For Quick Alerts
ALLOW NOTIFICATIONS  
For Daily Alerts

ಹಣ್ಣುಗಳ ರಾಜ 'ಮಾವು' ಈ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!

|

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ, ಜೊತೆಯಲ್ಲಿಯೇ ಬರುತ್ತಿದೆ ಉಪ್ಪೂಕಾರ ಹಚ್ಚಿದ ಸೌತೇಕಾಯಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿದ ಮಜ್ಜಿಗೆ, ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನುವ ಗಿಳಿಮೂತಿ ಮಾವಿನ ಕಾಯಿ... ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ತರಕಾರಿ ಅಂಗಡಿಗಳಲ್ಲಿ ಹಸಿರು ತರಕಾರಿಯ ನಡುವೆ ಕಾಡುಮಾವು ಮತ್ತಿತರ ಹಸಿರು ಮಾವುಗಳೂ ಕಂಡುಬರುತ್ತವೆ.

ಇದನ್ನು ಕಂಡಾಕ್ಷಣ ಗರ್ಭಿಣಿಯರಿಗೆ ಕಡ್ಡಾಯವಾಗಿ ಹುಳಿ ಮಾವನ್ನು ತಿನ್ನಲೇಬೇಕೆಂಬ ಬಯಕೆಯಾಗುತ್ತದೆ. ಉಳಿದವರಿಗೂ ಹಸಿರಾದ ಹುಳಿಮಾವನ್ನು ಉಪ್ಪು ಖಾರ ಹಾಕಿ ತಿನ್ನುವ ಬಯಕೆಯಾಗುತ್ತದೆ. ಹಾದಿಬದಿಯಲ್ಲಿ ನಿಧಾನಕ್ಕೆ ಒಂದೊಂದಾಗಿ ಮಾವಿನ ಕಾಯಿಗಳ ಗಾಡಿಗಳು ಕಾಣಿಸಿಕೊಳ್ಳುತ್ತವೆ. ಅಗ್ಗವೂ, ಆರೋಗ್ಯಕರವೂ ಆಗಿರುವ ಈ ಹಸಿರು ಮಾವಿನ ಕಾಯಿಗಳು ಸಮಾಜದ ಎಲ್ಲರ ಅಚ್ಚುಮೆಚ್ಚಿನ ಅಹಾರವಾಗಿದೆ. ಹಣ್ಣುಗಳ ರಾಜ ಮಾವು. ಏಕೆಂದರೆ ಸಿಹಿಯಲ್ಲಿಯೂ, ಪೋಷಕಾಂಶಗಳಲ್ಲಿಯೂ ಮಾವಿಗೆ ಸರಿಸಾಟಿಯಾದ ಹಣ್ಣು ಇನ್ನೊಂದಿಲ್ಲ. ಆದ್ದರಿಂದ ಮಾವಿನ ಕಾಯಿ ಮತ್ತು ಹಣ್ಣಿನ ಆಯ್ಕೆ ಮಾಡಿಕೊಳ್ಳಬೇಕಾದರೆ ಆರೋಗ್ಯದ ಬಗ್ಗೆ ಕೊಂಚ ಗಮನವಿಡುವುದು ಅಗತ್ಯ. ಮಾವಿನ ಹಣ್ಣಿನಲ್ಲಿರುವ ಸಿಹಿಯ ಕಾರಣ ಮಧುಮೇಹಿಗಳಿಗೆ ತರವಲ್ಲ. ಆದರೆ ಮಧುಮೇಹಿಗಳು ಮಾವಿನಕಾಯಿಯನ್ನು ಸೇವಿಸಬಹುದು.

