ಇವೆಲ್ಲಾ 'ವಿಟಮಿನ್ ಸಿ' ಇರುವ ಆಹಾರಗಳು, ಆರೋಗ್ಯಕ್ಕೆ ಬಹಳ ಒಳ್ಳೆಯದು...

Subscribe to Boldsky

ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಕೂಡ ಇದೆ.

ವಿಟಮಿನ್ ಸಿ ಲಾಭಗಳೆಂದರೆ ಅದು ಪರಿಧಮನಿ ಕಾಯಿಲೆ, ಪ್ರತಿರೋಧಕ ವ್ಯವಸ್ಥೆಯ ಕೊರತೆ, ಪ್ರಸವ ಪೂರ್ವ ಆರೋಗ್ಯ ಸಮಸ್ಯೆ, ಕಣ್ಣಿನ ಕಾಯಿಲೆ, ಚರ್ಮದಲ್ಲಿ ಕಂಡು ಬರುವ ನೆರಿಗೆಗೆ ಸಹಕಾರಿ. ವಿಟಮಿನ್ ಸಿ ದೇಹದಲ್ಲಿ ಉತ್ಪತ್ತಿಯಾಗದೆ ಇರುವ ಕಾರಣದಿಂದ ಹಲವಾರು ಮಂದಿಯಲ್ಲಿ ವಿಟಮಿನ್ ಸಿ ಕೊರತೆ ಕಂಡುಬರುವುದು. ವಿಟಮಿನ್ ಸಿ ಕೊರತೆಯಿಂದ ನಿಮಗೆ ಸ್ಕರ್ವಿ ಉಂಟಾಗಬಹುದು. ಇದರಿಂದಾಗಿ ನೀವು ತುಂಬಾ ನಿಶ್ಯಕ್ತಿಯಿಂದ ಬಳಲಬಹುದು.

ಈ ಕಾಯಿಲೆಯು ಮೂಳೆ, ಸ್ನಾಯುಗಳ ಬಲ ಮತ್ತು ರೋಗನಿರೋಧಕ ಕುಂದುವಂತೆ ಮಾಡುವುದು. ಅಧಿಕ ರಕ್ತದೊತ್ತಡ, ಮೂತ್ರಕೋಶಗಳ ಕಾಯಿಲೆ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್ ಗಳು ಅಪಧಮನಿ ಕಾಠಿಣ್ಯ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಕೆಲವು ವಿಟಮಿನ್ ಸಿ ಇರುವಂತಹ ಆಹಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಇವುಗಳ ಸೇವನೆ ಮಾಡಿ ವಿಟಮಿನ್ ಸಿ ಕೊರತೆ ನೀಗಿಸಿ....

ಪೇರಳೆ ಹಣ್ಣು ಅಥವಾ ಸೀಬೆ ಹಣ್ಣು

ಪೇರಳೆ ಹಣ್ಣು ಅಥವಾ ಸೀಬೆ ಹಣ್ಣು

ಕಳಿತ ಪೇರಳೆ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಒಂದು ಪೇರಳೆ ಹಣ್ಣಿನಲ್ಲಿ ದಿನಕ್ಕೆ ಬೇಕಾಗುವ 628 ಶೇ. ವಿಟಮಿನ್ ಸಿ ಇದೆ. ಇದರಿಂದ ಒಂದು ದಿನ ಪೇರಳೆ ಹಣ್ಣು ಸೇವಿಸಿದರೆ ಮರುದಿನ ವಿಟಮಿನ್ ಸಿ ಬಗ್ಗೆ ಚಿಂತೆ ಮಾಡಬೇಕಿಲ್ಲ.

ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ಹಳದಿ ದೊಣ್ಣೆ ಮೆಣಸು

ಹಳದಿ ದೊಣ್ಣೆ ಮೆಣಸು

ಹಳದಿ ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಇದೆ. ಒಂದು ದೊಡ್ಡ ದೊಣ್ಣೆ ಮೆಣಸಿನಲ್ಲಿ 341 ಮಿ.ಗ್ರಾಂ ವಿಟಮಿನ್ ಸಿ ಇದೆ ಮತ್ತು ಇದನ್ನು ಸೇವನೆ ಮಾಡುವುದರಿಂದ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಅಡುಗೆಯಲ್ಲಿ ಇದನ್ನು ಬಳಸಿದರೆ ಆಹಾರವು ಬಣ್ಣಬಣ್ಣದ್ದಾಗಿರುವುದು.

