For Quick Alerts
ALLOW NOTIFICATIONS  
For Daily Alerts

ಊಟದ ನಂತರ ಅಥವಾ ಮೊದಲು ನೀರು ಸೇವಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತೆ?

By Sushma Charhra
|

ಊಟಕ್ಕಿಂತ ಮುಂಚೆ ಇಲ್ಲವೇ ಊಟದ ನಂತರ ಕೂಡಲೇ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ ಅಥವಾ ಕೆಟ್ಟದ್ದಾ? ಅದೆಷ್ಟೊ ವರ್ಷಗಳಿಂದ ಹಲವರ ತಲೆಯಲ್ಲಿ ಇದೊಂದು ಪ್ರಶ್ನೆ ಕಾಡುತ್ತಲೇ ಇರಬಹುದು. ಕೆಲವರಿಗೆ ಊಟದ ನಂತರ, ಇಲ್ಲವೇ ಊಟ ಆದ ಮೇಲೆ ಅಷ್ಟೇ ಯಾಕೆ, ಊಟದ ಜೊತೆಜೊತೆಗೆ ನೀರು ಕುಡಿಯಬೇಕು ಅನ್ನಿಸಬಹುದು ಮತ್ತು ಅದನ್ನು ಅವರು ನಾರ್ಮಲ್ ಎಂದು ಪರಿಗಣಿಸಿರುತ್ತಾರೆ. ಆದರೆ ಕೆಲವರು ಈ ನಿರ್ಧಾರದ ಬಗ್ಗೆ ಸಂಪೂರ್ಣ ವಿರೋಧ ಭಾವವನ್ನು ತಳೆದಿರುತ್ತಾರೆ.

ಕೆಲವು ಮಂದಿ ನಂಬಿರುವ ಪ್ರಕಾರ ಊಟದ ನಂತರ ಅಥವಾ ಊಟದ ಮುನ್ನ ನೀರು ಸೇವಿಸುವುದೊಂದು ಕೆಟ್ಟ ಅಭ್ಯಾಸ ಎಂದು ಹೇಳುತ್ತಾರೆ. ಕೇವಲ ಸಾಮಾನ್ಯ ಮಂದಿ ಮಾತ್ರ ಇಂತಹ ಗೊಂದಲದ ಪ್ರಶ್ನೆಯನ್ನು ಇಟ್ಟುಕೊಂಡಿದ್ದಾರೆ ಎಂದುಕೊಳ್ಳಬೇಡಿ. ಬದಲಾಗಿ ಕೆಲವು ಡಾಕ್ಟರ್ ಗಳು ಕೂಡ ವಿರೋಧಾತ್ಮಕ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡುತ್ತಾರೆ. ಹಲವು ವರ್ಷಗಳಿಂದ ಇರುವ ಈ ರಹಸ್ಯವನ್ನು ಬೇಧಿಸುವ ಸಮಯ ಈಗ ಬಂದಿದೆ.ಈ ಸಮಸ್ಯೆಯನ್ನು ತುಂಬಾ ಸುಲಭದಲ್ಲಿ ಪರಿಹರಿಸಬಹುದಾಗಿದ್ದು ಅದಕ್ಕಾಗಿ ಆಯುರ್ವೇದದ ಸಹಾಯವನ್ನು ಪಡೆಯಲಾಗಿದೆ.

Before Or After A Meal?

ಊಟಕ್ಕಿಂತ ಮುಂಚೆ ನೀರು ಕುಡಿಯುವುದು ಸರಿಯೇ?

ಆಯುರ್ವೇದ ಹೇಳುವ ಪ್ರಕಾರ ಊಟಕ್ಕಿಂತ ಮುಂಚೆ ನೀರು ಸೇವಿಸುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯು ದುರ್ಬಲಗೊಳ್ಳಲಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಮಾಡುತ್ತಂತೆ. ಊಟಕ್ಕಿಂತ ಮುನ್ನ ನೀರು ಸೇವಿಸುವುದರ ಪರಿಣಾಮವಾಗಿ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ನ ರಸವು ಕರಗುತ್ತೆ ಮತ್ತು ಇದು ನಿಮ್ಮ ದೇಹದ ಜೀರ್ಣಕ್ರಿಯೆ ಬಲಕ್ಕೆ ಸಂಪೂರ್ಣ ವಿರೋಧವಾಗಿರುತ್ತದೆ. ಈ ರೀತಿ ಆಗುವುದರ ಪರಿಣಾಮದಿಂದಾಗಿ ನಿಮ್ಮ ದೇಹವು ತೊಂದರೆಗೆ ಒಳಪಡಬೇಕಾಗುತ್ತದೆ.

