ಹಸುವಿನ ಹಾಲಿನಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳು

Posted By: Hemanth
Subscribe to Boldsky

ಹಾಲೆಂದರೆ ಹೆಚ್ಚಿನವರಿಗೆ ತಿಳಿದಿದುರುವುದು ಹಸುವಿನ ಹಾಲು. ಹಸುವಿನ ಹಾಲು ವಿಶ್ವದ ಹೆಚ್ಚಿನ ಜನರು ಸೇವಿಸಲ್ಪಡುವ ಹಾಲು. ಆದರೆ ವಿಶ್ವದ ಕೆಲವೊಂದು ಕಡೆಗಳಲ್ಲಿ ಅಲ್ಲಿ ಹವಾಮಾನವನ್ನು ಅನುಸರಿಸಿಕೊಂಡು ಆಡು, ಕುರಿ, ಒಂಟೆ ಮತ್ತು ಎಮ್ಮೆಯ ಹಾಲನ್ನು ಸೇವನೆ ಮಾಡುವರು. ಆದರೆ ಹಸುವಿನ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆ ಹಾಲಿನಲ್ಲಿ ಇಲ್ಲದೆ ಇರುವ ಕಾರಣದಿಂದ ಈ ಹಾಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಹೆಚ್ಚಾಗಿ ವೈದ್ಯರು ಮಕ್ಕಳಿಗೆ ದಿನಕ್ಕೊಂದು ಲೋಟ ಹಸುವಿನ ಹಾಲು ನೀಡಿ ಎಂದು ಸೂಚಿಸುತ್ತಾರೆ. ಹಸುವಿನ ಹಾಲಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶ ಹಾಗೂ ವಿಟಮಿನ್ ಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ಕೆಲವೊಂದು ಕಾಯಿಲೆಗಳು ಬರದಂತೆ ಕಾಪಾಡುವುದು. ಹಸುವಿನ ಹಾಲನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.

ಸೂಚನೆ: ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ಈ ಕೆಳಗಿನ ಅಂಶಗಳು ನಿಮ್ಮ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. 

ಮೂಳೆಗಳನ್ನು ಬಲಗೊಳಿಸುವುದು

ಮೂಳೆಗಳನ್ನು ಬಲಗೊಳಿಸುವುದು

ಹಸುವಿನ ಹಾಲಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಪ್ರಮುಖ ಪೋಷಕಾಂಶಗಳು ಇವೆ. ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದಾಗಿ ವಿಶ್ವದ ಹೆಚ್ಚಿನ ಸರ್ಕಾರಗಳು ಮಕ್ಕಳು ಹಾಗೂ ದೊಡ್ಡವರು ಹಾಲು ಸೇವಿಸಬೇಕೆಂದು ಹೇಳುತ್ತದೆ.

ಹಲ್ಲುಗಳಿಗೆ ಉತ್ತಮ

ಹಲ್ಲುಗಳಿಗೆ ಉತ್ತಮ

ಮೂಳೆಗಳಂತೆ ಹಲ್ಲುಗಳಿಗೆ ಕೂಡ ಆರೋಗ್ಯ ಹಾಗೂ ಬಲಿಷ್ಠವಾಗಿರಲು ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಇದರಿಂದ ಪ್ರತಿನಿತ್ಯ ಹಸುವಿನ ಹಾಲು ಸೇವಿಸಿದರೆ ಹಲ್ಲುಗಳು ಬಲಿಷ್ಠವಾಗಿರುವುದು.

ಹೃದಯಕ್ಕೆ ತುಂಬಾ ಒಳ್ಳೆಯದು

ಹೃದಯಕ್ಕೆ ತುಂಬಾ ಒಳ್ಳೆಯದು

ಹಸುಗಳು ಹೆಚ್ಚಾಗಿ ಹುಲ್ಲು ಸೇವನೆ ಮಾಡಿ ಇತರ ಹಾಲು ನೀಡುವ ಪ್ರಾಣಿಗಳಿಗಿಂತ ಒಳ್ಳೆಯ ಹಾಲನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ವೈದ್ಯರು ನಿಮಗೆ ಹಸುವಿನ ಹಾಲು ಸೇವಿಸಲು ಸೂಚಿಸುವರು.ಹಸುವಿನ ಹಾಲಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯವನ್ನು ದೀರ್ಘಕಾಲ ತನಕ ಆರೋಗ್ಯವಾಗಿಡುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಇದು ನಿಜ. ಹಸುವಿನ ಹಾಲನ್ನು ಬೆಳಗ್ಗೆ ಸೇವನೆ ಮಾಡುವವರು ದಿನದ ಇತರ ಸಮಯದಲ್ಲಿ ಕ್ಯಾಲರಿ ಕಡಿಮೆ ತೆಗೆದುಕೊಳ್ಳುವರು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು.