ಪಾರ್ಸ್ಲಿ

ಪಾರ್ಸ್ಲಿ

ಪಾರ್ಸ್ಲಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಒಂದು ಕಪ್ ತಾಜಾ ಪಾರ್ಸ್ಲಿಯಲ್ಲಿ 133 ಶೇ. ವಿಟಮಿನ್ ಸಿ ಇದೆ. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ದೈನಂದಿನ ಆಹಾರದಲ್ಲಿ ಪಾರ್ಸ್ಲಿ ಬಳಸಿ.

ಕೆಂಪು ದೊಣ್ಣೆ ಮೆಣಸು

ಕೆಂಪು ದೊಣ್ಣೆ ಮೆಣಸು

ಕೆಂಪು ದೊಣ್ಣೆ ಮೆಣಸಿನಲ್ಲಿ ಕೂಡ ವಿಟಮಿನ್ ಸಿ ಲಭ್ಯವಿದೆ. ಒಂದು ಕಪ್ ಕೆಂಪು ದೊಣ್ಣೆ ಮೆಣಸಿನಲ್ಲಿ 317 ಮಿ.ಗ್ರಾಂ ವಿಟಮಿನ್ ಸಿ ಇದೆ. ಕೆಂಪು ದೊಣ್ಣೆ ಮೆಣಸಿನಲ್ಲಿ ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳಿವೆ. ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದು.

ಕಿವಿ

ಕಿವಿ

ಉಷ್ಣವಲಯದಲ್ಲಿ ಸಿಗುವಂತಹ ಹಣ್ಣಾಗಿರುವ ಕಿವಿಯು ಉನ್ನತ ಪ್ರಮಾಣದ ವಿಟಮಿನ್ ಸಿ ಇರುವಂತಹ ಹಣ್ಣು. ಒಂದು ತುಂಡು ಕಿವಿಯಲ್ಲಿ ದಿನಕ್ಕೆ ಸೂಚಿಸಲಾಗಿರುವ ವಿಟಮಿನ್ ಸಿಯ 273 ಮಿ.ಗ್ರಾಂ. ಇದೆ. ಕಿವಿ ಹಣ್ಣು ಸ್ವಲ್ಪ ಹುಳಿ ಹಾಗೂ ಸಿಹಿಯಾಗಿದೆ. ತುಂಬಾ ಮೃಧುವಾಗಿ ಈ ಹಣ್ಣು ವಿಟಮಿನ್ ಎ, ಆಹಾರದ ನಾರಿನಾಂಶ, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಇವೆ.

ಕೋಸುಗಡ್ಡೆ

ಕೋಸುಗಡ್ಡೆ

ಕೋಸುಗಡ್ಡೆಯು ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ ಮತ್ತು ಇದರಲ್ಲಿ ಅಧಿಕ ಮಟ್ಟದ ವಿಟಮಿನ್ ಸಿ ಇದೆ. ಒಂದು ಕಪ್ ಕಚ್ಚಾ ಕೋಸುಗಡ್ಡೆಯಲ್ಲಿ 135 ಶೇ. ವಿಟಮಿನ್ ಸಿ ಇದೆ. ಕೋಸುಗಡ್ಡೆಯನ್ನು ಇತರ ತರಕಾರಿಗಳ ಜತೆಗೆ ಸ್ಮೂಥಿಯಲ್ಲಿ ಬಳಸಬಹುದು.

'ಕೋಸುಗಡ್ಡೆ' ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗೆ ರಾಮಬಾಣ

ಲಿಚೆ

ಲಿಚೆ

ಲಿಚೆಯಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ ಮತ್ತು ಇದು ತುಂಬಾ ಸಿಹಿಯಾಗಿದೆ. ಇದು ಅದ್ಭುತ ರುಚಿ ಮತ್ತು ಆರೋಗ್ಯಕಾರಿಯು ಹೌದು. 100 ಗ್ರಾಂ ಲಿಚೆಯಲ್ಲಿ 71.5 ಗ್ರಾಂನಷ್ಟು ವಿಟಮಿನ್ ಸಿ ಇದೆ ಮತ್ತು ಇದರಲ್ಲಿ ಪೊಟಾಶಿಯಂ ಮತ್ತು ಆರೋಗ್ಯಕಾರಿ ಕೊಬ್ಬು ಉನ್ನತಮಟ್ಟದಲ್ಲಿದೆ.

