For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಮಹಿಳೆಯರಿಗೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವುದು!

|

ದೇಹದ ಯಾವುದೇ ಭಾಗವಾದರೂ ನೋವು ಕಾಣಿಸಿಕೊಂಡರೆ ಅದು ತುಂಬಾ ಕಿರಿಕಿರಿ ಮತ್ತು ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಅದರಲ್ಲೂ ದೇಹದ ಪ್ರಮುಖ ಅಂಗವಾಗಿರುವಂತಹ ಜನನೇಂದ್ರೀಯದಲ್ಲಿ ನೋವು ಕಾಣಿಸಿಕೊಂಡರೆ ಆಗ ಅದನ್ನು ತಡೆಯಲು ಸಾಧ್ಯವಿಲ್ಲ. ಯಾಕೆಂದರೆ ತುಂಬಾ ಸೂಕ್ಷ್ಮ ಅಂಗವಾಗಿರುವಂತಹ ಅಲ್ಲಿ ಸಣ್ಣ ಮಟ್ಟದ ನೋವು ಕಾಣಿಸಿದರೂ ದೊಡ್ಡ ಸಮಸ್ಯೆಯಾಗುವುದು. ಇದರ ಬಗ್ಗೆ ಚಿಂತೆ ಕೂಡ ಕಾಡುವುದು.

ಅದರಲ್ಲೂ ಮಹಿಳೆರಿಗೆ ಯೋನಿಯಲ್ಲಿ ಕೆಲವೊಮ್ಮೆ ನೋವು ಕಾಣಿಸಿಕೊಳ್ಳುವುದು. ಇದನ್ನು ಅವರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇನ್ನು ಕೆಲವು ಮಂದಿ ಗೂಗಲ್ ನಲ್ಲಿ ಹೋಗಿ ಹುಡುಕಾಡಿ ಇದಕ್ಕೆ ಕಾರಣ ಏನು ಎಂದು ತಿಳಿಯುವರು. ಆದರೆ ಇದರಿಂದ ಅವರ ಆತಂಕವು ಮತ್ತಷ್ಟು ಹೆಚ್ಚಾಗುವುದು. ಇದಕ್ಕೆ ಬದಲಾಗಿ ನೀವು ಮಹಿಳಾ ವೈದ್ಯರ ಬಳಿಗೆ ಹೋಗಿ ಅವರಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಎಲ್ಲಾ ಸಮಸ್ಯೆ ಹೇಳಿಕೊಳ್ಳಬೇಕು...

ಕೆಲವೊಂದು ಗೌಪ್ಯವನ್ನು ಬಹಿರಂಗ ಮಾಡಲೇಬೇಕು!

ಕೆಲವೊಂದು ಗೌಪ್ಯವನ್ನು ಬಹಿರಂಗ ಮಾಡಲೇಬೇಕು!

ನೀವು ಕೆಲವೊಂದು ಗೌಪ್ಯವನ್ನು ಬಹಿರಂಗ ಮಾಡಬೇಕು ಮತ್ತು ನಿಮ್ಮ ಯೋನಿ ನೋವಿನ ಬಗ್ಗೆ ಇರುವಂತಹ ಗೊಂದಲ ನಿವಾರಣೆ ಮಾಡಬೇಕು. ಯಾಕೆಂದರೆ ಜನನೇಂದ್ರೀಯಗಳು ತುಂಬಾ ಮಹತ್ವದ್ದಾಗಿರುವುದು ಮತ್ತು ತುಂಬಾ ಸೂಕ್ಷ್ಮ ಕೂಡ. ನೋವಿನ ಬಗ್ಗೆ ಏನು ಮಾಡಬೇಕು ಎಂದು ತಿಳಿಯದೆ ಇರುವ ಮಹಿಳೆಯರು ತುಂಬಾ ನಾಚಿಕೆ ಪಡುವರು. ಇನ್ನು ಕೆಲವರು ಈ ನೋವಿನೊಂದಿಗೆ ಜೀವನ ಸಾಗಿಸುತ್ತಾ ಇರುತ್ತಾರೆ ಎಂದು ಸ್ತ್ರೀರೋಗ ತಜ್ಞೆ ಮತ್ತು ಲೇಖಕಿ ಪ್ರೂಡೆನ್ಸ್ ಹಾಲ್ ಹೇಳುತ್ತಾರೆ. ಆದರೆ ಸ್ತ್ರೀಯರು ಹೀಗೆ ಮಾಡಬಾರದು ಮತ್ತು ಇದಕ್ಕೆ ಅವರು ಕಾರಣ ಹುಡುಕಿಕೊಂಡು ಅದಕ್ಕೆ ಚಿಕಿತ್ಸೆ ಕೊಡಿಸಬೇಕು.

