For Quick Alerts
ALLOW NOTIFICATIONS  
For Daily Alerts

  ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ನೈಸರ್ಗಿಕ ಆಹಾರಗಳು

  |

  ಪುರುಷರು ನಿಮಿರು ಸಾಮರ್ಥ್ಯವನ್ನೇ ಸಂತಾನಫಲಕ್ಕೆ ಮೂಲ ಎಂದು ಭಾವಿಸಿರುವುದು ಇನ್ನೊಂದು ಕಾರಣ. ವಾಸ್ತವವಾಗಿ ಪ್ರತಿ ಮಿಲಿಲೀಟರ್ ವೀರ್ಯದಲ್ಲಿ ಯಲ್ಲಿ ಕನಿಷ್ಟ 20 ಮಿಲಿಯನ್ (2 ಕೋಟಿ) ಆರೋಗ್ಯಕರ ವೀರ್ಯಾಣುಗಳಿರಬೇಕು. ಇದಕ್ಕೂ ಕಡಿಮೆ ಇದ್ದರೆ ಗರ್ಭಾಂಕುರದ ಸಾಧ್ಯತೆ ಕಡಿಮೆ. ಆರೋಗ್ಯವರಂತರಲ್ಲಿ ಅರವತ್ತರಿಂದ ಇನ್ನೂರು ಮಿಲಿಯನ್ ನಷ್ಟಿರುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇರಲು ಹಲವಾರು ಕಾರಣಗಳಿವೆ. ಅನುವಂಶಿಕ, ಪರ್ಯಾವರಣ, ಅಹಾರಾಭ್ಯಾಸ, ಸಾಮಾಜಿಕ-ಆರ್ಥಿಕ ಸ್ಥಿತಿ, ಮಾನಸಿಕ ಒತ್ತಡ ಮೊದಲಾದ ಕೆಲವಾರು ಸಂದರ್ಭಗಳೂ ಪ್ರಭಾವ ಬೀರುತ್ತವೆ.

  ಭಾರತದಲ್ಲಿ ಇಂದು ಸಂತಾನಹೀನತೆ ಪ್ರಮುಖ ತೊಂದರೆಯಾಗಿ ಪರಿಣಮಿಸಿದ್ದು ಲಕ್ಷಾಂತರ ದಂಪತಿಗಳ ದುಃಖಕ್ಕೆ ಕಾರಣವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸಂತಾನಹೀನತೆ 20-30%ದಷ್ಟು ಏರಿದೆ. ಸಂತಾನಹೀನತೆಗೆ ದಂಪತಿಗಳಿಬ್ಬರೂ ಸಮಾನರಾಗಿ ಕಾರಣರಾದರೂ ಪುರುಷರಲ್ಲಿ ಈ ತೊಂದರೆಗೆ ಕನಿಷ್ಠ ಸಂಖ್ಯೆಯ ವೀರ್ಯಾಣುಗಳಿಲ್ಲದಿರುವುದು ಅಥವಾ ಇದ್ದರೂ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಪ್ರಮುಖ ಕಾರಣವಾಗಿದೆ. ಇತ್ತೀಚಿನವರೆಗೂ ಪುರುಷರಲ್ಲಿಯೇ ಕೊರತೆ ಇದ್ದರೂ ಇದರಿಂದ ತಮ್ಮ ಪೌರುಷವನ್ನೇ ಕೆಣಕಿದಂತಾಗುತ್ತದೆ ಎಂಬ ಭಾವನೆಯಿಂದ ಹೆಚ್ಚಿನವರು ತಮ್ಮ ಪರೀಕ್ಷೆಯನ್ನೇ ಮಾಡಿಸದಿರುವುದು ಹಾಗೂ ಸಂತಾನಹೀನತೆಗೆ ಮಹಿಳೆಯನ್ನೇ ಕಾರಣವಾಗಿಸಿ ಎರಡನೇ ಮದುವೆ ಮಾಡಿಕೊಳ್ಳುವುದು, ಕೊನೆಗೊಮ್ಮೆ

