ದೇಹದ ಲಿವರ್‌ನ ಆರೈಕೆ ಮಾಡುವ ಪವರ್ ಫುಲ್ ಆಹಾರಗಳು

Posted By: Divya pandit Pandit
Subscribe to Boldsky

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಸಹ ಒಂದು. ಇದು ದೇಹಕ್ಕೆ ಆಕ್ರಮಣ ಮಾಡುವ ವಿಷಕಾರಿ ಜೀವಾಣುಗಳ ವಿರುದ್ಧ ಹೋರಾಡುವ ಮೊದಲ ಅಂಗ. ವ್ಯಾಪಾಕವಾದ ಕಿಣ್ವಗಳನ್ನು ಸಕ್ರಿಯಗೊಳಿಸುವುದು, ವಿಟಮಿನ್ ಕೆ ಅನ್ನು ಸಂಗ್ರಹಿಸಿ ಇಡುವುದು, ರಕ್ತವನ್ನು ಹೆಪ್ಪುಗಟ್ಟುವ ಅಂಶ ಹಾಗೂ ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳನ್ನು ಸೂಕ್ತ ರೀತಿಯಲ್ಲಿ ಸಕ್ರಿಯಗೊಳಿಸುವಂತೆ ಮಾಡುವ ಜವಾಬ್ದಾರಿಯನ್ನು ಯಕೃತ್ತು ಅಥವಾ ಲಿವರ್ ವಹಿಸಿ ಕೊಳ್ಳುತ್ತದೆ. ಹಾಗಾಗಿ ಯಕೃತ್ತಿನ ಆರೋಗ್ಯವನ್ನು ಬಹು ಎಚ್ಚರಿಕೆಯಿಂದ ಕಾಯ್ದುಕೊಳ್ಳುವುದನ್ನು ಯಾರು ಮರೆಯುವಂತಿಲ್ಲ. ಹಾಗೊಮ್ಮೆ ಯಕೃತ್ತು ತನ್ನ ಕ್ರಿಯೆಯನ್ನು ನಿಧಾನಗೊಳಿಸಿತು ಅಥವಾ ಅನಾರೋಗ್ಯ ಸ್ಥಿತಿಯನ್ನು ತಲುಪಿತು ಎಂದಾದರೆ ವ್ಯಕ್ತಿ ಬಹು ಚಿಂತಾಜನಕ ಸ್ಥಿತಿಯನ್ನು ಅನುಭವಿಸಬೇಕಾಗುವುದು.

ದೇಹದ ಲಿವರ್‌ನ ಕಲ್ಮಶಗಳನ್ನು ನಿವಾರಿಸುವ ಅದ್ಭುತ ಆಹಾರಗಳು...

ನಿತ್ಯದ ಒತ್ತಡದ ಬದುಕಿನಲ್ಲಿ ನಾವು ಮನಸ್ಸು ಬಯಸಿದ್ದನ್ನು ಬಲು ಸುಲಭವಾಗಿ ಸೇವಿಸುತ್ತೇವೆ. ಇದು ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಚಿಂತಿಸುವುದೇ ಇಲ್ಲ. ಇಂತಹ ವರ್ತನೆ ಹಾಗೂ ಆಹಾರ ಸೇವನೆಯು ಯಕೃತ್ತಿನ ಮೇಲೆ ಗಾಢವಾದ ಪ್ರಭಾವ ಬೀರುವುದು. ಯಕೃತ್ತಿನ ಆರೋಗ್ಯವನ್ನು ಉತ್ತಮ ಪಡಿಸುವ ಅಥವಾ ಆರೋಗ್ಯವನ್ನು ಕಾಯ್ದುಕೊಳ್ಳುವ ಕೆಲವು ನೈಸರ್ಗಿಕ ಘಟಕಗಳಿವೆ. ಅವುಗಳನ್ನು ಸೇವಿಸುವುದರ ಮೂಲಕ ನಮ್ಮ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದು ಹೇಗೆ ಎನ್ನುವ ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ನಮ್ಮ ಕೆಟ್ಟ ಉಸಿರಾಟಕ್ಕೆ ಕಾರಣವಾಗಬಹುದು. ಆದರೆ ಇದರಲ್ಲಿರುವ ಅಲೈಸಿನ್ ಎನ್ನುವ ಶಕ್ತಿಯುತವಾದ ಔಷಧೀಯ ಸಂಯುಕ್ತವು ದೇಹದ ಆರೋಗ್ಯ ರಕ್ಷಣೆಗೆ ಹಾಗೂ ವಿಶೇಷವಾಗಿ ಯಕೃತ್ತಿನ ಆರೋಗ್ಯಕ್ಕೆ ಬಹು ಉಪಕಾರಿ ಎನ್ನಲಾಗುವುದು. ಇದು ಯಕೃತ್ತಿನ ವಿಷಕಾರಿ ಅಂಶವನ್ನು ನಿರ್ಮೂಲನ ಗೊಳಿಸುತ್ತದೆ.

