For Quick Alerts
ALLOW NOTIFICATIONS  
For Daily Alerts

ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಧರಿಸಬಾರದಂತೆ! ಯಾಕೆ ಗೊತ್ತೇ?

|

ಓರ್ವ ಮಹಿಳೆಯಾಗಿ, ಇಡಿಯ ದಿನದ ಕಾರ್ಯಕಲಾಪಗಳಿಂದ ಮಹಿಳೆಯರು ಎಷ್ಟು ಬಳಲುತ್ತಾರೆ ಎಂದು ನನಗೆ ಗೊತ್ತಿದೆ. ಸಂಜೆ ಮನೆಗೆ ತಲುಪಿದಾಕ್ಷಣ ಮೊದಲು ನೇರವಾಗಿ ಹಾಸಿಗೆಯ ಮೇಲೆ ಬಿದ್ದು ಬೆಚ್ಚನೆಯ ಹೊದಿಕೆ ಹೊದ್ದು ಮಲಗಬೇಕೆಂದೇ ಮನ ಬಯಸುತ್ತದೆ. ಅದರಲ್ಲೂ ಬಳಲಿ ಬಂದ ಸಮಯದಲ್ಲಿ ಮುಚ್ಚುತ್ತಿರುವ ಕಣ್ಣುಗಳಿಗೆ ತೆಕ್ಕೆಗೆ ತೆಗೆದುಕೊಳ್ಳಲು ಹಾಸಿಗೆ ನಿರಾಕರಿಸಲಾಗದಂತಹ ಆಹ್ವಾನ ನೀಡುತ್ತಿದ್ದರೆ ರಾತ್ರಿ ಉಡುಪುಗಳನ್ನು ಧರಿಸಲು ವ್ಯವಧಾನವಾದರೂ ಎಲ್ಲಿರುತ್ತದೆ? ಸುಸ್ತಾಗಿ ಬಂದ ಯಾರನ್ನೂ ಕೇಳಿ ನೋಡಿ, ತಾವು ತೊಟ್ಟಿರುವ ಜೀನ್ಸ್ ಅಥವಾ ದುಬಾರಿ ಉಡುಪನ್ನು ಬದಲಿಸಲೂ ಮನಸ್ಸಾಗದೇ ಹಾಗೇ ಮಲಗಿಬಿಡೋಣ ಎನಿಸುತ್ತದೆ. ಈ ಪರಿಸ್ಥಿತಿಯಲ್ಲಿ ಧರಿಸಿದ್ದ ಕಂಚುಕ ಅಥವಾ ಬ್ರಾವನ್ನೂ ಕಳಚಿ ಮಲಗಬೇಕೆಂದರೆ ಅಯ್ಯೋ, ಸಾಧ್ಯವಿಲ್ಲಪ್ಪಾ ಎಂದು ಕಳಚದೇ ಹಾಗೇ ಪವಡಿಸುವವರೇ ಹೆಚ್ಚು.

Reasons Why You Shouldn’t Wear a Bra While Sleeping!

