For Quick Alerts
ALLOW NOTIFICATIONS  
For Daily Alerts

ಲೈಂಗಿಕ ಕ್ರಿಯೆಯ ವೇಳೆ, ನೀವು ಇಂತಹ ತಪ್ಪುಗಳನ್ನು ಮಾಡಲೇಬೇಡಿ!

|

ಸೆಕ್ಸ್ ಎನ್ನುವುದು ಸುಖದ ಪರಾಕಾಷ್ಠೆ ನೀಡುವಂತಹದ್ದು. ವಿವಾಹಿತರು ಪ್ರತಿನಿತ್ಯ ಅಥವಾ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಸೆಕ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಎಲ್ಲಾ ವಿಚಾರಗಳು ತಿಳಿದಿರುವುದಿಲ್ಲ. ಇದು ಅನುಭವದಿಂದ ಬರುವುದು. ನೀವು ಅನುಭವಿಯಾಗಿದ್ದರೂ ಅಥವಾ ಮೊದಲ ಸಲ ಸೆಕ್ಸ್ ನಡೆಸುತ್ತಿದ್ದರೂ ಕೆಲವೊಂದು ವಿಚಾರಗಳನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕು.

ಇದರಿಂದ ನಿಮ್ಮ ಲೈಂಗಿಕ ಆರೋಗ್ಯವನ್ನು ಮಾತ್ರವಲ್ಲದೆ, ಸಂಗಾತಿ ಹಾಗೂ ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಬಹುದು. ಇನ್ನು ಕಡೆಗಣಿಸಿದರೆ ಅದು ಮುಂದೊಂದು ದಿನ ನಿಮಗೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಕಾಡಬಹುದು. ಈ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಲೇಖನದಲ್ಲಿ ತಿಳಿಸಿಕೊಡಲಿದೆ. ಇದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡು ಮುಂದಿನ ಸಲ ಸೆಕ್ಸ್ ನಲ್ಲಿ ತೊಡಗಿಕೊಳ್ಳುವ ವೇಳೆ ಅದನ್ನು ಪಾಲಿಸಿಕೊಂಡು ಹೋಗಿ...

ಎಸ್ ಟಿಡಿ ಬರುವ ಬಗ್ಗೆ ಚಿಂತಿಸದೆ ಇರುವುದು

ಎಸ್ ಟಿಡಿ ಬರುವ ಬಗ್ಗೆ ಚಿಂತಿಸದೆ ಇರುವುದು

ನೀವು ಮತ್ತು ಸಂಗಾತಿಯು ಏಕಸಂಗಾತಿಯಾಗಿದ್ದರೂ ಕೆಲವೊಂದು ವಿಚಾರಗಳನ್ನು ನೀವು ಕಡೆಗಣಿಸುವಂತಿಲ್ಲ. ಯಾಕೆಂದರೆ ಲೈಂಗಿಕ ರೋಗದ ಸೋಂಕು ಹರಡುವಂತಹ ಅಪಾಯವನ್ನು ತಳ್ಳಿ ಹಾಕಲಾಗದು. ಆಗಾಗ ಪರೀಕ್ಷೆ ಮಾಡಿಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಹೆಚ್ಚಿನ ರೋಗಗಳಿಗೆ ಈಗ ಚಿಕಿತ್ಸೆಯು ಲಭ್ಯವಿದೆ. ಇದರಿಂದ ಕಡೆಗಣನೆ ಸರಿಯಲ್ಲ.