ಆಯುರ್ವೇದ ತಿಳಿಸುವ ಪ್ರಕಾರ ಊಟಕ್ಕಿಂತ ಮುಂಚೆ ನೀರು ಸೇವಿಸುವುದರಿಂದಾಗಿ ನಿಮ್ಮ ದೇಹದಲ್ಲಿ ಹಲವು ವೀಕ್ ನೆಸ್ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಹಾಗಾಗಿ ಆಯುರ್ವೇದವು ತನ್ನ ನಿರ್ಧಾರದಲ್ಲಿ ಪಕ್ಕಾ ಇದ್ದು, ಯಾವುದೇ ಕಾರಣಕ್ಕೂ ಊಟಕ್ಕೂ ಮುನ್ನ ನೀರು ಸೇವಿಸಬಾರದು ಎಂದು ಹೇಳುತ್ತದೆ. ಆದರೆ ಊಟಕ್ಕಿಂತ ಕೆಲವು ಗಂಟೆಗಳ ಮುನ್ನ ನೀರು ಸೇವಿಸುವುದು ಒಳ್ಳೆಯದು ಮತ್ತು ಅದು ಯಾವುದೇ ರೀತಿಯ ಸಮಸ್ಯೆಯನ್ನು ನಿಮ್ಮ ದೇಹಕ್ಕೆ ತಂದೊಡ್ಡುವುದಿಲ್ಲ ಎಂಬ ಅಭಿಪ್ರಾಯವನ್ನು ಆಯುರ್ವೇದ ತಿಳಿಸುತ್ತೆ.

ಊಟದ ನಂತರ ನೀರು ಸೇವಿಸುವುದು ಸರಿಯೇ?

ಒಂದು ವೇಳೆ ನೀವು ಊಟ ಆದ ನಂತರ ಕೂಡಲೇ ನೀರು ಸೇವಿಸಿದರೆ, ಇದು ನೀವು ಸೇವಿಸಿದ ಆಹಾರದ ಕ್ವಾಲಿಟಿಯ ಮೇಲೆ ಪರಿಣಾಮ ಬೀರುತ್ತೆ ಮತ್ತು ನಿಮ್ಮ ದೇಹದ ಜೀರ್ಣಕ್ರಿಯೆಯ ಬಲದ ಮೇಲೆ ಪರಿಣಾಮ ಬೀರುತ್ತೆ., ನೀವು ಯಾವ ಆಹಾರ ಸೇವಿಸಿದ್ದೀರಿ ಎಂಬುದು ಮುಖ್ಯವಾಗುವುದಲ್ಲ, ಆದರೆ ನೀವು ತಿಂದ ಆಹಾರಕ್ಕೆ ಇದು ಕೂಲಿಂಗ್ ಎಫೆಕ್ಟ್ ನ್ನು ನೀಡುತ್ತೆ ಮತ್ತು ನೀವು ಪ್ರತಿ ದಿನ ಇದೇ ರೀತಿ ಊಟದ ನಂತರ ನೀವು ಕುಡಿದರೆ ಅತಿಯಾಗಿ ತೂಕ ಹೆಚ್ಚಳವಾಗುವ ಸಾಧ್ಯತೆ ಇರುತ್ತೆ.

ಹಾಗಾಗಿ ಆಯುರ್ವೇದವು ಊಟದ ನಂತರ ಕೂಡಲೇ ನೀರು ಸೇವಿಸುವ ಅಭ್ಯಾಸಕ್ಕೂ ಕೂಡ ಯಾವುದೇ ಬೆಂಬಲ ಕೊಡುವುದಿಲ್ಲ. ಒಟ್ಟಾರೆಯಾಗಿ ನೀವು ಊಟದ ನಂತರ ಕೂಡಲೇ ನೀರು ಸೇವಿಸಿದರೆ ನಿಮ್ಮ ಫಿಟ್ ನೆಸ್ ಮತ್ತು ಆರೋಗ್ಯದ ಮೇಲೆ ಎಫೆಕ್ಟ್ ಮಾಡುವ ಸಾಧ್ಯತೆ ಇದೆ.

ಒಮ್ಮೆ ನಿಮ್ಮ ಊಟ ಮುಗಿದರೆ, ಕೆಲವು ಸಮಯ ಅರ್ಥಾತ್ ಒಂದು ಅರ್ಧ ಗಂಟೆ ಇಲ್ಲವೇ ಒಂದು ಗಂಟೆಯ ನಂತರ ನೀರು ಕುಡಿಯಲೇ ಬೇಕು.ಇದು ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತ ಮತ್ತು ನಿಮ್ಮ ಬಾಯಾರಿಕೆಯನ್ನು ತಣಿಸಿ, ನಿಮಗೆ ಆಹಾರ ತಿಂದಿದ್ದಕ್ಕೆ ತೃಪ್ತಿಯ ಭಾವ ನೀಡುತ್ತೆ.

