For Quick Alerts
ALLOW NOTIFICATIONS  
For Daily Alerts

ಇಂತಹ ನೈಸರ್ಗಿಕ ಆಹಾರಗಳು ಸೇವಿಸಿದರೆ ಸಾಕು, ಪುರುಷರ ಸೆಕ್ಸ್ ಪವರ್ ಹೆಚ್ಚುತ್ತದೆ

By Sushma Charhra
|

ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಕಾಮವನ್ನು ಉತ್ತೇಜಿಸಿಕೊಂಡು ಲೈಂಗಿಕವಾಗಿ ಬಲಿಷ್ಟವಾಗಿದ್ದು ಉತ್ತಮ ಪ್ರದರ್ಶನ ತೋರಿ ತನ್ನ ಸಂಗಾತಿಯನ್ನು ತೃಪ್ತಿ ಪಡಿಸಬೇಕು ಎಂದೇ ಬಯಸುತ್ತಾನೆ.. ಇದೇ ಕಾರಣಕ್ಕೆ ಅವರು ನೈಸರ್ಗಿಕವಾಗಿ ಹೀಗೆ ಮಾಡಲು ತಾವೇನು ಮಾಡಬಹುದು ಎಂಬ ಬಗ್ಗೆ ಹುಡುಕಾಡುತ್ತಿರುತ್ತಾರೆ.

ಯಾವುದಾದರೂ ಔಷಧವೂ ನೈಸರ್ಗಿಕವಾಗಿ ಅವರ ಲೈಂಗಿಕ ಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸಲು ಸಹಾಯ ಮಾಡಬಲ್ಲದೇ ಎಂಬುದು ಅವರ ಹುಡುಕಾಟ ಆಗಿರುತ್ತದೆ.ಆದರೆ ಹಲವರು ವಿಚಾರಗಳು ಉದಾಹರಣೆಗೆ ಒತ್ತಡ, ಆತಂಕ, ಹಾರ್ಮೋನುಗಳಲ್ಲಿನ ವ್ಯತ್ಯಯ ಮತ್ತು ಇತರೆ ಹಲವಾರು ವಿಚಾರಗಳು ಅವರ ಪ್ರಣಯಕ್ಕೆ ತೊಂದರೆ ಒಡ್ಡುತ್ತವೆ.

ಈ ವಿಚಾರಗಳ ಭವಿಷ್ಯದಲ್ಲಿ ಅವರ ಸಂತೋನೋತ್ಪತ್ತಿ ಕ್ರಿಯೆಯ ಮೇಲೂ ಪರಿಣಾಮ ಬೀರಬಹುದು ಮತ್ತು ಅವರು ಅರ್ಥಮಾಡಿಕೊಳ್ಳಬೇಕು ಯಾವುದರಿಂದಾಗಿ ತಮ್ಮ ಸಂತಾನವನ್ನು ವೃದ್ಧಿಸಲು ಶಕ್ತಿ ದೊರೆಯುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚುತ್ತದೆ ಅರ್ಥಾತ್ ಈ ಸಮಸ್ಯೆಯಿಂದ ದೂರವಾಗಬಹುದು ಎಂಬುದನ್ನು.

ಒಂದು ಒಳ್ಳೆಯ ಸುದ್ದಿ ಇದೆ, ಕಾಮ ಅಥವಾ ಲೈಂಗಿಕ ಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿ ಹೆಚ್ಚಿಸಲು ಕೆಲವು ನೈಸರ್ಗಿಕ ಆಹಾರಗಳು ಸಹಕಾರ ನೀಡುತ್ತದೆ, ಮತ್ತು ಯಾವುದೇ ವಯಾಗ್ರಕ್ಕಾಗಲಿ, ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಮಾತ್ರೆಗಳಿಗಾಗಾಲಿ ಮೊರೆ ಹೋಗುವ ಅಗತ್ಯವಿಲ್ಲ. ಆಯುರ್ವೇದೀಯವಾಗಿ ನಿಮ್ಮ ಕಾಮವನ್ನು ಉತ್ತೇಜಿಸುವ ಸಾಮರ್ಥ್ಯ ಈ ಆಹಾರಗಳಿಗಿವೆ.. ಯಾವೆಲ್ಲ ಆಹಾರಗಳು ಎಂದು ತಿಳಿಯಲು ಮುಂದೆ ಓದಿ....

