For Quick Alerts
ALLOW NOTIFICATIONS  
For Daily Alerts

ಕೆಲಸದ ಸ್ಥಳದಲ್ಲಿ ಮಹಿಳೆಯರು ಸೇವಿಸಬಾರದ ಏಳು ಆಹಾರಗಳು

|

ಕೆಲಸಬಾಹುಳ್ಯದ ನಡುವೆ ಆಗಾಗ ಹೊಟ್ಟೆ ಚುರುಗುಟ್ಟುವುದು ಸಹ ಹಾಗೂ ಇದನ್ನು ತಣಿಸಲು ಕಾಫಿಗೆ ಎಂದು ಹೋದರೂ ಏನಾದರೂ ಲಘು ಆಹಾರವನ್ನು ಸೇವಿಸುವುದು ನಮಗೆಲ್ಲಾ ರೂಢಿಯಾಗಿಬಿಟ್ಟಿದೆ. ಆದರೆ ನೆದರ್ಲ್ಯಾಂಡಿನ ಒಂದು ಸಾವಯವ ಆಹಾರ ಸಂಸ್ಥೆಯಾದ ಕಾಲ್ಲೋ ಒಂದು ಸಮೀಕ್ಷೆ ನಡೆಸಿದೆ ಹಾಗೂ ಈ ಮೂಲಕ ಕೆಲಸದ ಸ್ಥಳದಲ್ಲಿ ಅನಗತ್ಯವಾಗಿ ಆಹಾರವನ್ನು ಸೇವಿಸುವ ಓರ್ವ ಮಹಿಳೆ ವಾರ್ಷಿಕ ಸರಾಸರಿ ಒಂದು ಲಕ್ಷ ಕ್ಯಾಲೋರಿಗಳನ್ನು ಸೇವಿಸುತ್ತಾಳೆ ಎಂದು ವರದಿ ಮಾಡಿದೆ. ಅಂದರೆ ಇದು ಸುಮಾರು ಐವತ್ತು ದಿನಗಳ ಆಹಾರಕ್ಕೆ ಸಮ! ಒಂದು ವೇಳೆ ವಾರ್ಷಿಕ ನಲವತ್ತೈದು ವಾರಗಳಲ್ಲಿ ಒಂದೂ ರಜೆ ಪಡೆಯದೇ ಕಾರ್ಯನಿರ್ವಹಿಸಿದರೆ ಈ ಪ್ರಮಾಣ 100,800 ಕ್ಯಾಲೋರಿಗಳಾಗುತ್ತವೆ.

ಇದು ಸರಿಸುಮಾರು 1,254 ಲೋಟದಷ್ಟು ಪ್ರೋಸೆಕ್ಕೂ ವೈನ್ ಅಥವಾ 193 ದೊಡ್ಡ ಗಾತ್ರದ ಡಬಲ್ ಬರ್ಗರ್ ಅಥವಾ 502 ಬಾರ್ ಚಾಕಲೇಟುಗಳನ್ನು ತಿಂದಷ್ಟಾಗುತ್ತದೆ. ಈ ವಿಷಯವನ್ನು ಕೇಳಿದ ಆಹಾರತಜ್ಞರೇನೂ ಬೆಚ್ಚಿ ಬೀಳಲಿಲ್ಲ. ಏಕೆಂದರೆ ನಿತ್ಯವೂ ಅಗತ್ಯಕ್ಕೂ ಐನೂರು ಕ್ಯಾಲೋರಿಗಳನ್ನು ಸೇವಿಸಿದರೂ ಇದರಿಂದ ವಾರಕ್ಕೆ ಅರ್ಧ ಕೇಜಿಯಾದರೂ ತೂಕ ಹೆಚ್ಚುತ್ತದೆ ಎಂದು ಅವರು ಮಹಿಳೆಯರನ್ನು ಎಚ್ಚರಿಸುತ್ತಲೇ ಇದ್ದರೂ ಇವರ ಮಾತಿಗೆ ಮಹಿಳೆಯರು ಕಿವಿಗೊಡದೇ ಇರುವ ಕಾರಣ ಈ ಮಾಹಿತಿ ಇವರಿಗೆ ಅಚ್ಚರಿಯೇನೂ ಅನಿಸಲಿಲ್ಲ. ಒಂದು ವೇಳೆ ನೀವು ಉದ್ಯೋಗಸ್ಥ ಮಹಿಳೆಯಾಗಿದ್ದು ನಿಮಗೂ ಕೆಲಸದ ನಡುವೆ ಅನಗತ್ಯ ಆಹಾರ ಸೇವನೆಯ ಅಭ್ಯಾಸವಿದ್ದರೆ ಕೆಳಗೆ ವಿವರಿಸಿರುವ ಏಳು ಆಹಾರಗಳನ್ನು ತಿನ್ನದೇ ಇದ್ದಷ್ಟೂ ನಿಮಗೇ ಒಳ್ಳೆಯದು.

