For Quick Alerts
ALLOW NOTIFICATIONS  
For Daily Alerts

ಪವರ್‌ಫುಲ್ ಮನೆ ಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ಮಂಗಮಾಯ!

By Deepu
|

ದೇವರೇ ಏನು ಬೇಕಾದರೂ ಕೊಡು ಆದರೆ ಹಲ್ಲು ನೋವು ಮಾತ್ರ ಕೊಡಬೇಡ ಎನ್ನುವ ಪ್ರಾರ್ಥನೆ ಹಲ್ಲು ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಸರಿಯಾಗಿ ಆಹಾರ ಸೇವಿಸುವುದು ಕೂಡ ಕಷ್ಟವಾಗಿ ಬಿಡುತ್ತದೆ.. ಇದಕ್ಕೆಲ್ಲಾ ಪ್ರಮುಖ ಕಾರಣ ಹಲ್ಲು ನೋವಿಗೆ ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಪ್ರಮುಖ ಕಾರಣವಾಗಿದೆ. ಅದರಲ್ಲೂ, ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರದ ತುಣುಕುಗಳು ಬ್ಯಾಕ್ಟೀರಿಯಾಗಳಿಗೆ ರಸದೌತಣವಾಗಿದ್ದು ಕೆಲವೇ ದಿನಗಳಲ್ಲಿ ಈ ಬ್ಯಾಕ್ಟೀರಿಯಾಗಳು ಭಾರೀ ವೇಗದಲ್ಲಿ ತಮ್ಮ ಪಡೆಯನ್ನು ಹೆಚ್ಚಿಸಿಕೊಂಡು ಉಂಡ ಮನೆಗೆ ದ್ರೋಹ ಬಗೆಯುವ ಹುನ್ನಾರದಲ್ಲಿರುತ್ತವೆ.

ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಪಲ್ಪ್ ಎಂದು ಕರೆಯಲಾಗುವ ಈ ಭಾಗದಲ್ಲಿ ಅತಿ ಹೆಚ್ಚಿನ ನರಾಗ್ರಗಳಿದ್ದು ಇವು ಅತಿ ಸಂವೇದನಾಶೀಲವಾಗಿರುತ್ತವೆ. ಬನ್ನಿ ಈ ನೋವನ್ನು ಕಡಿಮೆಗೊಳಿಸಲು ಕೆಲವು ಮನೆಮದ್ದುಗಳಿದ್ದು ಈ ಲೇಖನದಲ್ಲಿ ತಿಳಿಸಿದ್ದೇವೆ, ಮುಂದೆ ಓದಿ....

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‍ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ. ಒಂದು ವೇಳೆ ನಿಮಗೆ ವಿಪರೀತವಾದ ಹಲ್ಲು ನೋವು ಕಂಡು ಬಂದಲ್ಲಿ ಹೀಗೆ ಮಾಡಿ. .

* ಹಸಿ ಬೆಳ್ಳುಳ್ಳಿ ಜಜ್ಜಿ ಅಥವಾ ಪುಡಿಯನ್ನು ಉಪಯೋಗಿಸಿ ಕೊಂಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರು ಸೇರಿಸಿ ದಪ್ಪನೆಯ ಲೇಪನವನ್ನಾಗಿಸಿ.

* ಈ ಲೇಪನವನ್ನು ಬಾಧಿತ ಹಲ್ಲಿನ ಮೇಲೆ ಇರಿಸಿ. ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯ ಎಸಳನ್ನು ಬಾಧಿತ ಹಲ್ಲಿನ ಮೇಲೆ ಇಟ್ಟು ಜಗಿಯಿರಿ.

* ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಕೆಲವು ದಿನ ಅನುಸರಿಸಿ.

ಲವಂಗ

ಲವಂಗ

ಲವಂಗದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಆಂಟಿ ಆಕ್ಸಿಡೆಂಟು ಮತ್ತು ಅರವಳಿಕೆ ನೀಡುವ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅದರಲ್ಲೂ ಸೋಂಕು ಉಂಟಾಗಿ ನೋವಾಗುತ್ತಿದ್ದರೆ ಈ ವಿಧಾನ ಸೂಕ್ತವಾಗಿದೆ

*ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ *ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ.

*ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

ಚಿಟಿಕೆಯಷ್ಟು ಉಪ್ಪು

ಚಿಟಿಕೆಯಷ್ಟು ಉಪ್ಪು

ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು. ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

ಈರುಳ್ಳಿ

ಈರುಳ್ಳಿ

ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ. ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.

ಉಗುರುಬೆಚ್ಚನೆಯ ಉಪ್ಪುನೀರು

ಉಗುರುಬೆಚ್ಚನೆಯ ಉಪ್ಪುನೀರು

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಉಪ್ಪು ಸೇರ್‍ಇಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಮ್ದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆ

ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿ ಅದರೆ ರಸಕ್ಕೆ, ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ.

