ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಇನ್ನು ನಿಮ್ಮ ದೇಹ ಬಯಸುವುದು ಹೆಚ್ಚಿನ ನೀರು. ಅದೇ ನೀವು ಹೊರಗಡೆ ಹೋಗಿ ತುಂಬಾ ಸುಸ್ತಾದಾಗ ಕುಡಿಯುವುದು ಮಾತ್ರ ತಂಪು ಪಾನೀಯ. ಈ ತಂಪು ಪಾನೀಯವನ್ನು ಕಾರ್ಬ್ರೊನೇಟ್ ನೀರಿನಿಂದ ಅಥವಾ ಸೋಡಾದಿಂದ ತಯಾರಿಸಲಾಗುತ್ತದೆ. ಇದು ಜೋಸೆಫ್ ಫ್ರಿಸ್ಟ್ಲಿಎನ್ನುವಾತನ ಕೊಡುಗೆ. ಶುದ್ಧ ನೀರನ್ನು ಕಾರ್ಬನ್ ಡೈಯಾಕ್ಸೈಡ್ ನ ಕೆಳಗಡೆ ಒತ್ತಡಕ್ಕೆ ಸಿಲುಕಿಸಿದಾಗ ಈ ಸೋಡಾ ಉತ್ಪತ್ತಿಯಾಗುವುದು.
ಸಾಮಾನ್ಯ ಸೋಡಾವು ದೇಹಕ್ಕೆ ಹೆಚ್ಚು ಹಾನಿಕಾರವಲ್ಲ. ಯಾಕೆಂದರೆ ಇದರಲ್ಲಿನ ಆಮ್ಲೀಯತೆಯನ್ನು ಬಾಯಿಯಲ್ಲಿರುವ ಜೊಲ್ಲು ತಟಸ್ಥಗೊಳಿಸುವುದು. ಆದರೆ ಈ ಕಾರ್ಬೋನೇಟೆಡ್ ನೀರಿಗೆ ಸಕ್ಕರೆ ಅಥವಾ ಕೃತಕ ಸಿಹಿ ಹಾಕಿದಾಗ ಇದು ಸಂಪೂರ್ಣವಾಗಿ ದೇಹದ ಮೇಲೆ ಮಾರಕವಾಗುವುದು. ದೇಹಕ್ಕೆ ಸೋಡಾವು ಮಾರಕವೆಂದು ತಿಳಿದಿದ್ದರೂ ಕೂಡ ವಿಶ್ವದಲ್ಲಿ ಶೇ.86ರಷ್ಟು ಜನರು ಪ್ರತಿನಿತ್ಯ ತಂಪು ಪಾನೀಯ, ಸರಳ ಸೋಡಾವನ್ನು ಆಲ್ಕೋಹಾಲ್ ಗೆ ಬೆರೆಸಿ ಕುಡಿಯುತ್ತಾರೆ.
ಅಮೆರಿಕಾದ ವ್ಯಕ್ತಿಯೊಬ್ಬ ಪ್ರತಿನಿತ್ಯ ಒಂದು ಲೀಟರ್ ಅಥವಾ ಎರಡು ಕ್ಯಾನ್ ನಷ್ಟು ಸೋಡಾ ಕುಡಿಯುವರು. ಇದರಲ್ಲಿ ಇರುವಂತಹ ಸಕ್ಕರೆ ಅಥವಾ ಕೃತಕ ಸಿಹಿಯು ನೇವಾಗಿ ರಕ್ತದ ಕಣಗಳಿಗೆ ಹೋಗಿ ಸೇರಿಕೊಳ್ಳುವುದು. ಯಾಕೆಂದರೆ ಇದರಲ್ಲಿ ವಿಘಟಿಸಲು ಯಾವುದೇ ಪೋಷಕಾಂಶಗಳು ಅಥವಾ ಚಯಾಪಚಯಗೊಳಿಸುವ ಯಾವುದೇ ಅಂಶಗಳು ಇರುವುದಿಲ್ಲ. ಇದನ್ನು ಸಾಮಾನ್ಯವಾಗಿ ಶುಗರ್ ರಶ್ ಎಂದು ಕರೆಯಲಾಗುತ್ತದೆ. ಪ್ರತಿನಿತ್ಯ ತಂಪುಪಾನೀಯ ಸೇವನೆ ಮಾಡಿದರೆ ಅದರಿಂದ ಹೃದಯಸಂಬಂಧಿ ಕಾಯಿಲೆ ಬರುವುದು ಸಹಜ. ಇದು ವ್ಯಕ್ತಿಯೊಬ್ಬನ ಸಾವಿಗೂ ಕಾರಣವಾಗಬಹುದು.
