ಬೆನ್ನು ನೋವಿದ್ದರೆ ಹೀಗೆ ಮಾಡಿ ನೋಡಿ, ನೋವು ಕೂಡಲೇ ಕಡಿಮೆಯಾಗುತ್ತೆ..

Posted By: Deepu
Subscribe to Boldsky

ವಯಸ್ಕರಿಗೆ ಕಾಡುವ ಸಾಮಾನ್ಯ ರೋಗವೆಂದರೆ ಅದು ಬೆನ್ನುನೋವು. ಒಂದು ಅಂದಾಜಿನ ಪ್ರಕಾರ ಶೇ. 80ರಷ್ಟು ವಯಸ್ಕರು ದೀರ್ಘಕಾಲ ಅಥವಾ ತಾತ್ಕಾಲಿಕ ಬೆನ್ನುನೋವಿನಿಂದ ಬಳಲುತ್ತಾರೆ. ತೀವ್ರವಾದ ಸ್ನಾಯು, ಅತಿಯಾದ ತೂಕ, ಸಂಧಿವಾತ, ಆಪೀಸ್ ನಲ್ಲಿ ಕಂಪ್ಯೂಟರಿನ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದಲ್ಲಿ, ಅತಿಯಾದ ಶ್ರಮದ ಕೆಲಸ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಅನೇಕ ತೊಂದರೆಗಳಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇದು ಮಹಿಳೆಯರಲ್ಲಿ ಅತಿ ಹೆಚ್ಚು ಎಂದು ಹೇಳಬಹುದು.

ಅಲ್ಲದೆ ಇನ್ನು ಕೆಲವರಿಗೆ ದಿನಾಪೂರ್ತಿ ಓಡಾಡಿ ಕೆಲಸ ಮಾಡಿದಾಗ ಬೆನ್ನುನೋವು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಕುಳಿತಲ್ಲಿಯೇ ಕೆಲಸ ಮಾಡಿದಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಧಿಕ ಭಾರವಾದ ವಸ್ತುಗಳನ್ನು ಎತ್ತಿದಾಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ವಯಸ್ಸಾಗುತ್ತಾ ಬಂದ ಹಾಗೆ ಮೂಳೆ ಸವೆತದಿಂದ ಬೆನ್ನುನೋವು ಉಂಟಾಗುವುದು.

ಹಾಗಾಗಿ ಬೆನ್ನು ನೋವನ್ನು ಗುಣಪಡಿಸಲು ತುಂಬಾ ಕಾಳಜಿ ಬೇಕಾಗುತ್ತದೆ. ಇನ್ನು ಸಿಹಿ ಸುದ್ದಿ ಏನೆಂದರೆ ಬೆನ್ನು ನೋವನ್ನು ಸಾಂಪ್ರದಾಯಿಕವಾಗಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಒಳ್ಳೆಯ ಸುದ್ದಿಯಲ್ಲವೇ? ವಯಸ್ಸಾಗುತ್ತಿರುವಂತೆ ಅಂಗಾಂಶಗಳು ಹರಿಯುವುದರಿಂದ ಬೆನ್ನು ನೋವು ಪ್ರಾರಂಭವಾಗಹುದು. ಬೆನ್ನು ನೋವನ್ನು ತುಂಬಾ ಸರಳ ಮತ್ತು ಹೆಚ್ಚು ಪರಿಶ್ರಮವಿಲ್ಲದೆ ನಿವಾರಿಸಬಹುದು. ಈ ಸರಳ ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ಬೆನ್ನು ನೋವಿನಿಂದ ಉಪಶಮನ ಪಡೆಯಬಹುದು....

ಪ್ರತಿ ದಿನ 8-10 ಗ್ಲಾಸ್ ನೀರು ಕುಡಿಯಿರಿ

ಪ್ರತಿ ದಿನ 8-10 ಗ್ಲಾಸ್ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ದೊಡ್ಡ ಗ್ಲಾಸ್ ನಲ್ಲಿ 2 ಗ್ಲಾಸ್ ಶುದ್ಧವಾದ ನೀರು ಕುಡಿಯಬೇಕು. ದಿನವೂ 8-10 ಗ್ಲಾಸ್ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ

ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ

ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ

ಬೆನ್ನು ನೋವು ನಿವಾರಣೆಗೆ ಅಧಿಕ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ ಪ್ರತಿನಿತ್ಯ 1-2 ಲೋಟ ಹಾಲು ಕುಡಿಯಬೇಕು.

