For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರಂತೆ!

|

ಮನುಷ್ಯನೆಂದ ಮೇಲೆ ಅವರಿಗೆ ಹಲವಾರು ರೀತಿಯ ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತದೆ. ಇದರಲ್ಲಿ ಲೈಂಗಿಕ ಕ್ರಿಯೆ ಕೂಡ ಒಂದು. ಪ್ರಕೃತಿ ಸಹಜವಾಗಿ ಬಂದಿರುವ ಇದು ಮನುಷ್ಯನ ಜೀವನದ ಒಂದು ಅಂಗವು ಹೌದು. ಹಸಿವಾದಾಗ ಊಟ, ಬಾಯಾರಿಕೆಯಾದಾಗ ನೀರು ಕುಡಿಯುವಂತೆ ಲೈಂಗಿಕ ಆಕಾಂಕ್ಷೆ ಕೂಡ ಇರುವುದು. ಊಟ ಹಾಗೂ ನೀರು ಕುಡಿಯದೇ ಇದ್ದಾಗ ಹಲವಾರು ರೀತಿಯ ಅಡ್ಡಪರಿಣಾಮಗಳು ಕಂಡುಬರುವುದು. ಲೈಂಗಿಕ ಜೀವನವು ಸರಿಯಾಗಿ ಇರದೇ ಇದ್ದಾಗ ಸಮಸ್ಯೆಯು ಕಂಡುಬರುವುದು. ಲೈಂಗಿಕ ಕ್ರಿಯೆ ಎನ್ನುವುದು ತುಂಬಾ ಸಂತೋಷಕರ.

ಇದರಿಂದಾಗಿ ಸಂತಾನೋತ್ಪತ್ತಿ ಇಚ್ಛೆ ಇಲ್ಲದೆ ಇದ್ದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವನು. ನಮಗೆ ಸಾಮಾನ್ಯವಾಗಿ ಹಸಿವಾಗದೆ ಇರುವಾಗ ವೈದ್ಯರಲ್ಲಿಗೆ ಹೋಗಿ ಹೇಗೆ ಪರೀಕ್ಷೆ ಮಾಡುಕೊಳ್ಳುತ್ತೇವೆಯೋ ಅದೇ ರೀತಿಯಾಗಿ ಕಾಮಾಸಕ್ತಿಯು ಕಡಿಮೆಯಾಗಿದ್ದರೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮನಸ್ಸಿಲ್ಲದೇ ಇದ್ದರೆ ಇದಕ್ಕೆ ಕೆಲವು ವೈದ್ಯಕೀಯ ಕಾರಣಗಳು ಕೂಡ ಇದೆ. ಲೈಂಗಿಕಾಸಕ್ತಿ ಕಡಿಮೆಯಾಗಲು ಇರುವ ಕೆಲವು ವೈದ್ಯಕೀಯ ಕಾರಣಗಳು...

ಯೋನಿ ಒಣಗುವುದು

ಯೋನಿ ಒಣಗುವುದು

ಮಹಿಳೆಯರಿಗೆ ಲೈಂಗಿಕ ಕ್ರಿಯೆಯು ನೋವಿಲ್ಲದೆ, ಸುಲಭ ಹಾಗೂ ಆನಂದಿಸುವಂತೆ ಆಗಲು ಅವರ ಯೋನಿಯು ಸರಿಯಾಗಿ ಲ್ಯೂಬ್ರಿಕೇಟ್ ಆಗಿರಬೇಕು. ಇಲ್ಲವಾದಲ್ಲಿ ಮಹಿಳೆಯರಲ್ಲಿ ನೋವು ಅಥವಾ ಉರಿಯುವ ಅನುಭವವಾಗುವುದು. ಸೋಂಕು, ಹಾರ್ಮೋನು ವೈಪರೀತ್ಯ ಇತ್ಯಾದಿಗಳಿಂದ ಯೋನಿಯು ಒಣಗುತ್ತಲಿದ್ದರೆ ಆಗ ಲೈಂಗಿಕ ಕ್ರಿಯೆಯು ತುಂಬಾ ನೋವಿನಿಂದ ಕೂಡಿರುವುದು ಮತ್ತು ಇದನ್ನು ಕಡೆಗಣಿಸಬೇಕು.

ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಿರುವುದು

ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಿರುವುದು

ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು, ಅದರಲ್ಲೂ ಪುರುಷರಲ್ಲಿ ತುಂಬಾ ಕಡಿಮೆಯಾಗಿದ್ದರೆ ಆಗ ಇದು ಕಾಮಾಸಕ್ತಿ ಮತ್ತು ಲೈಂಗಿಕಾಸಕ್ತಿ ಕಡಿಮೆ ಮಾಡುವುದು. ಈ ಹಾರ್ಮೋನು ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವುದು, ನಿಮಿರುವಿಕೆ ಉತ್ತೇಜಿಸುವುದು ಮತ್ತು ಸಂತಾನೋತ್ಪತ್ತಿಯು ಹೆಚ್ಚಿಸುವುದು. ನಿಮಗೆ ಲೈಂಗಿಕಾಸಕ್ತಿ ಕಡಿಮೆ ಇದ್ದರೆ ಆಗ ನೀವು ಟೆಸ್ಟೋಸ್ಟೆರಾನ್ ಮಟ್ಟವನ್ನು ಪರೀಕ್ಷಿಸುವುದು ಒಲಿತು.

ಲೈಂಗಿಕ ಕ್ರಿಯೆಯ ಬಗ್ಗೆ ತಪ್ಪು ತಿಳುವಳಿಕೆ

ಲೈಂಗಿಕ ಕ್ರಿಯೆಯ ಬಗ್ಗೆ ತಪ್ಪು ತಿಳುವಳಿಕೆ

ಲೈಂಗಿಕಾಸಕ್ತಿ ಕಡಿಮೆಯಾಗಿ, ಲೈಂಗಿಕ ಕ್ರಿಯೆಯಿಂದ ದೂರ ಉಳಿಯಲು ಮಾನಸಿಕವಾದ ಕಾರಣ ಇದಾಗಿದೆ. ವ್ಯಕ್ತಿಯೊಬ್ಬು ಹುಟ್ಟಿ ಬೆಳೆಯುವ ಕುಟುಂಬದಲ್ಲಿ ಲೈಂಗಿಕತೆಯು ಕೊಳಕು, ತಪ್ಪು ಮತ್ತು ನಾಚಿಕಗೇಡು ಎಂದು ಆತನಿಗೆ ಕಲಿಸಿದ್ದರೆ ಆಗ ಇದು ಮಾನಸಿಕ ಪರಿಣಾಮ ಬೀರುವುದು. ಮಾನಸಿಕ ಚಿಕಿತ್ಸೆ ಮತ್ತು ಲೈಂಗಿಕತೆ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದು ಇಂತಹ ಸಮಸ್ಯೆ ನಿವಾರಿಸುವುದು.

ಖಿನ್ನತೆ

ಖಿನ್ನತೆ

ಜನರಲ್ಲಿ ಕಾಮಾಸಕ್ತಿ ಕಡಿಮೆಯಾಗಲು ಮತ್ತೊಂದು ಕಾರಣವೇ ಖಿನ್ನತೆ. ಖಿನ್ನತೆಯೆನ್ನುವುದು ಬಲವಾದ ಮಾನಸಿಕ ಕಾಯಿಲೆಯಾಗಿದೆ. ಈ ವೇಳೆ ಸಿರೋಟೊನಿನ್ ಮತ್ತು ಡೊಪಮೈನ್ ಹಾರ್ಮೊನು ಮಟ್ಟವು ಅತಿಯಾಗುವುದು. ಇದರಿಂದ ಹಲವಾರು ನಕಾರಾತ್ಮಕ ಪರಿಣಾಮ ಉಂಟಾಗುವುದು. ಹಾರ್ಮೋನುಗಳ ಅಸಮತೋಲನದಿಂದಾಗಿ ಲೈಂಗಿಕಾಸಕ್ತಿಯು ತೀವ್ರ ಮಟ್ಟದಲ್ಲಿ ಕುಸಿಯಬಹುದು. ಖಿನ್ನತೆಗೆ ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಬೇಕಾಗುವುದು. ಖಿನ್ನತೆ ಲಕ್ಷಣಗಳು ಕಡಿಮೆಯಾದರೆ ಕಾಮಾಸಕ್ತಿ ಮರಳಿ ಬರುವುದು.

