For Quick Alerts
ALLOW NOTIFICATIONS  
For Daily Alerts

ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

|

ಹಿಂದೂ ಧರ್ಮದಲ್ಲಿ ಅತೀ ಹೆಚ್ಚು ಜನರು ಭೀತಿ ಪಡುವ ದೇವರು ಎಂದರೆ ಅದು ಶನಿ ದೇವರು. ಶನಿ ದೇವರ ಮುಂದೆ ತಲೆ ಬಾಗದವರೇ ಇಲ್ಲ. ಯಾಕೆಂದರೆ ಶನಿ ದೇವರು ಕಷ್ಟಗಳನ್ನು ನೀಡುತ್ತಾರೆ ಎನ್ನುವ ಭೀತಿ ಪ್ರತಿಯೊಬ್ಬರಲ್ಲೂ ಇದೆ. ಪುರಾಣಗಳಲ್ಲಿ ಕೂಡ ಹಲವಾರು ಮಂದಿ ಶನಿ ದೇವರ ಕೆಂಗಣ್ಣಿಗೆ ಗುರಿಯಾಗಿರುವ ಬಗ್ಗೆ ನಾವು ಓದಿಕೊಂಡು ತಿಳಿದಿದ್ದೇವೆ. ದೇವತೆಗಳಿಂದ ಹಿಡಿದು ರಾಜ ಮಹಾರಾಜರ ತನಕ ಪ್ರತಿಯೊಬ್ಬರು ಶನಿದೇವರ ಕೆಂಗಣ್ಣಿಗೆ ಗುರಿಯಾಗಿರುವರು. ಆದರೆ ಶನಿ ದೇವರು ಎಲ್ಲರಿಗೂ ಹೀಗೆ ಮಾಡುತ್ತಾರೆ ಎಂದಲ್ಲ. ಅವರು ತಪ್ಪುಗಳನ್ನು ಮಾಡುವವರಿಗೆ ಮತ್ತು ಅದನ್ನು ತಿದ್ದಿಕೊಂಡು ನಡೆಯದೇ ಇರುವವರಿಗೆ ಕೆಂಗಣ್ಣು ಬೀರುವರು.

The Story of Lord Shani cursed by his wife

ಶನಿ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಆಗ ಅವರು ಆಶೀರ್ವಾದ ಕೂಡ ನೀಡುವರು ಎಂದು ಹೇಳಲಾಗಿದೆ. ಶನಿ ದೇವರ ಕೃಪೆ ಒಳಗಾಗಲು ಜನರು ಹಲವಾರು ರೀತಿಯಿಂದ ಅವರನ್ನು ಪೂಜಿಸುವರು ಮತ್ತು ತಮ್ಮ ತಪ್ಪುಗಳನ್ನು ಮನ್ನಿಸಿಬಿಡಿ ಎಂದು ಬೇಡಿಕೊಳ್ಳುವರು. ಭಕ್ತರಿಗೆ ಶನಿ ದೇವರು ಒಲಿದರೆ ಆಗ ಖಂಡಿತವಾಗಿಯೂ ಜೀವನವು ತುಂಬಾ ಬೆಳಗುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಶನಿ ದೇವರನ್ನು ಒಲಿಸಿಕೊಂಡು ಅವರ ಆಶೀರ್ವಾದ ಪಡೆದುಕೊಳ್ಳುವುದು ಹೇಗೆ ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