ಮಾವಿನ ಹಣ್ಣುಗಳಲ್ಲಿರುವ ಪೋಷಕಾಂಶಗಳ ಕಾರಣ ತೂಕ ಹೆಚ್ಚುವ ಸಂಭವವಿರುವುದರಿಂದ ತೂಕ ಇಳಿಸಿಕೊಳ್ಳುವ ವ್ಯಾಯಾಮದ ಮತ್ತು ಆಹಾರದ ಅವಧಿಯಲ್ಲಿರುವವರು ಹಣ್ಣಿನ ಬದಲು ಕಾಯಿ ತಿನ್ನುವುದು ಒಳ್ಳೆಯದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಕಾಯಿಯನ್ನು ತಿಂದರೆ ಹುಳಿರಸದ ಪ್ರಮಾಣ ಹೆಚ್ಚಾಗುವ ಕಾರಣ ಗಂಟಲ ಕೆರೆತ, ಅಜೀರ್ಣ, ಅತಿಸಾರ, ಮಲಬದ್ದತೆ, ಹೊಟ್ಟೆನೋವು ಮೊದಲಾದ ತೊಂದರೆಗಳು ಎದುರಾಗಬಹುದು. ಇನ್ನೊಂದು ವಿಷಯವೆಂದರೆ ಮಾವಿನ ಕಾಯಿಯನ್ನು ಕತ್ತರಿಸಿದಾಗ ಒಸರುವ ಹಾಲಿನಂತಹ ರಸ (ವಿಶೇಷವಾಗಿ ತೊಟ್ಟಿನ ಬಳಿ) ಅತಿ ಆಮ್ಲೀಯವಾಗಿದ್ದು ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟುಮಾಡುತ್ತದೆ. ಬಾಯಿಯಲ್ಲಿ ನೇರವಾಗಿ ಈ ರಸ ಬಿದ್ದರೆ ಬಾಯಿಯಲ್ಲಿಯೂ ಸೋಂಕು ಉಂಟುಮಾಡಬಹುದು. ಆದ್ದರಿಂದ ಈ ರಸ ಪೂರ್ಣವಾಗಿ ಸೋರಿ ಹೋಗುವುದನ್ನು ಖಚಿತಪಡಿಸಿದ ಬಳಿಕವೇ ತಿನ್ನುವುದು ಉತ್ತಮ. ಮಾವಿನ ಕಾಯಿಯ ಉತ್ತಮ ಗುಣಗಳನ್ನು ಈಗ ನೋಡೋಣ....

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಮಾವಿನಲ್ಲಿ ಪೆಕ್ಟಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೆಕ್ಟಿನ್ ಅಂಶ ಪ್ರೊಸ್ಟ್ರೇಟ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

ಅನಿಮೀಯವನ್ನು ಹೊಡೆದೋಡಿಸುತ್ತದೆ

ಅನಿಮೀಯವನ್ನು ಹೊಡೆದೋಡಿಸುತ್ತದೆ

ಮಾವಿನಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಅನಿಮೀಯಾದಿಂದ ಬಳಲುತ್ತಿರುವವರಿಗೆ ಉಪಯೋಗಕಾರಿಯಾಗಿದೆ. ಮಾವಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಕಣಗಳು ಹೆಚ್ಚಾಗಿ ಅನಿಮೀಯಾವನ್ನು ನಿವಾರಿಸುತ್ತದೆ.

ಗರ್ಭಿಣಿಯರಿಗೆ ಉಪಯೋಗಕಾರಿ

ಗರ್ಭಿಣಿಯರಿಗೆ ಉಪಯೋಗಕಾರಿ

ಮಾವಿನಹಣ್ಣು ಗರ್ಭಿಣಿಯರಿಗೆ ಅತ್ಯುಪಯುಕ್ತ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಇದು ಗರ್ಭಿಣಿಯರಿಗೆ ಅತ್ಯಗತ್ಯ. ವೈಧ್ಯರು ಕೂಡ ಕಬ್ಬಿಣಾಂಶದ ಮಾತ್ರೆಗಳನ್ನು ಶಿಫಾರಸು ಮಾಡುತ್ತಿರುತ್ತಾರೆ. ಆ ಮಾತ್ರೆಗಳನ್ನು ಸೇವಿಸುವ ಬದಲು ನೀವು ರುಚಿಯಾದ ಮಾವನ್ನು ಸೇವಿಸಿ ಕಬ್ಬಿಣಾಂಶವನ್ನು ಪಡೆಯಬಹುದು.

ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ

ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ

ದಿನದ ಚಟುವಟಿಕೆಯ ಬಳಿಕ ಮಧ್ಯಾಹ್ನದ ಊಟದ ನಂತರ ಜೋಮು ಹತ್ತುವುದು ಸಾಮಾನ್ಯ. ದೇಹದಿಂದ ಶಕ್ತಿಯೂ ಉಡುಗಿದಂತೆ ಭಾಸವಾಗುತ್ತದೆ. ಊಟದ ಬಳಿಕ ಕೆಲವು ತುಂಡು ಮಾವಿನ ಕಾಯಿಗಳನ್ನು ತಿನ್ನುವುದರಿಂದ ದೇಹ ಮೊದಲಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ದೇಹದ ಲಿವರ್‌ಗೆ ಒಳ್ಳೆಯದು

ದೇಹದ ಲಿವರ್‌ಗೆ ಒಳ್ಳೆಯದು

ಲಿವರ್ ತೊಂದರೆಗಳಿಗೆ ಮಾವಿನ ಕಾಯಿ ಉತ್ತಮವಾದ ಔಷಧಿರೂಪದ ಆಹಾರವಾಗಿದೆ. ಹಸಿಮಾವಿನ ಕಾಯಿಯನ್ನು ಜಗಿದು ನುಂಗುವುದರಿಂದ ಪಿತ್ತಕೋಶ ಹೆಚ್ಚಿನ ಪಿತ್ತರಸವನ್ನು ಸ್ರವಿಸಲು ನೆರವಾಗುತ್ತದೆ. ಈ ರಸವು ಕರುಳಿನಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಬೆವರುಸಾಲೆಯಿಂದ ರಕ್ಷಿಸುತ್ತದೆ