ಥೈರಾಯ್ಡ್ ಕಾಯಿಲೆ

ಥೈರಾಯ್ಡ್ ಕಾಯಿಲೆ

ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ವೈಪರೀತ್ಯವಾದಾಗ ಎರಡು ರೀತಿಯ ವೈದ್ಯಕೀಯ ಪರಿಸ್ಥಿತಿ ಉಂಟಾಗುವುದು. ಹೈಪರ್ ಥೈರಾಡಿಸಮ್(ಥೈರಾಯ್ಡ್ ಹಾರ್ಮೋನುಗಳ ಉತ್ಪತ್ತಿ ಕುಗ್ಗುವುದು) ಹೈಪರ್ ಥೈರಾಡಿಸಮ್(ಥೈರಾಯ್ಡ್ ಹಾರ್ಮೋನುಗಳು ಅತಿಯಾಗಿ ಉತ್ಪತ್ತಿಯಾಗುವುದು). ಇಂತಹ ಎರಡು ಪರಿಸ್ಥಿತಿಯಲ್ಲಿ ವ್ಯಕ್ತಿಯ ಲೈಂಗಿಕಾಸಕ್ತಿಯು ಕಡಿಮೆಯಾಗುವುದು. ರಕ್ತ ಪರೀಕ್ಷೆಯಿಂದ ಥೈರಾಯ್ಡ್ ಕಾಯಿಲೆ ಪತ್ತೆ ಮಾಡಬಹುದು ಮತ್ತು ಇದನ್ನು ತಿಳಿದುಕೊಂಡು ಚಿಕಿತ್ಸೆ ಪಡೆದರೆ ಕಾಮಾಸಕ್ತಿಯು ಮರಳಿ ಬರುವುದು.

ಋತುಬಂಧ

ಋತುಬಂಧ

ಇದು ಪ್ರಕೃತಿ ಸಹಜ ಕ್ರಿಯೆಯಾಗಿದ್ದು, ಮಹಿಳೆಯರಲ್ಲಿ ಸಹಜವಾರಿ 45-50 ವರ್ಷದ ಬಳಿಕ ಋತುಬಂಧವಾಗುವುದು. ಇದರ ಬಳಿಕ ಅವರಿಗೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದು. ಋತುಬಂಧದಿಂದ ದೇಹದಲ್ಲಿ ಆಗುವಂತಹ ಹಾರ್ಮೋನು ಬದಲಾವಣೆಯಿಂದಾಗಿ ಹಲವಾರು ಮಹಿಳೆಯರಲ್ಲಿ ಕಾಮಾಸಕ್ತಿ ಕುಂದುವುದು. ಋತುಬಂಧದ ಬಳಿಕ ಯೋನಿಯು ಒಣಗುವುದರಿಂದಾಗಿ ಲೈಂಗಿಕ ಕ್ರಿಯೆಯು ನೋವಿನಿಂದ ಕೂಡಿರಬಹುದು. ಹಾರ್ಮೋನು ಚಿಕಿತ್ಸೆ ಮಾಡಿಕೊಂಡರೆ ಸಮಸ್ಯೆ ನಿವಾರಣೆ ಮಾಡಬಹುದು.