ಎರಡು ಗಂಟೆಯ ನಂತರ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿರುತ್ತೆ. ಆಗ ನಿಮಗೆ ಬೇಕೆನ್ನುವಷ್ಟು ನೀರು ಸೇವಿಸಿ. ಈ ಅಭ್ಯಾಸವು ನಿಮ್ಮನ್ನು ಆರೋಗ್ಯವಂತರನ್ನಾಗಿ ಮತ್ತು ಫಿಟ್ ಆಗಿ ಇರುವಂತೆ ನೋಡಿಕೊಳ್ಳುತ್ತೆ. ಅಷ್ಟೇ ಅಲ್ಲ., ನಿಮ್ಮ ದೇಹವು ಯಾವಾಗಲೂ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ.ಯಾವುದೇ ಕೆಟ್ಟ ಪರಿಣಾಮವನ್ನೂ ಇದು ಮಾಡುವುದಿಲ್ಲ.

ಊಟದ ಜೊತೆಜೊತೆಗೆ ನೀರು ಸೇವಿಸುವುದು ಸರಿಯೇ?

ಈ ಅಭ್ಯಾಸವನ್ನು ಆಯುರ್ವೇದ ಸಂಪೂರ್ಣವಾಗಿ ಬೆಂಬಲಿಸುತ್ತೆ ಮತ್ತು ಊಟದ ಜೊತೆಜೊತೆಗೆ ನೀರು ಕುಡಿಯುವ ಅಭ್ಯಾಸವನ್ನೂ ಕೂಡ ಆಯುರ್ವೇದ ಬೆಂಬಲಿಸುತ್ತೆ. ಊಟದ ಜೊತೆಜೊತೆಗೆ ನೀರು ಸೇವಿಸುವುದು ತುಂಬಾ ಲಾಭದಾಯಕ ಎಂದು ಅದು ಹೇಳುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರಬೇಕು ಎಂದರೆ ನೀವು ಊಟದ ಜೊತೆಜೊತೆಗೆ ನೀರು ಸೇವಿಸಬೇಕಂತೆ ನೀವು ಊಟದ ಜೊತೆಜೊತೆಗೆ ನೀರು ಸೇವಿಸುವುದರಿಂದಾಗಿ ಆಹಾರವು ತೇವಗೊಳ್ಳುತ್ತೆ ಮತ್ತು ಆಹಾರವನ್ನು ಸಣ್ಣಸಣ್ಣ ಪಾರ್ಟಿಕಲ್ ಗಳಾಗಿ ತುಂಡರಿಸಲು ಸಹಾಯವಾಗುತ್ತೆ. ಒಂದು ವೇಳೆ ನೀವು ಎಣ್ಣೆಯಂಶದ ಅಥವಾ ಅತಿಯಾಗಿ ಖಾರವಿರುವ ಆಹಾರವನ್ನು ಸೇವಿಸಿದರೆ ಕೂಡಲೇ ಊಟದ ಮಧ್ಯೆ ನೀರು ಸೇವಿಸುವುದರಿಂದಾಗಿ ಸಮಾಧಾನ ಸಿಗುತ್ತೆ ಮತ್ತು ಬಾಯಾರಿಕೆ ತಣಿಯುತ್ತೆ. ಇದರಿಂದಾಗಿ ಜೀರ್ಣಕ್ರಿಯೆ ಸರಾಗಗೊಳ್ಳುತ್ತೆ. ಹಾಗಾಗಿ ಖಂಡಿತವಾಗಿಯೂ ನೀವು ಊಟದ ಮಧ್ಯೆ ಮಧ್ಯೆ ನೀರು ಸೇವಿಸುತ್ತಲೇ ಇರುವುದು ಬಹಳ ಮುಖ್ಯ.

ಆದರೆ ಅತಿಯಾಗಿ ನೀರು ಕುಡಿಯುವ ಅಗತ್ಯವಿಲ್ಲ. ಊಟದ ಮಧ್ಯೆ ಆದಷ್ಟು ಕಡಿಮೆ ನೀರು ಕುಡಿಯಿರಿ. ಊಟಕ್ಕೂ ಎರಡು ಗಂಟೆ ಮುಂಚೆ ಇಲ್ಲವೇ ಊಟವಾದ ಎರಡು ಗಂಟೆಯ ನಂತರ ಸರಿಯಾಗಿ ನೀರು ಕುಡಿಯಿರಿ. ಊಟದ ಸಮಯದಲ್ಲೇ ಹೆಚ್ಚು ನೀರು ಕುಡಿದರೆ ನೀರಿನಿಂದಲೇ ನಿಮ್ಮ ಹೊಟ್ಟೆ ಫುಲ್ ಆಗಿ ಬಿಡುತ್ತೆ. ಹಾಗಾಗಿ ಆಹಾರ ಪದಾರ್ಥಗಳು ದೇಹಕ್ಕೆ ಕಡಿಮೆಯಾಗಿ ನೀವು ವೀಕ್ ನೆಸ್ ಅನುಭವಿಸಬಾರದು.

