ಡಿಟಾಕ್ಸ್ ಟೀ ಕುಡಿಯಿರಿ, ಆರೋಗ್ಯಕ್ಕೆ ಬರೋಬ್ಬರಿ 10 ಲಾಭಗಳಿವೆ...

Posted By: Arshad
Subscribe to Boldsky

ಇಂದು ಜೀವನ ರಾಕೆಟ್ ಗತಿಯನ್ನು ಪಡೆದಿದ್ದರೂ ಜೀವನಮಟ್ಟ ಮಾತ್ರ ಕುಸಿದಿದೆ ಹಾಗೂ ಅನಾರೋಗ್ಯಕರವಾಗಿದೆ. ಕ್ಷಿಪ್ರವಾದ ಸಮಯದಲ್ಲಿ ತಲುಪುವ ಧಾವಂತದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಮೂಲಭೂತ ಕ್ರಿಯೆಗಳನ್ನೇ ನಾವು ಮರೆಯುತ್ತಿದ್ದೇವೆ. ಪ್ರಮುಖವಾಗಿ ಸಾಕಷ್ಟು ನೀರನ್ನು ಕುಡಿಯದೇ ಇರುವುದು, ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡದಿರುವುದು, ಅನಾರೋಗ್ಯಕರ ಹೋಟೆಲ್ ಅಥವಾ ಸಿದ್ಧ ಆಹಾರಗಳ ಮೇಲೆ ಅತಿಯಾಗಿಯೇ ಅವಲಂಬಿಸುವುದು

ಮೊದಲಾದವು ದೇಹದಲ್ಲಿ ಕಲ್ಮಶಗಳನ್ನು ಹೆಚ್ಚಿಸಲು ಮತ್ತು ಉಳಿಸಿಕೊಳ್ಳಲು ಕಾರಣವಾಗುತ್ತವೆ. ಅನಾರೋಗ್ಯಕರ ಆಹಾರಸೇವನೆ ನಿತ್ಯದ ಆಚರಣೆಯಾದರಂತೂ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತೆಯೇ ಸರಿ. ಇವತ್ತಲ್ಲ ನಾಳೆ, ವಯಸ್ಸಾಗುತ್ತಾ ಹೋದಂತೆ ನಮ್ಮ ದೇಹವೂ ಸವೆತದ ಸೂಚನೆಗಳನ್ನು ನೀಡುತ್ತಾ ಹೋಗುತ್ತದೆ. ಒಂದು ವೇಳೆ ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮಕ್ಕೆ ಸಮಯವಿಲ್ಲದಿರುವುದು ಮೊದಲಾದವು ಅನಿವಾರ್ಯವಾದರೆ ಏನು ಮಾಡಬೇಕು? ಇದಕ್ಕೊಂದು ಸುಲಭ ಪರ್ಯಾಯವೆಂದರೆ ದೇಹದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ನಿವಾರಿಸುವುದು.

ಆರೋಗ್ಯ ಟಿಪ್ಸ್: ಕೊಬ್ಬು ಕರಗಿಸುವ ನೈಸರ್ಗಿಕ 'ಚಹಾ'

ಈ ಅಗತ್ಯತೆಯನ್ನು ಕಂಡುಕೊಂಡ ಆಹಾರೋದ್ಯಮಿಗಳು ಕೆಲವಾರು ವಿಧಾನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇವುಗಳಲ್ಲಿ ವಿರೇಚಕ ಗುಣವಿರುವ ಪೇಯಗಳು, ಸ್ಮೂಥಿಗಳು ಹಾಗೂ ವಿಶೇಷವಾಗಿ ವಿರೇಚಕ ಟೀ (detox tea) ಪ್ರಮುಖವಾಗಿವೆ.

