For Quick Alerts
ALLOW NOTIFICATIONS  
For Daily Alerts

ಗೋಧಿ ಹಿಟ್ಟಿಗಿಂತಲೂ, ಹತ್ತು ಪಟ್ಟು 'ಬಾದಾಮಿ ಹಿಟ್ಟು' ಪವರ್ ಫುಲ್!

|

ನಿಮಗೆ ಆಹಾರದ ನಡುವೆ ಕುರುಕು ಫಲಗಳಾದ ಶೇಂಗಾ ಅಥವಾ ಬಾದಾಮಿಯ ತುಂಡುಗಳನ್ನು ತಿನ್ನುವುದು ಇಷ್ಟವಾಗುತ್ತದೆಯೇ? ಹೌದು ಎಂದಾದರೆ ನಿಮ್ಮ ನಿತ್ಯದ ಹಿಟ್ಟಿನ ಖಾದ್ಯಗಳನ್ನು ಬಾದಾಮಿಯ ಹಿಟ್ಟಿನಿಂದ ತಯಾರಿಸಿದರೆ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಇತ್ತಿಚೆಗೆ ಬಾದಾಮಿ ಹಿಟ್ಟು ತನ್ನ ಪೌಷ್ಟಿಕ ಮೌಲ್ಯ ಹಾಗೂ ಆರೋಗ್ಯಕರ ಪರಿಣಾಮಗಳಿಂದಾಗಿ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ.

ಇತರ ಸಂಸ್ಕರಿಸಿದ ಹಿಟ್ಟುಗಳ ಬದಲಿಗೆ ಬಾದಾಮಿ ಹಿಟ್ಟನ್ನು ಬಳಸಿದಾಗ ಆರೋಗ್ಯ ಉತ್ತಮಗೊಳ್ಳುವುದು ಮಾತ್ರವಲ್ಲ, ಗೋಧಿಯಲ್ಲಿರುವ ಗ್ಲುಟೆನ್ ಎಂಬ ಅಂಟುಕಾರಕ ಪೋಷಕಾಂಶದ ಸೇವನೆಯನ್ನು ತಡೆದಂತಾಗುತ್ತದೆ. ಅಲ್ಲದೇ ಇದರಲ್ಲಿ ಕಾರ್ಬೋಹೈಡ್ರೇಟುಗಳು ಕಡಿಮೆ ಇರುವ ಕಾರಣ ಎಲ್ಲರಿಗೂ ಸೂಕ್ತವಾದ ಆಹಾರವೂ ಆಗಿದೆ....

ಬಾದಾಮಿ ಹಿಟ್ಟು ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ?

ಬಾದಾಮಿ ಹಿಟ್ಟು ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ?

ಬಾದಾಮಿಯ ಸಿಪ್ಪಯನ್ನು ಸುಲಿದು ಒಳಗಿನ ತಿರುಳನ್ನು ನುಣ್ಣಗೆ ಹಿಟ್ಟು ಮಾಡಿದರೆ ಇದೇ ಬಾದಾಮಿ ಹಿಟ್ಟು. ಬಾದಾಮಿಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಕಿವುಚಿದರೆ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಬಳಿಕ ಈ ತಿರುಳನ್ನು ಒಣಗಿಸಿ ಹಿಟ್ಟು ಮಾಡಲಾಗುತ್ತದೆ. ಈ ಹಿಟ್ಟು ಹಸಿಯಾಗಿಯೇ ತಿನ್ನಬಹುದಾದಷ್ಟು ಸಿಹಿಯಾಗಿದ್ದು ಬಾದಾಮಿಯ ಸ್ವಾದ ಮತ್ತು ತಿಳಿಹಳದಿ ಬಣ್ಣ ಹೊಂದಿದ್ದು ನುಣ್ಣನೆಯ ರವೆಯಂತೆ ತೋರುತ್ತದೆ.