ಉಪ್ಪು ಮತ್ತು ಕಾಳುಮೆಣಸು

ಉಪ್ಪು ಮತ್ತು ಕಾಳುಮೆಣಸು

ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.

*ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ

*ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.

*ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

ಸೇಬು ಹಣ್ಣಿನ ವಿನೇಗರ್

ಸೇಬು ಹಣ್ಣಿನ ವಿನೇಗರ್

ಸೇಬು ಹಣ್ಣಿನ ವಿನೇಗರ್ ಹಲ್ಲುಗಳ ನೋವಿಗೆ ಉತ್ತಮ ಪರಿಹಾರವಾಗಿದೆ. ಪ್ರಾಕೃತಿಕ ಅಥವಾ ಆರ್ಗ್ಯಾನಿಕ್ ಎಸಿವಿ ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದಕ್ಕಾಗಿ ಒಂದು ಚಮಚ ಸೇಬು ಹಣ್ಣಿನ ವಿನೇಗರ್ ತೆಗೆದುಕೊಳ್ಳಿ. ಇದನ್ನು ಬಾಯಿಯಲ್ಲಿ ಕೆಲವು ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ ನಂತರ ಅದನ್ನು ಉಗಿಯಿರಿ. ಯಾವುದೇ ಕಾರಣಕ್ಕು ಇದನ್ನು ನುಂಗಬೇಡಿ. ಇದು ಹಲ್ಲು ನೋವಿನ ಪ್ರದೇಶವನ್ನು ಇನ್‍ಫೆಕ್ಷನ್‍ನಿಂದ ದೂರ ಮಾಡುತ್ತದೆ. ಇದರ ಜೊತೆಗೆ ಇದು ಹಲ್ಲುಗಳ ಸುತ್ತ ಬಂದಿರುವ ಊತವನ್ನು ಸಹ ಕಡಿಮೆ ಮಾಡುತ್ತದೆ.

 ಗೋಧಿ ತೆನೆಯ ರಸ

ಗೋಧಿ ತೆನೆಯ ರಸ

ಹಲ್ಲು ಹಾಗೂ ಒಸಡಿನ ನೋವಿನ ನಿವಾರಣೆಗೆ ಗೋಧಿ ತೆನೆಯ ರಸ ಬಹಳ ಒಳ್ಳೆಯ ಔಷಧಿ.ಇದು ಹಲ್ಲಿನ ನೋವನ್ನು ತೆಗೆದು ಹಾಕುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.

ಒರೆಗಾನೊ ಎಣ್ಣೆ

ಒರೆಗಾನೊ ಎಣ್ಣೆ

ಒರೆಗಾನೊ ಎಣ್ಣೆಯು ಅತ್ಯುತ್ತಮವಾದ ಬ್ಯಾಕ್ಟೀರಿಯಾ ನಿರೋಧಕ, ಫಂಗಸ್ ನಿರೋಧಕ, ಆಂಟಿ-ಆಕ್ಸಿಡೆಂಟ್ ಮತ್ತು ವೈರಸ್ ನಿರೋಧಕ ಅಂಶಗಳನ್ನು ಒಳಗೊಂಡಿದೆ. ಒರೆಗಾನೊ ಎಣ್ಣೆಯು ಹಲ್ಲು ಮತ್ತು ದವಡೆಗಳ ಸಮಸ್ಯೆಗೆ ಹೇಳಿ ಮಾಡಿಸಿದ ಔಷಧಿಯಾಗಿದೆ.

ದಂತವೈದ್ಯರ ಸಲಹೆ ಪಡೆಯಿರಿ

ದಂತವೈದ್ಯರ ಸಲಹೆ ಪಡೆಯಿರಿ

ವರ್ಷಕ್ಕೆ ಎರಡು ಬಾರಿ ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಕಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಿ. ಇಂದು ಸೂಕ್ಷ್ಮ ಸಂವೇದಿ ಹಲ್ಲುಗಳಿಗೆ ನೂತನ ವಿಧಾನದ ಚಿಕಿತ್ಸೆ ಲಭ್ಯವಿದ್ದು ನಿಮ್ಮ ಅಗತ್ಯಕ್ಕೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಿ.

English summary

Simple Remedies for Toothache Relief

A good remedy to cure tooth ache is regular dental check-up. It will surely help you to prevent tooth ache and tooth problems. In addition to this, eating food with less sugar also helps you to prevent tooth decay and pain. You can treat tooth ache right at home. Here are some home remedies for tooth pain.
X
Desktop Bottom Promotion