For Quick Alerts
ALLOW NOTIFICATIONS  
For Daily Alerts

ದಂಪತಿಗಳಿಗೆ ಸೆಕ್ಸ್ ಸುಖ ಆನಂದಿಸಲು ಬಿಡದ ಇಂತಹ ಏಳು ಖತರ್ನಾಕ್ ಭೀತಿಗಳು!

|

ಸೆಕ್ಸ್ ನ ಅನುಭವವೆನ್ನುವುದು ಅದು ಅಮೋಘ ಹಾಗೂ ವರ್ಣಿಸಲು ಅಸಾಧ್ಯ ಎನ್ನುವುದು ಹೆಚ್ಚಿನವರಿಗೆ ತಿಳಿದಿರುವುದು. ಎರಡು ಜೀವಗಳು ಅನ್ಯೋನ್ಯತೆಯಿಂದ ಬೆಸೆದಾಗ ಮಾತ್ರ ಆ ಸುಖವು ಸಿಗುವುದು. ಆದರೆ ಕೆಲವರಿಗೆ ಅನ್ಯೋನ್ಯತೆ ಸಮಸ್ಯೆ ಹಾಗೂ ಕೆಲವೊಂದು ಶಾಶ್ವತ ಹಾಗೂ ಗಂಭೀರ ಪರಿಣಾಮಗಳು ಇರಬಹುದು. ಕೆಲವರಿಗೆ ಸೆಕ್ಸ್ ಬಗ್ಗೆ ತುಂಬಾ ಭೀತಿಯಿರುವುದು.

ಮಾನಸಿಕವಾಗಿ ಇರುವಂತಹ ಈ ಭೀತಿಯಿಂದಾಗಿ ಅವರಿಗೆ ಸೆಕ್ಸ್ ನ ಸುಖವನ್ನು ಸರಿಯಾಗಿ ಅನುಭವಿಸಲು ಆಗಲ್ಲ. ಹಿಂದಿನ ಕೆಲವೊಂದು ಅನುಭವದಿಂದ ಆಗಿರುವಂತಹ ಆಘಾತ ಹಾಗೂ ಕೆಲವು ಶಾಶ್ವತ ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ಸೆಕ್ಸ್ ಬಗ್ಗೆ ಕೆಲವರಲ್ಲಿ ಇರುವಂತಹ ಭೀತಿ ಯಾವುದು ಮತ್ತು ಅದನ್ನು ಯಾವ ರೀತಿ ನಿಭಾಯಿಸಬಹುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಗರ್ಭಧರಿಸುವಂತಹ ಭೀತಿ

ಗರ್ಭಧರಿಸುವಂತಹ ಭೀತಿ

ಇಬ್ಬರು ವಯಸ್ಕರು ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಆದರೆ ಅವರಿಗೆ ಗರ್ಭಧರಿಸುವುದು ಬೇಕಾಗಿರುವುದಿಲ್ಲ. ಹೀಗಿರುವಾಗ ಸೆಕ್ಸ್ ಸುಖವನ್ನು ಅನುಭವಿಸಲು ಆಗಲ್ಲ. ಕಾಂಡೋಮ್ ನ್ನು ಸರಿಯಾಗಿ ಬಳಸಿಕೊಂಡಾಗ ಮಹಿಳೆಯು ಗರ್ಭಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ. ನಿಮಗೆ ಅಥವಾ ನಿಮ್ಮ ಸಂಗಾತಿಗೆ ಕಾಂಡೋಮ್ ಧರಿಸುವುದು ಹೇಗೆ ಎಂದು ತಿಳಿಯದೇ ಇದ್ದರೆ ಆಗ ನೀವು ಈ ಗೈಡ್(ಕಾಂಡೋಮ್ ಧರಿಸುವುದು ಹೇಗೆ)ನ್ನು ನೋಡಿ. ಆದರೂ ನಿಮ್ಮಲ್ಲಿ ಭೀತಿ ಇದೆ ಎಂದಾದರೆ ಆಗ ನಿಮಗೆ ಹಿಂದೊಮ್ಮೆ ಗರ್ಭಧರಿಸಿದ ಅನುಭವವಾಗಿರಬೇಕು. ಈ ಬಗ್ಗೆ ನೀವು ಮನಶಾಸ್ತ್ರಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಬಹುದು.

Most Read: ನೀವು ಬೆಳಗ್ಗಿನ ಸೆಕ್ಸ್ ಉತ್ತಮವೆಂದು ಭಾವಿಸಿದ್ದರೆ...ಅದು ಖಂಡಿತ ತಪ್ಪು!!