ಪತ್ತೆಯಾಗದೆ ಇರುವ ಲೈಂಗಿಕ ರೋಗಗಳು

ಪತ್ತೆಯಾಗದೆ ಇರುವ ಲೈಂಗಿಕ ರೋಗಗಳು

ಯಾವುದೇ ವ್ಯಕ್ತಿಗೆ ಲೈಂಗಿಕ ರೋಗಗಳು ಇದ್ದರೆ ಅದರ ಬಗ್ಗೆ ತಿಳಿಯದೇ ಇದ್ದರೆ ಆತ/ಆಕೆಗೆ ಲೈಂಗಿಕಾಸಕ್ತಿಯು ಕಡಿಮೆಯಾಗಬಹುದು. ಲೈಂಗಿಕ ರೋಗಗಳಾದ ಹಾರ್ಪಿಸ್, ಗೊನೊರಿಯಾ ಇತ್ಯಾದಿಗಳು ಹಾರ್ಮೋನು ಅಸಮತೋಲ ಉಂಟು ಮಾಡುವುದು ಮತ್ತು ಲೈಂಗಿಕ ಕ್ರಿಯೆಯ ವೇಳೆ ಜನನೇಂದ್ರಿಯದ ಭಾಗದಲ್ಲಿ ನೋವುಂಟು ಮಾಡುವುದು. ಇದರಿಂದ ಲೈಂಗಿಕ ರೋಗಗಳ ಬಗ್ಗೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ನೀವು ಹಲವಾರು ಮಂದಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ ಇದು ಅಗತ್ಯ.

ಲೈಂಗಿಕ ಕಿರುಕುಳ

ಲೈಂಗಿಕ ಕಿರುಕುಳ

ಇದು ಮತ್ತೊಂದು ರೀತಿಯ ಮಾನಸಿಕ ಸಮಸ್ಯೆಯಾಗಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವಂತಹ ಮಹಿಳೆಯರಲ್ಲಿ ಭೀತಿ ಹಾಗೂ ಲೈಂಗಿಕತೆ ಬಗ್ಗೆ ಆಸಕ್ತಿ ಇರುವುದಿಲ್ಲ. ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಮಕ್ಕಳು ಬೆಳೆಯುತ್ತಿರುವಂತೆ ಲೈಂಗಿಕ ಕ್ರಿಯೆಯನ್ನು ದ್ವೇಷಿಸಲು ಆರಂಭಿಸುವರು. ಮಾನಸಿಕ ಮತ್ತು ವರ್ತನೆಯ ಚಿಕಿತ್ಸೆ ಇದನ್ನು ಕಡಿಮೆ ಮಾಡಲು ನೆರವಾಗುವುದು.

ರಸದೂತಗಳ ಏರುಪೇರು

ರಸದೂತಗಳ ಏರುಪೇರು

ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಲೈಂಗಿಕ ಕಾಮನೆಗಳನ್ನು ಪ್ರಚೋದಿಸಲು ಕೆಲವು ರಸದೂತಗಳು ಸ್ರವಿಸಬೇಕಾಗುತ್ತದೆ. ಮಹಿಳೆಯರಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಉತ್ಪಾದನೆ ಕಡಿಮೆಯಾದರೆ ಲೈಂಗಿಕ ಬಯಕೆಯೂ ಕಡಿಮೆಯಾಗುತ್ತದೆ. ಈ ನಿರಾಸಕ್ತಿ ಯಾವುದೇ ವಯಸ್ಸಿನಲ್ಲಿ ಎದುರಾಗಬಹುದು.

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು ಒಂದು ಬಗೆಯ ಬ್ಯಾಕ್ಟೀರಿಯಾದಿಂದ ಎದುರಾಗುವ ಕಾಯಿಲೆಯಾಗಿದ್ದು ಮಹಿಳೆಯರ ಗುಪ್ತಾಂಗಗಳಲ್ಲಿ ಸೋಂಕು ಹರಡಿಸುತ್ತದೆ. ಈ ಭಾಗದಲ್ಲಿ ಶಿಲೀಂಧ್ರದ ಸೋಂಕು ಎದುರಾಗಲು ಸ್ವಚ್ಛತೆಯ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕ ಕಾರಣವಾಗಿವೆ. ಈ ಸೋಂಕಿನ ಪರಿಣಾಮವಾಗಿ ಅತೀವವಾದ ತುರಿಕೆ, ವಾಸನೆಯುಕ್ತ ದ್ರವದ ಸ್ರಾವ ಹಾಗೂ ಈ ಭಾಗದಲ್ಲಿ ಎದುರಾಗುವ ನೋವು ಲೈಂಗಿಕ ಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಲೈಂಗಿಕ ರೋಗಗಳು (Sexually Transmitted Diseases)