ದಿನದ ಅವಧಿಯಲ್ಲಿ ಬ್ರಾ ಧರಿಸುವ ಪ್ರಾಮುಖ್ಯತೆಯನ್ನು ನಾವು ಅರಿತಿದ್ದರೂ ಮಲಗುವ ಸಮಯದಲ್ಲಿಯೂ ಧರಿಸಿದ್ದರೆ ಆರೋಗ್ಯದ ಮೇಲಾಗುವ ಪ್ರಭಾವಗಳ ಬಗ್ಗೆ ನಾವು ಚಿಂತಿಸುವುದೇ ಇಲ್ಲ ಅಥವಾ ಕೆಲವರಲ್ಲಿ ಮಲಗುವ ಸಮಯದಲ್ಲಿಯೂ ಬ್ರಾಧರಿಸಿಯೇ ಇದ್ದರೆ ಇವು ಜೋಲು ಬೀಳುವುದಿಲ್ಲ ಎಂಬ ಭಾವನೆಯೂ ಬಲವಾಗಿ ಮೂಡಿರುತ್ತದೆ. ಹೆಚ್ಚಿನವರು 'ವರ್ಷಗಳಿಂದ ಧರಿಸುತ್ತಾ ಬಂದಿದ್ದೇವೆ, ಏನೂ ತೊಂದರೆಯಾಗಲಿಲ್ಲ' ಎಂಬ ಭಾವನೆಯನ್ನು ಪ್ರಕಟಿಸಿದರೂ ವಾಸ್ತವದಲ್ಲಿ, ರಾತ್ರಿ ಮಲಗುವ ಸಮಯದಲ್ಲಿ ಬ್ರಾಧರಿಸಿಯೇ ಮಲಗುವುದರಿಂದ ಆರೋಗ್ಯದ ಮೇಲೆ ಕೆಲವಾರು ಪರಿಣಾಮಗಳಂತೂ ಖಂಡಿತಾ ಆಗುತ್ತವೆ. ಈ ಅಭ್ಯಾಸದಿಂದ ಎದುರಾಗುವ ತೊಂದರೆಗಳಲ್ಲಿ ಪ್ರಮುಖವಾದ ಆರನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಇನ್ನು ಮೇಲಾದರೂ ಬಿಡುಗಡೆಗೊಂಡ ಎದೆಯೊಂದಿಗೆ ಪವಡಿಸಲು ಪ್ರೇರಣೆ ನೀಡಬಹುದು:

ರಕ್ತ ಪರಿಚಲನೆಗೆ ತಡೆಯೊಡ್ಡುತ್ತದೆ

ರಕ್ತ ಪರಿಚಲನೆಗೆ ತಡೆಯೊಡ್ಡುತ್ತದೆ

ಮಲಗುವ ಸಮಯದಲ್ಲಿಯೂ ಬ್ರಾಧರಿಸಿಯೇ ಇದ್ದರೆ, ಅದರಲ್ಲೂ ವಿಶೇಷವಾಗಿ ಬ್ರಾಕೆಳಪಟ್ಟಿಯನ್ನು ಹೊಂದಿದ್ದರೆ ಇದು ಎದೆಯನ್ನು ಅತಿ ಬಿಗಿಯಾಗಿ ಹಿಡಿಯುವ ಮೂಲಕ ರಕ್ತಪರಿಚಲನೆಗೆ ಅಡ್ಡಿಯುಂಟುಮಾಡುತ್ತದೆ. ಅದರಲ್ಲೂ ಈ ಪಟ್ಟಿ ತಂತಿಯಷ್ಟು ತೆಳುಗಾಗಿದ್ದು (underwire) ಚರ್ಮಕ್ಕೆ ಒತ್ತಿದ್ದರೆ ಚರ್ಮವನ್ನು ಒತ್ತಡದಿಂದ ಹಿಸಿಯುವಷ್ಟು ಒಳನೂಕುವುದು ಮಾತ್ರವಲ್ಲ, ಅಡಿಯಲ್ಲಿರುವ ಸ್ನಾಯುಗಳಿಗೂ, ನರಗಳಿಗೂ ಒತ್ತಡ ಬಿದ್ದು ಈ ಮೂಲಕ ರಕ್ತಪರಿಚಲನೆ ಸಾಧ್ಯವಾಗದೇ ಹೋಗುತ್ತದೆ. ಹಾಗಾಗಿ ಬಿಗಿಯಾದ ಕಂಚುಕಗಳನ್ನು (ಇವುಗಳಲ್ಲಿ ಬಿಗಿಯಾದ ಕ್ರೀಡಾ ಉಡುಪುಗಳನ್ನೂ ಸೇರಿಸಬಹುದು) ಧರಿಸಿಯೇ ಮಲಗುವುದೆಂದರೆ ಅಪಾಯಕ್ಕೆ ಮುಕ್ತ ಆಹ್ವಾನ ನೀಡಿದಂತೆ. ದೇಹದ ಯಾವುದೇ ಭಾಗದ ಮೇಲೆ ಒತ್ತಡದಿಂದ ಪಟ್ಟಿಯನ್ನು ಬಿಗಿಯಾಗಿಸಿದರೆ ಈ ಮೂಲಕ ಹರಿಯುವ ರಕ್ತಪರಿಚಲನೆಗೆ ಅಡ್ಡಿಯುಂಟಾಗಿ ಮುಂದಿನ ಭಾಗ ಜೋಮು ಹಿಡಿಯುತ್ತದೆ.

