For Quick Alerts
ALLOW NOTIFICATIONS  
For Daily Alerts

  ದಿನಾ ಕುಡಿಯುವವರಿಗಿಂತ ಕುಡಿಯದೇ ಇರುವವರೇ ಹೆಚ್ಚು ಅನಾರೋಗ್ಯದ ರಜೆಗಳನ್ನು ಪಡೆಯುತ್ತಾರಂತೆ..!

  By Sushma Charhra
  |

  ಒಂದು ವೇಳೆ ನಾವೀಗ ಕುಡಿಯುವುದು ಕೆಟ್ಟ ಅಭ್ಯಾಸ ಅಲ್ಲ ಎಂದು ಹೇಳಿದರೆ ನಿಮಗೆ ಏನು ಅನ್ನಿಸುತ್ತೆ? ಒಂದು ವೇಳೆ ನಾವು ಸಾಮಾಜಿಕವಾಗಿ ಕುಡಿಯುವುದು ಒಂದು ಒಳ್ಳೆಯ ಉಪಾಯ ಎಂದು ಹೇಳಿದರೆ ನಿಮಗೆ ಏನು ಅನ್ನಿಸುತ್ತೆ? ಆಶ್ಚರ್ಯ ಆಯಿತಾ?

  ಹೀಗೆ ಕುಡಿಯುವುದು ಸರಿ ಎಂದು ಹೇಳುತ್ತಿರುವ ಮೊದಲ ಲೇಖನವನ್ನು ಬಹುಶ್ಯಃ ನೀವು ಓದುತ್ತಿರಬಹುದು ಅಲ್ಲವೇ? ಅಂದ ಹಾಗೆ ನಾವು ಹೀಗೆ ಹೇಳುತ್ತಿರುವುದಕ್ಕೆ ಒಂದು ಕಾರಣವಿದೆ. ಇದು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವಂತೆ ಬರೆಯುತ್ತಿರುವ ಲೇಖನ ಖಂಡಿತ ಅಲ್ಲ. ಕೆಲವು ರೀಸರ್ಚರ್ ಗಳು ಒಂದು ಅಧ್ಯಯನವನ್ನು ಕೈಗೊಂಡಿದ್ದರು, ಇದರಿಂದ ಅವರಿಗೆ ತಿಳಿದು ಬಂದಿರುವ ಒಂದು ಸಂಗತಿ ಏನೆಂದರೆ ಸಾಮಾಜಿಕವಾಗಿ ಡ್ರಿಂಕ್ಸ್ ಮಾಡುವವರು, ಒಂದು ದಿನವೂ ಡ್ರಿಂಕ್ಸ್ ಅನ್ನು ಹತ್ತಿರಕ್ಕೂ ಸುಳಿಯಲು ಬಿಡದ ವ್ಯಕ್ತಿಗಳಿಗಿಂತ ಕಡಿಮೆ ಸಿಕ್ ಲೀವ್ ಅರ್ಥಾತ್ ಹುಷಾರಿಲ್ಲವೆಂದಾಗ ತೆಗೆದುಕೊಳ್ಳಬಹುದಾದ ಕಛೇರಿಯ ರಜೆಗಳನ್ನು ತೆಗೆದುಕೊಳ್ಳುತ್ತಾರಂತೆ.

  ರೀಸರ್ಚರ್ ಗಳು ಕಂಡು ಹಿಡಿದಿರುವಂತೆ, ಅತಿಯಾಗಿ ಡ್ರಿಂಕ್ಸ್ ಮಾಡುವವರು ಅಥವಾ ಒಂದು ದಿನವೂ ಡ್ರಿಂಕ್ಸ್ ಸೇವಿಸದೇ ಇರುವವರಿಗಿಂತ, ಕ್ರಮಬದ್ಧವಾಗಿ ಪ್ರಮಾಣ ಬದ್ಧವಾಗಿ ಡ್ರಿಂಕ್ಸ್ ಮಾಡುವವರ ಆರೋಗ್ಯ ಉಳಿದವರಿಗಿಂತ ಹೆಚ್ಚು ಆರೋಗ್ಯವಾಗಿರುತ್ತದೆಯಂತೆ.

