Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಮಲಬದ್ಧತೆ ಸಮಸ್ಯೆ: ನಿಮಗೆ ತಿಳಿಯದೇ ಇರುವ ಕೆಲವು ಅಚ್ಚರಿಯ ಕಾರಣಗಳು
ಮಲವಿಸರ್ಜನೆಗೆ ಬಂದಂತೆ ಆಗುವುದು, ಶೌಚಾಲಯಕ್ಕೆ ಹೋಗಿ ಕೂತರೆ ಅಲ್ಲಿ ಗಂಟೆಗಟ್ಟಲೆ ಹಾಗೆ ಕುಳಿತುಕೊಳ್ಳಬೇಕಾಗುತ್ತದೆ. ತುಂಬಾ ಶ್ರಮ ವಹಿಸಿದರೂ ಯಾವುದೇ ಪ್ರಯೋಜನವಾಗದೆ ಇರುವಂತಹ ಪರಿಸ್ಥಿತಿ. ಹೀಗಿದ್ದರೆ ಅದನ್ನು ಮಲಬದ್ಧತೆ ಎಂದು ಕರೆಯಲಾಗುವುದು. ಇಂದಿನ ವೇಗದ ಜೀವನದಲ್ಲಿ ಮಲಬದ್ಧತೆ ಎನ್ನುವುದು ಹೆಚ್ಚಿನವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಮಲಬದ್ಧತೆಯೆಂದರೆ ಕರುಳಿನಲ್ಲಿ ಮಲವು ಗಟ್ಟಿಯಾಗಿ ಹೊರಗೆ ಬರಲು ಸಮಸ್ಯೆಯಗುವುದು. ಮಲಬದ್ಧತೆ ಇರುವವರಿಗೆ ಮಾತ್ರ ಅದರ ಕಷ್ಟ ತಿಳಿದಿರುವುದು.
ದೀರ್ಘಕಾಲದ ತನಕ ಮಲಬದ್ಧತೆ ಸಮಸ್ಯೆಯಿದ್ದರೆ ಆಗ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಹೊಟ್ಟೆನೋವು, ಹಸಿವು ವ್ಯತ್ಯಯ, ಪೈಲ್ಸ್ ಇತ್ಯಾದಿ ಕಾಣಿಸಿಕೊಳ್ಳಬಹುದು. ಮಲಬದ್ಧತೆ ಕಾಣಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳು ಇರಬಹುದು. ಆದರೆ ಪ್ರಮುಖ ಕಾರಣವೆಂದರೆ ಆಹಾರಕ್ರಮ ಮತ್ತು ವ್ಯಾಯಾಮದ ಹವ್ಯಾಸ. ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಮಲಬದ್ಧತೆ ಕಾಣಿಸಿಕೊಳ್ಳುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ಕಾರಣಗಳಿಂದಾಗಿ ಮಲಬದ್ಧತೆ ಬರಬಹುದು. ಇದು ಯಾವುದು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ....
ದೀರ್ಘಕಾಲ ತನಕ ಕುಳಿತಿರುವುದು
ದೀರ್ಘಕಾಲದ ತನಕ ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸ ಮಾಡುವಂತಹ ಚಾಲಕರು, ಟೈಲರ್ ಗಳು, ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರು ಇತ್ಯಾದಿ ವೃತ್ತಿಯಲ್ಲಿರುವವರಿಗೆ ಮಲಬದ್ಧತೆ ಕಾಡುವುದು ಹೆಚ್ಚು.
ದೀರ್ಘಕಾಲದ ತನಕ ಕುಳಿತೇ ಇರುವಂತಹ ಜನರ ದೇಹದ ಚಯಾಪಚಯ ಕ್ರಿಯೆಯು ನಿಧಾನವಾಗುವುದು. ಇದರಿಂದ ಕರುಳಿನ ಚಲನೆಯು ನಿಧಾನವಾಗಿ ಮಲಬದ್ಧತೆ ಉಂಟಾಗುವುದು.
Most Read: ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ 'ಅಕ್ಕಿಹಿಟ್ಟಿ'ನ ಚಿಕಿತ್ಸೆ- ಶೀಘ್ರ ಪರಿಹಾರ!
ಅತಿಯಾಗಿ ಹಾಲಿನ ಉತ್ಪನ್ನಗಳ ಸೇವನೆ
ಹಾಲಿನ ಉತ್ಪನ್ನಗಳಾಗಿರುವಂತಹ ಪನೀರ್, ಚೀಸ್, ಹಾಲು ಇತ್ಯಾಧಿಗಳನ್ನು ಅತಿಯಾಗಿ ಸೇವನೆ ಮಾಡಿದರೆ ಇದು ಮಲಬದ್ಧತೆಗೆ ಕಾರಣವಾಗುವುದು. ಈ ಉತ್ಪನ್ನಗಳು ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಮತ್ತು ಜೀರ್ಣಕ್ರಿಯೆ ವೇಳೆ ಹುದುಗುವಿಕೆ ಸಮಯದಲ್ಲಿ ಕರುಳಿನಲ್ಲಿ ಮಲವನ್ನು ಗಟ್ಟಿಯಾಗಿಸುವುದು.
