For Quick Alerts
ALLOW NOTIFICATIONS  
For Daily Alerts

ವೀರ್ಯ ಮತ್ತು ವೀರ್ಯಾಣುಗಳ ಬಗ್ಗೆ ಇದ್ದ ಕಟ್ಟುಕತೆಗಳೆಲ್ಲಾ ಈಗ ಧೂಳಿಪಟ!

|

ಸಂತಾನಫಲ ಪಡೆಯಲು ತಂದೆ ಮತ್ತು ತಾಯಿ ಇಬ್ಬರಲ್ಲಿಯೂ ಫಲವಂತಿಕೆ ಇದ್ದರೆ ಮಾತ್ರವೇ ಸಾಧ್ಯ. ಅಲ್ಲದೇ ಹುಟ್ಟಲಿರುವ ಮಗು ಆರೋಗ್ಯವಾಗಿರಬೇಕಾದರೆ ದಂಪತಿಗಳು ಕೆಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಆರೋಗ್ಯಕರ ಆಹಾರಕ್ರಮ ಮತ್ತು ಜೀವನಕ್ರಮವನ್ನು ಅನುಸರಿಸುವುದು ಪ್ರಥಮ ಆದ್ಯತೆಯಾಗಿದ್ದು ಇದರೊಂದಿಗೇ ಇನ್ನೂ ಹಲವಾರು ಕಟ್ಟುಪಾಡುಗಳನ್ನೂ ಅನುಸರಿಸಬೇಕಾಗುತ್ತದೆ.

ಅದರಲ್ಲೂ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಉತ್ತಮ ಹಾಗೂ ಆರೋಗ್ಯಪೂರ್ಣವಾಗಿರಬೇಕಾದರೆ ಆಹಾರದಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುವುದು ಅಗತ್ಯ. ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಇವೆರಡೂ ಪುರುಷನ ಸಂತಾನ ಸಾಫಲ್ಯತೆಯನ್ನು ನಿರ್ಧರಿಸುತ್ತವೆ. ಇದರ ಜೊತೆಗೇ ವೀರ್ಯಾಣುಗಳು ಚಲನಶೀಲತೆ ಹೊಂದಿರುತ್ತವೆ (motility) ಹಾಗೂ ಸಾಂದ್ರತೆ (ಪ್ರತಿ ಸಿಸಿ ವೀರ್ಯದಲ್ಲಿರಬೇಕಾದ ಕನಿಷ್ಟ ಸಂಖ್ಯೆ) ಗಳೂ ಸಂತಾನಭಾಗ್ಯವನ್ನು ನಿರ್ಧರಿಸುತ್ತವೆ.

