For Quick Alerts
ALLOW NOTIFICATIONS  
For Daily Alerts

ವಿಶ್ವ ಸಂಧಿವಾತ ದಿನ: ಸಂಧಿವಾತ ಗುಣಪಡಿಸುವ ಪವರ್ ನಿಂಬೆ ಸಿಪ್ಪೆಗಿದೆ, ಹೇಗೆ?

|

ಮೂಳೆಗಳ ಗಂಟುಗಳನ್ನು ಮಡಚಲು ಅಸಾಧ್ಯವಾಗುವಷ್ಟು ನೋವಾಗಲು ಕಾರಣ ಸಂಧಿವಾತ (arthritis). ಈ ಸ್ಥಿತಿಯಲ್ಲಿ ಗಂಟುಗಳಲ್ಲಿ ಭಾರೀ ಉರಿಯೂತ ಕಾಣಿಸಿಕೊಳ್ಳುತ್ತದೆ ಹಾಗೂ ಮೂಳೆಗಳ ಪರಸ್ಪರ ಜಾರುವಿಕೆಗೆ ಅಗತ್ಯವಾದ ಜಾರುಕದ್ರವ ಇಲ್ಲವಾಗಿ ಒಣತಿಕ್ಕಾಟದಿಂದ ನೋವು ಬಾಧಿಸುತ್ತದೆ. ಇದರಿಂದ ಮೂಳೆಗಳ ಕವಚ (cartilage)ದ ಸವೆತವೂ ಹೆಚ್ಚುತ್ತದೆ. ಸಂಧಿವಾತಕ್ಕೆ gout ಎಂಬ ಉರಿಯೂತದ ಗಂಟು ಸಹಾ ಕಾರಣವಾಗಬಹುದು. ಈ ಸ್ಥಳದಲ್ಲಿ ಸಂಗ್ರಹಗೊಳ್ಳುವ ಯೂರಿಕ್ ಆಮ್ಲ ಮೂಳೆಸಂಧು ಮತ್ತು ಅಂಗಾಂಶಗಳನ್ನು ಆವರಿಸಿ ನೋವಿಗೆ ಕಾರಣವಾಗುತ್ತದೆ.

ಕೆಲವೊಮ್ಮೆ, ಹಿಂದಿನ ಪೆಟ್ಟು, ಉಳುಕು ಅಥವಾ ಘಾಸಿಗೊಂಡ ಅಂಗಾಂಶವೂ ಸಂಧಿವಾತಕ್ಕೆ ಕಾರಣವಾಗಬಹುದು. ನಮ್ಮ ದೇಹದ ಪ್ರತಿ ಚಲನೆಗೂ ಮೂಳೆಗಳ ಸಂಧುಗಳು ಬಳಕೆಯಾಗುತ್ತವೆ. ಈ ಭಾಗದಲ್ಲಿ ನೋವು ಎದುರಾದರೆ ನಿತ್ಯದ ಚಲನೆಗಳಿಗೆ ಭಂಗವುಂಟಾಗುತ್ತದೆ. ಈ ತೊಂದರೆಯ ನಿವಾರಣೆಗೆ ಲಿಂಬೆಯ ಸಿಪ್ಪೆ ಅತ್ಯುತ್ತಮ ಆಯ್ಕೆಯಾಗಿದೆ ಹಾಗೂ ಇದರಲ್ಲಿ ಇತರ ಔಷಧಿಗಳಲ್ಲಿರುವಂತೆ ಯಾವುದೇ ಅಡ್ಡಪರಿಣಾಮವಿಲ್ಲ. ಲಿಂಬೆಸಿಪ್ಪೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಪೆಕ್ಟಿನ್, ಕರಗದ ನಾರು ಹಾಗೂ ಹಲವಾರು ಖನಿಜಗಳಿವೆ.

ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಲಿಂಬೆಸಿಪ್ಪೆಗಳಲ್ಲಿರುವ ಔಷಧೀಯ ಗುಣಗಳನ್ನು ಸಂಧಿವಾತದ ಚಿಕಿತ್ಸೆಗಾಗಿ ಬಳಸಬೇಕಾದರೆ ಇದನ್ನು ಸೇವಿಸುವ ಅಗತ್ಯವಿಲ್ಲ. ಬದಲಿಗೆ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕಾಗುತ್ತದೆ. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಬನ್ನಿ, ಸಂಧಿವಾತ ಕಡಿಮೆ ಮಾಡಲು ಹಾಗೂ ಇತರ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು ಈ ವಿಧಾನವನ್ನು ಅನುಸರಿಸುವುದು ಹೇಗೆ ಎಂಬುದನ್ನು ನೋಡೋಣ...

ಸಂಧಿವಾತಕ್ಕೆ ಲಿಂಬೆಗಳ ಪ್ರಯೋಜನ

ಸಂಧಿವಾತಕ್ಕೆ ಲಿಂಬೆಗಳ ಪ್ರಯೋಜನ

ಲಿಂಬೆಯಲ್ಲಿ ವಿಟಮಿನ್ ಸಮೃದ್ದವಾಗಿದೆ ಹಾಗೂ ನಿತ್ಯದ ಅಗತ್ಯದ 30ಶೇಖಡಾದಷ್ಟು ಪ್ರಮಾಣವನ್ನು ಒದಗಿಸುತ್ತದೆ. ಗಾಯಗಳು ಮಾಗಲು ವಿಟಮಿನ್ ಸಿ ಅಗತ್ಯವಾಗಿದೆ ಹಾಗೂ ಅಸ್ತಿಬ೦ಧಕ, ಚರ್ಮ ಹಾಗೂ ಸ್ನಾಯುಗಳ ಬೆಳವಣಿಗೆಗೂ ವಿಟಮಿನ್ ಸಿ ಅಗತ್ಯವಾಗಿದೆ.

ಮೂಳೆಗಳಿಗೂ ಲಿಂಬೆ ಅಗತ್ಯ

ಮೂಳೆಗಳಿಗೂ ಲಿಂಬೆ ಅಗತ್ಯ

ಸವೆದ ಮೂಳೆಗಳು ಮತ್ತೆ ತುಂಬಿಕೊಳ್ಳಲು ಹಾಗೂ ಮೂಳೆಮತ್ತು ಸ್ನಾಯುಗಳನ್ನು ಬಂಧಿಸುವ ಅಂಗಾಂಶಗಳನ್ನು ಸರಿಪಡಿಸಲು ಸಹಾ ವಿಟಮಿನ್ ಸಿ ಅಗತ್ಯವಾಗಿದೆ. ಮೂಳೆ, ಅಂಗಾಂಶ ಹಾಗೂ ಮೂಳೆಗಳನ್ನು ದೃಢವಾಗಿರಿಸಲು ನೆರವಾಗುತ್ತದೆ.

ಲಿಂಬೆ ಸಿಪ್ಪೆಯಲ್ಲಿದೆ ಕ್ಯಾಲ್ಸಿಯಂ

ಲಿಂಬೆ ಸಿಪ್ಪೆಯಲ್ಲಿದೆ ಕ್ಯಾಲ್ಸಿಯಂ

ನಮ್ಮ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಲಿಂಬೆಸಿಪ್ಪೆಯಲ್ಲಿ ಹೇರಳವಾಗಿದೆ ಹಾಗೂ ಇದು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸಂಧಿವಾತಕ್ಕೆ ಲಿಂಬೆ ಸಿಪ್ಪೆಯ ಔಷಧಿಯನ್ನು ತಯಾರಿಸುವುದು ಹೇಗೆ?

