For Quick Alerts
ALLOW NOTIFICATIONS  
For Daily Alerts

ಟ್ಯೂಬರಸ್ ಸ್ಕ್ಲೆರೋಸಿಸ್ ರೋಗದ ಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನಗಳು

|

ಅಪರೂಪದ ಅನುವಂಶೀಯ ಸಮಸ್ಯೆಗಳ ಕಾರಣದಿಂದ ದೇಹದ ತುಂಬೆಲ್ಲ ಮೃದುವಾದ ಗಂಟುಗಳು ಕಾಣಿಸಿಕೊಳ್ಳುವ ರೋಗವನ್ನು ಟ್ಯೂಬರಸ್ ಸ್ಕ್ಲೆರೋಸಿಸ್ ಎಂದು ಕರೆಯಲಾಗುತ್ತದೆ. ಇವು ಅಸಹಜವಾಗಿ ಹೆಚ್ಚುವರಿಯಾಗಿ ಬೆಳೆದ ಕ್ಯಾನ್ಸರಕಾರಕವಲ್ಲದ ಸಾಮಾನ್ಯ ಜೀವಕೋಶಗಳಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಈ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಆದರೆ ಸಣ್ಣ ವಯಸ್ಸಿನಲ್ಲಿ ಈ ರೋಗದ ಲಕ್ಷಣಗಳು ತೀರಾ ಸೌಮ್ಯವಾಗಿರುವುದರಿಂದ, ಬಹುತೇಕ ಬಾರಿ ಪ್ರೌಢಾವಸ್ಥೆಗೆ ಬರುವವರೆಗೆ ಈ ರೋಗವು ಪತ್ತೆ ಆಗುವುದಿಲ್ಲ.

ಗಂಭೀರ ಸ್ವರೂಪದ ಟ್ಯೂಬರಸ್ ಸ್ಕ್ಲೆರೋಸಿಸ್‌ನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕೆಲ ಸ್ವರೂಪದ ಅಂಗ ಊನತೆಯು ಉಂಟಾಗಬಹುದು. ಈ ರೋಗ ನಿವಾರಣೆಗೆ ಈವರೆಗೂ ಸೂಕ್ತ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲವಾದರೂ, ರೋಗದಿಂದುಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಸಾಕಷ್ಟು ಮಟ್ಟದಲ್ಲಿ ಕಡಿಮೆ ಮಾಡಬಲ್ಲ ಔಷಧಿಗಳು ಲಭ್ಯವಿವೆ. ಟ್ಯೂಬರಸ್ ಸ್ಕ್ಲೆರೋಸಿಸ್ ಕಾಂಪ್ಲೆಕ್ಸ್ ಎಂದೂ ಕರೆಯಲಾಗುವ ಈ ರೋಗವು ನ್ಯೂರೊಕ್ಯುಟೆನಿಯಸ್ ವರ್ಗಕ್ಕೆ ಸೇರಿದ ಎರಡನೆ ಅತಿ ಸಾಮಾನ್ಯ ರೋಗವಾಗಿದೆ. ಈ ರೋಗವು ಅಟೊಸೊಮಲ್ ಡಾಮಿನೆಂಟ್ ಮಾದರಿಯಲ್ಲಿ (ಕ್ರೊಮೊಸೋಮ್‌ಗಳಲ್ಲಿರುವ ಪ್ರಬಲ ಜೀನ್‌ಗಳ ಮೂಲಕ) ಅನುವಂಶಿಕವಾಗಿ ವರ್ಗಾವಣೆಯಾಗುತ್ತದೆ.

ಟ್ಯೂಬರಸ್ ಸ್ಕ್ಲೆರೋಸಿಸ್‌ಗೆ ಕಾರಣಗಳೇನು?

