For Quick Alerts
ALLOW NOTIFICATIONS  
For Daily Alerts

ಸ್ಲ್ಯಾಪ್ಡ್ ಚೀಕ್‌ ಕಾಯಿಲೆಯ ಲಕ್ಷಣಗಳು ಮತ್ತು ತಿಳಿದುಕೊಳ್ಳಬೇಕಾದ ಸಂಗತಿಗಳು

By Sushma Charhra
|

"ಸ್ಲ್ಯಾಪ್ಡ್ ಚೀಕ್ ಸಿಂಡ್ರೋಮ್"ನೀವು ಯಾವತ್ತಾದ್ರೂ ಈ ಕಾಯಿಲೆಯ ಬಗ್ಗೆ ಕೇಳಿದ್ದೀರಾ? ಇತ್ತೀಚೆಗೆ 25 ವರ್ಷದ ತಾಯಿಯೊಬ್ಬಳು ನ್ಯೂಕಾಸ್ಟಲ್ ಪ್ರದೇಶದಲ್ಲಿ ತನ್ನ ಎಳೆ ಮಗುವನ್ನು ಈ ಕಾಯಿಲೆಯಿಂದಾಗಿ ಕಳೆದುಕೊಂಡಿದ್ದಾಳೆ.ಈ ಕಾಯಿಲೆ ಮಕ್ಕಳಲ್ಲಿ ಸಾಮಾನ್ಯವಾಗಿದ್ದು, ಯಾವುದೇ ವಯಸ್ಸಿನವರಿಗೂ ಈ ಸೋಂಕು ತಗುಲಬಹುದು. ಈ ಅನಾರೋಗ್ಯದ ಗುಣಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ಏನಿದು ಸ್ಲ್ಯಾಪ್ಡ್ ಚೀಕ್ ಸಿಂಡ್ರೋಮ್?
ಸ್ಪ್ಯಾಪ್ಡ್ ಚೀಕ್ ಅಥವಾ ಫಿಫ್ತ್ ಡಿಸೀಜ್ ಅಥವಾ ಪರ್ವೋ ವೈರಸ್ ಬಿ19 ಅನ್ನುವುದೊಂದು ವೈರಲ್ ಸೋಂಕಾಗಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತೆ. ದೊಡ್ಡವರಲ್ಲೂ ಕಾಣಿಸಿಕೊಳ್ಳುವ ಸೋಂಕು ಇದ್ದಾಗಿದ್ದು,ದೊಡ್ಡ ದೊಡ್ಡ ಕೆಂಪು ಕೆಂಪು ರ್ಯಾಷಸ್ ಅಥವಾ ಕಲೆಗಳು ಕೆನ್ನೆ ಮೇಲಾಗುವುದು ಇದರ ಪ್ರಮುಖ ಗುಣಲಕ್ಷಣ. ಈ ಕಾಯಿಲೆ ಬರುವುದು ಪರ್ವೋವೈರಸ್ ಬಿ12 ಎಂಬ ವೈರಸ್ ನಿಂದಾಗಿ. ಹೆಚ್ಚಿನ ಮಂದಿಗೆ ಈ ಕಾಯಿಲೆಯ ಬಗ್ಗೆ ತಿಳಿಯುವುದೇ ಇಲ್ಲ. ಕೆಲವರಿಗೆ ಕೆನ್ನೆಯ ಮೇಲೆ ಕೆಂಪು ಕೆಂಪು ದೊಡ್ಡ ದೊಡ್ಡ ಕಲೆಗಳಾಗಿದ್ದರೂ ಇದೊಂದು ಕಾಯಿಲೆ ಎಂದು ಅಂದುಕೊಳ್ಳುವುದೇ ಇಲ್ಲ. ಮತ್ತು ಹೀಗೆ ಕಲೆಗಳಾಗುವವರೆಗೆ ಈ ಸೋಂಕು ತಗುಲಿದೆ ಎಂಬುದೂ ಕೂಡ ತಿಳಿಯುವುದಿಲ್ಲ. ಕೆಂಪು ಕಲೆಗಳಾಗುವುದನ್ನು ಹೊರತು ಪಡಿಸಿದರೆ ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಸೋಂಕು ತಗುಲಿದ್ದರೆ ಎರಡರಿಂದ ಮೂರು ವಾರಗಳಲ್ಲಿ ತನ್ನಷ್ಟಕ್ಕೆ ತಾನೇ ಇದು ಗುಣವಾಗುತ್ತೆ.