ಬೆವರುಸಾಲೆಯಿಂದ ರಕ್ಷಿಸುತ್ತದೆ

ಬೇಸಿಗೆಯ ಪರ್ಯಾಯ ಪರಿಣಾಮಗಳಾದ ಬೆವರುಸಾಲೆ ಮತ್ತು ಬೆವರುನಾತದಿಂದ ಮುಕ್ತಿ ಪಡೆಯಲು ಮಾವಿನಕಾಯಿಯ ಸೇವನೆ ಉತ್ತಮವಾಗಿದೆ.ಮಾವಿನ ಹಣ್ಣಿನಲ್ಲಿ ಬಿಸಿಲಿನ ಝಳವನ್ನು ಚರ್ಮವು ಸಹಿಸಲು ಸಾಧ್ಯವಾಗಿಸಲು ಹಲವು ಪೋಷಕಾಂಶಗಳಿವೆ.

ರಕ್ತದ ಉತ್ಪಾದನೆ ಮತ್ತು ನರಗಳನ್ನು ದೃಢಗೊಳಿಸಲು ಉತ್ತಮವಾಗಿದೆ

ರಕ್ತದ ಉತ್ಪಾದನೆ ಮತ್ತು ನರಗಳನ್ನು ದೃಢಗೊಳಿಸಲು ಉತ್ತಮವಾಗಿದೆ

ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ. ಕಾರಣದಿಂದ ಅಸ್ಥಿಮಜ್ಜೆಯಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕರಿಸುತ್ತದೆ. ಜೊತೆಗೇ ನರಗಳ ಒಳಭಾಗದ ಜೀವಕೋಶಗಳು ಹೆಚ್ಚು ಬಲಗೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ನೀಡುವುದರಿಂದ ರಕ್ತಸಂಚಾರ ಸುಗಮಗೊಳ್ಳುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಾರು ಕಡಿಮೆ ಇರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಒಂದು ವೇಳೆ ಮಲವಿಸರ್ಜನೆ ಸಮಯಕ್ಕೆ ಸರಿಯಾಗಿ ಆಗದೇ ಇದ್ದರೆ ಮತ್ತು ಕಷ್ಟಕರವಾಗಿದ್ದರೆ ಹಸಿಮಾವಿನ ಕೆಲವು ತುಂಡುಗಳನ್ನು ಸೇವಿಸುವುದರಿಂದ ಶೀಘ್ರ ಪರಿಹಾರ ದೊರಕುತ್ತದೆ. ಕೆಲವು ಮಾವಿನ ಕಾಯಿಯ ತುಂಡುಗಳಿಗೆ ಉಪ್ಪು ಚಿಮುಕಿಸಿ ಕೊಂಚ ಜೇನು ಸವರಿ ತಿನ್ನುವುದರಿಂದ ಉಪಶಮನ ದೊರಕುತ್ತದೆ.

ಅತಿ ಹೆಚ್ಚಾಗಿ ಬೆವರುವುದನ್ನು ತಡೆಯುತ್ತದೆ

ಅತಿ ಹೆಚ್ಚಾಗಿ ಬೆವರುವುದನ್ನು ತಡೆಯುತ್ತದೆ

ಬೇಸಿಗೆಯಲ್ಲಿ ಬೆವರುವುದು ದೇಹದ ತಾಪಮಾನವನ್ನು ಉಳಿಸಿಕೊಳ್ಳಲು ಅಗತ್ಯವಾಗಿದೆ. ಆದರೆ ಇತರ ಕಾರಣಗಳಿಂದ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಬೆವರು ಸುರಿಯುತ್ತಿದ್ದರೆ ಆ ಬೆವರಿನ ಮೂಲಕ ಉಪ್ಪು ಮತ್ತು ಕಬ್ಬಿಣಗಳೂ ಸೋರಿ ಹೋಗುತ್ತವೆ. ಮಾವಿನಕಾಯಿ ಈ ಕೊರತೆಯನ್ನು ಸರಿದೂಗಿಸುತ್ತದೆ. ದೇಹದ ತಾಪಮಾನವನ್ನು ಸಮದೂಗಿಸಿಕೊಳ್ಳಲು ಅಗತ್ಯವಿರುವಷ್ಟೇ ಬೆವರು ಹರಿಯಲು ಮಾವಿನ ಪೋಷಕಾಂಶಗಳು ನೆರವಾಗುತ್ತವೆ.