ಜೀನ್ಸ್‌ಗಳ ರೂಪಾಂತರದಿಂದ (ಮ್ಯುಟೇಶನ್) ಟ್ಯೂಬರಸ್ ಸ್ಕ್ಲೆರೋಸಿಸ್ ರೋಗ ಉಂಟಾಗುತ್ತದೆ. ಟಿಎಸ್‌ಸಿ೧ ಮತ್ತು ಟಿಎಸ್‌ಸಿ2 ಮಾದರಿಯ ಜೀನ್‌ಗಳು ಈ ರೋಗಕ್ಕೆ ಕಾರಣವಾಗಿವೆ. ಈ ಎರಡರಲ್ಲಿ ಯಾವುದಾದರೊಂದು ಜೀನ್‌ನಲ್ಲಿ ದೋಷವಿದ್ದರೆ ರೋಗಕ್ಕೆ ಕಾರಣವಾಗುತ್ತದೆ. ಟಿಎಸ್‌ಸಿ೧ ಜೀನ್ ಕ್ರೊಮೋಸೋಮ್ ೯ರ ಮೇಲಿರುತ್ತದೆ ಮತ್ತು ಇದು ಹಮಾರ್ಟಿನ್ ಎಂಬ ಪ್ರೊಟೀನ್ ಅನ್ನು ಉತ್ಪಾದಿಸುತ್ತದೆ.

ಟ್ಯೂಬರಸ್ ಸ್ಕ್ಲೆರೋಸಿಸ್‌ನ ಲಕ್ಷಣಗಳು

ಬಹುತೇಕ ಸಂದರ್ಭಗಳಲ್ಲಿ ಟ್ಯೂಬರಸ್ ಸ್ಕ್ಲೆರೋಸಿಸ್ ರೋಗವು ಕಣ್ಣುಗಳು, ಕಿಡ್ನಿ, ಶ್ವಾಸಕೋಶ, ಚರ್ಮ, ಹೃದಯ ಮತ್ತು ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಹದ ಜಾಗವನ್ನು ಆಧರಿಸಿ ರೋಗ ಲಕ್ಷಣಗಳು ಸೌಮ್ಯ ಅಥವಾ ಗಂಭೀರವಾಗಿರಬಹುದು. ಈ ಕೆಳಗೆ ತಿಳಿಸಲಾದ ರೋಗ ಲಕ್ಷಣಗಳು ಕಂಡುಬರುತ್ತವೆ.

Most Read: ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?

ಮೆದುಳಿನ ಕಾರ್ಯಕ್ಕೆ ಅಡ್ಡಿ

ಮೆದುಳಿನ ಕಾರ್ಯಕ್ಕೆ ಅಡ್ಡಿ

ಮೆದುಳಿನಲ್ಲಿ ಟ್ಯೂಬರಸ್ ಸ್ಕ್ಲೆರೋಸಿಸ್‌ನಿಂದ ಅಸಹಜ ಬೆಳವಣಿಗೆ ಆಗಿದ್ದರೆ, ಮೆದುಳಿನ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತದೆ. ಇದು ರೋಗದ ಮೊದಲ ಲಕ್ಷಣವಾಗಿದೆ. ಮಕ್ಕಳಲ್ಲಿಯೂ ಈ ಲಕ್ಷಣಗಳು ಕಂಡುಬರಬಹುದು.

ಚರ್ಮದ ಸಮಸ್ಯೆಗಳು

ಚರ್ಮದ ಸಮಸ್ಯೆಗಳು

ಚರ್ಮದ ಮೇಲೆ ತೆಳು ಬಣ್ಣದ ಪ್ಯಾಚ್‌ಗಳು ಕಾಣಿಸಿಕೊಳ್ಳಬಹುದು. ಉಗುರುಗಳ ಸುತ್ತ ಕೆಂಪಾದ ಉಬ್ಬುಗಳು ಉಂಟಾಗಬಹುದು ಹಾಗೂ ಉಗುರಿನ ಸುತ್ತ ದಪ್ಪ ಚರ್ಮದ ಬೆಳವಣಿಗೆ ಆಗಬಹುದು. ಮುಖದ ಮೇಲೆ ಮೊಡವೆಯ ರೀತಿ ಇದು ಕಾಣಿಸಿಕೊಳ್ಳುತ್ತದೆ.

