For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತದೊತ್ತಡಕ್ಕೆ ಅರಿಶಿನ ಪರಿಣಾಮಕಾರಿ ಮನೆಮದ್ದು

By Hemanth
|

ಪ್ರತಿದಿನವೂ ಬೋಲ್ಡ್ ಸ್ಕೈ ಓದುತ್ತಿರುವ ಪ್ರತಿಯೊಬ್ಬರಿಗೂ ಇಂದಿನ ದಿನಗಳ ಆರೋಗ್ಯ ಸಮಸ್ಯೆಗಳು, ಅದು ಬರುವ ರೀತಿ ಇತ್ಯಾದಿಗಳು ಖಂಡಿತವಾಗಿಯೂ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿಯಾಗಿ ಕಾಡುವಂತಹ ಸಮಸ್ಯೆಯೆಂದರೆ ಅದು ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಹಲವಾರು ರೀತಿಯ ಹೃದಯದ ಕಾಯಿಲೆಗಳಾದ ಹೃದಯಾಘಾತ, ಪಾರ್ಶ್ವವಾಯು ಮತ್ತು ಕಿಡ್ನಿ ಸಮಸ್ಯೆಗಳು ಬರಬಹುದು.

ಇದರಿಂದ ರಕ್ತದೊತ್ತಡದ ಬಗ್ಗೆ ಪರೀಕ್ಷೆ ಮಾಡಿಸಿಕೊಂಡು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ರಕ್ತದೊತ್ತಡ ನಿವಾರಣೆ ಮಾಡಲು ವ್ಯಾಯಾಮ ಹಾಗೂ ಆಹಾರ ಕ್ರಮವು ಅತೀ ಅಗತ್ಯ. ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಅರಿಶಿನವು ಪ್ರಮುಖ ಗಿಡಮೂಲಿಕೆಯಾಗಿದೆ.

ಆಯುರ್ವೇದಲ್ಲಿ ಇದರ ಔಷಧೀಯ ಗುಣಗಳನ್ನು ಕಂಡುಕೊಂಡು ಇದನ್ನು ಹಲವಾರು ರೀತಿಯಿಂದ ಬಳಕೆ ಮಾಡಿಕೊಳ್ಳುವರು. ಅರಿಶಿನವನ್ನು ಭಾರತೀಯರು ಹೆಚ್ಚಾಗಿ ಪ್ರತಿಯೊಂದು ಆಹಾರ ಹಾಗೂ ಪದಾರ್ಥಗಳಿಗೆ ಬಳಕೆ ಮಾಡುವರು. ಈ ಲೇಖನದಲ್ಲಿ ಅರಿಶಿನವು ರಕ್ತದೊತ್ತಡಕ್ಕೆ ಹೇಗೆ ಒಳ್ಳೆಯದು ಎಂದು ತಿಳಿದುಕೊಳ್ಳುವ....

ಕುರ್ಕ್ಯುಮಿನ್ ರಕ್ತದೊತ್ತಡ ತಗ್ಗಿಸುವುದು

ಕುರ್ಕ್ಯುಮಿನ್ ರಕ್ತದೊತ್ತಡ ತಗ್ಗಿಸುವುದು

ಅರಿಶಿನದಲ್ಲಿ ಕುರ್ಕ್ಯುಮಿನ್ ಎನ್ನುವ ಪ್ರಮುಖ ಆ್ಯಂಟಿಆಕ್ಸಿಡೆಂಟ್ ರಕ್ತದೊತ್ತಡ ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ದೇಹದಲ್ಲಿ ರಕ್ತದೊತ್ತಡ ನಿಯಂತ್ರಿಸುವುದು. ನಾಳಿಯ ಅಸಾಮಾನ್ಯ ಕ್ರಿಯೆಯಿಂದ ದೇಹವನ್ನು ಕುರ್ಕ್ಯುಮಿನ್ ರಕ್ಷಿಸುವುದು.

