For Quick Alerts
ALLOW NOTIFICATIONS  
For Daily Alerts

ನೋಡಿ, ಇದೇ ಕಾರಣಕ್ಕೆ ಮೂತ್ರದ ಬಣ್ಣದಲ್ಲಿ ಏರುಪೇರಾಗುವುದು!!

|

ದೇಹದ ವಿಷಕಾರಿ ಅಂಶ ಹಾಗೂ ಕಲ್ಮಷಗಳು ನಮ್ಮ ಮೂತ್ರ ಮತ್ತು ಬೆವರಿನ ಮೂಲಕ ಹೊರಹೋಗುವುದು. ದೇಹದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತಹ ಕಿಡ್ನಿಯು ರಕ್ತದಲ್ಲಿರುವಂತಹ ಕಲ್ಮಷಗಳನ್ನು ಹೊರಹಾಕಿ, ದೇಹಕ್ಕೆ ಬೇಕಾಗಿರುವ ಅಗತ್ಯ ಅಂಶಗಳನ್ನು ಅಲ್ಲೇ ಉಳಿಸಿಕೊಳ್ಳುವುದು. ಆದರೆ ಕೆಲವೊಂದು ಸಲ ಕಿಡ್ನಿಯು ಮೂತ್ರದ ಮೂಲಕ ಪ್ರೋಟೀನ್, ಕೆಂಪು ರಕ್ತ ಕಣ ಹಾಗೂ ಕೆಲವೊಂದು ಪ್ರಮುಖ ಅಂಶಗಳನ್ನು ಹೊರಹಾಕುವುದು.

ಇದು ಸಾಮಾನ್ಯ ಪ್ರಕ್ರಿಯೆಯಲ್ಲ. ಮೂತ್ರದಲ್ಲಿನ ಬಣ್ಣವು ನಿಮ್ಮ ದೇಹದ ಆರೋಗ್ಯವನ್ನು ಸೂಚಿಸುವುದು. ಇದರಿಂದ ಮೂತ್ರದ ಬಣ್ಣ, ವಾಸನೆ ಹಾಗೂ ಅದರ ಸ್ಥಿರತೆಯು ನಿಮಗೆ ಹಲವಾರು ವಿಚಾರಗಳನ್ನು ಹೇಳಲಿದೆ. ಮೂತ್ರದ ಮೂಲಕವೇ ಹಲವಾರು ಪರೀಕ್ಷೆಗಳನ್ನು ಮಾಡಿಕೊಂಡು ದೇಹದ ಆರೋಗ್ಯ ತಿಳಿಯುತ್ತಾರೆ. ಮೂತ್ರದ ಬಣ್ಣದ ಬದಲಾವಣೆಯು ಅನಾರೋಗ್ಯದ ಲಕ್ಷಣಗಳನ್ನು ಹೇಳಿಕೊಡುವುದು. ದೇಹದಲ್ಲಿ ನೀರಿನಾಂಶವು ಕಡಿಮೆಯಾದಾಗ ಕೂಡ ಮೂತ್ರದ ಬಣ್ಣವು ಬದಲಾಗುವುದು.

ಅದೇ ರೀತಿ ಕೆಲವೊಂದು ಔಷಧಿಗಳ ಸೇವನೆಯಿಂದಲೂ ಮೂತ್ರದ ಬಣ್ಣವು ಬದಲಾಗುತ್ತದೆ. ಆದರೆ ಔಷಧಿ ಸೇವನೆ ನಿಲ್ಲಿಸಿದಾಗ ಮೂತ್ರದ ಬಣ್ಣ ಮತ್ತೆ ಮೊದಲಿನಂತಾಗುವುದು. ಇಂದು ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ಮೂತ್ರದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಸಿಕೊಡಲಿದೆ. ಇದನ್ನು ನೀವು ತಿಳಿಯಿರಿ....