ಶನಿ ದೇವರ ಪತ್ನಿಯರು

ಶನಿ ದೇವರ ಪತ್ನಿಯರು

ಶನಿ ದೇವರನ್ನು ಒಲಿಸಿಕೊಳ್ಳುವ ಅತ್ಯುತ್ತಮವಾಗಿ ವಿಧಾನವೆಂದರೆ ಅದು ಅವರ ಪತ್ನಿಯರನ್ನು ಪೂಜಿಸುವುದು. ಶನಿ ದೇವರಿಗೆ ಎಂಟು ಮಂದಿ ಪತ್ನಿಯರು ಎಂದು ಹೇಳಲಾಗಿದೆ. ಇದರಲ್ಲಿ ಧ್ವಾಜಿನಿ, ಧಾಮಿನಿ, ಕಂಕಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಶಿ ಮತ್ತು ಅಜ ಎಂದು ಹೇಳಲಾಗಿದೆ. ಶನಿ ದೇವರ ಆಶೀರ್ವಾದ ಪಡೆದಯಲು ಅವರ ಪತ್ನಿಯರ ಹೆಸರನ್ನು ಜಪಿಸಬೇಕು ಎಂದು ಹೇಳಲಾಗಿದೆ. ಅದರಲ್ಲೂ ಶನಿವಾರದಂದು ಶನಿ ದೇವರ ಪತ್ನಿಯರ ಹೆಸರನ್ನು ಜಪಿಸಿದರೆ ಆಗ ಇನ್ನಷ್ಟು ಲಾಭ ಸಿಗುವುದು ಎಂದು ಹೇಳಲಾಗಿದೆ. ಶನಿ ದೇವರ ದೃಷ್ಟಿಯು ಕೆಟ್ಟದು ಎಂದು ಹೇಳುವಂತಹ ಕಥೆಯು ಅವರ ಪತ್ನಿ ಧಾಮಿನಿ ಅವರಿಂದಾಗಿ ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಇದರ ಬಗ್ಗೆ ನೀವು ಓದಿಕೊಳ್ಳಿ...

ಶನಿ ದೇವರು ಕೃಷ್ಣ ದೇವರ ಪರಮಭಕ್ತರಾಗಿದ್ದರು…

ಶನಿ ದೇವರು ಕೃಷ್ಣ ದೇವರ ಪರಮಭಕ್ತರಾಗಿದ್ದರು…

ಶನಿ ದೇವರು ಸೂರ್ಯ ದೇವ ಮತ್ತು ಅವರ ಪತ್ನಿ ಛಾಯರ ಮಗನಾಗಿದ್ದರು. ಶನಿ ದೇವರು ಕಪ್ಪು ಮೈಬಣ್ಣ ಹೊಂದಿದ್ದರು ಮತ್ತು ಕಬ್ಬಿಣದಿಂದ ಮಾಡಿದ ರಥದಲ್ಲಿ ಸಂಚರಿಸುತ್ತಿದ್ದರು ಮತ್ತು ಕಾಗೆಯು ಇದರ ವಾಹನವಾಗಿತ್ತು. ತನ್ನ ಬಾಲ್ಯದ ದಿನಗಳಿಂದಲೂ ಶನಿ ದೇವರು ಕೃಷ್ಣ ದೇವರು ಪರಮ ಭಕ್ತರಾಗಿದ್ದರು. ಕೃಷ್ಣ ದೇವರ ಧ್ಯಾನದಲ್ಲಿ ಶನಿ ದೇವರು ಹಲವಾರು ಗಂಟೆಗಳನ್ನು ಕಳೆಯುತ್ತಲಿದ್ದರು. ಶನಿ ದೇವರು ಬೆಳೆದು ದೊಡ್ಡವರಾದ ಬಳಿಕ ಕೂಡ ಕೃಷ್ಣ ದೇವರ ಮೇಲಿನ ಭಕ್ತಿ ಮಾತ್ರ ಅದೇ ಮಟ್ಟದಲ್ಲಿತ್ತು. ಶನಿ ದೇವರು ದೊಡ್ಡವರಾದ ಬಳಿಕ ಅವರು ಚಿತ್ರರಥನ ಮಗಳನ್ನು ಮದುವೆಯಾದರು. ದಿವ್ಯ ಶಕ್ತಿಯನ್ನು ಹೊಂದಿದ್ದ ಶನಿ ದೇವರ ಪತ್ನಿ ಹೆಸರು ಧಾಮಿನಿ ಆಗಿತ್ತು. ತನ್ನ ಸೌಂದರ್ಯದಷ್ಟೇ ಆಕೆ ಬುದ್ಧಿವಂತೆ ಆಗಿದ್ದರು.

