For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಗ್ಲಾಸ್ ಮಜ್ಜಿಗೆ ಕುಡಿಯಿರಿ, ವೈದ್ಯರಿಂದ ದೂರ ಇರಿ!

By Deepu
|

ಮಾರ್ಚ್ ಬಂತೆಂದರೆ ಮಕ್ಕಳ ಪರೀಕ್ಷೆಯ ಜೊತೆಗೇ ಬೇಸಿಗೆಯೂ ಕಾಲಿಡುತ್ತದೆ. ಇದುವರೆಗೆ ತಂಪಾಗಿದ್ದು ಚಳಿ ಅನ್ನಿಸುತ್ತಿದ್ದ ದಿನಗಳೆಲ್ಲಾ ಭಗ ಭಗ ಎನಿಸಲಿವೆ. ಹಗಲಿನ ತಾಪಮಾನ ಏರುತ್ತಿದ್ದಂತೆಯೇ ಸುಡುವ ಬಿಸಿಲು, ಬೆವರು, ಧೂಳು ಎಲ್ಲವೂ ಬಿಸಿಲಿನಲ್ಲಿ ಹೊರಗೆ ನಡೆಯುವುದನ್ನು ತ್ರಾಸದಾಯಕವಾಗಿಸುತ್ತವೆ. ಈ ಕ್ಷಣಕ್ಕೆ ತಂಪಾದ ಐಸ್ ಕ್ರೀಂ, ಲಸ್ಸಿ, ಸೋದಾದಂತಹ ತಂಪುಪಾನೀಯ ಮೊದಲಾದವುಗಳ ಮಾರಾಟ ಗಗನಕ್ಕೇರುತ್ತದೆ.

ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

ಅದರಲ್ಲೂ ಫ್ರಿಜ್ಜಿನಲ್ಲಿಟ್ಟಿದ್ದ ಅತಿ ತಂಪಾದ ಅಂದರೆ ಚಿಲ್ಡ್ ಎಂದು ಸರಿಸುಮಾರು ಮಂಜುಗಡ್ಡೆಯಾಗುವಷ್ಟು ತಣ್ಣಗಾಗಿಸಿದ ಸೋಡಾ ಆಧಾರಿತ ಲಘು ಪಾನೀಯಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ ಐಸ್ ಕ್ರೀಂ ಲಸ್ಸಿಗಳು ಅಗತ್ಯಕ್ಕೂ ಹೆಚ್ಚಿನ ಕ್ಯಾಲೋರಿ, ಕೊಬ್ಬುಗಳನ್ನು ನೀಡುವ ಮೂಲಕ ಆರೋಗ್ಯ ಕೆಡಿಸಿದರೆ ಈ ಬುರುಗು ಬರುವ ತಂಪು ಪಾನೀಯಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ಕೆಡಿಸುತ್ತವೆ. ಹಾಗಾಗಿ ಇದೆಲ್ಲಾವನ್ನು ಬಿಟ್ಟು ದಿನಾ ಮಜ್ಜಿಗೆ ಕುಡಿದರೆ, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಬನ್ನಿ, ಈ ಬೇಸಿಗೆಯಲ್ಲಿ ನಮ್ಮ ದೇಶದ್ದೇ ಆದ ಆರೋಗ್ಯಕರ, ಸಾಂಪ್ರಾದಾಯಿಕ ಪೇಯವನ್ನೇ ಕುಡಿಯೋಣ, ನಮ್ಮತನವನ್ನೇ ಮರೆಯೋಣ...

ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದೇ ಪ್ರಸಿದ್ಧಿ

ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದೇ ಪ್ರಸಿದ್ಧಿ

ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟ ಮಜ್ಜಿಗೆ ಬೇಸಿಗೆಯ ದಣಿವನ್ನು ಆರಿಸಲು ಉತ್ತಮವಾಗಿದೆ. ಮಜ್ಜಿಗೆ ಎಂದರೆ ವಾಸ್ತವವಾಗಿ ಮೊಸರಿನಿಂದ ಬೆಣ್ಣೆಯನ್ನು ಕಡೆದು ತೆಗೆದ ಬಳಿಕ ಉಳಿದ ನೀರು. ಆದರೆ ಇದು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊಸರಿಗೆ ಕೊಂಚ ನೀರು ಸೇರಿಸಿ ತೆಳ್ಳಗಾಗಿಸಿ, ಇದಕ್ಕೆ ಹಸಿಮೆಣಸು, ಉಪ್ಪು, ಇಂಗು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ. ಅಲ್ಲದೇ ಬೆಳ್ಳುಳ್ಳಿ ಮೊದಲಾದವು ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.