ಬಾದಾಮಿ

ಬಾದಾಮಿ

ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇರುವ ಬಹಳ ಹಳೆಯ ನಂಬಿಕೆಯ ಆಹಾರ ಎಂದರೆ ಅದು ಬಾದಾಮಿ. ಆರೋಗ್ಯಕರವಾದ ಮತ್ತು ಸಮತೋಲಿನತ ಆಹಾರ ಕ್ರಮದಲ್ಲಿ ಬಾದಾಮಿಯ ಲಾಭಗಳನ್ನು ವಿವರಿಸಲು ಅಸಾಧ್ಯ,ಬಾದಾಮಿಯ ಜೊತೆಗೆ ಇತರೆ ಬೀಜಗಳಾದ ವಾಟ್ ನಟ್ ಮತ್ತು ಗೇರುಬೀಜ ಸೇವನೆಯು ಎಸೆನ್ಸಿಯಲ್ ಫ್ಯಾಟಿ ಆಸಿಡ್ ಓಮೆಗಾ 3 ಯನ್ನುನೀಡುತ್ತದೆ ಮತ್ತು ಇದು ಟೆಸ್ಟೋರಿಯನ್ ನ್ನು ವೃದ್ಧಿಸುತ್ತದೆ ಅಂದರೆ ಇದು ಪುರುಷರ ಸೆಕ್ಸ್ ಹಾರ್ಮೋನಾಗಿದೆ. ಇದರ ಜೊತೆಗೆ, ಇದರಲ್ಲಿ ವಿಟಮಿನ್ ಇ, ವಿಟಮಿನ್ ಬಿ6, ಮೆಗ್ನೇಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳೂ ಇದ್ದು, ಆರೋಗ್ಯವನ್ನು ಹೆಚ್ಚಿಸಲು ನೆರವು ನೀಡುತ್ತದೆ. ಬಾದಾಮಿಯ ಪರಿಮಳವು ಮಹಿಳೆಯರನ್ನು ಕಾಮೋತ್ತೇಜಕ ಗೊಳಿಸುತ್ತದೆಯಂತೆ. ಬಾದಾಮಿಯನ್ನು ತಿನ್ನುವ ಉತ್ತಮ ವಿಧಾನವೆಂದರೆ ಹಸಿಯಾಗಿ ಅಥವಾ ಸಲಾಡ್ ಗಳಲ್ಲಿ ಸೇರಿಸಿ, ಉಪ್ಪು ಸೇರಿಸದೇ ಸೇವಿಸುವುದು ಒಳಿತು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ಸಾಮಾನ್ಯ ಅಡುಗೆ ಮನೆಯ ಸಾಂಬಾರ ಪದಾರ್ಥವಾಗಿದೆ. ಬೆಳ್ಳಿಳ್ಳಿಯ ಆರೋಗ್ಯ ಲಾಭಗಳು ಹಲವಾರು ಮತ್ತು ಇದರನ್ನುಆಯುರ್ವೇದಲ್ಲಿ ಬಹಳ ಹಳೆಯ ಕಾಲದಿಂದ ಹಲವಾರು ರೋಗಗಳಿಗೆ ಮದ್ದಾಗಿ ಬಳಕೆ ಮಾಡಲಾಗುತ್ತಿದೆ. ಬೆಳ್ಳಿಳ್ಳಿ ಕೂಡ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದು, ಪುರುಷರ ಶಿಷ್ನದಲ್ಲಿ ರಕ್ತ ಸಂಚಾರ ಹೆಚ್ಚುಸುವ ಸಾಮರ್ಥ್ಯವನ್ನು ಇದು ಹೊಂದಿದೆ ಹಾಗಾಗಿ ಸಾಮರ್ಥ್ಯ ಅಧಿಕವಾಗಿ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ. ಇದರ ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಹಲವು ಕಾಯಿಲೆಗಳ ವಿರುದ್ಧ ಸೆಣಸಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಹೆಚ್ಚಾಗದಂತೆ ತಡೆಯುತ್ತದೆ. ಹಸಿಯಾಗೇ ಕೆಲವು ಬೆಳ್ಳಿಳ್ಳಿಯನ್ನು ಸೇವಿಸುವುದು ಮತ್ತು ಅಡುಗೆಗೆ ಬಳಸುವುದು ಇದನ್ನು ಬಳಕೆ ಮಾಡುವ ಉತ್ತಮ ವಿಧಾನವಾಗಿದೆ..