ಈ ಆಹಾರಗಳ ಸೇವನೆಯಿಂದ ನಮ್ಮ ದೇಹದ ಹಲವು ಅಂಗಗಳಲ್ಲಿ ಸಂಗ್ರಹವಾಗಿರುವ ಕಲ್ಮಶಗಳು ನಿವಾರಣೆಯಾಗುವ ಜೊತೆಗೇ ಅಂಗಾಂಗಳ ಕ್ಷಮತೆಯೂ ಹೆಚ್ಚುತ್ತದೆ. ತನ್ಮೂಲಕ ಮೆದುಳಿನ ಕ್ಷಮತೆ ಉಡುಗುಗುವುದು, ಯಕೃತ್ ಮತ್ತು ಮೂತ್ರಪಿಂಡಗಳ ವೈಫಲ್ಯ, ರಸದೂತಗಳ ಮಟ್ಟದ ಅಸಮತೋಲನ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಈ ಪೇಯಗಳಲ್ಲಿ ವಿರೇಚಕ ಟೀ ಸುಲಭವಾದ ಹಾಗೂ ಉತ್ತಮವಾದ ಆಯ್ಕೆಯಾಗಿದೆ. ಬನ್ನಿ, ಈ ಟೀ ಸೇವನೆಯ ಪ್ರಯೋಜನಗಳನ್ನು ನೋಡೋಣ...

ಕಲ್ಮಶಗಳನ್ನು ನಿವಾರಿಸುತ್ತದೆ

ಕಲ್ಮಶಗಳನ್ನು ನಿವಾರಿಸುತ್ತದೆ

ಅನಾರೋಗ್ಯಕರ ಆಹಾರ ಸೇವನೆಯ ಮೂಲಕ ದೇಹದ ಪ್ರತಿ ಜೀವಕೋಶ, ಅಂಗಾಂಶಗಳಲ್ಲಿಯೂ ಭಾರದ ಲೋಹಕಣಗಳು, ಕೀಟನಾಶಕಗಳು, ವಾತಾವರಣದಲ್ಲಿರುವ ಪ್ರದೂಶಕಗಳು ಹಾಗೂ ರಾಸಾಯನಿಕಗಳು ಸಂಗ್ರಹವಾಗಿರುತ್ತವೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ, ಜೀವರಾಸಾಯನಿಕ ಕ್ರಿಯೆ ಹಾಗೂ ರೋಗಗಳ ವಿರುದ್ದ ಹೋರಾಡುವ ಗುಣ ಕುಂಠಿತಗೊಳ್ಳುತ್ತದೆ. ವಿರೇಚಕ ಟೀ ಸೇವನೆಯ ಮೂಲಕ ಈ ಕಲ್ಮಶಗಳನ್ನು ನಿವಾರಿಸಬಹುದು ಹಾಗೂ ಈ ತೊಂದರೆಗಳ ವಿರುದ್ಧ ರಕ್ಷಣೆ ಪಡೆಯಬಹುದು. ವಿಶೇಷವಾಗಿ ಯಕೃತ್ ನಲ್ಲಿರುವ ಕಲ್ಮಶಗಳ ನಿವಾರಣೆಯ ಮೂಲಕ ಯಕೃತ್ ನ ಕ್ಷಮತೆ ಹೆಚ್ಚುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ

ಉರಿಯೂತವನ್ನು ಕಡಿಮೆ ಮಾಡುತ್ತದೆ

ವಿರೇಚಕ ಟೀ ಸೇವನೆಯ ಮೂಲಕ ಯಕೃತ್ ಸ್ವಚ್ಛಗೊಳ್ಳುವ ಮೂಲಕ ದೇಹದ ಒಳಗೆ ಬಾಧಿಸುವ ಉರಿಯೂತ ಮತ್ತು ಇದರ ಪರಿಣಾಮವಾಗಿ ಎದುರಾಗುವ ಬಾವು ಇಲ್ಲವಾಗುತ್ತದೆ. ಶುಂಠಿಯ ಟೀ ನಂತಹ ಕೆಲವು ವಿರೇಚಕ ಟೀ ಗಳ ಸೇವನೆಯಿಂದ ಉರಿಯೂತ ಕಡಿಮೆ ಮಾಡುವುದಲ್ಲದೇ ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ.