  drinkers

  ಇವರು ಯುಕೆ, ಫಿನ್ ಲ್ಯಾಂಡ್, ಫ್ರಾನ್ಸ್ ನ ಜನರಲ್ಲಿ ಈ ಅಧ್ಯಯನವನ್ನು ಮಾಡಿದ್ದರು ಮತ್ತು ಅಂತಿಮವಾಗಿ ಒಂದು ನಿರ್ಧಾರವನ್ನು ಕೈಗೊಂಡರು. ನಾನ್ ಆಲ್ಕೋಹಾಲಿಕ್ ಅಥವಾ ಯಾವತ್ತೂ ಆಲ್ಕೋಹಾಲ್ ಸೇವಿಸದೇ ಇರುವ ವ್ಯಕ್ತಿಗಳಿಗೆ ಆಗಾಗ ಸಿಕ್ ಲೀವ್ ಬೇಕಾಗುತ್ತಲೇ ಇರುತ್ತದೆಯಂತೆ. ಅವರಿಗೆ ಬೇರೆಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆಯಂತೆ. ಉದಾಹರಣೆಗೆ ಮೆಂಟಲ್ ಡಿಸಾರ್ಡರ್, ಮೂಳೆ ಮತ್ತು ಮಾಂಸಗಳಿಗೆ ಸಂಬಂಧಿಸಿದ ಕಾಯಿಲೆಗಳು, ಹೊಟ್ಟೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಅವರನ್ನು ಬಾಧಿಸುತ್ತಲೇ ಇದ್ದು, ಸರಿಯಾಗಿ ಕೆಲಸ ಮಾಡಲು ಆಗದೆ ರಜೆ ತೆಗೆದುಕೊಳ್ಳುವಂತಾಗುತ್ತದೆ ಎಂದು ಅಧ್ಯಯನ ಹೇಳುತ್ತೆ.

  ಇದಿಷ್ಟೇ ಅಲ್ಲದೇ, ರಿಸರ್ಚರ್ ಗಳು ಯಾರು ಅತಿಯಾಗಿ ಕುಡಿಯುತ್ತಿದ್ದು, ಬೇರೆಬೇರೆ ಅನಾರೋಗ್ಯ ಸಮಸ್ಯೆಗಳಿಂದಾಗಿ ಸದ್ಯ ಕುಡಿಯುವುದನ್ನು ಬಿಟ್ಟು ಒಳ್ಳೆಯ ಮನುಷ್ಯರಾಗಿದ್ದಾರೋ ಅವರನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದ್ದು, ಅವರೂ ಕೂಡ ಮೇಲೆ ತಿಳಿಸಿದ ಯಾವುದೋ ಮೆಡಿಕಲ್ ಕಾರಣದಿಂದಾಗಿಯೇ ಕೆಲಸಕ್ಕೆ ಬರದೇ ಇರುವುದು ತಿಳಿದಿದೆಯಂತೆ.

  ಡಾ, ಜೆನ್ನಿ ಏರ್ವಸ್ತಿ, ಫಿನಿಶ್ ಇನ್ಸಿಟ್ಯೂಟ್ ಆಫ್ ಆಕ್ಯುಪೇಷನಲ್ ಹೆಲ್ತ್ ನ ಪ್ರಮುಖ ಲೇಖಕರೂ ಆಗಿರುವ ಇವರು ಹೇಳುವ ಪ್ರಕಾರ ಕೆಲವು ಕಾಯಿಲೆಗಳು ಅಥವಾ ಕಾಯಿಲೆಯ ಚಿಕಿತ್ಸೆಗಳು ಅಲ್ಕೋಹಾಲ್ ಬಳಸುವುದನ್ನು ಕಡಿಮೆ ಮಾಡುತ್ತೆ ಮತ್ತು ಎಷ್ಟು ರಿಸ್ಕ್ ಆಗುತ್ತೆ ಅಲ್ಕೋಹಾಲ್ ಸೇವನೆ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತೆ. ಆಕೆ ವಿವರಿಸುವಂತೆ, ಆಲ್ಕೋಹಾಲ್ ಅತಿಯಾಗಿ ಸೇವಿಸುವವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಅನುಭವಕ್ಕೆ ಬರುವುದು ತಡವಾಗಿ.