ಚಾಕಲೇಟ್

ಚಾಕಲೇಟ್

ಚಾಕಲೇಟ್ ಮೂಲಕ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಯಾವುದೇ ಫಾರ್ಮ್ ನಲ್ಲಿರುವ ಚಾಕಲೇಟ್ ಕೂಡ ನೈಸರ್ಗಿಕವಾಗಿ ಲಿಬಿಡೋವನ್ನು ಮತ್ತು ಸೆಕ್ಸ್ ಡ್ರೈವ್ ನ್ನು ವೃದ್ಧಿಗೊಳಿಸಿ, ಲೈಂಗಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಕಾಮದ ಆಸಕ್ತಿ, ಪ್ರೀತಿ, ಪ್ರಣಯದ ಅನುಭವವನ್ನು ಇದರಿಂದ ಉತ್ತಮ ಪಡಿಸಿಕೊಳ್ಳಬಹುದು. ಡಾರ್ಕ್ ಚಾಕಲೇಟ್ ನಲ್ಲಿರುವ ಕೋಕೋ ಅಂಶದಲ್ಲಿರುವ ಕೆಮಿಕಲ್ ಗಳಾದ ಫೀನಲೆಥೈಲಮೈನ್ ಪ್ರೀತಿ ಮತ್ತು ಯೋಗಕ್ಷೇಮದ ಇಂದ್ರಿಯಗಳನ್ನು ಪ್ರಚೋದಿಸುತ್ತದೆ .ಇದರ ಜೊತೆಗೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳ ನಿಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುವುದಕ್ಕೂ ನೆರವಾಗುತ್ತದೆ. ಹಾಗಾಗಿ ಡಾರ್ಕ್ ಚಾಕಲೇಟ್ ಗಳನ್ನು ಸವಿದು ಎಂಜಾಯ್ ಮಾಡುವುದನ್ನು ಪ್ರತಿದಿನ ಮರೆಯಬೇಡಿ. ಪ್ರತಿದಿನವೂ ಅಲ್ಪ ಪ್ರಮಾಣದ ಚಾಕಲೇಟ್ ಸೇವನೆ ನಿಮ್ಮ ವಯಕ್ತಿಕ ಬದುಕನ್ನು ಸುಂದರಗೊಳಿಸಬಲ್ಲದು.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಂತಾನೋತ್ಪತ್ತಿ ಕ್ರಿಯೆಯನ್ನು ಹೆಚ್ಚಿಸಲು ಕುಂಬಳಕಾಯಿ ಬೀಜಗಳು ಅತ್ಯುತ್ತಮ ಆಹಾರವಾಗಿದೆ. ಅದರಲ್ಲಿ ಆಶ್ಚರ್ಯ ಅನ್ನಿಸೋ ಅಷ್ಟು ಲಾಭಗಳಿದ್ದು, ಹಲವಾರು ನ್ಯೂಟ್ರಿಯಂಟ್ಸ್ ಗಳಾದ ವಿಟಮಿನ್ ಸಿ, ಬಿ,ಡಿ, ಇ ಮತ್ತು ಕೆ ಜೊತೆಗೆ ಸತುವು, ಕ್ಯಾಲ್ಸಿಯಂ, ಪೋಟಾಷಿಯಂ, ಮತ್ತು ಪಾಸ್ಫರಸ್ ಗಳಿದ್ದು ಇದು ಪುರುಷರ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.