For Quick Alerts
ALLOW NOTIFICATIONS  
For Daily Alerts

ಪವರ್‌ಫುಲ್ ಮನೆ ಔಷಧಿಗಳು- ಐದೇ ಐದು ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ

By Lekhaka
|

ಯಾವುದೇ ರೀತಿಯ ನೋವಾಗಲಿ, ಅದು ದೇಹದ ಮೇಲೆ ಪರಿಣಾಮ ಬೀರುವುದು. ದೇಹದ ಯಾವುದೇ ಭಾಗದಲ್ಲಿ ನೋವಿದ್ದವರನ್ನು ಕೇಳಿನೋಡಿ. ಆ ನೋವು ಯಾರಿಗೂ ಬರುವುದು ಬೇಡಪ್ಪಾ ಎನ್ನುತ್ತಾರೆ. ಯಾಕೆಂದರೆ ನೋವು ಅನುಭವಿಸಿದರೆ ಅದರ ತೀವ್ರತೆ ಗೊತ್ತಿರುವುದು. ಅದೇ ಹಲ್ಲು ನೋವು ಬಂದರೆ ಅದನ್ನು ತಡೆದುಕೊಳ್ಳುವುದು ಅಸಾಧ್ಯವಾಗುವುದು.

ಹಲ್ಲು ನೋವಿನಿಂದ ವಸಡು ಹಾಗೂ ತಲೆ ಕೂಡ ನೋಯಲು ಆರಂಭವಾಗುವುದು. ಹಲ್ಲಿನ ಸ್ವಚ್ಛತೆ ಸರಿಯಾಗಿರದೆ ಇರುವುದೇ ಹಲ್ಲು ನೋವಿಗೆ ಪ್ರಮುಖ ಕಾರಣವಾಗಿದೆ. ಇತರ ಕೆಲವು ಕಾರಣಗಳೆಂದರೆ ಪಲ್ಬಿಟಿಸ್ ಮತ್ತು ಅವಧಿರೋಗ, ಹಲ್ಲಿನ ಹುಳುಕು ಇತ್ಯಾದಿ. ಹೆಚ್ಚಿನವರು ಹಲ್ಲು ನೋವು ಶುರುವಾದ ಕೂಡಲೇ ಹಲ್ಲಿನ ವೈದ್ಯರಲ್ಲಿಗೆ ಹೋಗುತ್ತಾರೆ. ಸಣ್ಣ ಪ್ರಮಾಣದ ಹಲ್ಲಿನ ನೋವಿದ್ದರೂ ದಂತ ವೈದ್ಯರಲ್ಲಿ ಹೋಗಬೇಕೆಂದಿಲ್ಲ. ಯಾಕೆಂದು ತಿಳಿಯಲು ಮುಂದೆ ಓದಿ....

ಹಲ್ಲು ನೋವಿಗೆ ಏನು ಮಾಡಬೇಕು?

ಹಲ್ಲು ನೋವಿಗೆ ಏನು ಮಾಡಬೇಕು?

ಆಯುರ್ವೇದವು ತುಂಬಾ ಪರಿಣಾಮಕಾರಿ ಮನೆಮದ್ದಾಗಿರುವ ಕಾರಣದಿಂದ ಇದು ಪ್ರತಿನಿತ್ಯವೂ ಮನುಷ್ಯನ ಆರೋಗ್ಯಕ್ಕೆ ಹಲವಾರು ರೀತಿಯ ಪರಿಹಾರ ಒದಗಿಸುವುದು. ಆಯುರ್ವೇದದಲ್ಲಿ ಇರುವಂತಹ ಹಲವಾರು ಸಾಮಗ್ರಿಗಳು ಹಲ್ಲು ನೋವಿಗೆ ಪರಿಹಾರ ಒದಗಿಸುವುದು. ಆಯುರ್ವೇದದಲ್ಲಿ ಇರುವ ವೇಗ ಹಾಗೂ ಪರಿಣಾಮಕಾರಿ ಮದ್ದನ್ನು ನಿಮಗೆ ತಿಳಿಸಲಿದ್ದೇವೆ. ಇದನ್ನು ಪ್ರಯೋಗಿಸಿ ನೋಡಿ.