ಇದರಿಂದ ಚಡಪಡಿಕೆ ಎದುರಾಗುತ್ತದೆ

ಇದರಿಂದ ಚಡಪಡಿಕೆ ಎದುರಾಗುತ್ತದೆ

ಯಾವಾಗ ಬಿಗಿಯಾದ ಪಟ್ಟಿ ಅಥವಾ ಇನ್ನಾವುದೋ ಕಾರಣದಿಂದ ರಕ್ತಪರಿಚಲನೆಗೆ ಅಡ್ಡಿಯಾಗುತ್ತದೆಯೋ, ಆಗ ಆ ರಕ್ತ ಹರಿಯಬೇಕಾಗಿದ್ದ ಭಾಗ ಅಥವಾ ಅಂಗ ಆಮ್ಲಜನಕದ ಕೊರತೆಯಿಂದ ಬಳಲುತ್ತದೆ ಹಾಗೂ ಈ ಸಂಕೇತವನ್ನು ಮೆದುಳಿಗೆ ತಲುಪಿಸುತ್ತದೆ. ಸಾಮಾನ್ಯವಾಗಿ ಈ ಸೂಚನೆಗಳು ಉರಿಯ ರೂಪದಲ್ಲಿ ಅಥವಾ ಒಳಭಾಗದಲ್ಲಿ ಚುಕ್ಕೆ ಚುಕ್ಕೆಯಾಗಿ ಸೂಜಿ ಚುಚ್ಚಿದಂತೆ ಇರುತ್ತದೆ. ಚಕ್ಕಲಮಕ್ಕಲ ಹಾಕಿ ಬಲುಹೊತ್ತು ಕುಳಿತ ಬಳಿಕ ಕಾಲು ಅಥವಾ ಪಾದಗಳಲ್ಲಿಯೂ ಹೀಗೆ ಸೂಜಿ ಚುಚ್ಚಿದಂತಾಗುವುದು ಇದೇ ಕಾರಣಕ್ಕೆ. ಅಂತೆಯೇ ಬಿಗಿಯಾದ ಬ್ರಾಧರಿಸಿ ಮಲಗಿದರೂ ಅಡ್ಡಿಯಾದ ರಕ್ತಪರಿಚಲನೆ ಮೆದುಳಿಗೆ ಸಂಕೇತಗಳನ್ನು ಒದಗಿಸಿ ಉರಿ ಮತ್ತು ಕಿರಿಕಿರಿಯನ್ನುಂಟುಮಾಡುತ್ತದೆ. ಆದರೆ ನಿದ್ದೆಯ ಭರದಲ್ಲಿ ಈ ಸಂಕೇತಗಳನ್ನು ನಿರ್ಲಕ್ಷಿಸಿದರೆ ಚಡಪಡಿಯುಂಟಾಗಿ ನಿದ್ದೆ ಬಾಧಿತವಾಗುತ್ತದೆ. ಹಾಗಾಗಿ ಬಿಗಿ ಬ್ರಾಧರಿಸಿ ಮಲಗಿದರೆ ಗಾಢ ನಿದ್ದೆಯನ್ನು ಪಡೆಯುವುದರಿಂದ ವಂಚಿತರಾಗಬೇಕಾಗಿ ಬರಬಹುದು.

Most Read:ವೀರ್ಯ ಮತ್ತು ವೀರ್ಯಾಣುಗಳ ಬಗ್ಗೆ ಇದ್ದ ಕಟ್ಟುಕತೆಗಳೆಲ್ಲಾ ಈಗ ಧೂಳಿಪಟ!