Most Read: ಮಹಿಳೆಯರಿಗೆ ಸೈಲೆಂಟಾಗಿ ಕಾಡುವ ಲೈಂಗಿಕ ರೋಗ! ಇಲ್ಲಿದೆ ಎಂಟು ಲಕ್ಷಣಗಳು

ಸುರಕ್ಷತೆ ಬಳಸದೆ ಇರುವುದು

ಸುರಕ್ಷತೆ ಬಳಸದೆ ಇರುವುದು

ನಿಮ್ಮ ಪತಿಯು ಕಾಂಡೋಮ್ ಬಳಸುವುದರಿಂದ ಹಿಂಜರಿಯಬಹುದು. ಆದರೆ ಸುರಕ್ಷತೆ ವಿಚಾರ ಬಂದಾಗ ಇದರಲ್ಲಿ ಸಂಗಾತಿಗಳಿಬ್ಬರ ಮಾತು ಸಮಾನವಾಗಿರಬೇಕು. ಗರ್ಭನಿರೋಧಕಗಳನ್ನು ಬಳಸುವ ಮೊದಲು ನೀವು ಅದಕ್ಕೆ ಹೊಂದಿಕೊಂಡಿದ್ದೀರಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಸಂವಹನ ನಡೆಸುವುದು ಅತೀ ಅಗತ್ಯ.

Most Read: ಕಾಂಡೋಮ್ ಬಳಸಿ ಆಡುವ ಸ್ಪರ್ಧೆ!! ನಮ್ಮಲ್ಲಿ ಇಂತಹ ಹುಚ್ಚರೂ ಇದ್ದಾರೆ!!

ಆಹಾರ ಬಳಸುವುದನ್ನು ತಡೆಯದೆ ಇರುವುದು

ಆಹಾರ ಬಳಸುವುದನ್ನು ತಡೆಯದೆ ಇರುವುದು

ಕಿಚನ್ ಸೆಕ್ಸ್ ನಲ್ಲಿ ಇಂದಿನ ದಿನಗಳಲ್ಲಿ ಹೆಚ್ಚಿನ ಆಸಕ್ತಿಯು ಬೆಳೆಯುತ್ತಲಿದೆ. ಇದಕ್ಕಾಗಿ ಕೆಲವು ಖಾದ್ಯಗಳನ್ನು ಲೈಂಗಿಕ ಸುಖ ಹೆಚ್ಚಿಸಿಕೊಳ್ಳಲು ಬಯಸುವರು. ಆದರೆ ಇಲ್ಲಿ ಎರಡು ತಪ್ಪುಗಳಿವೆ. ಮೊದಲನೇಯದಾಗಿ ಇಲ್ಲಿ ಆಹಾರವು ವ್ಯರ್ಥವಾಗುವುದು ಮತ್ತು ಎರಡನೇಯವಾಗಿ ಆಹಾರದ ಯಾವುದಾದರೂ ತುಂಡು ನಿಮ್ಮ ಜನನೇಂದ್ರೀಯದಲ್ಲಿ ಹೋಗಿ ಸಿಲುಕಿಕೊಂಡರೆ ಆಗ ನೀವು ತುರ್ತು ಚಿಕಿತ್ಸೆ ಒಳಪಡಬೇಕಾಗುತ್ತದೆ. ಇದರಿಂದ ಈ ಅಪಾಯದ ಬಗ್ಗೆ ಎಚ್ಚರವಾಗಿರಿ.

ಕಾಂಡೋಮ್ ಜತೆಗೆ ತೈಲದ ಲ್ಯೂಬ್ರಿಕೆಂಟ್ಸ್ ಬಳಸಿ

ಕಾಂಡೋಮ್ ಜತೆಗೆ ತೈಲದ ಲ್ಯೂಬ್ರಿಕೆಂಟ್ಸ್ ಬಳಸಿ

ಕಾಂಡೋಮ್ ನಲ್ಲಿ ಅದಾಗಲೇ ಲ್ಯೂಬ್ರಿಕೆಂಟ್ಸ್ ಇರುವುದು. ಇದರೊಂದಿಗೆ ನೀವು ತೈಲ ಲ್ಯೂಬ್ರಿಕೆಂಟ್ಸ್ ಬಳಸಿಕೊಂಡರೆ ಆಗ ಅದು ಕಾಂಡೋಮ್ ನ ಲ್ಯೂಬ್ರಿಕೆಂಟ್ ನ ಪರಿಣಾಮ ಕಡಿಮೆ ಮಾಡುವುದು. ಕಾಂಡೋಮ್ ಜತೆಗೆ ಯಾವ ಲ್ಯೂಬ್ರಿಕೆಂಟ್ಸ್ ಬಳಸುವುದು ಎಂದು ತಿಳಿಯಿರಿ. ನೀರಿನ ಅಥವಾ ಸಿಲಿಕಾನ್ ಮೂಲದ ಲ್ಯೂಬ್ರಿಕೆಂಟ್ಸ್ ಬಳಸಿ.

