For Quick Alerts
ALLOW NOTIFICATIONS  
For Daily Alerts

ಹನಿಮೂನ್ ಸಮಯದಲ್ಲಿ ಈ ಎಲ್ಲಾ ಸಂಗತಿಗಳು 'ಲೈಂಗಿಕ ಬಯಕೆ'ಯನ್ನು ಭಂಗಗೊಳಿಸಬಹುದು!

By Arshad
|

ಮಳೆಗಾಲ ಮುಗಿದ ಬಳಿಕ ಹೆಚ್ಚಿನ ವಿವಾಹ ಸಮಾರಂಭಗಳು ಶುರುವಾಗಿ ಬಿಡುತ್ತವೆ, ಈ ಅವಧಿಯಲ್ಲಿ ಹನಿಮೂನ್ ಅಥವಾ ಮಧುಚಂದ್ರದ ಪ್ರಯಾಣಗಳೂ ಗರಿಷ್ಟವಾಗಿರುತ್ತವೆ. ತಮ್ಮ ದಾಂಪತ್ಯ ಜೀವನದ ಪ್ರಥಮ ಪ್ರಯಾಣವನ್ನು ಭಿನ್ನವಾಗಿ ಆರಂಭಿಸಲು ಪ್ರತಿ ದಂಪತಿಗಳೂ ತಮ್ಮದೇ ಆದ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ ಹಾಗೂ ಇದಕ್ಕಾಗಿ ಮುಂಗಡ ಟಿಕೆಟ್ಟುಗಳನ್ನೂ ಖರೀದಿಸಿರುತ್ತಾರೆ. ಇಂದು ವಿವಾಹದ ಖರ್ಚಿನಲ್ಲಿ ಮಧುಚಂದ್ರದ ಖರ್ಚನ್ನೂ ಒಳಗೊಂಡಿರುವುದು ಸಾಮಾನ್ಯವಾಗಿದ್ದು ದಂಪತಿಗಳು ಪರಸ್ಪರ ಅರಿತುಕೊಳ್ಳಲು ಹಾಗೂ ಅನ್ಯೋನ್ಯತೆಯ ಭದ್ರ ಬುನಾದಿಗಾಗಿ ಈ ಪ್ರಯಾಣ ಶ್ರೇಯಸ್ಕರವೂ ಆಗಿದೆ.

ಪ್ರತಿ ದಂಪತಿಗಳಿಗೂ ಮಧುಚಂದ್ರ ಅತ್ಯಂತ ಆತ್ಮೀಯವಾದ ಸಮಯವಾಗಿದ್ದು ಜೀವನಸಂಗಾತಿಯೊಂದಿಗೆ ಕಳೆಯಬಹುದಾದ ಸ್ಮರಣೀಯ ಕ್ಷಣಗಳಾಗಿ ಮಾರ್ಪಾಡು ಹೊಂದುತ್ತವೆ ಹಾಗೂ ಜೀವಮಾನವಿಡೀ ಈ ಕ್ಷಣಗಳು ನೆನಪಿನಲ್ಲಿರುತ್ತವೆ. ಈ ಸಮಯದಲ್ಲಿ ಪರಸ್ಪರ ಸಾಂಗತ್ಯ, ದೈಹಿಕ ಮತ್ತು ಮಾನಸಿಕವಾಗಿ ಒಬ್ಬರಿಗೊಬ್ಬರು ಅರ್ಪಿಸಿಕೊಳ್ಳುವುದು ಹಾಗೂ ಜೀವಮಾನವಿಡೀ ಕಷ್ಟಸುಖಗಳಲ್ಲಿ ಭಾಗಿಯಾಗುವ ವಿವಾಹ ಪ್ರತಿಜ್ಞೆಯನ್ನು ಸಾಕಾರಗೊಳಿಸಲು ಆರಂಭಿಸುವುದಕ್ಕೆ ಭದ್ರ ಬುನಾದಿ ಲಭಿಸುತ್ತದೆ. ಆದರೆ ಮಧುಚಂದ್ರದಲ್ಲಿಯೂ ಕೆಲವು ವಿಷಯಗಳು ದಂಪತಿಗಳ ನಡುವೆ ಗೋಡೆಯಂತೆ ನಿಲ್ಲಬಹುದು ಹಾಗೂ ಲೈಂಗಿಕ ಬಯಕೆಯನ್ನು ಭಂಗಗೊಳಿಸಬಹುದು! ಅಚ್ಚರಿ ಎನ್ನಿಸಿದರೂ ಈ ವಿಷಯಗಳು ನಿಜವಾಗಿದ್ದು, ಮಧುಚಂದ್ರಕ್ಕೆ ಹೋಗಲಿರುವ ಪ್ರತಿ ದಂಪತಿಗಳು ಈ ವಿಷಯಗಳಿಂದ ದೂರವಿರುವುದು ಅಗತ್ಯವಾಗಿದೆ...

