For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ದಿನಕ್ಕೆಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

|

ಋತುಚಕ್ರದ ಅವಧಿಯಲ್ಲಿ ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತಿ ಮುಖ್ಯವಾಗಿದೆ. ಈ ಅವಧಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಗಮನ ನೀಡದಿದ್ದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗುತ್ತವೆ. ಮೂತ್ರನಾಳದ ಸೋಂಕು (Urinary Tract Infection - UTI) ಹಾಗೂ ಯೀಸ್ಟ್ ಸೋಂಕು ರೋಗ ತಡೆಗಟ್ಟಲು ಶುಚಿತ್ವ ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಹೀಗಾಗಿ ಋತುಚಕ್ರದ ಅವಧಿಯಲ್ಲಿ ನಿಯಮಿತವಾಗಿ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ಬದಲಾಯಿಸಬೇಕಾಗುತ್ತದೆ.

ಎಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

ಎಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

ಪ್ರತಿ ನಾಲ್ಕು ತಾಸುಗಳಿಗೊಮ್ಮೆ ನ್ಯಾಪಕಿನ್ ಬದಲಾಯಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಒಂದೊಮ್ಮೆ ಟ್ಯಾಂಪೂನ್‌ಗಳನ್ನು ಬಳಸುತ್ತಿದ್ದರೆ ಅದನ್ನು ಪ್ರತಿ ಎರಡು ಗಂಟೆಗೊಮ್ಮೆ ಬದಲಾಯಿಸಬೇಕು. ಆದಾಗ್ಯೂ ನ್ಯಾಪಕಿನ್ ಹಾಗೂ ಟ್ಯಾಂಪೂನ್‌ಗಳನ್ನು ಬದಲಾಯಿಸುವ ಅವಧಿಯು ಆಯಾ ಹೆಣ್ಣುಮಕ್ಕಳ ಅವಶ್ಯಕತೆ ಹಾಗೂ ನ್ಯಾಪ್‌ಕಿನ್ ಗಳ ಗುಣಮಟ್ಟವನ್ನು ಆಧರಿಸಿ ಬದಲಾಗುತ್ತದೆ. ಕೆಲವರಲ್ಲಿ ಕಡಿಮೆ ಪ್ರಮಾಣದ ಸ್ರವಿಸುವಿಕೆ ಇದ್ದರೆ ಇನ್ನು ಕೆಲವರಲ್ಲಿ ಹೆಚ್ಚು ಪ್ರಮಾಣದ ರಕ್ತಸ್ರಾವ ಇರಬಹುದು. ಹೀಗಾಗಿ ಅವಶ್ಯಕತೆಯನ್ನು ನೋಡಿಕೊಂಡು ನ್ಯಾಪಕಿನ್ ಹಾಗೂ ಟ್ಯಾಂಪೂನ್‌ಗಳನ್ನು ಬದಲಾಯಿಸಬೇಕು.

Most Read: ಪುರುಷರು ಹಾಗೂ ಮಹಿಳೆಯರಲ್ಲಿ ಕಂಡುಬರುವ ಬಂಜೆತನಕ್ಕೆ ಸಾಮಾನ್ಯ ಲಕ್ಷಣಗಳು

ಈ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಿ

ಈ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಿ

ನಿಮ್ಮ ಅಗತ್ಯ ನೋಡಿಕೊಂಡು ನ್ಯಾಪ್‌ಕಿನ್ ಬದಲಾಯಿಸುವುದು ಸರಿಯಾದರೂ ತೀರಾ ಹೆಚ್ಚು ಹೊತ್ತು ಒಂದೇ ನ್ಯಾಪ್‌ಕಿನ್ ಬಳಸುವುದು ಸರಿಯಲ್ಲ. ಒಂದು ಬಾರಿ ಋತುಸ್ರಾವದ ರಕ್ತ ದೇಹದಿಂದ ಹೊರಬಂದ ತಕ್ಷಣ ಅದು ದೇಹದ ಇತರ ಸಹಜ ಜೈವಿಕ ಕ್ರಿಯೆಗಳನ್ನು ಕಲುಷಿತಗೊಳಿಸಬಲ್ಲದು. ರಕ್ತಸ್ರಾವ ಕಡಿಮೆ ಆದ ಸಂದರ್ಭದಲ್ಲಿಯೂ ಸಹ ನ್ಯಾಪ್‌ಕಿನ್ ಒದ್ದೆಯಾಗಿರುವುದರಿಂದ ಜೈವಿಕ ಕ್ರಿಯೆಗಳು ಕಲುಷಿತಗೊಳ್ಳಬಹುದು. ಬ್ಯಾಕ್ಟೀರಿಯಾಗಳು ಬಹು ಬೇಗನೆ ವೃದ್ಧಿಯಾಗಿ ಯೋನಿ ಸೋಂಕು, ಮೂತ್ರ ನಾಳದ ಸೋಂಕು ಉಂಟಾಗಬಹುದು.