ಪ್ರೆಟ್ಜೆಲ್ ಕುರುಕು ತಿಂಡಿ

ಪ್ರೆಟ್ಜೆಲ್ ಕುರುಕು ತಿಂಡಿ

ಇದೊಂದು ಬಗೆಯ ಸಕ್ಕರೆ ಸಿಂಪಡಿಸಿದ ಕುರುಕು ಬ್ರೆಡ್ ಆಗಿದ್ದು ಆಯಾಸವಾಗುತ್ತಿದ್ದಾಗ ತಕ್ಷಣ ಶಕ್ತಿ ಪಡೆಯಲು ನೆರವಾಗುತ್ತದೆ ಎಂದೇ ಹೆಚ್ಚಿನ ಮಹಿಳೆಯರು ಈ ತಿಂಡಿಯ ಪೊಟ್ಟಣವನ್ನು ಸದಾ ತಮ್ಮೊಂದಿಗಿರಿಸಿಕೊಂಡಿರುತ್ತಾರೆ. ಕೇವಲ ಹತ್ತು ತುಂಡುಗಳಲ್ಲಿ 227 ಕ್ಯಾಲೋರಿಗಳಿವೆ. ಸಾಮಾನ್ಯವಾಗಿ ಇದರ ರುಚಿ ಹತ್ತಿದವರಿಗೆ ಒಂದೆರಡು ತುಂಡುಗಳು ಸಾಕಾಗುವುದಿಲ್ಲ. ಹಾಗಾಗಿ ಹೆಚ್ಚು ಹೆಚ್ಚು ತುಂಡುಗಳನ್ನು ಸೇವಿಸುತ್ತಲೇ ಹೋಗುತ್ತಾರೆ. ಆದರೆ ಈ ಹತ್ತು ತುಂಡುಗಳಿಂದ ಪಡೆದ ಕ್ಯಾಲೊರಿಗಳನ್ನು ಕರಗಿಸಲು ನಿಮಗೆ ಸುಮಾರು ನಲವತ್ತು ನಿಮಿಷವಾದರೂ ವ್ಯಾಯಾಮ ಮಾಡಬೇಕಾಗುತ್ತದೆ.

Most Read: ಕೆಲಸದ ಸ್ಥಳದಲ್ಲಿ ಮಹಿಳೆಯರು ಸೇವಿಸಬಾರದ ಏಳು ಆಹಾರಗಳು

​ನೆಲಗಡಲೆ

​ನೆಲಗಡಲೆ

ಈ ಬಡವರ ಬಾದಾಮಿ ಕ್ಯಾಲೋರಿಗಳನ್ನು ಕಡಿಮೆ ತಿನ್ನುವವರಿಗೆ ಪೌಷ್ಟಿಕ ಹಾಗೂ ರುಚಿಕರ ಆಹಾರವಾಗಿದ್ದರೂ ಇದು ವಾಸ್ತವದಲ್ಲಿ ಆರೋಗ್ಯಕಾರಿಯಲ್ಲ! ಏಕೆಂದರೆ ಇದರ ರುಚಿ ಒಮ್ಮೆ ನಾಲಿಗೆಗೆ ಹತ್ತಿತೆಂದರೆ ಆ ಪೊಟ್ಟಣದಲ್ಲಿದ್ದಷ್ಟೂ ನೆಲಗಡಲೆ ಖಾಲಿಯಾಗುವವರೆಗೂ ನಿಲ್ಲಿಸಲು ಸಾಮಾನ್ಯದವರಿಂದ ಸಾಧ್ಯವಿಲ್ಲ. ಕೇವಲ ಅರ್ಧ ಕಪ್ ನೆಲಗಡಲೆಯಲ್ಲಿ 430 ಕ್ಯಾಲೋರಿಗಳಿವೆ. ಇದನ್ನು ದಹಿಸಲು ಐವತ್ತು ನಿಮಿಷದ ಕಠಿಣ ವ್ಯಾಯಾಮದ ಅಗತ್ಯವಿದೆ!

