For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಗ್ಗೆ ಕಟ್ಟುಕಥೆಗಳು: ಈ ನಂಬಿಕೆಗಳನ್ನು ಎಂದೂ ನಂಬದಿರಿ!

|

ಹಸಿವು, ನಿದ್ರೆ, ನೀರಡಿಕೆ, ಲೈಂಗಿಕ ಬಯಕೆ ಎಲ್ಲವೂ ನಮಗೆ ನಿಸರ್ಗದತ್ತವಾಗಿ ಬಂದಿರುವ ಸಹಜ ಅಗತ್ಯಗಳಾಗಿವೆ. ಹಸಿವಾದರೆ ಆಹಾರ ಸೇವಿಸುವುದು, ನೀರಡಿಕೆಯಾದರೆ ನೀರು ಕುಡಿಯುವುದು, ನಿದ್ರಿಸುವ ಬಯಕೆಯಾದರೆ ನಿದ್ರಿಸುವ ಮೂಲಕ ಈ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತೇವೆ. ಆದರೆ ದೇಹದ ಹಸಿವು ಭುಗಿಲೆದ್ದಾಗ? ಇದಕ್ಕೆ ಮಾತ್ರ ಸಮಾಗಮದ ಅಗತ್ಯವಿದೆ.

ಆದರೆ ಈ ಸಮಯದಲ್ಲಿ ಸಂಗಾತಿ ಲಭ್ಯವಿಲ್ಲದಿದ್ದರೆ ಆಗ ದೇಹದ ಅಗತ್ಯತೆಯನ್ನು ಇತರ ವಿಧಾನಗಳಿಂದ ಪೂರೈಸಿಕೊಳ್ಳಬೇಕಾಗುತ್ತದೆ. ಈ ಅಗತ್ಯತೆಯೂ ನಿಸರ್ಗ ನೀಡಿರುವ ಸಹಜಬಯಕೆಯೇ ಆಗಿದ್ದು ಈ ಅಗತ್ಯತೆಯಿಂದ ವಿಮುಖರಾಗುವುದು ನಿಸರ್ಗದ ನಿಯಮದ ವಿರುದ್ದವಾಗಿ ಹೋದಂತಾಗಿದೆ.

ಆದ್ದರಿಂದ, ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸುವುದು ಸಂತಸಕರ ಮತ್ತು ಆರೋಗ್ಯಕರ ಜೀವನ ನಡೆಸಲು ಅಗತ್ಯವಾಗಿದೆ. ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಲೈಂಗಿಕ ಅಗತ್ಯತೆಯನ್ನು ಪೂರೈಸದೇ ಹೋದಾಗ ಇದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಹಾಗೂ ವ್ಯಕ್ತಿಗಳ ನಡುವೆ ಉತ್ತಮ ಸಂಬಂಧವಿರಿಸಿಕೊಳ್ಳಲೂ ಬಾಧೆಯುಂಟುಮಾಡಬಹುದು.

ಒಂದು ವೇಳೆ ದಂಪತಿಗಳ ನಡುವಣ ಲೈಂಗಿಕ ಜೀವನ ಯಾವುದಾದರೊಂದು ಕಾರಣದಿಂದ ಆರೋಗ್ಯಕರವಾಗಿಲ್ಲದಿದ್ದರೆ ಇದರ ಪರಿಣಾಮವಾಗಿ ಮಾನಸಿಕ ಒತ್ತಡ, ಜುಗುಪ್ಸೆ, ಖಿನ್ನತೆ ಮೊದಲಾದವು ಎದುರಾಗಬಹುದು, ಜೊತೆಗೇ ಕೆಲವು ಮನಸ್ಸಿಗೆ ಸಂಬಂಧಿಸಿದ ತೊಂದರೆಗಳಾದ ನಿಮಿರು ದೌರ್ಬಲ್ಯ, ಲೈಂಗಿಕ ನಿರುತ್ಸಾಹ ಮೊದಲಾದವೂ ಎದುರಾಗಬಹುದು.

