳನ್ನೇ ಮುಂದಿನ ಅವಧಿಗೂ ಧರಿಸುವುದು ಆರೋಗ್ಯಕರವಲ್ಲ! ಅದರಲ್ಲೂ ಒಳ ಉಡುಪುಗಳಂತೂ ಸರ್ವಥಾ ಅಲ್ಲ! ಇವುಗಳಿಂದ ಹೊಮ್ಮುವ ದುರ್ಗಂಧಕ್ಕಿಂತಲೂ ಹೆಚ್ಚೇ ಹಾನಿಯನ್ನು ಇವು ಎಸಗಬಹುದು ಎಂದು ಡಾ. ಜೆನ್ ಗುಂಟರ್, ಎಂ.ಡಿ. ಯವರು ತಿಳಿಸುತ್ತಾರೆ. ಈ ಒಳ ಉಡುಪುಗಳು, ವಿಶೇಷವಾಗಿ ಮಹಿಳೆಯರಲ್ಲಿ "jock itch" (tinea cruris) ಅಥವಾ ಕ್ರೀಡೆಯೊಂದರಲ್ಲಿ ಸತತವಾಗಿ ಉಜ್ಜಲ್ಪಡುವ ಚರ್ಮದ ಭಾಗದಲ್ಲಿ ಎದುರಾಗುವ ಘರ್ಷಣೆಯಿಂದ ಉಂಟಾಗುವ ಶಿಲೀಂಧ್ರದ ಸೋಂಕು ಉಂಟುಮಾಡಬಹುದು. ಗ್ಲಾಮರ್ ಪತ್ರಿಕೆಯ ಸಂದರ್ಶನದಲ್ಲಿ ಈ ವಿಷಯದಗಳನ್ನು ತಿಳಿಸಿದ ಅವರು "ಮಹಿಳಾ ಕ್ರೀಡಾಪಟುಗಳಿಗೆ ದೇಹವನ್ನು ದಂಡಿಸುವುದು ಅನಿವಾರ್ಯವಾಗಿದ್ದು ಗುಪ್ತಾಂಗ, ತೊಡೆಗಳ ಒಳಭಾಗ ಹಾಗೂ ನಿತಂಬಗಳ ಕೆಳಭಾಗದ ಚರ್ಮದ ಹೊರಭಾಗ ಮತ್ತು ಒಳಭಾಗದಲ್ಲಿ ಸೋಂಕು ಎದುರಾಗುವುದು ಸರ್ವೇ ಸಾಮಾನ್ಯ" ಎಂದೂ ತಿಳಿಸುತ್ತಾರೆ. ದೈಹಿಕ ಕಸರತ್ತಿನಿಂದಾಗಿ ಸತತ ಘರ್ಷಣೆ, ಒಸರುವ ಬೆವರಿನಿಂದಾಗಿ ಅತೀವ ತೇವಾಂಶ ಈ ಭಾಗವನ್ನು ಸೋಂಕಿಗೆ ಸುಲಭವಾಗಿ ಒಳಗಾಗುವಂತೆ ಮಾಡಿಟ್ಟಿರುತ್ತವೆ. ಹಾಗಾಗಿ ದೈಹಿಕ ವ್ಯಾಯಾಮ-ಕಸರತ್ತು ಮುಗಿದ ತಕ್ಷಣವೇ ಸ್ನಾನ ಮಾಡಿ ಸ್ವಚ್ಛ ಉಡುಪುಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ತಕ್ಷಣಕ್ಕೆ ಸ್ನಾನದ ಸೌಲಭ್ಯ ಲಭಿಸದೇ ಹೋದರೆ, ಒಳ ಉಡುಪುಗಳ ಸಹಿತ ಎಲ್ಲಾ ಬೆವರಿನಿಂದ ತೋಯ್ದಿರುವ ಬಟ್ಟೆಗಳನ್ನು ಬದಲಿಸಿ ಒಣ ಬಟ್ಟೆಯಲ್ಲಿ ತೇವಾಂಶವನ್ನು ಸ್ವಚ್ಛಗೊಳಿಸಿ ಹೊಸ ಒಳ ಉಡುಪುಗಳನ್ನು ತೊಡಬೇಕು. ಈ ಎಚ್ಚರಿಕೆಯನ್ನು ಪಾಲಿಸದೇ ಇದ್ದರೆ ದೀರ್ಘಾವಧಿಯಲ್ಲಿ ಮಹಿಳೆಯರಿಗೆ, ವಿಶೇಷವಾಗಿ ಮಹಿಳಾ ಕ್ರೀಟಾಪಟುಗಳಿಗೆ ಭಾರೀ ಸೋಂಕು ಎದುರಾಗಬಹುದು.