ಅತಿ ಹೆಚ್ಚು ಕೆಫೇನ್ ಅಥವಾ ಮದ್ಯ

ಅತಿ ಹೆಚ್ಚು ಕೆಫೇನ್ ಅಥವಾ ಮದ್ಯ

ನಿತ್ಯದ ಸೇವನೆಯ ಪ್ರಮಾಣಕ್ಕೂ ಹೆಚ್ಚಿನ ಪ್ರಮಾಣದ ಮದ್ಯ ಅಥವಾ ಕೆಫೀನ್ ಸೇವನೆಯಿಂದ ಲೈಂಗಿಕ ಬಯಕೆ ಕುಂಠಿತಗೊಳ್ಳಬಹುದು. ವಾಸ್ತವವಾಗಿ ಕೆಫೀನ್ ಲೈಂಗಿಕ ಬಯಕೆಯನ್ನು ಪ್ರಚೋದಿಸುವ ರಾಸಾಯನಿಕವಾಗಿದ್ದು ವ್ಯಕ್ತಿಯಲ್ಲಿ ಉದ್ವೇಗವನ್ನು ಉಂಟುಮಾಡಬಹುದು ಹಾಗೂ ತನ್ಮೂಲಕ ಲೈಂಗಿಕ ಶಕ್ತಿಯನ್ನೇ ಕುಂದಿಸಬಹುದು. ಅಲ್ಲದೇ ಮದ್ಯ ಯಾವತ್ತಿದ್ದರೂ ಕೆಟ್ಟದ್ದೇ ಆಗಿದ್ದು ಮಧುಚಂದ್ರದ ಸಮಯದಲ್ಲಿಯೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. ಮದ್ಯದ ಅಮಲು ನಿಮಿರುದೌರ್ಬಲ್ಯವನ್ನು ಎದುರಿಸುತ್ತದೆ ಹಾಗೂ ಭಾವಾತಿರೇಕದ ಗುಣಮಟ್ಟವನ್ನೂ ಕುಂದಿಸುತ್ತದೆ. ಹಾಗಾಗಿ ಮಧುಚಂದ್ರದ ಸಮಯದಲ್ಲಿ ಇತರ ಸಮಯದಲ್ಲಿ ಸೇವಿಸುವಷ್ಟೇ ಕೆಫೀನ್ -ಮದ್ಯ (ಅನಿವಾರ್ಯವೆಂದರೆ ಮಾತ್ರ) ಸಾಕು.

Most Read: ಮಲಗುವಾಗ ಮಹಿಳೆಯರು ಒಳ ಉಡುಪು ಹಾಗೂ ಬ್ರಾ ಧರಿಸದೇ ಮಲಗಬೇಕಂತೆ!