ಹಲವು ದಂಪತಿಗಳ ನಡುವೆ ಅಸಂತೋಷ ಹೊಗೆಯಾಡುತ್ತಿದ್ದರೆ ಇದಕ್ಕೆ ಮೂಲ ಕಾರಣ ಲೈಂಗಿಕ ತೃಪ್ತಿಯ ಕೊರತೆಯೇ ಆಗಿರುತ್ತದೆ. ಆದ್ದರಿಂದ ದಾಂಪತ್ಯ ಸುಗಮವಾಗಿ ನಡೆಯಬೇಕೆಂದರೆ ಲೈಂಗಿಕ ಜೀವನವೂ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಅತಿ ಸೂಕ್ಷ್ಮವಾದ ಈ ಸಂಗತಿಯ ಬಗ್ಗೆ ಎಲ್ಲರಲ್ಲಿಯೂ ಅಪಾರವಾದ ಕುತೂಹಲವಿದ್ದು ಹಲವಾರು ಮಿಥ್ಯೆಗಳು ಜನರ ನಡುವೆ ಪೂರ್ವಾಗ್ರಹ ನಂಬಿಕೆಗಳಾಗಿ ಆರೋಗ್ಯಕರ ಜೀವನಕ್ಕೆ ಅಡ್ಡಗಾಲು ಹಾಕುತ್ತಿವೆ. ಬನ್ನಿ, ಈ ಮಿಥ್ಯೆಗಳ ಬಗ್ಗೆ ಅರಿತು ತಿದ್ದಿಕೊಳ್ಳುವ ಮೂಲಕ ಜೀವನವನ್ನು ಉತ್ತಮಗೊಳಿಸಲು ನೆರವಾಗಿ..

ಸರ್ವಥಾ ನಂಬಬಾರದ ಮಿಥ್ಯೆಗಳು ಹೀಗಿವೆ:

1. ಶಿಶ್ನದ ಗಾತ್ರ ದೊಡ್ಡದಿದ್ದಷ್ಟೂ ಸುಖವೂ ಹೆಚ್ಚು - ತಪ್ಪು, ಗಾತ್ರಕ್ಕೂ ಲೈಂಗಿಕ ಸುಖಕ್ಕೂ ಯಾವುದೇ ತಾಳಮೇಳವಿಲ್ಲ

2. ಕಡೆಘಳಿಗೆಯಲ್ಲಿ ಹಿಮ್ಮರಳುವ ವಿಧಾನ ಸುರಕ್ಷಿತ - ತಪ್ಪು, ಇದರಿಂದ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದಿಲ್ಲ

3. ಕಾಂಡೋಂಗಳನ್ನು ಮರುಬಳಸಬಹುದು - ತಪ್ಪು, ಇದರ ಬಳಕೆ ಒಮ್ಮೆ ಮಾತ್ರ.

4. ಮೇಹರೋಗವಿಲ್ಲ ಎಂದರೆ ಉತ್ತಮ ಆರೋಗ್ಯ ಎಂದೇ ಅರ್ಥ - ತಪ್ಪು, ಹಲವು ವಿಧದ ಅನಾರೋಗ್ಯಗಳು ಹರಡುವಿಕೆಯಿಂದ ಬರಬಹುದು.

5. ಮಾಸಿಕ ದಿನಗಳಲ್ಲಿ ಮಹಿಳೆಯರು ಗರ್ಭ ಧರಿಸಲಾರರು - ತಪ್ಪು, ಈ ದಿನಗಳಲ್ಲಿ ನಡೆಸುವ ಸಮಾಗಮದಿಂದಲೂ ಗರ್ಭ ನಿಲ್ಲುವ ಸಾಧ್ಯತೆ ಇದೆ.

6. ಲೈಂಗಿಕ ರೋಗ ಬರಲು ಪ್ರವೇಶವೇ ಆಗಬೇಕು - ತಪ್ಪು, ಲೈಂಗಿಕ ರೋಗಗಳು ಇತರ ವಿಧಾನಗಳಿಂದಲೂ ಹರಡಬಹುದು.