ಇದರಿಂದ ಭಾರೀ ಮಟ್ಟದ ವರ್ಣಬದಲಾವಣೆಗೊಳ್ಳಬಹುದು (Hyperpigmentation)

ಇದರಿಂದ ಭಾರೀ ಮಟ್ಟದ ವರ್ಣಬದಲಾವಣೆಗೊಳ್ಳಬಹುದು (Hyperpigmentation)

ನಮ್ಮ ದೇಹದ ಯಾವುದೋ ಒಂದು ಭಾಗವನ್ನು ಸತತವಾಗಿ ಪರಕೀಯ ವಸ್ತುವೊಂದು ತಾಕಿಯೇ ಇದ್ದರೆ ಈ ಭಾಗದ ಚರ್ಮ ದೊರಗಾಗುತ್ತದೆ ಹಾಗೂ ತನ್ಮೂಲಕ ಈ ಭಾಗದಲ್ಲಿದ್ದ ಮೆಲನಿನ್ ಎಂಬ ವರ್ಣದ್ರವ್ಯಗಳೂ ಹೆಚ್ಚು ಸಾಂದ್ರಿತವಾಗುತ್ತವೆ. ಪರಿಣಾಮವಾಗಿ ಕಪ್ಪುಕಲೆಗಳು ಅಥವಾ ಚರ್ಮದ ಬಣ್ಣ ಗಾಢವಾಗತೊಡಗುತ್ತದೆ. ಉದಾಹರಣೆಗೆ ಜೀವಮಾನವಿಡೀ ಒಂದೇ ಸರವನ್ನು ಸತತವಾಗಿ ಧರಿಸಿರುವ ಮಹಿಳೆಯರ ಕುತ್ತಿಗೆಯ ಹಿಂಭಾಗದಲ್ಲಿ ಸರ ತಾಕುವ ಭಾಗದಲ್ಲಿ ಕಪ್ಪನೆಯ ಗೆರೆಯೊಂದು ಮೂಡಿರುವುದನ್ನು ಗಮನಿಸಿ. ಬಿಗಿಯೇ ಇಲ್ಲದ ಈ ಸರವೇ ಕಪ್ಪು ಗೆರೆ ಮೂಡಿಸಲು ಶಕ್ತವಾಗಿದ್ದರೆ ಬಿಗಿಯಾದ ಕಂಚುಕದ ಪಟ್ಟಿಯನ್ನು ಸತತವಾಗಿ ಧರಿಸಿಯೇ ಇದ್ದರೆ ಗೆರೆ ಮೂಡಿಸದೇ ಇದ್ದೀತೇ? ಅಲ್ಲದೇ ದಿನದ ಚಲನೆಯ ಸಮಯದ ಸಹಿತ ರಾತ್ರಿ ಮಲಗಿದಾಗಲೂ ಸತತವಾಗಿ ಸೆಳೆತವನ್ನು ನೀಡಿಯೇ ಇರುತ್ತದೆ ಹಾಗೂ ಮಗ್ಗುಲು ಬದಲಿಸುವಾಗ ಕೊಂಚವೇ ಅಲ್ಲಾಡುತ್ತಾ ಚರ್ಮದ ಮೇಲೆ ಘರ್ಷಣೆಯುಂಟುಮಾಡುತ್ತದೆ. ಹೀಗೆ ಸತತವಾಗಿ ಘರ್ಷಿಸುವ ಪಟ್ಟಿ ಕ್ರಮೇಣ ಚರ್ಮದ ಮೇಲೆ ಶಾಶ್ವತ ಕಪ್ಪು ಬರೆಯೊಂದನ್ನು ಮೂಡಿಸಬಹುದು ಹಾಗೂ ವಿಪರೀತ ಸಂದರ್ಭಗಳಲ್ಲಿ ಚರ್ಮದಲ್ಲಿ ಈ ಗೆರೆಯುದ್ದಕ್ಕೂ ಚಿಕ್ಕ ಚಿಕ್ಕ ಸೀಳುಗಳನ್ನು ಮೂಡಿಸಬಹುದು.