  ಪುರುಷನಲ್ಲಿಯೇ ಕೊರತೆ ಇದೆ ಎಂದು ಖಚಿತವಾಗುವ ವೇಳೆಗೆ ಮಹಿಳೆ ತಾಯಿಯಾಗುವ ಅಮೂಲ್ಯ ವರ್ಷಗಳನ್ನು ದಾಟಿರುವುದು ಕಂಡುಬರುತ್ತಿತ್ತು. ಬಹುತೇಕ ಎಲ್ಲಾ ಊರಿನಲ್ಲಿಯೂ ಈ ತೊಂದರೆ ಇರುವ ಕುಟುಂಬಗಳಲ್ಲಿ ಇದು ಸಮಾನವಾದ ಕಾರಣವಾಗಿದೆ. ಪುರುಷರು ನಿಮಿರು ಸಾಮರ್ಥ್ಯವನ್ನೇ ಸಂತಾನಫಲಕ್ಕೆ ಮೂಲ ಎಂದು ಭಾವಿಸಿರುವುದು ಇನ್ನೊಂದು ಕಾರಣ. ವಾಸ್ತವವಾಗಿ ಪ್ರತಿ ಮಿಲಿಲೀಟರ್ ವೀರ್ಯದಲ್ಲಿ ಯಲ್ಲಿ ಕನಿಷ್ಠ 20 ಮಿಲಿಯನ್ (2 ಕೋಟಿ) ಆರೋಗ್ಯಕರ ವೀರ್ಯಾಣುಗಳಿರಬೇಕು. ಇದಕ್ಕೂ ಕಡಿಮೆ ಇದ್ದರೆ ಗರ್ಭಾಂಕುರದ ಸಾಧ್ಯತೆ ಕಡಿಮೆ. ಆರೋಗ್ಯವರಂತರಲ್ಲಿ ಅರವತ್ತರಿಂದ ಇನ್ನೂರು ಮಿಲಿಯನ್ ನಷ್ಟಿರುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇರಲು ಹಲವಾರು ಕಾರಣಗಳಿವೆ.

  ಅನುವಂಶಿಕ, ಪರ್ಯಾವರಣ, ಅಹಾರಾಭ್ಯಾಸ, ಸಾಮಾಜಿಕ-ಆರ್ಥಿಕ ಸ್ಥಿತಿ, ಮಾನಸಿಕ ಒತ್ತಡ ಮೊದಲಾದ ಕೆಲವಾರು ಸಂದರ್ಭಗಳೂ ಪ್ರಭಾವ ಬೀರುತ್ತವೆ. ಕೆಲವು ಅನಾರೋಗ್ಯದ ಸ್ಥಿತಿಗಳೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡುತ್ತವೆ. ಜೀವನಶೈಲಿಯಲ್ಲಿ ಬದಲಾವಣೆಯ ಮೂಲಕ ಎದುರಾಗುವ ಸ್ಥೂಲಕಾಯ, ಅತಿಹೆಚ್ಚು ಧೂಮಪಾನ, ಮದ್ಯಪಾನ, ಮಾದಕದ್ರವ್ಯ ಸೇವನೆ, ದೇಹದಲ್ಲಿ ಸತುವಿನೆ ಕೊರತೆ ಮೊದಲಾದವೂ ಪ್ರಭಾವ ಬೀರಬಲ್ಲವು. 

  ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

  ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಪುರುಷರು ಸೇವಿಸುವ ಆಹಾರವೂ ವೀರ್ಯಾಣುಗಳ ಗುಣಮಟ್ಟವನ್ನು ನಿರ್ಧರಿಸುತ್ತದೆ. ಸಂತುಲಿತ ಹಾಗೂ ಆರೋಗ್ಯಕರ ಆಹಾರಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಳವಾಗುತ್ತದೆ ಹಾಗೂ ಗರ್ಭಾಂಕುರದ ಸಾಧ್ಯತೆ ಹೆಚ್ಚುತ್ತದೆ. ಬನ್ನಿ, ಈ ಸಾಮರ್ಥ್ಯವನ್ನು ಹೆಚ್ಚಿಸುವ ಹನ್ನೆರಡು ಭಾರತೀಯ ಆಹಾರಗಳ ಬಗ್ಗೆ ಅರಿಯೋಣ...