ಆಗಾಗ ನ್ಯಾಪ್‌ಕಿನ್ ಬದಲಾಯಿಸಿ

ಆಗಾಗ ನ್ಯಾಪ್‌ಕಿನ್ ಬದಲಾಯಿಸಿ

ಕೆಲ ಬಾರಿ ರಕ್ತಸ್ರಾವ ಕಡಿಮೆ ಇದೆ ಎಂದು ಒಂದೇ ನ್ಯಾಪ್‌ಕಿನ್ ಅನ್ನು ಬಹಳ ಹೊತ್ತು ಬಳಸದಿರಿ. ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಲು ಆಗಾಗ ನ್ಯಾಪಕಿನ್ ಚೇಂಜ್ ಮಾಡುವುದು ಹಿತಕರ.

Most Read: ಕಿಕ್ ಏರಿಸಲು ಸ್ಯಾನಿಟರಿ ಪ್ಯಾಡ್ ಅನ್ನು ಕುದಿಸುವರು!

ಯಾವುದಾದರೂ ಒಂದೇ ರೀತಿಯ ಸ್ಯಾನಿಟೇಶನ್ ಬಳಸಿ

ಯಾವುದಾದರೂ ಒಂದೇ ರೀತಿಯ ಸ್ಯಾನಿಟೇಶನ್ ಬಳಸಿ

ರಕ್ತಸ್ರಾವ ಅಧಿಕವಾಗಿರುವಾಗ ಕೆಲವರು ಎರಡು ನ್ಯಾಪ್‌ಕಿನ್, ನ್ಯಾಪ್‌ಕಿನ್ ಹಾಗೂ ಬಟ್ಟೆ ಮತ್ತು ಸ್ಯಾನಿಟರಿ ಪ್ಯಾಡ್‌ನೊಂದಿಗೆ ಟ್ಯಾಂಪೂನ್ ಬಳಸುತ್ತಾರೆ. ಹೆಚ್ಚಿನ ಸ್ರಾವದ ಸಂದರ್ಭದಲ್ಲಿ ಇದು ಉತ್ತಮ ಉಪಾಯವಾಗಿ ಕಂಡರೂ ಈ ವಿಧಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಎರಡು ನ್ಯಾಪಕಿನ್ ಬಳಸಿದಾಗ ಹೆಚ್ಚು ಹೀರಿಕೊಳ್ಳುವಿಕೆಯಿಂದ ಆಗಾಗ ನ್ಯಾಪಕಿನ್ ಬದಲಾಯಿಸುವಿಕೆ ಅಗತ್ಯವಿಲ್ಲ ಎಂದೆನಿಸಬಹುದು. ಈ ರೀತಿ ಆದಾಗ ಯೋನಿಯ ಮೇಲೆ ಗುಳ್ಳೆಗಳಾಗಬಹುದು ಹಾಗೂ ಸೋಂಕು ಹರಡಬಹುದು. ಟ್ಯಾಂಪೂನ್ ಬಳಸುವವರಲ್ಲಿ ಟಿಎಸ್‌ಎಸ್ (Toxic shock syndrome) ಸೋಂಕು ಬರಬಹುದು.

ಹೀಗೆ ಮಾಡುವುದು ಉತ್ತಮ

ಹೀಗೆ ಮಾಡುವುದು ಉತ್ತಮ

ಋತುಚಕ್ರದ ಅವಧಿಯಲ್ಲಿ ನಿಯಮಿತವಾಗಿ ನ್ಯಾಪ್‌ಕಿನ್ ಬದಲಾಯಿಸಿ ಹಾಗೂ ಒಂದು ನ್ಯಾಪ್‌ಕಿನ್ ಅನ್ನು 3ರಿಂದ 4ಗಂಟೆಗೂ ಹೆಚ್ಚು ಕಾಲ ಧರಿಸದಿರಿ. ಬಳಸಿದ ನ್ಯಾಪಕಿನ್‌ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಇವು ಬ್ಯಾಕ್ಟೀರಿಯಾ ಬೆಳೆಯುವ ಸ್ಥಳವಾಗಿ ಸೋಂಕು ಹರಡಬಲ್ಲವು. ನ್ಯಾಪಕಿನ್ ಬದಲಾಯಿಸಿದ ನಂತರ ಅಥವಾ ಶೌಚಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ದದ್ದು ಅಥವಾ ಸೋಂಕು ಕಂಡು ಬಂದಲ್ಲಿ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಇಂತಹ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಸರಳ ಟಿಪ್ಸ್

