Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಜ್ಞಾಪಕಶಕ್ತಿ ಹೆಚ್ಚಲು, ತಪ್ಪದೇ ಇಂತಹ ಆಹಾರಗಳನ್ನು ದಿನನಿತ್ಯ ಸೇವಿಸಿ
ಆಧುನಿಕ ತಂತ್ರಜ್ಞಾನಗಳು ನಮಗೆ ಎಷ್ಟು ಲಾಭವನ್ನು ಉಂಟು ಮಾಡುತ್ತವೆಯಾ, ಅಷ್ಟೇ ಹಾನಿಯನ್ನು ಉಂಟು ಮಾಡುವುದು. ಅದರಲ್ಲೂ ಪ್ರಮುಖವಾಗಿ ಮನುಷ್ಯನ ಜ್ಞಾಪಕಶಕ್ತಿ ಮೇಲೆ ಈ ಆಧುನಿಕ ತಂತ್ರಜ್ಞಾನಗಳು ಪರಿಣಾಮ ಬೀರಿದೆ. ಹಿಂದೆ ನಾವು ಏನಾದರೂ ಮಾಹಿತಿ ಬೇಕಿದ್ದರೆ ಹಿರಿಯರು, ಶಿಕ್ಷಕರು ಅಥವಾ ಸಹೋದ್ಯೋಗಿಗಳ ಹತ್ತಿರ ಕೇಳುತ್ತಿದ್ದೆವು. ಆದರೆ ಇಂದು ಎಲ್ಲದಕ್ಕೂ ಗೂಗಲ್ ಗುರುವನ್ನು ಆಶ್ರಯಿಸಿದ್ದೇವೆ. ಇಷ್ಟು ಮಾತ್ರವಲ್ಲದೆ ಮೊಬೈಲ್ ಎನ್ನುವ ಮಾಯಾ ಪೆಟ್ಟಿಗೆಯು ಮನುಷ್ಯನನ್ನು ತುಂಬಾ ಆಲಸಿ ಮಾತ್ರವಲ್ಲದೆ, ಆತ ಸಂಪೂರ್ಣವಾಗಿ ಪರಾವಲಂಬಿಯಾಗಿರುವಂತೆ ಮಾಡಿದೆ.
ಯಾಕೆಂದರೆ ಮೊಬೈಲ್ ಇಲ್ಲದೆ ಇದ್ದರೆ ಮನುಷ್ಯನೇ ಇಲ್ಲವೆನ್ನುವಂತಹ ಪರಿಸ್ಥಿತಿ ಇಂದಿನವರದ್ದಾಗಿದೆ. ಒತ್ತಡದ ಜೀವನ ಹಾಗೂ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸದೆ ಇರುವುದು ಕೂಡ ಮನುಷ್ಯರಲ್ಲಿ ನೆನೆಪಿನ ಶಕ್ತಿ ಕಡಿಮೆಯಾಗಲು ಕಾರಣವಾಗಿದೆ. ನೆನಪಿನ ಶಕ್ತಿಯು ಕಡಿಮೆಯಾಗುವ ಮೊದಲು ನೀವು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆರೋಗ್ಯಕರವಾಗಿರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದರಿಂದ ನೆನಪಿನ ಶಕ್ತಿ ಹೆಚ್ಚಿಸಬಹುದು. ಇದು ನಮ್ಮ ಮೆದುಳಿಗೆ ಮಾತ್ರವಲ್ಲದೆ ಸಂಪೂರ್ಣ ಆರೋಗ್ಯಕ್ಕೂ ನೆರವಾಗುವುದು.
ನೆನಪಿನ ಶಕ್ತಿ ಹೆಚ್ಚಿಸಿ, ಮೆದುಳಿನ ಸಂಪೂರ್ಣ ಚಟುವಟಿಕೆ ವೃದ್ಧಿಸುವ ಕೆಲವು ಆಹಾರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮೀನು
ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಈ ಕೊಬ್ಬಿನಾಮ್ಲವು ನಮ್ಮ ಹೃದಯಕ್ಕೆ ಮಾತ್ರವಲ್ಲದೆ ನೆನಪಿನ ಶಕ್ತಿ ವೃದ್ಧಿಸಲು ಹಾಗೂ ಖಿನ್ನತೆ ಹೋಗಲಾಡಿಸಲು ನೆರವಾಗುವುದು. ಒಮೆಗಾ-3 ಕೊಬ್ಬಿನಾಮ್ಲವು ಮೆದುಳಿನ ಪ್ರಮುಖ ಅಂಶ ಮತ್ತು ಇದು ಮೆದುಳಿನ ಕೋಶಗಳ ಚಟುವಟಿಕೆ ಹೆಚ್ಚಿಸುವುದು. ಸಾಲ್ಮನ್, ಟ್ಯೂನಾ, ಬಂಗುಡೆ, ಹೆರಿಂಗ್, ಹಾಲಿಬಟ್ ಇತ್ಯಾದಿಗಳು ಒಮೆಗಾ-3 ಕೊಬ್ಬಿನಾಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.