ಒಣ ಹಣ್ಣುಗಳು ಮತ್ತು ಬೀಜಗಳು

ಒಣ ಹಣ್ಣುಗಳು ಮತ್ತು ಬೀಜಗಳು

ತಾಜಾ ಹಣ್ಣುಗಳೇ ಆರೋಗ್ಯಕ್ಕೆ ಅತ್ಯುತ್ತಮ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಂತೆಯೇ ಇವುಗಳ ಬೀಜಗಳು ಸಹಾ. ಆದರೆ ಇವುಗಳನ್ನು ಒಣಫಲಗಳಂತೆ ಯಾವಾಗ ಬೇಕಾದರೂ ಕೈಗೆ ಸುಲಭವಾಗಿ ಸಿಗುವಂತೆ ಇರಿಸಿಕೊಳ್ಳುವುದು ಕಷ್ಟ. ಹಾಗಾಗಿ ಒಣಫಲ ಮತ್ತು ಒಣಬೀಜಗಳನ್ನು ಹೆಚ್ಚಾಗಿ ತಮ್ಮ ಮೇಜಿನ ಡ್ರಾದೊಳಗೆ ಇರಿಸಿಕೊಳ್ಳುತ್ತಾರೆ. ಒಣಫಲ ಮತ್ತು ಬೀಜಗಳು ಆರೋಗ್ಯಕರವೇನೋ ಸರಿ, ಆದರೆ ಇದರ ಸೇವನೆಯ ಪ್ರಮಾಣಕ್ಕೆ ಮಿತಿಯಿದ್ದಾಗ ಮಾತ್ರ! ಕೆಲಸದ ಸಮಯದಲ್ಲಿ ಮನಸ್ಸು ಕೆಲಸದಲ್ಲಿ ತಲ್ಲೀನವಾಗಿದ್ದಾಗ ಒಂದೊಂದೇ ಫಲವನ್ನು ತಿನ್ನುತ್ತಾ ಹೋದಂತೆ ದಿನ ಕಳೆಯುವ ವೇಳೆಗೆ ದೊಡ್ಡ ಪ್ರಮಾಣವೇ ಆಗಿರುತ್ತದೆ ಹಾಗೂ ಇವುಗಳಲ್ಲಿ ಸಾಂದ್ರೀಕೃತಗೊಂಡಿದ್ದ ಕ್ಯಾಲೊರಿಗಳು ಬಹಳವೇ ಆಗಿರುತ್ತದೆ. ಇವು ನೇರವಾಗಿ ತೂಕದ ಏರಿಕೆಗೆ ಕಾರಣವಾಗಿವೆ.