ಪಪ್ಪಾಯಿ

ಪಪ್ಪಾಯಿ

ಕಚ್ಚಾ ಪಪ್ಪಾಯಿಯಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಒಂದು ಕಪ್ ಕಚ್ಚಾ ಪಪ್ಪಾಯಿಯಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗುವ 144 ಶೇ. ವಿಟಮಿನ್ ಸಿ ಇದೆ. ಇದರಲ್ಲಿ ವಿಟಮಿನ್ ಎ, ಫಾಲಟೆ, ಆಹಾರದ ನಾರಿನಾಂಶ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲವಿದೆ.

ಸ್ಟ್ರಾಬೆರಿ

ಸ್ಟ್ರಾಬೆರಿ

ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ಸ್ಟ್ರಾಬೆರಿಯಲ್ಲಿ 149 ಶೇ. ವಿಟಮಿನ್ ಸಿ ಇದೆ. ಸ್ಟ್ರಾಬೆರಿಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಆಹಾರದ ನಾರಿನಾಂಶವಿದೆ. ಈ ರುಚಿಕರ ಹಣ್ಣನ್ನು ಸಲಾಡ್, ಸ್ಮೂಥಿ ಮತ್ತು ಡೆಸರ್ಟ್ ಗಳಲ್ಲಿ ಬಳಸಬಹುದು.

ಕಿತ್ತಳೆ

ಕಿತ್ತಳೆ

ಕಿತ್ತಳೆಯು ವಿಟಮಿನ್ ಸಿ ಸಮೃದ್ಧವಾಗಿರುವಂತಹ ಸಿಟ್ರಸ್ ಹಣ್ನಾಗಿದೆ. ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ 163 ಶೇ. ವಿಟಮಿನ್ ಸಿ ಇದೆ. ಕಿತ್ತಳೆ ಹಣ್ಣನ್ನು ಸಲಾಡ್, ಜ್ಯೂಸ್ ಮೂಲಕ ಸೇವಿಸಬಹುದು.

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆಹಣ್ಣು ವಿಟಮಿನ್ ಸಿ ಇರುವ ಮತ್ತೊಂದು ಸಿಟ್ರಸ್ ಹಣ್ಣು. 100 ಗ್ರಾಂನಷ್ಟು ಲಿಂಬೆಹಣ್ಣಿನಲ್ಲಿ 53 ಗ್ರಾಂನಷ್ಟು ವಿಟಮಿನ್ ಸಿ ಇದೆ. ಈ ಹಣ್ಣುಗಳಲ್ಲಿ ಕ್ಯಾಲರಿ ಕಡಿಮೆ ಇದೆ ಮತ್ತು ಕೊಲೆಸ್ಟ್ರಾಲ್ ಶೂನ್ಯವಿದೆ.

ಅನಾನಸ್

ಅನಾನಸ್

ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ತಾಜಾ ಅನಾನಸ್ ನಲ್ಲಿ 131 ಶೇ. ವಿಟಮಿನ್ ಸಿ ಇದೆ. ಅನಾನಸ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಆಹಾರದ ನಾರಿನಾಂಶವಿದೆ.

ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

ಹೂಕೋಸು

ಹೂಕೋಸು

ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿಯಾಗಿದೆ. ಒಂದು ಕಪ್ ಹಸಿ ಹೂಕೋಸಿನಲ್ಲಿ ಶೇ.77ರಷ್ಟು ವಿಟಮಿನ್ ಸಿ ಇದೆ. ಹೂಕೋಸಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಕೆ, ಪೊಟಾಶಿಯಂ ಮತ್ತು ಪ್ರೋಸ್ಪರಸ್ ಸಮೃದ್ಧವಾಗಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯು ರುಚಿಯಲ್ಲಿ ಹುಳಿಯಾಗಿದ್ದರೂ ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ನೂರು ಗ್ರಾಂ ನೆಲ್ಲಿಕಾಯಿಯಲ್ಲಿ 27.7 ಮಿ.ಗ್ರಾಂ. ವಿಟಮಿನ್ ಸಿ ಇದೆ ಮತ್ತು ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಎ, ಪೊಟಾಶಿಯಂ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಆಹಾರದ ನಾರಿನಾಂಶವಿದೆ.

For Quick Alerts
ALLOW NOTIFICATIONS
For Daily Alerts

    English summary

    Top Foods That Are Rich In Vitamin C

    Vitamin C is a water-soluble vitamin that plays a major role in maintaining the health of the body's connective tissues as well as acts as an antioxidant. The benefits of vitamin C may include protection against cardiovascular diseases, immune system deficiencies, prenatal health problems, eye diseases and even skin wrinkling. Vitamin C cannot be produced by the body on its own, so it is very common to have a vitamin C deficiency.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more