ದೇಹದ ಶಕ್ತಿ ಹೆಚ್ಚಿಸುತ್ತದೆ ಮತ್ತು ಮಾನಸಿಕ ಏಕಾಗ್ರತೆ ಹೆಚ್ಚಿಸುತ್ತದೆ

ದೇಹದ ಶಕ್ತಿ ಹೆಚ್ಚಿಸುತ್ತದೆ ಮತ್ತು ಮಾನಸಿಕ ಏಕಾಗ್ರತೆ ಹೆಚ್ಚಿಸುತ್ತದೆ

ವಿರೇಚಕ ಟೀ ಸೇವನೆಯ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ, ದೇಹದ ಶಕ್ತಿ ಹೆಚ್ಚುತ್ತದೆ ಹಾಗೂ ನೈಸರ್ಗಿಕವಾಗಿ ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ. ನಿಯಮಿತವಾದ ವಿರೇಚಕ ಟೀ ಸೇವನೆಯಿಂದ ದೇಹ ಸುಲಭವಾಗಿ ಸುಸ್ತಾಗದಂತೆ, ಭಾವಾವೇಶಗಳ ಏರಿಳಿತ ಹಾಗೂ ಮೆದುಳಿಗೆ ಮಂಕು ಕವಿಯುವಂತಾಗುವುದರಿಂದ ತಡೆಯುತ್ತದೆ. ಲಿಂಬೆಯ ಟೀ, ರೋಸ್ಮರಿ ಟೀ ಮತ್ತು ಪುದಿನಾ ಟೀ ಗಳ ಸೇವನೆಯಿಂದ ದೇಹಕ್ಕೆ ಪುನಃಶ್ಚೇತನ ದೊರಕುವುದು ಮಾತ್ರವಲ್ಲದೇ ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ವಿರೇಚಕ ಟೀ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಶಕ್ತಿಯ ಮಟ್ಟವೂ ಏರುತ್ತದೆ. ಇದು ದಿನವಿಡೀ ಚಟುವಟಿಕೆಯಿಂದಿರಿಸಲು ನೆರವಾಗುತ್ತದೆ. ವಿರೇಚಕ ಟೀ ಸೇವನೆಯ ಮೂಲಕ ಹಲವಾರು ಪೋಷಕಾಂಶಗಳೂ, ಕ್ಯಾಟೆಚಿನ್, HCA (ಹೈಡ್ರಾಕ್ಸಿಸಿಟ್ರಿಕ್ ಆಮ್ಲ) ಮೊದಲಾದ ಆಂಟಿ ಆಕ್ಸಿಡೆಂಟುಗಳೂ, ಫ್ಲೇವನಾಯ್ಡುಗಳು, ಖನಿಜಗಳು ಹಾಗೂ ವಿಟಮಿನ್ನುಗಳೂ ಲಭಿಸುತ್ತವೆ. HCA ಹಸಿವೆಯನ್ನು ತಗ್ಗಿಸುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಅನಾರೋಗ್ಯಕರ ಆಹಾರ ಸೇವಿಸುವ ಹೆಚ್ಚಿನ ವ್ಯಕ್ತಿಗಳು ಜೀರ್ಣಕ್ರಿಯೆಯ ತೊಂದರೆ, ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ, ವಾಕರಿಕೆ, ಮಲಬದ್ದತೆ ಮೊದಲಾದ ತೊಂದರೆಗಳನ್ನು ಇತರರಿಗಿಂತ ಹೆಚ್ಚೇ ಅನುಭವಿಸುತ್ತಾರೆ. ವಿರೇಚಕ ಟೀ ಸೇವನೆಯ ಮೂಲಕ ಜೀರ್ಣಾಂಗಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