ಹಾಲು ಬೆರೆಸಿದ ಕಾಫಿ

ಹಾಲು ಬೆರೆಸಿದ ಕಾಫಿ

ಭಾರತೀಯರಿಗೆ ಕಾಫಿ ಮತ್ತು ಟೀ ಎಂದರೆ ಹಾಲು ಬೆರೆಸಿದ ಕಾಫಿ ಮತ್ತು ಟೀ ಎಂದೇ ಗೊತ್ತಿದ್ದು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರವೇ ಕಪ್ಪು ಕಾಫಿ ಮತ್ತು ಟೀ ಕುಡಿಯುತ್ತಾರೆ. ಒಂದು ಕಪ್ ಹಾಲು ಬೆರೆಸಿದ ಕಾಫಿಯಿಂದ ಸುಲಭವಾಗಿ ಕನಿಷ್ಟ 80-100 ಕ್ಯಾಲೋರಿಗಳು ದೊರಕುತ್ತವೆ. ದಿನದಲ್ಲಿ ಕುಡಿಯುವ ಸುಮಾರು ಮೂರು ಕಪ್ ಕಾಫಿಯಿಂದ ಒಂದು ಹೊತ್ತಿನ ಊಟದಿಂದ ಲಭಿಸುವಷ್ಟು ಕ್ಯಾಲೋರಿಗಳು ಲಭಿಸುತ್ತವೆ! ತೂಕ ಏರಿಕೆಗೂ ಕಾಫಿ ಸೇವನೆಗೂ ನಿಕಟ ಸಂಬಂಧವಿದೆ. ಹಾಗಾಗಿ ಕಾಫಿಗೆ ಎಂದು ಹೋದಾಗ ಹಾಲಿಲ್ಲದ ಕಾಫಿ ಟೀ ಕುಡಿಯುವುದನ್ನು ಇನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಡೋನಟ್

ಡೋನಟ್

ಸಾಮಾನ್ಯವಾಗಿ ಕೆಲಸದ ಸ್ಥಳದಲ್ಲಿ ಇನ್ನೊಬ್ಬರ ಮೇಲೆ ಪ್ರಭಾವ ಬೀರಲೆಂದೇ ತಿನ್ನುವ ವಿದೇಶೀ ತಿನಿಸುಗಳಲ್ಲಿ ಡೋನಟ್ ಎಂಬ ಉದ್ದಿನವಡೆಯಾಕೃತಿಯ ಸಿಹಿಪದಾರ್ಥ ಇಂದು ಹೆಚ್ಚು ಮಹಿಳೆಯರ ಮನಸೆಳೆದಿದೆ. ಇದರಲ್ಲಿ ಅಪಾರ ಪ್ರಮಾಣದ ಸಕ್ಕರೆ ಇದೆ ಹಾಗೂ ಇದನ್ನು ಸುಂದರವಾಗಿಸಲು ಇದರ ಮೇಲೆ ಹೊಯ್ಯುವ ಚಾಕಲೇಟ್ ರುಚಿಯನ್ನು ಹೆಚ್ಚಿಸುವ ಜೊತೆಗೇ ಒಂದೇ ಡೋನಟ್ ನಿಂದ 250 ಕ್ಯಾಲೋರಿಗಳನ್ನು ಒದಗಿಸುತ್ತದೆ. ಇದನ್ನು ಕರಗಿಸಲು ನಲವತ್ತು ನಿಮಿಷ ಕಠಿಣ ವ್ಯಾಯಾಮ ಮಾಡಬೇಕಾಗುತ್ತದೆ.

Most Read: ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!

ಕೇಕ್

ಕೇಕ್

ಮೊದಲೆಲ್ಲಾ ಕೇಕ್ ಎಂದರೆ ದೊಡ್ಡ ವೃತ್ತಾಕಾರದ ಕೇಕ್ ಆಗಿದ್ದು ಚಿಕ್ಕ ತುಂಡುಗಳಲ್ಲಿ ಸಿಗುತ್ತಿರಲಿಲ್ಲ. ಈಗ ಈ ಕೇಕ್ ಅನ್ನು ತ್ರಿಕೋಣಾಕೃತಿಯಲ್ಲಿ ತುಂಡಾಗಿಸಿ ಅಥವಾ ಚೌಕಾಕಾರದಲ್ಲಿ ಕತ್ತರಿಸಿ 'ಪೇಸ್ಟ್ರಿ' ಎಂಬ ಹೆಸರಿನಲ್ಲಿ ಮಾರಲಾಗುತ್ತಿದೆ. ಒಂದು ಸಾದಾ ಕೇಕ್ ತುಂಡಿನಲ್ಲಿ ಸುಮಾರು ಹತ್ತರಿಂದ ಹನ್ನೆರಡು ಗ್ರಾಂ ಕೊಬ್ಬು ಇರುತ್ತದೆ ಮತ್ತು 300-400 ಕ್ಯಾಲೋರಿಗಳಿರುತ್ತವೆ. ವಾರದ ಕೆಲವು ದಿನಗಳಲ್ಲಿ ಮಾತ್ರವೇ ಈ ಕೇಕ್ ಸವಿದರೂ ನಿಮ್ಮ ತೂಕ ಅತಿ ಶೀಘ್ರವಾಗಿ ಏರುತ್ತದೆ. ಸಾಮಾನ್ಯವಾಗಿ ಕಛೇರಿಯಲ್ಲಿ ಸಂತೋಷವನ್ನು ಹಂಚಿಕೊಳ್ಳಲು ಕೇಕ್ ಕತ್ತರಿಸಿ ವಿತರಿಸಲಾಗುತ್ತದೆ ಹಾಗೂ ಇವನ್ನು ನಿರಾಕರಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಆದಷ್ಟೂ ಇವುಗಳ ಸೇವನೆಯನ್ನು ತಿಂಗಳಿಗೆ ಒಂದು ತುಂಡಿಗೆ ಮಿತಿಗೊಳಿಸಲು ಯತ್ನಿಸಬೇಕು.