ನೆನಪಿಡಿ: ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಬೆರೆಸಿ ಸೇವಿಸುವುದರಿಂದ ಅದರ ಔಷಧೀಯ ಪ್ರಮಾಣ ತಗ್ಗುವುದು. ಹಾಗಾಗಿ ಒಂದು ಕಚ್ಚಾ ಬೆಳ್ಳುಳ್ಳಿ ಎಸಳನ್ನು ತಿಂದರೆ ಅದು ಆರೋಗ್ಯಕರ ಅಂಶದಿಂದ ಕೂಡಿರುವುದು. ಜೊತೆಗೆ ಅತ್ಯುತ್ತಮವಾದದ್ದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಹಿತವಾದ ಪರಿಣಾಮವನ್ನು ನೀಡುತ್ತದೆ. ಜೊತೆಗೆ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸುತ್ತಾರೆ ಎನ್ನುವುದನ್ನು ಪ್ರಪಂಚ ತಿಳಿದಿದೆ. ಆದರೆ ಹೆಚ್ಚಿನವರಿಗೆ ತಿಳಿಯದಂತಹ ಅತ್ಯುತ್ತಮ ಆರೋಗ್ಯಕರ ಅಂಶಗಳನ್ನು ಗ್ರೀನ್ ಟೀ ಒಳಗೊಂಡಿದೆ. ಇದರಲ್ಲಿ ಕ್ಯಾಟ್ಚಿನ್ಸ್ ಎಂಬ ವಿಶೇಷ ಉತ್ಕರ್ಷಣ ನಿರೋಧಕ ಗುಣ ಸಮೃದ್ಧವಾಗಿರುತ್ತದೆ. ಇದು ಯಕೃತ್ತನ್ನು ಶುದ್ಧೀಕರಿಸಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ನೆನಪಿಡಿ: ಗ್ರೀನ್ ಟೀ ನಿಮ್ಮ ಆರೋಗ್ಯದ ಮೇಲೆ ಅಥವಾ ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದಾಗ ಅದನ್ನು ನಿರಾಕರಿಸುವುದು ಸೂಕ್ತ.

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು ದೇಹದ ವಿವಿಧ ಅಂಗಗಳಿಗೆ ಅತ್ಯುತ್ತಮವಾದದ್ದು. ಅದರಲ್ಲೂ ಮುಖ್ಯವಾಗಿ ಹೃದಯ ಮತ್ತು ಯಕೃತ್ತಿಗೆ ಅತ್ಯುತ್ತಮವಾದದ್ದು. ಈ ಹಣ್ಣಿನಲ್ಲಿರು ಗ್ಲುಟಾಥಿಯೋನ್ ಅಂಶವು ಹೃದಯಘಾತಕ್ಕೆ ಕಾರಣವಾಗುವ ಹಾನಿಕಾರಕ ಕೊಬ್ಬು ನಿವಾರಣೆಗೆ ಮತ್ತು ಯಕೃತ್ತನಲ್ಲಿರುವ ವಿಷಕಾರಿ ಅಂಶಗಳ ನಿವಾರಣೆಗೆ ಸಹಕರಿಸುತ್ತದೆ.

ಹುಳಿ ಹಣ್ಣುಗಳು

ಹುಳಿ ಹಣ್ಣುಗಳು

ಕಿತ್ತಳೆ, ಕಿವಿ ಮತ್ತು ನಿಂಬೆ ಹಣ್ಣುಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಯಕೃತ್ತಿನ ಆರೋಗ್ಯ ರಕ್ಷಣೆಗೆ ಇವು ಬಹು ಉಪಕಾರಿಯಾಗಿರುತ್ತವೆ. ಇವುಗಳನ್ನು ನಿತ್ಯದ ಆಹಾರದಲ್ಲಿ ಅಥವಾ ಕಚ್ಚಾ ಹಣ್ಣುಗಳನ್ನು ಹಾಗೆಯೇ ಸವಿಯಬಹುದು.

ನೆನಪಿಡಿ: ಹುಳಿಯಿಂದ ಕೂಡಿರುವ ಹಣ್ಣುಗಳು ಹಲ್ಲಿನ ಸವೆತವನ್ನು ಉಂಟುಮಾಡುತ್ತದೆ. ಹಾಗಾಗಿ ಹುಳಿ ಹಣ್ಣುಗಳನ್ನು ತಿಂದ ಬಳಿಕ ಬಾಯನ್ನು ತೊಳೆದುಕೊಳ್ಳಿ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪಿನ ತರಕಾರಿಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಇರುತ್ತವೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಯಕೃತ್ತಿನ ವಿಚಾರದಲ್ಲಿ ತೆಗೆದುಕೊಂಡರೆ, ಇವು ರಕ್ತದಲ್ಲಿರುವ ಲೋಹ ಮತ್ತು ಜೀವಾಣುಗಳನ್ನು ಹತೋಟಿಯಲ್ಲಿಟ್ಟು ಪಿತ್ತರಸವನ್ನು ಹೆಚ್ಚಿಸುತ್ತದೆ. ಅಧಿಕ ಪ್ರಯೋಜನಗಳನ್ನು ಪಡೆದುಕೊಳ್ಳಲು ಪಾಲಕ್, ಹಾಗಲಕಾಯಿ ಹಾಗೂ ಇನ್ನಿತರ ಸೊಪ್ಪುಗಳನ್ನು ಅಧಿಕ ಪ್ರಮಾಣದಲ್ಲಿ ಆಹಾರ ಸೇವನೆಯಲ್ಲಿ ಸೇರಿಸಬೇಕು.