ಲೈಂಗಿಕ ರೋಗಗಳು (Sexually Transmitted Diseases)

ಗೊನೋರಿಯಾ, ಕ್ಲಾಮೈಡಿಯಾ, ಹೆಪಾಟೈಟಿಸ್ ಮೊದಲಾದ ಲೈಂಗಿಕ ರೋಗಗಳು ಗುಪ್ತಾಂಗದ ಭಾಗದಲ್ಲಿ ಅತೀವವಾದ ನೋವು ಹಾಗೂ ಉರಿಯನ್ನು ತಂದೊಡ್ಡುತ್ತವೆ. ಅಲ್ಲದೇ ತನಗೆ ಒದಗಿರುವ ರೋಗವನ್ನು ತನ್ನ ಸಂಗಾತಿಗೆ ಹರಡಿಸಲು ಇಷ್ಟಪಡದ ಮಹಿಳೆ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನಬಹುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಒಂದು ವೇಳೆ ಮಹಿಳೆಯೊಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯ ಮತ್ತು ಮೆದುಳಿಗೆ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗುವ ಕಾರಣ ಇದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚುತ್ತದೆ ಎಂಬ ಭೀತಿಯನ್ನು ಇವರು ಹೊಂದಿರುತ್ತಾರೆ. ಈ ಆತಂಕಕ್ಕೆ ವೈಜ್ಞಾನಿಕ ಕಾರಣವೂ ಇದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯದ ಮೇಲೆ ಹೇರುವ ಭಾರವೂ ಹೆಚ್ಚುತ್ತದೆ ಹಾಗೂ ಇದರಿಂದ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ಹೃದಯಸ್ತಂಭನಕ್ಕೂ ಒಳಗಾಗಬಹುದು.

ಮಧುಮೇಹ

ಮಧುಮೇಹ

ಈ ಜೀವರಾಸಾಯನಿಕ ಏರುಪೇರಿನಿಂದ ಹಲವಾರು ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ವಿಶೇಷವಾಗಿ ಮಹಿಳೆಯರಲ್ಲಿ ದ್ರವಿಸುವ ಕೊರತೆ, ರಸದೂತಗಳ ಏರುಪೇರು ಹಾಗೂ ದೈಹಿಕ ಸುಸ್ತು ಲೈಂಗಿಕ ಆಸಕ್ತಿಯನ್ನು ಕುಂದಿಸಬಹುದು.

ರಜೋನಿವೃತ್ತಿ ಅಥವಾ ಮುಟ್ಟಿನ ದಿನಗಳಲ್ಲಿ...

ರಜೋನಿವೃತ್ತಿ ಅಥವಾ ಮುಟ್ಟಿನ ದಿನಗಳಲ್ಲಿ...

ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಲವಾರು ರಸದೂತಗಳ ಏರುಪೇರುಗಳು ಕಂಡುಬರುತ್ತವೆ. ಈ ಸಮಯದಲ್ಲಿ ಮನೋಭಾವವೂ ಅಪಾರವಾಗಿ ಬದಲಾಗುತ್ತದೆ ಹಾಗೂ ಈ ಬದಲಾವಣೆಯಿಂದ ಆಕೆ ಸಂಗಾತಿಯತ್ತ ಆಕರ್ಷಣೆಯನ್ನು ಕಳೆದುಕೊಳ್ಳಬಹುದು.

English summary

Reasons Why You May Not Want To Have Sex

As humans, just like every other living being, we have a number of basic instincts which need to be satisfied from time to time, in order for us to remain healthy and happy, right? For instance, we must drink water when we feel thirsty and we must consume food when we are hungry, etc. If these needs are not met, when we feel the urge, it could lead to a number of problems like dehydration and malnutrition! Here are a few medical reasons why you may not feel like having sex
X
Desktop Bottom Promotion