Most Read: ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು

ಸಾಮರ್ಥ್ಯ ಕುಗ್ಗುವಿಕೆ

ಸಾಮರ್ಥ್ಯ ಕುಗ್ಗುವಿಕೆ

ಬೆಳವಣಿಗೆಯು ಕುಂಠಿತವಾಗಬಹುದು ಹಾಗೂ ಕಲಿಯುವಿಕೆಯ ಸಮಸ್ಯೆಗಳು ತಲೆದೋರಬಹುದು. ಮಾನಸಿಕ ಆರೋಗ್ಯ ಸಹ ಏರುಪೇರಾಗಬಹುದು.

ವರ್ತನೆಯ ಸಮಸ್ಯೆಗಳು

ವರ್ತನೆಯ ಸಮಸ್ಯೆಗಳು

ರೋಗದಿಂದ ಬಾಧಿತನಾದ ವ್ಯಕ್ತಿಯು ಅತಿಯಾದ ಚಟುವಟಿಕೆಗಳನ್ನು ತೋರಬಹುದು. ಜೊತೆಗೆ ತನಗೆ ತಾನೇ ಗಾಯ ಮಾಡಿಕೊಳ್ಳುವ ಹಾಗೇ ವಿಪರೀತವಾಗಿ ವರ್ತಿಸಬಹುದು. ಭಾವನಾತ್ಮಕ ಹಾಗೂ ಸಾಮಾಜಿಕವಾಗಿಯೂ ವರ್ತನೆಯಲ್ಲಿ ಬದಲಾವಣೆಗಳಾಗಬಹುದು.

ಕಿಡ್ನಿ ಸಮಸ್ಯೆ

ಕಿಡ್ನಿ ಸಮಸ್ಯೆ

ಕಿಡ್ನಿಗಳಲ್ಲಿ ಕ್ಯಾನ್ಸರಕಾರಕವಲ್ಲದ ಗಂಟು ಬೆಳವಣಿಗೆ ಆಗಬಹುದು. ವಯಸ್ಸಾದಂತೆ ಇದರ ಬೆಳವಣಿಗೆ ಹೆಚ್ಚಾಗುತ್ತದೆ.

ಶ್ವಾಸಕೋಶದ ಸಮಸ್ಯೆ

ಶ್ವಾಸಕೋಶದ ಸಮಸ್ಯೆ

ಶ್ವಾಸಕೋಶದಲ್ಲಿ ಅಸಹಜ ಬೆಳವಣಿಗೆ ಆದಲ್ಲಿ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Most Read: ಮೊಣಕಾಲು ನೋವಿರುವವರು ಮಾಡಬೇಕಾದ, ಹಾಗೂ ಮಾಡಬಾರದ ಸಂಗತಿಗಳು

ಹೃದಯ ಸಮಸ್ಯೆ

ಹೃದಯ ಸಮಸ್ಯೆ

ಹೃದಯದಲ್ಲಿ ರೋಗದ ಬೆಳವಣಿಗೆ ಮಗು ಹುಟ್ಟಿದಾಗ ಹೆಚ್ಚಾಗಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತದೆ.

ಕಣ್ಣಿನ ಸಮಸ್ಯೆ

ಕಣ್ಣಿನ ಸಮಸ್ಯೆ

ರೆಟಿನಾ ಮೇಲೆ ಟ್ಯೂಬರಸ್ ಸ್ಕ್ಲೆರೋಸಿಸ್ ಬೆಳವಣಿಗೆ ಆಗಬಹುದು. ಆದರೆ ಇದರಿಂದ ಕಣ್ಣಿನ ದೃಷ್ಟಿಗೆ ಸಾಮಾನ್ಯವಾಗಿ ತೊಂದರೆ ಆಗುವುದಿಲ್ಲ. ಬಿಳಿಯ ಪ್ಯಾಚ್‌ಗಳ ರೀತಿ ಇದು ಕಾಣಿಸುತ್ತದೆ.