  ಬಾಳೆಹಣ್ಣು

  ಬಾಳೆಹಣ್ಣು

  ನಮಗೆ ನಿಸರ್ಗ ನೀಡಿರುವ ಹಲವಾರು ಆಹಾರಗಳ ಆಕಾರ ಆ ಆಕಾರ ಪಡೆದಿರುವ ಅಂಗಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಉದಾಹರಣೆಗೆ ಅಕ್ರೋಟು ಮೆದುಳಿಗೆ, ಬೀನ್ಸ್ ಕಾಳುಗಳು ಮೂತ್ರಪಿಂಡಗಳಿಗೆ ಇತ್ಯಾದಿ. ಅಂತೆಯೇ ಬಾಳೆಹಣ್ಣು ಪುರುಷಾಂಗದ ಆಕಾರವನ್ನು ಹೆಚ್ಚು ಹೋಲುತ್ತದೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ವಿಟಮಿನ್ ಬಿ1, ಸಿ ಹಾಗೂ ಮೆಗ್ನೀಶಿಯಂ ವೀರ್ಯಾಣುಗಳ ಸಂಖ್ಯೆ ಹಾಗೂ ಹೆಚ್ಚು ಕಾರ್ಯಶೀಲತೆ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ಬ್ರೋಮೆಲಿಯಾಡ್ ಎಂಬ ಪೋಷಕಾಂಶವಿದೆ, ಇದು ಒಂದು ಅಪರೂಪದ ಕಿಣ್ವವಾಗಿದ್ದು ಲೈಂಗಿಕ ರಸದೂತಗಳನ್ನು ನಿಯಂತ್ರಿಸುವ ಗುಣ ಹೊಂದಿದೆ.

   ಕಪ್ಪು ಚಾಕಲೇಟು

  ಕಪ್ಪು ಚಾಕಲೇಟು

  ಇದೊಂದು ಉತ್ತಮ ಕಾಮೋತ್ತೇಜಕವಾಗಿದ್ದು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಎಲ್-ಆರ್ಜಿನೈನ್ ಎಂಬ ಆಮೈನೋ ಆಮ್ಲ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವುದು ಮಾತ್ರವಲ್ಲ, ಇದು ಕಾಮೋತ್ತೇಜನವನ್ನೂ ಉತ್ತಮಗೊಳಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಸಹಾ ಉತ್ತಮ ಪ್ರಮಾಣದಲ್ಲಿವೆ. ಆದರೆ ಇದು ಪ್ರಬಲ ಅಹಾರವಾದ ಕಾರಣ ಇದರ ಪ್ರಮಾಣ ಮಿತವಾಗಿರಬೇಕು.

  ದಾಳಿಂಬೆ

  ದಾಳಿಂಬೆ

  ಸ್ವರ್ಗದ ಫಲ ಎಂದೇ ಪರಿಗಣಿಸಲಾಗುವ ದಾಳಿಂಬೆ ಸಹಾ ಇನ್ನೊಂದು ಅದ್ಭುತ ಆಹಾರವಾಗಿದ್ದು ವೀರ್ಯಾಣುಗಳಿಗೂ ಉತ್ತಮವಾಗಿದೆ. ಇದರ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ವೀರ್ಯಾಣುಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ವೀರ್ಯಾಣುಗಳ ಆರೋಗ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ. ದಾಳಿಂಬೆ ರಸದ ನಿಯಮಿತ ಸೇವನೆಯಿಂದ ಫಲವತ್ತತೆಯೂ ಹೆಚ್ಚುತ್ತದೆ.