ವೆನಿಲ್ಲಾ ಸಾರ

ವೆನಿಲ್ಲಾ ಸಾರ

ಹಲ್ಲು ನೋವಿಗೆ ಇದು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ವೆನಿಲ್ಲಾದಲ್ಲಿ ನೋವು ನಿವಾರಣೆ ಮಾಡುವಂತಹ ಅಂಶಗಳು ಇವೆ. ಯಾಕೆಂದರೆ ಇದರಲ್ಲಿ ಆಲ್ಕೋಹಾಲ್ ನಂತಹ ಅಂಶವಿದೆ. ಇದರಲ್ಲಿ ಇರುವಂತಹ ನಂಜುನಿರೋಧಕ ಗುಣವು ಬ್ಯಾಕ್ಟೀರಿಯಾದಿಂದ ಆಗುವಂತಹ ಸಮಸ್ಯೆ ನಿವಾರಣೆ ಮಾಡುವುದು. ವೆನಿಲ್ಲಾವು ತುಂಬಾ ಸುವಾಸನೆ ಉಂಟುಮಾಡುವುದು. ವೆನಿಲ್ಲಾ ಸಾರದಲ್ಲಿ ಹತ್ತಿ ಉಂಡೆ ಮುಳುಗಿಸಿ. ಬಾಧಿತ ಹಲ್ಲಿನ ಮೇಲೆ ಇದನ್ನು ಐದು ನಿಮಿಷ ಕಾಲ ಬಿಡಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವಿದ್ದು, ಇದು ತುಂಬಾ ಪ್ರಬಲ ನಂಜುನಿರೋಧಕ. ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ ನಿವಾರಣೆ ಮಾಡಿ ಉರಿಯೂತ ತಗ್ಗಿಸುವುದು ಮತ್ತು ನೋವಿನಿಂದ ತಕ್ಷಣ ಪರಿಹಾರ ನೀಡುವುದು. ದಿನನಿತ್ಯ ಸೇವಿಸಿದರೆ ಇದು ಬಾಯಿಯ ಸ್ವಚ್ಛತೆಯನ್ನು ಸುಧಾರಿಸುವುದು. ಒಂದು ಬೆಳ್ಳುಳ್ಳಿ ಎಸಲನ್ನು ಜಜ್ಜಿಕೊಂಡು ಅದಕ್ಕೆ ಸ್ವಲ್ಪ ಕಲ್ಲುಪ್ಪು ಬೆರೆಸಿ ನೋವಿರುವ ಜಾಗಕ್ಕೆ ಇಟ್ಟುಬಿಡಿ. ಪ್ರತಿನಿತ್ಯ ಹೀಗೆ ಮಾಡಿದರೆ ನೋವು ಕಡಿಮೆಯಾಗುವುದು.

ಚಹಾ ಬ್ಯಾಗ್

ಚಹಾ ಬ್ಯಾಗ್

ಹಲ್ಲು ನೋವಿನ ನಿವಾರಣೆಯಲ್ಲಿ ಚಹಾ ಬ್ಯಾಗ್ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯಾ? ಬಿಸಿಬಿಸಿಯಾಗಿರುವ ಟೀ ಬ್ಯಾಗ್ ಹಲ್ಲಿನ ನೋವು ಮತ್ತು ಉರಿಯೂತ ಕಡಿಮೆ ಮಾಡುವುದು. ಚಹಾದಲ್ಲಿ ಶಮನಕಾರಿ ಗುಣಗಳು ಇವೆ. ಇದರಲ್ಲಿ ಇರುವಂತಹ ನೈಸರ್ಗಿಕ ರಾಸಾಯನಿಕಗಳು ತಕ್ಷಣ ನೋವಿನಿಂದ ಪರಿಹಾರ ನೀಡುವುದು. ಬಿಸಿಯಾಗಿರುವ ಚಹಾ ಬ್ಯಾಗ್ ನ್ನು ನೋವಿರುವ ಹಲ್ಲಿನ ಮೇಲಿಡಿ. ಇದನ್ನು ಗಟ್ಟಿಯಾಗಿ ಜಗಿದರೆ ಅದರ ರಸ ಹಲ್ಲಿನೊಳಗೆ ಹೋಗುವುದು.

