ಭಾರತೀಯರು ಉಪವಾಸ ಇರುವುದನ್ನು ಇಷ್ಟಪಡುತ್ತಾರೆ. ನವರಾತ್ರಿ ಇರಲಿ, ಗಣೇಶ ಚತುರ್ಥಿಯೇ ಇರಲಿ, ವರ್ಷದಲ್ಲಿ ಕೆಲವು ದಿನ, ಅಷ್ಟಾಗದಿದ್ದರೆ ಜೀವಮಾನದಲ್ಲಿ ಕೆಲವು ಬಾರಿಯಾದರೂ ಉಪವಾಸವಿದ್ದೇ ಇರುತ್ತೇವೆ. ವಾಸ್ತವದಲ್ಲಿ, ನಮ್ಮಲ್ಲಿ ಹಲವು ಹಿರಿಯರು ಇಂದಿಗೂ ವಾರಕ್ಕೊಮ್ಮೆ, ಒಂದು ನಿಗದಿತ ದಿನದಂದು ತಮ್ಮ ಕೋರಿಕೆಯನ್ನು ಪೂರೈಸಲು ಉಪವಾಸವಿರುವ ಹರಕೆಯನ್ನೂ ಹೊರುತ್ತಾರೆ. ಕೆಲವು ಧರ್ಮಗಳಲ್ಲಿ ಉಪವಾಸವೂ ಒಂದು ಕಡ್ಡಾಯವಾಗಿ ಆಚರಿಸಬೇಕಾದ ವಿಧಿಯೂ ಆಗಿದೆ.
ಧಾರ್ಮಿಕ ಕಾರಣಗಳ ಹೊರತಾಗಿ, ಒಂದಿಡೀ ದಿನ ಏನನ್ನೂ ಸೇವಿಸದೆ, ಕೇವಲ ನೀರು ಸೇವಿಸಿಕೊಂಡು ಕಳೆದರೆ ಇದು ಆರೋಗ್ಯಕ್ಕೆ ಅತ್ಯುತ್ತಮವೆಂದು ನಿಮಗೆ ಇದಕ್ಕೂ ಮೊದಲು ಗೊತ್ತಿತ್ತೇ? ಬನ್ನಿ, ಹೀಗೊಂದು ದಿನದ ಉಪವಾಸದಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...
ಮೊದಲ ಎಂಟು ಗಂಟೆಗಳು
ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮೊದಲ ಎಂಟು ಗಂಟೆಗಳು ಸುಲಭವಾಗಿರುತ್ತವೆ. ಅಂದರೆ ಉಪವಾಸವಿದ್ದುದು ನಮ್ಮ ಮನಸ್ಸಿಗೆ ತಿಳಿದಿರುತ್ತದೆಯೇ ವಿನಃ ದೇಹವಂತೂ ಯಾವುದೇ ಸೂಚನೆಯನ್ನೇ ನೀಡುವುದಿಲ್ಲ. ಈ ಅವಧಿಯಲ್ಲಿ ನೀವು ಉಪವಾಸ ಪ್ರಾರಂಭಿಸುವ ಮುನ್ನ ಸೇವಿಸಿದ್ದ ಆಹಾರವನ್ನು ಜೀರ್ಣಿಸಿಕೊಳ್ಳಲು ಹಾಗೂ ಇತರ ಕಾರ್ಯಗಳೆಲ್ಲವೂ ಎಂದಿನಂತೆ ನಡೆಯುತ್ತವೆ. ರಕ್ತದಲ್ಲಿಯೂ ಸಾಕಷ್ಟು ಸಕ್ಕರೆ ಇರುತ್ತದೆ ಹಾಗೂ ಈ ಅವಧಿಯಲ್ಲಿ ಜರುಗುವ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಉಪವಾಸದ ಚುರುಕು ಮುಟ್ಟಿಸುವುದೇನಿದ್ದರೂ ಈ ಎಂಟು ಗಂಟೆ ಕಳೆದ ನಂತರವೇ!