ಸ್ಪರ್ಮ್ ಗ್ರೀಕ್ ಭಾಷೆಯ ಸ್ಪರ್ಮಾ ಪದದಿಂದ ಉದ್ಭವವಾಗಿದೆ

ಸ್ಪರ್ಮ್ ಗ್ರೀಕ್ ಭಾಷೆಯ ಸ್ಪರ್ಮಾ ಪದದಿಂದ ಉದ್ಭವವಾಗಿದೆ

ವೀರ್ಯಾಣು ಅಥವಾ ಸ್ಪರ್ಮ್ (Sperm) ಎಂಬ ಪದ ಗ್ರೀಕ್ ಭಾಷೆಯ ಸ್ಪರ್ಮಾ (sperma) ಎಂಬ ಪದದಿಂದ ಉದ್ಭವವಾಗಿದೆ. ಇದರ ಅರ್ಥ-ಬೀಜ ಎಂದಾಗಿದೆ. ವೀರ್ಯಾಣುವಿನ ಏಕಮಾತ್ರ ಉದ್ದೇಶವೆಂದರೆ ಗರ್ಭಕಂಠದ ಮೂಲಕ ಈಜುತ್ತಾ ಅಂಡಾಣುವನ್ನು ತಲುಪಿ ಅಂಡಾಣುವಿನೊಡನೆ ಮಿಲಗೊಂಡು ಫಲಿತಗೊಳಿಸುವುದೇ ಆಗಿದೆ. ಇದಕ್ಕೆ ಕೇವಲ ಒಂದೇ ವೀರ್ಯಾಣು ಸಾಕಾದರೂ ಈ ಕ್ರಿಯೆ ಸಫಲಗೊಳ್ಳಬೇಕಾದರೆ ಪ್ರತಿ ಸೀಸಿ ಯಲ್ಲಿ ಕನಿಷ್ಟ ಇಪ್ಪತ್ತು ಮಿಲಿಯನ್ ನಷ್ಟು ಸಂಖ್ಯೆಯ ವೀರ್ಯಾಣುಗಳ ಅಗತ್ಯವಿದೆ. ನಿಸರ್ಗದ ಈ ಕ್ರಮ ಸೋಜಿಗ ಮೂಡಿಸಿದರೂ ಇದಕ್ಕೆ ಉತ್ತರವನ್ನೂ ನಿಸರ್ಗವೇ ನೀಡುತ್ತದೆ. ಇಷ್ಟೊಂದು ಸಂಖ್ಯೆಯ ವೀರ್ಯಾಣುಗಳಲ್ಲಿ ಅತ್ಯುತ್ತಮವಾದ ವೀರ್ಯಾಣುವೇ ಮಿಲನಗೊಳ್ಳಲು ಸಫಲವಾಗುವುದರಿಂದ ಹುಟ್ಟಲಿರುವ ಮಗುವೂ ಅತ್ಯುತ್ತಮ ಆರೋಗ್ಯವನ್ನೇ ಹೊಂದಿರುತ್ತದೆ. ಒಂದು ವೀರ್ಯಾಣುವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಚಿಕ್ಕ ಅಕ್ಕಿಕಾಳಿದೊಂದು ನೀಳವಾದ ಬಾಲವಿದ್ದಂತೆ ಕಾಣುತ್ತದೆ.

ಸ್ಪರ್ಮ್ ಗ್ರೀಕ್ ಭಾಷೆಯ ಸ್ಪರ್ಮಾ ಪದದಿಂದ ಉದ್ಭವವಾಗಿದೆ

ಸ್ಪರ್ಮ್ ಗ್ರೀಕ್ ಭಾಷೆಯ ಸ್ಪರ್ಮಾ ಪದದಿಂದ ಉದ್ಭವವಾಗಿದೆ

ಇವು ಜಾರುವಂತಿರುವ ದ್ರವದಲ್ಲಿ ಈಜಾಡುತ್ತಿದ್ದು ಈ ದ್ರವವನ್ನೇ ವೀರ್ಯ ಎಂದು ಕರೆಯಲಾಗುತ್ತದೆ. ವೀರ್ಯದಲ್ಲಿ ವೀರ್ಯಾಣುಗಳ ಹೊರತಾಗಿ ಇನ್ನೂರಕ್ಕೂ ಹೆಚ್ಚು ಬಗೆಯ ಪ್ರೋಟೀನುಗಳು, ಕ್ಯಾಲ್ಸಿಯಂ, ವಿಟಮಿನ್ ಸಿ ವಿಟಮಿನ್ ಬಿ೧೨, ಸಿಟ್ರಿಕ್ ಆಮ್ಲ, ಲ್ಯಾಕ್ಟಿಕ್ ಆಮ್ಲ, ನೈಟ್ರೋಜೆನ್, ಪೊಟ್ಯಾಶಿಯಂ, ಸೋಡಿಯಂ, ಗಂಧಕ, ಮತ್ತು ಸತುವಿನ ಅಂಶಗಳು ಪ್ರಮುಖವಾಗಿರುತ್ತವೆ. ಇಂದಿನ ಲೇಖನದಲ್ಲಿ ವೀರ್ಯಾಣುಗಳ ಬಗ್ಗೆ ವ್ಯಾಪಕವಾಗಿರುವ ಮಿಥ್ಯೆಗಳನ್ನು ದೂರ ಮಾಡುವ ಪ್ರಯತ್ನ ಮಾಡಲಾಗಿದ್ದು ಉಲ್ಲೇಖಿನ ಸಂಗತಿಗಳಿಗೆ ವೈಜ್ಞಾನಿಕ ಆಧಾರವನ್ನೂ ನೀಡಲಾಗಿದೆ: ಇಂದಿಗೂ ಜನರಲ್ಲಿ ಈ ಮಿಥ್ಯೆಗಳು ಮನದಾಳದಲ್ಲಿ ಗಟ್ಟಿಯಾಗಿ ಬೇರೂರಿದ್ದು ಇವನ್ನು ಬುಡಸಹಿತ ನಿವಾರಣೆಯೇ ಈ ಲೇಖನದ ಪ್ರಮುಖ ಉದ್ದೇಶವಾಗಿದೆ.