ಪಾರದರ್ಶಕ

ಪಾರದರ್ಶಕ

ಹೊಟ್ಟೆ ತುಂಬಾ ನೀರು ಕುಡಿದ ಬಳಿಕ ಕೊಂಚ ಹೊತ್ತಿನಲ್ಲಿಯೇ ಮೂತ್ರವಿಸರ್ಜನೆಯಾದರೆ ಬಹುತೇಕ ಮೂತ್ರ ಪಾರದರ್ಶಕವಾಗಿರುತ್ತದೆ. ಏಕೆಂದರೆ ಮೂತ್ರಕೋಶಗಳು ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಲಾಗದೇ ಹೆಚ್ಚುವರಿ ನೀರನ್ನು ಹೊರಹಾಕುತ್ತದೆ. ಇದಕ್ಕೂ ಮುನ್ನ ಸಂಗ್ರಹವಾಗಿದ್ದ ಲವಣಗಳು ಕರಗಿ ನಸುವಾದ ಹಳದಿ ಬಣ್ಣ ಇರುತ್ತದೆ. ಇದೇ ಕಾರಣಕ್ಕೆ ಒಮ್ಮೆಲೇ ತುಂಬಾ ಪ್ರಮಾಣದ ನೀರನ್ನು ಕುಡಿಯುವ ಬದಲು ಸ್ವಲ್ಪ ಸ್ವಲ್ಪನಾಗಿ ಪ್ರತಿ ಗಂಟೆಗೆ ಅಥವಾ ಎರಡು ಗಂಟೆಗಳಿಗೊಮ್ಮೆ ಕುಡಿಯುವುದನ್ನು ವೈದ್ಯರು ಸಲಹೆ ನೀಡುತ್ತಾರೆ. ಆದರೆ ತುಂಬಾ ಹೆಚ್ಚು ನೀರು ಕುಡಿಯುವುದೂ ಅಪಾಯಕಾರಿಯಾಗಿದೆ. ಏಕೆಂದರೆ ಹೊಟ್ಟೆಯಲ್ಲಿರುವ ಜಠರರಸ ಮತ್ತು ಕರುಳುಗಳ ರಸಗಳು ಹೆಚ್ಚಿನ ನೀರಿನಿಂದಾಗಿ ತಿಳಿಗೊಂಡು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. (water intoxication), ಅಲ್ಲದೇ ದೇಹಕ್ಕೆ ಅಗತ್ಯವಾದ ಲವಣಗಳೂ ಈ ಹೆಚ್ಚಿನ ನೀರನ್ನು ಹೊರದೂಡುವ ಪ್ರಕ್ರಿಯೆಯಲ್ಲಿ ಹೊರಹೋಗುತ್ತವೆ. ಇದು ಅತಿ ಅಪಾಯಕಾರಿ ಸ್ಥಿತಿಯಲ್ಲದಿದ್ದರೂ ಆತಂಕವನ್ನಂತೂ ಹುಟ್ಟುಹಾಕುತ್ತದೆ. ಆದ್ದರಿಂದ ದೇಹ ಸಾಕು ಎಂದು ಸೂಚನೆ ನೀಡಿದಾಗ ನೀರು ಕುಡಿಯುವುದನ್ನು ನಿಲ್ಲಿಸಿಬಿಡಿ.

ಯಾವುದೇ ಬಣ್ಣವಿಲ್ಲದಿರುವುದು

ಯಾವುದೇ ಬಣ್ಣವಿಲ್ಲದಿರುವುದು

ನೀರು ಕುಡಿದ ಬಳಿಕ ಕೊಂಚ ವೇಳೆಯ ನಂತರ ವಿಸರ್ಜಿಸಿದ ಮೂತ್ರ ಸ್ವಲ್ಪವೂ ಬಣ್ಣವಿಲ್ಲದೇ ಇದ್ದರೆ ಅಥವಾ ಪೂರ್ಣವಾಗಿ ಪಾರದರ್ಶಕವಾಗಿದ್ದರೆ ಇದು ಮಧುಮೇಹದ ಸೂಚನೆಯಾಗಿರಬಹುದು. ಜೊತೆಗೆ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತಿದೆಯೇ ಮತ್ತು ಪದೇ ಪದೇ ನೀರಡಿಕೆಯಾಗುತ್ತಿದೆಯೇ ಎಂದು ಗಮನಿಸಿ. ಈ ಸೂಚನೆಗಳು ಮಧುಮೇಹದ ಸ್ಪಷ್ಟ ಸೂಚನೆಗಳಾಗಿವೆ. ಕೂಡಲೇ ವೈದ್ಯರಿಂದ ಅಥವಾ ಪ್ರಮಾಣೀಕೃತ ವೈದ್ಯಕೀಯ ತಪಾಸಣಾ ಪ್ರಯೋಗಾಲಯದಲ್ಲಿ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಿ.