ಲಿಂಬೆ

ಲಿಂಬೆ

ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲ್ಲು ಮತ್ತು ಒಸಡನ್ನು ತುಂಬಾ ಬಲಗೊಳಿಸಿ ಪದರಗಳು ನಿರ್ಮಾಣವಾಗದಂತೆ ತಡೆಯುವುದು. ಲಿಂಬೆ ಬಳಸಿದರೆ ಉಸಿರಿನ ದುರ್ವಾಸನೆ ತಡೆಯಬಹುದು. ಸ್ವಲ್ಪ ಲಿಂಬೆರಸ ತೆಗೆದುಕೊಂಡು ಅದನ್ನು ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಸೀಬೆ ಎಲೆಗಳು

ಸೀಬೆ ಎಲೆಗಳು

ಸೀಬೆ ಹಣ್ಣಿನ ಎಲೆಗಳಲ್ಲಿ ನೋವು ನಿವಾರಕ ಗುಣಗಳು ಇದ್ದು, ಇದು ನೋವು ನಿವಾರಿಸಲು ನೆರವಾಗುವುದು. ಇದರಲ್ಲಿ ಇರುವಂತಹ ಫ್ಲಾವನಾಯ್ಡ್ ಬ್ಯಾಕ್ಟೀರಿಯಾ ಚಟುವಟಿಕೆ ಮತ್ತು ಉರಿಯೂತ ತಗ್ಗಿಸುವುದು. ಪೇರಳೆ ಹಣ್ಣಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಈ ನೀರನ್ನು ಸೋಸಿಕೊಂಡು ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ. ನೋವು ಕಡಿಮಯಾಗುವ ತನಕ ಹೀಗೆ ಪ್ರತಿನಿತ್ಯ ಮಾಡಿ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯಲ್ಲಿ ತುಂಬಾ ಪ್ರಬಲವಾಗಿರುವಂತಹ ಬ್ಯಾಕ್ಟೀರಿಯಾ ವಿರೋಧಿ ಅಂಶವಾಗಿರುವ ಮೆಂಥಾಲ್ ಇದೆ. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಇದು ಹಲ್ಲಿನ ಸ್ವಚ್ಛತೆ ಸುಧಾರಿಸುವುದು. ಇದರಿಂದಾಗಿಯೇ ಇದನ್ನು ಹೆಚ್ಚಿನ ಟೂಥ್ ಪೇಸ್ಟ್ ಗಳಲ್ಲಿ ಬಳಸಲಾಗುತ್ತದೆ. ಪುದೀನಾ ಎಣ್ಣೆಯನ್ನು ಅಂಗೈಗೆ ಹಾಕಿಕೊಂಡು ಬೆರಳಿನಿಂದ ಅದನ್ನು ಹಲ್ಲಿಗೆ ತಿಕ್ಕಿ ಮಸಾಜ್ ಮಾಡಿ.

ಆಲ್ಕೋಹಾಲ್ ವುಳ್ಳ ಮೌಥ್ ವಾಶ್

ಆಲ್ಕೋಹಾಲ್ ವುಳ್ಳ ಮೌಥ್ ವಾಶ್

ಆಲ್ಕೋಹಾಲ್ ನಲ್ಲಿ ನೋವು ನಿವಾರಿಸುವ ಗುಣವಿದೆ ಮತ್ತು ಇದು ಶಮನ ನೀಡುವುದು. ಇದು ಬ್ಯಾಕ್ಟೀರಿಯಾವನ್ನು ಪರಿಣಾಮಕಾರಿಯಾಗಿ ಕೊಲ್ಲುವುದು. ಆದರೆ ಇದನ್ನು ನೇರವಾಗಿ ಬಳಸಬಾರದು. ಆಲ್ಕೋಹಾಲ್ ಯುಕ್ತ ಮೌಥ್ ವಾಶ್ ನಿಂದ ಬಾಯಿ ಮುಕ್ಕಳಿಸಿಕೊಂಡರೆ ನಿಮಗೆ ನೋವಿನಿಂದ ಪರಿಹಾರ ಸಿಗುವುದು.

