For Quick Alerts
ALLOW NOTIFICATIONS  
For Daily Alerts

  ಮಹಿಳೆಯರು ದಿನನಿತ್ಯ ಬ್ರಾ ಧರಿಸಬಾರದಂತೆ! ಯಾಕೆ ಗೊತ್ತೇ?

  By Deepu
  |

  ಪ್ರತಿ ಮಹಿಳೆಯ ಒಳ ಉಡುಪುಗಳ ಸಂಗ್ರಹದಲ್ಲಿ ಪ್ರಮುಖವಾಗಿರುವ ಕಂಚುಕ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ವಾಸ್ತವದಲ್ಲಿ, ಕಂಚುಕ (ಬ್ರಾ) ಧರಿಸಿದಷ್ಟೂ ಮಹಿಳೆಯ ಆರೋಗ್ಯಕ್ಕೆ ಮಾರಕವಾಗುತ್ತಾ ಹೋಗುತ್ತದೆ ಎಂದು ನಿಮಗೆ ಗೊತ್ತಿತ್ತೇ? ಇಂದು, ಹೆಚ್ಚಿನ ಮಹೆಳೆಯರು ಹತ್ತರಿಂದ ಹದಿನಾಲ್ಕು ವರ್ಷದ ಯುವತಿಯಾಗಿದ್ದಿನಿಂದಲೇ, ಅಂದರೆ ಇನ್ನೂ ಸ್ತನಗಳು ಪೂರ್ಣಗಾತ್ರ ಪಡೆಯುವ ಮೊದಲೇ, ಋತುಮತಿಯಾಗುವ ಸಮಯಕ್ಕೂ ಮುನ್ನವೇ ಬ್ರಾ ತೊಡಲು ಪ್ರಾರಂಭಿಸಿರುತ್ತಾರೆ.

  ಆ ಬಳಿಕ, ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಕಂಚುಕವನ್ನು ತೊಡುತ್ತಾ ಬರುತ್ತಾರೆ. ಪರಿಣಾಮವಾಗಿ, ಮಹಿಳೆಯರಿಗೆ ಕಂಚುಕವೆಂದರೆ ಉಡುಗೆಯ ಒಂದು ಅನಿವಾರ್ಯ ಅಂಗವೇ ಆಗಿಬಿಟ್ಟಿರುತ್ತದೆ. ವಾಸ್ತವವಾಗಿ ಕಂಚುಕದ ಪ್ರಮುಖ ಕಾರ್ಯವೆಂದರೆ ಜೋಲು ಬೀಳುವ ಸ್ತನಗಳಿಗೆ ಸೂಕ್ತ ಆಧಾರ ಕಲ್ಪಿಸುವುದು ಹಾಗೂ ಸ್ಥಿರ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುವುದಾಗಿದೆ.

  "32,34,36" ನಿಮ್ಮ ಬ್ರಾ ಸೈಜ್ ಯಾವುದು?

  ಆದರೆ ಯಾವಾಗ ಕಂಚುಕಗಳು ಮಹಿಳೆಯ ಸೌಂದರ್ಯ ಸಾಧನವಾಯಿತೋ, ಆಗ ಇದರ ಮೂಲ ಉದ್ದೇಶವೇ ಈಡೇರದೇ ಹೋಗುತ್ತಿದೆ. ಇಂದು ಅನಿವಾರ್ಯವಾಗಿ ಮಹಿಳೆಯದು ಇಡಿಯ ದಿನ ಕಂಚುಕವನ್ನು ಧರಿಸಿಯೇ ಇರುತ್ತಾರೆ. ಇದರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಏನಾಗುವುದು ಗೊತ್ತೇ? ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ... 

  ಕುತ್ತಿಗೆ ನೋವು

  ಕುತ್ತಿಗೆ ನೋವು

  ಒಂದು ವೇಳೆ ನಿಮ್ಮ ದೇಹಕ್ಕೆ ಸೂಕ್ತವಲ್ಲದ ಗಾತ್ರದ ಕಂಚುಕವನ್ನು ಧರಿಸಿದರೆ, ಇದರ ಪಟ್ಟಿಗಳು ನಿಮ್ಮ ಕುತ್ತಿಗೆಯ ನರಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತವೆ. ಇದರಿಂದ ರಕ್ತಪರಿಚಲನೆಗೆ ಅಡ್ಡಿಯಾಗುತ್ತದೆ ಹಾಗೂ ಭಾರೀ ಕುತ್ತಿಗೆ ನೋವು ಎದುರಾಗಬಹುದು.