ಇಂತಹ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಸರಳ ಟಿಪ್ಸ್

ಒಂದು ವೇಳೆ ನಿಮ್ಮ ಮಾಸಿಕ ಋತು ಚಕ್ರವು ಅನಿಯಮಿತವಾಗಿದ್ದರೆ, ನೀವು ಮುಜುಗರವನ್ನು ತಪ್ಪಿಸಿಕೊಳ್ಳಲು ಪ್ಯಾಂಟಿ ಲೈನರನ್ನು ನಿಯಮಿತವಾಗಿ ಬಳಸುತ್ತಿರುತ್ತೀರಿ. ಇದರಿಂದ ನಿಮಗೆ ಮುಜುಗರವು ತಪ್ಪಬಹುದು. ಆದರೆ ತುರಿಕೆ ಮತ್ತು ಇನ್‍ಫೆಕ್ಷನ್ ಕಾಡಬಹುದು. ಪ್ಯಾಂಟಿ ಲೈನರ್‌ನಲ್ಲಿರುವ ಪ್ಲಾಸ್ಟಿಕ್ ಹಿಂಬದಿಯು ಗಾಳಿಯು ಸರಾಗವಾಗಿ ಸಾಗಲು ತೊಡಕನ್ನುಂಟು ಮಾಡುತ್ತದೆ.

ಇದರಿಂದಾಗಿ ಸೆಕೆ ಮತ್ತು ಬಿಸಿಯು ಯೋನಿಯನ್ನು ಕಾಡುತ್ತದೆ. ಜೊತೆಗೆ ಇದನ್ನು ತುಂಬಾ ಹೊತ್ತು ಹಾಕಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್‍ಫೆಕ್ಷನ್‍ಗಳು ಸಹ ಸಂಭವಿಸುತ್ತವೆ. ಇದಲ್ಲದೆ ಇದು ನಿರಂತರವಾಗಿ ಉಜ್ಜಲ್ಪಡುವುದರಿಂದ ಯೋನಿ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸದಾ ನಿಮ್ಮ ಬಳಿ ಹೆಚ್ಚು ಟ್ಯಾಂಪನ್‍ಗಳನ್ನು ಅಥವಾ ಪ್ಯಾಡ್‍ಗಳನ್ನು ಇರಿಸಿಕೊಳ್ಳಿ. ಮುಜುಗರದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಆಗಾಗ ಒಳ ಉಡುಪನ್ನು ಬದಲಾಯಿಸುತ್ತಿರಿ. ಅನಿಯಮಿತ ಋತು ಚಕ್ರವನ್ನು ಕೆಗೆಲ್ ಮೂಲಕ ಪರಿಹರಿಸಿಕೊಳ್ಳಿ. ಜೀವನ ಶೈಲಿಯಲ್ಲಿ ಬದಲಾವಣೆ ಅಥವಾ ವೈಧ್ಯೋಪಚಾರವು ಪ್ಯಾಂಟಿ ಲೈನರ್‌ಗಳ ಅವಲಂಬನೆಯನ್ನು ಕಡಿಮೆ ಮಾಡಬಲ್ಲವು. ಯಾವಾಗ ನೀವು ಪ್ಯಾಂಟಿ ಲೈನರ್‌ಗಳನ್ನು ಬಳಸುತ್ತೀರೋ, ಆಗ ಅವುಗಳನ್ನು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಬದಲಾಯಿಸಿ.

English summary

Per Day, how many times do you change your napkin?

It goes without saying that during periods, you are required to maintain cleanliness and hygiene. Not only does it impact your health but maintaining proper hygiene is also important to prevent certain diseases like UTIs or yeast infections. Hence, the primary and most important maintenance requires changing your pad frequently during a menstrual cycle.
X
Desktop Bottom Promotion