ಅಪಧಮನಿಕಾಠಿಣ್ಯವು ಕೊರೋನರಿ ಅಪಧಮನಿ ಕಾಯಿಲೆಗಳು (ಸಿಎಡಿ) ಉಂಟಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಪಧಮನಿಕಾಠಿಣ್ಯವು ಅಪಧಮನಿಯನ್ನು ತುಂಬಾ ಕಿರಿದುಗೊಳಿಸುವುದು. ಇದರಿಂದ ರಕ್ತಸಂಚಾರವು ಕಡಿಮೆಯಾಗಿ ಅದರಿಂದ ದೇಹಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗುವುದಿಲ್ಲ. ದೇಹದಲ್ಲಿ ಆಮ್ಲಜನಕವು ಕಡಿಮೆಯಾಗುವ ಕಾರಣದಿಂದ ಕೋಶಗಳಿಗೆ ಆಮ್ಲಜನಕದ ಕೊರತೆಯಾಗುವುದು.
ಈ ಕೊರತೆ ದೀರ್ಘಕಾಲದ ತನಕ ಮುಂದುವರಿದರೆ ಅದರಿಂದ ಅಪಧಮನಿಯ ಬದಿಯನ್ನು ಗಡಸುಗೊಳಿಸುವುದು ಮತ್ತು ಕ್ಯಾಲ್ಸಿಯಂ, ಕೊಬ್ಬು, ಅತಿಯಾದ ಸಕ್ಕರೆಯಿಂದ ಕೂಡಿದ ಪದರ ನಿರ್ಮಾಣವಾಗುವುದು. ಇದರಿಂದಾಗಿ ಹೃದಯಾಘಾತ ಉಂಟಾಗಬಹುದು. ಇದು ಸಾವಿಗೆ ಕಾರಣವಾಗುವುದು. ಹೆಚ್ಚೆಚ್ಚು ಸೋಡಾ ಕುಡಿದಂತೆ ಅದರಿಂದ ಹೃದಯಾಘಾತವಾಗುವ ಸಾಧ್ಯತೆಯು ಅಧಿಕವಾಗುವುದು.
ತೂಕ ಹೆಚ್ಚಳ ಮತ್ತು ವಯಸ್ಸಾಗುವ ಲಕ್ಷಣಗಳು
ದೇಹದಲ್ಲಿ ಅತಿಯಾಗಿ ಶೇಖರಣೆಯಾಗುವಂತಹ ಸಕ್ಕರೆಯು ಕೊಬ್ಬಾಗಿ ಪರಿವರ್ತನೆಯಾಗುವುದು. ಇದರಿಂದ ದೇಹವು ಅತಿಯಾದ ತೂಕ ಪಡೆಯುವುದು. ವರ್ಣತಂತುಗಳಲ್ಲಿ ಇರುವಂತಹ ಟೆಲೊಮೆರ್ಸ್‌ಗಳು ವಯಸ್ಸಾಗುವ ಲಕ್ಷಣಗಳಿಗೆ ವೇಗ ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಚರ್ಮ ಮತ್ತು ವೀರ್ಯದ ಗಣತಿ ಕುಸಿತ
ಅತಿಯಾಗಿ ಕಾರ್ಬ್ರೋನೇಟೆಡ್ ಪಾನೀಯಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಪಿಎಚ್ ಮತ್ತು ಗ್ಲೈಸೆಮಿಕ್ ಮಟ್ಟದ ಅಸಮತೋಲನ ಉಂಟಾಗುವುದು. ದೀರ್ಘಕಾಲದ ತನಕ ಈ ರೀತಿ ಅಸಮತೋಲನವಿದ್ದರೆ ಆಗ ಚರ್ಮದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದು. ಇದು ಪುರುಷರಲ್ಲಿ ವೀರ್ಯ ಗಣತಿ ಕೂಡ ಕಡಿಮೆ ಮಾಡುವುದು.
ಇತರ ಕಾಯಿಲೆಗಳು
*ಅತಿಯಾಗಿ ಸೋಡಾ ಸೇವನೆ ಮಾಡಿದರೆ ಅದರಿಂದ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವುದು. ಯಾಕೆಂದರೆ ಸಕ್ಕರೆಯು ನೇರವಾಗಿ ರಕ್ತದ ಕಣಗಳನ್ನು ಸೇರಿಕೊಳ್ಳುವುದರಿಂದ ದೇಹದಲ್ಲಿನ ಇನ್ಸುಲಿನ್‌ಗೆ ಗೊಂದಲವಾಗುವುದು.