ಈ ಔಷಧಿಯನ್ನು ತಯಾರಿಸಲು ಒಟ್ಟು ಐದು ಲಿಂಬೆಹಣ್ಣಿನ ಸಿಪ್ಪೆ, ಕೊಂಚ ಆಲಿವ್ ಎಣ್ಣೆ, ಒಂದು ಪ್ಲಾಸ್ಟಿಕ್ ಚೀಲ, ತೆಳುವಾದ ಹತ್ತಿಯ ಬ್ಯಾಂಡೇಜು, ಒಂದು ದಪ್ಪ ಉಣ್ಣೆಯ ಶಾಲ್ ಹಾಗೂ ಒಂದು ಜಾಡಿ, ಇಷ್ಟು ಬೇಕಾಗುತ್ತದೆ. ಮೊದಲಿಗೆ ಲಿಂಬೆಹಣ್ಣಿನ ಸಿಪ್ಪೆಯನ್ನು ಒಳಗಿನ ತಿರುಳಿನಿಂದ ಪ್ರತ್ಯೇಕಿಸಿ ಚಿಕ್ಕ ಚಿಕ್ಕ ಚೂರುಗಳಾಗಿಸಿ. ಜಾಡಿಯಲ್ಲಿ ಆಲಿವ್ ಎಣ್ಣೆ ತುಂಬಿಸಿ ಈ ಎಣ್ಣೆಯಲ್ಲಿ ಲಿಂಬೆಸಿಪ್ಪೆಯ ತುಂಡುಗಳನ್ನು ಮುಳುಗಿಸಿ. ಆಲಿವ್ ಎಣ್ಣೆಯನ್ನು ಜಾಡಿ ಭರ್ತಿ ತುಂಬಿಸಿ ಗಾಳಿಯಾಡದಂತೆ ಗಟ್ಟಿಯಾಗಿ ಮುಚ್ಚಿ ಮೂರು ವಾರಗಳ ವರೆಗೆ ತಣ್ಣನೆಯ ಸ್ಥಳದಲ್ಲಿಡಿ. ಮೂರು ವಾರದ ಬಳಿಕ ಈ ಎಣ್ಣೆಯೇ ಸಂಧಿವಾತಕ್ಕೆ ಬೇಕಾದ ಔಷಧಿಯಾಗಿದೆ.

ಲಿಂಬೆ ಸಿಪ್ಪೆಯಲ್ಲಿದೆ ಕ್ಯಾಲ್ಸಿಯಂ

ಲಿಂಬೆ ಸಿಪ್ಪೆಯಲ್ಲಿದೆ ಕ್ಯಾಲ್ಸಿಯಂ

ಪ್ರತಿರಾತ್ರಿ ಮಲಗುವ ಮುನ್ನ ಹತ್ತಿಯ ಬ್ಯಾಂಡೇಜು ಪಟ್ಟಿಯನ್ನು ಈ ಎಣ್ಣೆಯಲ್ಲಿ ಮುಳುಗಿಸಿ ಹಿಂಡಿ ನೋವಿರುವ ಭಾಗವನ್ನು ಆವರಿಸುವಂತೆ ಹೆಚ್ಚು ಬಿಗಿ ಇಲ್ಲದೇ ಸುತ್ತಿ ಬಿಗಿಯಾಗಿಸಿ. ಬಳಿಕ ಈ ಭಾಗದ ಮೇಲೆ ಉಣ್ಣೆಯ ಶಾಲ್ ಅಥವಾ ರಗ್ ಒಂದನ್ನು ಹೊದಿಸಿ ಬೆಚ್ಚಗಾಗುವಂತೆ ಮಾಡಿ. ಇದರಿಂದ ಈ ಎಣ್ಣೆ ನೋವಿರುವ ಭಾಗದಲ್ಲಿ ಹೀರಲ್ಪಡಲು ಸಾಧ್ಯವಾಗುತ್ತದೆ. ಮರುದಿನ ಬೆಳಿಗ್ಗೆ ಪಟ್ಟಿಯನ್ನು ನಿವಾರಿಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕೆಲವೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ.