ಬಟ್ಟೆ ಒಣಗಿಸುವ ಯಂತ್ರದಲ್ಲಿ ಒಳ ಉಡುಪುಗಳನ್ನೂ ಒಣಗಿಸುವುದು

ಬಟ್ಟೆ ಒಣಗಿಸುವ ಯಂತ್ರದಲ್ಲಿ ಒಳ ಉಡುಪುಗಳನ್ನೂ ಒಣಗಿಸುವುದು

ಇತರ ಬಟ್ಟೆಗಳ ಜೊತೆಗೇ, ಒಳ ಉಡುಪುಗಳನ್ನೂ ವಾಶಿಂಗ್ ಮೆಶೇನ್ ನಲ್ಲಿ ಒಗೆದು ಡ್ರೈಯರ್ ನಲ್ಲಿ ಒಣಗಿಸುವುದೇ ನೀವು ಇದುವರೆಗೆ ಅನುಸರಿಸಿಕೊಂಡು ಬರುತ್ತಿರುವ ವಿಧಾನವಾದರೆ ಇದೊಂದು ದೊಡ್ಡ ತಪ್ಪೇ ಆಗಿದೆ. ನಿಮ್ಮ ಒಳ ಉಡುಪುಗಳ ಒಳಗೆ ಬರೆದಿರುವ ಸೂಕ್ಷ್ಮ ಅಕ್ಷರಗಳ ವಿವರಗಳನ್ನು ಗಮನಿಸಿದರೆ "delicates" ಅಥವಾ "delicate fabric" ಎಂದು ಬರೆದಿರುತ್ತಾರೆ ಹಾಗೂ ಇವುಗಳನ್ನು ಪ್ರತ್ಯೇಕವಾಗಿ ಒಗೆಯಲು ನಿರ್ದೇಶನ ನೀಡಲಾಗಿರುತ್ತದೆ. ಒಳ ಉಡುಪುಗಳ ಉತ್ಪಾದಕರು ಕಾರಣವಿಲ್ಲದೇ ಈ ವಿವರಗಳನ್ನು ನೀಡಿರುವುದಿಲ್ಲ. ಏಕೆಂದರೆ ಒಳ ಉಡುಪುಗಳ ಬಟ್ಟೆಯನ್ನು ಹತ್ತಿಯ ಸಡಿಲವಾಗಿ ಸೇಯ್ದಿರುವ ನೂಲುಗಳಿಂದ ತಯಾರಿಸಲಾಗಿರುತ್ತದೆ ಹಾಗೂ ಇವುಗಳಲ್ಲಿ ತೇವಾಂಶಗಳನ್ನು ಹೀರಿಕೊಳ್ಳಲು ಹೆಚ್ಚಿನ ಪಿಷ್ಟ ಇರುವಂತೆ ಮಾಡಲಾಗಿರುತ್ತದೆ. ಇದೇ ಕಾರಣಕ್ಕೆ ಒಳ ಉಡುಪುಗಳನ್ನು ಬಿಸಿನೀರಿನಲ್ಲಿ ತೊಳೆಯಬಾರದು, ಬಿಸಿನೀರು ಪಿಶ್ಟವನ್ನು ಕರಗಿಸಿ ಬಟ್ಟೆಯನ್ನು ತೆಳುವಾಗಿಸುತ್ತದೆ. ಮಧ್ಯಮ ಬಿಸಿಯ ನೀರಿನಲ್ಲಿ ವಾಶಿಂಗ್ ಮೆಶೀನ್ ನಲ್ಲಿ ಇತರ ಬಟ್ಟೆಗಳೊಂದಿಗೆ ಒಗೆಯಬಹುದಾದರೂ, ಬಳಿಕ ಡ್ರೈಯರ್ ನಲ್ಲಿ ಒಣಗಿಸುವುದು ಮಾತ್ರ ದೊಡ್ಡ ತಪ್ಪು. ಏಕೆಂದರೆ ಬಟ್ಟೆಯನ್ನು ಥಟ್ಟನೇ ಒಣಗಿಸಲು ಅತಿ ಹೆಚ್ಚಿನ ತಾಪಮಾನದ ಬಳಕೆಯಾಗುತ್ತದೆ ಹಾಗೂ ಇವು ಹತ್ತಿಯ ನೂಲುಗಳನ್ನು ತುಂಡಾಗಿಸುತ್ತವೆ. ಅಲ್ಲದೇ ಒಳ ಉಡುಪನ್ನು ಬಿಗಿಯಾಗಿಸಲು ಬಳಸುವ ಎಲಾಸ್ಟಿಕ್ ನಲ್ಲಿರುವ ರಬ್ಬರ್ ಈ ಅತಿ ಬಿಸಿಗೆ ಸುಲಭವಾಗಿ ಕರಗುತ್ತದೆ ಹಾಗೂ ತನ್ನ ಗುಣವನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಒಂದೆರಡು ಒಗೆತಕ್ಕೇ ಇವು ಸಡಿಲವಾಗಿ, ನೆರಿಗೆನೆರಿಗೆಯಾಗಿ ಬಿಡುತ್ತವೆ. ಆದ್ದರಿಂದ ವಾಶಿಂಗ್ ಮೆಶೀನ್ ನಲ್ಲಿ ಸಾಮಾನ್ಯ ತಾಪಮಾನದ ನೀರಿನಲ್ಲಿ ಒಗೆದು ತೆರೆದ ವಾತಾವರಣದಲ್ಲಿ, ನೆರಳಿನಲ್ಲಿ, ತಂತಿಯ ಮೇಲೆ ಹರಡಿ ಒಣಗಿಸುವುದೇ ಉತ್ತಮ. ಸಾಮಾನ್ಯವಾಗಿ ಹತ್ತಿಯ ಬಟ್ಟೆಗಳನ್ನು ಒಂದು ಬದಿಯಲ್ಲಿ ಒಣಗಿಸಿದ ಕೊಂಚ ಹೊತ್ತಿನ ಬಳಿಕ ಬದಿಯನ್ನು ಬದಲಿಸಿ ಒಣಗಿಸಿದರೆ ಶೀಘ್ರವೇ ಒಣಗುತ್ತವೆ.