1.ಶಿಶ್ನದ ಗಾತ್ರ ದೊಡ್ಡದಿದ್ದಷ್ಟೂ ಸುಖವೂ ಹೆಚ್ಚು

1.ಶಿಶ್ನದ ಗಾತ್ರ ದೊಡ್ಡದಿದ್ದಷ್ಟೂ ಸುಖವೂ ಹೆಚ್ಚು

ಇಂದಿಗೂ ಪ್ರಚಲಿತದಲ್ಲಿರುವ ಅತ್ಯಂದ ದೊಡ್ಡ ತಪ್ಪು ಆಗಿದ್ದು ವಿಶ್ವದ ಎಲ್ಲೆಡೆ ಈ ಮಿಥ್ಯೆ ಜನಜನಿತವಾಗಿದೆ. ಶಿಶ್ನದ ಗಾತ್ರ ಎಷ್ಟು ದೊಡ್ಡದೋ ಅಷ್ಟೂ ಮಟ್ಟಿಗೆ ಪುರುಷ ಮಹಿಳೆಯನ್ನು ತೃಪ್ತಿಪಡಿಸುತ್ತಾನೆ ಎಂಬ ನಂಬುಗೆ ಎಷ್ಟೋ ಕಾಲದಿಂದ ಪ್ರಚಲಿತವಾಗಿದೆ. ಆದರೆ ಈ ಬಗ್ಗೆ ನಡೆಸಿದ ಸಂಶೋಧನೆಗಳು, ಅಂಕಿ ಅಂಶಗಳು, ಸಮೀಕ್ಷೆಗಳು ಈ ಮಾಹಿತಿ ತಪ್ಪು ಎಂದು ದೃಢೀಕರಿಸಿವೆ. ವೈದ್ಯಕೀಯ ಮಾಹಿತಿಯಂತೆ ಮಹಿಳೆಯ ಯೋನಿಯ ಕೇವಲ ಮೇಲ್ಭಾಗದ ಎರಡಿಂಚಿನಷ್ಟು ಮಾತ್ರವೇ ಅತಿ ಹೆಚ್ಚಿನ ಸಂವೇದನಾಶೀಲವಾಗಿರುತ್ತದೆ. ಆದ್ದರಿಂದ ಇಷ್ಟು ಉದ್ದವಿರುವ ಶಿಶ್ನ ಮಹಿಳೆಯನ್ನು ತೃಪ್ತಿಪಡಿಸಲು ಸಾಕು. ಹಾಗಾಗಿ ಇದಕ್ಕೂ ಹೆಚ್ಚಿನ ಗಾತ್ರದ ಶಿಶ್ನ ಮಹಿಳೆಯರಿಗೆ ನೋವನ್ನುಂಟುಮಾಡಬಹುದೇ ವಿನಃ ತೃಪ್ತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅಲ್ಲದೇ ಚಿಕ್ಕದಾಗಿದ್ದರೇ ತಮಗೆ ಇಷ್ಟ, ಇದರಿಂದ ಕಡಿಮೆ ನೋವಾಗುತ್ತದೆ ಎಂದು ಹೆಚ್ಚಿನ ಮಹಿಳೆಯರ ಅಭಿಪ್ರಾಯವಾಗಿದೆ.

