For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಸೆಕ್ಸ್ ಮಾಡಿದರೆ, ಮಹಿಳೆಯರ ತೂಕ ಹೆಚ್ಚುತ್ತದೆಯಂತೆ!!

|

ಲೈಂಗಿಕ ಚಟುವಟಿಕೆಯಲ್ಲಿ ನಿಯಮಿತವಾಗಿ ಸಕ್ರಿಯರಾಗಿರುವ ಮೂಲಕ ನಿಮ್ಮ ದೆಹದ ಮೇಲೆ ಕೆಲವಾರು ಪ್ರಭಾವಗಳಾಗುತ್ತವೆ. ಈ ವಿಷಯದ ಮೇಲೆ ಸಂಶೋಧನೆ ನಡೆಸಿದ ವಿಜ್ಞಾನಿಗಳ ಪ್ರಕಾರ ಆರೋಗ್ಯಕರ ಲೈಂಗಿಕ ಜೀವನ ನಡೆಸುವ ಮಹಿಳೆಯರ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ, ಮಾನಸಿಕ ಒತ್ತಡದಿಂದ ಮುಕ್ತಿ, ಸುಖಕರ ನಿದ್ದೆ ಹಾಗೂ ರಕ್ತಪರಿಚಲನೆಯ ಏರುಪೇರುಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯಕರ ಜೀವನಕ್ರಮವೂ ವೃದ್ದಿಸುತ್ತದೆ. ಆದರೆ ಯಾವುದೇ ವಿಷಯದಲ್ಲಿರುವ ವೈಪರೀತ್ಯಗಳಂತೆ ಹೆಚ್ಚು ಹೆಚ್ಚಾಗಿ ಲೈಂಗಿಕವಾಗಿ ಸಕ್ರಿಯರಾಗಿದ್ದರೆ ಮಹಿಳೆಯರಲ್ಲಿ ಸ್ಥೂಲಕಾಯವೂ ಆವರಿಸುತ್ತದೆ ಎಂದು ಕೆಲವರ ಅಭಿಪ್ರಾಯವಾಗಿದೆ. ಇದು ಎಷ್ಟು ನಿಜ ಎಂಬುದನ್ನು ಇಂದು ಚರ್ಚಿಸೋಣ. ಇದು ನಿಜವಲ್ಲದಿದ್ದರೆ, ವಿವಾಹದ ಬಳಿಕ ಬಳುಕುವ ಬಳ್ಳಿಯಂತಿದ್ದ ಯುವತಿಯರೆಲ್ಲಾ ಕೆಲವೇ ವರ್ಷಗಳಲ್ಲಿ ಸ್ಥೂಲಕಾಯ ಪಡೆದುಕೊಳ್ಳಲು ಕಾರಣವೇನು?

sex

ನಿಯಮಿತ ಲೈಂಗಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದು ಸ್ಥೂಲಕಾಯಕ್ಕೆ ಕಾರಣವೇ?
ಲೈಂಗಿಕ ಜೀವನ ನೇರವಾಗಿ ಸ್ಥೂಲಕಾಯಕ್ಕೆ ಕಾರಣವಾಗದೇ ಇದ್ದರೂ ಈ ಸಮಯದಲ್ಲಿ ಬಿಡುಗಡೆಯಾಗುವ ರಸದೂತಗಳ ಅಸಮತೋಲನ ಸ್ಥೂಲಕಾಯಕ್ಕೆ ಕಾರಣವಾಗಬಹುದು. ಈ ಅಸಮತೋಲನಕ್ಕೂ ಲೈಂಗಿಕ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ, ಬದಲಿಗೆ ಇದು ಮಹಿಳೆಯ ಆರೋಗ್ಯದ ಇತರ ವಿಷಯಗಳಾದ ಋತುಮತಿಯಾಗುವ ವಯಸ್ಸು, ಮಾಸಿಕ ಋತುಚಕ್ರ ಹಾಗೂ ರಜೋನಿವೃತ್ತಿಯ ಮೇಲೆ ಅವಲಂಬಿತವಗಿರುತ್ತದೆ.