ಎಂಟು ಗಂಟೆಯ ಬಳಿಕ, ದಿನದ ಅಂತ್ಯದವರೆಗೆ
ಸಾಮಾನ್ಯವಾಗಿ ನಮ್ಮ ದೇಹ ಆಹಾರ ಸೇವಿಸಿದ ಎಂಟು ಗಂಟೆಗಳ ಬಳಿಕ ಆಹಾರ ಕಳುಹಿಸಲು ಸೂಚನೆಗಳನ್ನು ನೀಡುತ್ತದೆ. ಇದೇ ಹಸಿವು. ಈ ಮೂಲಕ ಹೊಟ್ಟೆಯಲ್ಲಿ ಕೊಂಚ ಚುರುಗುಟ್ಟಿದಂತಾಗುತ್ತದೆ ಹಾಗೂ ಏನನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತದೆ. ಈ ಹಸಿವಿನ ಸೂಚನೆಗಳು ಸುಮಾರು ಅರ್ಧದಿಂದ ಒಂದು ಘಂಟೆಯವರೆಗೂ ಮುಂದುವರೆಯುತ್ತದೆ. ಈಗಲೂ ಏನನ್ನೂ ಸೇವಿಸದೇ ಇದ್ದರೆ ದೇಹ ಅನಿವಾರ್ಯವಾಗಿ ಈಗಾಗಲೇ ಸಂಗ್ರಹಿಸಿಟ್ಟುಕೊಂಡಿದ್ದ ಕೊಬ್ಬನ್ನು ಬಳಸಲು ಪ್ರಾರಂಭಿಸುತ್ತದೆ ಹಾಗೂ ಈಗ ಹಸಿವಿನ ಸೂಚನೆಗಳು ನಿಲ್ಲುತ್ತವೆ. ಇದನ್ನೇ ನಾವು 'ಹಸಿವು ಸತ್ತು ಹೋಯಿತು' ಎಂದು ಹೇಳುತ್ತೇವೆ. ಇದು ತೂಕ ಇಳಿಕೆಗೆ ನೇರವಾಗಿ ನೆರವಾಗುತ್ತದೆ. ಇದೇ ಕಾರಣಕ್ಕೆ ತೂಕ ಇಳಿಸಬಯಸುವವರಿಗೆ ಹಾಗೂ ಊಟವನ್ನೂ ಬಿಡಲಾಗದವರಿಗೆ ಆಗಾಗ ಒಂದು ಹೊತ್ತಿನ ಊಟವನ್ನು ವರ್ಜಿಸಲು ಸಲಹೆ ನೀಡಲಾಗುತ್ತದೆ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ. ಸಾಧ್ಯವಾಗದಿದ್ದರೆ ವಾರಕ್ಕೊಂದು ಬಾರಿಯಾದರೂ ಪ್ರತಿಯೊಬ್ಬರೂ ಅನುಸರಿಸಲೇಬೇಕಾದ ವಿಧಾನವಾಗಿದ್ದು ಈ ಮೂಲಕ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ.
ಹೃದಯ ಮತ್ತು ದೇಹವನ್ನು ರಕ್ಷಿಸುತ್ತದೆ
ಒಂದಿಡೀ ದಿನ ಉಪವಾಸವಿರುವ ಮೂಲಕ ದೇಹ ಅನಿವಾರ್ಯವಾಗಿ ಸಕ್ಕರೆ ಮತ್ತು ಕೊಲೊಸ್ಟಾಲ್ ಗಳನ್ನು ಒಡೆದು ಚಿಕ್ಕ ಕಣಗಳನ್ನಾಗಿಸಿ ಬಳಸಿಕೊಳ್ಳಬೇಕಾಗಿ ಬರುತ್ತದೆ. ಈ ಮೂಲಕ ಮಧುಮೇಹ ಹಾಗೂ ಇತರ ಹೃದಯ ಸಂಬಂಧಿ ರೋಗಗಳನ್ನು ದೂರವಿಡಲು ಸಾಧ್ಯವಾಗುತ್ತದೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ರಕ್ತದಲ್ಲಿರುವ trimethylamine N-oxide ಎಂಬ ಪೋಷಕಾಂಶಗಳ ಮಟ್ಟವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಈ ಮೂಲಕ ಹೃದಯದ ನಾಳಗಳಿಗೆ ಎದುರಾಗುವ ರೋಗಗಳಿಂದ ರಕ್ಷಣೆ ಒದಗುತ್ತದೆ.