ಅಪಧಮನಿ ಹಾನಿ ತಡೆಯುವುದು

ಅಪಧಮನಿ ಹಾನಿ ತಡೆಯುವುದು

ಅರಿಶಿನವು ರಕ್ತದೊತ್ತಡ ನಿಯಂತ್ರಿಸುವುದು ಮಾತ್ರವಲ್ಲದೆ ಅಧಿಕ ರಕ್ತದೊತ್ತಡದಿಂದ ಉಂಟಾಗಿರುವಂತಹ ಹಾನಿಯನ್ನು ಇದು ಸರಿಪಡಿಸುವುದು. ಅಧಿಕ ರಕ್ತದೊತ್ತಡವಿದ್ದರೆ ಅದರಿಂದ ಹಲವಾರು ರೀತಿಯ ಹೃದಯಸಂಬಂಧಿ ಕಾಯಿಲೆಗಳು ಬರುವುದು. ಅಪಧಮನಿಯಲ್ಲಿ ಪದರ ರಚನೆಯಾಗುವುದೇ ಹೃದಯಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣ. ಪದರಗಳು ಅಪಧಮನಿಯನ್ನು ಕುಗ್ಗಿಸಿ, ಹೃದಯ, ಮೆದುಳು ಮತ್ತು ದೇಹದ ಇತರ ಭಾಗಗಳಿಗೆ ರಕ್ತ ಪೂರೈಕೆ ನಿಧಾನಗೊಳಿಸುವುದು. ಅಧಿಕ ರಕ್ತದೊತ್ತಡವಿದ್ದರೆ ಅದರಿಂದ ಅಪಧಮನಿಯ ಕೋಶಗಳಿಗೆ ಮತ್ತಷ್ಟು ಹಾನಿಯಾಗುವುದು. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಜಮೆಯಾಗಿ ಪದರ ನಿರ್ಮಾಣ ಮಾಡುವುದು. ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ಅಧಿಕ ರಕ್ತದೊತ್ತಡದಿಂದ ಆದ ಹೆಚ್ಚಿನ ಹಾನಿ ತಡೆಯುವುದು.

ರಕ್ತದಲ್ಲಿ ಅಧಿಕ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವುದು

ರಕ್ತದಲ್ಲಿ ಅಧಿಕ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವುದು

ರಕ್ತದೊತ್ತಡ ನಿಯಂತ್ರಣ ಮಾಡುವುದರೊಂದಿಗೆ ಅರಿಶಿನವು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು. ಈ ಎರಡು ಪರಿಸ್ಥಿತಿಯು ಹೃದಯದ ಕಾಯಿಲೆಗೆ ಕಾರಣವಾಗುವುದು. ಕುರ್ಕ್ಯುಮಿನ್ ನ ಆ್ಯಂಟಿಆಕ್ಸಿಡೆಂಟ್ ಗುಣಗಳು ಇಂತಹ ಪರಿಸ್ಥಿತಿ ನಿವಾರಿಸಲು ನೆರವಾಗುವುದು.

ಅರಿಶಿನದಲ್ಲಿನ ಉರಿಯೂತ ಶಮನಕಾರಿ ಗುಣ ರಕ್ತದೊತ್ತಡ ತಗ್ಗಿಸುವುದು

ಅರಿಶಿನದಲ್ಲಿನ ಉರಿಯೂತ ಶಮನಕಾರಿ ಗುಣ ರಕ್ತದೊತ್ತಡ ತಗ್ಗಿಸುವುದು

ಗಿಡಮೂಲಿಕೆಯಾಗಿರುವ ಅರಿಶಿನದಲ್ಲಿರುವ ಉರಿಯೂತ ಶಮನಕಾರಿ ಗುಣವು ರಕ್ತದೊತ್ತಡ ಕಡಿಮೆ ಮಾಡಲು ಮತ್ತೊಂದು ಕಾರಣವಾಗಿದೆ. ಕುರ್ಕ್ಯುಮಿನ್ ಮತ್ತು ಉರಿಯೂತ ಶಮನಕಾರಿ ಗುಣವು ರಕ್ತದೊತ್ತಡ ಬದಿಗಿಡಲು ನೆರವಾಗುವುದು. ದೇಹದಲ್ಲಿ ಉರಿಯೂತವು ತುಂಬಾ ಕಠಿಣ, ಇದರಿಂದ ಅಪಧಮನಿಗಳಲ್ಲಿ ಬಿರುಸು ಉಂಟಾಗುವುದು. ಅರಿಶಿನವನ್ನು ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಬಹುದಾಗಿದೆ.

ರಕ್ತಕಣದ ಬದಲಾವಣೆ ತಡೆಯುವುದು

ರಕ್ತಕಣದ ಬದಲಾವಣೆ ತಡೆಯುವುದು

ಅಧಿಕ ರಕ್ತದೊತ್ತಡದಿಂದಾಗಿ ರಕ್ತದಲ್ಲಿನ ರಕ್ತಕಣಗಳಲ್ಲಿ ಬದಲಾವಣೆಗಳು ಆಗಬಹುದು. ರಕ್ತದೊತ್ತಡವು ಆಗಾಗ ಬದಲಾಗುತ್ತಿರುವ ಕಾರಣದಿಂದಾಗಿ ರಕ್ತಕಣಗಳು ಅತಿಯಾಗಿ ಚಟುವಟಿಕೆ ನಡೆಸಬಹುದು. ಇದರಿಂದ ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆ ಉಂಟಾಗುವುದು. ಇದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತ ಸಂಚಾರವಾಗದಂತೆ ತಡೆಯಬಹುದು. ಅಧ್ಯಯನಗಳ ಪ್ರಕಾರ ಅರಿಶಿನವು ಇಂತಹ ಬದಲಾವಣೆಯನ್ನು ನಿವಾರಣೆ ಮಾಡುವುದು. ಅಧಿಕ ರಕ್ತದೊತ್ತಡದಿಂದ ಆಗುವ ರಕ್ತಕಣಗಳ ಬದಲಾವಣೆ ತಡೆಯುವುದು.