ಆಹಾರದ ವ್ಯಸನ ನಿವಾರಿಸುತ್ತದೆ

ಆಹಾರದ ವ್ಯಸನ ನಿವಾರಿಸುತ್ತದೆ

ಅನಾರೋಗ್ಯಕರ ಆಹಾರಗಳು ಎಷ್ಟೇ ಕೆಟ್ಟದಾಗಿದ್ದರೂ ನೋಡಲಿಕ್ಕೆ ತುಂಬಾ ಸುಂದರವಾಗಿದ್ದು ಇವುಗಳ ಆಕರ್ಷಣೆಯನ್ನು ಹತ್ತಿಕ್ಕಲಾರದೇ ಸೇವಿಸುವ ಮೂಲಕ ಇವುಗಳ ವ್ಯಸನಕ್ಕೆ ಒಳಗಾಗುತ್ತಾರೆ. ಅಲ್ಲದೇ ಇಂದಿನ ದಿನಗಳಲ್ಲಿ ಈ ಆಹಾರಗಳ ಲಭ್ಯತೆ ಬೆರಳ ತುದಿಯನ್ನು ಸ್ಪರ್ಶಿಸುವಷ್ಟೇ ಸುಲಭವಾಗಿರುವ ಮೂಲಕವೂ ಈ ವ್ಯಸನ ಇನ್ನಷ್ಟು ಹೆಚ್ಚುತ್ತದೆ. ಆದರೆ ವಿರೇಚಕ ಟೀ ಕುಡಿಯುವ ಮೂಲಕ ಇದರಲ್ಲಿರುವ ಪೋಷಕಾಂಶಗಳು ಅನಾರೋಗ್ಯಕರ ಆಹಾರಗಳ ವ್ಯಸನವನ್ನು ನಿವಾರಿಸುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆ ಮೂಡಿಸುವ ಮೂಲಕ ಈ ಆಹಾರಗಳ ಆಕರ್ಷಣೆಗೆ ಒಳಗಾಗದಂತೆ ತಡೆಯುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ವಿರೇಚಕ ಟೀ ಸೇವನೆಯ ಮೂಲಕ ದೇಹದ ಕಲ್ಮಶ ನಿವಾರಣೆಯಾಗುತ್ತದೆ. ಈ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಹಲವಾರು ರೋಗಗಳ ವಿರುದ್ದ ರಕ್ಷಣೆ ನೀಡುತ್ತದೆ.

ಯಕೃತ್ ನ ಕ್ಷಮತೆ ಹೆಚ್ಚಿಸುತ್ತದೆ

ಯಕೃತ್ ನ ಕ್ಷಮತೆ ಹೆಚ್ಚಿಸುತ್ತದೆ

ಯಕೃತ್ ನ ಕ್ಷಮತೆ ಹೆಚ್ಚಲು ಇದರಲ್ಲಿ ಯಾವುದೇ ಕಲ್ಮಶವಿರಬಾರದು. ವಿರೇಚಕ ಟೀ ಕುಡಿಯುವ ಮೂಲಕ ನೈಸರ್ಗಿಕವಾಗಿ ಯಕೃತ್ ಸ್ವಚ್ಛಗೊಳ್ಳುತ್ತದೆ ಹಾಗೂ ಕಲ್ಮಶರಹಿತವಾಗಿರುತ್ತದೆ. ಈ ಮೂಲಕ ಯಕೃತ್ ತನ್ನ ಪೂರ್ಣ ಕ್ಷಮತೆಯನ್ನು ಮತ್ತೊಮ್ಮೆ ಪಡೆಯುತ್ತದೆ. ಇದು ಯಕೃತ್ ನ ಜೀವಕೋಶಗಳ ಸಂರಕ್ಷಣೆ ಹಾಗೂ ಆರೋಗ್ಯಕರ ಕಾರ್ಯನಿರ್ವಹಣೆ ಸಾಧ್ಯವಾಗುತ್ತದೆ.