Most Read: ಶನಿ ಮಂತ್ರ: 108 ಸಲ ಈ ಮಂತ್ರ ಜಪಿಸಿದರೆ, ಕಷ್ಟ-ಕಾರ್ಪಣ್ಯ ದೂರವಾಗುತ್ತೆ

ಶನಿ ದೇವರ ಪತ್ನಿ ಧಾಮಿನಿ ಗಂಡು ಮಗು ಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು

ಶನಿ ದೇವರ ಪತ್ನಿ ಧಾಮಿನಿ ಗಂಡು ಮಗು ಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು

ಶನಿ ದೇವರ ಪತ್ನಿ ಧಾಮಿನಿ ಅವರಿಗೆ ತನಗೆ ಗಂಡು ಮಗು ಬೇಕೆಂಬ ಇಚ್ಛೆಯು ಕಾಡಲು ಆರಂಭಿಸಿತು. ತನ್ನ ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಧಾಮಿನಿ ಅವರು ಇದನ್ನು ಶನಿ ದೇವರ ಮುಂದೆ ಹೇಳಿಕೊಂಡರು. ಈ ವೇಳೆ ಶನಿ ದೇವರು ಮಾತ್ರ ಕೃಷ್ಣ ದೇವರ ಧ್ಯಾನದಲ್ಲಿ ಮಗ್ನರಾಗಿದ್ದರು ಮತ್ತು ಅವರಿಗೆ ಅಡ್ಡಪಡಿಸುವುದು ಬೇಕಿರಲಿಲ್ಲ. ಆಕೆ ಶನಿ ದೇವರನ್ನು ಧ್ಯಾನದಿಂದ ಹೊರಬರುವಂತೆ ತುಂಬಾ ಪ್ರಯತ್ನ ಮಾಡುವರು. ಆದರೆ ಆಕೆಯ ಪ್ರಯತ್ನವೆಲ್ಲವೂ ನೀರಿನಲ್ಲಿಟ್ಟು ಹೋಮದಂತೆ ಆಗುವುದು.

ಧಾಮಿನಿ ದೇವಿಯು ಶನಿ ದೇವರಿಗೆ ಶಾಪ ನೀಡುವರು…

ಧಾಮಿನಿ ದೇವಿಯು ಶನಿ ದೇವರಿಗೆ ಶಾಪ ನೀಡುವರು…

ತನ್ನತ್ತ ನೋಡದೆ, ತನ್ನ ಮಾತನ್ನು ಕೇಳದೆ ಸಂಪೂರ್ಣವಾಗಿ ತನ್ನನ್ನು ಕಡೆಗಣಿಸಿರುವ ಶನಿ ದೇವರ ವರ್ತನೆಯಿಂದ ಕೋಪಗೊಂಡ ಧಾಮಿನಿ ದೇವಿಯು ಶನಿ ದೇವರಿಗೆ ಶಾಪ ನೀಡುವರು. ನೀವು ಇನ್ನು ಮುಂದೆ ಯಾರನ್ನು ನೋಡಿದರೂ ಅವರು ಧ್ವಂಸವಾಗಲಿ ಎಂದು ಶಾಪ ನೀಡುವರು. ಧಾಮಿನಿ ದೇವಿಯ ಮಾತನ್ನು ಕೇಳದೆ ಪದೇ ಪದೇ ಆಕೆಯನ್ನು ಕಡೆಗಣಿಸಿರುವ ಶನಿ ದೇವರು ದೃಷ್ಟಿ ಬೀರಿದರೆ ಆಗ ಜನರ ಮೇಲೆ ನಕಾರಾತ್ಮಕ ಪರಿಣಾಮ ಆಗುವುದು ಎಂದು ಹೇಳಲಾಗುತ್ತದೆ. ಶನಿ ದೇವರ ದೃಷ್ಟಿಯು ಜನರ ಮೇಲೆ ಬಿದ್ದರೆ ಆಗ ಅವರು ಸಮಸ್ಯೆಗಳನ್ನು ಎದುರಿಸುವರು ಎಂದು ಹೇಳಲಾಗುತ್ತದೆ. ಇದರಿಂದಾಗಿಯೇ ಶನಿ ದೇವರು ಕೆಟ್ಟವರಲ್ಲ, ಅವರು ಬೀರುವ ದೃಷ್ಟಿ ಮಾತ್ರ ಕೆಟ್ಟದಾಗಿರುತ್ತದೆ ಎಂದು ಈ ಕಾರಣದಿಂದಲೇ ಹೇಳಲಾಗುತ್ತದೆ.