ಅರಿಶಿನವು ಎಸಿಇ ಕಿಣ್ವವನ್ನು ಪ್ರತಿಬಂಧಿಸುವುದು

ಅರಿಶಿನವು ಎಸಿಇ ಕಿಣ್ವವನ್ನು ಪ್ರತಿಬಂಧಿಸುವುದು

ಆಂಜಿಯೋಟೆನ್ಸಿನ್ ಪರಿವರ್ತಿತ ಕಿಣ್ವವನ್ನು ಅರಿಶಿನವು ಪ್ರತಿಬಂಧಿಸುವುದು. ಈ ಕಿಣ್ವವು ದೇಹದಲ್ಲಿ ರಕ್ತನಾಳಗಳನ್ನು ಕುಗ್ಗಿಸುವುದು. ಎಸಿಇಯನ್ನು ಅರಿಶಿನವು ಪ್ರತಿಬಂಧಿಸುವ ಕಾರಣ ರಕ್ತನಾಳಗಳಿಗೆ ಆರಾಮ ಸಿಗುವುದು, ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುವುದು. ರಕ್ತದೊತ್ತಡಕ್ಕೆ ಇರುವಂತಹ ಹಲವಾರು ರೀತಿಯ ಔಷಧಿಗಳು ಕೂಡ ಇದೇ ರೀತಿಯ ಯಾಂತ್ರಿಕ ಕೌಶಲ್ಯದೊಂದಿಗೆ ಕೆಲಸ ಮಾಡುತ್ತದೆ.

ಅಧಿಕ ರಕ್ತದೊತ್ತಡಕ್ಕೆ ಅರಿಶಿನ ಸೇವಿಸುವಾಗ ಗಮನಿಸಬೇಕಾದ ವಿಚಾರಗಳು.....

ಅಧಿಕ ರಕ್ತದೊತ್ತಡಕ್ಕೆ ಅರಿಶಿನ ಸೇವಿಸುವಾಗ ಗಮನಿಸಬೇಕಾದ ವಿಚಾರಗಳು.....

ಅತಿಯಾಗಿ ಅರಿಶಿನ ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಇದರಿಂದ ಹೊಟ್ಟೆಯಲ್ಲಿ ತಳಮಳ ಮತ್ತು ಅಲ್ಸರ್ ಸಮಸ್ಯೆಯು ಹೆಚ್ಚಾಗಬಹುದು. ಮೂತ್ರದಲ್ಲಿ ಕಲ್ಲಿನ ಸಮಸ್ಯೆ ಇರುವವರು ಮತ್ತು ಪಿತ್ತಕೋಶದ ಯಾವುದೇ ಸಮಸ್ಯೆಯಿದ್ದರೂ ಅಂತವರ ಅರಿಶಿನ ಸೇವನೆ ಮಿತವಾಗಿರಬೇಕು. ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಇದರ ಸೇವನೆ ಮಾಡಿ. ಅರಿಶಿನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಕಾರಣದಿಂದ ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುತ್ತಾ ಇರುವವರಲ್ಲಿ ಇದು ಮತ್ತಷ್ಟು ಕಡಿಮೆಯಾಗಬಹುದು. ಅರಿಶಿನವು ರಕ್ತವನ್ನು ತೆಳುವಾಗಿಸುವುದು. ಇದರಿಂದಾಗಿಯೇ ಯಾವುದೇ ಶಸ್ತ್ರಚಿಕಿತ್ಸೆಗೆ ಮೊದಲು ಅರಿಶಿನ ಸೇವನೆ ಮಾಡಬಾರದು.

English summary

Reasons Why Turmeric Is Good For High Blood Pressure

High blood pressure is one of the leading ailments that people in India deal with. High blood pressure or hypertension is a condition which can contribute to various heart ailments like heart attack, stroke and even kidney ailments. These are the reasons why it is extremely important to keep a check on your blood pressure and make sure that it is at normal levels. Exercising and diet are two important factors that determine blood pressure. And as it turns out, turmeric is that wonder spice which has surprising benefits in regulating blood pressure.
X
Desktop Bottom Promotion