ದಿನದಲ್ಲಿ ಸುಸ್ತಾಗುವ ಕೆಲಸ ಮಾಡುವುದು

ದಿನದಲ್ಲಿ ಸುಸ್ತಾಗುವ ಕೆಲಸ ಮಾಡುವುದು

ಮಧುಚಂದ್ರದ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳುವುದು ಅಗತ್ಯವಾಗಿದೆ. ದಿನದ ಅವಧಿಯಲ್ಲಿ ದೇಹ ದಣಿಯುವ ಚಟುವಟಿಕೆಗಳನ್ನು ನಡೆಸಿದರೆ ಇದು ಸಹಾ ಲೈಂಗಿಕ ಬಯಕೆಯನ್ನು ಕುಗ್ಗಿಸಬಹುದು. ಒಂದು ಅಧ್ಯಯನದ ಪ್ರಕಾರ ಲೈಂಗಿಕ ಬಯಕೆ ಕುಗ್ಗಲು ನಿದ್ದೆಯ ಕೊರತೆಯೇ ಪ್ರಮುಖ ಕಾರಣವಾಗಿದೆ ಹಾಗೂ ದಣಿವಾಗಿಸುವ ದೈಹಿಕ ಚಟುವಟಿಕೆಗಳು ರಾತ್ರಿ ಬೇಗನೇ ನಿದ್ದೆ ಆವರಿಸುವಂತೆ ಮಾಡುತ್ತವೆ. ಆದ್ದರಿಂದ ಮಧುಚಂದ್ರಕ್ಕೆ ಬಂದಿದ್ದಾಗ ಹಗಲಿನ ಅವಧಿಯಲ್ಲಿ ಓಟ, ಟ್ರೆಕ್ಕಿಂಗ್, ಸೈಕ್ಲಿಂಗ್ ಮೊದಲಾದವುಗಳನ್ನು ಮುಂದಿನ ದಿನಗಳಿಗೆ ಮುಂದೂಡುವುದೇ ಉತ್ತಮ

ಹೊಸ ಔಷಧಿಗಳನ್ನು ಪ್ರಾರಂಭಿಸಿರುವುದು

ಹೊಸ ಔಷಧಿಗಳನ್ನು ಪ್ರಾರಂಭಿಸಿರುವುದು

ಒಂದು ವೇಳೆ ಯಾವುದೋ ಚಿಕಿತ್ಸೆಗಾಗಿ ನೀವು ಔಷಧಿಗಳನ್ನು ಸೇವಿಸಲು ಈಗತಾನೇ ಆರಂಭಿಸಿದ್ದರೆ ಇದು ಸಹಾ ಲೈಂಗಿಕ ಬಯಕೆ ಕುಗ್ಗಲು ಕಾರಣವಾಗಬಲ್ಲುದು. ಹೊಸ ಔಷಧಿ ದೇಹಕ್ಕೆ ಒಗ್ಗುವವರೆಗೂ ಪ್ರತಿ ವ್ಯಕ್ತಿಯಲ್ಲಿಯೂ ಭಿನ್ನವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ಹೆಚ್ಚಿನವರಲ್ಲಿ ಇದು ಲೈಂಗಿಕ ಶಕ್ತಿಯನ್ನೂ ಉಡುಗಿಸಬಹುದು. ಒಂದು ವೇಳೆ ಹೊಸ ಔಷಧಿಯನ್ನು ಸೇವಿಸಲು ಪ್ರಾರಂಭಿಸಿದ ಬಳಿಕ ಉದ್ರೇಕ ಪಡೆಯಲು ಕಷ್ಟವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದು ಮಧುಚಂದ್ರದ ಅವಧಿ ಮುಗಿಯುವವರೆಗೂ ಇದರ ಸೇವನೆಯನ್ನು ಮುಂದೂಡುವುದೇ ಉತ್ತಮ.

Most Read: ಈ ರಾಶಿಚಕ್ರದವರು ಪ್ರಚಂಡ ಮಾತುಗಾರರು... ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಸಾಕು ಎಂದರೂ ನಿಲ್ಲಿಸದವರು!