Slapped Cheek

ಆದರೆ ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೋ ಅಂತವರಿಗೆ ಇದೊಂದು ಭಯಾನಕ ಕಾಯಿಲೆಯಾಗಿ ಪರಿಣಮಿಸಬಹುದು. ಅಥವಾ ಯಾರಲ್ಲಿ ರಕ್ತದ ಇತರೆ ಕಾಯಿಲೆ ಇಲ್ಲವೆ ಸಮಸ್ಯೆಗಳಿರುತ್ತೋ ಅಂತವರಿಗೂ ಕೂಡ ಇದೊಂದು ಡೇಂಜರಸ್ ಕಾಯಿಲೆಯೇ ಸರಿ. ಅಷ್ಟೇ ಅಲ್ಲ ಬಸುರಿ ಹೆಂಗಸರಿಗೂ ಈ ಸೋಂಕು ತಗುಲಿದರೆ ಅಪಾಯವಾಗುವ ಸಾಧ್ಯತೆ ಇದೆ. ಇಂತಹ ಯಾವುದೇ ಸಂದರ್ಬದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ. ಈ ಸೋಂಕನ್ನು ರಕ್ತಪರೀಕ್ಷೆಯಿಂದ ಕೂಡಲೇ ಕಂಡುಹಿಡಿಯಬಹುದಾಗಿದ್ದು, ಚಿಕಿತ್ಸೆಯನ್ನೂ ನೀಡಬಹುದು.

ಗುಣಲಕ್ಷಣಗಳು
ಸೋಂಕು ತಗುಲಿದ 4 ರಿಂದ 14 ದಿನಗಳ ಒಳಗೆ ಗುಣಲಕ್ಷಣಗಳು ಗೋಚರಿಸುತ್ತೆ ಮತ್ತು ಸುಮಾರು 21 ದಿನಗಳವರೆಗೂ ಹಾಗೆಯೇ ಇರುತ್ತೆ. ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
•ದೇಹದ ಉಷ್ಣತೆ 38 ಡಿಗ್ರಿ ಸಿ (100.4 ಡಿಗ್ರೀ ಫ್ಯಾರನೀಟ್) ಇರಬಹುದು
•ಮೂಗಲ್ಲಿ ಸೋರಿಕೆ ಮತ್ತು ಹುಳಿಹುಳಿ ಅನ್ನಿಸುವ ಗಂಟಲು
•ತಲೆನೋವು
•ಗಂಟುಗಳಲ್ಲಿ ನೋವು ಮತ್ತು ಮಡಚಲು ಆಗದೇ ಇರುವುದು
•ಹೊಟ್ಟೆಯಲ್ಲಿ ಸಮಸ್ಯೆ
•ಕೆನ್ನೆ ಮತ್ತು ದೇಹದಲ್ಲಿ ರ್ಯಾಷಸ್
•ಸಾಮಾನ್ಯವಾಗಿ ಕಂಡುಬರುವ ಕೆಟ್ಟ ಫೀಲಿಂಗ್

ಕೆಲವು ಪರಿಸ್ಥಿತಿಯಲ್ಲಿ ಸಮಸ್ಯೆಯು ಗುರುತಿಸ್ಪಡದೇ ಇದ್ದರೆ, ರೋಗಿಗಳಲ್ಲಿ ಚರ್ಮದ ಕಾಂತಿ ಹಾಳಾಗಿರಬಹುದು, ಉಸಿರಾಟಕ್ಕೆ ತೊಂದರೆಯಾಗುತ್ತಿರಬಹುದು,ಅತಿಯಾದ ಬಳಲಿಕೆಯೂ ಕಾಣಿಸಿಕೊಂಡಿರಬಹುದು, ಇಂತಹ ಸಂದರ್ಬದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

*ಕೆನ್ನೆಯಲ್ಲಿ ಕಾಣಿಸುವ ಕೆಂಪು ಕಲೆಗಳ ಬಗ್ಗೆ
ಪ್ರಾಥಮಿಕ ಹಂತದಲ್ಲಿ ಈ ಸೋಂಕು ಬಹಳ ವಿಚಿತ್ರವಾಗಿರುತ್ತೆ ಮತ್ತು ಸಾಂಕ್ರಾಮಿಕವೂ ಹೌದು. ಮಕ್ಕಳಲ್ಲಿ ಪ್ರಮುಖವಾಗಿ ಅವರ ಎರಡೂ ಕೆನ್ನೆಗಳೂ ತೀರಾ ವಿಚಿತ್ರವಾಗಿ ಕೆಂಪಗಾಗುತ್ತವೆ. ಆದರೆ ದೊಡ್ಡವರಲ್ಲಿ ಹೀಗೆ ಕೆನ್ನೆ ಕೆಂಪಗಾಗದೆಯೂ ಇರಬಹುದು.ಒಮ್ಮೆ ಕೆಂಪು ಕಲೆಗಳು ಕಾಣಿಸಿಕೊಂಡರೆ ಅದು ಸಾಂಕ್ರಾಮಿಕವಲ್ಲ ಎಂದು ಹೇಳಲಾಗುತ್ತೆ. ಕೇವಲ ಕೆನ್ನೆಯಲ್ಲಿ ಮಾತ್ರ ಕೆಂಪು ಕಲೆಗಳು ಕಾಣಿಸಿಕೊಳ್ಳಬೇಕು ಎಂದೇನೂ ಇಲ್ಲ. ಕೆಲವೊಮ್ಮೆ ಹೊಟ್ಟೆ,ತೋಳುಗಳು, ಎದೆಯ ಭಾಗ ಅಥವಾ ದೇಹದ ಇನ್ಯಾವುದೇ ಭಾಗದಲ್ಲೂ ಕೂಡ ಇದು ಕಾಣಿಸಿಕೊಳ್ಳಬಹುದು. ಎರಡರಿಂದ ಮೂರು ವಾರದಲ್ಲಿ ಈ ಕಲೆಗಳು ಗುಣಮುಖವಾಗುತ್ತೆ.

