For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಕಂಟೇನರ್‌‌ ತುಂಬಾನೇ ಡೇಂಜರ್! ಯಾಕೆ ಗೊತ್ತೇ?

By Sushma Charhra
|

ನೀವು ವಿಶ್ವದ ಯಾವ ಮೂಲೆಯಲ್ಲಿ ಬೇಕಾದರೂ ವಾಸಿಸುತ್ತಿರಿ. ನಿಮ್ಮ ಅಡುಗೆ ಮನೆಗೊಂದು ಮೈಕ್ರೋವೇವ್ ಓವನ್ ಖರೀದಿಸಿ ಬಳಕೆ ಮಾಡುವುದು ಕಷ್ಟದ ವಿಷಯವೇನಲ್ಲ. ವೇಗವಾಗಿ ಅಡುಗೆ ಮಾಡಲು ಹೆಚ್ಚಿನ ಮಹಿಳೆಯರಿಗೆ ಇದು ಅಗತ್ಯವಾಗಿ ಬೇಕಾಗಿದೆ. ಕೆಲಸ ಮಾಡುವ ಜಾಗದಲ್ಲಿ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೊವೇವ್ ಓವನ್ ಬಳಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಆದರೆ ನೀವು ಮೈಕ್ರೋವೇವ್ ಒಳಗೆ ಆಹಾರವಿಟ್ಟು ಬಿಸಿ ಮಾಡಲು ಬಳಕೆ ಮಾಡುವ ಕಂಟೈನರ್ ಎಷ್ಟು ಸೇಫ್ ಆಗಿದೆ ನಿಮಗೆ ತಿಳಿದಿದೆಯಾ? ಎಸ್.. ಹೊಸ ಮಾಹಿತಿಯೊಂದು ನೀವು ಎರಡೆರಡು ಬಾರಿ ಯೋಚಿಸುವಂತೆ ಮಾಡಲಿದೆ. ಮೈಕ್ರೋ ಓವನ್ ಒಳಗೆ ಪ್ಲಾಸ್ಟಿಕ್ ಕಂಟೈನರ್ ಬಳಕೆ ಮಾಡುವುದು ಯೋಗ್ಯವಲ್ಲ ಎಂದು ಹೇಳಲಾಗುತ್ತಿದೆ.

ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ವಸ್ತುಗಳು ಹಿತವಲ್ಲ ಎಂಬುವುದು ಈಗಾಗಲೇ ಸಾಬೀತಾಗಿರುವ ವಿಚಾರ., ವಿಜ್ಞಾನಿಗಳು ಬಹಿರಂಗ ಪಡಿಸಿರುವ ಪ್ರಕಾರ, ಮೈಕ್ರೋಓವನ್ ಒಳಗೆ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಆಹಾರ ಪದಾರ್ಥಗಳನ್ನಿಟ್ಟು ಬಿಸ ಮಾಡುವುದು, ಬೇಯಿಸುವುದು ಮಾಡಿದಲ್ಲಿ ಅದು ನಿಮಗೆ ಬಂಜೆತನ, ಕ್ಯಾನ್ಸರ್, ಒಬೆಸಿಟಿ, ಹೈಪರ್ ಟೆನ್ಶನ್ ನಂತ ಕಾಯಿಲೆಗಳಿಗೆ ಕಾರಣವಾಗುತ್ತಂತೆ.

ಹಾರ್ವರ್ಡ್ ಮೆಡಿಕಲ್ ಶಾಲೆಯಲ್ಲಿ,ಅಧ್ಯಯನ ನಡೆಸಿರುವ ಪ್ರಕಾರ, ಮೈಕ್ರೋವೇವ್ಡ್ ಪ್ಲಾಸ್ಟಿಕ್ ಡೈಯಾಕ್ಸಿನ್ ಅನ್ನುವ ಕೆಮಿಕಲ್ ನ್ನು ಬಿಡುಗಡೆಗೊಳಿಸುತ್ತೆ. ಡೈಯಾಕ್ಸಿನ್ ಅನ್ನುವ ಕೆಮಿಕಲ್ ನೀವು ಒಂದು ವೇಳೆ ಕಸ,ಪ್ಲಾಸ್ಟಿಕ್,ಮರ, ಮೆಟಲ್ ಗಳು ಸುಟ್ಟಾಗ ಬಿಡುಗಡೆಗೊಳ್ಳುವ ಒಂದು ವಸ್ತುವಾಗಿದೆ.