ಗೊರಕೆಯ ತೊಂದರೆ

ಗೊರಕೆಯ ತೊಂದರೆ

ಒಂದು ವೇಳೆ ದಂಪತಿಗಳಿಬ್ಬರಲ್ಲಿ ಒಬ್ಬರಾದರೂ ಗೊರಕೆ ಹೊಡೆಯುವ ಅಭ್ಯಾಸ ಹೊಂದಿದ್ದರೆ ಇದು ಸಹಾ ಲೈಂಗಿಕ ಅತೃಪ್ತಿಗೆ ಕಾರಣವಾಗಬಹುದು. ಮಧುಚಂದ್ರಕ್ಕೆ ಹೋಗುವ ಮುನ್ನ ಈ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ವೈದ್ಯರನ್ನು ಸಂಪರ್ಕಿಸಿ ಈ ತೊಂದರೆಯಿಂದ ಹೊರಬದಲು ಸುಲಭ ವಿಧಾನ ಹಾಗೂ ಔಷಧಿಗಳನ್ನು ಪಡೆದುಕೊಳ್ಳಬೇಕು. ಅಪರೂಪದ ಸಂದರ್ಭಗಳಲ್ಲಿ ಗೊರಕೆ ಹೊಡೆಯುವ ಮಹಿಳೆಯರು ಹಾಗೂ ಪುರುಷರದಲ್ಲಿ ಟೆಸ್ಟೋಸ್ಟೆರಾನ್ ರಸದೂತದ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ ಆದ್ದರಿಂದ ಗೊರಕೆಯನ್ನು ನೈಸರ್ಗಿಕವಾಗಿ ಕಡಿಮೆಯಾಗಿಸುವ ವಿಧಾನಗಳನ್ನೇ ಅನುಸರಿಸುವುದು ಸೂಕ್ತವಾಗಿದೆ.

ಕೆಲವು ಆಹಾರಗಳನ್ನು ಸೇವಿಸಿ, ಕೆಲವನ್ನು ವರ್ಜಿಸಿ

ಕೆಲವು ಆಹಾರಗಳನ್ನು ಸೇವಿಸಿ, ಕೆಲವನ್ನು ವರ್ಜಿಸಿ

ಕೆಲವು ಆಹಾರಗಳು ಲೈಂಗಿಕ ಬಯಕೆಯನ್ನು ಕುಂದಿಸುತ್ತವೆ. ಈ ಆಹಾರಗಳು ರುಚಿಯಾಗಿದ್ದರೂ ಅನಿವಾರ್ಯವಾಗಿ ವರ್ಜಿಸಬೇಕು. ವಿಶೇಷವಾಗಿ ಮಸಾಲೆಯುಕ್ತ ಹಾಗೂ ಖಾರವಾದ ಆಹಾರಗಳು. ಇವು ವ್ಯಕ್ತಿಯಲ್ಲಿನ ಟೆಸ್ಟಾಸ್ಟೆರಾನ್ ಮಟ್ಟವನ್ನು ಕುಗ್ಗಿಸುತ್ತವೆ. ವ್ಯತಿರಿಕ್ತವಾಗಿ ಪುದಿನಾ, ಅಗಸೆ ಬೀಜ, ಸ್ಟ್ರಾಬೆರಿ, ಸೋಯಾ, ಬೀಟ್ರೂಟ್, ಕಲ್ಲಂಗಡಿ, ಕಾರ್ಬೋಹೈಟ್ರೇಟ್ ಭರಿತ ಆಹಾರಗಳು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು, ಆದರೆ ಸಾಕಷ್ಟು ಮುನ್ನೆಚ್ಚರಿಕೆಯನ್ನೂ ವಹಿಸಬೇಕು.

ಡೈರಿ ಉತ್ಪನ್ನಗಳಿಂದ ದೂರವಿರಿ

ಡೈರಿ ಉತ್ಪನ್ನಗಳಿಂದ ದೂರವಿರಿ

ಹಾಲಿನ ಉತ್ಪನ್ನಗಳನ್ನು ಈ ಸಮಯದಲ್ಲಿ ಸೇವಿಸದಿರುವುದೇ ಒಳ್ಳೆಯದು, ಏಕೆಂದರೆ ಇವು ವ್ಯಕ್ತಿಯ ಈಸ್ಟೋಜೆನ್ ಮತ್ತು ಟೆಸ್ಟಾಸ್ಟೆರಾನ್ ಮಟ್ಟಗಳನ್ನು ಬಾಧಿಸಬಹುದು. ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ವೃದ್ದಿಸಲು ಟೆಸ್ಟಾಸ್ಟೆರಾನ್ ಅತಿ ಅಗತ್ಯವಾದ ರಸದೂತವಾಗಿದೆ. ಹಾಲು, ಮೊಸರು, ಚೀಸ್ ಮೊದಲಾದವುಗಳ ಸೇವನೆಯಿಂದ ಟೆಸ್ಟಾಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ಈಸ್ಟ್ರೋಜೆನ್ ಮಟ್ಟ ಏರುತ್ತದೆ. ಅದರಲ್ಲೂ ಡೈರಿ ಉತ್ಪನ್ನಗಳನ್ನು ಅತಿ ಹೆಚ್ಚಾಗಿ ಸೇವಿಸಿದರೆ ವ್ಯಕ್ತಿಯಲ್ಲಿ ಉದ್ವೇಗವೂ ಹೆಚ್ಚುತ್ತದೆ ಹಾಗೂ ಲೈಂಗಿಕ ಬಯಕೆ ಕುಂಠಿತವಾಗುತ್ತದೆ.