Most Read: ಶನಿ ದೋಷವಿದ್ದಲ್ಲಿ, ಹನುಮಂತನನ್ನು ನೆನೆಯಿರಿ, ಸಂಕಷ್ಟ ಪರಿಹಾರವಾಗುವುದು

ಶನಿ ದೇವರ ಪತ್ನಿಯು ಪಶ್ಚಾತ್ತಾಪ ಪಟ್ಟರು

ಶನಿ ದೇವರ ಪತ್ನಿಯು ಪಶ್ಚಾತ್ತಾಪ ಪಟ್ಟರು

ಶನಿ ದೇವರು ಧ್ಯಾನದಿಂದ ಎದ್ದು ಕಣ್ಣು ತೆರೆದಾಗ ತನ್ನ ಪತ್ನಿಯು ಕ್ರೋಧಗೊಂಡಿರುವುದನ್ನು ನೋಡಿದರು ಮತ್ತು ಆಕೆಯ ಕ್ಷಮೆ ಕೇಳಲು ಬಯಸಿದರು. ಧಾಮಿನಿ ದೇವಿಯು ಇದನ್ನು ಅರ್ಥ ಮಾಡಿಕೊಂಡರು ಮತ್ತು ತಾನು ನೀಡಿರುವ ಶಾಪದ ಬಗ್ಗೆ ಪಶ್ವಾತ್ತಾಪ ಪಟ್ಟುಕೊಂಡರು. ತನ್ನ ಶಾಪವನ್ನು ಹಿಂದಕ್ಕೆ ಪಡೆಯುವಂತಹ ಯಾವುದೇ ಶಕ್ತಿಯು ಆಕೆಯಲ್ಲಿ ಇರಲಿಲ್ಲ. ಆಕೆ ತನ್ನ ಶಾಪದ ಬಗ್ಗೆ ಏನೂ ಮಾಡುವಂತಿರಲಿಲ್ಲ. ಆದರೆ ಶನಿ ದೇವರನ್ನು ಮನವೊಲಿಸಲು ಪ್ರಯತ್ನಿಸಿದರು. ಅದಾಗ್ಯೂ, ತನ್ನ ಭಕ್ತರ ಮೇಲೆ ಈ ಶಾಪದ ಪರಿಣಾಮ ಬೀರದಂತೆ ತಡೆಯಲು ಅವರು ಯಾವಾಗಲೂ ಅವರನ್ನು ನೋಡುವುದಿಲ್ಲ ಮತ್ತು ಕೆಳಗೆ ನೋಡುತ್ತಲಿರುತ್ತಾರೆ.

English summary

The Story of Lord Shani cursed by his wife

Shani Dev is one of the most feared deities of Hindu mythology. However, it is because of partial knowledge of the people that they think he brings negative effects alone.Life improves on every level if Shani Dev decides to bless somebody.It is just that he brings justice by punishing people for their bad karmas.
Story first published: Friday, December 21, 2018, 11:53 [IST]
X
Desktop Bottom Promotion