ನೋವಿನ ಭೀತಿ

ನೋವಿನ ಭೀತಿ

ಸೆಕ್ಸ್ ಅನುಭವಿಸದೆ ಇರುವಂತಹ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿರುವುದು ಮತ್ತು ಕನ್ಯತ್ವವು ನೋವಿಲ್ಲದ ಸ್ಥಿತಿ ಎಂದು ಭಾವಿಸಬಹುದು. ಯಾಕೆಂದರೆ ಮೊದಲ ಸಲ ಸೆಕ್ಸ್ ನಡೆಸುವುದು ನೋವುಂಟು ಮಾಡುವುದು ಎಂಬ ಭಾವನೆ. ಆದರೆ ಇದು ನೋವಲ್ಲ. ನೀವು ಮತ್ತು ಸಂಗಾತಿ ನಿಧಾನವಾಗಿರಬೇಕು, ಲ್ಯೂಬ್ರಿಕೆಂಟ್ ಬಳಸಬೇಕು ಮತ್ತು ಆನಂದಿಸಬೇಕು.

ದೇಹದ ಆಕೃತಿ ಸಮಸ್ಯೆ

ದೇಹದ ಆಕೃತಿ ಸಮಸ್ಯೆ

ತಾನು ನಗ್ನವಾದರೆ ಸಂಗಾತಿಯು ತನ್ನ ದೇಹವನ್ನು ಇಷ್ಟಪಡುತ್ತಾನೆಯಾ ಇಲ್ಲವಾ ಎನ್ನುವ ಭೀತಿಯು ಹೆಚ್ಚಿನ ಮಹಿಳೆಯರನ್ನು ಕಾಡುತ್ತಲಿರುತ್ತದೆ. ಶೇ.90ರಷ್ಟು ಸೆಕ್ಸ್ ಗೆ ಸಂಬಂಧಿಸಿದ ಭೀತಿಯು ಇದೇ ವಿಚಾರವನ್ನು ಒಳಗೊಂಡಿದ್ದಾಗಿರುತ್ತದೆ. ಈ ಅಸುರಕ್ಷತೆಯು ಕೇವಲ ನಿಮಗೆ ಮಾತ್ರವಲ್ಲ, ಹೆಚ್ಚಿನವರು ಇದನ್ನು ಹಂಚಿಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕಾದರೆ, ಆತ್ಮವಿಶ್ವಾಸ ಮತ್ತು ಸಂಗಾತಿಯ ಜತೆಗೆ ಭಾವನಾತ್ಮಕವಾದ ಸಂಬಂಧ ಬೆಸೆಯಬೇಕು. ಇವೆರಡರ ಕಡೆ ನೀವು ಗಮನಹರಿಸಿದರೆ ಆಗ ನೀವು ಸಂಗಾತಿಯ ಮುಂದೆ ನಗ್ನರಾಗಲು ಹೆಚ್ಚು ಚಿಂತಿಸಲ್ಲ.

ದುರ್ವಾಸನೆ ಭೀತಿ

ದುರ್ವಾಸನೆ ಭೀತಿ

ದೇಹದ ಬಗ್ಗೆ ಅಸುರಕ್ಷಿತ ಭಾವನೆ ಇರುವಂತಹವರಲ್ಲಿ ಇದು ಸಾಮಾನ್ಯ. ನೀವು ಯಾರಿಗಾದರೂ ತುಂಬಾ ನಿಕಟವಾಗುವಾಗ ನಾನು ದುರ್ವಾಸನೆ ಬರುತ್ತಿದ್ದೇನೆಯಾ ಎಂದು ಕೇಳುವಿರಿ. ಮೌಥ್ ವಾಶ್ ಅಥವಾ ಡಿಯೋಡ್ರೆಂಟ್ ಬಳಸದೆ ಇರುವ ಕಾರಣದಿಂದಾಗಿ ನೀವು ಸಂಗಾತಿಗೆ ಹತ್ತಿರವಾಗಲು ಹೆದರಬಹುದು. ಮುಂದಿನ ಸಲ ನೀವು ಇದನ್ನು ಬಳಸಿಕೊಳ್ಳಿ.

Most Read: ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..