ಮಹಿಳೆಯರ ದೇಹದಲ್ಲಿ ಸ್ರವಿಸುವ ಲೈಂಗಿಕ ರಸದೂತಗಳಾದ DHEA, ಈಸ್ಟ್ರೋಜೆನ್ ಹಾಗೋ ಪ್ರೊಜೆಸ್ಟೆರಾನ್ ಮೊದಲಾದವು ಲೈಂಗಿಕ ವಿಷಯಗಳನ್ನು ನಿಯಂತ್ರಿಸುವ ಜೊತೆಗೇ ಸ್ಥೂಲಕಾಯವನ್ನೂ ನಿರ್ಧರಿಸುತ್ತವೆ. ಒಂದು ವೇಳೆ ನಿಮ್ಮ ದೇಹದಲ್ಲಿ DHEA ರಸದೂತದ ಕೊರತೆ ಇದ್ದರೆ (ಪುರುಷರಲ್ಲಿಯೂ, ಮಹಿಳೆಯರಲ್ಲಿಯೂ ಕಂಡುಬರುವ ಈ ರಸದೂತವೇ ಲೈಂಗಿಕ ಪ್ರಚೋದನೆಯ ಪೂರ್ವಗಾಮಿ ರಸದೂತವಾಗಿದೆ) ಇದು ಸ್ಥೂಲಕಾಯಕ್ಕೆ ನೇರವಾಗಿ ಕಾರಣವಾಗುತ್ತದೆ. ಅಲ್ಲದೇ ಈಸ್ಟ್ರೋಜೆನ್ ಹಾಗೋ ಪ್ರೊಜೆಸ್ಟೆರಾನ್ ರಸದೂತಗಳ ಪ್ರಮಾಣದಲ್ಲಿಯೂ ಹೆಚ್ಚು ಕಡಿಮೆಯಾದರೆ ಸಹಾ ತೂಕದಲ್ಲಿ ಹೆಚ್ಚಳ ಕಂಡುಬರುತ್ತದೆ. ಆದ್ದರಿಂದ ನಿಯಮಿತ ಅವಧಿಗಳಲ್ಲಿ ನಿಮ್ಮ ದೇಹದ ರಸದೂತಗಳ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಾ ಇದ್ದರೆ ಅನಿರೀಕ್ಷಿತ ತೂಕ ಹೆಚ್ಚಳದಿಂದ ತಪ್ಪಿಸಿಕೊಳ್ಳಬಹುದು.

ದಿನನಿತ್ಯ 'ಸೆಕ್ಸ್' ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ವಿವಾಹದ ಬಳಿಕ ಏರುವ ತೂಕ
ಸಾಮಾನ್ಯವಾಗಿ ವಿವಾಹದ ಬಳಿಕ ಪ್ರತಿ ಮಹಿಳೆಯೂ ತೂಕ ಏರಿಸಿಕೊಳ್ಳುವುದನ್ನು ಗಮನಿಸಬಹುದು. ಮಹಿಳೆಯರು ಮಾತ್ರವಲ್ಲ, ಪುರುಷರೂ ತೂಕ ಏರಿಸಿಕೊಳ್ಳುತ್ತಾರೆ! ಆದರೆ ತೂಕ ಏರಲು ಲೈಂಗಿಕ ಚಟುವಟಿಕೆಯೇ ಏಕಮಾತ್ರ ಕಾರಣ ಎನ್ನುವುದು ಅಪ್ಪಟ ಸುಳ್ಳಾಗಿದೆ! ಆರೋಗ್ಯ ತಜ್ಞರ ಪ್ರಕಾರ, ತೂಕ ಏರುವುದಕ್ಕೂ ಲೈಂಗಿಕ ಚಟುವಟಿಕೆಗೂ ನೇರವಾದ ಸಂಬಂಧವಿಲ್ಲ. ವಿವಾಹದ ಬಳಿಕ ತೂಕ ಏರಲಿಕ್ಕೆ ಪ್ರಮುಖ ಕಾರಣವೆಂದರೆ ಸಂಬಂಧದಲ್ಲಿ ಕಂಡುಕೊಂಡ ನಿರಾಳತೆ ಹಾಗೂ ಹೆಚ್ಚಿನ ಸುರಕ್ಷತೆಯ ಭಾವನೆ ನೆಮ್ಮದಿಗೆ ಕಾರಣವಾಗುತ್ತದೆ.

ಕೆಲವು ಅಧ್ಯಯನಗಳ ಪ್ರಕಾರ ಸಂಬಂಧದಲ್ಲಿ ಸುಖ ಕಂಡಿರುವ ವ್ಯಕ್ತಿಗಳು ಒಂಟಿ ಜೀವಿಗಳಿಗಿಂತ ಹೆಚ್ಚೇ ಆಹಾರ ಸೇವಿಸುತ್ತಾರೆ. ಇವೇ ತೂಕ ಏರಿಕೆಗೆ ಕಾರಣವೇ ಹೊರತು ಲೈಂಗಿಕ ಚಟುವಟಿಕೆಯೊಂದೇ ಅಲ್ಲ. ವಿವಾಹದ ಬಳಿಕವೂ ನಿಯಮಿತವಾಗಿ ವ್ಯಾಯಾಮಗಳನ್ನು ನಿರ್ವಹಿಸುತ್ತಾ ಆರೋಗ್ಯಕರ ಜೀವನಕ್ರಮ ಅನುಸರಿಸುವ ಮೂಲಕ ಉತ್ತಮ ಆರೋಗ್ಯ ಹಾಗೂ ಅಂಗಸೌಷ್ಟವವನ್ನು ಉಳಿಸಿಕೊಳ್ಳಬಹುದು.