  ಬೆನ್ನು ನೋವು

  ಬೆನ್ನು ನೋವು

  ಮತ್ತೊಮ್ಮೆ, ಸೂಕ್ತವಲ್ಲದ ಗಾತ್ರದ ಕಂಚುಕವನ್ನು ನಿತ್ಯವೂ ಧರಿಸಿದರೆ, ಅದರಲ್ಲೂ ಹೆಚ್ಚಿನ ಅವಧಿ ಧರಿಸಿದೇ ಇದ್ದರೆ ಇದು ಬೆನ್ನಿನ ಸ್ನಾಯುಗಳ ಮೇಲೆ ಅನಗತ್ಯ ಒತ್ತಡ ಹೇರುತ್ತದೆ ಹಾಗೂ ಪರಿಣಾಮವಾಗಿ ಬೆನ್ನು ನೋವು ಎದುರಾಗುತ್ತದೆ.

  ದುಗ್ಧ ಗ್ರಂಥಿಗಳ ಮೇಲೆ ಪರಿಣಾಮ

  ದುಗ್ಧ ಗ್ರಂಥಿಗಳ ಮೇಲೆ ಪರಿಣಾಮ

  ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ದಿನದ ಹೆಚ್ಚಿನ ಅವಧಿಯಲ್ಲಿ ಕಂಚುಕವನ್ನು ತೊಟ್ಟೇ ಇರುವ ಮೂಲಕ ದುಗ್ಧಗ್ರಂಥಿಗಳ ವ್ಯವಸ್ಥೆಯ ಮೇಲೆ ಪರಿಣಾಮವುಂಟಾಗುತ್ತದೆ. ಈ ವ್ಯವಸ್ಥೆಯ ಮೇಲೆ ಆಗುವ ಪರಿಣಾಮದಿಂದ ಸ್ತನಗಳಲ್ಲಿ ಸಂಗ್ರಹವಾಗುವ ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗದೇ ಹೋಗುತ್ತದೆ. ಈ ಕಲ್ಮಶಗಳು ಹಾಗೇ ಉಳಿದುಕೊಂಡರೆ ಇದು ನಿಧಾನವಾಗಿ ಸ್ತನ ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಹೆಚ್ಚುತ್ತದೆ.

  ಉಸಿರಾಟದ ತೊಂದರೆಗಳು

  ಉಸಿರಾಟದ ತೊಂದರೆಗಳು

  ಕೆಲವು ಸಂದರ್ಭಗಳಲ್ಲಿ, ತೀರಾ ಬಿಗಿಯಾದ ಕಂಚುಕ ತೊಟ್ಟುಕೊಂಡರೆ, ಅಥವಾ ಹೆಚ್ಚಿನ ದಪ್ಪದ ಬಟ್ಟೆಯಿಂದ ತಯಾರಿಸಿಲ್ಪಟ್ಟಿದ್ದರೆ, ಇದು ಪಕ್ಕೆಲೆಬು ಹಾಗೂ ಎದೆಯ ಗೂಡಿನ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ ಹಾಗೂ ಎದೆಗೂಡು ಪೂರ್ಣಪ್ರಮಾಣದಲ್ಲಿ ವಿಸ್ತರಿಸಲು ಸಾಧ್ಯವಾಗದೇ ಹೋಗುತ್ತದೆ ಹಾಗೂ ಇದು ಉಸಿರಾಟಕ್ಕೆ ಅಡ್ಡಿಯುಂಟುಮಾಡುವ ಮೂಲಕ ಉಸಿರಾಟದ ತೊಂದರೆಗಳನ್ನು ತಂದೊಡ್ಡಬಹುದು.

  ಜೀರ್ಣಕ್ರಿಯೆಯನ್ನು ಬಾಧಿಸುತ್ತದೆ

  ಜೀರ್ಣಕ್ರಿಯೆಯನ್ನು ಬಾಧಿಸುತ್ತದೆ

  ಶರೀರವನ್ನು ಬಿಗಿಯಾಗಿ ಅಪ್ಪುವ ಅಥವಾ ಬಿಗಿಯಾದ ಉಡುಪಿನ ಅಂಗವಾಗಿರುವ ಬಿಗಿಯಾದ ಒಳಕಂಚುಕ ವಪೆಯ ಮೇಲೆ ಅತಿಯಾದ ಒತ್ತಡ ಹೇರಬಹುದು ಹಾಗೂ ಇದು ಹೊಟ್ಟೆಯ ಮೇಲೂ ಪ್ರಭಾವ ಬೀರಿ ಜೀರ್ಣಕ್ರಿಯೆಯನ್ನು ಬಾಧಿಸಬಹುದು.

