For Quick Alerts
ALLOW NOTIFICATIONS  
For Daily Alerts

ಪುರುಷರು ಸಾಧ್ಯವಾದಷ್ಟು ಈ ಚಟವನ್ನು ಕಂಟ್ರೋಲ್ ಮಾಡಿದರೆ ಒಳ್ಳೆಯದು!

|

ಈ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿಗಳು ಹಸ್ತಮೈಥುನ ಕೆಟ್ಟದ್ದು ಎಂದಾಗಲೀ ಯಾವುದೇ ಧಾರ್ಮಿಕ ವಿಧಿಯನ್ನು ವಿರೋಧಿಸುವುದಾಗಲೀ ಯಾವುದನ್ನೂ ಬಿಂಬಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಹಸ್ತಮೈಥುನದ ಬಗ್ಗೆ ಇರುವ ವೈಜ್ಞಾನಿಕ ಮಾಹಿತಿಯನ್ನು ಹಾಗೂ ಇದರ ವೈಪರೀತ್ಯಗಳ ಪರಿಣಾಮವನ್ನು ಮಾತ್ರವೇ ವಿವರಿಸಲಾಗಿದೆ.

ವಾಸ್ತವದಲ್ಲಿ ಹಸ್ತಮೈಥುನ ಒಂದು ನೈಸರ್ಗಿಕ ಹಾಗೂ ಸ್ವಾಭಾವಿಕ ಕ್ರಿಯೆಯಾಗಿದ್ದು ಇದರ ಮೂಲಕ ಶೀಘ್ರ ನಿದ್ದೆಗೆ ಜಾರಲು, ಮಾನಸಿಕ ಒತ್ತಡ ನಿವಾರಿಸಲು, ಉದ್ವೇಗ ಅಥವಾ ಇತರ ಖಿನ್ನತೆಗಳಿಂದ ಹೊರಬರಲೂ ಸಾಧ್ಯವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಲು, ಪ್ರಾಸ್ಟೇಟ್ ಗ್ರಂಥಿಗಳ ಕ್ಷಮತೆ ಹೆಚ್ಚಿಸಲು ಹಾಗೂ ಮನಸ್ಸಿಗೆ ಮುದನೀಡುವ ಎಂಡಾರ್ಫಿನ್ ಗಳ ಉತ್ಪತ್ತಿಗೂ ನೆರವಾಗುತ್ತದೆ. ಒಂದು ವೇಳೆ ಈ ಕ್ರಿಯೆ ವಿಪರೀತವಾದರೆ ಯಾವ ತೊಂದರೆಗಳು ಎದುರಾಗುತ್ತವೆ ಎಂದು ನೋಡೋಣ....

ಸ್ಪರ್ಷ ಭಾವಪರಾಕಾಷ್ಠೆಯನ್ನು ಕಷ್ಟಕರವಾಗಿಸುತ್ತದೆ

ಸ್ಪರ್ಷ ಭಾವಪರಾಕಾಷ್ಠೆಯನ್ನು ಕಷ್ಟಕರವಾಗಿಸುತ್ತದೆ

ಹಸ್ತಮೈಥುನದ ಬಗ್ಗೆ ಸಂಶೋಧನೆಗಳಿಂದ ಸಾಬೀತುಕೊಂಡ ಮಾಹಿತಿ ಎಂದರೆ ಹಸ್ತಮೈಥುನದ ಬಳಿಕದ ಸ್ಖಲನಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಒಂದು ವೇಳೆ ಮಿಲನದ ಇರಾದೆಯಿಂದ ಹೊರಹೋಗುವ ವ್ಯಕ್ತಿ ಇದಕ್ಕೂ ಮೊದಲು ಕೆಲವು ಬಾರಿ ಸ್ವಮೈಥುನ ಪಡೆದರೆ ಇದು ಮಿಲನಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ ಹಾಗೂ ಭಾವಪರಾಕಾಷ್ಠೆಯನ್ನು ತಲುಪಲು ಕಷ್ಟವಾಗಿಸುತ್ತದೆ. ಆದ್ದರಿಂದ ಈ ಕ್ರಿಯೆಯನ್ನು ಸತತವಾಗಿ ನಡೆಸದೇ ಆಗಾಗ ನಡೆಸುವುದು ಆರೋಗ್ಯಕರ. ಇನ್ನೊಂದು ಗಂಭೀರವಾದ ಪರಿಣಾಮವೆಂದರೆ ಕ್ರಮೇಣ ವ್ಯಕ್ತಿಯ ಸಂವೇದನೆಗಳು ತನ್ನ ಸ್ವಂತ ಸ್ಪರ್ಶಕ್ಕೇ ಹೆಚ್ಚು ಒಗ್ಗಿಹೋಗುತ್ತದೆ ಹಾಗೂ ಇತರರ ಸ್ಪರ್ಶದಿಂದ ಯಾವುದೇ ಸಂವೇದನೆಯುಂಟಾಗದೇ ಹೋಗಬಹುದು. ಇದು ದಾಂಪತ್ಯಕ್ಕೇ ಅಪಾಯಕರ!