ಲೈಂಗಿಕ ಚಟುವಟಿಕೆ ತೂಕ ಇಳಿಸಲು ನೆರವಾಗುತ್ತದೆಯೇ?
ಲೈಂಗಿಕ ಚಟುವಟಿಕೆಯಿಂದ ಲಭಿಸುವ ಸುಖದ ಜೊತೆಗೇ ತೂಕವೂ ಇಳಿಯುವಂತಾದರೆ ಎಷ್ಟು ಚೆನ್ನ? ವಾಸ್ತವವಾಗಿ ಇದು ನಿಜವಾಗಿದೆ. ಲೈಂಗಿಕ ಚಟುವಟಿಕೆಯ ಮೂಲಕ ಹೆಚ್ಚುವರಿ ಕ್ಯಾಲೋರಿಗಳನ್ನು ದಹಿಸಲು ಸಾಧ್ಯವಾಗುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೆಚ್ಚು ಶಕ್ತಿಯನ್ನು ದೇಹ ಬಳಸಿಕೊಳ್ಳುತ್ತದೆ ಹಾಗೂ ತಜ್ಞರ ಪ್ರಕಾರ ಸುಮಾರು ಅರ್ಧಘಂಟೆಯ ಆತ್ಮೀಯ ಸಮಯದಲ್ಲಿ ಸುಮಾರು ನೂರರಿಂದ ಮುನ್ನೂರು ಕ್ಯಾಲೋರಿಗಳು ದಹಿಸಲ್ಪಡುತ್ತವೆ.

ಆದರೂ, ಕೆಲವರ ತೂಕವೇಕೆ ಇಳಿಯುವುದಿಲ್ಲ?
ನಿಯಮಿತವಾದ ಹಾಗೂ ಸಕ್ರಿಯ ಲೈಂಗಿಕ ಜೀವನದಲ್ಲಿ ಒಳಗೊಂಡಿರುವ ಮಹಿಳೆಯರು ನಿಯಮಿತವಾಗಿ ವ್ಯಾಯಾಯ ಮಾಡುವತ್ತ ಒಲವು ತೋರದೇ ಇದ್ದರೆ ಅಥವಾ ವ್ಯಾಯಾಮಕ್ಕೆ ಅವಕಾಶ ದೊರಕದೇ ಹೋದರೆ ಇದಕ್ಕೆ ಲೈಂಗಿಕ ಚಟುವಟಿಕೆಯ ಅವಧಿ ಮೂವತ್ತು ನಿಮಿಷಕ್ಕೂ ಮುನ್ನವೇ ಕೊನೆಗೊಂಡಿರಬಹುದು ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸದ ಭಂಗಿಗಳನ್ನೇ ಅನುಸರಿಸುತ್ತಿದ್ದಿರಬಹುದು. ಒಂದು ವೇಳೆ ನೀವು ಸಂಗಾತಿ ಮೇಲೆ ಬರುವಂತಹ ಭಂಗಿಗಳನ್ನು ಇಷ್ಟಪಡುವ ಮಹಿಳೆಯಾಗಿದ್ದರೆ ಈ ಕ್ರಿಯೆಯ ಲಾಭ ಕಡಿಮೆಯೇ ಲಭಿಸುತ್ತದೆ. ಅಲ್ಲದೇ ಲೈಂಗಿಕ ಜೀವನ ನಿಯಮಿತವಾಗದೇ ಇದ್ದರೂ ಹೆಚ್ಚಿನ ಪ್ರಯೋಜನವಿಲ್ಲ. ಆದರೆ ತೂಕ ಇಳಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕಾದರೆ ನಿತ್ಯದ ನಿಯಮಿತ ವ್ಯಾಯಾಮ, ಆರೋಗ್ಯಕರ ಲೈಂಗಿಕ ಜೀವನ, ಸಮತೋಲನ ಆಹಾರ ಸೇವನೆ ಹಾಗೂ ಮಾನಸಿಕ ನಿರಾಳತೆ, ನೆಮ್ಮದಿ ಎಲ್ಲವೂ ಅಗತ್ಯವಾಗಿದೆ.

English summary

Ladies, can having sex regularly make you fat?

Becoming sexually active can have various effects on your body. Scientists have claimed that sex can improve your heart health, relieve stress, improve sleep and can control fluctuations in blood circulation. According to health experts, indulging in intimate sessions also boosts a healthy lifestyle. However, contrary to its health benefits, there are several schools of thoughts that say that regular sex can also make you fat. Let’s see how true this is and if it is the reason behind weight gain soon after marriage!
Story first published: Thursday, June 7, 2018, 18:09 [IST]
X
Desktop Bottom Promotion