ಸ್ನಾಯುಗಳ ಬೆಳವಣಿಗೆಗೆ

ಸ್ನಾಯುಗಳ ಬೆಳವಣಿಗೆಗೆ

ದೇಹದಲ್ಲಿ ಸ್ನಾಯುಗಳ ಬೆಳವಣಿಗೆಗೆ ಹೆಚ್ಚಿನ ಪ್ರೋಟೀನ್ ಬೇಕಾಗುತ್ತದೆ. ಇದರಿಂದ ಹಸುವಿನ ಹಾಲು ಹೆಚ್ಚಿನ ಪ್ರೋಟೀನ್ ಒದಗಿಸುವುದು.

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ನಿಯಮಿತವಾಗಿ ಹಸುವಿನ ಹಾಲು ಸೇವನೆ ಮಾಡುವುದರಿಂದ ಮಧುಮೇಹದಿಂದ ರಕ್ಷಣೆ ನೀಡುವುದು. ಹಸುವಿನ ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶ ಹಾಗೂ ಖನಿಜಾಂಶಗಳು ಇವೆ. ಇದು ಜೀರ್ಣಕ್ರಿಯೆ ಸುಧಾರಿಸಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು.

ವಿಟಮಿನ್ ಡಿ ಸಮೃದ್ಧವಾಗಿದೆ

ವಿಟಮಿನ್ ಡಿ ಸಮೃದ್ಧವಾಗಿದೆ

ವಿಟಮಿನ್ ಡಿ ಕೇವಲ ಬಲಶಾಲಿ ಮೂಳೆಗಳನ್ನು ಕಾಪಾಡಿಕೊಳ್ಳಲು ಮಾತ್ರ ಬೇಕಿರುವುದಲ್ಲ. ಇದು ನಿದ್ರೆ, ಭಾವನೆ ಮತ್ತು ಹಸಿವು ಹೆಚ್ಚಿಸುವ ಹಾರ್ಮೋನಾದ ಸೆರೊಟೊನಿನ್ ಉತ್ಪಾದನೆಗೂ ತುಂಬಾ ಮುಖ್ಯ. ಹಸುವಿನ ಹಾಲಿನಲ್ಲಿ ವಿಟಮಿನ್ ಡಿ ಇದೆ. ಪ್ರತಿನಿತ್ಯ ಇದರ ಸೇವನೆ ಮಾಡಿದರೆ ನೀವು ಆರೋಗ್ಯವಾಗಿರಬಹುದು.

ಬೆಳೆಯುವ ಮಕ್ಕಳಿಗೆ

ಬೆಳೆಯುವ ಮಕ್ಕಳಿಗೆ

ಮಗು ಬೆಳೆಯುತ್ತಾ ಹೋದಂತೆ ಪ್ರೋಟೀನ್ ನ ಅವಶ್ಯಕತೆ ಇರುತ್ತದೆ.ಇದನ್ನು ನೀವು ಹಸುವಿನ ಹಾಲು ನೀಡುವುದರ ಮೂಲಕ ಒದಗಿಸಬಹುದು. ಹಸುವಿನ ಹಾಲು ಮಗುವನ್ನು ಇಡೀ ದಿನ ಶಕ್ತಿಯುತವಾಗಿರಿಸಲು ಬೇಕಾಗುವ ಕಾರ್ಬೋಹೈಡ್ರೇಟ್ಸ್ ಅನ್ನು ಕೂಡ ಒದಗಿಸುತ್ತದೆ.ಅತಿಯಾಗಿ ಹಸುವಿನ ಹಾಲನ್ನು ಕೊಡಬೇಡಿ.ಏಕೆಂದರೆ ಕೆಲವೊಮ್ಮೆ ಇದರಿಂದ ರಕ್ತ ಹೀನತೆ ಕಾಣಿಸಿಕೊಳ್ಳಬಹುದು. ದಿನಕ್ಕೆ 16 ಔನ್ಸ್ ನಷ್ಟು ಹಾಲು ಕೊಡುವುದು ಉತ್ತಮ.ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆ ಇದನ್ನು 24 ಔನ್ಸ್ ನಷ್ಟು ಹೆಚ್ಚಿಸಿ. ನಿಮ್ಮ ಮಗುವಿಗೆ ಹಸುವಿನ ಹಾಲು ನೀಡಲು ಪ್ರಾರಂಭಿಸಿದ ನಂತರ ಇತರ ಘನರೂಪದ ಆಹಾರ ನೀಡುವ ಪ್ರಮಾಣವನ್ನು ಕಡಿಮೆಗೊಳಿಸಿ.

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

English summary

These 7 Health Benefits of Cow Milk Will Blow Your Mind

Cow milk is the most-widely consumed milk variety in the world. And though sheep, camel, buffalo, and goat milk are also popular milk types (depending on the which part of the world you are talking about), by far cow milk is the most preferred among humans for its incredible nutritional values and other properties. So here are 7 health benefits of drinking cow milk every day.