ಕಂದು ಬಣ್ಣ

ಕಂದು ಬಣ್ಣ

ಮೂತ್ರದಲ್ಲಿನ ಕಂದು ಬಣ್ಣವು ದೇಹದ ಕೆಲವೊಂದು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮವಿರಬಹುದು. ಯಕೃತ್ ನ ಕಾಯಿಲೆ ಇರುವಂತಹ ಜನರಲ್ಲಿ ಕಂದು ಬಣ್ಣದ ಮೂತ್ರ ಕಂಡುಬರುವುದು. ಯಕೃತ್ ಸರಿಯಾಗಿ ಕೆಲಸ ಮಾಡದೆ ಇದ್ದರೆ ಆಗ ಪಿತ್ತರಸದ ಉಪ್ಪಿನಾಂಶವು ಮಲದ ಮೂಲಕ ಹೊರಹೋಗಬೇಕಾಗಿದೆ. ಆದರೆ ರಕ್ತದಲ್ಲಿನ ಸಾಂದ್ರತೆಯು ಅತಿಯಾಗಿರುವ ಕಾರಣದಿಂದ ಇದು ಮೂತ್ರದ ಮೂಲಕ ಹೊರಹೋಗುವುದು. ಯಕೃತ್ ನಲ್ಲಿ ಉರಿಯೂತ ಉಂಟಾದರೆ ಆಗ ಹೆಪಟೈಟಿಸ್ ಉಂಟಾಗಬಹುದು. ಇದು ಮೂತ್ರದ ಬಣ್ಣವನ್ನು ಕಂದು ಬಣ್ಣಕ್ಕೆ ತಿರುಗಿಸಲು ಪ್ರಮುಖ ಕಾರಣವಾಗಿದೆ. ಇದು ನಿರ್ಜಲೀಕರಣದಿಂದ ಕೂಡ ಉಂಟಾಗಬಹುದು. ಇದರ ಬಗ್ಗೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಗುಲಾಯಿಯಿಂದ ಕಡುಕೆಂಪು

ಗುಲಾಯಿಯಿಂದ ಕಡುಕೆಂಪು

ಮೂತ್ರದಲ್ಲಿ ಕೆಂಪು ಬಣ್ಣವು ರಕ್ತದಿಂದಾಗಿ ಬರುವುದು. ಇದನ್ನು ಹೆಮಟುರಿಯಾ ಎಂದು ಕರೆಯಲಾಗುವುದು. ಮೂತ್ರದಲ್ಲಿ ಕೆಂಪು ಬಣ್ಣವು ತುಂಬಾ ಅಪಾಯಕಾರಿ ಸಂಕೇತ. ಮೂತ್ರವು ಕೆಂಪು ಬಣ್ಣಕ್ಕೆ ತಿರುವುದು ಮೂತ್ರನಾಳದ ಸೋಂಕು, ಕಿಡ್ನಿ ಅಥವಾ ಮೂತ್ರಕೋಶದಲ್ಲಿ ಕಲ್ಲಿನಿಂದಾಗಿ ರಕ್ತಸ್ರಾವವಾಗಿ, ಮೂತ್ರದ ಬಣ್ಣವು ಕೆಂಪಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮೂತ್ರದ ಬಣ್ಣವು ಕೆಂಪಾಗುವುದರ ಜತೆಗೆ ನೋವು ಬರುವುದು ಮತ್ತು ಮೂತ್ರ ವಿಸರ್ಜನೆಗೆ ಕಷ್ಟವಾಗುವುದು. ಕೆಂಪು ಅಥವಾ ಗುಲಾಬಿ ಬಣ್ಣವು ನೀವು ಸೇವಿಸಿದ ಕೆಲವೊಂದು ಆಹಾರಗಳಿಂದಲೂ ಬರಬಹುದು. ಇದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಬೀಟ್ ರೂಟ್, ನೇರಳೆ ಇತ್ಯಾದಿ ಹಣ್ಣುಗಳಿಂದ ಮೂತ್ರದ ಬಣ್ಣ ಗುಲಾಬಿ ಅಥವಾ ಕೆಂಪಾಗಬಹುದು. ಆಹಾರದಿಂದ ಮೂತ್ರದ ಬಣ್ಣವು ಕೆಂಪಾಗಿರದಿದ್ದರೆ ಅಥವಾ ಪದೇ ಪದೇ ಇದೇ ರೀತಿಯಾಗುತ್ತಿದ್ದರೆ ಇದು ಗಂಭೀರವ ಆರೋಗ್ಯ ಸಮಸ್ಯೆಯ ಲಕ್ಷಣವಾಗಿದೆ.

