For Quick Alerts
ALLOW NOTIFICATIONS  
For Daily Alerts

ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು

|

ದೇಹವು ತುಂಬಾ ಆಯಾಸಗೊಂಡಾಗ ಬೇಕಾಗುವಂತಹ ಆರಾಮ ಸಿಗುವುದು ನಿದ್ರೆಯಿಂದ. ದಿನವಿಡಿ ದಣಿದ ದೇಹಕ್ಕೆ ನಿದ್ರೆಯಿಂದ ಸಂಪೂರ್ಣ ವಿಶ್ರಾಂತಿ ಸಿಗುವುದು ಹಾಗೂ ಮರುದಿನಕ್ಕೆ ಮತ್ತೆ ದೇಹವು ಸಜ್ಜುಗೊಳ್ಳುವುದು. ಹೀಗೆ ಭೂಮಿ ಮೇಲಿನ ಪ್ರತಿಯೊಂದು ಜೀವಿ ಕೂಡ ನಿದ್ರೆ ಮಾಡುವುದು. ಅದರಲ್ಲೂ ಮನುಷ್ಯ 7-8 ಗಂಟೆಗಳ ಕಾಲ ನಿದ್ರಿಸುವನು. ನಿದ್ರೆ ನಮ್ಮ ದೇಹಕ್ಕೆ ಅತೀ ಅಗತ್ಯ. ಕೆಲವು 5-6 ಗಂಟೆಗಳ ಕಾಲ ಮಾತ್ರ ನಿದ್ರಿಸುವರು. ಇನ್ನು ಕೆಲವರು 6-7 ಗಂಟೆ ಹೀಗೆ ಇದು ಒಬ್ಬೊರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತಾ ಹೋಗುವುದು.

Seven to Eight Hours of Sleep-its will good for health

6 ಗಂಟೆಗಳ ನಿದ್ರೆ ದೇಹಕ್ಕೆ ಸಾಕು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿಯವರು ನಡೆಸಿರುವ ಅಧ್ಯಯನದ ಪ್ರಕಾರ ಕೇವಲ ಆರು ಗಂಟೆಗಳ ಕಾಲ ಮಾತ್ರ ನಿದ್ರಿಸುವುದು ತುಂಬಾ ಕೆಟ್ಟ ವಿಚಾರ. ಇದು ದೀರ್ಘಕಾಲದ ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು. ಇದರಿಂದಾಗಿ ಖಿನ್ನತೆ, ಏಕಾಗ್ರತೆ ಕೊರತೆ ಮತ್ತು ಹಸಿವನ್ನು ನಿಯಂತ್ರಿಸು ಸಾಮರ್ಥ್ಯವು ಕಡಿಮೆಯಾಗಬಹುದು. ನ್ಯಾಶನಲ್ ಸ್ಲೀಪ್ ಫೌಂಡೇಶನ್ ನ ಪ್ರಕಾರ ಆರೋಗ್ಯಕರ ವಯಸ್ಕರು ಮತ್ತು ವಯಸ್ಸಾದ ವ್ಯಕ್ತಿಗಳು ದಿನದ 7-9 ಗಂಟೆ ನಿದ್ರಿಸಬೇಕು. ಆದರೆ ಇದು ದೇಹದ ಕಾರ್ಯಚಟುವಟಿಕೆಗೆ ಅನುಗುಣವಾಗಿದೆ.

ನಿದ್ರೆಯು ಯಾಕೆ ಅಗತ್ಯ?

ನಿದ್ರೆಯು ಯಾಕೆ ಅಗತ್ಯ?

ನಿದ್ರೆಯು ಹಲವಾರು ಕಾರಣಗಳಿಂದಾಗಿ ತುಂಬಾ ಅಗತ್ಯ. ಇದು ಹಾರ್ಮೋನು ಮತ್ತು ಹಸಿವಿನ ಮಟ್ಟವನ್ನು ನಿಯಂತ್ರಿಸುವ ಅಂಶವನ್ನು ಬಿಡುಗಡೆ ಮಾಡುವಂತೆ ದೇಹಕ್ಕೆ ಸಂಕೇತಗಳನ್ನು ಕಳುಹಿಸುವುದು. ಪ್ರತಿರೋಧಕ ವ್ಯವಸ್ಥೆಯನ್ನು ಸುಧಾರಿಸುವುದು, ಆರೋಗ್ಯ ಪರಿಸ್ಥಿತಿಯ ಅಪಾಯ ತಗ್ಗಿಸುವುದು ಮತ್ತು ನೆನಪಿನ ಶಕ್ತಿ ಉಳಿಸುವುದು. 7-8 ಗಂಟೆಗಳ ನಿದ್ರೆ ದೇಹದ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುವುದು?