2. ಕಡೆಘಳಿಗೆಯಲ್ಲಿ ಹಿಮ್ಮರಳುವ ವಿಧಾನ ಸುರಕ್ಷಿತ

2. ಕಡೆಘಳಿಗೆಯಲ್ಲಿ ಹಿಮ್ಮರಳುವ ವಿಧಾನ ಸುರಕ್ಷಿತ

ಹಲವು ದಂಪತಿಗಳು ಗರ್ಭನಿರೋಧಕ ವ್ಯವಸ್ಥೆಗಳನ್ನು ಅನುಸರಿಸುವ ಬದಲು ಸ್ಖಲನಕ್ಕೂ ಮುನ್ನ ಹಿಮ್ಮೆಟ್ಟುವ ವಿಧಾನವನ್ನು ಅನುಸರಿಸುತ್ತಾರೆ. ಇದಕ್ಕೆ "pull-out" method ಎಂದು ಕರೆಯುತ್ತಾರೆ. ಆದರೆ ಈ ವಿಧಾನ ಸಂಪೂರ್ಣವಾಗಿ ಸುರಕ್ಷತೆಯನ್ನು ಒದಗಿಸುವುದಿಲ್ಲ, ಅಲ್ಲದೇ ಲೈಂಗಿಕ ರೋಗಗಳನ್ನು ಹರಡುವುದರಿಂದಲೂ ತಡೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಸ್ಖಲನವನ್ನು ಮೆದುಳುಬಳ್ಳಿ ನಿಯಂತ್ರಿಸುತ್ತದೆಯೇ ವಿನಃ ಮೆದುಳಲ್ಲ, ಹಾಗಾಗಿ ಪುರುಷನ ಇಚ್ಛೆಯಂತೆ ಸ್ಖಲನಗೊಳ್ಳುವ ಅಥವಾ ಸ್ಖಲನ ನಿಲ್ಲಿಸಲು ಸಾಧ್ಯವಿಲ್ಲ. ಹೊರತೆಗೆಯುವ ಮುನ್ನವೇ ಸ್ಖಲನಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಸ್ಖಲನಕ್ಕೂ ಮುನ್ನ ತೆಳುವಾಗಿ ಸ್ರವಿಸುವ ದ್ರವವೂ ( pre-seminal fluid) ವೀರ್ಯಾಣುಗಳಿಂದ ಸಮೃದ್ದವಾಗಿದ್ದು ಸ್ಖಲನಕ್ಕೂ ಮುನ್ನ ಹೊರತೆಗೆದರೂ ಈ ದ್ರವವೇ ಗರ್ಭಧಾರಣೆಗೆ ಸಾಕಾಗುತ್ತದೆ. ಅಲ್ಲದೇ ಈ ದ್ರವದಲ್ಲಿಯೂ ಲೈಂಗಿಕವಾಗಿ ಹರಡುವ ರೋಗಾಣುಗಳಿದ್ದರೆ ರೋಗ ಹರಡುವುದರಿಂದ ತಡೆಯಲಾಗದು.

3. ಕಾಂಡೋಂಗಳನ್ನು ಮರುಬಳಸಬಹುದು

3. ಕಾಂಡೋಂಗಳನ್ನು ಮರುಬಳಸಬಹುದು

ಇದೊಂದು ವಿಚಿತ್ರವಾದ ನಂಬಿಕೆಯಾಗಿದೆ ಹಾಗೂ ಇಂದಿಗೂ ಕೆಲವು ವ್ಯಕ್ತಿಗಳು ಈ ಮಲಿನ ಸತ್ಯವನ್ನು ನಂಬುತ್ತಾರೆ. ವಿಶೇಷವಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಬಡವ್ಯಕ್ತಿಗಳು ಹಾಗೂ ಇವುಗಳನ್ನು ಸುಲಭವಾಗಿ ಕೊಳ್ಳಲು ಕಷ್ಟವಾಗಿರುವ ಯುವಜನತೆ ಈ ವಿಧಾನವನ್ನು ಅನುಸರಿಸುತ್ತಾರೆ. ಒಮ್ಮೆ ಬಳಸಿದ ಕಾಂಡೋಂ ಅನ್ನು ಮತ್ತೊಮ್ಮೆ ತೊಳೆದು ಬಳಸಲು ತೊಡಗುತ್ತಾರೆ. ಇದು ಅತ್ಯಂತ ಅಸುರಕ್ಷಿತ ವಿಧಾನವಾಗಿದೆ ಹಾಗೂ ಗುಪ್ತಾಂಗಗಳನ್ನು ಸೋಂಕಿನಿಂದ ರಕ್ಷಿಸಲು ಅಸಮರ್ಥವಾಗಿದೆ. ಪರಿಣಾಮವಾಗಿ ಈ ಕಾಂಡೋಂ ಬಳಸಿದ ಇಬ್ಬರು ವ್ಯಕ್ತಿಗಳಿಗೂ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಇವು ಸುಲಭವಾಗಿ ಹರಿಯುವ ಸಾಧ್ಯತೆಯಿಂದ ಅನಪೇಕ್ಷಿತ ಗರ್ಭಧಾರಣೆ, ಲೈಂಗಿಕ ರೋಗಗಳು ಆವರಿಸಿಕೊಳ್ಳುವ ಸಾಧ್ಯತೆಗಳೂ ಹೆಚ್ಚುತ್ತವೆ.

