For Quick Alerts
ALLOW NOTIFICATIONS  
For Daily Alerts

ವಾರದಲ್ಲಿ ಒಂದೆರಡು ಬಾರಿ ಮಿಲನ, ಜೀವನ ಸುಖಮಯ!

By Arshad
|

ದಾಂಪತ್ಯ ಮಿಲನ ನಿಸರ್ಗ ನಿಯಮವಾಗಿದ್ದು ಇದನ್ನು ನಿಯಮಿತವಾಗಿ ಸಾಗಿಸುತ್ತಿರಬೇಕೆಂದು ನಿಸರ್ಗ ಬಯಕೆಗಳನ್ನು ಮೂಡಿಸುತ್ತದೆ. ಆದರೆ ಎಲ್ಲಾ ಸಂಗಾತಿಗಳಿಗೆ ಸದಾ ಜೊತೆಯಾಗಿರಲು ಹಲವರು ಅಡ್ಡಿಗಳಿವೆ. ಉದ್ಯೋಗ ಅಥವಾ ಇತರ ಕಾರಣಗಳಿಂದ ಜೊತೆಯಾಗಿರಲು ಸಾಧ್ಯವಾಗದೇ ಮಿಲನವೂ ದೂರವೇ ಉಳಿಯುತ್ತದೆ.

ಕಾರಣವೇನೇ ಇದ್ದರೂ ನಿಸರ್ಗ ನಿಯಮವನ್ನು ಉಲ್ಲಂಘಿಸುವ ಮೂಲಕ ದೇಹಕ್ಕೆ ಕೆಲವು ತೊಂದರೆಗಳಾಗುವುದು ನಿಶ್ಚಿತವಾಗಿದೆ. ನಿಸರ್ಗದಲ್ಲಿರುವ ಎಲ್ಲಾ ಪ್ರಾಣಿಗಳಿಗೂ, ಜೀವಿಗಳಿಗೂ ನಿಸರ್ಗವೇ ಕೆಲವು ಮೂಲಪ್ರವೃತ್ತಿಗಳಿಗೆ ಬದ್ದರಾಗಿರುವಂತೆ ನಿರ್ಮಿಸಿರುತ್ತದೆ. ಈ ಪ್ರವೃತ್ತಿಗಳಿಗೆ ವಿರುದ್ದವಾಗಿ ಹೋಗುವ ಯಾವ ಜೀವಿಗೂ ಉಳಿಗಾಲವಿಲ್ಲ. ಹಸಿವು, ಬಾಯಾರಿಕೆ, ಜೀವಂತವಾಗಿ ಉಳಿಯುವ ಬಯಕೆ, ಮಿಲನ, ಸಂತಾನಾಭಿವೃದ್ದಿ ಮೊದಲಾದ ಕೆಲವು ಮೂಲಪ್ರವೃತ್ತಿಗಳು ನಿಸರ್ಗನಿಯಮಗಳಾಗಿವೆ.

ಹಸಿವು ಬಾಯಾರಿಕೆಯಂತೆಯೇ ಕಾಮಬಯಕೆಯೂ ಮಾನವಸಹಜ ಗುಣವಾಗಿದೆ. ಈ ಬಯಕೆಯನ್ನು ಪೂರ್ಣಗೊಳಿಸಲೆಂದೇ ವಿವಾಹ ವ್ಯವಸ್ಥೆಯನ್ನು ನಮ್ಮ ಸಮಾಜ ನಿರ್ಮಿಸಿದ್ದು ಈ ಮೂಲಕ ಜಗತ್ತಿನಲ್ಲಿ ಸಂತುಲನವನ್ನು ಹಾಗೂ ಮಾನವ ಜನಾಂಗವನ್ನು ಮುಂದುವರೆಸಲು ನಿಯಮವನ್ನು ಮಾಡಲಾಗಿದೆ. ಆದರೆ ಕೆಲವು ಕಾರಣಗಳಿಂದ ಮಿಲನವನ್ನು ನಿಯಮಿತವಾಗಿ ಪೂರೈಸಿಕೊಳ್ಳಲು ಸಾಧ್ಯವಾಗದ ದಂಪತಿಗಳಲ್ಲಿ ಕೆಲವು ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ಸಂಗಾತಿ ಬಳಿ ಇಲ್ಲದಿರುವುದು ಪ್ರಮುಖ ಕಾರಣವಾದರೆ ಮಾನಸಿಕ ಒತ್ತಡ, ಧಾರ್ಮಿಕ ಕಾರಣಗಳ ಕಟ್ಟುಪಾಡುಗಳು, ನಿಮಿರು ದೌರ್ಬಲ್ಯ, ಕಾಮವಾಂಛೆಯ ಕೊರತೆ ಮೊದಲಾದವುಗಳು ಮಿಲನಕ್ಕೆ ಮನಸ್ಸು ಮಾಡದೇ ಇರಲು ಇತರ ಕಾರಣಗಳಾಗಿವೆ. ಕಾರಣವೇನೇ ಇರಲಿ, ನಿಸರ್ಗ ನಿಯಮವನ್ನು ಮುರಿಯುವ ಪರಿಣಾಮ ಆರೋಗ್ಯದ ಮೇಲೆ ಏನಾಗುತ್ತದೆ ಎಂಬುದನ್ನು ನೋಡೋಣ...