ನೀಲಿ ಬಣ್ಣ

ನೀಲಿ ಬಣ್ಣ

ತುಂಬಾ ಅಪರೂಪದ ಪರಿಸ್ಥಿತಿಯನ್ನು ಪೊರ್ಫೀರಿಯಾ ಎಂದು ಕರೆಯಲಾಗುತ್ತದೆ. ಅನುವಂಶಿಯವಾಗಿರುವ ಕಿಣ್ವದ ಪರಿಸ್ಥಿತಿಯಿಂದಾಗಿ ಮೂತ್ರದ ಬಣ್ಣವು ನೀಲಿ ಅಥವಾ ನೇರಳೆಯಾಗುವುದು. ಇದರಿಂದಾಗಿ ಮೂತ್ರದ ಬಣ್ಣವು ನೀಲಿಯಾಗಬಹುದು. ಆಹಾರ ಮತ್ತು ಔಷಧಿಯಲ್ಲಿನ ಕೆಲವೊಂದು ಬಣ್ಣಗಳಿಂದಾಗಿ ಮೂತ್ರವು ನೀಲಿಯಾಗಬಹುದು. ಮೂತ್ರವನ್ನು ನೀಲಿ ಬಣ್ಣಕ್ಕೆ ತರುವಂತಹ ಔಷಧಿಯೆಂದರೆ ಸೌಮ್ಯ ಮೂತ್ರವರ್ಧಕ ಅಥವಾ ವಯಾಗ್ರ. ಇದರಿಂದ ಮೂತ್ರದ ಬಣ್ಣ ನೀಲಿಯಾಗುವುದು.

ಹಸಿರು

ಹಸಿರು

ಸಾಮಾನ್ಯವಾಗಿ ಚರ್ಮದಲ್ಲಿ ಯಾವುದಾದರೂ ಮುಳ್ಳು ಚುಚ್ಚಿಕೊಂಡರೆ ಕೆಲವು ದಿನಗಳ ಬಳಿಕ ಆ ಮುಳ್ಳಿನ ಸುತ್ತ ಕೀವು ತುಂಬಿಕೊಂಡು ಮುಳ್ಳನ್ನು ಸಡಿಲಗೊಳಿಸಿ ಕೀವಿನ ಮೂಲಕ ಹೊರದಬ್ಬುತ್ತದೆ. ಇಂದು ಒಂದು ರೀತಿಯ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯಾಗಿದೆ. ಕೆಲವೊಮ್ಮೆ ಯಾವುದೋ ಕಾರಣದಿಂದ ಮೂತ್ರನಾಳದ ಒಳಭಾಗದಲ್ಲಿ ಅತಿಸೂಕ್ಷ್ಮವಾದ ಗೀರುಗಳಾದರೆ ಆ ಗೀರುಗಳಲ್ಲಿಯೂ ಕೀವು ತುಂಬಿಕೊಳ್ಳುತ್ತದೆ. ಈ ಕೀವು ಹೊರಬಂದು ಮೂತ್ರದೊಡನೆ ಹೊರಬರುತ್ತದೆ. ಈ ಕೀವು ಮೂತ್ರಕ್ಕೆ ನಸು ಹಸಿರು ಬಣ್ಣ ನೀಡುತ್ತದೆ. ಕೆಲವೊಮ್ಮೆ ಶತಾವರಿಯ ಸೇವನೆಯೂ ಮೂತ್ರದಲ್ಲಿ ಹಸಿರು ಬಣ್ಣ ಬರುವಂತೆ ಮಾಡುತ್ತದೆ. ಕೇವಲ ಒಂದೆರಡು ಬಾರಿ ಮೂತ್ರ ಹಸಿರು ಬಣ್ಣಕ್ಕಿದ್ದು ಬಳಿಕ ನಸು ಹಳದಿಯಾದರೆ ಈ ತೊಂದರೆ ತಾತ್ಕಾಲಿಕ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ಎರಡನೆಯ ದಿನವೂ ಮೂತ್ರ ಹಸಿರು ಬಣ್ಣಕ್ಕಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗಿದೆ.