ಟ್ಯೂಬರಸ್ ಸ್ಕ್ಲೆರೋಸಿಸ್ ರೋಗ ಪತ್ತೆ ಹೇಗೆ?

ಟ್ಯೂಬರಸ್ ಸ್ಕ್ಲೆರೋಸಿಸ್ ರೋಗ ಪತ್ತೆ ಹೇಗೆ?

ರೋಗ ಲಕ್ಷಣಗಳನ್ನು ಅಧರಿಸಿ ತಜ್ಞ ವೈದ್ಯರು ರೋಗವನ್ನು ಪತ್ತೆ ಹಚ್ಚುತ್ತಾರೆ. ಪ್ರಾಥಮಿಕವಾಗಿ ದೈಹಿಕ ಪರಿಶೀಲನೆಯಿಂದಲೇ ರೋಗ ಪತ್ತೆ ಕಾರ್ಯ ಆರಂಭಿಸಲಾಗುತ್ತದೆ. ಕೆಲ ಬಾರಿ ಜೆನೆಟಿಕ್ ಟೆಸ್ಟ್‌ಗಳನ್ನೂ ಮಾಡಲಾಗುತ್ತದೆ.

ಸೀಜರ್ ಪರಿಶೀಲನೆ

ಸೀಜರ್ ಪರಿಶೀಲನೆ

ಮಕ್ಕಳಲ್ಲಿ ರೋಗ ಪತ್ತೆಗಾಗಿ ಎಲೆಕ್ಟ್ರೊಎನ್ಸೆಫೆಲೊಗ್ರಾಂ ಪರೀಕ್ಷೆ ಮಾಡಲಾಗುತ್ತದೆ. ಮೆದುಳಿನಲ್ಲಿ ವಿದ್ಯುತ್ಕಾಂತೀಯ ಅಲೆಗಳನ್ನು ಈ ಮೂಲಕ ಪರೀಕ್ಷಿಸಲಾಗುತ್ತದೆ.

ಮೆದುಳು, ಶ್ವಾಸಕೋಶ, ಕಿಡ್ನಿಗಳ ಪರಿಶೀಲನೆ : ಉಲ್ಟ್ರಾಸೌಂಡ್, ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ಗಳ ಮೂಲಕ ಈ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಹೃದಯ ತಪಾಸಣೆ : ಸಾಮಾನ್ಯವಾಗಿ ಎಕೊಕಾರ್ಡಿಯೊಗ್ರಾಂ ಹಾಗೂ ಎಲೆಕ್ಟ್ರೊಕಾರ್ಡಿಯೋಗ್ರಾಂ ಮೂಲಕ ರೋಗ ಪತ್ತೆ ಮಾಡಲಾಗುತ್ತದೆ.

Most Read: ನೀರಿನಲ್ಲಿ ನೆನೆಸಿಟ್ಟ 'ಮೆಂತೆ ಕಾಳಿನ' ಆರೋಗ್ಯಕಾರಿ ಪ್ರಯೋಜನಗಳು

ಕಣ್ಣುಗಳ ತಪಾಸಣೆ

ಕಣ್ಣುಗಳ ತಪಾಸಣೆ

ಮ್ಯಾಗ್ನಿಫೈಯಿಂಗ್ ಲೆನ್ಸ್ ಹಾಗೂ ಬೆಳಕಿನ ಮೂಲಕ ರೆಟಿನಾವನ್ನು ಪರೀಕ್ಷೆ ಮಾಡಲಾಗುತ್ತದೆ.

ಮಾನಸಿಕ ಆರೋಗ್ಯ, ಭಾವನಾತ್ಮಕ ಹಾಗೂ ವರ್ತನೆ ಬದಲಾವಣೆ : ಅವಶ್ಯಕತೆ ಕಂಡಲ್ಲಿ ಮಾನಸಿಕ ರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ.