ಮುಂದಿನ ಸ್ಖಲನಗಳಲ್ಲಿ ನಿಮಿರುತನ ಕಡಿಮೆಯಾಗುತ್ತದೆ

ಮುಂದಿನ ಸ್ಖಲನಗಳಲ್ಲಿ ನಿಮಿರುತನ ಕಡಿಮೆಯಾಗುತ್ತದೆ

ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ಎದುರಾಗುವ ಅಡ್ಡಪರಿಣಾಮಗಳಲ್ಲಿ ಇದು ಅತ್ಯಂತ ಘೋರವಾಗಿದೆ. ಮೊದಲ ನಿಮಿರುವಿಕೆಯಲ್ಲಿ ಪುರುಷರಿಗೆ ಅತಿ ಹೆಚ್ಚಿನ ದೃಢತೆ ಸಿಗುತ್ತದೆ. ತದನಂತದರ ನಿಮಿರುವಿಕೆಯಲ್ಲಿ ಹಿಂದಿನಷ್ಟು ದೃಢತೆ ಇರುವುದಿಲ್ಲ ಹಾಗೂ ಕ್ರಮೇಣ ಇದು ಇನ್ನಷ್ಟು ಕಡಿಮೆಯಾಗುತ್ತಾ ಸೌಮ್ಯವಾದ ಸ್ಪಂಜಿನಂತಾಗುತ್ತದೆ. ಆದರೆ ಎಷ್ಟು ಸ್ಖಲನಗಳ ಬಳಿಕ ಹೀಗಾಗುತ್ತದೆ ಎಂಬುದಕ್ಕೆ ಯಾವುದೇ ಖಚಿತ ವಿವರಣೆಯಿಲ್ಲ. ಪ್ರತಿ ಪುರುಷರಿಗೂ ಇದು ಭಿನ್ನವಾಗಿರುತ್ತದೆ. ಅಲ್ಲದೇ ಸತತ ಘರ್ಷಣೆಯಿಂದ ಸೂಕ್ಷ್ಮಗೀರುಗಳು, ಚರ್ಮ ಸುಲಿಯುವುದು ಹಾಗೂ ಬಾವು ಕಾಣಿಸಿಕೊಳ್ಳಬಹುದು.

ಹಸ್ತಮೈಥುನ ತಪ್ಪಿತಸ್ಥ ಭಾವನೆಯನ್ನು ಮೂಡಿಸಬಹುದು

ಹಸ್ತಮೈಥುನ ತಪ್ಪಿತಸ್ಥ ಭಾವನೆಯನ್ನು ಮೂಡಿಸಬಹುದು

ಈ ಕ್ರಿಯೆಯ ಬಳಿಕ ವ್ಯಕ್ತಿ ತಪ್ಪಿತಸ್ಥ ಭಾವನೆಯಿಂದ ಖಿನ್ನತೆಗೆ ಅಥವಾ ಅವಮಾನ ಭಾವನೆಗೆ ಒಳಗಾಗಬಹುದು. ಈ ನಿರ್ಧಾರಕ್ಕೆ ಆತನ ನೈತಿಕ, ಧಾರ್ಮಿಕ ಅಥವಾ ಸಂಸ್ಕೃತಿಯ ವಿಷಯಗಳು ಕಾರಣವಾಗಿರಬಹುದು. ಈ ವಿಷಯಗಳು ತುಂಬಾ ಸೂಕ್ಷ್ಮವಾಗಿದ್ದು ಕೆಲವು ನಂಬಿಕೆಗಳ ವಿರುದ್ದ ಕೆಲಸ ಮಾಡಿದ ಭಾವನೆಯಿಂದ ಈ ಕ್ರಿಯೆಯಲ್ಲಿ ಪಡೆದ ಭಾವಪರವಶತೆ ಒಂದು ರೀತಿಯ ಅಪರಾಧದಂತೆ ತೋರಬಹುದು. ಕೆಲವು ಸಂದರ್ಭಗಳಲ್ಲಿ ಈ ಕ್ರಿಯೆಯನ್ನು ನಿಷಿದ್ದವಾಗಿಸಿದ್ದು ಈ ಮೂಲಕ ಕಟ್ಟುಪಾಡನ್ನು ಮೀರಿದ ಅಪರಾಧಿ ಮನೋಭಾವವೂ ಎದುರಾಗಬಹುದು. ಇದು ಆತ್ಮವಿಶ್ವಾಸ, ಸ್ವಪ್ರೇಮ ಅಥವಾ ಸ್ವಗೌರವಕ್ಕೇ ಪೆಟ್ಟು ನೀಡಬಹುದು.