 ಖಿನ್ನತೆ

ಖಿನ್ನತೆ

ಮಿಲನದ ಸಮಯದಲ್ಲಿ ದಂಪತಿಗಳಿಬ್ಬರ ದೇಹದಲ್ಲಿಯೂ ಎಂಡಾರ್ಫಿನ್ ಎಂಬ ಹಾರ್ಮೋನುಗಳು ಸ್ರವಿಸುತ್ತವೆ ಹಾಗೂ ಇದೇ ಮಾನಸಿಕ ತೃಪ್ತಿ ಪಡೆಯಲು ಕಾರಣವಾಗಿದೆ. ಈ ಹಾರ್ಮೋನು ಸ್ರವಿಸದೇ ಇರುವವರಲ್ಲಿ ಮಾನಸಿಕ ಖಿನ್ನತೆ ಹಾಗೂ ನಿರಾಶಾವಾದ ಕಂಡುಬರುತ್ತದೆ.

ಜನನಾಂಗದ ಗಾತ್ರ ಕುಸಿಯುವಿಕೆ

ಜನನಾಂಗದ ಗಾತ್ರ ಕುಸಿಯುವಿಕೆ

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ನಿಯಮಿತವಾದ ಅಥವಾ ಬಹುಕಾಲದವರೆಗೆ ನಿಮಿರುತನವನ್ನು ಪಡೆಯದೇ ಇರುವ ಪುರುಷರ ಜನನಾಂಗದ ಅಂಗಾಂಶಗಳಲ್ಲಿ ರಕ್ತ ಹರಿಯುವ ಪ್ರಮಾಣ ಕುಗ್ಗುತ್ತಾ ಈ ಅಂಗಾಂಶ ತನ್ನ ಕ್ಷಮತೆ ಹಾಗೂ ಸ್ಥಿತಿಸ್ಥಾಪಕತ್ವ ಗುಣವನ್ನು ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತದೆ ಹಾಗೂ ಅಗತ್ಯಬಿದ್ದಾಗ ತನ್ನ ಮೂಲ ಸಾಮರ್ಥ್ಯಕ್ಕೆ ಹಿಗ್ಗಲು ಅಸಫಲವಾಗುತ್ತವೆ. ಪರಿಣಾಮವಾಗಿ ಪುರುಷ ಜನನಾಂಗ ಉದ್ರೇಕಗೊಂಡಾಗ ಇರುವ ಗಾತ್ರ ಹಾಗೂ ಪಡೆಯಲು ಅಸಫಲಗೊಳ್ಳುತ್ತದೆ.

ನಿಮಿರು ದೌರ್ಬಲ್ಯ

ನಿಮಿರು ದೌರ್ಬಲ್ಯ

ನಿಯಮಿತವಾಗಿ ಮಿಲನದಲ್ಲಿ ಭಾಗಿಯಾಗದೇ ಇರುವ ಅಥವಾ ಬಹುಕಾಲ ಪಾಲ್ಗೊಳ್ಳದೇ ಇರುವ ಇನ್ನೊಂದು ಪ್ರಮುಖ ತೊಂದರೆ ಎಂದರೆ ನಿಮಿರು ದೌರ್ಬಲ್ಯ. ಅಗತ್ಯ ಸಮಯದಲ್ಲಿ ಜನನಾಂಗ ಸಾಕಷ್ಟು ನಿಮಿರುತನವನ್ನು ಪಡೆಯದೇ ಹೋಗುತ್ತದೆ.