*ಕಿಡ್ನಿಯ ಪ್ರೋಟಿನೂರಿಯಾ ಕೂಡ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿಯು ಪ್ರೋಟೀನ್ ನನ್ನು ಸರಿಯಾಗಿ ಶುದ್ದೀಕರಿಸಲು ವಿಫಲವಾಗುವುದು.
*ಕೆಲವೊಂದು ಸಂದರ್ಭಗಳಲ್ಲಿ ಅಸ್ತಮಾ ಕೂಡ ಬರುವಂತಹ ಸಾಧ್ಯತೆಗಳು ಇವೆ.
ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುವುದು
ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುವ ಕಾರಣದಿಂದ ಸಂಧಿವಾತ ಉಂಟಾಗುವುದು. ನಾವು ಕುಡಿಯುವಂತಹ ಸೋಡಾದಲ್ಲಿ ಪೋಸ್ಪರಿಕ್ ಆಮ್ಲವಿರುವುದು. ಮೂಳೆಯ ಸಾಂದ್ರತೆ ಕಾಪಾಡಿಕೊಳ್ಳಲು ಪೋಸ್ಪರಸ್ ಅಗತ್ಯವಾಗಿ ಬೇಕು. ಆದರೆ ಇದು ಅತಿಯಾದಾಗ ಅದು ಕ್ಯಾಲ್ಸಿಯಂ ಹೀರುವಿಕೆ ಕುಗ್ಗಿಸುವುದು. ದೀರ್ಘಕಾಲದ ಅಸಮತೋಲನದಿಂದ ಮೂಳೆಗಳು ಬಿರುಕು ಬಿಡುವುದು.
ಹಲ್ಲುಗಳು ಕೊಳೆಯುವುದು
ಸೋಡಾದಲ್ಲಿರುವಂತಹ ಸಕ್ಕರೆಯಂಶಕ್ಕೆ ಬಾಯಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಪ್ರತಿಕ್ರಿಯಿಸುವುದು. ಇದು ಒಂದು ರೀತಿಯ ಆಮ್ಲವನ್ನು ಸೃಷ್ಟಿಸುವ ಕಾರಣ ಅದು ದಂತಕವಚ ಮೇಲೆ ಪರಿಣಾಮ ಬೀರುವುದು. ಪ್ರತೀ ಸಲ ನೀವು ಸೋಡಾ ಸೇವಿಸುವಾಗ ಹಲ್ಲುಗಳಿಗೆ ಜುಮ್ಮೆನ್ನುವುದು. ಇಂತಹ ದೀರ್ಘ ಕಾಲದ ದಾಳಿಯಿಂದ ದಂತ ಕುಳಿ ಉಂಟಾಗುವುದು. ಇದರಿಂದ ಬಿಳಿಯ ಹಲ್ಲುಗಳು ಕೆಡುವುದು.
ಸೋಡಾ ಕುಡಿಯುವುದರಿಂದ ನಿಮ್ಮನ್ನು ತಡೆಯಲು ಇಷ್ಟ ಕಾರಣಗಳು ಸಾಕಾಗದೆ ಇದ್ದರೆ 2013ರಲ್ಲಿ ಹಾವರ್ಡ್ ಯೂನಿವರ್ಸಿಟಿಯು ಪ್ರಕಟಿಸಿದ ಅಧ್ಯಯನವೊಂದರ ಪ್ರಕಾರ ವಿಶ್ವದಲ್ಲಿ ಸಂಭವಿಸುವ 180,000 ಬೊಜ್ಜಿನಿಂದಾಗುವ ಸಾವುಗಳು ಅತಿಯಾಗಿ ಸಕ್ಕರೆಯುಕ್ತ ಸೋಡಾ ಕುಡಿಯುವುದರಿಂದ ಎಂದು ಹೇಳಿದೆ. ದೇಹಕ್ಕೆ ಹಾನಿಯುಂಟು ಮಾಡುವಂತಹ ಈ ಪಾನೀಯ ಕುಡಿಯುವ ಬದಲು ನೀವು ಆರೋಗ್ಯಕರವಾದ ಪಾನೀಯಕ್ಕೆ ಮೊರೆ ಹೋಗಿ. ಸೋಡಾ ದೇಹಕ್ಕೆ ಹಲವಾರು ಕಾಯಿಲೆಗಳನ್ನು ಉಂಟುಮಾಡುವುದರಲ್ಲಿ ಸಂಶಯವೇ ಇಲ್ಲ ಎಚ್ಚರ ವಹಿಸಿ...
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.