ಅತಿ ಹೆಚ್ಚಿನ ಮೈಥುನ ನಪುಂಸಕತ್ವಕ್ಕೂ ಕಾರಣವಾಗಬಹುದು

ಅತಿ ಹೆಚ್ಚಿನ ಮೈಥುನ ನಪುಂಸಕತ್ವಕ್ಕೂ ಕಾರಣವಾಗಬಹುದು

ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೂ ಒಂದು ಸಮಯ ಹಾಗೂ ಸಂದರ್ಭ ಇದ್ದೇ ಇರುತ್ತದೆ. ಇದನ್ನು ಮೀರಿ ನಡೆಸುವ ಯಾವುದೇ ಕಾರ್ಯ ಅಪಾಯಕಾರಿಯಾಗಿದೆ. ಉದಾಹರಣೆಗೆ ಬಿಟ್ಟೂ ಬಿಡದೇ ಸತತವಾಗಿ ನೀರು ಕುಡಿಯುತ್ತಲೇ ಇದ್ದರೆ ಏನಾಗುತ್ತದೆ? ಹೊಟ್ಟೆಯ ಸಾಮರ್ಥ್ಯಕ್ಕೂ ಮೀರಿ ನೀರು ಸಂಗ್ರಹಗೊಂಡರೆ ಇದು ಇತರ ಅಂಗಗಳಿಗೆ ಒತ್ತಿ ತೊಂದರೆ ಎದುರಾಬಹುದಲ್ಲವೇ? ಹಾಗೇ ಈ ಕ್ರಿಯೆ ಸಹಾ. ಈ ಕ್ರಿಯೆ ಅತಿಯಾದರೆ ಇದಕ್ಕನುಗುಣವಾಗಿ ಲೈಂಗಿಕ ರಸದೂತಗಳನ್ನೂ ಅನಿವಾರ್ಯವಾಗಿ ದೇಹ ಉತ್ಪಾದಿಸಬೇಕಾಗುತ್ತದೆ ಅಥವಾ ನರಗಳ ಸಂವಹಕಗಳನ್ನೂ (neurotransmitters) ಹೆಚ್ಚಿಸಬೇಕಾಗುತ್ತದೆ. ಇದರ ಪರಿಣಾಮ ಪ್ರತಿ ಪುರುಷನಲ್ಲಿಯೂ ಬೇರೆ ಬೇರೆ ರೀತಿಯಲ್ಲಾಗುತ್ತದೆ. ಕೆಲವರಿಗೆ ಸುಸ್ತು, ಕಣ್ಣು ಕತ್ತಲಾಗುವುದು, ಕೂದಲು ಉದುರುವುದು, ವೃಷಣಗಳಲ್ಲಿ ಅಪಾರ ನೋವು, ಸೊಂಟ ಬಗ್ಗಿಸಲೂ ಆಗದಂತಹ ನೋವು ಮೊದಲಾದವು ಎದುರಾಗುತ್ತವೆ. ಮಾನಸಿಕವಾಗಿಯೂ ವ್ಯಕ್ತಿ ಕುಗ್ಗಬಹುದು. ಹಾಗಾಗಿ ಇವುಗಳಲ್ಲಿ ಯಾವುದೊಂದು ಲಕ್ಷಣವೂ ಕಂಡುಬಂದರೆ ತಕ್ಷಣ ಹಸ್ತಮೈಥುನದ ಆವರ್ತನವನ್ನು ಹೆಚ್ಚಿಸಬೇಕು. ಅಗತ್ಯಬಿದ್ದರೆ ವೈದ್ಯರನ್ನು ಕಾಣುವುದೇ ಮೇಲು.

