ಹಲಸಿನ ಬೀಜ ಎಸೆಯಬೇಡಿ! ಇದರಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ

Posted By: Arshad
Subscribe to Boldsky

ಮಲೆನಾಡಿನಲ್ಲಿ ವಿಪುಲವಾಗಿ ಬೆಳೆಯುವ ಹಲಸಿನ ಹಣ್ಣು ದೊಡ್ಡ ಗಾತ್ರದ ಮುಳ್ಳುಕವಚವನ್ನು ಹೊಂದಿರುವ ಹಣ್ಣಾಗಿದ್ದು ಏಷ್ಯಾಖಂಡದ ಸಮಶೀತೋಷ್ಣ ವಲಯದಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಯುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಬಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಸತುವಿನ ಸಹಿತ ಹಲವಾರು ಪೋಶಕಾಂಶಗಳಿವೆ. ಎಳೆಯದಿದ್ದಾಗ ಗುಜ್ಜೆಯ ರೂಪದಲ್ಲಿ ಬೇಯಿಸಿ ಹಾಗೂ ಹಣ್ಣಾದ ಬಳಿಕ ಇದರ ತೊಳೆಗಳನ್ನು ಹಾಗೇ ತಿನ್ನಬಹುದು ಅಥವಾ ಹಲವಾರು ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು.

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆದು ಬಿಡುತ್ತೇವೆ. ಆದರೆ ಈ ಬೀಜಗಳಲ್ಲಿಯೂ ಅತ್ಯಂತ ಆರೋಗ್ಯಕರವಾಗಿವೆ ಹಾಗೂ ಇದರಲ್ಲಿ ರೈಬೋಫ್ಲೇವಿನ್, ಥಿಯಾಮೈನ್ ಮೊದಲಾದ ಪೋಷಕಾಂಶಗಳು ಹೆಚ್ಚಾಗಿವೆ. ಇವು ನಮ್ಮ ಆಹಾರದ ಪೋಷಕಾಂಶಗಳನ್ನು ಶಕ್ತಿಯಾಗಿ ಪರಿವರ್ತಿಸಲು ನೆರವಾಗುತ್ತವೆ. ಅಲ್ಲದೇ ಈ ಪೋಷಕಾಂಶಗಳು ಕಣ್ಣು, ತ್ವಚೆ ಹಾಗೂ ಕೂದಲುಗಳನ್ನೂ ಆರೋಗ್ಯಕರವಾಗಿರಿಸುತ್ತವೆ.

ಸೌಂದರ್ಯ ಹೆಚ್ಚಿಸುವ ಹಲಸಿನ ಉಪಯೋಗ ಹಲವಾರು..

ಹಲಸಿನ ಬೀಜಗಳಲ್ಲಿ ಖನಿಜಗಳಾದ ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ತಾಮ್ರಗಳು ಅಲ್ಪಪ್ರಮಾಣದಲ್ಲಿವೆ. ಅಲ್ಲದೇ ಅತಿಸೂಕ್ಷ್ಮಜೀವಿ ನಿರೋಧಕ ಸಂಯುಕ್ತಗಳೂ ಇದ್ದು ಇವು ಕೆಲವು ಆಹಾರದ ಮೂಲಕ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯುತ್ತದೆ ಹಾಗೂ ಕೆಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಬನ್ನಿ, ಈ ಬೀಜಗಳನ್ನು ಸೇವಿಸುವುದರಿಂದ ಯಾವ ಬಗೆಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.... 

ಅಧಿಕ ಪ್ರೋಟೀನ್

ಅಧಿಕ ಪ್ರೋಟೀನ್

ಈ ಹಲಸಿನ ಬೀಜಗಳು ನೋಡಲಿಕ್ಕೆ ಸುಂದರವಾಗಿಲ್ಲದಿದ್ದರೂ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಹಾಗಾಗಿ ಹಲಸಿನ ಬೀಜಗಳನ್ನು ಬೇಯಿಸಿ ನಿಮ್ಮ ನೆಚ್ಚಿನ ಖಾದ್ಯಗಳೊಂದಿಗೆ ಬೆರೆಸಿ ಸೇವಿಸುವ ಮೂಲಕ ರುಚಿಯನ್ನು ಹೆಚ್ಚಿಸಬಹುದು. ಈ ಪ್ರೋಟೀನ್ ಸ್ನಾಯುಗಳ ಬೆಳವಣಿಗೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.

ಅಜೀರ್ಣತೆಯನ್ನು ತಡೆಯುತ್ತದೆ

ಅಜೀರ್ಣತೆಯನ್ನು ತಡೆಯುತ್ತದೆ

ಅಜೀರ್ಣಕ್ಕೆ ಹಲಸಿನ ಬೀಜ ತಕ್ಷಣದ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಸುಲಭವಾಗಿಸುತ್ತವೆ ಹಾಗೂ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಈ ಬೀಜಗಳಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಜೀರ್ಣಕ್ರಿಯೆ ಸುಲಭವಾಗಿಸಲು ಹಾಗೂ ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಲು ನೆರವಾಗುತ್ತದೆ.

ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ

ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದ್ದು ಹಲಸಿನ ಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿರಿಸಿ ಕೊಂಡು ಕಣ್ಣಿನ ಕಾಯಿಲೆಗಳನ್ನು ದೂರವಿರಿಸಬಹುದು.