ಖಿನ್ನತೆ
ಒತ್ತಡವು ಮಲಬದ್ಧತೆಗೆ ಕಾರಣವಾಗುತ್ತಿರುವಂತೆ ಖಿನ್ನತೆ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳಿವೆ. ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿದ್ದರೆ ಮೆದುಳಿನಲ್ಲಿ ಸೆರೊಟೊನಿನ್ ಮಟ್ಟವು ತಗ್ಗುವುದು. ಇದರಿಂದ ಮೆದುಳು ಜೀರ್ಣಕ್ರಿಯೆ ಮತ್ತು ಕಲ್ಮಶ ಹೊರಹಾಕಲು ಸಂಕೇತ ಕಳುಹಿಸಲು ವಿಫಲವಾಗುವುದು. ಇದರಿಂದ ಮಲಬದ್ಧತೆ ಉಂಟಾಗುವುದು.
Most Read:ಮೂಗಿನಿಂದ ರಕ್ತ ಬರುತ್ತಿದ್ದರೆ- ಇದೆಲ್ಲಾ ಇಂತಹ ಕಾಯಿಲೆಗಳ ಲಕ್ಷಣವಿರಬಹುದು!
ಕಾರ್ಬ್ ಕಡಿಮೆ ಇರುವ ಆಹಾರ
ಕಾರ್ಬ್ರೋಹೈಡ್ರೇಟ್ಸ್ ಕಡಿಮೆ ಇರುವಂತಹ ಆಹಾರ ಕ್ರಮವಾಗಿರುವ ಕೆಟೊವನ್ನು ಪಾಲಿಸಿಕೊಂಡು ಹೋಗುವ ಜನರಲ್ಲಿ ಮಲಬದ್ಧತೆ ಕಾಣಿಸುವುದು. ಯಾಕೆಂದರೆ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಕ್ಕಿದರೆ ಮಾತ್ರ ಅದು ಸರಿಯಾಗಿ ಕಾರ್ಯನಿರ್ವಹಿಸುವುದು. ಕಾರ್ಬ್ ಕಡಿಮೆ ಇರುವಂತಹ ಆಹಾರ ಸೇವನೆ ಮಾಡಿದರೆ ಆಗ ಕರುಳು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುವುದು. ಇದರಿಂದ ಮಲವು ಒಣಗುವುದು ಮತ್ತು ಗಟ್ಟಿಯಾಗಿ, ಮಲಬದ್ಧತೆ ಕಾಡುವುದು.
ಅತಿಯಾಗಿ ವಿರೇಚಕ ಬಳಕೆ
ವಿರೇಚಕವು ಮಲವನ್ನು ಮೆತ್ತಗಾಗಿಸಿ, ಸುಲಭವಾಗಿ ಹೊರಹಾಕಲು ಇರುವಂತಹ ಔಷಧಿ. ವಿರೇಚಕವನ್ನು ವ್ಯಕ್ತಿಯೊಬ್ಬ ಅತಿಯಾಗಿ ಸೇವನೆ ಮಾಡಿದರೆ ಇದರಿಂದ ಅವಲಂಬನೆ ಉಂಟಾಗಿ, ಕರುಳಿನ ಕ್ರಿಯೆಯು ತುಂಬಾ ನಿಧಾನವಾಗಬಹುದು. ಇದರಿಂದಾಗಿ ಮಲವು ಮತ್ತಷ್ಟು ಕಠಿಣವಾಗಬಹುದು. ಇದು ಮಲಬದ್ಧತೆಗೆ ಕಾರಣವಾಗಬಹುದು.
ಪ್ರತೀ ದಿನ ಚಾಕಲೇಟ್ ಸೇವನೆ
ಡಾರ್ಕ್ ಚಾಕಲೇಟ್ ಮತ್ತು ಇತರ ವಿಧದ ಚಾಕಲೇಟ್ ಸೇವನೆಯನ್ನು ಪ್ರತಿನಿತ್ಯವು ಮಾಡಿದರೆ ಆಗ ಮಲಬದ್ಧತೆ ಸಹಿತ ಹಲವಾರು ರೀತಿಯ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಚಾಕಲೇಟಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯಿದೆ. ಇದು ಮಲವನ್ನು ಗಟ್ಟಿಗೊಳಿಸುವುದು. ಇದರಿಂದ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಕಾಡಬಹುದು.
Most Read: ಸಂಬಂಧಗಳ ವಿಷಯದಲ್ಲಿ 'ಕರ್ಕ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...
ಕೆಲವು ಔಷಧಿಗಳು
ಖಿನ್ನತೆ ವಿರೋಧಿ, ಆ್ಯಂಟಿಬಯೋಟಿಕ್, ರಕ್ತದೊತ್ತಡ ಮಾತ್ರೆಗಳು, ಅತಿಯಾದ ವಿಟಮಿನ್ ಮಾತ್ರೆಗಳು ಇತ್ಯಾದಿಗಳನ್ನು ಸೇವನೆ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಮಲಬದ್ಧತೆ ಸಮಸ್ಯೆ ಬರುವುದು. ಇವುಗಳು ಕರುಳನ್ನು ಒಣಗಿಸಿ, ಮಲವು ಗಟ್ಟಿಯಾಗುವಂತೆ ಮಾಡುವುದು. ಇದರಿಂದ ಮಲಬದ್ಧತೆ ಬರುವುದು. ಇಂತಹ ಸಂದರ್ಭದಲ್ಲಿ ವೈದ್ಯರೊಂದಿಗೆ ಸಮಾಲೋಚಿಸಿ, ಮಾತ್ರೆ ಸೇವನೆ ಕಡಿಮೆ ಮಾಡಿ.
ಹಾರ್ಮೋನು ಕಾಯಿಲೆ
ಹಾರ್ಮೋನು ಕಾಯಿಲೆಯಾಗಿರುವಂತಹ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್(ಪಿಸಿಓಎಸ್), ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್ ಇತ್ಯಾದಿಗಳು ಕೂದ ಮಲಬದ್ಧತೆಗೆ ಕಾರಣವಾಗಬಹುದು. ಕರುಳಿನ ಕ್ರಿಯೆಗಳು ಸರಾಗವಾಗಿ ಆಗಲು ಕೆಲವೊಂದು ರೀತಿಯ ಹಾರ್ಮೋನುಗಳ ಅಗತ್ಯವಿರುವುದು ಮತ್ತು ಹಾರ್ಮೋನು ಕಾಯಿಲೆಗಳು ದೇಹದಲ್ಲಿನ ಇತರ ಹಾರ್ಮೋನುಗಳ ಚಟುವಟಿಕೆ ಮೇಲೆ ಪರಿಣಾಮ ಬೀರಬಹುದು.
Most Read: ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!
ಗರ್ಭನಿರೋಧಕ ಮಾತ್ರೆಗಳು
ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವಂತಹ ಹೆಚ್ಚಿನ ಮಹಿಳೆಯರಲ್ಲಿ ಮಲಬದ್ಧತೆಯು ಅಡ್ಡಪರಿಣಾಮವಾಗಿ ಕಾಡುವುದು. ಯಾಕೆಂದರೆ ಗರ್ಭನಿರೋಧಕ ಮಾತ್ರೆಗಳು ದೇಹದಲ್ಲಿ ಹಾರ್ಮೋನು ಅಸಮತೋಲನ ಉಂಟು ಮಾಡಿ, ಕರುಳಿನಲ್ಲಿ ಮಲವು ಗಟ್ಟಿಯಾಗುವಂತೆ ಮಾಡುವುದು, ಇದರಿಂದ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಕಾಣಿಸಬಹುದು.
ಅತಿ ವ್ಯಾಯಾಮ
ವ್ಯಾಯಾಮದ ಕೊರತೆಯು ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ನೀವು ಈಗಾಗಲೇ ಓದಿದ್ದೀರಿ. ಅದಾಗ್ಯೂ, ಅತಿಯಾಗಿ ವ್ಯಾಯಾಮ ಮಾಡಿದರೂ ಅದು ಮಲಬದ್ಧತೆಗೆ ಕಾರಣವಾಗುವುದು ಎಂದು ಅಧ್ಯಯನಗಳು ಹೇಳಿವೆ. ವ್ಯಾಯಾಮ ಅತಿಯಾದರೆ ದೇಹದಲ್ಲಿ ವಿದ್ಯುದ್ವಿಚ್ಛೇದಗಳು ಮತ್ತು ನೀರು ನಷ್ಟವಾಗುವುದು. ನೀವು ನೀರು ಕುಡಿಯುತ್ತಲಿದ್ದರೂ ಸಹಿತ. ಇದರಿಂದ ಅತಿಯಾದ ವ್ಯಾಯಾಮದಿಂದ ಕರುಳು ಒಣಗುವುದು ಮತ್ತು ಮಲಬದ್ಧತೆ ಕಾಡುವುದು.