ಮೆದುಳನ್ನೂ ರಕ್ಷಿಸುತ್ತದೆ
ಉಪವಾಸದ ಮೂಲಕ ದೇಹದ ಕಲ್ಮಶಗಳು ನಿವಾರಣೆಯಾಗುತ್ತವೆ ಹಾಗೂ ಈ ಮೂಲಕ ದೇಹದ ರಕ್ತದಲ್ಲಿ ನಿರ್ಭಿಡೆಯಿಂದ ಚಲಿಸುತ್ತದ್ದ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಮಟ್ಟವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಒಂದಿಡೀ ದಿನ, ಇಪ್ಪತ್ತನಾಲ್ಕು ಗಂಟೆಗಳ ಕಾಲ ಸತತವಾಗಿ ಉಪವಾಸವಿರುವ ಮೂಲಕ ಮೆದುಳಿಗೆ ಎದುರಾಗುವ ಆಲ್ಝೀಮರ್ಸ್ ಕಾಯಿಲೆ ಹಾಗೂ ಪಾರ್ಕಿನ್ಸನ್ ಕಾಯಿಲೆಗಳಿಂದಲೂ ರಕ್ಷಣೆ ಒದಗಿಸುತ್ತದೆ.
ಈ ಉಪವಾಸವನ್ನು ಯಾರು ಆಚರಿಸಬಹುದು?
ಉಪವಾಸದ ಮೂಲಕ ದೇಹಕ್ಕೆ ಹಲವು ಬಗೆಯ ಪ್ರಯೋಜನಗಳಿದ್ದರೂ ಉಪವಾಸ ಎಲ್ಲರಿಗೂ ಸೂಕ್ತವಲ್ಲ! ಈ ಕೆಳಗಿನ ವ್ಯಕ್ತಿಗಳು
ತಮ್ಮ ವೈದ್ಯರ ಅಪ್ಪಣೆಯಿಲ್ಲದೇ ಉಪವಾಸ ಆಚರಿಸಕೂಡದು:
ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳು
ಟೈಪ್ 1 ಮಧುಮೇಹ ಇರುವ ವ್ಯಕ್ತಿಗಳು
ಶಸ್ತ್ರಕ್ರಿಯೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳು
ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ಬಾಣಂತಿಯರು
ಇನ್ನೂ ಹದಿನೆಂಟು ವರ್ಷ ದಾಟದ ಮಕ್ಕಳು
ಉಪವಾಸದ ಅವಧಿಯಲ್ಲಿ ನೀರು ಕುಡಿಯುವ ಪ್ರಾಮುಖ್ಯತೆ
ಒಂದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಉಪವಾಸವಿರುವ ಮುಖ್ಯ ಉದ್ದೇಶವೆಂದರೆ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವುದು. ಈ ಕೆಲಸಕ್ಕೆ ಮುಖ್ಯವಾಗಿ ಬೇಕಾಗಿರುವುದೆಂದರೆ ನೀರು. ಆದ್ದರಿಂದ ಉಪವಾಸದ ದಿನ ನೀವು ಇತರ ದಿನ ಕುಡಿಯುವುದಕ್ಕಿಂತಲೂ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ಏಕೆಂದರೆ ಉಪವಾಸದ ಅವಧಿಯಲ್ಲಿ ಆಹಾರದ ಮೂಲಕ ನೀರು ದೊರಕದಿರುವುದರಿಂದ ಹೆಚ್ಚುವರಿ ನೀರನ್ನು ಕುಡಿಯಬೇಕಾಗುತ್ತದೆ.
ಉಪವಾಸ ಪ್ರಾರಂಭ ಮತ್ತು ಮುಕ್ತಾಯ ಹೇಗೆ?
ಉಪವಾಸ ಆಚರಿಸುವ ದಿನದ ಪ್ರಾರಂಭಕ್ಕೆ ಹೊಟ್ಟೆ ತುಂಬಾ ಊಟ ಮಾಡಿ. ಈ ಮೂಲಕ ಮೊದಲ ಎಂಟು ಘಂಟೆಗಳ ಕಾಲ ಯಾವುದೇ ಆಯಾಸ ಎದುರಾಗುವುದಿಲ್ಲ. ಹೀಗೆ ಮಾಡದೇ ಇದ್ದರೆ ಇಡಿಯ ಇಪ್ಪತ್ತನಾಲ್ಕು ಘಂಟೆಗಳ ಕಾಲವೂ ಹಸಿವು ಆರ್ಭಟಿಸುತ್ತಿರುತ್ತದೆ. ಈ ಊಟದಲ್ಲಿ ಏನಿರಬೇಕು? ಇದು ಪೂರ್ಣಪ್ರಮಾಣದ, ಪ್ರೋಟೀನು, ತರಕಾರಿ, ಇಡಿಯ ಧಾನ್ಯಗಳ ಉತ್ಪನ್ನಗಳು ಹಾಗೂ ಆರೋಗ್ಯಕರ ಕೊಬ್ಬು ಹೊಂದಿರುವ ಸಮತೋಲನದ ಆಹಾರವಾಗಿರಬೇಕು. ಆದರೆ ಉಪವಾಸದ ಅವಧಿ ಮುಕ್ತಾಯವಾದ ತಕ್ಷಣವೇ ಮತ್ತೊಂದು ಭಾರೀ ಊಟವನ್ನು ಸೇವಿಸಬಾರದು! ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಬಹುದು.