Most Read: ಗರ್ಭಿಣಿಯರು ಅಪ್ಪಿತಪ್ಪಿಯೂ ಇಂತಹ ಮೂರು ಹಣ್ಣುಗಳನ್ನು ತಿನ್ನಲೇಬಾರದು!

ಹಸಿವು ನಿಯಂತ್ರಿಸುವುದು

ಹಸಿವು ನಿಯಂತ್ರಿಸುವುದು

ನಿಮ್ಮ ನಿದ್ರಿಸುವ ಅಭ್ಯಾಸವು ತುಂಬಾ ಕೆಟ್ಟದಾಗಿದ್ದರೆ ಆಗ ದೇಹದ ಶಕ್ತಿ ಬಿಡುಗಡೆ ಮಟ್ಟವು ಹೆಚ್ಚಾಗುವುದು. ಇದರಿಂದ ಹಸಿವಾಗಿದೆ ಎನ್ನುವ ರಾಸಾಯನಿಕ ಬಿಡುಗಡೆ ಮಾಡಲು ಮೆದುಳು ಸಿದ್ದವಾಗುವುದು. ಇದರಿಂದ ಅತಿಯಾಗಿ ಸೇವನೆ ಮಾಡಿ, ತೂಕ ಹೆಚ್ಚಾಗುವುದು. 8.5 ಗಂಟೆಗಿಂತ ಹೆಚ್ಚು ಮಲಗುವಂತಹ ವ್ಯಕ್ತಿಗಳಲ್ಲಿ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಮತ್ತು ಎ1ಸಿ ಮೌಲ್ಯವು ಹೆಚ್ಚಾಗಿರುವುದು ಎಂದು ಅಧ್ಯಯನಗಳು ಹೇಳಿವೆ. ಎ1ಸಿ ವ್ಯಕ್ತಿಯ ಸಾಮಾನ್ಯ ರಕ್ತದ ಸಕ್ಕರೆ ಮಟ್ಟದ ಅಳತೆ. 6.5 ಗಂಟೆಗಿಂತ ಕಡಿಮೆ ಮಲಗಿರುವಂತಹ ವ್ಯಕ್ತಿಗಳಲ್ಲಿ ಎ1ಸಿ ಮಟ್ಟವು ಕಡಿಮೆಯಿರುವುದು.

ಪ್ರತಿರೋಧಕ ವ್ಯವಸ್ಥೆಗೆ ಉತ್ತಮಗೊಳಿಸುವುದು

ಪ್ರತಿರೋಧಕ ವ್ಯವಸ್ಥೆಗೆ ಉತ್ತಮಗೊಳಿಸುವುದು

ನೀವು ಮಲಗಿರುವಂತಹ ವೇಳೆ ಪ್ರತಿರೋಧಕ ವ್ಯವಸ್ಥೆಯು ಸೈಟೊಕಿನ್ ಗಳು ಎನ್ನುವ ಅಂಶವನ್ನು ಬಿಡುಗಡೆ ಮಾಡುವುದು. ಇದು ಕೋಶಗಳ ಸಂಕೇತಕ್ಕೆ ತುಂಬಾ ಒಳ್ಳೆಯದು. ಕೆಲವೊಂದು ಸೈಟೊಕಿನ್ ಗಳು ತುಂಬಾ ರಕ್ಷಣಾತ್ಮಕ ಗುಣ ಹೊಂದಿರುವುದು. ಇದು ಉರಿಯೂತ ಹಾಗೂ ಇತರ ಸೋಂಕುಗಳಿಂದ ರಕ್ಷಿಸಲು ಪ್ರತಿರೋಧಕ ವ್ಯವಸ್ಥೆಗೆ ನೆರವಾಗುವುದು. ನಿದ್ರೆಯು ಸರಿಯಾಗಿ ಆಗದೆ ಇದ್ದರೆ ಆಗ ಸೈಟೊಕಿನ್ ಗಳು ಬಿಡುಗಡೆಯಾಗಲ್ಲ. ಇದರಿಂದ ಅನಾರೋಗ್ಯ ಕಾಡುವುದು. 2013ರ ಅಧ್ಯಯನ ಪ್ರಕಾರ ನಿದ್ರೆಯು ಕಡಿಮೆಯಾದರೆ ದೇಹದಲ್ಲಿ ಉರಿಯೂತ ಅಂಶಗಳು ಹೆಚ್ಚಾಗುವುದು. ಈ ಅಂಶಗಳಿಂದಾಗಿ ಅಸ್ತಮಾ ಮತ್ತು ಅಲರ್ಜಿಗಳು ಉಂಟಾಗಬಹುದು. ರಾತ್ರಿ ವೇಳೆ ಕೇವಲ 4-5 ಗಂಟೆ ಕಾಲ ಮಲಗುವ ವ್ಯಕ್ತಿಗಳ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು.