ಲಿಂಬೆಸಿಪ್ಪೆಯನ್ನು ಸೇವಿಸುವುದು ಹೃದಯಕ್ಕೂ ಒಳ್ಳೆಯದು

ಲಿಂಬೆಸಿಪ್ಪೆಯನ್ನು ಸೇವಿಸುವುದು ಹೃದಯಕ್ಕೂ ಒಳ್ಳೆಯದು

ಲಿಂಬೆಸಿಪ್ಪೆಯನ್ನು ಸೇವಿಸುವ ಮೂಲಕ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ, ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಹಾಗೂ ಈ ಮೂಲಕ ಹೃದಯದ ಆರೋಗ್ಯ ವೃದ್ದಿಸುತ್ತದೆ. ಲಿಂಬೆಸಿಪ್ಪೆಯಲ್ಲಿ ಸಮೃದ್ದವಾಗಿರುವ ಪೊಟ್ಯಾಶಿಯಂ ಈ ಎಲ್ಲಾ ಕೆಲಸಗಳಿಗೆ ನೆರವಾಗುತ್ತದೆ.

 ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಲಿಂಬೆಸಿಪ್ಪೆಯಲ್ಲಿ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಶೀತ, ಫ್ಲೂ ಹಾಗೂ ಗಂಟಲಿನ ಸೋಂಕು ಮೊದಲಾದ ವೈರಸ್ ನಿಂದ ಹರಡುವ ಕಾಯಿಲೆಗಳಿಂದ ರಕ್ಷಿಸುತ್ತದೆ.

ಮಲಬದ್ಧತೆ ಹಾಗೂ ವಾಯುಪ್ರಕೋಪದಿಂದ ರಕ್ಷಿಸುತ್ತದೆ

ಮಲಬದ್ಧತೆ ಹಾಗೂ ವಾಯುಪ್ರಕೋಪದಿಂದ ರಕ್ಷಿಸುತ್ತದೆ

ಲಿಂಬೆಸಿಪ್ಪೆಯಲ್ಲಿರುವ ಕರಗದ ನಾರು ಕರುಳುಗಳಲ್ಲಿ ಆಹಾರಗಳು ಸುಲಭವಾಗಿ ಚಲಿಸಲು ನೆರವಾಗುತ್ತದೆ ಹಾಗೂ ಕಲ್ಮಶಗಳನ್ನು ನಿವಾರಿಸಿ ಸ್ವಚ್ಛಗೊಳಿಸಲೂ ನೆರವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗಿಸುವ ಮೂಲಕ ಹೊಟ್ಟೆಯುಬ್ಬರಿಕೆಯಾಗುವುದನ್ನೂ ತಡೆಯುತ್ತದೆ.

 ತೂಕದಲ್ಲಿ ಇಳಿಕೆ

ತೂಕದಲ್ಲಿ ಇಳಿಕೆ

ಇದರಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ಜಠರ ಮತ್ತು ಕರುಳುಗಳಿಂದ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಮಧುಮೇಹದಿಂದ ರಕ್ಷಿಸುತ್ತದೆ

ಮಧುಮೇಹದಿಂದ ರಕ್ಷಿಸುತ್ತದೆ

ಮಧುಮೇಹಿಗಳಿಗೂ ಲಿಂಬೆಸಿಪ್ಪೆಗಳು ಉತ್ತಮವಾಗಿವೆ. ಕರುಳಿನಿಂದ ಸಕ್ಕರೆಯನ್ನು ಹೀರಿಕೊಂಡು ರಕ್ತಕ್ಕೆ ಸೇರಿಸುವುದನ್ನು ತಡೆಯುವ ಮೂಲಕ ಜೀವರಾಸಾಯನಿಕ ಕ್ರಿಯೆಗಳು ಸುಲಭವಾಗಿ ಜರುಗಿಸಲು ನೆರವಾಗುತ್ತದೆ. ಈ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