ಸೆಕ್ಸ್ ಗೆ ಮೊದಲು ಅತಿಯಾಗಿ ಮದ್ಯಪಾನ ಮಾಡಬೇಡಿ

ಸೆಕ್ಸ್ ಗೆ ಮೊದಲು ಅತಿಯಾಗಿ ಮದ್ಯಪಾನ ಮಾಡಬೇಡಿ

ನೀವಾಗಿಯೇ ಇದನ್ನು ಮಾಡುತ್ತಲಿದ್ದರೆ ಆಗ ಯಾವುದೇ ಅಡ್ಡಿಯಿಲ್ಲ. ಅದಾಗ್ಯೂ, ಬೇರೆ ವ್ಯಕ್ತಿಯು ಸೆಕ್ಸ್ ಗೆ ಮೊದಲು ನಿಮ್ಮನ್ನು ಕುಡಿಯುವಂತೆ ಒತ್ತಾಯಿಸುತ್ತಿದ್ದರೆ ಆಗ ಆತ/ಆಕೆಗೆ ಇಲ್ಲವೆನ್ನಲು ಹಿಂಜರಿಯಬೇಡಿ. ನೀವು ಅತಿಯಾಗಿ ಕುಡಿದಾಗ ಮಿತಿಯಿಂದ ಹೊರಬರುವಿರಿ ಇದರಿಂದ ಸೆಕ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಪ್ರಯೋಗ ಮಾಡಲು ಬಯಸುವಿರಿ. ಹದಿಹರೆಯದ ಹೆಚ್ಚಿನವರು ತಾವು ಕುಡಿದಾಗಲೇ ಕನ್ಯತ್ವ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದ ಸೆಕ್ಸ್ ಗೆ ಮೊದಲು ನೀವು ಕುಡಿಯದೆ ಇದ್ದರೆ ಆಗ ಮುಂದೆ ಪಶ್ಚಾತ್ತಾಪ ಪಡುವುದು ತಪ್ಪುವುದು.

Most Read: ಸೆಕ್ಸ್ ಬಳಿಕ ಒಳಉಡುಪು ಹಾಕಬೇಡಿ! ಇಲ್ಲಾಂದ್ರೆ ಸೋಂಕು ಮತ್ತು ತುರಿಕೆ ಕಾಡಬಹುದು

ಸಂಗಾತಿಯ ಸ್ವಚ್ಚತೆ ಬಗ್ಗೆ ಹೇಳದೆ ಇರುವುದು

ಸಂಗಾತಿಯ ಸ್ವಚ್ಚತೆ ಬಗ್ಗೆ ಹೇಳದೆ ಇರುವುದು

ಸಂಗಾತಿಯು ಬೆವರಿನ ವಾಸನೆ ಅಥವಾ ಬಾಯಿಯ ವಾಸನೆ ಬರುತ್ತಲಿದ್ದರೆ ಆಗ ನಾವು ಇದನ್ನು ಹೇಳಲು ಹಿಂಜರಿಯುತ್ತೇವೆ. ಆದರೆ ಇದು ನಿಮ್ಮ ಸಂಪೂರ್ಣ ಸೆಕ್ಸ್ ಅನುಭವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಾರಣದಿಂದಾಗಿ ನೀವು ಇದನ್ನು ಹೇಳಲೇಬೇಕು. ಇದು ವ್ಯಕ್ತಿಯ ಸ್ವಚ್ಛತೆ ಆಯ್ಕೆಯನ್ನು ಪ್ರತಿಬಿಂಬಿಸುವುದು. ಸ್ವಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಆಗ ಸೋಂಕು ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