ದೇಹವನ್ನು ಪುನಃಶ್ಚೇತನಗೊಳಿಸುತ್ತದೆ

ದೇಹವನ್ನು ಪುನಃಶ್ಚೇತನಗೊಳಿಸುತ್ತದೆ

ವಿರೇಚಕ ಟೀ ಸೇವನೆಯಿಂದ ದೇಹಕ್ಕೆ ನವಚೈತನ್ಯ ದೊರಕುತ್ತದೆ ಹಾಗೂ ಹೆಚ್ಚಿನ ಶಕ್ತಿ ಹೊಂದಿರುವ ಭಾವನೆ ಮೂಡುತ್ತದೆ. ಇದರ ಪ್ರಬಲ ಸುಗಂಧ ಹೆಚ್ಚಿನ ತಾಜಾತನ ಪಡೆಯಲು ನೆರವಾಗುತ್ತದೆ. ಊಲಾಂಗ್ ಟೀ, ಮಾಚಾ ಟೀ ಹಾಗೂ ಹಸಿರು ಟೀ ಗಳು ಬೆಳಗ್ಗಿನ ಹೊತ್ತಿನ ಸೇವನೆಗೆ ಅತ್ಯುತ್ತಮ ಆಯ್ಕೆಗಳಾಗಿದ್ದು ದಿನವಿಡೀ ಚೈತನ್ಯ ತುಂಬಿರಲು ನೆರವಾಗುತ್ತವೆ.

ತ್ವಚೆಯೂ ಉತ್ತಮಗೊಳ್ಳುತ್ತದೆ

ತ್ವಚೆಯೂ ಉತ್ತಮಗೊಳ್ಳುತ್ತದೆ

ದೇಹದಲ್ಲಿ ಕಲ್ಮಶಗಳು ಹೆಚ್ಚಿದ್ದಷ್ಟೂ ಇದರ ಪರಿಣಾಮ ತ್ವಚೆ, ಉಗುರು ಮತ್ತು ಕೂದಲಿನಲ್ಲಿ ಸ್ಪಷ್ಟವಾಗಿ ಗಮನಿಸಬಹುದು. ಇದೇ ಕಾರಣಕ್ಕೆ ಧೂಮಪಾನಿಗಳ ಉಗುರುಗಳು ಮತ್ತು ತುಟಿಗಳು ಕಪ್ಪಗಾಗಿರುತ್ತವೆ. ಅಲ್ಲದೇ ದೇಹದಲ್ಲಿರುವ ಕಲ್ಮಶಗಳು ತ್ವಚೆಯನ್ನು ಒಣಗಿಸಿ ಕಳಾರಹಿತವಾಗಿಸುತ್ತದೆ. ನಿತ್ಯವೂ ಒಂದು ಲೋಟ ವಿರೇಚಕ ಟೀ ಕುಡಿಯುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು, ಹಾನಿಕಾರಕ ರಾಸಾಯನಿಕಗಳನ್ನು ನಿವಾರಿಸಿ ತ್ವಚೆಯ ಅಡಿಯಿಂದ ಪೋಷಣೆ ಒದಗಿಸಲು ನೆರವಾಗುತ್ತದೆ. ತನ್ಮೂಲಕ ತ್ವಚೆಯ ಆರೊಗ್ಯ ಉತ್ತಮಗೊಳ್ಳುತ್ತದೆ ಹಾಗೂ ನೈಸರ್ಗಿಕ ಕಾಂತಿ ಹೆಚ್ಚುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Surprising Health Benefits Of Detox Tea

A lot of detoxification methods have started in the health industry - from detox drinks, detox smoothies to detox tea. Detoxification plays an integral role in your body for eliminating the toxins. The healthy foods and drinks are required to detoxify every organ of the body. If your body is not detoxified, it may result in brain dysfunction, liver and kidney problems, hormonal imbalances and an increased risk of cancer. Though there are a lot of detox drinks that can be made at home, one such detox beverage is detox tea.