Microwaving

ಯಾವಾಗ ಪ್ಲಾಸ್ಟಿಕ್ ಆಹಾರ ಪದಾರ್ಥಗಳ ಜೊತೆ ಮೈಕ್ರೋವೇವ್ ನಲ್ಲಿ ಬಿಸಿಯಾಗುತ್ತೋ ಆಗ, ಡೈಯಾಕ್ಸಿನ್ ಬಿಡುಗಡೆಯಾಗುತ್ತೆ ಮತ್ತು ಅದು ಆಹಾರ ಪದಾರ್ಥಗಳ ಜೊತೆ ಸೇರಿಕೊಳ್ಳುತ್ತೆ. ಇದು ಕ್ಯಾನ್ಸರ್ ಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದೆನಿಸಿದೆ. ಹಾಗಾಗಿ ಆರೋಗ್ಯದ ಹಿತದೃಷ್ಟಿಯಿಂದ ಮೈಕ್ರೋವೇವ್ ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ಸೂಕ್ತವಾಗಿದೆ.
ಶೇಕಡಾ 95 ರಷ್ಟು ಪ್ಲಾಸ್ಟಿಕ್ ನಲ್ಲಿರುವ ಎಲ್ಲಾ ಕೆಮಿಕಲ್ ಗಳು ಪ್ಲಾಸ್ಟಿಕ್ ಬಿಸಿಯಾದಾಗ ಬಿಡುಗಡೆಗೊಳ್ಳುತ್ತವೆ. ಹಾಗಾಗಿ ಹೈಪರ್ ಟೆಕ್ಷನ್, ಡಯಾಬಿಟೀಸ್, ಒಬೆಸಿಟಿ, ಮತ್ತು ಕ್ಯಾನ್ಸರ್ ನಂತ ಮಾರಕ ರೋಗಗಳಿಗೆ ಇದು ಕಾರಣವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಡುತ್ತಾರೆ ಡಯಟೀಷಿಯನ್ ಗಳು.
• ಪ್ಲಾಸ್ಟಿಕ್ ಕಂಟೈನರ್ ಗಳನ್ನು ಆಹಾರ ಪದಾರ್ಥಗಳನ್ನು ಬಿಸಿ ಮಾಡಲು ಮೈಕ್ರೋವೇವ್ ನಲ್ಲಿ ಯಾಕೆ ಬಳಕೆ ಮಾಡಬಾರದು?
ಜೈವಿಕ ಮತ್ತು ಅಜೈವಿಕ ವಸ್ತುಗಳ ಕಲಬೆರಿಕೆಯಿಂದ ಅಥವಾ ಮಿಶ್ರಣದಿಂದ ಪ್ಲಾಸ್ಟಿಕ್ ನ್ನು ತಯಾರಿಸಲಾಗುತ್ತೆ. ಹೆಚ್ಚಿನ ಪ್ಲಾಸ್ಟಿಕ್ ಗಳು ಇಂಗಾಲದ ಪರಮಾಣುವಿನಿಂದ ರಚಿತವಾಗಿದೆ. ಪ್ಲಾಸ್ಟಿಕ್ ಗೊಂದು ಆಕಾರ ಮತ್ತು ಸ್ಥಿರತೆಯನ್ನು ನೀಡುವ ಉದ್ದೇಶದಿಂದ ಇಂಗಾಲದ ಪರಮಾಣುಗಳನ್ನು ಬಳಕೆ ಮಾಡಲಾಗುತ್ತೆ.
ಪ್ಲಾಸ್ಟಿಕ್ ತಯಾರಿಕೆಗೆ ಬಳಸುವ ಎರಡು ಸಂಯೋಜನೆಗಳೆಂದರೆ
1) Bisphenol (BPA) ಬಿಸ್ಪೆನಾಲ್
2) Phthalates ಥಾಲೆಟ್ಸ್