ಸತುವು ಪುರುಷರ ಟೆಸ್ಟೋರಿನ್ ಹಾರ್ಮೋನನ್ನು ಉತ್ತೇಜಿಸಿ ಕಾಮವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನು ಸಲಾಡ್,ಸ್ಯಾಂಡ್ ವಿಚ್ ಗಳ ಮೇಲೆ ಸ್ಪ್ರಿಂಕಲ್ ಮಾಡಿ ಬಳಸಬಹುದು, ಒಟ್ಟಾರೆ ಕುಂಬಳಬೀಜವನ್ನು ಸವಿದು ನಿಮ್ಮ ಲೈಂಗಿಕ ಕ್ರಿಯೆಯನ್ನು ಉತ್ತಮಗೊಳಿಸಿಕೊಳ್ಳಬಹುದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಅಧ್ಯಯನಗಳು ತಿಳಿಸುವಂತೆ ಕಲ್ಲಂಗಡಿ ಹಣ್ಣು ನೈಸರ್ಗಿಕವಾದ ವಯಾಗ್ರದಂತೆ ವರ್ತಿಸುತ್ತದೆ ಮತ್ತು ಪುರುಷರಲ್ಲಿ ಕಾಮಪ್ರಚೋದಕತೆಯನ್ನು ಹೆಚ್ಚಿಸಲು ಇದು ನೆರವಿಗೆ ಬರುತ್ತದೆ. ಹಾಗಾಗಿ ಜ್ಯೂಸಿನ ಈ ಹಣ್ಣು ಬಹಳ ಪ್ರಮುಖವಾಗಿ ಲೈಗಿಂಕ ಪ್ರಚೋದನೆಗಾಗಿ ಸೇವಿಸಲೇ ಬೇಕಾಗಿರುವ ಆಹಾರ ಮತ್ತು ಇದರಲ್ಲಿ ಆಮೈನೋ ಆಸಿಡ್ ಸಿಟ್ರುಲಿನ್ ಅಂಶವಿದ್ದು ಇದು ಆರ್ಥೈಟಿಸ್ ನ್ನು ರಿಲ್ಯಾಕ್ಸ್ ಮಾಡುತ್ತದೆ ಮತ್ತು ರಕ್ತ ಸಂಚಾರವನ್ನು ಹೆಚ್ಚಿಸಿ ಲೈಂಗಿಕ ಆಸಕ್ತಿ ವೃದ್ಧಿಸುತ್ತದೆ. ಇದರಲ್ಲಿ ಶೇಕಡಾ 92 ರಷ್ಟು ನೀರಿನ ಅಂಶವಿದೆ. ಉಳಿದ 8 ಶೇಕಡಾದಲ್ಲಿ ವಿಟಮಿನ್ ಎ, ಸಿ, ಮತ್ತು ಬಿ6 ಅಂಶವಿದ್ದು ಹೆಚ್ಚು ಲೈಕೋಪಿನ್ ಗಳು, ಅಮೈನೋ ಆಸಿಡ್ ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಇದೆ ಇವುಗಳು ನಿಮ್ಮ ಲೈಂಗಿಕ ಆರೋಗ್ಯ ಹೆಚ್ಚಿಸಲು ನೆರವು ನೀಡುತ್ತದೆ. ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಿ ಸಂಪೂರ್ಣ ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತದೆ. ಮುಂದಿನ ಬಾರಿಯ ಸೆಕ್ಸ್ ಸಂದರ್ಬದಲ್ಲಿ ನೀವು ಮತ್ತು ನಿಮ್ಮ ಸಂಗಾತಿ ಕಲ್ಲಂಗಡಿ ಹಣ್ಣನ್ನು ಸೇವಿಸಿ ಆರಂಭಿಸಿ. ಹೆಚ್ಚು ಎಂಜಾಯ್ ಮಾಡಲು ಇದು ನೆರವಾಗುತ್ತದೆ.