ಮೂತ್ರದಲ್ಲಿ ನೊರೆ

ಮೂತ್ರದಲ್ಲಿ ನೊರೆ

ಮೂತ್ರದಲ್ಲಿ ಪ್ರೋಟೀನ್ ಹೊರಹೋಗುವುದರಿಂದ ಹೀಗೆ ಆಗಬಹುದು. ಇದರ ಬಗ್ಗೆ ತಕ್ಷಣ ತಪಾಸಣೆ ಮಾಡಿಕೊಳ್ಳಿ. ಕಿಡ್ನಿ ಅಥವಾ ಮೂತ್ರಕೋಶದ ಸಮಸ್ಯೆಯಿಂದ ಹೀಗೆ ಆಗಬಹುದು. ಪ್ರತೀ ಸಲ ಮೂತ್ರ ವಿಸರ್ಜನೆ ವೇಳೆ ನೊರೆ ಬರುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ.

ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ, ಆರೋಗ್ಯ ಸಮಸ್ಯೆವಿದೆ ಎಂದರ್ಥ!

ಹಾಲಿನ ಬಣ್ಣದ ಮೂತ್ರ

ಹಾಲಿನ ಬಣ್ಣದ ಮೂತ್ರ

ಈಗ ತಾನೇ ಹಾಲನ್ನು ನೀರಿನಲ್ಲಿ ಸೇರಿಸಿದಾದ ಅತ್ತ ಪೂರ್ಣ ಬೆಳ್ಳಗೂ ಅಲ್ಲದೇ ತೆಳುವಾಗಿದ್ದರೆ ಅಪಾಯದ ಸಂಕೇತವಾಗಿದೆ. ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ರೋಗವಾದ ಗೋನೋರಿಯಾ ವೈರಸ್ ಗಳು ದೇಹವನ್ನು ಆವರಿಸಿದರೆ ಮೂತ್ರ ಹೊರಬರುತ್ತಿರುವಾಗ ಬಿಳಿ ಕಪ್ಪು ಬಣ್ಣಗಳ ಮಿಶ್ರಣದಂತೆ (ಮೋಡದಂತೆ) ಇರುತ್ತದೆ. ನಸು ಬೆಳ್ಳಗಿದ್ದರೆ ಮೂತ್ರನಾಳ, ಮೂತ್ರಕೋಶ, ಮೂತ್ರಪಿಂಡಗಳ ಸೋಂಕು ಇರುವುದನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಮಾಸಿಕ ಋತುಸ್ರಾವ ಹೆಚ್ಚಾಗಿದ್ದರೆ ಸಹಾ ಮೂತ್ರ ಮೋಡದಂತಿರುತ್ತದೆ.

ಕಪ್ಪು

ಕಪ್ಪು

ಒಂದು ವೇಳೆ ಮೂತ್ರ ಕೋಕಾ ಕೋಲಾದಷ್ಟು ಕಪ್ಪಗಿದ್ದರೆ ಮೂತ್ರದಲ್ಲಿ ದೇಹದಲ್ಲಿ ಅನಗತ್ಯವಾದ ಯಾವುದೋ ರಾಸಾಯನಿಕ ಸೇರಿಕೊಂಡಿದೆ ಎಂದು ತಿಳಿಯಬಹುದು. ಸಾಮಾನ್ಯವಾಗಿ ಮಾದಕದ್ರವ್ಯ ವ್ಯಸನಿಗಳಲ್ಲಿ ಈ ಬಣ್ಣ ಕಾಣಿಸಿಕೊಳ್ಳುತ್ತದೆ. ಈ ಬಣ್ಣ ಕಂಡ ಮರುಕ್ಷಣವೇ ವೈದ್ಯರನ್ನು ಸಂಪರ್ಕಿಸಲೇಬೇಕು.

English summary

Things The Color Of Your Pee Says About Your Health

The waste products from our body are excreted through urine and faeces. Urine is formed in kidneys which filter out the waste products from blood into the urine and retains the useful or essential back into the blood. The colour of your urine is an important health indicator which should always be noticed. hav a look
X
Desktop Bottom Promotion