ಉಪವಾಸ ಪ್ರಾರಂಭ ಮತ್ತು ಮುಕ್ತಾಯ ಹೇಗೆ?
ವಾಂತಿ, ವಾಕರಿಕೆ ಅಥವಾ ಪಾರ್ಶ್ವವಾಯು ಅಥವಾ ಅಪರೂಪದ ಸಂದರ್ಭದಲ್ಲಿ ಹೃದಯಸ್ತಂಭನವೂ ಎದುರಾಗಬಹುದು. ಬದಲಿಗೆ ಉಪವಾಸವನ್ನು ಲಘು ಆಹಾರಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿ ಮುಕ್ತಾಯಗೊಳಿಸಬೇಕು. ಒಂದು ಚಿಕ್ಕ ಬೋಗುಣಿ ಮಸಾಲೆಯಿಲ್ಲದ ಖಿಚಡಿ, ಕೊಂಚವೇ ಹಣ್ಣುಗಳಿದ್ದರೆ ಬೇಕಾದಷ್ಟಾಯಿತು. ಮುಂದಿನ ಇಪ್ಪತ್ತನಾಲ್ಕು ಘಂಟೆಗಳ ಅವಧಿಯಲ್ಲಿ ಆಹಾರದ ಪ್ರಮಾಣವನ್ನು ಕೊಂಚವಾಗಿ ಏರಿಸುತ್ತಾ ಮರುದಿನದ ಕೊನೆಯಲ್ಲಿ ಪೂರ್ಣ ಪ್ರಮಾಣದ ಊಟವನ್ನು ಸೇವಿಸಬಹುದು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?
ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ಪುರುಷರ ಗರ್ಭನಿರೋಧಕ ಮಾತ್ರೆ ಬಗ್ಗೆ ತಿಳಿಯಿರಿ
ಹಣ್ಣುಗಳ ರಾಜ 'ಮಾವು' ಈ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!
ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!
ನೋಡಿ ಈ ಆಹಾರಗಳೆಲ್ಲಾ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು...
ಪವರ್ಫುಲ್ ಮನೆಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ಮಂಗಮಾಯ!
ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು
ನೋಡಿ, ಇದೇ ಕಾರಣಕ್ಕೆ ಮೂತ್ರದ ಬಣ್ಣದಲ್ಲಿ ಏರುಪೇರಾಗುವುದು!!
ಆಘಾತದ ಗಾಯಕ್ಕೊಳಗಾಗಿರುವ ಮೆದುಳಿನ ಚೇತರಿಕೆಗೆ 10 ಪೌಷ್ಟಿಕ ಆಹಾರಗಳು
ಬೇಸಿಗೆಯಲ್ಲಿ ಸೇವಿಸುವ ಆಹಾರಕ್ರಮ ಹೀಗಿರಲಿ, ಆರೋಗ್ಯವಾಗಿರುವಿರಿ
ತುಟಿಗಳ ಸುತ್ತಲು ಬೀಳುವ ಗುಳ್ಳೆಗಳ ಸಮಸ್ಯೆಗೆ ಮನೆಮದ್ದುಗಳು
ಯಾವ್ಯಾವ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಮಂಡ್ಯ ಟಿಕೆಟ್ ರಮ್ಯಾಗೆ ಕೊಟ್ಟಿದ್ದರೆ ಹೆಚ್ಚು ಸಂತೋಷ ಆಗ್ತಿತ್ತು: ಅಂಬರೀಶ್
ರಾಜಕಾರಣದ 'ತ್ರಿವಿಕ್ರಮ' ಕುಮಾರಸ್ವಾಮಿ ವರ್ಸಸ್ 'ವಾಮನ' ಸಿದ್ದಮಾರಯ್ಯ
ಕಾಂಗ್ರೆಸ್ ಪಕ್ಷದ 15 ಮಹಿಳಾ ಅಭ್ಯರ್ಥಿಗಳು ಯಾರು ಯಾರು?