ಟ್ಯೂಬರಸ್ ಸ್ಕ್ಲೆರೋಸಿಸ್ ಗುಣಪಡಿಸುವುದು ಹೇಗೆ?

ಟ್ಯೂಬರಸ್ ಸ್ಕ್ಲೆರೋಸಿಸ್ ಗುಣಪಡಿಸುವುದು ಹೇಗೆ?

ಈ ರೋಗಕ್ಕೆ ನಿರ್ದಿಷ್ಟ ರೋಗ ನಿವಾರಣೆ ವಿಧಾನಗಳು ಇಲ್ಲವಾದರೂ ಲಕ್ಷಣಗಳನ್ನು ಆಧರಿಸಿ ರೋಗವನ್ನು ನಿಯಂತ್ರಿಸಬಹುದು.

ಔಷಧಿ : ವ್ಯಕ್ತಿಯು ಸೀಜರ್‌ನಿಂದ ಬಳಲುತ್ತಿದ್ದರೆ ಸೀಜರ್ ವಿರೋಧಿ ಔಷಧಗಳನ್ನು ನೀಡಲಾಗುತ್ತದೆ. ಒಂದು ವೇಳೆ ಕಿಡ್ನಿ ಹಾಗೂ ಮೆದುಳಿನಲ್ಲಿ ಅಸಹಜ ಬೆಳವಣಿಗೆ ಆಗಿದ್ದಲ್ಲಿ ಇದನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಯಲು ಸಾಧ್ಯವಿಲ್ಲ. ಎವೆರೊಲಿಮಸ್ ಎಂಬ ಔಷಧಿಯ ಮೂಲಕ ಇದನ್ನು ನಿವಾರಿಸಬಹುದು. ಚರ್ಮದ ಮೇಲೆ ಮೊಡವೆ ರೀತಿ ಲಕ್ಷಣಗಳಿದ್ದರೆ ಸಿರೊಲಿಮಸ್ ಎಂಬ ಕ್ರೀಂ ಹಚ್ಚುವ ಮೂಲಕ ಗುಣಪಡಿಸಬಹುದು.

ಶಸ್ತ್ರಚಿಕಿತ್ಸೆ : ಯಾವುದೇ ಅಸಹಜ ಬೆಳವಣಿಗೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು. ಮೆದುಳಿನಲ್ಲಿನ ಅಸಹಜ ಬೆಳವಣಿಗೆಗಳು ಔಷಧಿಯಿಂದ ಗುಣವಾಗದಿದ್ದರೆ ಆಗ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಲಾಗುತ್ತದೆ. ಇನ್ನು ಚರ್ಮವನ್ನು ಮೊದಲಿನಂತಾಗಿಸಲು ಡರ್ಮಾಬ್ರೇಸಿನ್ ಅಥವಾ ಲೇಸರ್ ಚಿಕಿತ್ಸೆ ಬಳಸಲಾಗುತ್ತದೆ.

ಥೆರಪಿ : ವಿಶೇಷ ಅಗತ್ಯದ ಮಕ್ಕಳಲ್ಲಿ ಮಾತು, ದೈಹಿಕ ಮತ್ತು ವರ್ತನೆಗೆ ಸಂಬಂಧಿಸಿದ ಥೆರಪಿ ನೀಡಬೇಕಾಗುತ್ತದೆ. ಇದರಿಂದ ನಿತ್ಯದ ಕಾರ್ಯಗಳನ್ನು ಸಾಮಾನ್ಯವಾಗಿ ಕೈಗೊಳ್ಳುವಂತೆ ಮಕ್ಕಳಿಗೆ ಸಹಾಯವಾಗುತ್ತದೆ.