ತೃಪ್ತಿ ನೀಡದೇ ಇರುವ ಭೀತಿ

ತೃಪ್ತಿ ನೀಡದೇ ಇರುವ ಭೀತಿ

ಇದು ಪುರುಷರಲ್ಲಿ ಹೆಚ್ಚಾಗಿ ಕಾಡುವಂತಹ ಭೀತಿ. ನನ್ನ ಶಿಶ್ನಗಳು ದೊಡ್ಡದಾಗಿಯಾ? ನಾನು ದೀರ್ಘ ಸಮಯ ಸ್ಖಲಿಸದೆ ಇರಬಹುದೇ ಅಥವಾ ನಾನು ಬೇಗನೆ ಸ್ಖಲಿಸಿದರೆ ಅಥವಾ ಆಕೆ ಪರಾಕಾಷ್ಠೆ ತಲುಪುವ ಮೊದಲೇ ಹೀಗಾದರೆ ಹೇಗಾಗಬಹುದು ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಇದು ನಿಮ್ಮ ತಪ್ಪಲ್ಲ, ಯಾಕೆಂದರೆ ನೀಲಿಚಿತ್ರ ನಟರು ಹಾಗೂ ಫಿಟ್ನೆಸ್ ಮಾಡೆಲ್ ಗಳು ನಿಮಗೆ ಅಸಾಮಾನ್ಯ ಗುರಿಯನ್ನಿಟ್ಟಿರುವರು. ಆದರೆ ನಿಮ್ಮ ಸಂಗಾತಿಯು ನೀಲಿಚಿತ್ರ ನಟನನ್ನು ಡೇಟಿಂಗ್ ಮಾಡುತ್ತಿಲ್ಲವೆಂದು ನಿಮಗೆ ತಿಳಿದಿರಲಿ.

ಅನಿರೀಕ್ಷಿತ ದೇಹದ ಚಲನೆಗಳು ಅಂದೆ ಹೂಸು ಬಿಡುವುದು ಇತ್ಯಾದಿ...

ಅನಿರೀಕ್ಷಿತ ದೇಹದ ಚಲನೆಗಳು ಅಂದೆ ಹೂಸು ಬಿಡುವುದು ಇತ್ಯಾದಿ...

ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ನಾನು ಹೂಸು ಬಿಟ್ಟರೆ ಏನಾಗಬಹುದು ಎನ್ನುವ ಚಿಂತೆಯು ನಿಮ್ಮನ್ನು ಕಾಡುತ್ತಿರುವುದು ಅಥವಾ ಕಿಸ್ ನೀಡುವಾಗ ಸೀನು ಬಂದರೆ? ಆದರೆ ಇದೆಲ್ಲವೂ ಸೆಕ್ಸ್ ವೇಳೆ ನಗಣ್ಯವಾಗುವುದು. ಇದನ್ನು ತಡೆಯಲು ಕೆಲವು ದಾರಿಗಳು ಇವೆ. ನಿಮ್ಮ ಕರುಳಿಗೆ ಭಾರ ಹಾಕುವಂತಹ ಭಂಗಿಯನ್ನು ಕಡೆಗಣಿಸಿ.

ಎಸ್ ಟಿಡಿ ಬರುವ ಭೀತಿ

ಎಸ್ ಟಿಡಿ ಬರುವ ಭೀತಿ

ಮೂರು ವರ್ಷಗಳಿಂದ ಏಕ ಸಂಗಾತಿಯ ಜತೆಗೆ ಸುರಕ್ಷಿತ ಸೆಕ್ಸ್ ನಡೆಸಿಯೂ ಈ ರೀತಿಯ ಭಾವನೆಯು ಬರುತ್ತಲಿದ್ದರೆ ಇದು ಕೇವಲ ಮನಸ್ಸಿನಲ್ಲಿರುವ ಭೀತಿಯಷ್ಟೇ. ಬಾಯಿ ಮೂಲಕ ನಡೆಸುವ ಸೆಕ್ಸ್ ನಿಂದಲೂ ಎಸ್ ಟಿಡಿ ಬರಬಹುದು. ಪಾಲುದಾರರಿಂದಲೂ ಇದು ಬರಬಹುದು. ಆದರೆ ಇದನ್ನು ಗುಣಪಡಿಸಬಹುದು ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ಹಾಗೂ ಸಂಗಾತಿಯು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

English summary

seven fears about sex that don’t let you enjoy it

Sex is awesome for most of us. However, that said, it sure is an intimate issue and may have some serious and permanent repercussions. A lot of people have sex-related fears that become deeply ingrained in their psyche, so much that they cannot enjoy sex anymore. It could be due to some past experiences that didn’t turn out good, some repercussions that they had to face or due to avid presence of dictums about one’s body. Here we take a look at such fears and what can be done to overcome them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more