ಶುಂಠಿ

ಶುಂಠಿ

ಶುಂಠಿಯು ಭಾರತೀಯರು ತಮ್ಮ ಅಡುಗೆ ಮನೆಯಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದ್ದು, ಆಯುರ್ವೇದದ ಪ್ರಕಾರ ಹಲವು ಕಾಯಿಲೆಗಳ ವಿರುದ್ಧ ಹೋರಾಡಿ ಸಮಸ್ಯೆಯನ್ನು ದೂರಪಡಿಸುವ ತಾಕತ್ತು ಶುಂಠಿಗಿದೆ. ಆದರೆ ಹೆಚ್ಚಿನವರಿಗೆ ತಿಳಿದಿಲ್ಲ, ಶುಂಠಿಯಲ್ಲಿ ಕಾಮೋತ್ತೇಜಕ ಗುಣಗಳೂ ಕೂಡ ಇದ್ದು, ಇದು ದೇಹದಲ್ಲಿ ರಕ್ತದ ಸಂಚಾರವನ್ನು ಅಧಿಕಗೊಳಿಸುತ್ತದೆ. ಆ ಮೂಲಕ ದೇಹದ ತಾಪಮಾನ ಹೆಚ್ಚಾಗುತ್ತೆ ಮತ್ತು ಲೈಂಗಿಕತೆಯ ಸಂವೇದನೆಯು ಅಧಿಕಗೊಂಡು, ಲೈಂಗಿಕತೆಗೆ ಚಾಲನೆ ದೊರೆತು ಕಾಮಪ್ರಚೋದಕತೆ ಹೆಚ್ಚಾಗುತ್ತದೆ. ಇದು ಶಕ್ತಿಯನ್ನು ಹೆಚ್ಚಿಸಿ, ಪ್ರೀತಿಯನ್ನು ಉಲ್ಬಣಗೊಳಿಸುತ್ತದೆ ಮತ್ತು ಆ ಮೂಲಕ ಲೈಂಗಿಕತೆಯ ಪ್ರದರ್ಶನವನ್ನು ಹೆಚ್ಚಿಸಿ ನಿಮ್ಮ ಸಂಗಾತಿಯನ್ನು ಸಂತುಷ್ಟಿಗೊಳಿಸಲು ಸಹಕಾರಿಯಾಗಿದೆ.ಕೆಲವು ಹಸಿ ಶುಂಠಿ ತುಂಡುಗಳ ವಾಸನೆಯನ್ನು ಸೇವಿಸಿ ಅಥವಾ ನೀವು ಹಾಸಿಗೆಗೆ ತೆರಳುವ ಮುನ್ನ ಸ್ವಲ್ಪ ಶುಂಠಿ ಟೀಯನ್ನು ಸೇವಿಸಿ.

ರಸ್ಬೆರಿ

ರಸ್ಬೆರಿ

ಪುರುಷ ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಕ್ರಿಯೆಗೆ ರಸ್ಬೆರಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಕಪ್ಪು ರಸ್ಬೆರಿ ಹಣ್ಣುಗಳು ಮತ್ತು ಅದರ ಬೀಜಗಳು ಲೈಂಗಿಕಾಸಕ್ತಿಯನ್ನು ಉತ್ತಮ ಪಡಿಸಲು ಇರುವ ಉಥ್ತಮ ಆಹಾರವಾಗಿದ್ದು, ಇದು ಲೈಂಗಿಕ ಕ್ರಿಯೆಯ ಸಾಮಾನುಗಳನ್ನು ಪುರುಷರಲ್ಲಿ ಹೆಚ್ಚು ಬಲಪಡಿಸುವ ಸಾಮರ್ಥ್ಯ ಹೊಂದಿದೆ. . ರಸ್ಬೆರಿಯಲ್ಲಿರುವ ಫೈಟೋ ಕೆಮಿಕಲ್ ಅಂಶಗಳು ಪುರುಷರ ಒಟ್ಟಾರೆ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತೆ., ಮತ್ತು 10 ಕಪ್ಪು ರಸ್ಬೆರಿ ಹಣ್ಣುಗಳು ಅಥವಾ ಒಂದು ಟೇಬಲ್ ಸ್ಪೂನ್ ರಸ್ಬೆರಿ ಬೀಜಗಳನ್ನು ಸೇವಿಸುವುದು ನೀವು ಸಂತೃಪ್ತಿಯಿಂದ ಲೈಂಗಿಕ ಕ್ರಿಯೆ ನಡೆಸಲು ಸಹಕಾರಿಯಾಗಿದೆ. ಹಾಗಾಗಿ ನಿಮ್ಮ ಪ್ರಣಯದ ಜೀವನ ಉತ್ತಮವಾಗಿರಬೇಕು ಎಂದರೆ ಪ್ರತಿದಿನ ರಸ್ಬೆರಿ ಸೇವನೆಯನ್ನು ಮಾಡುವುದು ಮರೆಯಬೇಡಿ.

ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

ಒಣಫಲಗಳು

ಒಣಫಲಗಳು

ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

English summary

Natural Viagra Foods That Boost Libido and Sex Naturally in Men

Each and every man wants to increase his libido and sex drive to give a better performance and give a satisfying experience to his partner. For this they search for natural ways like how to increase sex power, natural viagra for men and how to increase sex power without medicine.The good news is, libido and sex drive can be enhanced by a wide range of natural Viagra foods, and there is no need to depend on Viagra or other male enhancement pills because of latest Ayurveda Viagra.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X