Most Read:ಪುರುಷರ ಶಿಶ್ನದ ಮುಂದೊಗಲಿನ ಸಮಸ್ಯೆಗೆ ಒಂದಿಷ್ಟು ಸರಳ ಟಿಪ್ಸ್

ನಶೆ/ಧೂಮಪಾನದಿಂದ ದೂರವಿರಿ

ನಶೆ/ಧೂಮಪಾನದಿಂದ ದೂರವಿರಿ

ಒಂದು ಕಾಲದಲ್ಲಿ ಸಿನೆಮಾ ಹೀರೋ ಎಂದರೆ ಸಿಗರೇಟು ಇರಲೇಬೇಕೆಂಬ ಒಂದು ನಿಯಮವಿತ್ತು. ಇಂದಿಗೂ ಧೂಮಪಾನದ ಮೂಲಕ ತಮ್ಮ ಅಹಮ್ಮಿಕೆಯನ್ನು ಹೆಚ್ಚಿಸಿಕೊಳ್ಳುವ ವ್ಯಕ್ತಿಗಳಿದ್ದಾರೆ. ಧೂಮಪಾನ ಅಥವಾ ಯಾವುದೇ ಬಗೆಯ ನಶೆ ಆರೋಗ್ಯಕ್ಕೆ ಮಾರಕವೇ ಹೌದು. ಆದರೂ ಕೆಲವು ದಂಪತಿಗಳು ಪರಸ್ಪರ ಒಬ್ಬರ ಎದುರು ಇನ್ನೊಬ್ಬರು ಕೀಳಾಗಬಾರದು ಎಂದುಕೊಂಡು ತಮ್ಮ ಈ ಚಟಗಳನ್ನು ಮಧುಚಂದ್ರದ ಅವಧಿಯಲ್ಲಿಯೂ ತೋರ್ಪಡಿಸಿಕೊಳ್ಳುತ್ತಾರೆ ಅಥವಾ ಈಗಾಗಲೇ ವ್ಯಸನಿಯಾಗಿದ್ದು ಇದರಿಂದ ಹೊರಬರದ ಹಂತದಲ್ಲಿರುತ್ತಾರೆ. ಕಾರಣವೇನೇ ಇರಲಿ, ಮಧುಚಂದ್ರದ ಅವಧಿಯಲ್ಲಿ ಯಾವುದೇ ಬಗೆಯ ನಶೆ ಲೈಂಗಿಕ ಬಯಕೆಯನ್ನು ಕುಂಠಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಭಯಾನಕ ಮಾದಕ ಪದಾರ್ಥವಾದ ಮಾರಿಯುವಾನಾವನ್ನು ಸೇವಿಸಿದ ವ್ಯಕ್ತ್ಗಿಗಳಲ್ಲಿ ಮುಂದಿನ 24 ಘಂಟೆಗಳವರೆಗೂ ಟೆಸ್ಟಾಸ್ಟೆರಾನ್ ಮಟ್ಟ ಅತಿ ಕಡಿಮೆಯಾಗಿರುತ್ತದೆ.

English summary

Things That Can Kill Your Sex Drive During Honeymoon!

Honeymoon season is here, which means most of the couples are busy booking their tickets or have already planned on the destinations to visit during their honeymoon period. The honeymoon is so much a part of today's marriage, as it provides an opportunity for the couple to know each other closely. It is the best period when you can celebrate your marriage with your partner and gather some moments which you would cherish lifelong. Because honeymoon is the time when you both celebrate your togetherness, both physically and mentally, there are some things to consider in mind.
Story first published: Thursday, November 8, 2018, 20:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more