ಕಾಮಾಸಕ್ತಿ ಕಡಿಮೆಯಾಗುವುದು

ಕಾಮಾಸಕ್ತಿ ಕಡಿಮೆಯಾಗುವುದು

ಬಹುಕಾಲ ಮಿಲನದಲ್ಲಿ ತೊಡಗಿಕೊಳ್ಳದ ದಂಪತಿಗಳಲ್ಲಿ ಕಾಮಾಸಕ್ತಿಯೂ ಕಡಿಮೆಯಾಗುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಏಕೆಂದರೆ ಈ ಸಮಯದಲ್ಲಿ ಪುರುಷರೂ ಮಹಿಳೆಯರೂ ತಮ್ಮ ಗಮನವನ್ನು ಇತರ ಅಭಿರುಚಿ, ಧಾರ್ಮಿಕ ಕಟ್ಟುಪಾಡು ಅಥವಾ ಬೇರಾವುದೋ ವಿಷಯದ ಕುರಿತು ಕೇಂದ್ರೀಕರಿಸಿರುವ ಕಾರಣ ಮಿಲನದ ಸಮಯದಲ್ಲಿಯೂ ಅವರ ಗಮನ ಅವರ ಅಭಿರುಚಿ ಅಥವಾ ಆ ಸಮಯದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆಯೇ ಇರುವ ಕಾರಣ ಕಾಮಾಸಕ್ತಿ ಕಡಿಮೆಯಾಗುತ್ತದೆ.

ಕುಂಠಿತವಾಗುವ ರೋಗ ನಿರೋಧಕ ಶಕ್ತಿ

ಕುಂಠಿತವಾಗುವ ರೋಗ ನಿರೋಧಕ ಶಕ್ತಿ

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ನಿಯಮಿತವಾದ ಮಿಲನದಿಂದ ದಂಪತಿಗಳಿಬ್ಬರ ದೇಹದಲ್ಲಿಯೂ ರೋಗ ನಿರೋಧಕ ವ್ಯವಸ್ಥೆ ಉತ್ತಮವಾಗಿದ್ದು ಈ ಕ್ರಿಯೆಯನ್ನು ನಿಯಮಿತವಾಗಿಸುವ ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಅತ್ಯುತ್ತಮವಾಗಿರಿಸಬಹುದು. ಮಿಲನವಂಚಿತ ದಂಪತಿಗಳಲ್ಲಿ ರೋಗ ನಿರೋಧಕ ವ್ಯವಸ್ಥೆ ಕುಸಿಯುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗಬಹುದು

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗಬಹುದು

ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ನಿಯಮಿತ ಮಿಲನದ ಮೂಲಕ ವೃಷಣಗಳಲ್ಲಿ ಸಂಗ್ರಹವಾಗಿದ್ದ ವೀರ್ಯಾಣುಗಳನ್ನು ಸ್ಖಲಿಸುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೀಗೆ ಮಾಡದೇ ಇರುವವರಿಗಿಂತ ಕಡಿಮೆ ಇರುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ತಿಂಗಳಿಗೆ ಇಪ್ಪತ್ತೊಂದು ಬಾರಿ ಸ್ಖಲಿಸುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ತಿಂಗಳಿಗೆ ನಾಲ್ಕರಿಂದ ಐದು ಬಾರಿ ಸ್ಖಲಿಸುವ ಪುರುಷರಿಗಿಂತಲೂ ಕಡಿಮೆ ಇರುತ್ತದೆ.

ಮಾಸಿಕ ದಿನಗಳ ಸೆಡೆತ

ಮಾಸಿಕ ದಿನಗಳ ಸೆಡೆತ

ನಿಯಮಿತವಾಗಿ ಮಿಲನದಲ್ಲಿ ಪಾಲ್ಗೊಳ್ಳದ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ತೊಂದರೆ ಎಂದರೆ ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವು. ನಿಯಮಿತ ಮಿಲನದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ಈ ನೋವು ಕನಿಷ್ಟವಾಗಿರುತ್ತದೆ.

English summary

not having intercourse regularly can cause health problems

While it is a fact that human beings are wired to desire sexual intercourse, it is also true that some of us may not be able indulge in intercourse on a regular basis. Did you know that not having sex regularly can cause certain health problems? Yes! As we know, all animals, including human beings, have certain basic instincts, without which they cannot survive. Hunger, thirst, self-preservation and even the instinct to desire sex are all basic instincts that come naturally to us, as humans need to procreate.
X
Desktop Bottom Promotion