ಗ್ರೀನ್ ಟೀ
ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ತಡೆಯುವಂತಹ ಪಾಲಿಫೆನಾಲ್ ಎನ್ನುವ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗ್ರೀನ್ ಟೀಯಲ್ಲಿದೆ. ಗ್ರೀನ್ ಟೀಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ನೆನೆಪಿನ ಶಕ್ತಿ ಮತ್ತು ಮಾನಸಿಕ ಶಕ್ತಿ ವೃದ್ಧಿಸಿ, ಮೆದುಳಿಗೆ ವಯಸ್ಸಾಗದಂತೆ ತಡೆಯುವುದು.
Most Read: ಅಡುಗೆಮನೆಯ ಪುಟ್ಟ 'ಬೆಳ್ಳುಳ್ಳಿ'ಯ ಪವರ್‌ಗೆ ಬೆರಗಾಗಲೇಬೇಕು!

ಬೆರ್ರಿಗಳು
ಬೆರ್ರಿಗಳಲ್ಲಿ ಕ್ವೆರ್ಸೆಟಿನ್ ಎನ್ನುವ ಅಂಶವು ಅಧಿಕವಾಗಿದೆ. ಇದು ಮೆದುಳಿನ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಆಂಥೋಸಯಾನಿನ್ ಎನ್ನುವ ಫೈಥೋಕೆಮಿಕಲ್ ಇದ್ದು, ಅಲ್ಝೈಮರ್ ನಂತಹ ರೋಗಗಳಿಂದ ಮೆದುಳಿಗೆ ಉಂಟಾಗುವ ಹಾನಿ ತಡೆಯುವುದು. ರಸ್ಬೇರ್ರಿ, ಸೇಬು ಮತ್ತು ನೇರಳೆ ತುಂಬಾ ಒಳ್ಳೆಯದು.

ಹಸಿರೆಲೆ ತರಕಾರಿಗಳು
ಹಸಿರೆಲೆ ತರಕಾರಿಗಳು ನಿಮ್ಮ ನೆನಪಿನ ಶಕ್ತಿಯು ತುಂಬಾ ದೀರ್ಘವಾಗಿ ಕೆಲಸ ಮಾಡುವಂತೆ ಮಾಡುವುದು. ಬಸಲೆ, ಲೆಟಿಸ್, ಕೋಸುಗಡ್ಡೆ, ಹೂಕೋಸು ತುಂಬಾ ಪರಿಣಾಮಕಾರಿ. ಈ ತರಕಾರಿಗಳು ಕೇವಲ ನೆನಪಿನ ಶಕ್ತಿ ಮಾತ್ರ ಹೆಚ್ಚಿಸುವುದಲ್ಲದೆ, ಇದರಲ್ಲಿ ಇರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ದೇಹವನ್ನು ಆರೋಗ್ಯವಾಗಿಡುವುದು.