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೆ ಸೂಕ್ತ

ಸಂಶೋಧನೆಗಳ ಪ್ರಕಾರ ಮಾವಿನಹಣ್ಣು ಪ್ರಾಕೃತಿಕವಾಗಿ ಮಧುಮೇಹದ ಮೇಲೆ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಧೃಢಪಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದು ಎಂದು ಹೇಳುವುದು ಕೇವಲ ಒಂದು ಮೂಢನಂಬಿಕೆ. ಮಧುಮೇಹಿಗಳು ಇದರ ಸಿಹಿಗೆ ಭಯಪಡುತ್ತಾರೆ. ಆದರೆ ಸಂಶೋಧನೆಗಳು ಇದರಲ್ಲಿರುವ ಅಂಶಗಳು ಮಧುಮೇಹವನ್ನು ತಡೆಯಲು ಸಹಕರಿಸುತ್ತವೆ ಎಂದು ತಿಳಿಸಿದೆ.

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಹಲ್ಲು ಮತ್ತು ಒಸಡುಗಳ ನಡುವಣ ಸಂದುಗಳಲ್ಲಿ ಆಹಾರ ಸಂಗ್ರಹವಾಗಿ ಕಾಲಕಾಲಕ್ಕೆ ಹಲ್ಲುಜ್ಜದೇ ಇದ್ದರೆ ಸೋಂಕು ಉಂಟಾಗಿ ಒಸಡುಗಳು ಸಡಿಲಗೊಳ್ಳುತ್ತವೆ. ಹಸಿಮಾವಿನ ಕಾಯಿಯನ್ನು ತಿನ್ನುವುದರಿಂದ ಒಸಡುಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಸಂದುಗಳನ್ನು ಕಿರಿದುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ದುರ್ವಾಸನೆಯೂ ಕಡಿಮೆಯಾಗುತ್ತದೆ.

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

ಲೈಂಗಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ

ಲೈಂಗಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ

ಮಾವಿನಹಣ್ಣಿನಲ್ಲಿ ವಿಟಮಿನ್ ಇ ಇರುತ್ತದೆ. ವಿಟಮಿನ್ ಇ ಮತ್ತು ಲೈಂಗಿಕ ವಾಂಛೆಯ ನಡುವೆ ಒಂದು ಅವಿನಾಭಾವ ಸಂಬಂಧವಿರುತ್ತದೆ. ಆದರೆ ಮಾವಿನ ಹಣ್ಣನ್ನು ಸೇವಿಸುವುದರಿಂದ ಇದನ್ನು ನೀವು ಪಡೆಯಬಹುದು.

ಬಿಸಿಲಿನ ಹೊಡೆತಕ್ಕೆ ಪರಿಹಾರ

ಬಿಸಿಲಿನ ಹೊಡೆತಕ್ಕೆ ಪರಿಹಾರ

ಮಾವಿನ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹ ತಂಪಾಗುತ್ತದೆ. ಆಯುರ್ವೇದದ ಪ್ರಕಾರ ಸಹ ಸೂರ್ಯನ ಬಿಸಿಲಿನ ಹೊಡೆತವನ್ನು ತಡೆಯಲು ನೀವು ಮಾವಿನ ಹಣ್ಣನ್ನು ಸೇವಿಸಬಹುದು. ಮಾವು ಮೂತ್ರಪಿಂಡಗಳಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಹಲ್ಲು ಮತ್ತು ಒಸಡುಗಳ ನಡುವಣ ಸಂದುಗಳಲ್ಲಿ ಆಹಾರ ಸಂಗ್ರಹವಾಗಿ ಕಾಲಕಾಲಕ್ಕೆ ಹಲ್ಲುಜ್ಜದೇ ಇದ್ದರೆ ಸೋಂಕು ಉಂಟಾಗಿ ಒಸಡುಗಳು ಸಡಿಲಗೊಳ್ಳುತ್ತವೆ. ಹಸಿಮಾವಿನ ಕಾಯಿಯನ್ನು ತಿನ್ನುವುದರಿಂದ ಒಸಡುಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಸಂದುಗಳನ್ನು ಕಿರಿದುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ದುರ್ವಾಸನೆಯೂ ಕಡಿಮೆಯಾಗುತ್ತದೆ.

English summary

Reasons Why You Need a Mango Every Day

There are many amazing health benefits of mango. Mango is called the king of all fruits. Not only is mango delicious and refreshingly-filling, it also carries a lot of goodness inside its flesh. It is an important fruit to maintain health and wellness. It is rich in protein, fibers, vitamin C, vitamin A, folic acid, vitamin B-6, vitamin K and potassium. Consuming mangoes reduces risk of many lifestyle-related health conditions.
X
Desktop Bottom Promotion