ಸ್ತನಗಳಲ್ಲಿ ಶಿಲೀಂಧ್ರದ ಸೋಂಕು ಉಂಟಾಗಬಹುದು

ಸ್ತನಗಳಲ್ಲಿ ಶಿಲೀಂಧ್ರದ ಸೋಂಕು ಉಂಟಾಗಬಹುದು

ಒಂದು ವೇಳೆ ಸತತವಾಗಿ ಇಡಿಯ ದಿನ ಕಂಚುಕವನ್ನು ಧರಿಸಿಯೇ ಇದ್ದರೆ ಹಾಗೂ ಇದರಲ್ಲಿ ಕೊಂಚವಾದರೂ ಅಸಮರ್ಪಕತೆ ಇದ್ದರೆ (ಅಂದರೆ ಕೊಂಚ ಸಡಿಲವಾಗಿರುವುದು ಅಥವಾ ಕೊಂಚ ಭಾಗ ಚರ್ಮಕ್ಕೆ ತಾಗದೇ ಇರುವುದು) ಈ ಭಾಗದಲ್ಲಿ ಮೂಡಿದ ಬೆವರನ್ನು ಬಟ್ಟೆ ಹೀರಿಕೊಳ್ಳದೇ ಹೋಗುತ್ತದೆ ಹಾಗೂ ಈ ಬೆಚ್ಚನೆಯ ಮತ್ತು ತೇವವಾದ ಸ್ಥಳ ಶಿಲೀಂಧ್ರಗಳಿಗೆ ಕ್ಯಾಂಪ್ ಮಾಡಲು ಅತ್ಯುತ್ತಮ ಸ್ಥಳವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಾರಾದರೂ ರಾತ್ರಿ ಮಲಗುವ ಸಮಯದಲ್ಲಿ ಬ್ರಾಧರಿಸಿಯೇ ಇದ್ದರೆ ಹಾಗೂ ಇವು ಅಸಮರ್ಪಕವಾಗಿದ್ದರೆ ಬೆವರಿದ್ದ ತ್ವಚೆಯಲ್ಲಿ ಶಿಲೀಂಧ್ರದ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ.

Most Read: ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!

ಚರ್ಮದ ಉರಿಗೆ ಕಾರಣವಾಗಬಹುದು

ಚರ್ಮದ ಉರಿಗೆ ಕಾರಣವಾಗಬಹುದು

ರಾತ್ರಿ ಮಲಗುವ ಸಮಯದಲ್ಲಿ ಬ್ರಾಧರಿಸಿಯೇ ಮಲಗುವುದರಿಂದ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಕಂಚುಕದ ಪಟ್ಟಿಗಳು, ಹುಕ್ಸ್ ಗಳು ಹಾಗೂ ಹೊಲಿಗೆಯ ಭಾಗ ಚರ್ಮದ ಮೇಲೆ ಕೇಂದ್ರೀಕೃತ ಒತ್ತಡ ಹೇರುತ್ತವೆ. ಅದರಲ್ಲೂ ತಂತಿಯಂತಹ ಕೆಳಪಟ್ಟಿ (underwire) ಇರುವ ಕಂಚುಕಗಳು ಅತಿ ಹೆಚ್ಚು ಒತ್ತಡ ಹೇರುತ್ತವೆ. ಸಾಮಾನ್ಯವಾಗಿ ದಿನದ ಸಮಯದಲ್ಲಿ ಈ ಒತ್ತಡ ಗಮನಕ್ಕೆ ಬಾರದೇ ಹೋಗುತ್ತದೆ. ಆದರೆ ರಾತ್ರಿ ಪವಡಿಸಿದ ಸಮಯದಲ್ಲಿ ಮೈಭಾರ ಈ ಪಟ್ಟಿಗಳ ಮೇಲೆ ಬಿದ್ದು ಚರ್ಮದ ಮೇಲೆ ಅತಿ ಹೆಚ್ಚು ಒತ್ತಡ ಹೇರುತ್ತವೆ. ಇದರ ಪರಿಣಾಮವಾಗಿ ಬಿಗಿಯಾದ ಭಾಗದಲ್ಲಿ ಉರಿ ಕಾಣಿಸಿಕೊಂಡು ತುರಿಕೆ, ಕಿರಿಕಿರಿ ಅನುಭವಿಸಬೇಕಾಗಿ ಬರಬಹುದು.