Most Read:ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ಬಾದಾಮಿ ಹಿಟ್ಟಿನ ಪೋಷಕಾಂಶಗಳ ವಿವರ

ಬಾದಾಮಿ ಹಿಟ್ಟಿನ ಪೋಷಕಾಂಶಗಳ ವಿವರ

ಅಮೇರಿಕಾದ United States Department of Agriculture (USDA) ಎಂಬ ಕೃಷಿ ವಿಭಾಗದ ಪ್ರಕಾರ ನೂರು ಗ್ರಾಂ ಬಾದಾಮಿ ಹಿಟ್ಟಿನಲ್ಲಿ 571 ಕಿಲೋಕ್ಯಾಲೋರಿ ಶಕ್ತಿ, 21.43 ಗ್ರಾಂ ಪ್ರೋಟೀನ್, 50 ಗ್ರಾಂ ಕೊಬ್ಬು, 21.43 ಗ್ರಾಂ ಕಾರ್ಬೋಹೈಡ್ರೇಟುಗಳು, 10.7 ಒಟ್ಟು ಪ್ರಮಾಣದ ನಾರು, 286 ಮಿಲಿಗ್ರಾಂ ಕ್ಯಾಲ್ಸಿಯಂ, 3.86 ಮಿಲಿಗ್ರಾಂ ಕಬ್ಬಿಣ, 286 ಮಿಲಿಗ್ರಾಂ ಮೆಗ್ನೀಶಿಯಂ 536 ಮಿಲಿಗ್ರಾಂ ಗಂಧಕ, 714 ಮಿಲಿಗ್ರಾಂ ಪೊಟ್ಯಾಶಿಯಂ, 1.071 ಮಿಲಿಗ್ರಾಂ ತಾಮ್ರ, 2 ಮಿಲಿಗ್ರಾಂ ಮ್ಯಾಂಗನೀಸ್ 32 ಗ್ರಾಂ ಏಕಅಪರ್ಯಾಪ್ತ ಕೊಬ್ಬಿನ ಆಮ್ಲಗಳು ಹಾಗೂ 12.5 ಗ್ರಾಂ ನಷ್ಟು ಒಟ್ಟು ಬಹುಅಪರ್ಯಾಪ್ತ ಕೊಬ್ಬಿನ ಆಮ್ಲಗಳಿವೆ.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

ಸಂಸ್ಕರಿತ ಗೋಧಿಯ ಹಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳಿವೆ ಹಾಗೂ ಕಡಿಮೆ ನಾರು ಮತ್ತು ಕೊಬ್ಬುಗಳಿವೆ. ಇವನ್ನು ಸೇವಿಸಿದಾಗ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುತ್ತದೆ ಹಾಗೂ ಪರಿಣಾಮವಾಗಿ ಊಟದ ಬಳಿಕ ಸುಸ್ತು ಆವರಿಸಿ ಹಸಿವು ಮತ್ತು ಇನ್ನಷ್ಟು ಸಕ್ಕರೆಭರಿತ ಆಹಾರ ಸೇವಿಸುವ ಬಯಕೆಯಾಗುತ್ತದೆ. ಬಾದಾಮಿ ಹಿಟ್ಟಿನಲ್ಲಿ ಕಡಿಮೆ ಕಾರ್ಬೋಹೈಡ್ರೇಟುಗಳಿವೆ ಹಾಗೂ ಆರೋಗ್ಯಕರ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಕರಗುವ ನಾರು ಸಹಾ ಉತ್ತಮ ಪ್ರಮಾಣದಲ್ಲಿದ್ದು ಈ ಆಹಾರ ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿದೆ, ಅಂದರೆ ಈ ಆಹಾರವನ್ನು ಸೇವಿಸಿದ ಬಳಿಕ ರಕ್ತದಲ್ಲಿ ಸಕ್ಕರೆ ಭಾರೀ ನಿಧಾನವಾಗಿ ಸೇರುವ ಮೂಲಕ ಸತತವಾಗಿ ಶಕ್ತಿಯನ್ನು ಒದಗಿಸುತ್ತಾ ಹೋಗುತ್ತದೆ.