ಇಂತಹ ಸಂದರ್ಭದಲ್ಲಿ ವೈದ್ಯಕೀಯ ನೆರವು ಅತ್ಯಗತ್ಯ

ಇಂತಹ ಸಂದರ್ಭದಲ್ಲಿ ವೈದ್ಯಕೀಯ ನೆರವು ಅತ್ಯಗತ್ಯ

ಇದು ಬೇರೆ ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಯಂತೆ ಸಾಮಾನ್ಯ ಆಗಿರುವಂತದ್ದಾಗಿದೆ ಎಂದು ಅವರು ವಿವರಿಸುತ್ತಾರೆ.ಲೈಂಗಿಕ ಕ್ರಿಯೆ ವೇಳೆ ತೀವ್ರ ನೋವು, ಶ್ರೋಣಿ ಭಾಗದಲ್ಲಿ ಉರಿ ಮತ್ತು ಇತರ ಕೆಲವೊಂದು ಲಕ್ಷಣಗಳು ಕಾಣಿಸಿಕೊಂಡರೆ ಇದನ್ನು ಖಂಡಿತವಾಗಿಯೂ ಕಡೆಗಣಿಸಬಾರದು. ಯಾಕೆಂದರೆ ದೇಹದ ಈ ಭಾಗವು ಅತಿ ಸೂಕ್ಷ್ಮವಾಗಿರುವುದು. ಯೋನಿ ನೋವಿಗೆ ಕಾರಣಗಳು ಏನು ಮತ್ತು ಈ ಪರಿಸ್ಥಿತಿಗೆ ಯಾವ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಅವರಲ್ಲಿ ವಿವರಿಸುವಂತೆ ನಾವು ತಿಳಿಸಿದೆವು. ಯಾವ ಪರಿಸ್ಥಿತಿಯು ತುಂಬಾ ಗಂಭೀರ ಮತ್ತು ವೈದ್ಯಕೀಯ ನೆರವು ಬೇಕಾಗಿರುವುದು ಎಂದು ವಿವರಿಸಿ ಎಂದು ನಾವು ಅವರಲ್ಲಿ ಕೇಳಿಕೊಂಡೆವು. ಈ ಲೇಖನದಲ್ಲಿ ಅಂತಹ ಪರಿಸ್ಥಿತಿಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.ನೀವು ಇದನ್ನು ತಿಳಿದುಕೊಂಡು ನಿಮ್ಮ ದೇಹದ ಅತೀ ಮುಖ್ಯ ಭಾಗದ ಆರೋಗ್ಯ ಕಾಪಾಡಬಹುದು.

Most Read:ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು

ಯೋನಿ ಒಣಗುವಿಕೆ

ಯೋನಿ ಒಣಗುವಿಕೆ

ಯೋನಿಯಲ್ಲಿ ತೇವಾಂಶವು ಇಲ್ಲದೆ ಇದ್ದರೆ ಆಗ ಸೆಕ್ಸ್ ಎನ್ನುವುದು ತುಂಬಾ ಕಷ್ಟವಾಗುವುದು. ಇದರಿಂದ ನೋವು ಕೂಡ ಕಾಣಿಸಬಹುದು. ಒಣ ಯೋನಿಯಲ್ಲಿ ನೀವು ಸೆಕ್ಸ್ ನಡೆಸಿದರೆ ಆಗ ಸಣ್ಣ ಬಿರುಕು ಅಥವಾ ತರುಚಿದ ಗಾಯಗಳು ಯೋನಿಯ ಒಳಭಾಗದಲ್ಲಿ ಆಗಬಹುದು. ಈ ಗಾಯಗಳು ಒಣಗುವ ತನಕ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುವುದು.