ಸ್ತನಗಳ ಶರೀರಶಾಸ್ತ್ರದ ಮೇಲೆ ಪ್ರಭಾವ ಬೀರಬಹುದು

ಸ್ತನಗಳ ಶರೀರಶಾಸ್ತ್ರದ ಮೇಲೆ ಪ್ರಭಾವ ಬೀರಬಹುದು

ರಾತ್ರಿಯ ಸಮಯದಲ್ಲಿ ಎದೆಯನ್ನು ಬಿಗಿಯಾಗಿ ಅಪ್ಪುವ ಬ್ರಾಗಳನ್ನು ಧರಿಸಿ ಮಲಗುವುದರಿಂದ ಶರೀರದ ದುಗ್ಧಗ್ರಂಥಿಗಳ ಮೇಲೆ ಋಣಾತ್ಮಕ ಪರಿಣಾಮವುಂಟಾಗುತ್ತದೆ. ಈ ಭಾಗದಲ್ಲಿ ರಕ್ತಪರಿಚಲನೆ ಮತ್ತು ದುಗ್ಧನಾಳಗಳ ಮೂಲಕ ದುಗ್ಧಗ್ರಂಥಿಗಳ ಪರಿಚಲನೆಗೆ ಅಡ್ಡಿಯುಂಟಾಗುತ್ತದೆ. ಬಿಗಿಯಾದ ಕಂಚುಕದಿಂದ ವಿಶೇಷವಾಗಿ ಸ್ತನಗಳಲ್ಲಿ ದುಗ್ಧರಸದ ಚಲನೆಗೆ ಅಡ್ಡಿಯಾಗಿ ಹೊರಹೋಗದೇ ಅಲ್ಲೇ ಉಳಿದುಬಿಡುತ್ತವೆ. ಸ್ತನಗಳ ಒಳಭಾಗದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಈ ದುಗ್ಧರಸಗಳು ಹೊರಹರಿಯಬೇಕಾಗಿರುವುದು ಅತಿ ಅವಶ್ಯವಾಗಿದ್ದು ಇದಕ್ಕೆ ಉಂಟಾದ ತಡೆಯಿಂದ ಕಲ್ಮಶಗಳು ಹೊರಹೋಗದೇ ಹಾಗೇ ಉಳಿಯುತ್ತವೆ ಹಾಗೂ ಪರಿಣಾಮವಾಗಿ ಯಕೃತ್, ಮೂತ್ರಪಿಂಡಗಳು ಹಾಗೂ ಇತರ ಪ್ರಮುಖ ಅಂಗಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ಈ ಕಲ್ಮಶಗಳು ಹೀಗೇ ಸ್ತನಗಳ ಒಳಗೇ ಸಂಗ್ರಹವಾಗುತ್ತಾ ಹೋದಂತೇ ಸ್ತನಗಳ ಗಾತ್ರವೂ ಅಸಹಜವಾಗಿ ಉಬ್ಬುವ ಹೊರತಾಗಿ ಕಲ್ಮಶಗಳ ಸಾಂದ್ರತೆ ಹೆಚ್ಚಿದಷ್ಟೂ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

Most Read: 'ಎ' ಅಕ್ಷರದಿಂದ ಆರಂಭವಾಗುವ ಹೆಸರಿನವರ ನಡವಳಿಕೆ ಹೀಗಿರುತ್ತದೆ ನೋಡಿ...