ಶೈಕ್ಷಣಿಕ ಹಾಗೂ ತರಬೇತಿ ಸೇವೆಗಳು: ಬೆಳವಣಿಗೆ ಹಾಗೂ ವರ್ತನೆಯಲ್ಲಿ ಸಮಸ್ಯೆ ಹೊಂದಿರುವ ಮಕ್ಕಳಿಗೆ ಇದು ಅವಶ್ಯಕವಾಗುತ್ತದೆ. ಇಂಥ ಸಾಮಾಜಿಕ ಹಾಗೂ ಪುನರ್ವಸತಿ ಯೋಜನೆಗಳು ಜೀವನಪರ್ಯಂತ ಬೇಕಾಗಬಹುದು.

Most Read: ಬೆಳ್ಳುಳ್ಳಿ ಬಳಸಿ ತ್ವಚೆಯ ಮೇಲಿನ ಮಚ್ಚೆ ನಿವಾರಿಸಲು ಮನೆಮದ್ದುಗಳು

ವರ್ತನೆಯನ್ನು ನಿಭಾಯಿಸುವುದು

ವರ್ತನೆಯನ್ನು ನಿಭಾಯಿಸುವುದು

ಯಾವುದೇ ರೀತಿಯ ಖಿನ್ನತೆಗೆ ಒಳಗಾಗದಂತೆ ರೋಗದೊಂದಿಗೆ ಹೊಂದಿಕೊಂಡು ಸಾಮಾನ್ಯವಾಗಿ ಬದುಕುವುದು ಮಗುವಿಗೆ ಕಷ್ಟಕರವಾಗಬಹುದು. ಇಂಥ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಅವಶ್ಯಕತೆ ಇರುತ್ತದೆ. ಮಾನಸಿಕ ತಜ್ಞರು ಮಗುವಿನ ಭಾವನಾತ್ಮಕ, ವರ್ತನೆಯ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಲ್ಲರು ಹಾಗೂ ಲಕ್ಷಣಗಳನ್ನು ಆಧರಿಸಿ ಉಪಚಾರ ನೀಡಬಲ್ಲರು.

ಟ್ಯೂಬರಸ್ ಸ್ಕ್ಲೆರೋಸಿಸ್ ಮಾರಣಾಂತಿಕವೆ?

ಟ್ಯೂಬರಸ್ ಸ್ಕ್ಲೆರೋಸಿಸ್ ಮಾರಣಾಂತಿಕವೆ?

ಟ್ಯೂಬರಸ್ ಸ್ಕ್ಲೆರೋಸಿಸ್‌ನಿಂದ ಗಂಟು ಬೆಳೆದು ಮೆದುಳಿನಲ್ಲಿ ಸ್ಟೇಟಸ್ ಎಪಿಲೆಕ್ಟಿಕಸ್ ಎಂಬ ಸಮಸ್ಯೆ ತಲೆದೋರುತ್ತದೆ. ಇಂಥ ಪರಿಸ್ಥಿತಿ ಮಾರಣಾಂತಿಕವಾಗಬಹುದು. ಅಲ್ಲದೆ ಮೂತ್ರಪಿಂಡ ವೈಫಲ್ಯ ಹಾಗೂ ಬ್ರಾಂಕೊ ನ್ಯುಮೋನಿಯಾ ಆಗಬಹುದು. ಇನ್ನು ಶ್ವಾಸಕೋಶದಲ್ಲಿ ಉಂಟಾಗುವ ಅಸಹಜ ಬೆಳವಣಿಗೆಯಿಂದ ಆಯುಷ್ಯವು ಕಡಿಮೆಯಾಗಬಹುದು.

English summary

Tuberous Sclerosis: Symptoms, And Treatment

A rare genetic disorder that results in benign tumours on many parts of the body is known as tuberous sclerosis. These are the noncancerous overgrowth of the normal tissue. This disorder is most likely to be detected during infancy. However, the signs of this ailment might be so mild that one could miss identifying the disorder until adulthood. Severe cases of tuberous sclerosis can cause serious disabilities in the affected person.
Story first published: Tuesday, October 16, 2018, 15:12 [IST]
X
Desktop Bottom Promotion