ಸಂವಹನ ನಡೆಸದೆ ಇರುವುದು

ಸಂವಹನ ನಡೆಸದೆ ಇರುವುದು

ನಿಮ್ಮ ಇಷ್ಟ ಹಾಗೂ ಇಷ್ಟವಿಲ್ಲದೆ ಇರುವ ಬಗ್ಗೆ ಸಂಗಾತಿಗೆ ಹೇಳದೆ ಇದ್ದರೆ ಆಗ ನಿಮ್ಮ ಸೆಕ್ಸ್ ಜೀವನವು ಉತ್ತಮವಾಗಿರಲ್ಲ. ನಿಮಗೆ ಏನು ಇಷ್ಟ? ಯಾವ ರೀತಿ ಲೈಂಗಿಕ ಕ್ರಿಯೆಯು ಇಷ್ಟವಾಗುವುದು ಮತ್ತು ನಿಮಗೆ ಯಾವುದು ಬೇಡ ಎಂದು ಸಂಗಾತಿಗೆ ಹೇಳಿಬಿಡಿ.

ಕ್ಲೈಮ್ಯಾಕ್ಸ್!

ಕ್ಲೈಮ್ಯಾಕ್ಸ್!

ಇದು ವಿಶೇಷವಾಗಿ ಪುರುಷರಿಗೆ. ನಿಮ್ಮ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡು ಯಾವ ಸಮಯದಲ್ಲಿ ಸ್ಖಲನ ಮಾಡಬೇಕು ಎಂದು ತಿಳಿದಿರಬೇಕು. ಬೇಗನೆ ಸ್ಖಲನವಾದರೆ ಸಂಗಾತಿಗೆ ಅತೃಪ್ತಿಯಾಗಬಹುದು. ತುಂಬಾ ವಿಳಂಬವಾದರೆ ಆಗಲೂ ಅವರಿಗೆ ಸಮಸ್ಯೆಯಾಗಬಹುದು. ಇದನ್ನು ಕಡೆಗಣಿಸಲು ಇದಕ್ಕೆ ಮೊದಲು ಆಟದಲ್ಲಿ ತೊಡಗಿಕೊಳ್ಳಿ. ನಿಮಗೆ ತುಂಬಾ ದೀರ್ಘ ಸಮಯ ಬೇಕಾಗುತ್ತಿದ್ದರೆ ಆಗ ನೀವು ಸಂಗಾತಿಯು ಪರಾಕಾಷ್ಠೆ ತಲುಪುವಂತೆ ಮಾಡಿ ಮತ್ತು ಬಳಿಕ ನಿಮಗೆ ಅವರು ನೆರವಾಗುವರು.

ಕಿಸ್ಸಿಂಗ್ ಮಾಡದೇ ಇರುವುದು!

ಕಿಸ್ಸಿಂಗ್ ಮಾಡದೇ ಇರುವುದು!

ಲೈಂಗಿಕ ಕ್ರಿಯೆ ನಡೆಸುವಾಗ ಹೆಚ್ಚಿನ ಜನರು(ಮಹಿಳೆಯರ ಸಹಿತ) ತಮ್ಮ ಸಂಗಾತಿಗೆ ಚುಂಬಿಸುವುದೇ ಇಲ್ಲ. ಯಾಕೆ ಹೀಗೆ ಆಗುವುದು? ಭಂಗಿಯು ನಿಮಗೆ ಚುಂಬಿಸಲು ಕಿರಿಕಿರಿ ಉಂಟು ಮಾಡಬಹುದು ಅಥವಾ ಪರಾಕಾಷ್ಠೆ ತಲುಪಲು ಎದುರುನೋಡುತ್ತಲಿರುವ ಕಾರಣದಿಂದ ಚುಂಚಿಸಲು ಹಿಂಜರಿಯಬಹುದು. ಆದರೆ ನೀವು ಈ ಸಮಯದಲ್ಲಿ ಚುಂಬಿಸಲೇಬೇಕು. ಇದು ಅನುಭವ ಹೆಚ್ಚಿಸುವುದು.

English summary

such mistakes to Definitely Avoid During intercourse!

Sex is as much about pleasure as it is about caution. Whether you have a super active sex life or you are getting laid for the first time, there are things about sexual encounters that need to be kept in mind. Here we list seven such aspects which are better not ignored because if they are, they can land you in thick trouble.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more