  ಮೊಟ್ಟೆಗಳು

  ಮೊಟ್ಟೆಗಳು

  ಪುರುಷರದಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಪ್ರೋಟೀನು ಇವೆ. ಇವು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲೂ ಈ ಫ್ರೀ ರ್‍ಯಾಡಿಕಲ್ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯಲ್ಲಿರುವ ಇತರ ಪೋಷಕಾಂಶಗಳೂ ದೇಹದ ಜೀವಕೋಶಗಳ ಬೆಳವಣಿಗೆಗೆ ನೆರವಾಗುವಂತೆಯೇ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಲೂ ನೆರವಾಗುತ್ತದೆ.

  ಪಾಲಕ್ ಸೊಪ್ಪು

  ಪಾಲಕ್ ಸೊಪ್ಪು

  ಪಾಲಕ್ ಹಾಗೂ ಬಸಲೆ ಸೊಪ್ಪುಗಳಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದ್ದು ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುತ್ತದೆ. ಪುರುಷರಲ್ಲಿ ಫೋಲೇಟ್ ಅಂಶ ಕಡಿಮೆಯಾದಾಗ ವೀರ್ಯಾಣುಗಳ ಸಂಖ್ಯೆ ಅಷ್ಟೇ ಇದ್ದರೂ ಇದರಲ್ಲಿ ವಿಕೃತಗೊಂಡ ವೀರ್ಯಾಣುಗಳ ಸಂಖ್ಯೆ ಹೆಚ್ಚೇ ಇರುವ ಕಾರಣ ಇವು ಗರ್ಭಾಂಕುರಕ್ಕೆ ನೆರವಾಗವು, ಅಲ್ಲದೇ ಒಂದು ವೇಳೆ ಈ ವಿಕೃತ ವೀರ್ಯಾಣುವಿನ ಸಂಯೋಜನೆಯಿಂದ ಹುಟ್ಟಿದ ಮಗು ವಿಕಲಾಂಗವಾಗಿ ಹುಟ್ಟುವ ಸಾಧ್ಯತೆಯೂ ಹೆಚ್ಚು.

  ಶತಾವರಿ

  ಶತಾವರಿ

  ಆಸ್ಪರಾಗಸ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಶತಾವರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಸಹಾ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಇದು ವೃಷಣಗಳ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ, ತನ್ಮೂಲಕ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಹಾಗೂ ವೀರ್ಯಾಣುಗಳ ಗುಣಮಟ್ಟ ಹೆಚ್ಚಲೂ ನೆರವಾಗುತ್ತದೆ.

  ಬ್ರೋಕೋಲಿ

  ಬ್ರೋಕೋಲಿ

  ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿಯೂ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವಿದ್ದು ಪುರುಷರಲ್ಲಿ ನಪುಂಸಕತ್ವವನ್ನು ನಿವಾರಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬ್ರೋಕೋಲಿಯನ್ನು ನಿಯಮಿತವಾಗಿ ಸೇವಿಸಿದ ಪುರುಷರ ವೀರ್ಯಾಣುಗಳ ಸಂಖ್ಯೆ ಸುಮಾರು 70%ದಷ್ಟು ಏರಿದೆ.