  ಅದು ಒಂದು ವೇಳೆ ಅವರು ಕೆಲಸ ಕಳೆದುಕೊಂಡಾಗ ಇರಬಹುದು ಅಥವಾ ತಮ್ಮ ರಿಟೈಯರ್ ಲೈಫನಲ್ಲಿ ಇರಬಹುದು. ಒಟ್ಟಿನಲ್ಲಿ ಕುಡಿಯುವವರಿಗೆ ಕಾಯಿಲೆ ಕಟ್ಟಿಟ್ಟ ಬುತ್ತಿ. ಬಹುಶ್ಯಃ ಇದೇ ಕಾರಣಕ್ಕೆ ಅತಿಯಾಗಿ ಅಲ್ಕೋಹಾಲ್ ಸೇವಿಸುವವರಿಗಿಂತ , ಡ್ರಿಂಕ್ಸ್ ಮಾಡದೇ ಇರುವವರೇ ಹೆಚ್ಚು ಸಿಕ್ ಲೀವ್ ಪಡೆದುಕೊಳ್ಳುತ್ತಾರೆ.

  ಯುನಿರ್ವಸಿಟಿ ಕಾಲೇಜ್ ಲಂಡನ್ ನ ಸೀನಿಯರ್ ರೀಸರ್ಚ್ ಅಸೋಸಿಯೇಟ್ ಆಗಿರುವ ಡಾ. ಜೇಮ್ಸ್ ಹೇಳುವಂತೆ ಇತರ ಫಲಿತಾಂಶ ಬಹಳ ಸ್ಪಷ್ಟವಾಗಿ ಇಲ್ಲದೇ ಇರಬಹುದು. ಯಾಕೆಂದರೆ ನಾವಿಲ್ಲಿ ಸಂಪೂರ್ಣವಾಗಿ ಆಲ್ಕೋಹಾಲ್ ಸೇವಿಸದೇ ಇರುವವರು ಮತ್ತು ಮಾರ್ಡರೇಟ್ ಆಗಿ ಆಲ್ಕೋಹಾಲ್ ಸೇವಿಸುವವರು ಎಂದು ಎರಡು ಸ್ಪಷ್ಟ ಪಂಗಡ ಮಾಡಿ ಅಧ್ಯಯನ ಮಾಡಲಾಗಿದೆ.

  ಆರೋಗ್ಯ ಸಮಸ್ಯೆಗಳು ಜನರಿಗೆ ತಾವು ಯಾವಾಗಲೂ ಕುಡಿಯುವುದಕ್ಕಿಂತ ಕಡಿಮೆ ಕುಡಿಯುವಂತೆ ಮಾಡುತ್ತೆ.

  ಈ ರೀಸರ್ಚರ್ ಗಳಿಗೆ ಆಲ್ಕೋಹಾಲ್ ಸೇವನೆಯಿಂದ ಎಫೆಕ್ಟ್ ಗಳ ಬಗ್ಗೆ ಇರುವ ಒಂದು ಉತ್ತಮ ಆಧಾರ ಯಾವುದು ಎಂದರೆ ಜನಟಿಕ್ ಅಧ್ಯಯನಗಳು. ಆದರೆ ಊಹಿಸಲೂ ಅಸಾಧ್ಯವೆಂಬಂತೆ ಆಲ್ಕೋಹಾಲ್ ಬಳಕೆ ಮಾಡುವುದು ನಿಮ್ಮ ಆರೋಗ್ಯ ಸಮಸ್ಯೆಗಳ ಲೆವೆಲ್ ನ್ನು ಹೆಚ್ಚಿಸುತ್ತೆ ಮತ್ತು ಇದು ನಿಮ್ಮ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತೆ ಜೊತೆಗೆ ನಿಮ್ಮನ್ನ ಅನ್ ಫಿಟ್ ಆಗುವಂತೆ ಮಾಡಿ ಬಿಡುತ್ತೆ.

  ಪ್ರತಿ ಪುರುಷ ಮತ್ತು ಮಹಿಳೆಯರಿಗೆ ಹೇಳಿರುವ ಒಂದು ಸಲಹೆ ಏನೆಂದರೆ 14 ಯುನಿಟ್ ಗಿಂತ ಕಡಿಮೆ ಆಲ್ಕೋಹಾಲ್ ಡ್ರಿಂಕ್ ನ್ನು ಒಂದು ವಾರಕ್ಕೆ ಸೇವಿಸಬೇಕಂತೆ. ಅಂದರೆ 6 ಗ್ಲಾಸ್ ವೈನ್ ಅಥವಾ 6 ಪಿಂಟ್ಸ್, ಅದಕ್ಕಿಂತ ಹೆಚ್ಚು ಸೇವಿಸಬಾರದು ಎಂದು ಹೇಳಲಾಗುತ್ತೆ. ಈ ಲಿಮಿಟ್ ಯಾವುದೇ ಕಾರಣಕ್ಕೂ ಮತ್ತೂ ಹೆಚ್ಚಾಗಬಾರದು. ಒಂದು ವೇಳೆ ಯಾವುದೇ ಕಾರಣದಿಂದಾಗಿ ಈ ಲಿಮಿಟ್ ಅಧಿಕವಾದರೆ, ನಿಮ್ಮ ಆರೋಗ್ಯವು ಭಾರೀ ಕೆಟ್ಟ ಮಟ್ಟದಲ್ಲಿ ಅನಾರೋಗ್ಯಕ್ಕೆ ತುತ್ತಾಗಬಹುದು.