Most Read: 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

ವೀರ್ಯದ ಆಯಸ್ಸು ಕಡಿಮೆ

ವೀರ್ಯದ ಆಯಸ್ಸು ಕಡಿಮೆ

ಸ್ಖಲನಗೊಂಡ ಬಳಿಕ ಪುರುಷ ದೇಹದಿಂದ ಸಂಪರ್ಕ ಕಳೆದುಕೊಂಡ ವೀರ್ಯ ವಾಸ್ತವವಾಗಿ ಸುಮಾರು ಐದು ದಿನಗಳವರೆಗೆ ಜೀವಂತವಿರಬಲ್ಲುದು. ವೀರ್ಯ ಮಹಿಳೆಯ ಜನನಾಂಗದ ತೇವದಲ್ಲಿ ಸ್ಖಲಿಸಲ್ಪಟ್ಟಾಗ ಜನನಾಂಗದಲ್ಲಿರುವ ಆಮ್ಲೀಯತೆಯಿಂದ ವೀರ್ಯಾಣುಗಳನ್ನು ರಕ್ಷಿಸಲು ಗರ್ಭಕಂಠದ ಲೋಳೆ (cervical mucus) ನೆರವಾಗುತ್ತದೆ. ಅಲ್ಲದೇ ಒಂದು ವೇಳೆ ವೀರ್ಯದಲ್ಲಿ ಆರೋಗ್ಯವಂತವಲ್ಲದ, ವಿರೂಪಗೊಂಡ, ಚಲನಶೀಲತೆ ಇಲ್ಲದ ಅಥವಾ ಕಡಿಮೆ ಕ್ಷಮತೆಯ ವೀರ್ಯಾಣುಗಳಿದ್ದರೆ ಇವು ಈ ಸ್ಥಳದಲ್ಲಿಯೇ ತಿರಸ್ಕರಿಸಲ್ಪಡುತ್ತವೆ.

ವೀರ್ಯ ನೇರವಾಗಿ ಅಂಡಾಣುವಿನತ್ತ ತೆರಳುತ್ತದೆ

ವೀರ್ಯ ನೇರವಾಗಿ ಅಂಡಾಣುವಿನತ್ತ ತೆರಳುತ್ತದೆ

ಒಂದು ವೇಳೆ ಸ್ಖಲನದ ಬಳಿಕ ವೀರ್ಯವೆಲ್ಲವೂ ನೇರವಾಗಿ ಅಂಡಾಣುವಿನತ್ತಲೇ ಸಾಗುತ್ತವೆ ಎಂದು ನೀವೂ ಇದುವರೆಗೆ ನಂಬಿದ್ದರೆ ಇದು ತಪ್ಪು ನಂಬಿಕೆಯಾಗಿದೆ. ಏಕೆಂದರೆ ಸ್ಖಲನಗೊಂಡ ಬಳಿಕ ವೀರ್ಯಾಣುವಿನ ಗಾತ್ರಕ್ಕೆ ಹೋಲಿಸಿದರೆ ಅಂಡಾಣುವನ್ನು ತಲುಪಬೇಕಾದರೆ ಭಾರೀ ದೀರ್ಘವಾದ ಪ್ರಯಾಣವನ್ನೇ ಮಾಡಬೇಕಾಗುತ್ತದೆ. ಕೆಲವೊಮ್ಮೆ ಅಂಡಾಣು ಮಿಲನಕ್ಕೆ ತಯಾರಿಲ್ಲದೇ ಇದ್ದರೆ ವೀರ್ಯಾಣುಗಳು ಗರ್ಭಕಂಠದ ದ್ವಾರ (cervical crypt) ಎಂಬ ಭಾಗದಲ್ಲಿ ಗುಂಪಾಗಿ ಅಂಡಾಣುಗಳು ಬರುವವರೆಗೂ ಕಾಯುತ್ತವೆ. ಯಾವಾಗ ಅಂಡಾಣು ಫಲಿತಗೊಳ್ಳಲು ತಯಾರಿದೆ ಎಂಬ ಸೂಚನೆ ಸಿಕ್ಕಿತೋ, ಆಗ ಇವು ರಭಸದಲ್ಲಿ ಒಳಧಾವಿಸುತ್ತವೆ. ಇದೇ ಕಾರಣಕ್ಕೆ ಋತುಚಕ್ರದ ದಿನಗಳ ಅಸುರಕ್ಷಿತ ಮಿಲನದಿಂದಲೂ ಗರ್ಭಧಾರಣೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸುತ್ತಾರೆ.