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿದ ವೈದ್ಯಕೀಯ ಮಾನವಶಾಸ್ತ್ರಜ್ಞೆ, ಸ್ತನ ಕ್ಯಾನ್ಸರ್ ಸಂಶೋಧಕಿ ಹಾಗೂ 'ಡ್ರೆಸ್ಡ್ ಟು ಕಿಲ್' ಎಂಬ ಮಹತ್ವದ ಗ್ರಂಥದ ಲೇಖಕಿಯಾಗಿರುವ ಸಿಡ್ನಿ ರಾಸ್ ಸಿಂಗರ್ ರವರು ಹೀಗೆ ವಿವರಿಸುತ್ತಾರೆ : "ಕಂಚುಕಗಳನ್ನು ಧರಿಸಿಯೇ ಮಲಗುವುದು ನೀವು ನಿಮ್ಮ ಸ್ತನಗಳಿಗೆ ಮಾಡುವ ಘೋರ ಅಪಾಯವಾಗಿದೆ. ಬ್ರಾಧರಿಸದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎದುರಾಗುವುದು ಪುರುಷರಲ್ಲಿ ಸ್ತನ ಕ್ಯಾನ್ಸರ್ ಎದುರಾಗುವ ಸಾಧ್ಯತೆಯಷ್ಟೇ ಕಡಿಮೆ ಇರುತ್ತದೆ. ಅಂದರೆ, ನೀವು ಎಷ್ಟು ಬಿಗಿಯಾದ ಬ್ರಾಧರಿಸುತ್ತೀರೋ ಹಾಗೂ ದಿನದ ಎಷ್ಟು ಘಂಟೆಗಳ ಕಾಲ ಧರಿಸಿರುತ್ತೀರೋ ಆ ಪ್ರಕಾರ ಈ ಸಾಧ್ಯತೆಯೂ ಹೆಚ್ಚುತ್ತದೆ. 24/7 ಸಮಯ ಬ್ರಾಧರಿಸಿಯೇ ಇರುವ ಮಹಿಳೆಯರಲ್ಲಿ ಈ ಸಾಧ್ಯತೆ ಬ್ರಾಧರಿಸದೇ ಇರುವ ಮಹಿಳೆಯರಿಗಿಂತ ನೂರು ಪಟ್ಟು ಹೆಚ್ಚಿರುತ್ತದೆ. ಕಂಚುಕದ ಒತ್ತಡದಿಂದ ಸ್ತನಗಳ ಅಂಗಾಂಶಗಳ ಮೇಲೆ ಬೀಳುವ ಒತ್ತಡದ ಪರಿಣಾಮವಾಗಿ ಕೆಂಪು ಚುಕ್ಕೆ ಅಥವಾ ಕಲೆಗಳು ಅಥವಾ ಚರ್ಮದಲ್ಲಿ ಪಟ್ಟಿಯ ಅಚ್ಚುಗಳು ಪ್ರಕಟಗೊಂಡರೆ ಒತ್ತಿದ್ದ ಭಾಗದ ಮೂಲಕ ಹೊರಹರಿಯದ ದ್ರವ ಮತ್ತು ವಿಷಕಾರಿ ವಸ್ತುಗಳು ಒಳಗೇ ಒಳಿದು ನೋವು, ಕೀವುಗುಳ್ಳೆಗಳು ಹಾಗೂ ಅಂತಿಮವಾಗಿ ಕ್ಯಾನ್ಸರ್ ಸಹಾ ಉಂಟುಮಾಡಬಹುದು. ಒಂದು ವೇಳೆ ನಿಮ್ಮ ಬ್ರಾನಿಮಗೇನು ತೊಂದರೆಯೊಡ್ಡುತ್ತಿದೆ ಎಂಬುದನ್ನು ನೀವೇ ತಿಳಿಯಬೇಕಾದರೆ ಒಂದು ತಿಂಗಳು ಸತತವಾಗಿ ಬ್ರಾಧರಿಸದೇ ಇರಿ ಹಾಗೂ ಇದರ ಪರಿಣಾಮವನ್ನು ಪ್ರತ್ಯಕ್ಷವಾಗಿ ಕಂಡುಕೊಳ್ಳಿ"

English summary

Reasons Why You Shouldn’t Wear a Bra While Sleeping!

As a woman, I know the feeling of being completely exhausted after a long day, flopping straight into my bed when I get home, curling up into a ball with the covers pulled tight, and falling asleep. Who can think about pajamas when your bed looks so comfy and irresistible? If we’re tired enough, we can fall asleep in jeans, a dress, you name it. We can even fall asleep wearing a bra.
X
Desktop Bottom Promotion