ಉಪ್ಪು ನೀರು

ಉಪ್ಪು ನೀರು

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಂಡರೆ ಹಲ್ಲಿನ ಮಧ್ಯದಲ್ಲಿ ಇರುವಂತಹ ಕಲ್ಮಷವನ್ನು ನಿವಾರಣೆ ಮಾಡುವುದು. ಇದು ಊತ ಕಡಿಮೆ ಮಾಡಿ ಕುಳಿಗಳ ಅಪಾಯ ತಪ್ಪಿಸುವುದು. ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಇದರಿಂದ ಬಾಯಿ ಮುಕ್ಕಳಿಸಿಕೊಳ್ಳಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿದರೆ ನೋವು ನಿವಾರಣೆಯಾಗುವುದು.

ಐಸ್ ಪ್ಯಾಕ್

ಐಸ್ ಪ್ಯಾಕ್

ನೋವು ಇರುವಂತಹ ಹಲ್ಲುಗಳ ಮೇಲೆ ಐಸ್ ಪ್ಯಾಕ್ ಗಳನ್ನು ಇಡಿ. ಇದು ದಂತ ವೈದ್ಯರು ಕೂಡ ಸೂಚಿಸುವ ಮದ್ದಾಗಿದೆ. ಯಾವುದೇ ರೀತಿಯ ಹಲ್ಲಿನ ಸಮಸ್ಯೆಗೆ ಇದು ಪರಿಣಮಕಾರಿ. ತುಂಬಾ ಸ್ವಚ್ಛವಾಗಿರುವ ಕೈವಸ್ತ್ರದಲ್ಲಿ ಐಸ್ ನ್ನು ಸುತ್ತಿಕೊಂಡು ಅದನ್ನು ಹಲ್ಲಿನ ಮೇಲಿಡಿ. ಇದರಿಂದ ಆ ಭಾಗದ ನೋವು ಹಾಗೂ ಊತ ಕಡಿಮೆಯಾಗುವುದು.

ಹಿಂಗು

ಹಿಂಗು

ಹಿಂಗಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಗಳು ಇವೆ. ಹಲ್ಲು ಹಾಗೂ ಒಸಡಿನಲ್ಲಿರುವ ಉರಿಯೂತವನ್ನು ಇದು ತಗ್ಗಿಸುವುದು ಮತ್ತು ಊತ ಕಡಿಮೆ ಮಾಡುವುದು. ಒಂದು ತುಂಡು ಹಿಂಗನ್ನು ನೇರವಾಗಿ ನೋವಿರುವ ಹಲ್ಲಿನ ಮೇಲಿಡಿ. ನೋವು ಕಡಿಮೆಯಾಗುವ ತನಕ ಹೀಗೆ ಮಾಡಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಬಳಸಿ ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

ಉಪ್ಪು ಮತ್ತು ಕಾಳುಮೆಣಸು

ಉಪ್ಪು ಮತ್ತು ಕಾಳುಮೆಣಸು

ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.

*ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ

*ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.

*ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

English summary

Natural Toothache Remedies To Keep Your Dentist Away

Ayurveda is a very powerful form of medicine which provides safe and alternate solutions to everyday human health problems. There are a lot of ingredients in ayurveda which provide a soothing relief from severe tooth pain. Here are fast and effective remedies for toothache, which are definitely going to make your tooth pain go away instantly.
X
Desktop Bottom Promotion