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯ ಮಸಾಜ್ ಮಾಡಿ...

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯ ಮಸಾಜ್ ಮಾಡಿ...

1. 8 ರಿಂದ 10 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ

1/2 ಕಪ್ ಶುದ್ಧ ಸಾಸಿವೆ ಎಣ್ಣೆಯಲ್ಲಿ ಹಾಕಿ

2. ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹುರಿಯಲು ಸಣ್ಣ ಉರಿಯಲ್ಲಿ ಇಡಿ.

3. ಕಂದು ಬಣ್ಣಕ್ಕೆ ತಿರುಗಿದ ಮೇಲೆ ಮಿಶ್ರಣವನ್ನು ಕೆಳಗಿಳಿಸಿ.

4. ಆರಿದ ನಂತರ ಎಣ್ಣೆಯಲ್ಲಿದ್ದ ಬೆಳ್ಳುಳ್ಳಿಯನ್ನು ಸೋಸಿ. 5. ನೋವಿರುವ ಸ್ಥಳದಲ್ಲಿ ದಿನಕ್ಕೆ 1-2 ಬಾರಿ ಮಸಾಜ್ ಮಾಡಿ.

ವಿಟಮಿನ್ ಇರುವ ಆಹಾರ ಸೇವಿಸಿ

ವಿಟಮಿನ್ ಇರುವ ಆಹಾರ ಸೇವಿಸಿ

ಬೆನ್ನುನೋವನ್ನು ಗುಣಪಡಿಸಲು ನೀವು ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಯೆಂದರೆ ಸರಿಯಾಗಿ ವಿಟಮಿನ್ ತೆಗೆದುಕೊಳ್ಳಿ. ಬೆನ್ನು ನೋವು ನಿವಾರಿಸಲು ವಿಟಮಿನ್ ಬಿ' ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ವಿಟಮಿನ್ ಬಿ' ಕೇಂದ್ರ ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ದೇಹದ ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ. ಬೆನ್ನು ನೋವಿರುವವರು ತಮ್ಮ ಆಹಾರ ಕ್ರಮದಲ್ಲಿ ಒಮೆಗಾ-3 ನ್ನು ಬಳಸಲು ಪ್ರಯತ್ನಿಸಿ.

 ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಭವಿಷ್ಯದಲ್ಲಿ ಬರುವ ಯಾವುದೇ ರೀತಿಯ ಬೆನ್ನು ನೋವನ್ನು ನಿಯಂತ್ರಿಸಲು ಮಲಗುವಾಗ ಒಂದಕ್ಕಿಂತ ಹೆಚ್ಚು ತಲೆದಿಂಬನ್ನು ಬಳಸಿ. ಒಂದು ನಿಮ್ಮ ತಲೆಗೆ ಆರಾಮವನ್ನು ಒದಗಿಸಿದರೆ, ಇನ್ನೊಂದು ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ಆರಾಮವನ್ನು ಒದಗಿಸುತ್ತದೆ. ಒಂದು ವೇಳೆ ನೀವು ಮಗ್ಗುಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಸಾಧಾರಣವಾದ ತಲೆದಿಂಬನ್ನು ನಿಮ್ಮ ಕಾಲುಗಳ ನಡುವೆ ಇಡಿ. ಒಂದು ವೇಳೆ ನೀವು ಬೋರಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ತಲೆದಿಂಬನ್ನು ನಿಮ್ಮ ಸೊಂಟದ ಭಾಗದಲ್ಲಿ ಇಟ್ಟು ಮಲಗಿ.

ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆ ಮಸಾಜ್ ಮಾಡಿ

ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆ ಮಸಾಜ್ ಮಾಡಿ

ನೀಲಗಿರಿ ತೈಲವು ನೈಸರ್ಗಿಕವಾಗಿಯೇ ನೋವು ನಿವಾರಕ ಉತ್ಪನ್ನ. ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆಯ ಮಿಶ್ರಣವು ನೋವು ನಿವಾರಣೆಗೆ ದಿವ್ಯ ಔಷಧಿ.

ವಿಧಾನ...

1. 2 ಚಮಚ ನೀಲಗಿರಿ ಸಾರಭೂತ ತೈಲ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ಮಿಶ್ರಣ ತಯಾರಿಸಬೇಕು.

2. ಚಮಚದಲ್ಲಿಯೇ ಈ ಮಿಶ್ರಣವನ್ನು ನೋವಿನ ಪ್ರದೇಶದಲ್ಲಿ ಬಳಿಯಬೇಕು.