ಒಂದು ವೇಳೆ ನೀವು ಊಟದ ಮಧ್ಯದಲ್ಲೇ ನೀರು ಕುಡಿಯಲು ಇಚ್ಛಿಸಿದ್ದೀರಾದರೆ, ಒಂದು ಅಂಶವನ್ನು ಚೆನ್ನಾಗಿ ನೆನಪಿಡಿ. ತೀರಾ ತಣ್ಣಗಿರುವ ಅಥವಾ ರೆಫ್ರಿಜರೇಟರ್ ನಲ್ಲಿ ಶೇಖರಿಸಿಡಲಾದ ನೀರನ್ನು ಸೇವಿಸಕೂಡದು. ಬದಲಾಗಿ ರೂಮ್ ಟೆಂಪರೇಚರ್ ನಲ್ಲಿರುವ ನೀರನ್ನೇ ಸೇವಿಸಿ. ಅತಿಯಾಗಿ ತಣ್ಣಗಿರುವ ನೀರು ಸೇವಿಸುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು. ಹೀಗೆ ಮಾಡುವುದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಎಂಝೈಮ್ಸ್ ಗಳು ಇನ್ ಆಕ್ಟೀವ ಆಗಿ ಬಿಡುತ್ತವೆ ಮತ್ತು ಇದರ ಪರಿಣಾಮದಿಂದಾಗಿ ಅನಗತ್ಯ ಟಾಕ್ಸಿಕ್ ಅಂಶಗಳು ನಿಮ್ಮ ದೇಹದಲ್ಲಿ ಶೇಖರಣೆಗೊಳ್ಳುತ್ತವೆ. ಟಾಕ್ಸಿಕ್ ಅಲಿಮೆಂಟ್ಸ್ ಗಳಾದ ಆಸಿಡ್ ರಿಫ್ಲಕ್ಸ್ ಅಥವಾ ಹೈಟಸ್ ಹರ್ನಿಯಾ ಗಳು ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಊಟದ ಸಮಯದಲ್ಲೇ ಕಾಫೀ, ಟೀ ಸೇವನೆಯೂ ಕೂಡ ಆರೋಗ್ಯಕ್ಕೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತೆ. ಜೀರ್ಣಕ್ರಿಯೆಯನ್ನು ಹಾಳುಮಾಡಿ ನಿಮ್ಮ ಆರೋಗ್ಯ ಮತ್ತು ಫಿಟ್ ನೆಸ್ ಮೇಲೆ ಕೆಟ್ಟ ಪರಿಣಾಮವಾಗುತ್ತೆ.

ನೀವು ಕೂಡ ಇವರಲ್ಲಿ ಒಬ್ಬರಾಗಿದ್ರೆ, ಅಥವಾ ನೀವು ಊಟಕ್ಕಿಂತ ಮುನ್ನ ಯಾವುದಾದರೂ ಔಷಧಿ ಸೇವಿಸುವವರಾಗಿದ್ದರೆ. ಊಟಕ್ಕೂ ಅರ್ಧಗಂಟೆ ಮುನ್ನ ಸೇವಿಸಿ ಮತ್ತು ಆದಷ್ಟು ಕಡಿಮೆ ನೀರಿನಲ್ಲಿ ಸೇವಿಸಿ. ಇದೇ ವಿಚಾರ ಊಟದ ನಂತರ ಔಷಧಿ ತೆಗೆದುಕೊಳ್ಳುವವರಿಗೂ ಅನ್ವಯಿಸುತ್ತದೆ.

English summary

the-myth-about-drinking-water-just-before-or-after-a-meal

Is it healthy to drink water immediately before or after a meal? This is a question that has been prevailing in the minds of almost everyone since ages. Some state that it is quite normal to drink water before or after a meal or even sometimes during a meal. However, some people are of a completely opposite opinion. Some people believe that it is quite a bad habit to drink water during or after a meal. It's not just the common people who are confused about this question.
Story first published: Thursday, June 7, 2018, 16:48 [IST]
X
Desktop Bottom Promotion