ಬಿಸ್ಪೆನಾಲ್ ನ್ನು ಸಾಮಾನ್ಯವಾಗಿ ಕಠಿಣ ಪ್ಲಾಸ್ಟಿಕ್ ಗಳು ಎಂದು ಹೇಳಲಾಗುತ್ತೆ. ಪ್ಲಾಸ್ಟಿಕ್ ನ್ನು ಸ್ಪಷ್ಟವಾಗಿಸಲು ಇದನ್ನು ಬಳಕೆ ಮಾಡಲಾಗುತ್ತೆ. ಥಾಲೆಟ್ಸ್ ಗಳನ್ನು ಪ್ಲಾಸ್ಲಿಕ್ ಗಳು ಮೃದುವಾಗಲು ಮತ್ತು ಸುಲಭವಾಗಿಸಲು ಬಳಕೆ ಮಾಡಲಾಗುತ್ತೆ. ಈ ಎರಡೂ ರಾಸಾಯನಿಕಗಳು ಭಯನಕವಾಗಿರುವಂತವುಗಳು ಮತ್ತು ಮನುಷ್ಯನಿಂದ ದೂರವೇ ಇರಬೇಕಾದ ರಾಸಾಯನಿಕ ಪದಾರ್ಥಗಳು.
ಈ ಕೆಮಿಕಲ್ ಗಳನ್ನು ಬಳಕೆ ಮಾಡುವುದರಿಂದಾಗಿ ಅಂತಃಸ್ರಾವಕದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗುತ್ತೆ, ಹಾರ್ಮೋನುಗಳ ವ್ಯತ್ಯಯವಾಗುತ್ತೆ ಮತ್ತು ಬಂಜೆತನಕ್ಕೆ ಇದು ಕಾರಣವಾಗುತ್ತೆ ಎಂಬುದು ಈಗಾಗಲೇ ಸಾಬೀತಾಗಿದೆ. ಆಹಾರ ಪದಾರ್ಥಗಳಲ್ಲಿ ಅತಿಯಾಗಿ ಕೊಬ್ಬಿನಾಂಶವಿದ್ದಾಗ, ಪ್ಲಾಸ್ಟಿಕ್ ವಸ್ತುಗಳನ್ನು ಆ ಆಹಾರ ಪದಾರ್ಥಗಳನ್ನಿಡಲು ಬಳಕೆ ಮಾಡಿದರೆ ಆಗ ಬಿಸ್ಪೆನಾಲ್ ಮತ್ತು ಥಾಲೆಟ್ಸ್ ಗಳು ಮನುಷ್ಯನ ದೇಹ ಸೇರುವ ಪ್ರಮಾಣ ಅಧಿಕವಾಗಿರುತ್ತದೆ.

ಮೈಕ್ರೋವೇವ್ ನಲ್ಲಿ ಬಳಕೆ ಮಾಡಲೆಂದೇ ಬೇರೆ ಕಂಟೈನರ್ ಗಳ ಲಭ್ಯತೆ ಇದೆ. ಬಿಸ್ಪೆನಾಲ್ ಮತ್ತು ಥಾಲೆಟ್ಸ್ ಗಳ ದುಪ್ಫರಿಣಾಮಗಳನ್ನು ಗಣನೆಗೆ ತೆಗೆದುಕೊಂಡ ಅಮೇರಿಕಾದ ಆಹಾರ ಮತ್ತು ಔಷಧ ಮಂಡಳಿಯು, ಪ್ಲಾಸ್ಟಿಕ್ ತಯಾರಿಕಾ ಕಂಪೆನಿಗಳ ವಿರುದ್ಧ ನಿಯಂತ್ರಣ ಹೇರಿದ್ದು, ಕಂಪೆನಿ ತಯಾರಿಸಿದ ಕಂಟೈನರ್ ಗಳು ಎಫ್ ಡಿ ಎ ಪ್ರಮಾಣಿತವಾಗಿದ್ದರೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಅನುಮೋದನೆ ಸಿಕ್ಕಿದ ಕಂಟೈನರ್ ಗಳನ್ನು ಮಾತ್ರ ಮೈಕ್ರೋವೇವ್ ಕಂಟೈನರ್ ಗಳೆಂದು ಮಾರಾಟ ಮಾಡಲಾಗುತ್ತೆ.

ಮೈಕ್ರೋವೇವ್ ಬಳಕೆಗೆ ಯೋಗ್ಯವೆಂದು ಯಾವುದೇ ಚಿಹ್ನೆ ಇಲ್ಲದಿದ್ದರೆ ಅಂತಹ ಪ್ಲಾಸ್ಟಿಕ್ ಗಳನ್ನು ಕಡ್ಡಾಯವಾಗಿ ಮೈಕ್ರೋವೇವ್ ನಲ್ಲಿ ಬಳಸುವಂತಿಲ್ಲ. ಅವುಗಳ ಅಸುರಕ್ಷಿತ ಎಂದು ಎಫ್ ಡಿಎ ಈಗಾಗಲೇ ತಿಳಿಸಿದೆ. ಅಮೇರಿಕಾದ ಸೊಸೈಟಿ ಆಫ್ ರಿಪ್ರೊಡಕ್ಟೀವ್ ಹೆಲ್ತ್ ನಡೆಸಿರುವ ಅಧ್ಯಯನದ ಪ್ರಕಾರ ಬಿಪಿಎ ಬ್ರೂಣದ ಉತ್ಪಾದನಾ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಐವಿಎಫ್ ವಿಫಲವಾಗುವಂತೆ ಮಾಡುತ್ತೆ. ಅಷ್ಟೇ ಅಲ್ಲ,ಪದೇ ಪದೇ ಗರ್ಭಪಾತವಾಗುವ ಸಾಧ್ಯತೆಗಳಿರುತ್ತೆ. ಹೆಣ್ಣು ಮತ್ತು ಗಂಡು ಇಬ್ಬರ ಸಂತಾನೋತ್ಪತ್ತಿ ಕ್ರಿಯೆಯ ಮೇಲೆ ಈ ಪ್ಲಾಸ್ಟಿಕ್ ನಲ್ಲಿರುವ ಕೆಮಿಕಲ್ ಗಳು ದೊಡ್ಡ ಮಟ್ಟದ ಪರಿಣಾಮವನ್ನು ಮಾಡುತ್ತವೆ.