ಇದು ಹೇಗೆ ಹರಡುತ್ತೆ?
ಪರ್ವೋವೈರಸ್ ಬಿ12 ನಿಂದ ಹರಡುವ ಈ ಸೋಂಕು, ಬೇರೆಯವರಿಗೆ ಸೋಂಕು ತಗುಲಿದ ವ್ಯಕ್ತಿಯ ಕೆಮ್ಮು ಮತ್ತು ಶೀತದಿಂದ ಸಾಂಕ್ರಾಮಿಕವಾಗಿ ಹರಡಬಹುದು. ಸೋಂಕು ತಗುಲಿದ ಪ್ರದೇಶವನ್ನು ಮುಟ್ಟಿ ನಂತರ ನೀವು ನಿಮ್ಮ ಚರ್ಮವನ್ನೋ ಇಲ್ಲ ಮೂಗು, ಬಾಯಿಯನ್ನು ಮುಟ್ಟಿಕೊಂಡರೆ ಸಾಕು ನಿಮಗೆ ಇದು ಹರಡಬಹುದು.
*ಚಿಕಿತ್ಸೆ
*ಮಕ್ಕಳಿಗೆ

ನೀವು ನಿಮ್ಮ ಮಕ್ಕಳಲ್ಲಿ ಇಂತಹ ಯಾವುದೇ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಿ. ಮಕ್ಕಳಲ್ಲಿ ಇದು ಕಡಿಮೆ ಪ್ರಮಾಣದಲ್ಲಿದ್ದು ಸಾಮಾನ್ಯವಾಗಿ ಯಾವುದೇ ನಿರ್ಧಿಷ್ಟ ಚಿಕಿತ್ಸೆ ನೀಡದೆ ಹಾಗೆಯೇ ಗುಣಮುಖವಾಗುತ್ತೆ. ಸಾಮಾನ್ಯವಾಗಿ ಜ್ವರ ಮತ್ತು ಗಂಟುಗಳ ನೋವಿಗೆ ಪ್ಯಾರಸಿಟಮೋಲ್ ನ್ನು ನೀಡಲಾಗುತ್ತೆ.

ಒಂದು ವೇಳೆ ಈ ರ್ಯಾಷಸ್ ಗಳು ತುರಿಕೆಯನ್ನುಂಟು ಮಾಡುತ್ತಿದ್ದರೆ, ಡಾಕ್ಟರ್ ಯಾವುದಾದರೂ ಲೋಷನ್ ನ್ನು ನೀಡಬಹುದು. ಆದರೆ ನೆನಪಿರಲಿ ನಿಮ್ಮ ಮಕ್ಕಳು ಇಂತಹ ಕಂಡೀಷನ್ ನಲ್ಲಿ ಪ್ರಾಥಮಿಕ ಹಂತದಲ್ಲಿದ್ದಾರಾ ಎಂಬುದು ಮುಖ್ಯವಾಗುತ್ತೆ. ವೈರಲ್ ಸೋಂಕೇ ಆಗಿದ್ದರೆ ಕೆಲವೇ ವಾರದಲ್ಲಿ ಇದು ಸಂಪೂರ್ಣ ಗುಣವಾಗುತ್ತೆ.