ದೀರ್ಘಾಯುಷ್ಯ ಸಿಗುವುದು

ದೀರ್ಘಾಯುಷ್ಯ ಸಿಗುವುದು

ಕಳೆದ 25 ವರ್ಷಗಳಿಂದ ಇಟಲಿ ಮತ್ತು ಇಂಗ್ಲೆಂಡ್ ನಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ಸುಮಾರು 16 ಅಧ್ಯಯನಗಳು ಇದಕ್ಕೆ 1.3 ಮಿಲಿಯನ್ ಜನರನ್ನು ಮತ್ತು 100,000 ಸಾವುಗಳನ್ನು ಗಣನೆಗೆ ತೆಗೆದುಕೊಂಡಿವೆ. ಸ್ಲೀಪ್ ಎನ್ನುವ ಜರ್ನಲ್ ನಲ್ಲಿ ಇದರ ಅಧ್ಯಯನ ವರದಿಗಳು ಪ್ರಕಟವಾಗಿವೆ. ರಾತ್ರಿ ವೇಳೆ ಕೇವಲ 6 ಗಂಟೆ ಮಾತ್ರ ನಿದ್ರಿಸುವಂತಹ ವ್ಯಕ್ತಿಗಳು ಅಕಾಲಿಕ ಸಾವಿಗೊಳಗಾಗುವಂತಹ ಸಾಧ್ಯತೆಯು ಶೇ.12ರಷ್ಟು ಹೆಚ್ಚಾಗಿಸುವುದು. 8-9 ಗಂಟೆ ಕಾಲ ಮಲಗಿದವರಲ್ಲಿ ಈ ಅಪಾಯವು ತುಂಬಾ ಕಡಿಮೆ ಇರುವುದು.

Most Read: ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು

ನೆನಪಿನ ಚಟುವಟಿಕೆಗೆ ನೆರವು

ನೆನಪಿನ ಚಟುವಟಿಕೆಗೆ ನೆರವು

ಪ್ರತಿರೋಧಕ ವ್ಯವಸ್ಥೆ ಬಲಪಡಿಸಿ, ಹಸಿವು ನಿಯಂತ್ರಿಸುವುದರೊಂದಿಗೆ ಒಳ್ಳೆಯ ರೀತಿ ನಿದ್ರೆ ಮಾಡಿದರೆ ಅದರಿಂದ ನೆನಪಿನ ಶಕ್ತಿಯು ರಕ್ಷಿಸಲ್ಪಡುವುದು ಮತ್ತು ಬಲಗೊಳ್ಳುವುದು. ಒಳ್ಳೆಯ ನಿದ್ರೆಯು ನೆನಪಿನ ಧಾರಣ ಹೆಚ್ಚಿಸುವುದು. ನಿದ್ರೆಯು ಕಡಿಮೆಯಾಗುವಂತಹ ಜನರಲ್ಲಿ ಮಾಹಿತಿ ಗ್ರಹಿಸಲು ಕಷ್ಟವಾಗುವುದು ಮತ್ತು ಹಿಂದಿನ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವು ಕುಗ್ಗುವುದು. ಸರಿಯಾದ ನಿದ್ರೆಯಿಂದಾಗಿ ಕ್ರಿಯಾತ್ಮಕ ಆಲೋಚನೆ, ದೀರ್ಗಕಾಲದ ನೆನಪು ಮತ್ತು ನೆನಪಿನ ಸಂಸ್ಕರಣೆ ಹೆಚ್ಚಾಗುವುದು.

ಕಾಯಿಲೆಗಳ ಅಪಾಯವು ತಗ್ಗುವುದು

ಕಾಯಿಲೆಗಳ ಅಪಾಯವು ತಗ್ಗುವುದು

ನಿದ್ರೆಯ ಕೊರತೆಯಿಂದಾಗಿ ಕೆಲವೊಂದು ಆರೋಗ್ಯ ಸಮಸ್ಯೆಗಳಾಗಿರುವಂತಹ ಮಧುಮೇಹ, ಹೃದಯಕಾಯಿಲೆ, ಬೊಜ್ಜು ಮತ್ತು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳು ಕಾಣಿಸಬಹುದು. 7-8 ಗಂಟೆಗಳ ಕಾಲ ನಿದ್ರೆ ಮಾಡಿದರೆ ಆಗ ಇಂತಹ ಸಮಸ್ಯೆಗಳನ್ನು ದೂರವಿಡಬಹುದು.

English summary

Seven to Eight Hours of Sleep-its will good for health

How many hours of sleep are you getting each night? Well, the numbers may vary, some may say 5 or 6 hours and some may say 7 or 8 hours. There are many people who believe that getting 6 hours of sleep is enough. However, researchers at the University of California, San Francisco, say that sleeping only six hours is bad news as it may lead to chronic sleep deprivation. As a result, you might feel depressed, find it difficult to pay attention and decrease the ability to control your appetite.
Story first published: Saturday, October 13, 2018, 12:52 [IST]
X
Desktop Bottom Promotion