Most Read:ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್-ಕೂದಲಿನ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಬಾದಾಮಿ ಹಿಟ್ಟಿನ ಅತ್ಯುತ್ತಮ ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ತಗ್ಗಿಸಿ ಹೃದಯದ ಮೇಲಿನ ಭಾರವನ್ನು ತಗ್ಗಿಸುವುದಾಗಿದೆ. ತನ್ಮೂಲಕ ರಕ್ತದಲ್ಲಿ ಹೆಪ್ಪುಗಟ್ಟುವುದನ್ನು ತಡೆಗಟ್ಟುವ ಜೊತೆಗೇ ಅಧಿಕ ರಕ್ತದೊತ್ತಡವನ್ನೂ ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಏಕಅಪರ್ಯಾಪ್ತ ಕೊಬ್ಬಿನ ಆಮ್ಲಗಳು ಮತ್ತು ಒಟ್ಟಾರೆ ಕೊಬ್ಬು, ವಿಟಮಿನ್ನುಗಳು ಹಾಗೂ ಖನಿಜಗಳು ಹೃದಯದ ಆರೋಗ್ಯಕ್ಕೆ ಪೂರಕವಾಗಿದ್ದು 'ಅಮೇರಿಕಾದ ಹೃದಯ ಸಂಘಟನೆ'ಯ ಪ್ರಕಾರ ಹೃದಯಕ್ಕೆ ಬಾದಾಮಿ ಹಿಟ್ಟು ಅತ್ಯುತ್ತಮ ಆಹಾರವಾಗಿದೆ.

ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ

ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ

ಬಾದಾಮಿ ಹಿಟ್ಟಿನಲ್ಲಿ ಅಗತ್ಯ ಖನಿಜಗಳಾದ ಕ್ಯಾಲ್ಸಿಯಂ, ಗಂಧಕ, ಮೆಗ್ನೇಶಿಯಂ ಹಾಗೂ ಪೊಟ್ಯಾಶಿಯಂ ಗಳಿದ್ದು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇವು ಅತ್ಯಂತ ಅಗತ್ಯವಾಗಿವೆ. ಈ ಪೋಷಕಾಂಶಗಳು ಹಾಲಿನಲ್ಲಿರುವುದಕ್ಕಿಂತಲೂ ದುಪ್ಪಟ್ಟಾಗಿವೆ. ಹಾಗಾಗಿ ಮೂಳೆಗಳ ಆರೋಗ್ಯವನ್ನು ಉತ್ತಮವಾಗಿರಿಸಲು ಮತ್ತು ದೃಢವಾಗಿಸಲು ಡೈರಿ ಉತ್ಪನ್ನಗಳಿಗೆ ಗುಲಾಮರಾರುವ ಬದಲು ಬಾದಾಮಿ ಹಿಟ್ಟಿನಿಂದ ಇವೆಲ್ಲವನ್ನೂ ಸುಲಭವಾಗಿ ಪಡೆಯಬಹುದು.

Most Read:ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು!

ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ

ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ

ಬಾದಾಮಿ ಹಿಟ್ಟಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದ್ದು ಇದರ ನಿಯಮಿತ ಸೇವನೆಯಿಂದ ಶಿಥಿಲಗೊಂಡಿದ್ದ ಸ್ನಾಯುಗಳು ಮತ್ತೆ ಬಲಯುತವಾಗುತ್ತವೆ. ಸ್ನಾಯುಗಳ ಬೆಳವಣಿಗೆಗೆ ಹಾಗೂ ಹುರಿಗಟ್ಟುವಿಕೆಗೆ ಪ್ರೋಟೀನ್ ಅಗತ್ಯವಾದ ಪೋಷಕಾಂಶವಾಗಿದ್ದು ಸ್ನಾಯುಗಳನ್ನು ಹುರಿಗಟ್ಟಿಸುವವರಿಗೆ ಹೆಚ್ಚು ನೆರವನ್ನು ನೀಡುತ್ತದೆ. ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುತ್ತಿದ್ದು ದೇಹದ ತೂಕವನ್ನು ಹೆಚ್ಚಿಸಬಯಸಿದರೆ ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರಕುವ ದುಬಾರಿ ವ್ಹೇ ಪೌಡರ್ (whey protein powder) ಎಂಬ ಸಿದ್ದ ಆಹಾರದ ಬದಲು ಬಾದಾಮಿ ಹಿಟ್ಟನ್ನು ಬಳಸಿ ನಿಮ್ಮ ಇಷ್ಟದ ತಿನಿಸುಗಳನ್ನು ತಯಾರಿಸಿ ಸೇವಿಸುವ ಮೂಲಕ ಅಗತ್ಯ ಪ್ರಮಾಣದ ಪ್ರೋಟೀನುಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ತ್ವಚೆ ಮತ್ತು ಕೂದಲುಗಳ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ

ತ್ವಚೆ ಮತ್ತು ಕೂದಲುಗಳ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ

ಬಾದಾಮಿಯಲ್ಲಿರುವ ವಿಟಮಿನ್ ಇ ತ್ವಚೆ ಮತ್ತು ಕೂದಲ ಆರೋಗ್ಯವನ್ನು ವೃದ್ದಿಸುತ್ತದೆ ಎಂದು ನಾವೆಲ್ಲಾ ಅರಿತೇ ಇದ್ದೇವೆ. ತ್ವಚೆಯ ಸೆಳೆತವನ್ನು ಹೆಚ್ಚಿಸಿ ತಾರುಣ್ಯವನ್ನು ಕಾಪಾಡುವ ಈ ಅದ್ಭುತ ಆಂಟಿ ಆಕ್ಸಿಡೆಂಟ್ ಕೂದಲ ಹೊಳಪನ್ನೂ ಹೆಚ್ಚಿಸುವ ಪೋಷಕಾಂಶವಾಗಿದೆ. ಬಾದಾಮಿಯ ಹಿಟ್ಟಿನ ಆಹಾರವನ್ನು ಸೇವಿಸುತ್ತಾ ಬರುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಈ ಕಣಗಳ ಪ್ರಭಾವದಿಂದ ಎದುರಾಗಬಹುದಾಗಿದ್ದ ನೆರಿಗೆಗಳು, ಚರ್ಮ ಜೋತುಬೀಳುವುದು ಮೊದಲಾದವುಗಳಿಂದ ರಕ್ಷಣೆ ಪಡೆಯುವ ಜೊತೆಗೇ ಕೂದಲೂ ಸೊಂಪಗಾಗುತ್ತದೆ ಹಾಗೂ ಆರೋಗ್ಯಕರ ಬೆಳವಣಿಗೆಯನ್ನು ಪಡೆಯುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬುಗಳು ಉತ್ತಮ ಪ್ರಮಾಣದಲ್ಲಿವೆ. ಇದರೊಂದಿಗೆ ಪ್ರೋಟೀನುಗಳು, ಕರಗುವ ನಾರು ಉತ್ತಮ ಪ್ರಮಾಣದಲ್ಲಿದ್ದು ಗ್ಲುಟೆನ್ ರಹಿತವಾಗಿದೆ. ಕಾರ್ಬೋಹೈಡ್ರೇಟುಗಳೂ ಕಡಿಮೆ ಪ್ರಮಾಣದಲ್ಲಿವೆ. ಈ ಎಲ್ಲಾ ಅಂಶಗಳು ತೂಕ ಕಳೆದುಕೊಳ್ಳಲಿಚ್ಛಿಸುವವರಿಗೆ ಸೂಕ್ತವಾಗಿವೆ. ಅಲ್ಲದೇ ವಿಶೇಷವಾಗಿ ಕರಗುವ ನಾರು ಹೆಚ್ಚು ಹೊತ್ತು ಹೊಟ್ಟೆಯನ್ನು ತುಂಬಿರುವಂತಹ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಬಾದಾಮಿ ಹಿಟ್ಟಿನ ಸೇವನೆಯಿಂದ ಕರುಳುಗಳ ಒಳಭಾಗದ ಗೋಡೆಗಳಲ್ಲಿ ಕಂಡುಬರುವ ಅಸಹಜ ಬೆಳವಣಿಗೆಯಾದ aberrant crypt foci ಎಂಬ ನಾಳದಂತಹ ಗ್ರಂಥಿಗಳ ಉತ್ಪಾದನೆ ತಡೆಯಲ್ಪಡುತ್ತದೆ. ಈ ನಾಳಗಳು ಕೆಲವೊಮ್ಮೆ ಗುದದ್ವಾರದ ಒಳಭಾಗದಲ್ಲಿಯೂ ಕಂಡುಬರುತ್ತವೆ. ಈ ನಾಳಗಳು ಕ್ರಮೇಣ ಒತ್ತೊತ್ತಾಗುತ್ತಾ ಕ್ಯಾನ್ಸರ್ ನ ರೂಪ ಪಡೆಯುತ್ತವೆ. ಹಾಗಾಗಿ ಬಾದಾಮಿ ಹಿಟ್ಟಿನ ಸೇವನೆಯಿಂದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕನಿಷ್ಟವಾಗಿಸಬಹುದು.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಬಾದಾಮಿ ಹಿಟ್ಟಿನಲ್ಲಿ ರೈಬೋಫ್ಲೇವಿನ್, ಮ್ಯಾಂಗನೀಸ್ ಹಾಗೂ ತಾಮ್ರದ ಅಂಶವಿದೆ. ಇವೆಲ್ಲವೂ ದೇಹದಲ್ಲಿ ಹೆಚ್ಚಿನ ಶಕ್ತಿ ಉತ್ಪಾದಿಸಲು, ಕೆಂಪು ರಕ್ತಕಣಗಳ ಉತ್ಪಾದನೆ ಹೆಚ್ಚಿಸಲು, ಜೀವಕೋಶಗಳ ಬೆಳವಣಿಗೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದರ ಜೊತೆಗೇ ಇದರಲ್ಲಿರುವ ಇತರ ಅತಿಸೂಕ್ಷ್ಮ ಪೋಷಕಾಂಶಗಳು ಬಾದಾಮಿ ಹಿಟ್ಟನ್ನು ಅತ್ಯುತ್ತಮ ಶಕ್ತಿವರ್ಧಕ ಆಹಾರವಾಗಿಸಿವೆ.