ಜೇನುತುಪ್ಪ
ಜೇನುತುಪ್ಪದಲ್ಲಿರುವಂತಹ ಔಷಧೀಯ ಗುಣಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದು ನೆನಪಿನ ಶಕ್ತಿ ಕೂಡ ವೃದ್ಧಿಸುವುದು. ಬೆಳಗ್ಗೆ ಒಂದು ಚಮಚ ಜೇನುತುಪ್ಪ ಸೇವಿಸಿದರೆ ಇದು ತೂಕ ಕಳೆದುಕೊಳ್ಳಲು ಮಾತ್ರವಲ್ಲದೆ ಮೆದುಳಿನ ಶಕ್ತಿ ಹೆಚ್ಚಿಸಲು ನೆರವಾಗುವುದು.

ಬೀಜಗಳು
ಒಣಬೀಜಗಳಲ್ಲಿ ವಿಟಮಿನ್ ಇ ಮತ್ತು ಬಿ6 ಇದ್ದು, ಮೆದುಳಿನ ಶಕ್ತಿ ವೃದ್ಧಿಸುವುದು. ಒಂದು ಹಿಡಿ ಬಾದಾಮಿ ಅಥವಾ ಪಿಸ್ತಾ ಪ್ರತಿನಿತ್ಯ ಸೇವಿಸಿದರೆ ಅದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುವುದು. ಇದು ಸಂಪೂರ್ಣ ಆರೋಗ್ಯಕ್ಕೂ ನೆರವಾಗುವುದು.

ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ ಇದೆ. ಕ್ಯಾಲ್ಸಿಯಂ ಅತಿಯಾಗಿರುವುದು ಹಾಲು, ಚೀಸ್, ಬೆಣ್ಣೆ ಮತ್ತು ಮೊಸರಿನಲ್ಲಿ. ಇದು ಮೆದುಳಿನ ಕೋಶಗಳಿಗೆ ಪೋಷಣೆ ನೀಡುವುದು. ಮೊಸರಿನಲ್ಲಿ ಟೈರೊಸಿನ್ ಎನ್ನುವ ಅಮಿನೊ ಆಮ್ಲವಿದೆ. ಇದು ನೆನಪಿನ ಶಕ್ತಿ ಹೆಚ್ಚು ಮಾಡುವುದು.
Most Read: ಮುಖದ ಸೌಂದರ್ಯ ಹೆಚ್ಚಿಸಲು ಬಳಸಿ 'ಹಾಲಿನ ಫೇಸ್ ಪ್ಯಾಕ್'

ನೀರು
ಮೆದುಳಿನ ¾ ಭಾಗವು ನೀರಿನಿಂದ ಕೂಡಿದೆ. ಸರಿಯಾಗಿ ನೀರು ಕುಡಿಯುವುದರಿಂದ ನಿರ್ಜಲೀಕರಣವು ತಪ್ಪುವುದು. ನೀರು ಕಡಿಮೆಯಾದರೆ ಮೆದುಳು ಕಾರ್ಟಿಸೊಲ್ ಎನ್ನುವ ಹಾರ್ಮೋನು ಬಿಡುಗಡೆ ಮಾಡುವುದು ಮತ್ತು ಇದು ಮೆದುಳನ್ನು ಕುಗ್ಗುವಂತೆ ಮಾಡುವುದು.

ವೈನ್
ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲವೆನ್ನುವುದು ತಿಳಿದಿದೆ. ಆದರೆ ಇದರಿಂದ ಕೆಲವೊಂದು ಲಾಭಗಳು ಕೂಡ ಇದೆ. ಮಿತ ಪ್ರಮಾಣದಲ್ಲಿ ವೈನ್ ಸೇವನೆ ಮಾಡಿದರೆ ಇದು ಜ್ಞಾಪಕ ಶಕ್ತಿ ಹೆಚ್ಚಿಸುವುದು. ಕೆಂಪು ವೈನ್ ತುಂಬಾ ಒಳ್ಳೆಯದು. ಇದು ಮೆದುಳಿನಲ್ಲಿ ರಕ್ತಸಂಚಾರವನ್ನು ಉತ್ತಪಡಿಸುವುದು ಮತ್ತು ಅಲ್ಝೈಮರ್ ನಂತಹ ಕಾಯಿಲೆಯ ಅಪಾಯ ಕಡಿಮೆ ಮಾಡುವುದು. ವೈನ್ ಮೆದುಳು ಮಾತ್ರವಲ್ಲದೆ ಹೃದಯಕ್ಕೂ ಒಳ್ಳೆಯದು.