  ಆಲ್ಕೋಹಾಲ್ ರೀಚರ್ಸ್ ಸೆಂಟರ್ ಯುಕೆಯಲ್ಲಿ ರೀಸರ್ಚ್ ಮತ್ತು ಪಾಲಿಸಿ ಡೆವಲಪ್ ಮೆಂಟ್ ನ ಡೈರೆಕ್ಟರ್ ಆಗಿರುವ ಡಾ, ಜೇಮ್ಸ್ ನಿಕೋಲ್ಸ್ ಹೇಳಿಕೆ ಏನೆಂದರೆ ಯಾರು ಆಲ್ಕೋಹಾಲ್ ಸೇವಿಸುವುದಿಲ್ಲವೋ ಅವರು ಆಲ್ಕೋಹಾಲ್ ಸೇವಿಸುವವರಿಗಿಂತ ಬಡವರಾಗಿರುತ್ತಾರೆ ಮತ್ತು ಯಾವ ವ್ಯಕ್ತಿಗಳು ಕಾಯಿಲೆಗೆ ಹೆಚ್ಚು ಬೀಳುತ್ತಾರೆ ಎಂಬುದನ್ನು ಮಾತನಾಡಬೇಕಾದಾಗ ಈ ಅಂಶವು ಬಹಳ ಪ್ರಮುಖವಾದ ವಿಚಾರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  ಅಂದರೆ, ಕಳೆದ ರಾತ್ರಿಯ ಅತಿಯಾದ ಡ್ರಿಂಕ್ಸ್ ಸೇವನೆ ಕೆಲಸದ ಮೇಲೆ ಶಾರ್ಟ್ ಟರ್ಮ್ ಇಂಪ್ಯಾಕ್ಟ್ ನ್ನು ಮಾಡುವುದಿಲ್ಲ. ಅಂದರೆ ರಜೆ ಹಾಕುವುದು ಅಥವಾ ಕೆಲಸದಲ್ಲಿನ ಪ್ರೊಡಕ್ಟಿವಿಟಿ ಕಡಿಮೆ ಆಗುವುದು ಇತ್ಯಾದಿ. ಆದರೆ ಈ ಅಧ್ಯಯನವು ನೀವು ಆಲ್ಕೋಹಾಲ್ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬ ಬಗ್ಗೆ ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ. ಒಂದು ಹಂತದವರೆಗಿನ ಸರಿಯಾದ ಡ್ರಿಂಕ್ಸ್ ಸೇವನೆ ನಿಮ್ಮನ್ನು ಮಾರನೇ ದಿನ ಕೆಲಸಕ್ಕೆ ಹೋಗದಂತೆ ತಡೆಯುವುದಿಲ್ಲ ಅಂದರೆ ರಾತ್ರಿಯ ಡ್ರಿಂಕ್ಸ ಸೇವನೆ ಕೂಡಲೇ ನಿಮ್ಮ ಅನಾರೋಗ್ಯಕ್ಕೆ ತಳ್ಳದೆ ಕೆಲಸಕ್ಕೆ ರಜೆ ಹಾಕುವಂತೆ ಮಾಡುವುದಿಲ್ಲ ಎಂಬುದಷ್ಟೇ ಈ ಅಧ್ಯಯನದಲ್ಲಿರುವ ಅಂಶವಾಗಿದೆ.

  English summary

  non-drinkers-take-more-sick-leaves-than-regular-drinker

  A study conducted by a few researchers has revealed that social drinkers, in fact, take less number of sick leaves than those who do not drink at all. Researchers have found out that people who usually drink moderately as opposed to the ones who are extremists who either drink heavily or those who don't drink at all have the best health than the other people. They studied the people of UK, Finland, and France and finally reached the conclusion that non-alcoholics.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more