ಆರೋಗ್ಯಕರ ತ್ವಚೆ

ಆರೋಗ್ಯಕರ ತ್ವಚೆ

ನಿಮ್ಮ ತ್ವಚೆಯ ಅತ್ಯುತ್ತಮ ಆರೋಗ್ಯ ಪಡೆಯಬೇಕೆಂದರೆ ಲಿಂಬೆಸಿಪ್ಪೆ ನಿಮಗೆ ಸರಿಯಾದ ಆಯ್ಕೆಯಾಗಿದೆ. ಲಿಂಬೆಸಿಪ್ಪೆಯಲ್ಲಿರುವ ಪೋಷಕಾಂಶಗಳು ತ್ವಚೆಯ ಕಲೆಗಳನ್ನು ನಿವಾರಿಸಲು, ನೆರಿಗೆಗಳನ್ನು ಸರಿಪಡಿಸಲು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸುತ್ತದೆ. ಇದಕ್ಕಾಗಿ ಲಿಂಬೆ ಸಿಪ್ಪೆಯನ್ನು ತುರಿದು ಆಹಾರದೊಡನೆ ಬೆರೆಸಿ ಸೇವಿಸಬಹುದು ಅಥವಾ ಪುಡಿಯಾಗಿಸಿ ನೇರವಾಗಿ ತ್ವಚೆಗೂ ಹಚ್ಚಿಕೊಳ್ಳಬಹುದು.

 ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಅಧಿಕ ರಕ್ತದೊತ್ತಡದ ಆರೈಕೆಗಾಗಿ

ಲಿ೦ಬೆಯ ರಸಕ್ಕೆ ಮಾನಸಿಕ ಶಾ೦ತಿಯನ್ನು ನೀಡುವ ಸಾಮರ್ಥ್ಯವಿರುವುದರಿ೦ದ, ಅದು ಅಧಿಕ ರಕ್ತದೊತ್ತಡವನ್ನು ನಿಯ೦ತ್ರಿಸಬಲ್ಲುದಾಗಿದೆ. ಅಲ್ಲದೆ ಲಿ೦ಬೆಹಣ್ಣಿನ ರಸದಲ್ಲಿರುವ ವಿಟಮಿನ್ ಪಿಯು ರಕ್ತನಾಳಗಳನ್ನು ಶಕ್ತಿಯುತವಾಗಿಸುತ್ತವೆ. ಲಿ೦ಬೆ ಹಣ್ಣಿನ ಈ ಸಾಮರ್ಥ್ಯದ ಕಾರಣದಿ೦ದ ಅದು ಆ೦ತರಿಕ ರಕ್ತಸ್ರಾವವನ್ನು (Internal Bleeding) ತಡೆಗಟ್ಟಲು ಸಶಕ್ತವಾಗಿದೆ.

ಹಲ್ಲು ನೋವಿಗೆ ರಾಮಬಾಣ

ಹಲ್ಲು ನೋವಿಗೆ ರಾಮಬಾಣ

ಹಲ್ಲುಗಳ ಮೇಲೆ ಲಿ೦ಬೆಯ ಸಿಪ್ಪೆಯಿಂದ ಮಸಾಜ್ ಮಾಡಿಕೊಳ್ಳುವುದರಿ೦ದ, ಒಸಡಿನ ರಕ್ತಸ್ರಾವವು ನಿಲ್ಲುತ್ತದೆ. ಮಾತ್ರವಲ್ಲ, ಲಿ೦ಬೆಯು ವಸಡುಗಳಿಗೆ ಸ೦ಬ೦ಧಿಸಿದ ವಿವಿಧ ರೋಗಗಳಿ೦ದ ಉ೦ಟಾಗಬಹುದಾದ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.

English summary

Lemon Peel Trick To Get Rid of Joint Pain

Joint pain is usually caused by a condition known as arthritis. In this condition, there is severe pain and inflammation of joints due to friction between joint bones. This can lead to wear and tear of cartilage. Joint pain can also be caused by gout, in which there is accumulation of uric acid in the joints and tissues.
X
Desktop Bottom Promotion