3. ನಂತರ ಮೃದುವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು.

4. ಹೀಗೆ ಅನ್ವಯಿಸಿ 1-2 ಗಂಟೆಗಳಕಾಲ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

5. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ನೋವು ನಿವಾರಣೆಯಾಗುವುದು.

ಧೂಮಪಾನ ಬಿಟ್ಟುಬಿಡಿ

ಧೂಮಪಾನ ಬಿಟ್ಟುಬಿಡಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಬೆನ್ನು ನೋವಿನ ಉಪಶಮನಕ್ಕೆ ಧೂಮಪಾನ ಬಿಟ್ಟುಬಿಡಿ. ಧೂಮಪಾನದಿಂದ ಇತರ ರೋಗಗಳಾದ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇತ್ಯಾದಿಗಳು ಬರಬಹುದು. ಧೂಮಪಾನ ಮಾಡದವರಿಗಿಂತ ಧೂಮಪಾನ ಮಾಡುವವರು ಹೆಚ್ಚಾಗಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸಿಗರೇಟ್ ನಲ್ಲಿರುವ ನಿಕೋಟಿನ್ ಬೆನ್ನುನೋವಿಗೆ ಪ್ರಮಖು ಕಾರಣವೆಂದು ಪತ್ತೆಯಾಗಿದೆ. ಬೆನ್ನುನೋವಿನ ಉಪಶಮನಕ್ಕೆ ಧೂಮಪಾನದ ಅಭ್ಯಾಸವನ್ನು ಬಿಟ್ಟುಬಿಡಿ.

ಶುಂಠಿ + ತುಳಸಿ

ಶುಂಠಿ + ತುಳಸಿ

*ಶುಂಠಿ ರಸ 3-4 ಚಮಚ

*ತುಳಸಿ 10 ಎಲೆಗಳು

ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.

*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು.

*ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ. ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ.

*ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

*ಒಂದು ವೇಳೆ ನೀವು ಕಛೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಲ್ಲಿ ಅಥವಾ ಕಂಪ್ಯೂಟರಿನ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದಲ್ಲಿ, ಆಗಿಂದಾಗೆ ನಡುವೆ ನಿಯಮಿತವಾಗಿ ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬೇಡಿ. ಯಥೇಚ್ಛವಾಗಿ ನೀರನ್ನು ಸೇವಿಸಿ. ಆಗ ನೀವು ನಿಯಮಿತವಾಗಿ ಶೌಚಾಲಯಕ್ಕೆ ಹೋಗುವ ಸಲುವಾಗಿಯಾದರು ಎದ್ದು ಓಡಾಡುತ್ತೀರಿ.

*ಆಗ ನಿಮ್ಮ ದೇಹವನ್ನು ಸಡಿಲ ಮಾಡುವ ಕೆಲವಚಟುವಟಿಕೆಗಳನ್ನು ಮಾಡಿ. ಮಧ್ಯಾಹ್ನದ ಊಟವಾದ ನಂತರ ಒಂದು ಸಣ್ಣ ನಡಿಗೆಯನ್ನು ಕೈಗೊಳ್ಳಿ. ನಿಮ್ಮ ಕಛೇರಿಯ ಮತ್ತೊಂದು ವಿಭಾಗದಲ್ಲಿರುವ ನಿಮ್ಮ ಸ್ನೇಹಿತನನ್ನು ಭೇಟಿಯಾಗಿ. ಒಂದು ವೇಳೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ , ಸಣ್ಣ ಮಟ್ಟದ ವಿಶ್ರಾಂತಿಯನ್ನು ಪಡೆಯಿರಿ. ಆದರೆ ಇದು ನಿಯಮಿತವಾಗಿ ಇರಲಿ.

*ಈ ಬಿಡುವಲ್ಲಿ ಗಿಡಗಳನ್ನು ಬೆಳೆಸಿ, ಅವುಗಳ ಆರೈಕೆ ಮಾಡುತ್ತ, ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುತ್ತ ಮತ್ತು ಇತ್ಯಾದಿ ಕೆಲಸ ಮಾಡುತ್ತ ನೀವು ಬಿಡುವನ್ನು ಸದುಪಯೋಗ ಮಾಡಿಕೊಳ್ಳಬಹುದು.

English summary

Most Effective Treatments For Back pain

Back pain one of the serious health problem. Lifestyle, stress, lack of vitamin are the main reason for back pain. Here are few home remedies for back pain, have a look..