 ಅಡುಗೆ ಮತ್ತು ರೊಟ್ಟಿಯ ತಯಾರಿಕೆಯಲ್ಲಿ ಬಾದಾಮಿ ಹಿಟ್ಟಿನ ಬಳಕೆ ಹೇಗೆ?

ಅಡುಗೆ ಮತ್ತು ರೊಟ್ಟಿಯ ತಯಾರಿಕೆಯಲ್ಲಿ ಬಾದಾಮಿ ಹಿಟ್ಟಿನ ಬಳಕೆ ಹೇಗೆ?

ಗೋಧಿ ಹಿಟ್ಟು ಮತ್ತು ಮೈದಾ ಬಳಸಿ ತಯಾರಿಸುವ ಯಾವುದೇ ಖಾದ್ಯವನ್ನು ಈ ಹಿಟ್ಟುಗಳ ಬದಲಿಗೆ ಬಾದಾಮಿ ಹಿಟ್ಟು ಬಳಸಿ ತಯಾರಿಸಬಹುದು. ಹುರಿದ ಖಾದ್ಯಗಳಲ್ಲಿ ಬಾದಾಮಿ ಹಿಟ್ಟನ್ನು ಹೊರಭಾಗದಲ್ಲಿ ಸಿಂಪಡಿಸಿ ಹುರಿಯಬಹುದು. ವಿಶೇಷವಾಗಿ ಮೀನು, ಕೋಳಿಮಾಂಸ ಮತ್ತು ಎಣ್ಣೆಯಲ್ಲಿ ಹುರಿಯುವ ತರಕಾರಿಗಳ ಹೊರಗೆ ಬ್ರೆಡ್ ತುಣುಕುಗಳನ್ನು ಬಳಸುವ ಬದಲು ಬಾದಾಮಿ ಹಿಟ್ಟನ್ನು ಬಳಸಿ ಹುರಿದರೆ ಖಾದ್ಯದ ರುಚಿಯೊಂದಿಗೆ ಪೌಷ್ಟಿಕ ಮೌಲ್ಯವೂ ಹೆಚ್ಚುತ್ತದೆ.

English summary

Reasons Why Almond Flour Is Better Than Other Flours

Almond flour is made from blanched ground almonds. Start by blanching the almonds in boiling water to remove the skin and then grind and sift them into a fine flour. The flour has a sweet, buttery flavour with a lighter colour and texture.
X
Desktop Bottom Promotion