ರೋಸ್ಮೆರಿ
ರೋಸ್ಮೆರಿಯನ್ನು ಕೇವಲ ನಮ್ಮ ಸಲಾಡ್ ಮತ್ತು ಅಲಂಕಾರಕ್ಕೆ ಬಳಸುವುದಲ್ಲ. ಇದು ನಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದು. ಈ ಗಿಡಮೂಲಿಕೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಪ್ರಮಾಣವು ಅಧಿಕವಾಗಿದ್ದು, ಮೆದುಳು ಬೆಳೆಯಲು ಇದು ನೆರವಾಗುವುದು. ರೋಸ್ಮೆರಿ ತಿನ್ನುವುದು ಮಾತ್ರವಲ್ಲದೆ ಅದರ ಸುವಾಸನೆ ಪಡೆದರೆ ತುಂಬಾ ಒಳ್ಳೆಯದು.
Most Read: ಒಂದೆಲಗ ಸೊಪ್ಪಿನಿಂದ ಆರೋಗ್ಯ, ತ್ವಚೆ ಹಾಗೂ ಕೂದಲಿಗೆ ಆಗುವ ಲಾಭಗಳು

ತರಕಾರಿಗಳು
ನೀಲಿ, ಕೆಂಪು ಮತ್ತು ಹಸಿರು ತರಕಾರಿಗಳು ನೆನೆಪಿನ ಶಕ್ತಿ ಹೆಚ್ಚಿಸುವುದು. ಮೆದುಳಿನ ಶಕ್ತಿ ಹೆಚ್ಚಿಸಬೇಕೆಂದರೆ ನೀವು ಇಂದಿನಿಂದಲೇ ಬದನೆ ತಿನ್ನಲು ಆರಂಭಿಸಿ. ಬದನೆಯಲ್ಲಿ ಇರುವಂತಹ ನಾಸುನಿನ್ ಎನ್ನುವ ಪೋಷಕಾಂಶವು ಮೆದುಳನ್ನು ಆರೋಗ್ಯವಾಗಿಟ್ಟು ಮೆದುಳಿನ ಕೋಶಗಳಿಗೆ ಪೋಷಕಾಂಶ ಒದಗಿಸುವುದು. ಬೀಟ್ ರೂಟ್ ಮತ್ತು ಈರುಳ್ಳಿಯು ಮೆದುಳಿಗೆ ತುಂಬಾ ಒಳ್ಳೆಯದು. ತುಂಬಾ ಗಾಢ ಹಸಿರು ಬಣ್ಣ ಹೊಂದಿರುವಂತಹ ತರಕಾರಿಗಳಲ್ಲಿ ಫಾಲಿಕ್ ಆಮ್ಲವು ಇರುವುದರಿಂದ ಇದು ಮೆದುಳಿಗೆ ತುಂಬಾ ಒಳ್ಳೆಯದು. ವಿಸ್ಮೃತಿ ರೋಗಿಗಳಿಗೆ ಗಾಢ ಹಸಿರು ಬಣ್ಣದ ತರಕಾರಿಗಳನ್ನು ತಿನ್ನಲು ಸೂಚಿಸಲಾಗುತ್ತದೆ.