ಬಿಸ್ಕತ್ತು

ಬಿಸ್ಕತ್ತು

ಸುಲಭವಾಗಿ ಎಲ್ಲಿಯೂ ಸಿಗುವ ಸುಲಭ ಆಹಾರವೆಂದರೆ ಬಿಸ್ಕತ್ತು. ವಿವಿಧ ಸ್ವಾದ, ಆಕಾರ, ಗಾತ್ರಗಳಲ್ಲಿ ಲಭಿಸುವ ಇವನ್ನು ಹಂಚಿಕೊಳ್ಳಲು ಸಹೋದ್ಯೋಗಿಗಳು ಕಾತುರರಾಗಿರುತ್ತಾರೆ. ಆದರೆ ಬಿಸ್ಕತ್ತುಗಳಲ್ಲಿ ಸಸ್ಯಜನ್ಯ ಆಹಾರ, ಸಕ್ಕರೆ ಮತ್ತು ಮೈದಾ ಹೆಚ್ಚಿನ ಪ್ರಮಾಣದಲ್ಲಿದ್ದು ವಾಸ್ತವವಾಗಿ ಅನಾರೋಗ್ಯಕರ ಆಹಾರವೇ ಆಗಿದೆ. ಒಂದೇ ಒಂದು ಚಾಕಲೇಟ್ ಬಿಸ್ಕತ್ ನಲ್ಲಿ ಸುಮಾರು ಮೂರರಿಂದ ನಾಲ್ಕು ಗ್ರಾಂ ಕೊಬ್ಬು ಮತ್ತು ನೂರು ಕ್ಯಾಲೋರಿಗಳಿರುತ್ತವೆ. ದಿನದ ಅವಧಿಯಲ್ಲಿ ಬಿಸ್ಕತ್ ಪ್ಯಾಕೆಟ್ ಎದುರಿಗೇ ಇದ್ದರೆ ಒಂದೊಂದಾಗಿ ಇಡಿಯ ಪ್ಯಾಕೆಟ್ ಮುಗಿಸುವ ವೇಳೆಗೆ ಸಾವಿರ ಕ್ಯಾಲೋರಿಗಳು ದೇಹ ಸೇರಿರುತ್ತವೆ. ಇಷ್ಟು ಪ್ರಮಾಣದ ಕ್ಯಾಲೋರಿಗಳನ್ನು ಕರಗಿಸಬೇಕೆಂದರೆ ಸುಮಾರು ಎರಡು ಘಂಟೆ ನಲವತ್ತು ನಿಮಿಷ ವ್ಯಾಯಾಮ ಮಾಡಬೇಕಾಗುತ್ತದೆ.

English summary

These foods women should never eat at work

Are you one of those who constantly want something to munch on, while working? Well, according to a new survey conducted by Dutch organic food maker Kallo, it has been discovered that women who snack at work consume 100,000 extra calories each year. This is equivalent to an additional 50 days’ food intake. The annual total of 100,800 extra calories, based on 45 working weeks, is the same as 1,254 glasses of prosecco, 193 double-stacked burgers or 502 bars of chocolate.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more