ವೀರ್ಯ ಪುರುಷನ ಜೀವಮಾನವಿಡೀ ಫಲವಂತಿಕೆಯಿಂದ ಕೂಡಿರುತ್ತದೆ

ವೀರ್ಯ ಪುರುಷನ ಜೀವಮಾನವಿಡೀ ಫಲವಂತಿಕೆಯಿಂದ ಕೂಡಿರುತ್ತದೆ

ಹೆಚ್ಚಿನ ಪುರುಷರು ಜೀವಮಾನವಿಡೀ ಅವರ ವೃಷಣಗಳು ಅತ್ಯುತ್ತಮ ಗುಣಮಟ್ಟದ ವೀರ್ಯಾಣುಗಳನ್ನು ಸೃಷ್ಟಿಸುತ್ತಲೇ ಇರುತ್ತವೆ ಹಾಗೂ ಎಂದಿಗೂ ಇವರ ಫಲವಂತಿಕೆ ಕಡಿಮೆಯಾಗದು ಎಂದು ನಂಬಿದ್ದಾರೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿ ಸತ್ಯವಲ್ಲ. ಜೀವಮಾನವಿಡೀ ವೃಷಣಗಳು ವೀರ್ಯಾಣುಗಳನ್ನು ಸೃಷ್ಟಿಸುತ್ತಲೇ ಇರುತ್ತವಾದರೂ ಇವುಗಳ ಗುಣಮಟ್ಟ ಮತ್ತು ಆರೋಗ್ಯವಂತ ಮತ್ತು ಚಲನಾಶೀಲ ವೀರ್ಯಾಣುಗಳ ಸಂಖ್ಯೆ ವಯಸ್ಸಾದಂತೆಯೇ ಕುಂದುತ್ತಾ ಹೋಗುತ್ತದೆ.

Most Read: ಈ 5 ರಾಶಿಯವರಿಗೆ ಮಾತು ಕಮ್ಮಿ-ಆದರೆ ಇವರ ಆಲೋಚನೆಗಳನ್ನು ಊಹಿಸುವುದೂ ಕಷ್ಟ!