ಕಡ್ಡಾಯ ಎಂಬ ಮನಸ್ಥಿತಿ ಎದುರಾಗಬಹುದು

ಕಡ್ಡಾಯ ಎಂಬ ಮನಸ್ಥಿತಿ ಎದುರಾಗಬಹುದು

ಕೆಲವರು ಇದೊಂದು ಕಡ್ಡಾಯ ಕ್ರಿಯೆ ಎಂಬಂತೆ ಪರಿಗಣಿಸಬಹುದು ಹಾಗೂ ಇದರ ಪರಿಣಾಮಗಳೂ ವ್ಯತಿರಿಕ್ತವಾಗಿರುತ್ತವೆ. ಓರ್ವ ಪುರುಷ ದಿನಕ್ಕೆ ಆರು ಬಾರಿ ಈ ಕ್ರಿಯೆಯನ್ನು ನಿರ್ವಹಿಸಿ ತನ್ನನ್ನು ತಾನೇ ಪುರುಷೋತ್ತಮ ಎಂದು ಭಾವಿಸಿಕೊಂಡರೆ ಇನ್ನೋರ್ವ ಇದೇ ಕ್ರಿಯೆಗೆ ವ್ಯತಿರಿಕ್ತ ಭಾವನೆಯನ್ನು ವ್ಯಕ್ತಪಡಿಸಬಹುದು. ಒಂದು ವೇಳೆ ನೀವು ನಿಮ್ಮ ಜವಾಬ್ದಾರಿಯುತ ಜೀವನ ಹಾಗೂ ನಿಮ್ಮ ವೈಯಕ್ತಿಕ ಬಯಕೆ ಮತ್ತು ಕಾಮನೆಗಳ ನಡುವೆ ಸಮತೋಲನ ಸಾಧಿಸದೇ ಇದ್ದರೆ ನಿಮ್ಮ ಸಂಬಂಧಗಳು, ವೃತ್ತಿ, ಹಣಕಾಸು, ಆತ್ಮವಿಶ್ವಾಸ ಹಾಗೂ ಸಾಮಾಜಿಕ ನೆರವು ಎಲ್ಲವೂ ಬಾಧೆಗೊಳಗಾಗಬಹುದು.

ಪುರುಷರ ಹಸ್ತಮೈಥುನದ ಇನ್ನೊಂದು ಮಗ್ಗುಲಿನ ಅಡ್ಡಪರಿಣಾಮಗಳು

ಪುರುಷರ ಹಸ್ತಮೈಥುನದ ಇನ್ನೊಂದು ಮಗ್ಗುಲಿನ ಅಡ್ಡಪರಿಣಾಮಗಳು

ಅತಿಹೆಚ್ಚು ಹಸ್ತಮೈಥುನದಿಂದ ದೇಹದಲ್ಲಿ ಅಪಾರವಾದ ರಸದೂತ ಆಧಾರಿತ ಬದಲಾವಣೆಗಳು ಎದುರಾಗುತ್ತವೆ. ಈ ಬದಲಾವಣೆಗಳು ಹಸ್ತಮೈಥುನಗಳ ಸಂಖ್ಯೆಯನ್ನು ಹಾಗೂ ಇತರ ಅಂಶಗಳನ್ನು ಆಧರಿಸಿರುತ್ತವೆ. ಈ ಮೂಲಕ ಎದುರಾಗುವ ಅಪಾಯಗಳಲ್ಲಿ ಪ್ರಮುಖವಾದವು ಎಂದರೆ:

ಪುರುಷರ ಹಸ್ತಮೈಥುನದ ಇನ್ನೊಂದು ಮಗ್ಗುಲಿನ ಅಡ್ಡಪರಿಣಾಮಗಳು

ಪುರುಷರ ಹಸ್ತಮೈಥುನದ ಇನ್ನೊಂದು ಮಗ್ಗುಲಿನ ಅಡ್ಡಪರಿಣಾಮಗಳು

ವ್ಯಸನ: ಅತಿ ಹೆಚ್ಚೇ ಎನಿಸುವಷ್ಟು ಈ ಕ್ರಿಯೆಯಲ್ಲಿ ಒಳಗಾಗುವ ಮೂಲಕ ಇದೊಂದು ವ್ಯಸನವಾಗಿ ಪರಿಣಮಿಸಬಹುದು. ಯಾವುದೇ ಮಾದಕ ವ್ಯಸನದಂತೆ ಈ ವ್ಯಸನವೂ ಆರೋಗ್ಯಕ್ಕೇ ಮಾರಕವಾಗಬಹುದು.