ರಕ್ತಹೀನತೆಯಿಂದ ರಕ್ಷಣೆ ಒದಗಿಸುತ್ತದೆ

ರಕ್ತಹೀನತೆಯಿಂದ ರಕ್ಷಣೆ ಒದಗಿಸುತ್ತದೆ

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಲಸಿನ ಬೀಜಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು ಹೀಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರವಾಗಿದೆ. ಒಂದು ವೇಳೆ ನಿಮಗೆ ರಕ್ತಹೀನತೆಯ ತೊಂದರೆ ಇದ್ದರೆ ಹಲಸಿನ ಬೀಜ ಸೇವಿಸಲು ಪ್ರಾರಂಭಿಸಿ. ಇದರಿಂದ ರಕ್ತಹೀನತೆ ದೂರವಾಗುವುದು ಮಾತ್ರವಲ್ಲ, ಇತರ ರಕ್ತಹೀನತೆಯಿಂದ ಎದುರಾಗುವ ಕಾಯಿಲೆಗಳಿಂದಲೂ ರಕ್ಷಣೆ ಪಡೆಯಬಹುದು.

ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

ಈ ಬೀಜಗಳಲ್ಲಿ ಪ್ರೋಟೀನುಗಳು ಹಾಗೂ ಹಲವಾರು ಸೂಕ್ಷ್ಮ ಪೋಷಕಾಂಶಗಳಿದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಒಂದು ವೇಳೆ ಮಾನಸಿಕ ಒತ್ತಡ ಸತತವಾಗಿದ್ದರೆ ಆಗಾಗ ಹಲಸಿನ ಬೀಜಗಳನ್ನು ಸೇವಿಸುತ್ತಿರುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಹಲಸಿನ ಬೀಜಗಳಲ್ಲಿರುವ ಕರಗದ ನಾರು ಮಲಬದ್ಧತೆಯಾಗದಿರಲು ನೆರವಾಗುತ್ತದೆ. ಹಲಸಿನ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗಿ ಪೂರ್ಣಗೊಳ್ಳಲು ಹಾಗೂ ಕರುಳುಗಳಲ್ಲಿನ ತ್ಯಾಜ್ಯವನ್ನು ಸಡಿಲಿಸಿ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಲಸಿನ ಬೀಜಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರ ಸೂಕ್ಷ್ಮಜೀವಿ ನಿರೋಧಕ ಗುಣ ದೇಹದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ಇದರಲ್ಲಿರುವ ಸತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತನ್ಮೂಲಕ ಹಲವಾರು ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

ಕ್ಯಾನ್ಸರ್‌ನಿಂದ ತಡೆಯುತ್ತದೆ

ಕ್ಯಾನ್ಸರ್‌ನಿಂದ ತಡೆಯುತ್ತದೆ

ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕ್ಯಾನ್ಸರ್ ತಡೆಯುವ ಗುಣವನ್ನು ಹೊಂದಿವೆ. ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಹಾನಿಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ. ಒಂದು ವೇಳೆ ಈ ಕಣಗಳಿಗೆ ವಿರೋಧವಿಲ್ಲದಿದ್ದರೆ ಇವು ಜೀವಕೋಶಗಳ ಡಿ ಎನ್ ಎ ರಚನೆಯನ್ನೇ ಬದಲ್ಲಿಸಿ ಕ್ಯಾನ್ಸರ್ ಜೀವಕೋಶಗಳನ್ನು ನಿರ್ಮಿಸುತ್ತದೆ. ಹಲಸಿನ ಬೀಜದ ಕ್ಯಾನ್ಸರ್ ನಿರೋಧಕ ಗುಣ ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಕಾರಣ ಜೀವಕೋಶಗಳು ನಿರ್ಮಾಣವಾಗಿದ್ದರೆ ಇವನ್ನು ಬೆಳೆಯಗೊಡದೇ ಕ್ಯಾನ್ಸರ್ ಉಲ್ಬಣಗೊಳ್ಳುವುದರಿಂದ ತಪ್ಪಿಸುತ್ತದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಹಲಸಿನ ಬೀಜದಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ನೆರವಾಗುತ್ತದೆ. ಅಲ್ಲದೇ ಈ ಬೀಜಗಳಲ್ಲಿರುವ ಪೊಟ್ಯಾಶಿಯಂ ಮೂಳೆಗಳನ್ನು ಗಟ್ಟಿಯಾಗಿಸಲು ಹಾಗೂ ಸವೆತವನ್ನು ಮರುಪೂರೈಸಲು ನೆರವಾಗುತ್ತದೆ. ಸ್ನಾಯುಗಳ ಬೆಳವಣಿಗೆ ಹಾಗೂ ಮೂಳೆಗಳು ಗಟ್ಟಿಯಾಗಲು ಹಲಸಿನ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಿರಿ.

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹಲಸಿನ ಬೀಜಗಳು ಹೃದ್ರೋಗಿಗಳಿಗೆ ಉತ್ತಮವಾದ ಆಹಾರವಾಗಿದೆ. ಏಕೆಂದರೆ ಈ ಬೀಜಗಳಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಇವುಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಎದುರಾಗುವ ಹೃದಯ ಸ್ತಂಭನ ಹಾಗೂ ಇತರ ಹಲವಾರು ಹೃದ್ರೋಗಗಳಿಂದ ರಕ್ಷಣೆ ಒದಗಿಸುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.

English summary

mind-blowing-health-benefits-of-jackfruit-seeds

Jackfruit seeds are rich in nutrients like riboflavin and thiamine, which help convert the food that we eat into energy. These nutrients help to keep your eyes, skin and hair healthy. The seeds also have small amounts of minerals like magnesium, zinc, potassium, iron, calcium and copper. They also contain antimicrobial compounds which could help prevent bacterial contamination that cause food-borne illnesses. So, read on to know more about the enormous health benefits of jackfruit seeds.