ವೀರ್ಯಾಣುಗಳ ಸಂಖ್ಯೆಗೂ ಒಳ ಉಡುಪಿಗೂ ಏನೂ ಸಂಬಂಧವಿಲ್ಲ

ವೀರ್ಯಾಣುಗಳ ಸಂಖ್ಯೆಗೂ ಒಳ ಉಡುಪಿಗೂ ಏನೂ ಸಂಬಂಧವಿಲ್ಲ

ಹೆಚ್ಚಿನ ಪುರುಷರಿಗೆ ಬಿಗಿಯಾದ ಒಳ ಉಡುಪನ್ನು ಧರಿಸುವ ಅಭ್ಯಾಸವಿರುತ್ತದೆ. ಸಡಿಲವಾದ ಒಳ ಉಡುಪುಗಳನ್ನು ಧರಿಸಿದರೆ ಜನನಾಂಗ ಅತ್ತಿತ್ತ ಹೊರಳಾಡಿ ಮುಜುಗರ ಎದುರಿಸಬೇಕೆಂಬುದೇ ಇವರು ನೀಡುವ ಕಾರಣವಾಗಿದ್ದು ಇದರಿಂದ ವೀರ್ಯಾಣುಗಳ ಸಂಖ್ಯೆಯೇನೂ ಬದಲಾಗುವುದಿಲ್ಲ ಎಂದು ನಂಬಿದ್ದಾರೆ. ಆದರೆ ವಾಸ್ತವದಲ್ಲಿ ಬಿಗಿಯಾದ ಉಡುಪು ಮತ್ತು ಒಳ ಉಡುಪುಗಳನ್ನು ಧರಿಸಿದಷ್ಟೂ ವೃಷಣಗಳಿಗೆ ಸೂಕ್ತವಾದ ತಾಪಮಾನ ದೊರಕುತ್ತದೆ ಹಾಗೂ ರಕ್ತಪರಿಚಲನೆಯೂ ಸರಾಗವಾಗಿ ನಡೆಯುವ ಮೂಲಕ ವೀರ್ಯಾಣುಗಳ ಸಂಖ್ಯೆಯೂ ಗುಣಮಟ್ಟವೂ ಉತ್ತಮವಾಗಿರುತ್ತದೆ. ಪುರುಷರ ದೇಹದ ತಾಪಮಾನಕ್ಕೂ ವೃಷಣಗಳ ತಾಪಮಾನ ಕೊಂಚ ಕಡಿಮೆ ಇರಬೇಕೆಂದೇ ಇವು ದೇಹದ ಹೊರಗಿವೆ ಹಾಗೂ ವೃಷಣದ ಚರ್ಮವೂ ಆಪಾರವಾಗಿ ವಿಸ್ತರಿಸುವ (ಬಿಸಿ ಹೆಚ್ಚಿದ್ದಾಗ ವಿಸ್ತರಿಸುವ, ಚಳಿಯಾದಾದ ಸಂಕುಚನಗೊಳ್ಳುವ) ಗುಣ ಹೊಂದಿದೆ. ಒಂದು ಸಂಶೋಧನೆ ಯಲ್ಲಿ ಬಿಗಿ ಒಳ ಉಡುಪು ತೊಟ್ಟವರಿಗಿಂತ ಸಡಿಲವಾದ ಚಡ್ಡಿಗಳನ್ನು ಧರಿಸಿದ ಪುರುಷರಲ್ಲಿ 17ಶೇಖಡಾದಷ್ಟು ವೀರ್ಯಾಣುಗಳು ಹೆಚ್ಚಿರುವುದನ್ನು ಖಾತರಿಪಡಿಸಲಾಗಿದೆ.

ವೀರ್ಯಾಣುಗಳಲ್ಲಿ ಪ್ರೋಟೀನ್ ಸಮೃದ್ದವಾಗಿದೆ

ವೀರ್ಯಾಣುಗಳಲ್ಲಿ ಪ್ರೋಟೀನ್ ಸಮೃದ್ದವಾಗಿದೆ

ಹಲವು ಪುರುಷರು ಇದನ್ನು ಸತ್ಯ ಎಂದು ನಂಬಿದ್ದಾರೆ. ಇದೇ ಕಾರಣಕ್ಕೆ ವೀರ್ಯವನ್ನು ನುಂಗುವ ಮೂಲಕ ದೇಹದ ಆರೋಗ್ಯ ಹೆಚ್ಚುತ್ತದೆ ಎಂದೂ ನಂಬಿದ್ದಾರೆ. ವಾಸ್ತವದಲ್ಲಿ ಒಂದು ಮೊಟ್ಟೆಯಲ್ಲಿರುವಷ್ಟು ಪ್ರೋಟೀನನ್ನು ಪಡೆಯಬೇಕಾದರೆ ಅರ್ಧ ಕಪ್ ನಷ್ಟು ವೀರ್ಯ ಬೇಕಾಗುತ್ತದೆ.

Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ವೀರ್ಯ ಗಾಢವಾಗಿದ್ದಷ್ಟೂ ಹೆಚ್ಚಿದ್ದಷ್ಟೂ ಫಲವಂತಿಕೆ ಹೆಚ್ಚು

ವೀರ್ಯ ಗಾಢವಾಗಿದ್ದಷ್ಟೂ ಹೆಚ್ಚಿದ್ದಷ್ಟೂ ಫಲವಂತಿಕೆ ಹೆಚ್ಚು

ಸ್ಖಲನಗೊಂಡ ವೀರ್ಯ ಗಾಢವಾಗಿದ್ದಷ್ಟೂ ಫಲವಂತಿಕೆಯೂ ಹೆಚ್ಚು ಎಂಬುದು ಸುಳ್ಳು. ವೀರ್ಯದ ಸಾಂದ್ರತೆ ಪುರುಷರು ಸೇವಿಸುವ ಆಹಾರ, ದೈಹಿಕ ಚಟುವಟಿಕೆ, ವಿಟಮಿನ್ನುಗಳ ಸೇವನೆ, ವಿಶೇಷವಾಗಿ ವಿಟಮಿನ್ ಬಿ೧೨ ಇರುವ ಆಹಾರಗಳ ಸೇವನೆ ಮೊದಲಾದವು ಕಾರಣವಾಗಿವೆ. ಅಲ್ಲದೇ ವೀರ್ಯ ಗಾಢವಾಗಿದ್ದರೆ ಇದರಲ್ಲಿ ಆರೋಗ್ಯವಂತ ವೀರ್ಯಾಣುಗಳ ಸಾಂದ್ರತೆ ಹೆಚ್ಚಿರಬಹುದು ಅಥವಾ ವಿಕೃತ ಮತ್ತು ಚಲನಾಶೀಲತೆ ಕಡಿಮೆ ಇರುವ ವೀರ್ಯಾಣುಗಳ ಸಂಖ್ಯೆಯೇ ಹೆಚ್ಚಿರಬಹುದು. ಹಾಗಾಗಿ ವೀರ್ಯ ಗಾಢವಾಗಿರುವುದೇ ಫಲವಂತಿಕೆಯ ಅಳತೆಗೋಲು ಆಗಲು ಸಾಧ್ಯವೇ ಇಲ್ಲ.

ಅನಾನಾಸು ತಿಂದರೆ ವೀರ್ಯಾಣುಗಳ ರುಚಿ ಹೆಚ್ಚುತ್ತದೆ

ಅನಾನಾಸು ತಿಂದರೆ ವೀರ್ಯಾಣುಗಳ ರುಚಿ ಹೆಚ್ಚುತ್ತದೆ

ಅನಾನಾಸು ತಿಂದ ಪುರುಷರ ವೀರ್ಯಾಣುಗಳ ರುಚಿ ಹೆಚ್ಚುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಈ ವಿಷಯವನ್ನು ಎಲ್ಲಿಯೂ ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿಲ್ಲ. ವೀರ್ಯಾಣುಗಳ ರುಚಿ ಅಥವಾ ವಾಸನೆಯ ಮೇಲೆ ಯಾವುದೇ ಆಹಾರ ತನ್ನ ಪ್ರಭಾವವನ್ನು ಬೀರಲು ಸಾಧ್ಯವಿಲ್ಲ. ವಾಸನೆ, ರುಚಿ ಅಥವಾ ಗುಣಮಟ್ಟಗಳು ಆಹಾರ, ಜೀವನಕ್ರಮ ಮತ್ತು ಪುರುಷನ ಅನುವಂಶಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಇವೆಲ್ಲವೂ ಪ್ರತಿ ಪುರುಷನಿಗೂ ಬೇರೆ ಬೇರೆಯಾಗಿರುತ್ತದೆ. ಆದರೆ ವಿಟಮಿನ್ ಸಿ, ಬಿ೧೨ ಹೆಚ್ಚಿರುವ ಅಹಾರಗಳ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟಗಳು ಉತ್ತಮವಾಗಿರುವುದು ಮಾತ್ರ ವೈಜ್ಞಾನಿಕವಾಗಿ ಸಾಬೀತಾಗಿದೆ.

English summary

Myths About Sperms And Semen Debunked!

There are numerous health-related myths which people believe are true. In this article, we have debunked some interesting myths about semen that you should know. Semen is believed to be rich in proteins, thick semen is considered to be more fertile, its lifespan is short, it travels directly to the egg, food and drinks affect the taste and smell of sperm, etc.
X
Desktop Bottom Promotion