  ಚರ್ಮದ ಗಾಯಗಳು

  ಚರ್ಮದ ಗಾಯಗಳು

  ಒಂದು ವೇಳೆ ನಿಮ್ಮ ಕಂಚುಕ ನೈಲಾನ್ ದಾರದಿಂದ ತಯಾರಿಸಲ್ಪಟ್ಟ ಲೇಸ್ ಮೊದಲಾದ ಪಟ್ಟಿಗಳಿಂದ ಕೂಡಿದ್ದರೆ ನಿಮ್ಮ ಚಲನೆ ಈ ಪಟ್ಟಿಗಳು ಮತ್ತು ಚರ್ಮದ ಮೇಲೆ ಘರ್ಷಣೆಯುಂಟು ಮಾಡುತ್ತದೆ ಹಾಗೂ ನೈಲಾನ್ ದಾರ ಚರ್ಮವನ್ನು ಹಿಸಿಯುವ ಗುಣ ಗೊಂದಿದ್ದು ಪ್ರತಿ ಘರ್ಷಣೆಯಿಂದ ಸೂಕ್ಷ್ಮವಾದ ಗೀರುಗಳು ಮತ್ತು ಗಾಯಗಳು ಉಂಟಾಗುತ್ತವೆ. ಪರಿಣಾಮವಾಗಿ ಪಟ್ಟಿ ಇರುವ ಭಾಗ ಕೆಂಪಗಾಗಿ ಉರಿಯತೊಡಗುತ್ತದೆ.

  ಶಿಲೀಂಧ್ರದ ಸೋಂಕು ಎದುರಾಗುವ ಸಾಧ್ಯತೆ

  ಶಿಲೀಂಧ್ರದ ಸೋಂಕು ಎದುರಾಗುವ ಸಾಧ್ಯತೆ

  ಒಂದು ವೇಳೆ ಕಂಚುಕ ತಯಾರಿಸಲು ಬಳಸಿದ ಬಟ್ಟೆ ಮತ್ತು ಇತರ ಸಾಮಾಗ್ರಿಗಳು ಉತ್ತಮ ಗುಣಮಟ್ಟ ಹೊಂದಿಲ್ಲದೇ ಇದ್ದರೆ ಅಥವಾ ಈ ಸಾಮಾಗ್ರಿಗಳಲ್ಲಿ ವಿಷಕಾರಿ ವಸ್ತುಗಳಿದ್ದರೆ ಇವುಗಳನ್ನು ತೊಡುವ ಮೂಲಕ ಚರ್ಮದಲ್ಲಿ ಶಿಲೀಂಧ್ರದ ಸೋಂಕು ಎದುರಾಗುವ ಸಾಧ್ಯತೆ ಇರುತ್ತದೆ.

  ಸ್ತನ ಕ್ಯಾನ್ಸರ್

  ಸ್ತನ ಕ್ಯಾನ್ಸರ್

  ಇತ್ತೀಚಿನ ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ, ದಿನದ ಹೆಚ್ಚಿನ ಸಮಯ ಕಂಚುಕ ಧರಿಸಿಯೇ ಇರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇತರರಿಗಿಂತಲೂ ಹೆಚ್ಚಿರುತ್ತದೆ!

  ರಕ್ತ ಸಾಂಚಾರದಲ್ಲಿ ವ್ಯತ್ಯಾಯವಾಗಬಹುದು..!

  ರಕ್ತ ಸಾಂಚಾರದಲ್ಲಿ ವ್ಯತ್ಯಾಯವಾಗಬಹುದು..!

  ನಿಮ್ಮ ಎದೆಯ ಸ್ನಾಯುವನ್ನು ಮೊಟಕುಗೊಳಿಸುವ ನಿಮ್ಮ ಸ್ತನಗಳನ್ನು, ನಿಮ್ಮ ಹಿಂಭಾಗ ಮತ್ತು ನಿಮ್ಮ ಎದೆಯ ಕೆಳಭಾಗವನ್ನು ತಂತಿಯಂತಹ ವಸ್ತು ಹಿಡಿದಿಟ್ಟಲ್ಲಿ ಇದು ನಿಮ್ಮ ಎದೆ ಮತ್ತು ತೋಳುಗಳಿಗೆ ರಕ್ತ ಸಂಚಾರವನ್ನು ಅಡ್ಡಿಪಡಿಸುತ್ತದೆ. ಅಂತೆಯೇ, ಬಿಗಿಯಾದ ಸ್ಫೋರ್ಟ್ಸ್ ಬ್ರಾವನ್ನು ನೀವು ನಿಯಮಿತವಾಗಿ ಧರಿಸಿದಲ್ಲಿ ನಿಮ್ಮ ಸ್ತನದ ಅಂಗಾಂಶಗಳನ್ನು ಇದು ಹಾನಿಮಾಡುತ್ತದೆ.