ಎಫ್ ಡಿಎ ಇದಿಷ್ಟೇ ಅಲ್ಲದೆ,ಸಮಯ ಮತ್ತು ತಾಪಮಾನದ ಲೆಕ್ಕಾಚಾರವನ್ನೂ ಹಾಕಿದೆ. ಎಷ್ಟು ಸಮಯ ಎಷ್ಟು ತಾಪಮಾನದಲ್ಲಿ ಮೈಕ್ರೋವೇವ್ ನಲ್ಲಿ ಕಂಟೈನರ್ ಇರುತ್ತದೆ ಮತ್ತು ಅದರ ಪರಿಣಾಮಗಳು ಹೇಗಿರುತ್ತವೆ ಎಂಬ ಲೆಕ್ಕಾಚಾರವನ್ನು ತಿಳಿಸಲಾಗಿದೆ. ಪ್ಲಾಸ್ಟಿಕ್ ಕಂಟೈನರ್ ನಲ್ಲಿ ಎಷ್ಟು ಆಹಾರ ಪ್ರಮಾಣವಿರುತ್ತದೆ, ಎಷ್ಟು ಹೊತ್ತು ಮೈಕ್ರೋವೇವ್ ನಲ್ಲಿ ಆಹಾರ ಪದಾರ್ಥ ಪ್ಲಾಸ್ಟಿಕ್ ನಲ್ಲಿರುತ್ತೆ, ಒಬ್ಬ ವ್ಯಕ್ತಿ ಎಷ್ಟು ಬಾರಿ ಅದನ್ನು ಸೇವಿಸುತ್ತಾನೆ, ಎಷ್ಟು ತಾಪಮಾನದಲ್ಲಿ ಆಹಾರವನ್ನು ಬಿಸಿ ಮಾಡಿ ಅದನ್ನು ಸೇವಿಸಲಾಗುತ್ತೆ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗಿತ್ತು.

ಬೇರೆಬೇರೆ ಆಹಾರ ಪದಾರ್ಥಗಳಲ್ಲಿ ಯಾವ ರೀತಿ ಅಥವಾ ಪ್ರಮಾಣದಲ್ಲಿ ಕೆಮಿಕಲ್ ಗಳು ಆಹಾರ ಪದಾರ್ಥಕ್ಕೆ ಟ್ರಾನ್ ಫರ್ ಆಗುತ್ತವೆ. ಪ್ರಯೋಗಾಲಯದಲ್ಲಿ ಮೊದಲು ಇದರ ಪ್ರಯೋಗವನ್ನು ಪ್ರಾಣಿಗಳ ಮೇಲೆ ಮಾಡಲಾಗಿತ್ತು. ಸರಾಸರಿ ಫಲಿತಾಂಶವು ದೇಹ ತೂಕದ 100-1000 ಟೈಮ್ಸ್ ಪರ್ ಪೌಂಡ್ ಇತ್ತು.
ಈ ಎಲ್ಲಾ ಪರೀಕ್ಷೆಗಳಲ್ಲಿ ಪಾಸಾದ ಕಂಟೈನರ್ ಗಳನ್ನು ಮಾತ್ರ ಮೈಕ್ರೋವೇವ್ ಸೇಫ್ ಐಕಾನ್ ನೀಡಲು ಪರಿಗಣಿಸಲಾಗುತ್ತದೆ. ಅಂದರೆ ಅವು ಮೈಕ್ರೋವೇವ್ ನಲ್ಲಿ ಬಳಕೆ ಮಾಡಲು ಯೋಗ್ಯ ಎಂದು ಹೇಳಲಾಗುತ್ತೆ.