ಸರಿಯಾದ ಪ್ರಮಾಣದಲ್ಲಿ ಲ್ಯೂಬ್ರಿಕೆಂಟ್ ಉತ್ಪತ್ತಿ ಮಾಡದೆ ಇರಲು ಕಾರಣಗಳು ಏನು?

ಸರಿಯಾದ ಪ್ರಮಾಣದಲ್ಲಿ ಲ್ಯೂಬ್ರಿಕೆಂಟ್ ಉತ್ಪತ್ತಿ ಮಾಡದೆ ಇರಲು ಕಾರಣಗಳು ಏನು?

ದೇಹದಲ್ಲಿ ಈಸ್ಟ್ರೋಜನ್ ಮಟ್ಟವು ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ. ನೀವು ಯಾವುದೇ ರೀತಿಯ ಮಾತ್ರೆಗಳು ಅಥವಾ ಗರ್ಭನಿರೋಧಕಕ್ಕೆ ಯಾವುದೇ ಹಾರ್ಮೋನು ಮಾತ್ರೆಗಳನ್ನು ತೆಗೆದುಕೊಳ್ಳುತ್ತಲಿದ್ದರೆ ಆಗ ಇವು ಅದಕ್ಕೆ ಪ್ರಮುಖ ಕಾರಣವಾಗಿವೆ. ಕೆಲವು ಮಹಿಳೆಯರಲ್ಲಿ ಈಸ್ಟ್ರೋಜನ್ ಮಟ್ಟವು ದೇಹದಲ್ಲಿ ಕಡಿಮೆಯಾಗುವುದು ಯೋನಿಯು ಒಣಗಲು ಪ್ರಮುಖ ಕಾರಣವಾಗಿದೆ.

ಋತುಚಕ್ರ

ಋತುಚಕ್ರ

ಋತುಚಕ್ರದ ವೇಳೆ ನೀವು ಸೆಳೆತಕ್ಕೆ ಒಳಗಾಗುವುದನ್ನು ನೋಡಿದ್ದೀರಿ. ಆದರೆ ಇದೇ ವೇಳೆ ಯೋನಿಯಲ್ಲಿ ಬೇರೆ ರೀತಿಯ ನೋವು ಕೂಡ ಕಾಣಿಸಬಹುದು. ಇದರಿಂದ ಋತುಚಕ್ರದ ವೇಳೆ ತುಂಬಾ ನೋವು ಅಥವಾ ಕಿರಿಕಿರಿಯಾಗಬಹುದು. ಋತುಚಕ್ರಕ್ಕೆ ಹತ್ತಿರವಾಗುತ್ತಿರುವಂತೆ ಮಹಿಳೆಯರ ಸ್ನಾಯುಗಳಲ್ಲಿ ಹೆಚ್ಚಿನ ದ್ರವವು ಉತ್ಪತ್ತಿಯಾಗುವುದು ಮತ್ತು ಇದು ದೇಹದ ಎಲ್ಲಾ ಭಾಗಗಳಲ್ಲಿ ಹೀಗೆ ಆಗುವುದು. ಇದರಿಂದಾಗಿ ಮಹಿಳೆಯರಿಗೆ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುವುದು ಮತ್ತು ಕೆಲವೊಂದು ರೀತಿಯ ಯೋನಿ ನೋವು ಕೂಡ ಕಾಣಿಸಿಕೊಳ್ಳಬಹುದು ಎಂದು ತಜ್ಞರು ವಿವರಿಸುವರು. ಈ ನೋವು ತುಂಬಾ ಗಂಭೀರವೇನಲ್ಲ ಮತ್ತು ಇದರಿಂದ ದೇಹದಲ್ಲಿನ ಎಲ್ಲಾ ಚಟುವಟಿಕೆಗಳು ಸಾಮಾನ್ಯವಾಗಿರುವುದು. ಇದು ತುಂಬಾ ತೀವ್ರವಾಗಿರುವಂತಹ ಸಂದರ್ಭದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ.