  ತ್ವಚೆಗೆ ಹಾನಿ

  ತ್ವಚೆಗೆ ಹಾನಿ

  ಬ್ರಾ ಧರಿಸುವುದರ ಎಂಟು ದುಷ್ಪರಿಣಾಮಗಳ ಬಗ್ಗೆ ನಾವು ಮಾತನಾಡುವಾಗ ಈ ಅಂಶವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ನಿತ್ಯವೂ ಬ್ರಾ ಧರಿಸುವುದು, ಅದರಲ್ಲೂ ಮಲಗುವಾಗ ಧರಿಸುವುದರಿಂದ ತ್ವಚೆಯ ತೊಂದರೆಗಳು ಉಂಟಾಗುವುದು ಸಹಜವೇ ಆಗಿದೆ. ತುರಿಕೆ, ಕೆಂಪು ಗುಳ್ಳೆಗಳು ಏಳುವುದು ಉದ್ಭವವಾಗುತ್ತದೆ. ಬ್ರಾದ ಹುಕ್ಸ್ ಮತ್ತು ಇದರ ಪಟ್ಟಿ ತ್ವಚೆಯಲ್ಲಿ ಗಾಯಗಳನ್ನು ಉಂಟುಮಾಡಬಲ್ಲುದು.

  ಜೋತಾಡುವ ಸ್ತನಗಳು

  ಜೋತಾಡುವ ಸ್ತನಗಳು

  ನೀವು ಯಾವಾಗಲೂ ಸಡಿಲ ಬ್ರಾವನ್ನು ಧರಿಸುವುದರಿಂದ, ನಿಮ್ಮ ಸ್ತನ ಜೋತುಬೀಳಬಹುದು ಮತ್ತು ಅಸಹ್ಯಕರವಾಗಿ ಕಾಣಬಹುದು. ಆದ್ದರಿಂದ ಸರಿಯಾದ ಗಾತ್ರವನ್ನು ಕಂಡುಕೊಂಡು ಬ್ರಾ ಧರಿಸಿ. 24/7 ಸಮಯವೂ ಧರಿಸುವುದನ್ನು ಆದಷ್ಟು ಕಡೆಗಣಿಸಿ.

  ಶಿಲೀಂಧ್ರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

  ಶಿಲೀಂಧ್ರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

  ಎಲ್ಲಾ ಸಮಯವೂ ಬ್ರಾ ಧರಿಸುವುದರಿಂದ ಉಂಟಾಗುವ ಎಂಟು ದುಷ್ಪರಿಣಾಮಗಳಲ್ಲಿ ಒಂದಾಗಿರುವ ಇದಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಬೇಕು. ಬೆಚ್ಚಗಿನ ಮತ್ತು ತೇವಭರಿತ ಸ್ಥಳಗಳು ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ಸಮಯವೂ ಬ್ರಾ ಧರಿಸುವುದರಿಂದ, ಶಿಲಿಂಧ್ರಗಳ ಬೆಳವಣಿಗೆಗೆ ನೀವು ಜಾಗ ಮಾಡಿಕೊಟ್ಟಂತೆ.

  ತುರಿಕೆ ಕೂಡ ಶುರುವಾಗಬಹುದು!

  ತುರಿಕೆ ಕೂಡ ಶುರುವಾಗಬಹುದು!

  ಒಂದು ವೇಳೆ ಬ್ರಾ ಧರಿಸಿದ ನಂತರ ನಿಮ್ಮ ಭುಜಗಳಲ್ಲಿ ಆಗಾಗ ತುರಿಕೆ ಅಥವಾ ಕೆಂಪು ನವೆಗಳು ಬರುವ ಪ್ರವೃತ್ತಿ ಇದ್ದಲ್ಲಿ ಮುಗಿದೇ ಹೋಯಿತು. ಸಂಶಯವೇ ಬೇಡ, ತಪ್ಪು ಗಾತ್ರದ ಬ್ರಾಯಿಂದ ನಿಮ್ಮ ಚರ್ಮಕ್ಕೆ ಅಪಾಯ ಗ್ಯಾರಂಟಿ. ಇದರಿಂದ ಶಿಲೀಂಧ್ರದ ಸೋಂಕು ಹೆಚ್ಚಲು ಕಾರಣವಾಗುತ್ತದೆ.

  English summary

  Reasons why wearing A Bra Can Harm Your Health

  one of the most essential parts of a lady's closet, is something that most women would own and use, right? Well, did you know that wearing a bra could be harming your health? Now, most women, start using bras anytime between the ages of 10-14, when they begin to develop breasts, at the onset of puberty.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more