ಬೀಟ್ರೂಟ್

ಬೀಟ್ರೂಟ್

ವಿಶೇಷ ರುಚಿಯಿಂದ ಕೂಡಿರುವ ತರಕಾರಿ ಬೀಟ್ರೂಟ್. ಕೆನ್ನೇರಳೆ ಬಣ್ಣದಿಂದ ಕೂಡಿರುವ ಈ ಗಡ್ಡೆ ರೂಪದ ತರಕಾರಿಯು ಯಕೃತ್ತಿನ ಆರೋಗ್ಯ ಉತ್ತೇಜಿಸಲು ಹಾಗೂ ರಕ್ತದ ಉತ್ಪಾದನೆಗೆ ಅತ್ಯುತ್ತಮವಾದದ್ದು. ಇದರಲ್ಲಿ ಸಮೃದ್ಧವಾದ ಫೋವೊನೈಡ್ ಮತ್ತು ಬೀಟಾ-ಕ್ಯಾರೋಟಿನ್‍ಗಳಿರುತ್ತವೆ. ಇವು ಆರೋಗ್ಯದ ಸುಧಾರಣೆಗೆ ಸಹಕರಿಸುತ್ತವೆ.

ಅಂಟು ಮುಕ್ತ ಧಾನ್ಯಗಳು

ಅಂಟು ಮುಕ್ತ ಧಾನ್ಯಗಳು

ಅಂಟು/ಗ್ಲುಟನ್ ಯಕೃತ್ತಿನಲ್ಲಿ ವಿಷಕಾರಿ ಅಂಶವನ್ನು ವೃದ್ಧಿಸುವುದು ಎಂದು ಕೆಲವು ಅಧ್ಯಯನಗಳು ಸಾಬೀತು ಪಡಿಸಿವೆ. ಸಾಮಾನ್ಯ ಆಹಾರ ಧಾನ್ಯಗಳನ್ನು ನೀವು ಸೇವಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಕ್ವಿನೊವಾ, ಹುರುಳಿಗಳಂತಹ ಅಂಟು ಮುಕ್ತ ಧಾನ್ಯಗಳನ್ನು ಸೇರಿಸಿ. ಇವು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಡುವವು.

ಅರಿಶಿನ

ಅರಿಶಿನ

ಅರಿಶಿನ ಅತ್ಯುತ್ತಮ ಔಷಧೀಯ ಗುಣವನ್ನು ಒಳಗೊಂಡಿದೆ. ಆಯುರ್ವೇದದಲ್ಲಿ ಇದಕ್ಕೆ ಅತ್ಯುತ್ತಮ ಸ್ಥಾನವನ್ನು ನೀಡಲಾಗಿದೆ. ಉರಿಯೂತ, ಸೋಂಕು ತಗ್ಗುವಿಕೆಗೆ ಹಾಗೂ ಯಕೃತ್ತಿನಲ್ಲಿ ವಿಷಕಾರಿ ಅಂಶಗಳನ್ನು ನಿವಾರಿಸಿ ಕಿಣ್ವಗಳನ್ನು ಪ್ರಚೋದಿಸುತ್ತದೆ. ಹಾಗಾಗಿ ಆಹಾರ ಪದಾರ್ಥಗಳಲ್ಲಿ ಅರಿಶಿನವನ್ನು ಒಂದು ಚಿಟಕಿಯಷ್ಟು ಬಳಸಿದರೂ ಸಹ ಅತ್ಯುತ್ತಮವಾದದ್ದು ಎಂದು ಹೇಳಲಾಗುವುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಆಲಿವ್ ಎಣ್ಣೆಯನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ಯಕೃತ್ ಗೆ ಹೆಚ್ಚಿನ ನೆರವು ದೊರಕುತ್ತದೆ. ಕಲ್ಮಶಗಳನ್ನು ಕರಗಿಸಿಕೊಳ್ಳುವ ಕೆಲವು ಕಿಣ್ವಗಳು ಈ ಎಣ್ಣೆಯಲ್ಲಿದ್ದು ಯಕೃತ್ ನ ಕೆಲಸದ ಹೊರೆಯನ್ನು ತಾನು ಹೊರುವ ಮೂಲಕ ಯಕೃತ್‌ನ ಹೊರೆಯನ್ನು ಕಡಿಮೆ ಮಾಡುತ್ತದೆ.

English summary

These 8 Natural Liver-Cleansing Foods Will Blow Your Mind

Your liver is one of the most important organs in your body. So, here are 8 natural liver-cleansing foods that will help you keep it in top shape.
Story first published: Tuesday, April 10, 2018, 23:31 [IST]