ಫೈಬರಾಯ್ಡ್ (ಗಡ್ಡೆ)

ಫೈಬರಾಯ್ಡ್ (ಗಡ್ಡೆ)

ಫೈಬರಾಯ್ಡ್ ಎನ್ನುವುದು ಗರ್ಭಕೋಶದಲ್ಲಿ ಕ್ಯಾನ್ಸರ್ ಕಾರಕವಲ್ಲದೆ ಇರುವ ಗಡ್ಡೆಯು ಬೆಳವಣಿಗೆ ಆಗುವುದು. ಮಹಿಳೆಯಲ್ಲಿ ಒಂದು ಅಥವಾ ಹಲವಾರು ಮತ್ತು ಅದರ ಗಾತ್ರ ಮತ್ತು ಅದು ಎಲ್ಲಿ ಬೆಳೆಯುತ್ತಿದೆ ಎನ್ನುವುಕ್ಕೆ ಅನುಗುಣವಾಗಿ ಶ್ರೋಣಿಯ ತೀವ್ರ ನೋವು ಕಾಣಿಸಿಕೊಳ್ಳುವುದು. ಇದು ನೋವಿಗಿಂತಲೂ ಒಂದು ರೀತಿಯಲ್ಲಿ ಒತ್ತಡ ನೀಡಿದಂತಹ ಅನುಭವ ಉಂಟು ಮಾಡುವುದು. ಫೈಬರಾಯ್ಡ್ ನಿಂದಾಗಿ ಸೆಕ್ಸ್ ವೇಳೆ ಕಡಿಮೆ ಅಥವಾ ತೀವ್ರ ರೀತಿಯ ನೋವು ಕಾಣಿಸುವುದು. ಗರ್ಭಕಂಠ ಅಥವಾ ಯೋನಿಯ ಮೇಲ್ಭಾಗದಲ್ಲಿ ಇದು ಬೆಳವಣಿಗೆ ಆಗುತ್ತಲಿದ್ದರೆ ಆಗ ಈ ರೀತಿ ನೋವು ಕಾಣಿಸುವುದು. ನೋವಿನ ಬಗ್ಗೆ ನೀವು ವೈದ್ಯರಲ್ಲಿ ಹೇಳಬೇಕು. ಯಾಕೆಂದರೆ ಫೈಬರಾಯ್ಡ್ ಗರ್ಭಕೋಶದ ಪದರ ಮೇಲೆ ಒತ್ತಡ ಹೇರುವಂತೆ ಬೆಳೆಯುತ್ತಲಿದ್ದರೆ ಆಗ ವೈದ್ಯರು ಇದಕ್ಕೆ ಚಿಕಿತ್ಸೆ ಮಾಡುವರು.

Most Read:ಯೋನಿಯ ಬಗ್ಗೆ ಇರುವ ಇಂತಹ ಕಟ್ಟುಕಥೆಗಳನ್ನು ನಂಬಬೇಡಿ!

ಎಂಡೊಮೆಟ್ರಿಯಲ್

ಎಂಡೊಮೆಟ್ರಿಯಲ್

ಎಂಡೊಮೆಟ್ರಿಯಲ್ ಎನ್ನುವುದು ಒಂದು ರೀತಿಯ ಅಂಗಾಂಶದ ಪರಿಸ್ಥಿತಿಯಾಗಿರುವುದು. ಇಲ್ಲಿ ಗರ್ಭಕೋಶದ ಪದರವು ಗರ್ಭಕೋಶದಿಂದ ಹೊರಗಡೆ ಬೆಳೆಯುವುದು ಮತ್ತು ಶ್ರೋಣಿ ಕುಹರದ ಭಾಗವಾಗಿರುವಂತಹ ಫಾಲೊಪೈನ್ ಟ್ಯೂಬ್, ಮೂತ್ರಕೋಶ ಮತ್ತು ಗರ್ಭಕೋಶಗಳಿಗೆ ಹಬ್ಬುವುದು ಎಂದು ಡಾ. ಹಾಲ್ ಹೇಳುತ್ತಾರೆ. ಹಾರ್ಮೋನುಗಳ ಸೂಕ್ಷ್ಮತೆಯಿಂದಾಗಿ ಹೀಗೆ ಆಗುವುದು. ಋತುಚಕ್ರದ ವೇಳೆ ಹಾರ್ಮೋನು ಹೆಚ್ಚಾಗುವುದು ಅಥವಾ ಕುಗ್ಗುವುದು, ಇದರಿಂದ ಶ್ರೋಣಿಯಲ್ಲಿ ಊತ ಮತ್ತು ನೋವು ಕಂಡುಬರುವುದು. ಋತುಚಕ್ರದ ವೇಳೆ ಇದರಿಂದ ರಕ್ತಸ್ರಾವವು ಹೆಚ್ಚಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.