ಇಸ್ತ್ರಿ ಮಾಡದೇ ಧರಿಸುವುದು!!

ಇಸ್ತ್ರಿ ಮಾಡದೇ ಧರಿಸುವುದು!!

ಇದೊಂದು ಅತ್ಯಂತ ದೊಡ್ಡ ತಪ್ಪಾಗಿದೆ. ವಿಶೇಷವಾಗಿ ಮಳೆಗಾಲ ಅಥವಾ ತೇವಾಂಶ ಹೆಚ್ಚಿರುವ ದಿನಗಳಲ್ಲಿ ಒಣಗಲು ಹಾಕಿದ ಒಳ ಉಡುಪುಗಳ ಒಳ ಅಂಚುಗಳ ಭಾಗದಲ್ಲಿ ತೇವಾಂಶ ಕೆಲವು ವೈರಸ್ ಹಾಗೂ ಸೂಕ್ಷ್ಮಜೀವಿಗಳಿಗೆ ಮೊಟ್ಟೆಯಿಡಲು ಸೂಕ್ತವಾದ ತಾಣವಾಗಿದ್ದು ಇವುಗಳನ್ನು ಅವು ಧಾರಾಳವಾಗಿ ಬಳಸಿಕೊಳ್ಳುತ್ತವೆ. ಈ ಉಡುಪುಗಳು ಒಣಗಿದರೂ ಈ ಭಾಗದಲ್ಲಿರುವ ಮೊಟ್ಟೆಗಳು ಹಾಗೇ ಇದ್ದು ಧರಿಸಿದ ವ್ಯಕ್ತಿಯ ಮೈಶಾಖಕ್ಕೆ ಮರಿಗಳಾಗಿ ಸೋಂಕು ಹರಡಿಸಿ ರಕ್ತ ಕುಡಿಯಬಹುದು. ಆದ್ದರಿಂದ ಪ್ರತಿಬಾರಿಯೂ ಒಳ ಉಡುಪುಗಳನ್ನು ಒಗೆದು ಒಣಗಿಸಿದ ಬಳಿಕ ಮಧ್ಯಮ ಬಿಸಿಯನ್ನು ಬಳಸಿ ಒಳ ಉಡುಪುಗಳನ್ನೂ ಹೊರಭಾಗಕ್ಕೂ, ಒಳಭಾಗಕ್ಕೂ ಇಸ್ತ್ರಿ ಮಾಡಬೇಕು. ವಿಶೇಷವಾಗಿ, ವಿ ಆಕಾರದ ಭಾಗದಲ್ಲಿ, ಹೆಚ್ಚಿನ ಕಾಳಜಿ ವಹಿಸಬೇಕು. ಹೀಗೆ ಇಸ್ತ್ರಿ ಮಾಡಿದ ಉಡುಪುಗಳನ್ನು ಒಂದು ವಾರದೊಳಗೇ ಧರಿಸಬೇಕು. ಈ ಅವಧಿ ಹೆಚ್ಚಾದರೆ, ತೊಡುವ ಮುನ್ನ ಮತ್ತೊಮ್ಮೆ ಇಸ್ತ್ರಿ ಮಾಡಿಯೇ ಧರಿಸಬೇಕು. ವಿಶೇಷವಾಗಿ ಮಳೆಗಾಲದಲ್ಲಿ, ಕಪಾಟಿನ ಒಳಗೆ ಇಸ್ತ್ರಿ ಮಾಡಿಟ್ಟರೂ ತೇವಾಂಶ ಹೀರಿಕೊಳ್ಳಬಹುದು. ಹಾಗಾಗಿ ಅಂದಂದೇ ತೊಡುವ ಮುನ್ನವೇ ಇಸ್ತ್ರಿ ಮಾಡಿ ಧರಿಸಬೇಕು.

English summary

Underwear mistakes you're probably making

There's a good chance you don't put a lot of thought into your underwear when you get dressed every day. After all, you aren't a Victoria's Secret model. You're probably worrying more about the clothes that go on top of those underwear, right? Turns out, that might not be the best move — your lady bits deserve some consideration, and grabbing the wrong pair can have some seriously unpleasant side effects. Here are the underwear mistakes you should avoid the next time you get dressed.
Story first published: Sunday, July 22, 2018, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more