4. ಮೇಹರೋಗವಿಲ್ಲ ಎಂದರೆ ಉತ್ತಮ ಆರೋಗ್ಯ ಎಂದೇ ಅರ್ಥ

4. ಮೇಹರೋಗವಿಲ್ಲ ಎಂದರೆ ಉತ್ತಮ ಆರೋಗ್ಯ ಎಂದೇ ಅರ್ಥ

ಒಂದು ವೇಳೆ ವ್ಯಕ್ತಿಯೊಬ್ಬರು ಲೈಂಗಿಕವಾಗಿ ಚಟುವಟಿಕೆಯಿಂದಿದ್ದರೆ, ವಿಶೇಷವಾಗಿ ಒಬ್ಬರಿಗಿಂತ ಹೆಚ್ಚು ಸಂಗಾತಿಗಳನ್ನು ಹೊಂದಿದ್ದರೆ ಇವರಿಗೆ ಲೈಂಗಿಕ ರೋಗಗಳು ಹರಡುವ ಸಾಧ್ಯತೆಗಳು ಅತಿ ಹೆಚ್ಚು. ಇವರಿಗೆ ಈ ರೋಗ ಆವರಿಸಿರುವ ಸೂಚನೆಗಳು ತಕ್ಷಣಕ್ಕೆ ಗೋಚರವಾಗದೇ ಇದ್ದರೂ ಇವರ ದೇಹದಲ್ಲಿ ಈಗಾಗಲೇ ಪ್ರವೇಶಿಸಿರುವ ಲೈಂಗಿಕ ರೋಗಾಣುಗಳು ಪೂರ್ಣಪ್ರಮಾಣದಲ್ಲಿ ಬೆಳೆದು ರೋಗ ಹರಡಲು ಕೆಲವಾರು ತಿಂಗಳುಗಳೇ ಬೇಕಾಗಬಹುದು. ಇದರರ್ಥ ಈ ವ್ಯಕ್ತಿಗಳು ಎಲ್ಲಾ ರೋಗಗಳಿಂದ ಮುಕ್ತರು ಹಾಗೂ ಉತ್ತಮ ಆರೋಗ್ಯ ಹೊಂದಿರುತ್ತಾರೆ ಎಂದರ್ಥವಲ್ಲ. ಬದಲಿಗೆ ಇವರು ಆರೋಗ್ಯವಾಗಿದ್ದರೂ ಇವರಿಂದ ಇವರೊಂದಿಗೆ ಸಂಸರ್ಗ ನಡೆಸುವವರಿಗೆ ಶೀಘ್ರವಾಗಿ ರೋಗ ಹರಡಬಹುದು.