ಅಡೆನೊಮೋಸಿಸ್

ಅಡೆನೊಮೋಸಿಸ್

ಅಡೆನೊಮೋಸಿಸ್ ಎನ್ನುವುದು ಎಂಡೊಮೆಟ್ರಿಯಸಿಸ್ ಗೆ ಸಮಾನವಾಗಿದೆ. ಆದರೆ ಎಂಟೊಮೆಟ್ರಿಯಸಿಸ್ ಅಂಗಾಂಶಗಳು ಗರ್ಭಕೋಶದ ಹೊರಗಡೆ ಬದಲಿಗೆ ಗರ್ಭಕೋಶದ ಸ್ನಾಯುವಿನ ಗೋಡೆಯಲ್ಲಿ ಬೆಳೆಯುವುದು ಎಂದು ಡಾ. ಹಾಲ್ ವಿವರಿಸುವರು. ಇದರ ಕಾರಣದಿಂದಾಗಿ ಶ್ರೋಣಿಯಲ್ಲಿ ಒತ್ತಡ, ಭಾರ, ಋತುಚಕ್ರದ ವೇಳೆ ಸೆಳೆತ ಮತ್ತು ಕೆಲವೊಂದು ಸಲ ಸೆಕ್ಸ್ ನೋವಿನಿಂದ ಕೂಡಿರಬಹುದು. ಅಡೆನೊಮೋಸಿಸ್ ಗೆ ಕಾರಣ ಏನೆಂದು ತಿಳಿದಿಲ್ಲ. ಇದು ಮಗುವಾಗುವ ಸಾಧ್ಯತೆಯು ಅಂತ್ಯವಾಗುವಂತಹ ಸಮಯದಲ್ಲಿ ಕಾಣಿಸುವುದು ಮತ್ತು ಇದರ ಬಳಿಕ ಮಾಯವಾಗುವುದು ಎಂದು ತಜ್ಞರು ಹೇಳುತ್ತಾರೆ.

 ಲೈಂಗಿಕ ರೋಗಗಳು

ಲೈಂಗಿಕ ರೋಗಗಳು

ನಡೆಸಿದ್ದರೆ ಆಗ ಲೈಂಗಿಕ ರೋಗಗಳು ಬರುವುದು. ಇದು ಕೆಲವೊಂದು ಸಲ ಯೋನಿ ನೋವಿಗೆ ಕಾರಣವಾಗುವುದು ಎಂದು ತಜ್ಞರು ಹೇಳುತ್ತಾರೆ. ಆದರೆ ಹೆಚ್ಚಿನ ಎಲ್ಲಾ ಲೈಂಗಿಕ ರೋಗಗಳ ಲಕ್ಷಣವೆಂದರೆ ಅದು ನೋವು. ಉರಿ ಕಾಣಿಸಿಕೊಳ್ಳುವುದು, ಉರಿಯಿಂದ ಉಂಟಾಗುವಂತಹ ನೋವು ಯೋನಿಯಲ್ಲಿ ಕಾಣಿಸಿಕೊಂಡಿದ್ದರೆ ಆಗ ನಿಮಗೆ ಲೈಂಗಿಕ ರೋಗಗಳು ಬಂದಿರುವ ಸಾಧ್ಯತೆಗಳು ಇವೆ. ಪರಾವಲಂಬಿ ಜೀವಿಗಳಿಂದಾಗಿ ಬರುವಂತಹ ಲೈಂಗಿಕ ರೋಗಗಳು ಜನನೇಂದ್ರೀಯ ಭಾಗದಲ್ಲಿ ಕೆಂಪಾಗಿಸುವುದು ಮತ್ತು ಊತ ಉಂಟು ಮಾಡುವುದು.

English summary

These Are the Causes of Vagina Pain in women

It’s alarming to experience anywhere in your body. Yet pain on or near your might be the most worrisome. Looking up symptoms on Google can ramp up the anxiety you already feel. And though you know you should call your ob-gyn, explaining the pain can be embarrassing—and you worry she won't take you seriously.
Story first published: Tuesday, December 18, 2018, 10:07 [IST]
X
Desktop Bottom Promotion