ಚಹಾ
ಚಹಾ ಕುಡಿದರೆ ನೀವು ಗಣಿತದಲ್ಲಿ ತುಂಬಾ ಜಾಣನಾಗುತ್ತೀ ಎಂದು ನಮ್ಮ ಅಜ್ಜಂದಿರು ಹೇಳುತ್ತಾ ಇದ್ದದ್ದು ನಮಗೆ ತಿಳಿದಿದೆ. ಇದು ಸುಳ್ಳು ಮಾತು ಎಂದು ನಮಗನಿಸುತ್ತಾ ಇತ್ತು. ಆದರೆ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಚಹಾದಲ್ಲಿ ತರಕಾರಿ ಅಥವಾ ಹಣ್ಣುಗಳಲ್ಲಿ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಚಹಾದಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನ್ನು ಪಾಲಿಫಿನಾಲ್ ಎಂದು ಕರೆಯಲಾಗುವುದು. ಇದು ಮೆದುಳನ್ನು ಉತ್ತೇಜಿಸುವುದು. ಚಹಾದಲ್ಲಿ ಇರುವಂತಹ ಅಮಿನೋ ಆಮ್ಲವು ಮೆದುಳಿನಲ್ಲಿ ಪ್ರಶಾಂತ ಪರಿಣಾಮ ಉಂಟು ಮಾಡುವುದು. ಇದರಿಂದ ಸ್ಪಷ್ಟವಾಗಿ ಯೋಜಿಸಲು ಸಾಧ್ಯವಾಗುವುದು. ಶತಮಾನಗಳ ಹಿಂದೆ ಚೀನಾದಲ್ಲಿ ಗಿಡಗಳ ಎಲೆಗಳಿಂದ ಮಾಡಿದ ಬಿಸಿ ನೀರನ್ನು ಕುಡಿಯುತ್ತಾ ಇದ್ದರು. ಇದರಿಂದ ಮೆದುಳು ಚುರುಕಾಗುತ್ತಾ ಇತ್ತು. ಅದನ್ನೇ ನಾವಿಂದು ಚಹಾ ಎನ್ನುತ್ತೇವೆ.
Most Read: ಅಂಗೈಯಲ್ಲಿ ನಕ್ಷತ್ರದ ಆಕೃತಿಯಿದ್ದರೆ ಅವರು ತುಂಬಾನೇ ಅದೃಷ್ಟವಂತರು!

ಬೆಣ್ಣೆಹಣ್ಣು
ಇದರಲ್ಲಿರುವ ವಿಟಮಿನ್ ಕೆ ಹಾಗೂ ಫೋಲೇಟ್ ಗಳು ಮೆದುಳಿನಲ್ಲಿ ರಕ್ತಹೆಪ್ಪುಗಟ್ಟುವುದನ್ನು ತಡೆಯಲು ನೆರವಾಗುತ್ತವೆ ಹಾಗೂ ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತವೆ. ಅಲ್ಲದೇ ಮೆದುಳಿನ ಅರಿವು ಪಡೆಯುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ಮೊಟ್ಟೆಗಳು
ಮೊಟ್ಟೆಯಲ್ಲಿ ಖೋಲೈನ್ ಎಂಬ ಪೋಷಕಾಂಶವಿದೆ. ಇದು ಮೆದುಳಿನ ಸಂದೇಶಗಳನ್ನು ದೇಹದ ಎಲ್ಲೆಡೆ ಕೊಂಡೊಯ್ಯುವ ನ್ಯೂರೋಟ್ರಾನ್ಸ್ ಮಿಟರ್ ಗಳಿಗೆ ಜೀವಾಳವಾಗಿದೆ. ಅಲ್ಲದೇ ಮೆದುಳಿನ ಜೀವಕೋಶಗಳ ಹೊರಪದರದ ದೃಢತೆಗೆ ಅಗತ್ಯವಾದ ಕೊಲೆಸ್ಟ್ರಾಲ್ ಸಹಾ ಮೊಟ್ಟೆಯಲ್ಲಿದೆ. ಅಲ್ಲದೇ ಮೆದುಳನ್ನು ಘಾಸಿಯಿಂದ ಕಾಪಾಡುವ ಆಂಟಿ ಆಕ್ಸಿಡೆಂಟುಗಳು ಸಹಾ ಇವೆ.

ಪಾಲಕ್ ಸೊಪ್ಪು
ಈ ಸೊಪ್ಪಿನಲ್ಲಿಯೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಕೆ, ಫೋಲೇಟ್ ಹಾಗೂ ಲ್ಯೂಟಿನ್ ಇದ್ದು ಇವೆಲ್ಲವೂ ಮೆದುಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಕಣಗಳಿಂದ ರಕ್ಷಣೆ ಒದಗಿಸುತ್ತವೆ.