ಹೊಟ್ಟೆ ಉಬ್ಬರಿಕೆ, ಅಜೀರ್ಣಗಳಿಗೆಲ್ಲಾ ಒಳ್ಳೆಯದು...

ಹೊಟ್ಟೆ ಉಬ್ಬರಿಕೆ, ಅಜೀರ್ಣಗಳಿಗೆಲ್ಲಾ ಒಳ್ಳೆಯದು...

ಭಾರತೀಯ ಅಡುಗೆಗಳನ್ನು ಮಸಾಲೆಗಳಿಲ್ಲದೇ ಊಹಿಸಲೂ ಸಾಧ್ಯವಿಲ್ಲ. ಈ ರುಚಿಗೆ ಮನಸೋತವರು ಕೊಂಚ ಹೆಚ್ಚಿನ ಪ್ರಮಾಣವನ್ನು ಹೊಟ್ಟೆಗಿಳಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿಯೂ ಅತಿಥಿಗಳು ಹೆಚ್ಚು ಉಂಡಷ್ಟೂ ಹೆಚ್ಚು ಸಂತೋಷಪಡುವುದರಿಂದ ಅತಿಥಿಗಳಿಗೆ ಬೇಡ ಬೇಡ ಎಂದರೂ ಇನ್ನೂ ಕೊಂಚ ಬಡಿಸುತ್ತೇವೆ. ಕಾರಣವಾಗಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುತ್ತದೆ. ಇವು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು.

ಹೊಟ್ಟೆ ಉಬ್ಬರಿಕೆ, ಅಜೀರ್ಣಗಳಿಗೆಲ್ಲಾ ಒಳ್ಳೆಯದು...

ಹೊಟ್ಟೆ ಉಬ್ಬರಿಕೆ, ಅಜೀರ್ಣಗಳಿಗೆಲ್ಲಾ ಒಳ್ಳೆಯದು...

ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ. ಆದ್ದರಿಂದ ಊಟದ ಕಡೆಯ ಆಹಾರವಾಗಿ ಮಜ್ಜಿಗೆಯನ್ನು ಸೇವಿಸುವ ಮೂಲಕ ಮಸಾಲೆಗಳ ಕಾರಣ ಎದುರಾಗಬಹುದಾಗಿದ್ದ ಉರಿ, ಆಮ್ಲೀಯತೆ, ಹೊಟ್ಟೆ ಉಬ್ಬರಿಕೆ ಮೊದಲಾದವು

ದೇಹದ ಕೊಬ್ಬು ಕರಗಿಸುತ್ತದೆ

ದೇಹದ ಕೊಬ್ಬು ಕರಗಿಸುತ್ತದೆ

ಬೆಣ್ಣೆಯಿಂದ ಕೊಬ್ಬು ಬರುವುದಾದರೆ ಮೊಸರಿನಲ್ಲಿಯೂ ಕೊಬ್ಬು ಇರಬೇಕಲ್ಲವೇ? ಹೌದು, ಆದರೆ ಬೆಣ್ಣೆಯ ಕೊಬ್ಬಿಗೂ ಮೊಸರಿನ ಅಥವಾ ಮಜ್ಜಿಗೆಯ ಕೊಬ್ಬಿಗೂ ವ್ಯತ್ಯಾಸವಿದೆ. ಬೆಣ್ಣೆಯ ಕೊಬ್ಬು ಸಾಂದ್ರೀಕೃತವಾಗಿದ್ದು ಶರೀರದಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ. ಆದರೆ ಮಜ್ಜಿಗೆಯ ಕೊಬ್ಬು ಸಂಗ್ರಹಗೊಳ್ಳುವ ಮೊದಲೇ ಜೀರ್ಣವಾಗಿ ಹೋಗುತ್ತದೆ. ಏಕೆಂದರೆ ಈ ಪೋಷಕಾಂಶಗಳು ಆಹಾರದಲ್ಲಿದ್ದ ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಉಪಯೋಗವಾಗುವುದರಿಂದ ತೂಕ ಏರದಿರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ಮತ್ತು ಜೀರ್ಣಾಂಗಗಳ ಒಳಭಾಗಕ್ಕೆ ಮಸಾಲೆ ಅಥವಾ ಜಿಡ್ಡು ಅಂಟಿಕೊಳ್ಳದಂತೆ ತಡೆಯುವ ಮೂಲಕ ಇದರಿಂದಾಗುವ ತೊಂದರೆಯಾಗುವುದರಿಂದ ರಕ್ಷಿಸುತ್ತದೆ.