ನಿಮಿರು ದೌರ್ಬಲ್ಯ: ಈ ಕ್ರಿಯೆ ಹೆಚ್ಚಾದಷ್ಟೂ ಜನನಾಂಗಗಳಿಗೆ ಒದಗುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತಾ ಹೋಗಿ ನಿಮಿರುದೌರ್ಬಲ್ಯ ಎದುರಾಗಬಹುದು.

ನರವ್ಯವಸ್ಥೆಯ ತೊಂದರೆಗಳು

ನರವ್ಯವಸ್ಥೆಯ ತೊಂದರೆಗಳು

ಕೆಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಅತಿಯಾದ ಹಸ್ತಮೈಥುನ ಪುರುಷರ ನರವ್ಯವಸ್ಥೆಯನ್ನೇ ಅಲ್ಲಾಡಿಸಿ ಮನೋವಿಕಲ್ಪಕ್ಕೂ ಕಾರಣವಾಗಬಹುದು.

ಶೀಘ್ರಸ್ಖಲನ: ಅತಿಹೆಚ್ಚೇ ಹಸ್ತಮೈಥುನ ಮಾಡಿಕೊಳ್ಳುವ ಪುರುಷರು ತಮ್ಮ ಸ್ಖಲನವನ್ನು ತಡೆಹಿಡಿದುಕೊಳ್ಳಲು ತೀರಾ ಅಸಮರ್ಥರಾಗಿರುತ್ತಾರೆ. ಅತಿಹೆಚ್ಚೇ ಜನನಾಂಗದ ನರವನ್ನು ತೀಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ನೋವು

ನೋವು

ಈ ತೊಂದರೆ ಅಪರೂಪವಾಗಿದ್ದು ಹೆಚ್ಚಿನ ಘರ್ಷಣೆಯಿಂದ ಸೂಕ್ಷ್ಮಗೀರುಗಳು ಹಾಗೂ ತ್ವಚೆ ಒರಟಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಕೆಲವೊಮ್ಮೆ ಬಾತುಕೊಳ್ಳಲೂಬಹುದು. ಆದ್ದರಿಂದ ಈ ಲಕ್ಷಣಗಳು ಎದುರಾದರೆ ತಕ್ಷಣ ಈ ಕ್ರಿಯೆಗೆ ಕೆಲದಿನಗಳ ರಜೆ ನೀಡಬೇಕು ಹಾಗೂ ಈ ಕ್ರಿಯೆಯನ್ನು ಅತಿ ನಾಜೂಕಿನಿಂದ ನಡೆಸಬೇಕು.

ತುರ್ತು ಪರಿಸ್ಥಿತಿಯೂ ಎದುರಾಗಬಹುದು

ತುರ್ತು ಪರಿಸ್ಥಿತಿಯೂ ಎದುರಾಗಬಹುದು

ಅಪರೂಪಕ್ಕಾದರೂ ಸರಿ, ಈ ಪರಿಸ್ಥಿತಿಯೂ ಎದುರಾಗಬಹುದು. ಕೆಲವೊಮ್ಮೆ ಪುರುಷರು ಕಾಮವಾಂಛೆಯ ಹುಮ್ಮಸ್ಸಿನಲ್ಲಿ ತಮ್ಮ ಗುದದ್ವಾರದೊಳಗೆ ಪರಕೀಯ ವಸ್ತುಗಳನ್ನು ತೂರಿಸಿಕೊಳ್ಳುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಾರೆ. ಹೀಗೇನಾದರೂ ಆದರೆ ಸ್ವತಃ ಏನನ್ನೂ ಮಾಡದೇ ತಕ್ಷಣ ವೈದ್ಯರ ನೆರವು ಪಡೆಯಬೇಕು.

English summary

Side Effects of Masturbating in Men

The first and foremost thing that should be pointed out in this post is the fact that it does not intend to lobby around the anti-masturbation behavior and this is not done for religious reasons. It should also be said that masturbation is a normal sexual behavior and is healthy as it can help people fall asleep and reduce stress levels, anxiety or other tension.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more