ಮೈಕ್ರೋವೇವ್ ನಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ನೀವು ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು
• ಓಪನ್ ನಲ್ಲಿ ಮೈಕ್ರೋವೇವ್ ಅಪ್ರೂಡ್ ಕಂಟೈನರ್ ಗಳನ್ನು ಮಾತ್ರ ಆಹಾರ ಪದಾರ್ಥಗಳನ್ನು ಬಿಸಿ ಮಾಡಲು ಬಳಸಿ
• ಪ್ಲಾಸ್ಟಿಕ್ ವಸ್ತುಗಳನ್ನುನೇರವಾಗಿ ಮೈಕ್ರೋವೇವ್ ನಲ್ಲಿ ಆಹಾರ ಪದಾರ್ಥಗಳ ಜೊತೆ ಬೆರೆಯುವಂತೆ ಮಾಡಬೇಡಿ. ಅದು ಕರಗಿ ನಿಮ್ಮ ಆರೋಗ್ಯಕ್ಕೆ ಹಾನಿಮಾಡಬಹುದು.
• ವ್ಯಾಕ್ಸ್ ಪೇಪರ್ ನಲ್ಲಿ ಆಹಾರವನ್ನು ಸುತ್ತುವುದು ಅಥವಾ ಬಿಳಿಯ ಪೇಪರ್ ಟವೆಲ್ ಬಳಸುವುದು ಬೆಸ್ಟ್ ಆಲ್ಟರ್ನೇಟಿವ್ ವಿಧಾನಗಳಾಗಿವೆ
• ಮೈಕ್ರೋವೇವ್ ಡಿನ್ನರ್ ಟ್ರೇ ಗಳು ಒಮ್ಮೆ ಮಾತ್ರ ಬಳಕೆ ಯೋಗ್ಯವಾಗಿರುತ್ತವೆ. ಹಾಗಾಗಿ ಒಮ್ಮೆ ಬಳಸಿದ ನಂತರ ಅದನ್ನು ಎಸೆಯಲು ಮರೆಯಬೇಡಿ.
• ತುಂಡಾದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಮೈಕ್ರೋವೇವ್ ಮಾಡಲು ಬಳಸಬೇಡಿ. ಅವು ಯಾವತ್ತೂ ಬಳಕೆಗೆ ಯೋಗ್ಯವಲ್ಲ ಮತ್ತು ಅನಾರೋಗ್ಯಕಾರಿಯಾಗಿರುತ್ತವೆ.
• ಪ್ಲಾಸ್ಟಿಕ್ ಬ್ಯಾಗ್ ಗಳನ್ನಿಟ್ಟು ಎಂದಿಗೂ ಮೈಕ್ರೋವೇವ್ ಮಾಡಬೇಡಿ.
• ಆಹಾರವನ್ನು ಮೈಕ್ರೋವೇವ್ ಮಾಡುವಾಗ ಲಿಡನ್ನು ಸ್ವಲ್ಪ ಓಪನ್ ಇಟ್ಟಿರಿ

ಮೇಲಿನ ಎಲ್ಲಾ ವಿಚಾರಗಳು ಮೈಕ್ರೋವೇವ್ ನಲ್ಲಿ ತಯಾರಿಸಿದ ಎಲ್ಲಾ ಆಹಾರವೂ ಅನಾರೋಗ್ಯಕಾರಿ ಎಂದಲ್ಲ. ಇದರ ಅರ್ಥ ಇಷ್ಟೇ. ಮೈಕ್ರೋವೇವ್ ನಲ್ಲಿ ಬಳಸಲು ಯೋಗ್ಯವಲ್ಲದ ಕಂಟೈನರ್ ಗಳ ಬಳಕೆಯನ್ನು ಮೈಕ್ರೋವೇವ್ ಮಾಡಲು ಬಳಸುವುದು ಮಾನವನ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಹಾಗಾಗಿ ನಾರ್ಮಲ್ ಪ್ಲಾಸ್ಟಿಕ್ ಗಳನ್ನು ಮೈಕ್ರೋವೇವ್ ನಲ್ಲಿ ಬಳಸುವುದನ್ನು ದಯವಿಟ್ಟು ನಿಲ್ಲಿಸಿ ಎಂಬುದಷ್ಟೇ ಈ ಲೇಖನದ ಉದ್ದೇಶ.

English summary

Microwaving Food In Plastic=Infertility

Plastic containers are hazardous for human health. Scientists reveal that heating or microwaving food in plastic containers can trigger infertility, cancer, obesity, and hypertension. According to a study done in the Harvard medical school, microwaved plastic releases a chemical called dioxins into the food.
X
Desktop Bottom Promotion