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಕ್ಯಾನ್ಸರ್ ತಡೆಯಲು, ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಮತ್ತು ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಹೌದು, ನಿತ್ಯವೂ ಮಜ್ಜಿಗೆಯನ್ನು ಸೇವಿಸುವ ಮೂಲಕ ದೇಹಕ್ಕೆ ಹಲವು ರೀತಿಯ ಲಾಭಗಳಿವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವುದು, ರಕ್ತದೊತ್ತಡ ಸಮರ್ಪಕವಾಗಿರುವಂತೆ ನೋಡಿಕೊಳ್ಳುವುದು ಮೊದಲಾದವು ನೇರವಾದ ಲಾಭಗಳಾಗಿವೆ.

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ಹಲವು ರೀತಿಯ ಕ್ಯಾನ್ಸರ್ ಬರುವುದರಿಂದಲೂ ತಡೆಯುತ್ತದೆ. ಇದರಲ್ಲಿರುವ ಬಯೋ ಆಕ್ಟಿವ್ ಪ್ರೋಟೀನುಗಳು ಬ್ಯಾಕ್ಟೀರಿಯಾನಿವಾರಕ, ವೈರಸ್ ನಿವಾರಕ, ಕ್ಯಾನ್ಸರ್ ನಿವಾರಕ ಗುಣಗಳನ್ನು ಹೊಂದಿದ್ದು ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತದೆ.

ಶರೀರದ ನಿರ್ಜಲೀಕರಣವನ್ನು ಹೋಗಲಾಡಿಸಲು

ಶರೀರದ ನಿರ್ಜಲೀಕರಣವನ್ನು ಹೋಗಲಾಡಿಸಲು

ನೀರುಮಜ್ಜಿಗೆಯಲ್ಲಿ ಉಪ್ಪು, ನೀರು, ಮೊಸರು, ಹಾಗೂ ಸಾ೦ಬಾರ ಪದಾರ್ಥಗಳಿರುತ್ತವೆ. ಇವೆಲ್ಲವೂ ಬೆರೆತುಕೊ೦ಡಾಗ ಒ೦ದು ಅತ್ಯ೦ತ ಸ್ವಾಧಿಷ್ಟವಾದ ಪೇಯವು ಸಿದ್ಧಗೊಳ್ಳುತ್ತದೆ. ಎಲೆಕ್ಟ್ರೋಲೈಟ್ ಗಳು ಹಾಗೂ ಅಗಾಧ ಪ್ರಮಾಣದಲ್ಲಿ ನೀರನ್ನು ಅಡಕವಾಗಿಸಿಕೊ೦ಡಿರುವ ನೀರು ಮಜ್ಜಿಗೆಯನ್ನು, ನಿರ್ಜಲೀಕರಣಗೊ೦ಡಿರುವ ನಿಮ್ಮ ಶರೀರಕ್ಕೆ ಅತ್ಯುತ್ತಮ ಕೊಡುಗೆಯ ರೂಪದಲ್ಲಿ ನೀವು ಕೊಡಬಹುದು.

ಶರೀರದ ನಿರ್ಜಲೀಕರಣವನ್ನು ಹೋಗಲಾಡಿಸಲು

ಶರೀರದ ನಿರ್ಜಲೀಕರಣವನ್ನು ಹೋಗಲಾಡಿಸಲು

ಬೇಸಿಗೆಯ ಅವಧಿಯಲ್ಲಿ ಬಿಸಿಲ ತಾಪವು ನಿಮ್ಮನ್ನು ಆಯಾಸಗೊಳಿಸಿ ಹೈರಾಣವಾಗಿಸಿದಾಗ, ನಿಮ್ಮ ಶರೀರಕ್ಕೆ ಅಗತ್ಯ ಬೇಕಾಗುವ ಉಲ್ಲಾಸವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಒ೦ದು ಲೋಟದಷ್ಟು ನೀರುಮಜ್ಜಿಗೆಯನ್ನು ಖ೦ಡಿತ ನಿಮ್ಮ ಶರೀರಕ್ಕೆ ಒದಗಿಸಿರಿ.

English summary

Ultimate benefits of buttermilk for health during Summer

Buttermilk is known by many different names in different parts of India such as Chaas, Chaach, Takramrut, Mattha, etc. Even the process of preparing buttermilk varies in all parts of India; however, the goodness remains the same. Hence, read on to know more about some amazing health benefits of buttermilk and remember to pick a chilled glass of it to quickly cool down your system in summers.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more