5. ಮಾಸಿಕ ದಿನಗಳಲ್ಲಿ ಮಹಿಳೆಯರು ಗರ್ಭ ಧರಿಸಲಾರರು

5. ಮಾಸಿಕ ದಿನಗಳಲ್ಲಿ ಮಹಿಳೆಯರು ಗರ್ಭ ಧರಿಸಲಾರರು

ಇನ್ನೊಂದು ಜನಪ್ರಿಯ ಮಿಥ್ಯೆ ಎಂದರೆ ಮಾಸಿಕ ದಿನಗಳಲ್ಲಿ ಕೂಡುವುದರಿಂದ ಮಹಿಳೆಯರು ಗರ್ಭ ಧರಿಸುವುದಿಲ್ಲ ಎಂಬುದಾಗಿದೆ. ವಾಸ್ತವವಾಗಿ ಇದೊಂದು ದೊಡ್ಡ ತಪ್ಪು ನಂಬಿಕೆಯಾಗಿದೆ. ಈ ದಿನಗಳಲ್ಲಿ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ ಹಾಗೂ ಈ ದಿನಗಳಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ರಜೆ ನೀಡಬೇಕಾಗುತ್ತದೆ. ಆದರೆ ಮಹಿಳೆಯರು ಯಾವುದೇ ಸಮಯದ ಮಿಲನದಲ್ಲಿಯೂ ಗರ್ಭಧಾರಣೆಗೆ ಒಳಾಗಾಗುವ ಸಾಮರ್ಥ್ಯ ಪಡೆದಿರುತ್ತಾರೆ. ಏಕೆಂದರೆ ಮಹಿಳೆಯ ದೇಹ ಪ್ರವೇಶಿಸಿರುವ ವೀರ್ಯಾಣುಗಳು ಹೊರಬರದೇ ಸುಮಾರು ಐದು ದಿನಗಳ ಕಾಲ ಜೀವಂತವಾಗಿರುವ ಸಾಮರ್ಥ್ಯ ಹೊಂದಿರುತ್ತವೆ. ಹಾಗಾಗಿ ರಜಾದಿನಗಳ ಮಿಲನವೂ ಗರ್ಭಧಾರಣೆಗೆ ಕಾರಣವಾಗಬಹುದು.

6. ಲೈಂಗಿಕ ರೋಗ ಬರಲು ಪ್ರವೇಶವೇ ಆಗಬೇಕು

6. ಲೈಂಗಿಕ ರೋಗ ಬರಲು ಪ್ರವೇಶವೇ ಆಗಬೇಕು

ಕೇವಲ ಶಿಶ್ನದ ಪ್ರವೇಶದಿಂದ ಮಾತ್ರವೇ ಲೈಂಗಿಕ ರೋಗವನ್ನು ಹರಡುವುದು ಸಾಧ್ಯ ಎಂದು ಹೆಚ್ಚಿನ ಜನರು ನಂಬಿರುವ ಮಿಥ್ಯೆಯಾಗಿದೆ. ಅಂದರೆ ಅಸುರಕ್ಷಿತ ಮಿಲನದ ಬಳಿಕ ಮಹಿಳೆಯ ಗರ್ಭನಾಳದಲ್ಲಿ ವೀರ್ಯಾಣುಗಳು ಸ್ಖಲನಗೊಂಡರೆ ಮಾತ್ರವೇ ಲೈಂಗಿಕ ರೋಗ ಹರಡಬಹುದು ಎಂದಾಗಿದೆ. ಆದರೆ ಇದು ತಪ್ಪು ನಂಬಿಕೆಯಾಗಿದ್ದು ಲೈಂಗಿಕ ರೋಗಗಳು ಮುಖಮೈಥುನ, ತುಟಿಚುಂಬನ, ರೋಗಾಣುಯುಕ್ತ ರಕ್ತದಾನ, ರೋಗಾಣುಗಳಿಂದ ಕೂಡಿದ್ದ ಚುಚ್ಚುಮದ್ದಿನ ಸೂಜಿಯ ಬಳಕೆ ಮೊದಲಾದವುಗಳಿಂದಲೂ ಹರಡಬಹುದು. ಆದ್ದರಿಂದ ಲೈಂಗಿಕ ಸಂಬಂಧದಲ್ಲಿ ಒಳಗೊಳ್ಳುವ ಮುನ್ನ ಇಬ್ಬರೂ ಪರೀಕ್ಷೆಗೊಳಪಟ್ಟು ಖಚಿತಗೊಳಿಸುವುದು ಅಗತ್ಯವಾಗಿದೆ.

English summary

Sexual Health Myths You Must Never Believe!

If a couple's sex life is not healthy, due to various reasons, it could cause a lot of stress, frustration and depression. In addition, physiological problems like erectile dysfunction and loss of libido can also be caused by the lack of healthy sex.Many couples are unhappy with each other for the sole reason that their sex life is not healthy.So, it is very important to ensure that your sex life is healthy. For that, one must be aware of various myths and facts about sex.
Story first published: Sunday, July 8, 2018, 9:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more