  ಅಕ್ರೋಟು

  ಅಕ್ರೋಟು

  ಈ ಒಣಫಲಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ವಿಶೇಷವಾಗಿ ವೃಷಣಗಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ವೀರ್ಯಾಣುಗಳ ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಅಕ್ರೋಟಿನಲ್ಲಿರುವ ಆರ್ಜಿನೈನ್ ಎಂಬ ಪೋಷಕಾಂಶಕ್ಕೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣವಿದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ೬ ಹಾಗೂ ಸೆಲೆನಿಯಂ ಎಂಬ ಪೋಷಕಾಂಶಗಳು ಆರೋಗ್ಯವಂತ ವೀರ್ಯಾಣುಗಳ ನಿರ್ಮಾಣಕ್ಕೆ ನೆರವಾಗುತ್ತವೆ. ಅಷ್ಟೇ ಅಲ್ಲ ಬೆಳ್ಳುಳ್ಳಿಯಲ್ಲಿ ರಕ್ತವನ್ನು ಶುದ್ದೀಕರಿಸುವ ಗುಣವಿದ್ದು ಶುದ್ದವಾದ ರಕ್ತ ವೃಷಣಗಳಿಗೆ ಹರಿಯಲು ನೆರವಾಗುತ್ತದೆ, ತನ್ಮೂಲಕ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ.

  ಕಪ್ಪೆಚಿಪ್ಪು ಅಥವಾ ಸಿಂಪಿ

  ಕಪ್ಪೆಚಿಪ್ಪು ಅಥವಾ ಸಿಂಪಿ

  ಕಪ್ಪೆಚಿಪ್ಪಿನಲ್ಲಿರುವ (Oysters) ಹೆಚ್ಚಿನ ಪ್ರಮಾಣದ ಸತು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ ಹಾಗೂ ಪುರುಷರ ದೇಹಕ್ಕೆ ಮೀಸಲಾದ ಟೆಸ್ಟೋಸ್ಟೆರಾನ್ ಎಂಬ ರಸದೂತದ ಪ್ರಮಾಣ ಹೆಚ್ಚಿಸುವ ಮೂಲಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆ.

  ಅಶ್ವಗಂಧ

  ಅಶ್ವಗಂಧ

  ಇದೊಂದು ಭಾರತೀಯ ಗಿಡಮೂಲಿಕೆಯಾಗಿದ್ದು ಲೈಂಗಿಕ ಸಾಮರ್ಥವನ್ನು ಹೆಚ್ಚಿಸುವ ಗುಣದಿಂದಾಗಿ ಭಾರತೀಯ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಅಶ್ವಗಂಧದ ಸೇವನೆಯಿಂದ ವೀರ್ಯಾಣುಗಳ ಪ್ರಾಮಾಣ, ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ.

  ಗೋಜಿ ಬೆರ್ರಿಗಳು

  ಗೋಜಿ ಬೆರ್ರಿಗಳು

  ಇವುಗಳ ಸೇವನೆಯಿಂದ ನಿಮ್ಮ ಮನೋಭಾವನೆ ಮಾತ್ರವೇ ಉತ್ತಮ ಗೊಳ್ಳುವುದಲ್ಲ, ಜೊತೆಗೇ ವೀರ್ಯಾಣುಗಳ ಸಂಖ್ಯೆಗೂ ವೃದ್ದಿಗೊಳ್ಳುತ್ತದೆ. ಈ ಬೆರ್ರಿಗಳು ಫ್ರೀ ರ್‍ಯಾಡಿಕಲ್ ಹಾಗೂ ಇತರ ಹಾನಿಕಾರಕ ಕಣಗಳು ವೀರ್ಯಾಣುಗಳ ಮೇಲೆ ಒಡ್ಡುವ ಪ್ರಹಾರವನ್ನು ತಡೆದು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತವೆ.ಈ ಮಾಹಿತಿ ಉತ್ತಮ ಎಂದು ಕಂಡುಬಂದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ, ಸಂತಾನಹೀನತೆಯಿಂದ ದುಃಖಿತ ದಂಪತಿಗಳಿಗೆ ಇದು ಆಶಾಕಿರಣವಾಗಬಹುದು.

  English summary

  Natural foods to Increase Sperm Count Fast

  There are other common reasons for male infertility such as low sperm concentration, poor sperm motility and abnormal sperm morphology. With recent research, there are other factors like environmental, nutritional and socio-economical that are the causes of decline in semen quality. Certain health issues can also impact the quality and quantity of your sperm count. A few lifestyle choices like stress, obesity, excessive smoking and drinking, drugs, zinc deficiency, etc.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more