*ದೊಡ್ಡವರಿಗೆ
ದೊಡ್ಡವರು ಇಂತಹ ಸೋಂಕಿಗೆ ಒಳಪಟ್ಟಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅದರಲ್ಲೂ ಪ್ರಮುಖವಾಗಿ ನೀವು ಬಸುರಿ ಮಹಿಳೆಯಾಗಿದ್ದರೆ, ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಗರ್ಭಪಾತವಾಗುವ ಸಾಧ್ಯತೆಗಳಿರುತ್ತೆ. ಯಾಕಂದರೆ ಇಂತಹ ಸಂದರ್ಬದಲ್ಲಿ ರೋಗನಿರೋಧಕ ಶಕ್ತಿಯ ಅಗತ್ಯತೆ ಹೆಚ್ಚಿರುತ್ತೆ. ಯಾರಿಗೆ ರಕ್ತದ ಸಮಸ್ಯೆಗಳಿರುತ್ತೋ ಮತ್ತು ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೋ ಅಂತವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇರಬಹುದು. ನೀವು ವಿಪರೀತ ಸೋಂಕಿಗೆ ಒಳಪಟ್ಟಿದ್ದು, ಚರ್ಮವು ಸಂಪೂರ್ಣ ಕಲೆಯಾಗಿದ್ದರೆ ವಿಶೇಷ ಆದ್ಯತೆ ಮೇರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಒಂದು ವೇಳೆ ಇದು ಭಯಾನಕ ಅನೀಮಿಯಾಕ್ಕೆ ತಲುಪಿದ್ದರೆ ರಕ್ತದ ಪರಿಪೂರ್ಣ ಚಿಕಿತ್ಸೆ ನಿಮಗೆ ಬೇಕಾಗಬಹುದು.
ಸರಿಯಾದ ವಿರಾಮ ಮತ್ತು ನೀರಿನ ಅಂಶವಿರುವ ಆಹಾರ ಸೇವನೆಯಿಂದ ಡಿಹೈಡ್ರೇಷನ್ ನ್ನು ತಪ್ಪಿಸಿಕೊಳ್ಳಿ. ಯಾಕೆಂದರೆ ಸ್ಲ್ಯಾಪ್ಡ್ ಚೀಕ್ ಸಿಂಡ್ರೋಮ್ ಬರದಂತೆ ತಡೆಯಲು ಇದುವರೆಗೆ ಯಾವುದೇ ಲಸಿಕೆಯೂ ಲಭ್ಯವಿಲ್ಲ

*ತಡೆಗಟ್ಟುವುದು ಹೇಗೆ?
ಈ ವೈರಲ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಈ ಕೆಳಗಿನ ಕ್ರಮವನ್ನು ಅನುಸರಿಸಿ.
•ನಿಮ್ಮ ಕೈಗಳನ್ನು ಸೋಪು ಮತ್ತು ಹದವಾಗಿ ಬಿಸಿ ಇರುವ ನೀರಿನಲ್ಲಿ ತೊಳೆಯುತ್ತಿರಿ.
•ನೀವು ಕೆಮ್ಮುವಾಗ ಇಲ್ಲವೇ ಶೀತ ಬಂದಾಗ ಟಿಷ್ಯೂ ಬಳಸಿ ಮತ್ತು ಬಳಕೆ ಮಾಡಿದ ಟಿಷ್ಯೂವನ್ನು ಕೂಡಲೇ ಎಸೆದುಬಿಡಿ
•ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ರೋಗನಿರೋಧಕ ಶಕ್ತಿಯು ಅಧಿಕವಾಗಿದ್ದರೆ ನಿಮ್ಮ ದೇಹವನ್ನು ಅದು ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಹೋರಾಡಿ ರಕ್ಷಿಸುತ್ತೆ.
•ಸೋಂಕಿನ ಪ್ರಾರಂಭಿಕ ಹಂತ ತಿಳಿದರೆ, ಕೂಡಲೇ ಮಕ್ಕಳನ್ನು ಶಾಲೆಗೆ ಕಳಿಸುವುದು ಅಥವಾ ಮಕ್ಕಳ ಕೇಂದ್ರ ಗಳಿಗೆ ಕಳಿಸಬೇಡಿ.ರ್ಯಾಷಸ್ ಹೆಚ್ಚಾದ ಮೇಲೆ ಆ ಸೋಂಕು ಇತರರಿಗೆ ಹರಡುವುದಿಲ್ಲ.
•ಬಸುರಿ ಮಹಿಳೆಯರು ಇಂತಹ ಸಮಸ್ಯೆ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಮತ್ತು ತಮ್ಮ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಗಮನಕೊಟ್ಟು ವೈದ್ಯರ ಬಳಿ ಸರಿಯಾದ ಮಾಹಿತಿ ಪಡೆಯಿರಿ.

English summary

Slapped Cheek Syndrome: All You Need To Know

Slapped cheek syndrome, also known as 'Fifth Disease' or 'Parvovirus B19' is a viral infection that is common in children, although adults can catch the infection too. Bright red rash on the cheeks is a characteristic of this syndrome. Slapped cheek syndrome is caused by Parvovirus B19. Often, people may not know about the infection, until the rash appears.
X
Desktop Bottom Promotion